ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಸ್ಕರಿಯ ಎಂ.ಎ ಫಾರೂಕ್ ಶೇಖ್ ಮುಕ್ವೆ ಪ್ರಶಾಂತ್ ರೈ ಸಾರಥ್ಯದ 7ನೇ ವರ್ಷದ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಬಾಂಧವ್ಯ ಟ್ರೋಫಿ 2024 ಸನ್ಮಾನ ಕಾರ್ಯಕ್ರಮ

Posted by Vidyamaana on 2024-01-25 06:28:39 |

Share: | | | | |


ಸ್ಕರಿಯ ಎಂ.ಎ ಫಾರೂಕ್ ಶೇಖ್ ಮುಕ್ವೆ  ಪ್ರಶಾಂತ್ ರೈ ಸಾರಥ್ಯದ 7ನೇ ವರ್ಷದ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಬಾಂಧವ್ಯ ಟ್ರೋಫಿ 2024 ಸನ್ಮಾನ ಕಾರ್ಯಕ್ರಮ

ಪುತ್ತೂರು: ಸ್ಕರಿಯ ಎಂ.ಎ., ಫಾರೂಕ್ ಶೇಖ್ ಮುಕ್ವೆ ಹಾಗೂ ಪ್ರಶಾಂತ್ ರೈ ಸಾರಥ್ಯದ ಬಾಂಧವ್ಯ ಫ್ರೆಂಡ್ಸ್ ಪುತ್ತೂರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ 7ನೇ ವರ್ಷದ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಜ. 21ರಂದು ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಿತು.

ಈ ಪಂದ್ಯಾಟದಲ್ಲಿ ಲಾಯರ್ಸ್ ಇಲೆವೆನ್ ತಂಡವನ್ನು ಸೋಲಿಸಿ ಪಿ ಇ ಟಿ ಇಲೆವೆನ್ ತಂಡವು ಚಾಂಪಿಯನ್ನಾಗಿ ಹೊರಹೊಮ್ಮಿತ್ತು. ಲಾಯರ್ಸ್ ಇಲೆವೆನ್ ತಂಡ ರನ್ನರ್ ಪ್ರಶಸ್ತಿ ಪಡೆದುಕೊಂಡರೆ ಮೂರನೇ ಸ್ಥಾನವನ್ನು ವಿವೇಕಾನಂದ ತಂಡ ಮತ್ತು ನಾಲ್ಕನೇ ಸ್ಥಾನವನ್ನು ಸುದ್ದಿ ಇಲೆವೆನ್ ತಂಡ ತಮ್ಮದಾಗಿಸಿಕೊಂಡಿತು. ಪೊಲೀಸ್ ಇಲೆವನ್ ಮತ್ತು ವಿವೇಕಾನಂದ ಕಾಲೇಜು ಇಲೆವನ್ ಮಹಿಳಾ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯಾಟದಲ್ಲಿ ವಿವೇಕಾನಂದ ಕಾಲೇಜು ಇಲೆವನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿ, ಪೊಲೀಸ್ ಇಲೆವೆನ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.




ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಅರುಣ್ ನಾಗೇಗೌಡ, ಸಂಘಟಕರಿಗೂ ಆಟಗಾರರಿಗೂ ಶುಭ ಹಾರೈಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ  ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳು ಒಟ್ಟು ಸೇರಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದರೆ ಇಲಾಖೆಗಳ ಮಧ್ಯ ಬಾಂಧವ್ಯ ಮೂಡಿಸಲು ಸಾಧ್ಯ. ಕ್ರಿಕೆಟ್ ಪಂದ್ಯಾಟದ ಮೂಲಕ ಸಂಘಟಕರು ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ. ಇಂತಹ ಕಾರ್ಯಕ್ರಮಗಳು ಇಂದಿನ ಅಗತ್ಯ. ಸಾರ್ವಜನಿಕರಿಗೂ ಇಲಾಖೆಗಳ ಮತ್ತು ಅಧಿಕಾರಿಗಳ ಪರಿಚಯಕ್ಕೆ ಇದು ಸುಲಭ ಎಂದು ಹೇಳಿ ಶುಭ ಹಾರೈಸಿದರು



ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ ಕೃಷ್ಣ ಭಟ್ ಮಾತನಾಡಿ, ಬಾಂಧವ್ಯ ಟ್ರೋಫಿ ವಿವಿಧ ಇಲಾಖೆಗಳೊಂದಿಗೆ ಬಾಂಧವ್ಯವನ್ನು ಬೆಳೆಸಲು ಹಮ್ಮಿಕೊಂಡಿರುವಂತಹ ವಿಶೇಷ ಕಾರ್ಯಕ್ರಮ. ಅದಕ್ಕೆ ಸಂಘಟಕರಿಗೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿ ಶುಭ ಹಾರೈಸಿದರು.


 ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಇಲಾಖೆಗಳು ಸೌಹಾರ್ದತೆಯಿಂದ ಕೆಲಸಗಳು ಮಾಡಬೇಕು. ಸರಕಾರಿ ಅಧಿಕಾರಿಗಳು ದಿನನಿತ್ಯದ ಕೆಲಸದ ಒತ್ತಡದ ನಡುವೆ ಒಂದು ದಿನ ಎಲ್ಲಾ ಇಲಾಖೆಗಳು ಒಟ್ಟು ಸೇರಿ ಆಟ ಆಡುವುದು ಉತ್ತಮ ಬೆಳವಣಿಗೆ. ಮುಂದಿನ ಸಮಾಜಮುಖಿ ಕೆಲಸ ಕಾರ್ಯಗಳ ಚಿಂತನೆ ಇಟ್ಟುಕೊಂಡು ಈ ಬಾಂಧವ್ಯ ಟ್ರೋಪಿ ನಡೆಯುತ್ತಿದೆ. ಮುಂದಿನ ವರ್ಷ ವಿಜೃಂಭಣೆಯಿಂದ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.


ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಗೆಲುವಿಗಿಂತ ಭಾಗವಹಿಸುವುದೇ ಮುಖ್ಯ ಎಂಬ  ಧ್ಯೇಯದೊಂದಿಗೆ ಎಲ್ಲಾ ತಂಡಗಳು ಆಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಶುಭ ಹಾರೈಸಿದರು.


ಉದ್ಯಮಿ ಸಹಜ್ ರೈ ಮಾತನಾಡಿ, ಪುತ್ತೂರಿನ ಇತಿಹಾಸದಲ್ಲಿ ವಿವಿಧ ಇಲಾಖೆಗಳನ್ನು ಒಂದೇ ಕಡೆ ಸೇರಿಸಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಕಾರ್ಯಕ್ರಮ ಇದ್ರೆ ಬಾಂಧವ್ಯ ಟೋಪಿ ಮಾತ್ರ ಎಂದು ಹೇಳಿ ಶುಭ ಹಾರೈಸಿದರು.


ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ಪೊಲೀಸ್ ಉಪನಿರೀಕ್ಷಕಿ ಸೇಸಮ್ಮ, ಸುದ್ದಿ ಸಮೂಹ ಸಂಸ್ಥೆಗಳ ಸಿಇಓ ಸೃಜನ್ ಊರುಬೈಲ್, ಮೆಸ್ಕಾಂ ಇಂಜಿನಿಯರ್ ರಾಮಚಂದ್ರ, ಉದ್ಯಮಿಗಳಾದ ಶಿವರಾಮ ಆಳ್ವ ಮುಖ್ಯ ಅತಿಥಿಗಳಾಗಿ ಆಗಮಸಿ ಶುಭ ಹಾರೈಸಿದರು.


ಸಮಾರೋಪ:

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ   ಡಾ. ಯು.ಪಿ. ಶಿವಾನಂದ್ ಮಾತನಾಡಿ, ಪಂದ್ಯಾಟದ ಯಶಸ್ಸಿನ ಹಿಂದಿರುವ ಫಾರೂಕ್ ನಮ್ಮ ಸುದ್ದಿಯ ಭಾಗ. ಸ್ಕರಿಯ ಹಾಗೂ ಪ್ರಶಾಂತ್ 7 ವರ್ಷಗಳ ಹಿಂದೆ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದಾಗ ಇದು ಸಾಧ್ಯವೇ ಎಂದು ಯೋಚನೆ ಮಾಡಿದ್ದೆವು. ಈ 7 ವರ್ಷಗಳಿಂದ ಪಂದ್ಯ ಅತ್ಯದ್ಭುತವಾಗಿ ನಡೆದುಕೊಂಡು ಬಂದಿದೆ. ಜನರಲ್ಲಿ ಬಾಂಧವ್ಯ ಮೂಡಿಸುವ ಇಂತಹ ಚಿಂತನೆಗೆ ಅಭಿನಂದನೆ ಸಲ್ಲಿಸಬೇಕು. ಪುರುಸೋತಿಲ್ಲದ ಜನರನ್ನು ಮತ್ತು ಸಮಾಜಕ್ಕೆ ಕೊಡುಗೆ ನೀಡುವವರನ್ನು ಕ್ರೀಡೆಯೊಳಗೆ ತಂದು ಬೆರೆಯುವಂತೆ ಮಾಡುವುದು ಅತ್ಯಂತ ಒಳ್ಳೆಯ ಕೆಲಸವಾಗಿದೆ. ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿ ಶುಭ ಹಾರೈಸಿದರು


ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕ್ರೀಡೆ ಎಂದರೆ ಮೊದಲು ನೆನಪಾಗುವುದು ಒಲಿಂಪಿಕ್ಸ್. ಇದು ದೇಶ ದೇಶಗಳನ್ನು ಒಂದುಗೂಡಿಸುವ ಕೆಲಸ ಮಾಡಿದೆ. ಒಟ್ಟು ಜನಸಂಖ್ಯೆಯ 60 ಶೇ. ಜನ 40ಕ್ಕಿಂತ ಕೆಳಗಿನವರು. ನಾವು ಕ್ರೀಡೆಯಲ್ಲಿ ತೊಡಗಿಸಿಕೊಂಡು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಅವಕಾಶ ಇದೆ. ಜೊತೆಗೆ ಪ್ರೀತಿ ವಿಶ್ವಾಸದ, ಬಾಂಧವ್ಯದ ಜೀವನ ನಡೆಸಲು ಕೂಡ ಈ ಕ್ರೀಡೆ ಸಹಕಾರಿಯಾಗಿದೆ. ನಾನು ಕಳೆದ 7 ವರ್ಷಗಳಿಂದಲೂ ಬಾಂಧವ್ಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದೇನೆ. ಶಾಸಕನಾಗಿ, ಮಾಜಿ ಶಾಸಕನಾಗಿಯೂ ಬಂದಿದ್ದೇನೆ. ಇಂತಹ ಉತ್ತಮ ಕ್ರೀಡಾಕೂಟ ಆಯೋಜನೆ ಮಾಡಿದ ಸ್ಕರೀಯ, ಫಾರೂಕ್ ಶೇಖ್ ಮತ್ತು ಪ್ರಶಾಂತ್ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಮೂವರು ಮೊದಲಿಗೆ ಸೇರಿದಾಗ ಇವರು ಏನು ಮಾಡಬಹುದು ಎಂದು ಸ್ವಲ್ಪ ಅಪಸ್ವರ ಇತ್ತು. ಆದರೆ ಇಂದು ಇವರು ಏನು ಮಾಡಬಹುದು ಎನ್ನುವುದು ಗೊತ್ತಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ, ಜಂಬೂರಾಜ್ ಮಹಾಜನ್, ರಾಜೇಶ್, ಉದಯ ರವಿ, ಪ್ರೇಮ ಬೇಕರಿ ಮಾಲಕ ವಿನೋದ್ ಅವರ ಪುತ್ರಿಯರಾದ ಅಮೃತ ಅದ್ಯಾತ, ಬಿಕೆ ಬಿಲ್ಡ್ ಮಾರ್ಟ್ ಮಾಲಕ ಮೊಯ್ದೀನ್, ಮಂಗಳೂರು ಕಟೀಲ್ ಲಾಜಿಸ್ಟಿಕಿನ ಜನಾರ್ದನ ಪೂಜಾರಿ ಅತಿಥಿಯಾಗಿ ಭಾಗವಹಿಸಿದರು.

ಇದೇ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಹಾಗೂ 400 ಮೀಟರ್ ಹರ್ಡಲ್ಸ್ ನ ರಾಷ್ಟ್ರೀಯ ಕ್ರೀಡಾಪಟು ಅನಘ ಕೆ.ಎ., ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಜುವೆನ್ನಾ ಡ್ಯಾಝಲ್ ಕುಟಿನ್ಹಾ, ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರ ಮಹಮ್ಮದ್ ಶಾನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಪಂದ್ಯಾಟದ್ದುದಕ್ಕೂ ಉಪಾಹಾರ, ಊಟ, ಪಾನೀಯದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿತ್ತು.

ಬಾಂದವ್ಯ ಟ್ರೋಫಿ ಯ ಸಂಘಟಕ ಸ್ಕರಿಯ ಯಂ ಎ ಸ್ವಾಗತಿಸಿ, ಪ್ರಶಾಂತ್ ರೈ ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

ಎಂಎಂವೈಸಿ ಇಫ್ತಾರ್ ಕೂಟ: ರಾಮಲಿಂಗ ರೆಡ್ಡಿ ಭಾಗಿ

Posted by Vidyamaana on 2023-04-14 21:57:18 |

Share: | | | | |


ಎಂಎಂವೈಸಿ ಇಫ್ತಾರ್ ಕೂಟ: ರಾಮಲಿಂಗ ರೆಡ್ಡಿ ಭಾಗಿ

ಬೆಂಗಳೂರು: ಎಂ.ಎಂ.ವೈ.ಸಿ. ಬೆಂಗಳೂರು ಇದರ ಹತ್ತನೇ ವಾರ್ಷಿಕೋತ್ಸವ ಪ್ರಯುಕ್ತ ಇಫ್ತಾರ್ ಕೂಟ ನಡೆಯಿತು.

ಸಮಾರಂಭಕ್ಕೆ ಆಗಮಿಸಿದ ಮಾಜಿ ಗೃಹ ಸಚಿವ ರಾಮಲಿಂಗ ರೆಡ್ಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಮುದಾಯಕ್ಕೆ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಿ:

ಪುತ್ತೂರಿಗೆ ಬಂತು ನ್ಯೂ ಚೆನ್ನೈ ಶಾಪಿಂಗ್ -ಇಂದಿನಿಂದ ಶಾಪಿಂಗ್ ಪ್ರಿಯರಿಗೆ ಧಮಾಕಾ

Posted by Vidyamaana on 2023-06-05 03:00:41 |

Share: | | | | |


ಪುತ್ತೂರಿಗೆ ಬಂತು ನ್ಯೂ ಚೆನ್ನೈ ಶಾಪಿಂಗ್ -ಇಂದಿನಿಂದ ಶಾಪಿಂಗ್ ಪ್ರಿಯರಿಗೆ ಧಮಾಕಾ

ಪುತ್ತೂರು: ಬೃಹತ್ ಬಟ್ಟೆಗಳ ಮೇಳ “ನ್ಯೂ ಚೆನ್ನೈ ಶಾಪಿಂಗ್” ಜೂ.5 ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶುಭಾರಂಭಗೊಳ್ಳಲಿದೆ.

ಈ ಮೇಳದಲ್ಲಿ ಕ್ಯಾಶುವಲ್ ಶರ್ಟ್ & ಫಾರ್ಮಲ್ ಶರ್ಟ್, ಲಾಂಗ್ ಫ್ರಾಕ್ & ಲಾಂಗ್ ಚೂಡಿದಾರ್, ಸೀರೆಗಳು ಹಾಗೂ ರೆಡಿಮೆಡ್ ಬಟ್ಟೆಗಳು ಲಭ್ಯವಿದ್ದು, ಮಕ್ಕಳಿಂದ ತೊಡಗಿ ದೊಡ್ಡವರ ವರೆಗೆ ಯಾವುದೇ ವಸ್ತುಗಳನ್ನು ತೆಗೆದುಕೊಂಡರೂ ಕೇವಲ 199 ರೂಪಾಯಿ ಮಾತ್ರ ಆಗಿರುತ್ತದೆ.

ದಿ ಫ್ಯಾಮಿಲಿ ಶಾಪ್ ಧ್ಯೇಯ ವಾಕ್ಯದೊಂದಿಗೆ ಆರಂಭಗೊಳ್ಳುವ ಈ ಮೇಳದ ಸದುಪಯೋಗವನ್ನು ಗ್ರಾಹಕರ ಪಡೆದುಕೊಳ್ಳಬಹುದು ಎಂದು ಶಾಪಿಂಗ್ ಮೇಳದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಗ್ಯಾರಂಟಿ ಅನುಷ್ಠಾನಕ್ಕೆ ಪ್ರಗತಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ಸಿಎಂ

Posted by Vidyamaana on 2024-02-01 09:36:03 |

Share: | | | | |


ಗ್ಯಾರಂಟಿ ಅನುಷ್ಠಾನಕ್ಕೆ ಪ್ರಗತಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ಸಿಎಂ

ಬೆಂಗಳೂರು :ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿ ಅನುಷ್ಠಾನ ಮಾಡುತ್ತೇವೆಯೇ ವಿನಃ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಇದೇ ಸಮಯ ಸ್ಪಷ್ಟ ಪಡಿಸಿದ್ದಾರೆ.


ಪ್ರಗತಿ ಮೊಬೈಲ್ ಅಪ್ಲಿಕೇಶನ್ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳ ಪರಿಣಾಮಕಾರಿ ಮೇಲ್ವಿಚಾರಣೆಗೆ ಸಹಾಯ‌ ಮಾಡಲಿದೆ. ಅಧಿಕಾರಿಗಳು ವೇಳಾಪಟ್ಟಿಯ ಪ್ರಕಾರ ಸಂಸ್ಥೆಗಳಿಗೆ ಭೇಟಿ ನೀಡುವುದರಿಂದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಪರಿಹರಿಸಲು ಸಹಾಯ ಮಾಡಲಿದೆ.


ಬಡವರ ಪರವಾದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ ಎಂದು ಸಿಎಂ ಇದೇ ಸಮಯ ಹೇಳಿದ್ದಾರೆ.

ಪಾಕಿಸ್ತಾನ ಆಪರೇಟಿವ್ಸ್ ಗಳಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಬಿಎಸ್ ಎಫ್ ಸಿಬಂದಿ ನೀಲೇಶ್ ಬಾಲಿಯಾ ಬಂಧನ

Posted by Vidyamaana on 2023-07-08 14:27:30 |

Share: | | | | |


ಪಾಕಿಸ್ತಾನ ಆಪರೇಟಿವ್ಸ್ ಗಳಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಬಿಎಸ್ ಎಫ್ ಸಿಬಂದಿ ನೀಲೇಶ್ ಬಾಲಿಯಾ ಬಂಧನ

ಸೂರತ್: ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿಯೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಗಡಿ ಭದ್ರತಾ ಪಡೆ (BSF) ನೌಕರನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆಬಂಧಿತ ಆರೋಪಿ ನೀಲೇಶ್ ಬಾಲಿಯಾ ಕಳೆದ ಐದು ವರ್ಷಗಳಿಂದ ಬಿಎಸ್‌ಎಫ್‌ನ ಭುಜ್ ಪ್ರಧಾನ ಕಚೇರಿಯಲ್ಲಿ ಸಿಪಿಡಬ್ಲ್ಯೂಡಿಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.2023 ರ ಜನವರಿಯಲ್ಲಿ ಪಾಕಿಸ್ಥಾನದ ಮಹಿಳಾ ಗುಪ್ತಚರ ಏಜೆಂಟ್ ಳೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ

ಎಸ್ ಡಿ ಪಿ ಐ ಕುರಿಯ ಬೂತ್ ಸಮೀತಿ ವತಿಯಿಂದ ರಂಝಾನ್ ಕಿಟ್ ವಿತರಣೆ

Posted by Vidyamaana on 2023-03-24 16:34:11 |

Share: | | | | |


ಎಸ್ ಡಿ ಪಿ ಐ ಕುರಿಯ ಬೂತ್ ಸಮೀತಿ ವತಿಯಿಂದ ರಂಝಾನ್ ಕಿಟ್ ವಿತರಣೆ

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುರಿಯ ಬೂತ್ ಸಮೀತಿ ವತಿಯಿಂದ ವರ್ಷಂಪ್ರತಿ ರಂಝಾನ್ ತಿಂಗಳಲ್ಲಿ ದಾನಿಗಳ‌ ನೆರವಿನಿಂದ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ಗಳನ್ನು ನೀಡುತ್ತಿದ್ದು ಅದೇ ರೀತಿ ಈ ಬಾರಿ ಕೂಡ ಮಾ 24 ರಂದು ಶುಕ್ರವಾರ ಸುಮಾರು 120 ರಷ್ಟು ಆಹಾರ ಕಿಟ್ ಗಳನ್ನು ನೀಡಲಾಯಿತು..

 ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ SDPI ಪುತ್ತೂರು ವಿಧಾನಸಭಾ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಹಾಗೂ SDPI ಹಿರಿಯ ನಾಯಕರಾದ PBK ಮಹಮ್ಮದ್ ಹಾಗೂ ಆರ್ಯಾಪು ಚುನಾವಣಾ ಉಸ್ತುವಾರಿಯಾದ ಅಶ್ರಫ್ ಸಂಟ್ಯಾರ್ ರವರು ಆಗಮಿಸಿ, ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು...

ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಕುರಿಯ SDPI ಯ ಯುವಕರ ಈ ಉತ್ತಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಇಂತಹ ಮಾದರಿ ಕಾರ್ಯಗಳು ಹಾಗೂ ಸಾಮಾಜಿಕ ಸೇವೆಗಳು ತಾಲೂಕಿನ ‌ಪ್ರತಿಯೊಂದು ಕಡೆಗಳಲ್ಲಿ ಕೂಡ ನಡೆಯಬೇಕಿದೆ ಕುರಿಯದ ಎಸ್ಡಿಪಿಐ ಸದಸ್ಯರಿಗೆ ಹಾಗೂ ಕಿಟ್ ನೀಡಲು ಸಹಕಾರ ನೀಡಿದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು...

ಈ ಸಂದರ್ಭದಲ್ಲಿ ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರಾದ ಅಶ್ರಫ್,ಝೈದ್, ಜಬ್ಬಾರ್ ಕುರಿಯ, ಜಬ್ಬಾರ್ ಅಜ್ಜಿಕಟ್ಟೆ, ಸಾದಿಕ್ ಕುರಿಯ , ಶಾಕಿರ್ ಮುಂಡೂರು,ನಿಝಾಂ ಪಂಜಳ, ಫಾರೂಕ್ ಎಸ್,,ರವುಫ್ ಕುರಿಯ,ಪವಾಝ್ ಕುರಿಯ  ಹಾಗೂ ಪಕ್ಷದ ಅಭಿಮಾನಿಗಳು ಹಾಗೂ, ಹಿತೈಷಿಗಳು ಉಪಸ್ಥಿತರಿದ್ದರು...



Leave a Comment: