ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


BREAKING: ರಾಜ್ಯದ 5 8 ಮತ್ತು 9ನೇ ತರಗತಿ ಬೋರ್ಡ್​ ಪರೀಕ್ಷೆ ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

Posted by Vidyamaana on 2024-03-12 17:16:03 |

Share: | | | | |


BREAKING: ರಾಜ್ಯದ 5 8 ಮತ್ತು 9ನೇ ತರಗತಿ ಬೋರ್ಡ್​ ಪರೀಕ್ಷೆ ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ಬೆಂಗಳೂರು : ನಿನ್ನೆಯಿಂದ 5, 8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆ ಆರಂಭಗೊಂಡಿದೆ. ಈ ಪರೀಕ್ಷೆಗಳನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗಿಯ ನ್ಯಾಯಪೀಠಕ್ಕೆ ಮೇಲ್ಮನವಿ ಮಾಡಿತ್ತು. ಆಗ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಲಾಗಿತ್ತು.ಈ ಬೆನ್ನಲ್ಲೇ ಇಂದು ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಬೋರ್ಡ್ ಪರೀಕ್ಷೆ ರದ್ದುಗೊಂಡೆತೆ ಆಗಿದೆ.ರಾಜ್ಯ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ರಾಜ್ಯ ಪಠ್ಯಕ್ರಮ ಇರುವ ಶಾಲೆಗಳ 5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಖಾಸಗಿ ಅನುವಾದ ರಹಿತ ಶಾಲೆಗಳು ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠವು ಇಂದು ವಿಚಾರಣೆ ನಡೆಸಿತು.


ಈಗಾಗಲೇ ಶಿಕ್ಷಣ ಇಲಾಖೆ ಸೋಮವಾರ ಮತ್ತು ಮಂಗಳವಾರದಂದು ಎರಡು ವಿಷಯಗಳ ಪರೀಕ್ಷೆಗಳನ್ನು ನಡೆಸಿದೆ. ಹೀಗಾಗಿ ಇನ್ನುಳಿದ ವಿಷಯಗಳ 5, 8 ಮತ್ತು 9ನೇ ತರಗತಿ ವಿಷಯಗಳ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಮುಂದುವರೆಸಿ ಆದೇಶಿಸಿದೆ. ಆದರೇ 11ನೇ ತರಗತಿ ಪರೀಕ್ಷೆಗಳು ಪೂರ್ಣಗೊಂಡಿರುವುದರಿಂದ ನ್ಯಾಯಪೀಠವು ಯಾವುದೇ ಆದೇಶ ಮಾಡಿಲ್ಲ.

ತೊಕ್ಕೊಟ್ಟಿನ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ತಡೆಬೇಲಿಯಿಂದ ನದಿಗೆ ಹಾರಿದ ಉದ್ಯಮಿ ಪ್ರಸನ್ನ

Posted by Vidyamaana on 2023-10-30 16:32:20 |

Share: | | | | |


ತೊಕ್ಕೊಟ್ಟಿನ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ತಡೆಬೇಲಿಯಿಂದ ನದಿಗೆ ಹಾರಿದ ಉದ್ಯಮಿ ಪ್ರಸನ್ನ

ಉಳ್ಳಾಲ: ಕಾಫಿಡೇ ಮಾಲೀಕ ಸಿದ್ದಾರ್ಥ ಸಾವಿಗೆ ಶರಣಾದ ಸ್ಥಳದಲ್ಲಿಯೇ ಮತ್ತೊಬ್ಬ ಉದ್ಯಮಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.


ಕಳೆದ ನಾಲ್ಕು ವರ್ಷಗಳ ಹಿಂದೆ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿ ಪಡೆದ ಉದ್ಯಮಗಳಲ್ಲಿ ಒಂದಾಗಿದ್ದ ಕಾಫಿಡೇ ಮಾಲೀಕ ಸಿದ್ದಾರ್ಥ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಸ್ಥಳದಲ್ಲಿಯೇ ಇಂದು ಮತ್ತೊಬ್ಬ ಉದ್ಯಮಿ ತನ್ನ ಕಾರನ್ನು ನಿಲ್ಲಿಸಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಕಾಫಿಡೇ ಮಾಲೀಕ ಸಿದ್ದಾರ್ಥ ಅವರ ಆತ್ಮಹತ್ಯೆ ಬೆನ್ನಲ್ಲಿಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯ ಪಕ್ಕದಲ್ಲಿರುವ ಸೇತುವೆಯ ಆಚೆ-ಈಚೆ ಬೇಲಿಯನ್ನು ನಿರ್ಮಾಣ ಮಾಡಲಾಗಿತ್ತು. ತಂತಿ ಬೇಲಿ ಹಾಗೂ ತಡೆಗೋಡೆ ನಿರ್ಮಾಣ ಮಾಡಿದರೂ ಅದನ್ನು ಮುರಿದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಸೋಮವಾರ ಬೆಳಗ್ಗೆ ಉದ್ಯಮಿಯೊಬ್ಬ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಗ ತಂತಿ ಬೇಲಿ ನಿರ್ಮಾಣ ಮಾಡಿದ ನಂತರ ಮೂರು ವರ್ಷಗಳ ಬಳಿಕ ಮತ್ತೆ ನೇತ್ರಾವತಿ ಸೇತುವೆ ಆತ್ಮಹತ್ಯೆ ಘಟನೆ ನಡೆದಿದೆ.




ಚಿಕ್ಕಮಗಳೂರಿನ ಗೋಕುಲ್ ಫಾರ್ಮ್ ನಿವಾಸಿ ಪ್ರಸನ್ನ (37) ಆತ್ಮಹತ್ಯೆ ತೊಕ್ಕೊಟ್ಟಿನಿಂದ ಮಾಡಿಕೊಂಡ ಯುವಕನಾಗಿದ್ದಾನೆ. ಮಂಗಳೂರಿಗೆ ಬರುವ ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 3 ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಮೂರು ವರ್ಷಗಳ ಬಳಿಕ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ.

ಅನಾರೋಗ್ಯ ಪೀಡಿತ ಮಹಿಳೆಗೆ ಆಕ್ಸಿಜನ್ ಯಂತ್ರ ನೀಡಿದ ಶಾಸಕರು

Posted by Vidyamaana on 2024-01-08 20:04:25 |

Share: | | | | |


ಅನಾರೋಗ್ಯ ಪೀಡಿತ ಮಹಿಳೆಗೆ ಆಕ್ಸಿಜನ್ ಯಂತ್ರ  ನೀಡಿದ ಶಾಸಕರು

ಪುತ್ತೂರು: ಶ್ವಾಸ ಕೋಶದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಳಿಕೆ ಗ್ರಾಮದ ಮಿತ್ತಳಿಕೆ ನಿವಾಸಿ ಕುಮಾರಿ ಪುಲಕಿತ ಎಂಬವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಆಕ್ಸಿಜನ್ ಯಂತ್ರವನ್ನು ನೀಡಿದರು.

ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು , ಆರ್ಥಿಕವಾಗಿ ತೀರ ಬಾಡತನದಲ್ಲಿರುವ ಇವರಿಗೆ ಆಕ್ಸಿಜನ್ ಯಂತ್ರ ಖರೀದಿಸಲು ಹಣಕಾಸಿನ ಅಡಚಣೆಯಾಗಿತ್ತು. ತನ್ನ ಸಂಕಷ್ಟವನ್ನು ಕಳೆದ ಮೂರು ದಿನಗಳ ಹಿಂದೆ ಶಾಸಕರ ಬಳಿ ಹೇಳಿಕೊಂಡಿದ್ದರು. ಆಕ್ಸಿಜನ್ ಯಂತ್ರ ಕೊಡಿಸುವ ಭರವಸೆ ನೀಡಿದ್ದ ಶಾಸಕರು ಮೂರು ದಿನದೊಳಗೆ ಅದನ್ನು ಸಂತ್ರಸ್ಥ ಮಹಿಳೆಗೆ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ಅಳಿಕೆ ಗ್ರಾಪಂ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ನನ್ನ ಬಳಿ ಸಹಾಯ ಕೇಳಿ ಈ ಬಡ ಕುಟುಂಬ ಕಚೇರಿಗೆ ಕಳೆದ ಮೂರದಿನಗಳ ಹಿಂದೆ ಬಂದಿದ್ರು. ತಕ್ಷಣವೇ ಮಹಿಳೆಯ ಉಸಿರಾಟಕ್ಕೆ ಅಗತ್ಯವಾಗಿ ಬೇಕಾದ ಆಕ್ಸಿಜನ್ ಯಂತ್ರವನ್ನು ಕೊಡಿಸಿದ್ದೇನೆ. ಅವರು ಆರೋಗ್ಯವಂತರಾಗಿರಲಿ ಎಂಬುದೇ ನನ್ನ ಆಶಯವಾಗಿದೆ ಎಂದು ತಿಳಿಸಿದ್ದಾರೆ.

ಧರ್ಮಸ್ಥಳ :ಲಾರಿ ಬೈಕ್ ಡಿಕ್ಕಿ ಪ್ರಸಾದ್ ಶೆಟ್ಟಿ ಮೃತ್ಯು :ಮತ್ತೋರ್ವ ಗಂಭೀರ

Posted by Vidyamaana on 2023-03-29 12:58:46 |

Share: | | | | |


ಧರ್ಮಸ್ಥಳ :ಲಾರಿ ಬೈಕ್ ಡಿಕ್ಕಿ ಪ್ರಸಾದ್ ಶೆಟ್ಟಿ ಮೃತ್ಯು :ಮತ್ತೋರ್ವ ಗಂಭೀರ

ಬೆಳ್ತಂಗಡಿ: ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ ಸಮೀಪದ ಮುಂಡ್ರುಪ್ಪಾಡಿ ಎಂಬಲ್ಲಿ‌ ನಡೆದಿದೆ.

ಬೆಳ್ತಂಗಡಿ ಸರ್ವೆ ಇಲಾಖೆಯ ಸರ್ವೆ ಇದ್ದ ಕಾರಣ ಕರ್ತವ್ಯ ಮುಗಿಸಿ ವಾಪಸ್ ಅಗಿವ ವೇಳೆ ಮುಂಡ್ರುಪಾಡಿಯಲ್ಲಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಬೈಕ್ ನಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬೈಕ್ ಸವಾರ ಗುರುವಾಯನಕೆರೆ ನಿವಾಸಿ ಚೈನರ್ ಅಗಿರುವ ಪ್ರಸಾದ್ ಶೆಟ್ಟಿ(27) ಸಾವನ್ನಪ್ಪಿದ್ದು , ಸಹಸವಾರ ಸರ್ವೆಯರ್ ವಿಶ್ವನಾಥ್ ಗಂಭೀರ ಗಾಯಗೊಂಡಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ತನ್ನ ಹೆಸರಿನ ಟೀ ಶರ್ಟ್ ಧರಿಸಿದ್ದ ಅಭಿಮಾನಿಯ ಹಿಂಬಾಲಿಸಿ ಹೋಗಿ ಮಾತನಾಡಿಸಿದ ಸಚಿನ್‌: ವೀಡಿಯೋ ವೈರಲ್

Posted by Vidyamaana on 2024-02-05 07:24:24 |

Share: | | | | |


ತನ್ನ ಹೆಸರಿನ ಟೀ ಶರ್ಟ್ ಧರಿಸಿದ್ದ ಅಭಿಮಾನಿಯ ಹಿಂಬಾಲಿಸಿ ಹೋಗಿ ಮಾತನಾಡಿಸಿದ ಸಚಿನ್‌: ವೀಡಿಯೋ ವೈರಲ್

        ಕ್ರಿಕೆಟ್  ಹಾಗೂ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾರೆಯರಿಗೆ ತಮ್ಮದೇ ಆದ ಅಭಿಮಾನಿಗಳಿರುತ್ತಾರೆ. ತಮ್ಮ ನೆಚ್ಚಿನ ನಾಯಕಿ /ನಾಯಕಿಗಾಗಿ ಅಭಿಮಾನಿಗಳು ಏನೂ ಮಾಡಲು ಸಿದ್ಧರಿರುತ್ತಾರೆ. ಕೆಲವರು ದೇವಸ್ಥಾನ ಕಟ್ಟುತ್ತಾರೆ, ಇನ್ನು ಕೆಲವರು ದೇವರಂತೆ ಪೂಜೆ ಮಾಡುತ್ತಾರೆ.

ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ವ್ಯಕ್ತಿಯ ಹುಟ್ಟುಹಬ್ಬದಂದು ರಕ್ತದಾನ ಮಾಡುತ್ತಾರೆ. ಬಡವರಿಗೆ ಹಣ್ಣು ಹಂಪಲು ನೀಡುತ್ತಾರೆ, ವೃದ್ಧಾಶ್ರಮಗಳಲ್ಲಿ ಸೇವೆ ಮಾಡುತ್ತಾರೆ ಹೀಗೆ ವಿವಿಧ ರೀತಿಯಲ್ಲಿ ತಮ್ಮ ಅಭಿಮಾನವನ್ನು ಮೆರೆಯುತ್ತಾರೆ. ಹಾಗೆಯೇ ಭಾರತದಲ್ಲಿ ಕ್ರಿಕೆಟ್‌ಗೆ ಇರುವ ಅಭಿಮಾನಕ್ಕೆ ಬೇರೆಯದೇ ಸ್ಥಾನವಿದೆ. ಅನೇಕರು ತಮ್ಮ ನೆಚ್ಚಿನ ನಾಯಕನ ಹೆಸರಿರುವ ಟೀ ಶರ್ಟ್ ಧರಿಸಿ ಆ ಮೂಲಕ ಅಭಿಮಾನ ಮೆರೆಯುವುದನ್ನು ನೋಡಬಹುದು . ಹೀಗೆ ತಮ್ಮ ನೆಚ್ಚಿನ ಕ್ರಿಕೆಟಿಗನ ಟೀ ಶರ್ಟ್ ಧರಿಸಿ ರಸ್ತೆಯಲ್ಲಿ ಓಡಾಡ್ತಿರಬೇಕಾದರೆ ಅವರೇ ಬಂದು ನಿಮ್ಮನ್ನ ಮಾತನಾಡಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು. ಒಂದು ಕ್ಷಣ ಇದು ನಿಜನಾ ಕನಸಾ ಅಂತ ನಿಮ್ಮನೇ ನೀವು ಚಿವುಟಿ ನೋಡುವುದಂತೂ ಪಕ್ಕಾ ಅದೇ ರೀತಿಯ ಅನುಭವ ಈಗ ಇಲ್ಲಿ ವ್ಯಕ್ತಿಯೊಬ್ಬರಿಗೆ ಆಗಿದೆ. ಇವರನ್ನು ಭೇಟಿಯಾಗಿದ್ದು ಬೇರೆ ಯಾರು ಅಲ್ಲ, ಕ್ರಿಕೆಟ್ ಗಾಡ್ ಎಂದೇ ಖ್ಯಾತಿ ಗಳಿಸಿರುವ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌.


💥ವಿಡಿಯೋ ನೋಡಲು ಕ್ಲಿಕ್ ಮಾಡಿ!!!!

ಹೌದು, ತಮ್ಮ ಕಟ್ಟ ಅಭಿಮಾನಿಯನ್ನು ಆತನಿಗೆ ತಿಳಿಯದಂತೆ ಆತ ಊಹೆಯೂ ಮಾಡದಂತೆ ಸಡನ್ ಆಗಿ ಭೇಟಿ ಮಾಡಿ ಆತನ ಬದುಕಿನಲ್ಲಿ ಸಾರ್ಥಕ್ಯದ ಭಾವ ಮೂಡಿಸಿದ್ದಾರೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ತಾನೂ ಸ್ವಲ್ಪವೂ ನಿರೀಕ್ಷೆ ಮಾಡಿರದ ಈ ಕ್ಷಣ ನೋಡಿ ಅಭಿಮಾನಿ ಪೂರ್ತಿ ಭಾವುಕನಾಗಿದ್ದು ಕ್ರಿಕೆಟ್ ದೇವರಿಗೆ ದೊಡ್ಡ ನಮಸ್ಕಾರ ಮಾಡಿದ್ದಾನೆ ಈ ಅಭಿಮಾನಿ.ಹಾಗಿದ್ದರೆ ನಡೆದಿದ್ದೇನು?


ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಅವರ ಕಾರಿನ ಮುಂದೆಯೇ ಭಾರತ ಕ್ರಿಕೆಟ್ ಟೀಮ್‌ ಪ್ರತಿನಿಧಿಸುವ ನೀಲಿ ಬಣ್ಣದ ಟೀ ಶರ್ಟ್‌ ಮೇಲೆ ಸಚಿನ್ ತೆಂಡೂಲ್ಕರ್ ಐ ಮಿಸ್ ಯೂ ಎಂದು ಬರೆದಿರುವ ಟೀ ಶರ್ಟ್ ತೊಟ್ಟು ಸ್ಕೂಟರ್‌ನಲ್ಲಿ ವ್ಯಕ್ತಿಯೊಬ್ಬ ಸಾಗುತ್ತಿದ್ದು, ಇದನ್ನು ನೋಡಿದ ಸಚಿನ್ ತೆಂಡೂಲ್ಕರ್‌ ಕಾರಿನಲ್ಲಿ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಭೇಟಿ ಮಾಡಿದ್ದಾರೆ. ಆದರೆ ಇದನ್ನು ನಿರೀಕ್ಷೆ ಮಾಡಿರದ ಆತ ಕೆಲ ಕಾಲ ಶಾಕ್ ಆಗಿದ್ದಾನೆ. ಬಳಿಕ ನನಗೆ ನಿಜವಾಗಿಯೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಇವತ್ತು ನನಗೆ ನನ್ನ ಭಗವಂತನ ದರ್ಶನವಾಯ್ತು ಎಂದು ಆತ ಹೇಳಿಕೊಂಡಿದ್ದಾನೆ. ಅಲ್ಲದೇ ತನ್ನ ಬಳಿ ಇದ್ದ ಸಚಿನ್ ತೆಂಡೂಲ್ಕರ್ ಅವರ ಸಾಧನೆಯ ಫೋಟೋಗಳ ಪೇಪರ್ ಕಟ್ಟಿಂಗ್ ಅಂಟಿಸಿ ಫೋಟೋಗಳನ್ನು ಅಂಟಿಸಿದ್ದ ಪುಸ್ತಕವನ್ನು ಸಚಿನ್‌ಗೆ ತೋರಿಸಿದ್ದಾರೆ. ತನ್ನ ನೆಚ್ಚಿನ ಅಭಿಮಾನಿ ಜೊತೆ ಮಾತನಾಡಿದ ಸಚಿನ್ ಟೀ ಶರ್ಟ್ ನೋಡಿ ನಿಮ್ಮನ್ನು ಮಾತನಾಡಿಸಬೇಕು ಎನಿಸಿತು ಅದಕ್ಕೆ ಗಾಡಿ ನಿಲ್ಲಿಸಿದೆವು ಎಂದು ಹೇಳಿದ್ದಾರೆ. ಜೊತೆಗೆ ಆತನಿಗೆ ಆಟೋಗ್ರಾಫ್ ನೀಡಿದರೆ, ಮೊದಲಿಗೆ ಸಚಿನ್ ಏರ್‌ಫೋರ್ಟ್‌ಗೆ ಹೋಗೋದು ಹೇಗೆ ಎಂದು ಕೇಳಿದ್ದಾರೆ. ಈ ವೇಳೆ ಇವರತ್ತ ತಿರುಗಿದ ಅಭಿಮಾನಿ ಶಾಕ್‌ನಿಂದ ನೋಡಿ ನಾನಿವತ್ತೂ ನಿಜವಾಗಿಯೂ ಭಗವಂತನನ್ನು ನೋಡಿದೆ ಎಂದು ಹೇಳಿದ್ದಾರೆ.ನೀವು ಹೆಲ್ಮೆಟ್ ಧರಿಸಿದ್ದೀರಿ ನಾನು ಸೀಟ್ ಬೆಲ್ಟ್ ಧರಿಸಿದ್ದೇನೆ, ಸದಾ ಹೆಲ್ಮೆಟ್ ಧರಿಸಿ ಪ್ರಯಾಣಿಸಿ ಚೆನ್ನಾಗಿರಿ ಎಂದು ಹಾರೈಸಿ ಸಚಿನ್ ಅಲ್ಲಿಂದ ಹೊರಟು ಹೋಗಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಸಚಿನ್ ಅಭಿಮಾನಿಗಳು ಕೂಡ ಭಾವುಕರಾಗಿದ್ದು, ಕೇವಲ ಕ್ರಿಕೆಟ್ ಗಾಡ್ ಈ ರೀತಿ ಮಾಡಲು ಸಾಧ್ಯ ಎಂದೆಲ್ಲಾ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಹೊಗಳಿದ್ದಾರೆ. ಆದರೆ ಮತ್ತೆ ಕೆಲವರು ಇದು ಸ್ಕ್ರಿಪ್ಟೆಡ್( ಪ್ಲಾನ್ ಮಾಡಿ ಮಾಡಿದ ವೀಡಿಯೋ) ಎಂದು ದೂರಿದ್ದಾರೆ. ಸ್ಕ್ರಿಫ್ಟ್ ಚೆನ್ನಾಗಿ ಬರೀತೀರಾ ಎಂದು ಟೀಕಿಸಿದ್ದಾರೆ.


ಆದರೆ ಸ್ವತಃ ಸಚಿನ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿದ ಈ ವ್ಯಕ್ತಿಯ ಕಂಡು ನನ್ನ ಹೃದಯ ಖುಷಿಯಿಂದ ಭಾರವಾಯ್ತು. ನಾವು ನಿರೀಕ್ಷೆಯೇ ಮಾಡದ ಕಡೆಯಿಂದೆಲ್ಲಾ ಬರುವ ಈ ರೀತಿಯ ಅಗಾಧ ಪ್ರೀತಿಯಿಂದ ನಮಗೆ ಜೀವನ ತುಂಬಾ ವಿಶೇಷ ಎನಿಸುವುದು ಎಂದು ಸಚಿನ್ ತೆಂಡೂಲ್ಕರ್ ಬರೆದುಕೊಂಡಿದ್ದಾರೆ. ಸಚಿನ್ ಭೇಟಿ ಮಾಡಿದ ಈ ಅಭಿಮಾನಿಯ ಹೆಸರು ಹರೀಶ್‌ಒಟ್ಟಿನಲ್ಲಿ ಸಚಿನ್ ಭೇಟಿಯಿಂದ ಅಭಿಮಾನಿ ಒಂದು ಕ್ಷಣ ಮಾತೇ ಹೊರಡದಂತಾಗಿ ಭಾವುಕರಾಗಿದ್ದು ಈ ವೀಡಿಯೋದಲ್ಲಿ ಕಣ್ಣಿಗೆ ಕಟ್ಟಿದಂತಿದೆ

ಫೆ 06: ಬೊಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಲೇಸರ್ ಸ್ಟೋನ್ ಕ್ಯಾಂಪ್

Posted by Vidyamaana on 2024-02-05 15:54:33 |

Share: | | | | |


ಫೆ 06: ಬೊಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಲೇಸರ್ ಸ್ಟೋನ್ ಕ್ಯಾಂಪ್

ಪುತ್ತೂರು: ಬೊಳುವಾರಿನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.6ರಂದು ಸಾಯಂಕಾಲ 5.30ರಿಂದ ಉಚಿತ ಲೇಸರ್ ಸ್ಟೋನ್ ಕ್ಯಾಂಪ್ ನಡೆಯಲಿದೆ.


ಖ್ಯಾತ ಮೂತ್ರಶಾಸ್ತ್ರಜ್ಞ ಡಾ. ಅಭೀಷ್ ಹೆಗ್ಡೆರವರು ತಪಾಸಣೆ ನಡೆಸಲಿದ್ದಾರೆ. ಈ ಆನ್ ಲೈನ್ ನ್ಯೂಸ್ ಸಂದರ್ಭದಲ್ಲಿ ಎಲ್ಲಾ ರೀತಿಯ ಮೂತ್ರ ಕಲ್ಲಿನ ಮತ್ತು ಪ್ರಾಸ್ಟೇಟ್‌ನ ಲೇಸರ್ ಚಿಕಿತ್ಸೆಗೆ ಸಂಬಂದಪಟ್ಟ ತಪಾಸಣೆ ನಡೆಯಲಿದೆ.


ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ನೋಂದಾವಣೆಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449991115, 9188656671ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



Leave a Comment: