ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಸುಳ್ಯ ಅಯ್ಯಪ್ಪ ಮಾಲಾಧಾರಿ ಪದ್ಮನಾಭ ನೇಣು ಬಿಗಿದು ಆತ್ಮಹತ್ಯೆ

Posted by Vidyamaana on 2023-12-22 09:58:07 |

Share: | | | | |


ಸುಳ್ಯ ಅಯ್ಯಪ್ಪ ಮಾಲಾಧಾರಿ ಪದ್ಮನಾಭ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ :: ಅಯ್ಯಪ್ಪ ಮಾಲಾಧಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆಯೊಂದು ಸುಳ್ಯ ಮರ್ಕಂಜದ ಸೇವಾಜೆ ಎಂಬಲ್ಲಿ ನಡೆದಿದೆ.ಪದ್ಮನಾಭ ( 30) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಸೇವಾಜೆ ಬಳಿಯ ಆಶ್ರಮದಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದು, ಇಂದು ಆಶ್ರಮದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



ಪೊಲೀಸರು ಮೃತದೇಹವನ್ನು ಮಹಜರು ಬಳಿಕ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಕೌಟುಂಬಿಕ ಸಮಸ್ಯೆಯೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನದಿಯಲ್ಲಿ ಈಜಲು ಹೋದ ಕಾರ್ಕಳದ ಉಪನ್ಯಾಸಕರಿಬ್ಬರು ನಾಪತ್ತೆ: ಒಬ್ಬರ ಶವ ಪತ್ತೆ

Posted by Vidyamaana on 2023-06-18 11:03:17 |

Share: | | | | |


ನದಿಯಲ್ಲಿ ಈಜಲು ಹೋದ ಕಾರ್ಕಳದ ಉಪನ್ಯಾಸಕರಿಬ್ಬರು ನಾಪತ್ತೆ: ಒಬ್ಬರ ಶವ ಪತ್ತೆ

ಶಿವಮೊಗ್ಗ: ತುಂಗಾ ನದಿಯಲ್ಲಿ ಈಜಲು ಹೋದ ಉಪನ್ಯಾಸಕರಿಬ್ಬರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೀರ್ಥ ಮತ್ತೂರು ಗ್ರಾಮದ ಬಳಿಯ ತುಂಗಾ ನದಿಯಲ್ಲಿ ಈ ಘಟನೆ ನಡೆದಿದೆ.


ಕಾರ್ಕಳದ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರಿಬ್ಬರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು. ತುಂಗಾನದಿಯಲ್ಲಿ ಈಜಲು ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ನಿಟ್ಟೆ ಕಾಲೇಜಿನ ಉಪನ್ಯಾಸಕರಾದ 38 ವರ್ಷದ ಪುನೀತ್‌ ಹಾಗೂ 36 ವರ್ಷದ ಬಾಲಾಜಿ ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ, ಒಬ್ಬರು ಉಪನ್ಯಾಸಕರ ಮೃತದೇಹ ಪತ್ತೆಯಾಗಿದ್ದರೆ, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ.


ಪ್ರವಾಸಕ್ಕೆಂದು ಬಂದಿದ್ದ ಉಪನ್ಯಾಸಕರು ತೀರ್ಥಹಳ್ಳಿಯ ತೀರ್ಥಮತ್ತೂರು ಮಠದ ಸಮೀಪ ತಂಗಿದ್ದರು. ಈಜಲು ತೆರಳಿದ್ದ ವೇಳೆ ನಾಪತ್ತೆಯಾಗಿದ್ದಾರೆ. ಇಬ್ಬರನ್ನು ಪತ್ತೆಹಚ್ಚಲು ತೀರ್ಥಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಯತ್ನಾಳ್ ಮುಂದೆ ಕಣ್ಣೀರು ಹಾಕಿದ ಪುತ್ತಿಲ – ಅರುಣನ್ನ ಕಣ್ಣೀರಾಗಿದ್ದು ಹಿಂದು ಕಾರ್ಯಕರ್ತರ ನೋವಿಗೆ

Posted by Vidyamaana on 2023-05-19 09:12:57 |

Share: | | | | |


ಯತ್ನಾಳ್ ಮುಂದೆ ಕಣ್ಣೀರು ಹಾಕಿದ ಪುತ್ತಿಲ – ಅರುಣನ್ನ ಕಣ್ಣೀರಾಗಿದ್ದು ಹಿಂದು ಕಾರ್ಯಕರ್ತರ ನೋವಿಗೆ

ಪುತ್ತೂರು: ಬಿಜೆಪಿ ನಾಯಕರಿಬ್ಬರ ಅವಹೇಳನಕಾರಿ ಬ್ಯಾನರ್ ವಿಚಾರದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಹಿಂದು ಯುವಕರ ಆರೋಗ್ಯವನ್ನು ವಿಚಾರಿಸಲು ಮತ್ತು ಘಟನೆಯ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಮಾಜಿ ಕೇಂದ್ರ ಸಚಿವ, ವಿಜಯಪುರ ನಗರ ಕ್ಷೇತ್ರದ ಶಾಸಕ ಮತ್ತು ತನ್ನ ನೇರ ನುಡಿಗಳಿಂದಲೇ ಜನಪ್ರಿಯರಾಗಿರುವ ಹಿಂದು ಫೈರ್ ಬ್ರ್ಯಾಂಡ್ ಲೀಡರ್ ಬಸವನ ಗೌಡ ಪಾಟೀಲ ಯತ್ನಾಳ ಅವರು ಇಂದು ಪುತ್ತೂರಿಗೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಯತ್ನಾಳ ಅವರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಇಬ್ಬರು ಹಿಂದು ಯುವಕರ ಆರೋಗ್ಯವನ್ನು ವಿಚಾರಿಸಿದರು ಈ ಸಂದರ್ಭದಲ್ಲಿ ಅವರ ಜೊತೆಗಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತು ಇತರರ ಒಟ್ಟಾರೆ ಘಟನೆಯ ಮಾಹಿತಿಯನ್ನು ಯತ್ನಾಳ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವರು ಸ್ಥಳೀಯ ಬಿಜೆಪಿ ನಾಯಕರ ವರ್ತನೆಯ ಬಗ್ಗೆಯೂ ಯತ್ನಾಳ ಅವರಿಗೆ ದೂರು ನೀಡಿದ್ದು ವಿಶೇಷವಾಗಿತ್ತು. ಮಾತ್ರವಲ್ಲದೇ ಇಲ್ಲಿನ ಮಾಜಿ ಶಾಸಕರು ಬಿಜೆಪಿಯವರೇ ಆಗಿದ್ದರೂ ಇದುವೆರೆಗೂ ಆಸ್ಪತ್ರೆಗೆ ಬಂದಿಲ್ಲ ಎಂದು ಹಿಂದು ಕಾರ್ಯಕರ್ತರು ದೂರಿದರು.

ಪೊಲೀಸರ ಏಟಿನಿಂದಾಗಿ ಯುವಕರಿಗೆ ಆಗಿರುವ ಗಾಯಗಳನ್ನು ಸ್ವತಃ ಪುತ್ತಿಲ ಅವರೇ ಯತ್ನಾಳ ಅವರಿಗೆ ವಿವರಿಸಿ ಇನ್ನು ಮುಂದೆ ಈ ಯುವಕರ ಭವಿಷ್ಯದ ಗತಿಯೇನು ಎಂದು ಮರುಗಿದರು. ‘ಇವರು ಯಾವುದೇ ರಾಲಕೀಯ ಪಕ್ಷದಲ್ಲಿ ಇರದವರು, ಇವರೆಲ್ಲಾ ಕೇವಲ ಹಿಂದುತ್ವಕ್ಕಾಗಿ ಕೆಲಸ ಮಾಡ್ತಿದ್ದವರು – ಇವತ್ತು ಅಂತವರನ್ನೇ ಗುರಿಯಾಗಿಸಿ ದೌರ್ಜನ್ಯ ನಡೆಸಲಾಗಿದೆ’ ಎಂದು ಶ್ರೀಕೃಷ್ಣ ಉಪಾಧ್ಯಾಯ ಅವರು ವಿವರಿಸಿದರು.


‘ಮೊನ್ನೆಯ ಚುನಾವಣೆಯಲ್ಲಿ ಬಿಜೆಪಿಗೆ ಕೆಲಸ ಮಾಡಿದ್ದಾರೆ, ಆದರೆ ಇವರು ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಹೀಗೆ ಮಾಡಿದ್ದಾರೆ. ನಮ್ಮ ಮನವಿ ಇಷ್ಟೇ ಇವರಿಗೆ ನ್ಯಾಯ ಸಿಗ್ಬೇಕು, ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಕೊಡಿಸ್ಬೇಕು ಮತ್ತು ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು, ಹಾಗೆ ನೀವು ಪ್ರಯತ್ನಿಸ್ಬೇಕು..’ ಎಂದು ಪುತ್ತಿಲ ಅವರು ಗದ್ಗದಿತರಾಗಿ ಯತ್ನಾಳ ಅವರಲ್ಲಿ ಕೈಮುಗಿದು ಪ್ರಾರ್ಥಿಸಿಕೊಂಡರು.

ಗಾಯಾಳು ಯುವಕ ತನ್ನ ಮೇಲಾದ ದೌರ್ಜನ್ಯದ ಕುರಿತಾಗಿ ಯತ್ನಾಳ ಅವರಿಗೆ ವಿವರಿಸಿದರು. ‘ನಮಗೆ ಮೇಲಿನಿಂದ ಪ್ರೆಶರ್ ಇದೆ..ಕಾಲ್ ಬರ್ತಾ ಇದೆ..’ ಅಂತ ಪೊಲೀಸರು ಮಾತಾಡಿಕೊಳ್ತಿದ್ರು ಎಂಬ ವಿಚಾರವನ್ನು ಯತ್ನಾಳ ಅವರ ಗಮನಕ್ಕೆ ಗಾಯಾಳು ಯುವಕ ತಂದಿದ್ದಾರೆ.

ಪುತ್ತಿಲ ಮತ್ತು ಹಿಂದು ಕಾರ್ಯಕರ್ತರು ಮತ್ತು ಸಂತ್ರಸ್ತ ಯುವಕನ ಮಾತುಗಳನ್ನು ಮೌನವಾಗಿಯೇ ಕೇಳಿಸ್ಕೊಂಡ ಯತ್ನಾಳ ಅವರು ಬಳಿಕ ಈ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ತನ್ನಿಂದಾಗುವ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ತಲೆಯಾಡಿಸಿ ಉತ್ತರಿಸಿ ಭರವಸೆ ತುಂಬಿದ್ದಾರೆ.

ಒಟ್ಟಿನಲ್ಲಿ ಪುತ್ತೂರಿನಲ್ಲಿ ಹಿಂದು ಯುವಕರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದು ಇನ್ನು ಯಾವ ಮಗ್ಗುಲು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕಡಬದಲ್ಲಿ ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Posted by Vidyamaana on 2023-09-28 21:01:17 |

Share: | | | | |


ಕಡಬದಲ್ಲಿ ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

ಕಡಬ: ಸಮೀಪದ ಮೀನಾಡಿಯಲ್ಲಿಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟು ಮೂರು ತಿಂಗಳು ಕಳೆಯುತ್ತಿದ್ದಂತೆಯೇ ಐತ್ತೂರು ಗ್ರಾಮದಲ್ಲಿ ಮತ್ತೊಂದು ಕಾಡಾನೆ ದಾಳಿಯಾಗಿದ್ದು, ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ.



ಐತ್ತೂರು ಗ್ರಾಮದ ಗೇರ್ತಿಲ‌ ನಿವಾಸಿ ಓಡಿ ಎಂಬವರ ಪುತ್ರ ಕೂಲಿ ಕಾರ್ಮಿಕ ಚೋಮ (56) ಗಾಯಗೊಂಡವರು.


ಅವರು ಗುರುವಾರ ಸಂಜೆ ಕೂಲಿ‌ ಕೆಲಸ ಬಿಟ್ಟು ಮನೆಯ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಗ್ರಾಮದ ನೆಲ್ಯಡ್ಕ ಶಾಲೆಗೆ ಹೊಂದಿಕೊಂಡಿರುವ ಕಾರ್ತಿಕೇಯ ಭಜನಾ ಮಂದಿರದ ಬಳಿ ಕಾಡಾನೆ ಹಠಾತ್ತಾಗಿ ಎದುರು ಬಂದು ಅವರನ್ನು‌ ಸೊಂಡಿಲಿನಿಂದ ಎತ್ತಿ ಬಿಸಾಕಿದೆ. ಪರಿಣಾಮವಾಗಿ ಚೋಮ‌ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಥಮ‌ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.


ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ದ.ಕ. ಲೋಕಸಭಾ ಚುನಾವಣಾ ಕಾಂಗ್ರೆಸ್‌ ಪ್ರಚಾರ ಸಮಿತಿಗೆ ಈಶ್ವರ ಭಟ್ ಪಂಜಿಗುಡ್ಡೆ,ಮುರಳಿಧರ ರೈ ಮಠಂತಬೆಟ್ಟು ಆಯ್ಕೆ

Posted by Vidyamaana on 2024-04-05 17:12:57 |

Share: | | | | |


ದ.ಕ. ಲೋಕಸಭಾ ಚುನಾವಣಾ ಕಾಂಗ್ರೆಸ್‌ ಪ್ರಚಾರ ಸಮಿತಿಗೆ ಈಶ್ವರ ಭಟ್ ಪಂಜಿಗುಡ್ಡೆ,ಮುರಳಿಧರ ರೈ ಮಠಂತಬೆಟ್ಟು ಆಯ್ಕೆ

ಪುತ್ತೂರು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿಯಾಗಿರುವ ಬಿ. ರಮಾನಾಥ ರೈ ಅವರ ನೇತೃತ್ವದ ಚುನಾವಣಾ ಪ್ರಚಾರ ಸಮಿತಿಗೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ

ಬ್ಲಡ್ ಡೋನರ್ಸ್ ಮಂಗಳೂರು ನೂತನ ಸಮಿತಿ ಅಸ್ತಿತ್ವಕ್ಕೆ

Posted by Vidyamaana on 2023-07-09 03:31:43 |

Share: | | | | |


ಬ್ಲಡ್ ಡೋನರ್ಸ್ ಮಂಗಳೂರು ನೂತನ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ವಾರ್ಷಿಕ ಮಹಾ ಸಭೆಯು ಡಾನ್ ಬಾಸ್ಕೊ ಹಾಲ್ ಬಲ್ಮಟ್ಟದಲ್ಲಿ ಜುಲೈ 6 ರಂದು ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಚುನಾವಣಾ ಉಸ್ತುವಾರಿಗಳಾದ ಶಾಹುಲ್ ಹಮೀದ್ ಕಾಶಿಪಟ್ನಾ ಹಾಗೂ ಫರ್ಝಾನ್ ಸಿದ್ದಕಟ್ಟೆ ಇವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸಿದ್ದೀಕ್ ಮಂಜೇಶ್ವರ, ಅಧ್ಯಕ್ಷರಾಗಿ ನವಾಝ್ ಕಲ್ಲರಕೋಡಿ, ಉಪಾಧ್ಯಕ್ಷರಾಗಿ ಅಶ್ರಫ್ ಉಪ್ಪಿನಂಗಡಿ, ಲತೀಫ್ ಎಚ್.ಎಸ್.ಎ ಉಪ್ಪಿನಂಗಡಿ, ಪ್ರದಾನ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಕಾಶಿಪಟ್ನಾ, ಕಾರ್ಯದರ್ಶಿಯಾಗಿ ಫಯಾಝ್ ಮಾಡೂರು, ಜೊತೆ ಕಾರ್ಯದರ್ಶಿ‌ಯಾಗಿ ನಿಸಾರ್ ಉಳ್ಳಾಲ, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಪಜೀರ್, ಸದಸ್ಯರಾಗಿ ಸಲಾಂ ಚೊಂಬುಗುಡ್ಡೆ, ಅಬ್ದುಲ್ಲಾ ಭವಾನಿ, ಅಫ್ತಾಬ್ ಕುಲಾಯಿ, ಮೊಯಿದು ಸೀತಾಂಗೋಳಿ, ಫರ್ಝಾನ್ ಸಿದ್ದಕಟ್ಟೆ, ಫಾರೂಕ್ ಬಿಗ್ ಗ್ಯಾರೇಜ್, ಮುನಾಫಿಲ್ ಜೆಪ್ಪು, ಮನ್ಸೂರ್ ಕಲ್ಲಡ್ಕ, ಹಕೀಮ್ ಕೆಸಿ ರೋಡ್ ಇವರನ್ನು ಆಯ್ಕೆ ಮಾಡಲಾಯಿತು.

ಕ್ಯಾಂಪ್ ಇನ್ ಚಾರ್ಜ್ ಆಗಿ ಫರ್ಝಾನ್ ಸಿದ್ದಕಟ್ಟೆ, ಮಾಧ್ಯಮ ಉಸ್ತುವಾರಿ ಆಗಿ ಅಫೀಝ್ ಓಮಾನ್, ನಿಝಾಮುದ್ದೀನ್  ತಬೂಕ್, ಝಹೀರ್ ಶಾಂತಿನಗರ ಫಾರೂಕ್(ಫಾದ್) ಇವರನ್ನು ನೇಮಿಸಲಾಯಿತು.

ಗಲ್ಫ್(ಜಿ.ಸಿ. ಸಿ) ಸಮೀತಿ ಅಧ್ಯಕ್ಷರಾಗಿ ನಝೀರ್ ಬಿಕರ್ನಕಟ್ಟೆ ಪುನರಾಯ್ಕೆ ಯಾದರು. ಉಪಾದ್ಯಕ್ಷರಾಗಿ ದಾವೂದ್ ಬಜಾಲ್, ಇಮ್ಮು ಉಳ್ಳಾಲ್, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಸಾಲ್ಮರ, ಕಾರ್ಯದರ್ಶಿಯಾಗಿ ನೌಫಲ್ ಬಜ್ಪೆ ಇವರನ್ನು ಆಯ್ಕೆ ಮಾಡಲಾಯಿತು.

 ಆರ್ಥಿಕ ವ್ಯವಹಾರಗಳ ಇನ್ ಚಾರ್ಜ್ ಆಗಿ ಇರ್ಫಾನ್ ಕಲ್ಲಡ್ಕ, ಮೆಡಿಕಲ್ ಇನ್ ಚಾರ್ಜ್ ಆಗಿ ಜಮಾಲ್ ಕಲ್ಲಡ್ಕ, ಬ್ಲಡ್ ಬ್ಯಾಂಕ್ ಇಂಚಾರ್ಜ್ ಆಗಿ ತೌಫಿಕ್ ಕುಲಾಯಿ, ಸಿರಾಜ್ ಪಜೀರ್,  ಮನ್ಸೂರ್ ಕೋಡಿಜಾಲ್, ಸಮೀರ್ ನಾರಾವಿ, ಮುನೀರ್ ಚೊಂಬುಗುಡ್ಡೆ, ರೌಫ್ ಪಾಲ್ತಾಡ್, ಇಮ್ತಿಯಾಝ್ ಜೋಕಟ್ಟೆಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶಾಹುಲ್ ಹಮೀದ್ ಕಾಶಿಪಟ್ನಾ ಇವರು ಸ್ವಾಗತಿಸಿ ವಂದಿಸಿದರು.



Leave a Comment: