ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಬೆಂಗಳೂರು ಕಂಬಳದ ಬಿಗ್ ಅಪ್ಡೇಟ್!

Posted by Vidyamaana on 2023-09-21 16:00:48 |

Share: | | | | |


ಬೆಂಗಳೂರು ಕಂಬಳದ ಬಿಗ್ ಅಪ್ಡೇಟ್!

ಪುತ್ತೂರು: ಬೆಂಗಳೂರಿನ ಕಂಬಳದಲ್ಲಿ ಭಾಗವಹಿಸಲು ಕಂಬಳ ಕೋಣಗಳಿಗೆ ಅವಕಾಶ ಕಲ್ಪಿಸಿದ್ದು, ಈ ಹಿನ್ನೆಲೆಯಲ್ಲಿ ಕಂಬಳ ಕೋಣಗಳ ಯಜಮಾನರುಗಳ ಸಭೆಯನ್ನು ಕರೆಯಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸೆ. 30ರಂದು ಸಂಜೆ 3 ಗಂಟೆಗೆ ಮಂಗಳೂರು ಹೊಟೇಲ್ ವುಡ್’ಲ್ಯಾಂಡಿನಲ್ಲಿ ಕೋಣಗಳ ಯಜಮಾನರುಗಳ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವಂತೆ ತಿಳಿಸಲಾಗಿದೆ.

ನವಂಬರಿನಲ್ಲಿ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕಂಬಳ ಕೋಣಗಳ ಯಜಮಾನರುಗಳ ಸಭೆ ಕರೆದಿದ್ದು, ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಲು ಅವಕಾಶ ನೀಡಲಾಗಿದೆ.  ಮಾಹಿತಿಗೆ ರಾಜೀವ್ ಶೆಟ್ಟಿ ಎತ್ತೂರು 8861949607, ನಿರಂಜನ್ ರೈ ಮಠಂತಬೆಟ್ಟು 9972772505 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವಿನ ರಕ್ಷಣೆ

Posted by Vidyamaana on 2023-09-26 21:54:16 |

Share: | | | | |


ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವಿನ ರಕ್ಷಣೆ

ಪುತ್ತೂರು: ಇಲ್ಲಿನ ಬಪ್ಪಳಿಗೆ ಎಂಬಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದನನ್ನ ಹಿಡಿದು ರಕ್ಷಣೆ ಮಾಡಲಾಗಿದೆ. ಬಪ್ಪಳಿಗೆ ಪರಿಸರದ ಜನನಿಬಿಡ ಪ್ರದೇಶ ರಸ್ತೆಯಲ್ಲಿ ಅಡ್ಡಲಾಗಿದ್ದ ಹೆಬ್ಬಾವನ್ನ ಕಂಡು ಯುವಕನೋರ್ವ ಬೆಚ್ಚಿ ಬಿದ್ದಿದ್ದಾನೆ.  ಬಳಿಕ ಸ್ನೇಕ್ ರಾಜೇಶ್ ನೂಜಿ ಅವರನ್ನ ಕರೆದು ಹೆಬ್ಬಾವನ್ನ ಹಿಡಿದು ರಕ್ಷಣೆ ಮಾಡಿ ಅರಣ್ಯವಲಯಕ್ಕೆ ಬಿಡಲಾಗಿದೆ.

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಯ್ಯಪ್ಪ ಸನ್ನಿದಿಯಲ್ಲಿ ಅಯ್ಯಪ್ಪ ದೀಪೋತ್ಸವ : ಆಮಂತ್ರಣ ಪತ್ರ ಬಿಡುಗಡೆ

Posted by Vidyamaana on 2023-12-21 11:15:59 |

Share: | | | | |


ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಯ್ಯಪ್ಪ ಸನ್ನಿದಿಯಲ್ಲಿ ಅಯ್ಯಪ್ಪ ದೀಪೋತ್ಸವ : ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ಡಿ.27 ರಂದು ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಡಿ.20 ರಂದು ನಡೆಯಿತು.ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯುವ ಅಯ್ಯಪ್ಪ ದೀಪೋತ್ಸವ ಆಮಂತ್ರಣ ಪತ್ರವನ್ನು ಶ್ರೀ ಮಹಾಲಿಂಗೇಶ್ವರ ದೇವರ ಸತ್ಯ ಧರ್ಮ ನಡೆಯಲ್ಲಿಟ್ಟು ಪ್ರಾರ್ಥನೆ ಸಲ್ಲಿಸಿದ ಬಳಿಕ ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.



ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ರವೀಂದ್ರನಾಥ್ ರೈ ಬಳ್ಳಮಜಲು, ಡಾ. ಸುಧಾ ಎಸ್. ರಾವ್, ರಾಮದಾಸ್ ಗೌಡ, ಶೇಖರ್ ನಾರಾವಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಅಯ್ಯಪ್ಪ ಭಕ್ತವೃಂದ ದೇವಾನಂದ ಸಹಿತ ಹಲವರು ಉಪಸ್ಥಿತರಿದ್ದರು

ಕರ್ಮಲ ನಿವಾಸಿ ಅಟೋರಿಕ್ಷಾ ಚಾಲಕ ಪಾಜಪಲ್ಲ ಕರೀಮ್ ನಿಧನ

Posted by Vidyamaana on 2023-10-25 19:31:53 |

Share: | | | | |


ಕರ್ಮಲ ನಿವಾಸಿ ಅಟೋರಿಕ್ಷಾ ಚಾಲಕ ಪಾಜಪಲ್ಲ ಕರೀಮ್ ನಿಧನ

ಪುತ್ತೂರು: ಇಲ್ಲಿನ ಕರ್ಮಲ ನಿವಾಸಿಯಾಗಿದ್ದ ರಿಕ್ಷಾ ಚಾಲಕ ಕರೀಮ್ ಹೃದಯಾಘಾತದಿಂದ ಇಂದು (ಅ.25) ನಿಧರಾಗಿದ್ದಾರೆ.

ಇವರು, ಬನ್ನೂರು ಜಮಾಅತ್ ಗೆ ಒಳಪಟ್ಟ ಮೂಲತಃ ಬೆಳ್ಳಾರೆ ಸಮೀಪದ ಪಾಜಪಲ್ಲ ನಿವಾಸಿಯಾಗಿದ್ದು, ಪ್ರಸ್ತುತ ಬನ್ನೂರು ಸಮೀಪದ ಕರ್ಮಲದಲ್ಲಿ ವಾಸವಾಗಿರುವ ಪುತ್ರ ಜಮೀಲ್, ಪುತ್ರಿ ಹಾಗೂ ಸಹೋದರರನ್ನು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ತಮಿಳರ ಕ್ಷಮೆಯಾಚಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Posted by Vidyamaana on 2024-03-20 10:10:10 |

Share: | | | | |


  ತಮಿಳರ ಕ್ಷಮೆಯಾಚಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು : ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಹೋಗುತ್ತಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮಿಳರ ಕ್ಷಮೆಯಾಚಿಸಿದ್ದಾರೆ.ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಡುವೆ ವಾಕ್ಸಮರ ಭುಗಿಲೆದ್ದಿದೆ.ಸಿಎಂ ಸ್ಟಾಲಿನ್ ಕೇಂದ್ರ ಸಚಿವರ ಹೇಳಿಕೆಯನ್ನು ಖಂಡಿಸಿದರು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ತಮಿಳುನಾಡಿನಿಂದ ಜನರು ಬಂದು ರಾಜ್ಯದಲ್ಲಿ ಬಾಂಬ್ ಗಳನ್ನು ಇಡುತ್ತಾರೆ ಎಂದು ಆರೋಪಿಸಿದರು. ಬೆಂಗಳೂರಿನಲ್ಲಿ ಭಾನುವಾರ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಉದ್ಯಮಿಯೊಬ್ಬರನ್ನು ಥಳಿಸಿದ್ದನ್ನು ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಶೋಭಾ, ಕಾಂಗ್ರೆಸ್ ಸರ್ಕಾರವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ ಮತ್ತು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತಿದೆ ಎಂದು ಆರೋಪಿಸಿದರು.ತಮಿಳುನಾಡಿನ ಜನರು ಇಲ್ಲಿ ಬಾಂಬ್ ಗಳನ್ನು ಇಡುತ್ತಾರೆ, ದೆಹಲಿಯ ಜನರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಾರೆ ಮತ್ತು ಕೇರಳದ ಜನರು ಆಸಿಡ್ ದಾಳಿ ನಡೆಸುತ್ತಾರೆ. ಕಾಂಗ್ರೆಸ್ ನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಹಿಂದೂಗಳು ಬೆಲೆ ತೆರುತ್ತಿದ್ದಾರೆ ಎಂದು ಆರೋಪಿಸಿದರು.ಇದೀಗ ತಮ್ಮ ಹೇಳಿಗೆ ಶೋಭ ಕರಂದ್ಲಾಜೆ ಅವರು ಕ್ಷಮೆ ಕೋರಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಕಾರಣ. ತಮಿಳುನಾಡಿನ ಯಾರಿಗಾದರೂ ನನ್ನ ಹೃದಯದ ಆಳದಿಂದ ನಾನು ನಿಮ್ಮ ಕ್ಷಮೆ ಕೋರುತ್ತೇನೆ. ಇದಲ್ಲದೆ, ನಾನು ನನ್ನ ಹಿಂದಿನ ಹೇಳಿಕೆಗಳನ್ನು ವಾಪಸ್ ಪಡೆಯುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.


ನನ್ನ ತಮಿಳು ಸಹೋದರ ಸಹೋದರಿಯರಿಗೆ, ನನ್ನ ಮಾತುಗಳು ಬೆಳಕನ್ನು ಬೆಳಗಿಸುವ ಉದ್ದೇಶವನ್ನು ಹೊಂದಿದ್ದವು, ನೆರಳುಗಳನ್ನು ಬೀರಲು ಅಲ್ಲ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಆದರೂ ನನ್ನ ಹೇಳಿಕೆಗಳು ಕೆಲವರಿಗೆ ನೋವನ್ನುಂಟುಮಾಡಿರುವುದನ್ನು ನಾನು ನೋಡುತ್ತೇನೆ - ಮತ್ತು ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಚಿಕ್ಕಪುತ್ತೂರು ಶೇಖ್ ಅಬ್ದುಲ್ ಸತ್ತಾರ್ ನಿಧನ

Posted by Vidyamaana on 2024-06-24 18:06:25 |

Share: | | | | |


ಚಿಕ್ಕಪುತ್ತೂರು ಶೇಖ್ ಅಬ್ದುಲ್ ಸತ್ತಾರ್  ನಿಧನ

ಪುತ್ತೂರು :- ಇಲ್ಲಿನ ಚಿಕ್ಕಪುತ್ತೂರು ರೈಲ್ವೆ ನಿಲ್ದಾಣ  ನಿವಾಸಿ  ಚಿಕ್ಕಪುತ್ತೂರು ಹಸನ್ ಸಾಹೇಬ್ ರವರ ಪುತ್ರ ಕೂಲಿ ಕೆಲಸ ಜೊತೆಗೆ ಗೋಳಿಕಟ್ಟೆ ಮೊಹ್ಯಿಯ್ಯದ್ದೀನ್ ಜುಮಾ ಮಸೀದಿಯ ಖಬರ್ ತೋಡುವ ಕೆಲಸ ನಿರ್ವಹಿಸುತ್ತಿದ್ದ  ಶೇಖ್ ಅಬ್ದುಲ್ ಸತ್ತಾರ್ (40) 



Leave a Comment: