ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕ ಆರಂಭ: ಸಿಎಂ ಸಿದ್ದರಾಮಯ್ಯ

ಸುದ್ದಿಗಳು News

Posted by vidyamaana on 2024-07-01 19:16:06 |

Share: | | | | |


ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕ ಆರಂಭ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಬೆಂಗಳೂರು ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ‌ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.

ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಈ ಬಗ್ಗೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದರು

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅವರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್ ಅವರು ಪ್ರಧಾನ ಭಾಷಣದಲ್ಲಿ ಪತ್ರಿಕೋದ್ಯಮದ ಈ ಕ್ಷಣದ ಸ್ಥಿತಿಗತಿಯನ್ನು ವಿವರಿಸಿದರು.

 Share: | | | | |


ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆ ನೂತನ ಸಮಿತಿ ರಚನೆ

Posted by Vidyamaana on 2023-08-19 16:19:27 |

Share: | | | | |


ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆ ನೂತನ ಸಮಿತಿ ರಚನೆ

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆಯು ಆ 18 ರಂದು ಪುತ್ತೂರು ಲಯನ್ಸ್  ಸಭಾಂಗಣದಲ್ಲಿ ನಡೆಯಿತು.

ಕಳೆದ 2ವರ್ಷಗಳ ಪಕ್ಷದ ಕಾರ್ಯ ಚಟುವಟಿಕೆ ಗಳ ಬಗ್ಗೆ  ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿ  ಅಬ್ದುಲ್ ರಹಿಮಾನ್ ವರದಿ ಮಂಡಿಸಿದರು.

ಪಕ್ಷ ಬಲವರ್ಧನೆ ಬಗ್ಗೆ ಅಸೆಂಬ್ಲಿ ವಾರು ನಾಯಕರೊಡನೆ SDPI ದ.ಕ ಜಿಲ್ಲಾ ಅದ್ಯಕ್ಷ ರು ಗಳ ಅಬಿಪ್ರಾಯ ಗಳನ್ನು ವಿನಿಮಯ ಮಾಡಿ ಪಕ್ಷ ಬಲವರ್ಧನೆ ಗೆ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು  ನಾಯಕತ್ವದ ಬಗ್ಗೆ ತರಬೇತಿಯನ್ನು ನೀಡಿದರು

ಜಿಲ್ಲೆಯಾದ್ಯಂತರ ಪಕ್ಷದ ಮಧ್ಯಂತರ ಪ್ರತಿನಿಧಿ ಸಬೆಗಳಲ್ಲಿ ಪಕ್ಷದ ಪದಾದಿಕಾರಿಗಳಲ್ಲಿ ಕೆಲವೊಂದು ಬದಲಾವಣೆಗಳಯ ಮಾಡಲಾಯಿತು 

ಅದ್ಯಕ್ಷ ರಾಗಿ ಇಬ್ರಾಹಿಂ ಸಾಗರ್,ಪ್ರ.ಕಾರ್ಯದರ್ಶಿ ಯಾಗಿ ಅಬ್ದುಲ್ ರಹಿಮಾನ್ ಪುತ್ತೂರು ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಾಲ್ಮರ ರವರನ್ನು ಮುಂದುವರಿಸಲಾಯಿತು

ಮತ್ತು ಖಜಾಂಚಿ ಯಾಗಿ ವಿಶ್ವನಾಥ್ ಪುಣಚತ್ತಾರು,ಜತೆಕಾರ್ಯದರ್ಶಿಯಾಗಿ ಅಬ್ದುರ್ರಹಿಮಾನ್ (ಅದ್ದು) ಕೊಡಿಪ್ಪಾಡಿ,ಮತ್ತು ಮುಸ್ತಫ DB ಯವರು ಆಯ್ಕೆ ಯಾದರು

 ದ.ಕ ಜಿಲ್ಲಾ ಅದ್ಯಕ್ಷ ಅನ್ವರ್ ಸಾದಾತ್ ಬಜತ್ತೂರು,ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಮತ್ತು ದ‌ಕ ಜಿಲ್ಲಾ ಸದಸ್ಯರಾದ ಅಬೂಬಕ್ಕರ್ ಮದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕ್ಷೇತ್ರ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೆ.ಎ ಸಮಾರೋಪ ಬಾಷಣ ಗೈದರು ಕಾರ್ಯಕ್ರಮ ವನ್ನು ಅಬ್ದುಲ್ ಹಮೀದ್ ಸಾಲ್ಮರ ಸ್ವಾಗತಿಸಿ ಕಾರ್ಯದರ್ಶಿ ಗಳಾದ  ಅಬ್ದುಲ್ ರಹಮಾನ್ ಕೊಡಿಪ್ಪಾಡಿ ವಂದನಾರ್ಪನೆಗೈದರು

ಕೋಡಿಂಬಾಡಿ ಗ್ರಾಪಂ; ನೂತನ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ ಸಮಾರಂಭ

Posted by Vidyamaana on 2023-08-23 13:22:01 |

Share: | | | | |


ಕೋಡಿಂಬಾಡಿ ಗ್ರಾಪಂ; ನೂತನ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ ಸಮಾರಂಭ

ಪುತ್ತೂರು: ಕೋಡಿಂಬಾಡಿ ಗ್ರಾಪಂ ಆಡಳಿತ ಹಲವು ವರ್ಷಗಳ ಕಾಲ ಬಿಜೆಪಿ ಆಡಳಿತದ ತೆಕ್ಕೆಯಲ್ಲಿತ್ತು, ಜನತೆ ಬದಲಾವಣೆ ಬಯಸಿದ್ದರು ನಾವು ಬದಲಾವಣೆಯನ್ನು ಮಾಡಿದ್ದೇವೆ, ಗ್ರಾಮದ ಅಭಿವೃದ್ದಿಗಾಗಿ ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಆಡಳಿತದ ಪಂಚಾಯತ್ ಬಂದಿದೆ, ಉತ್ತಮ ಆಡಳಿತ ನಡೆಸುವ ಮೂಲಕ ನನ್ನ ಹುಟ್ಟೂರ ಗ್ರಾಪಂ ಕ್ಷೇತ್ರದ ಎಲ್ಲಾ ಗ್ರಾಪಂಗಳಿಗೂ ಮಾಡದರಿಯಾಗಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ತನ್ನ ಹುಟ್ಟೂರಿನ ಕೋಡಿಂಬಾಡಿ ಗ್ರಾಮಪಂಚಾಯತ್‌ನಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ನಾಲ್ಕು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ ಬಂದಿದೆ, ಸುಭದ್ರ ಮತ್ತು ಭೃಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಇತರೆ ಪಕ್ಷದ ಸದಸ್ಯರು ನಮ್ಮ ಜೊತೆ ಕೈ ಜೋಡಿಸಿದ್ದಾರೆ. ನಾವು ಯಾರಿಗೂ ಬಲವಂತ ಮಾಡಿಲ್ಲ, ಕಾಂಗ್ರೆಸ್‌ನ ತತ್ವ ಸಿದ್ದಾಂತವನ್ನು ಮೆಚ್ಚಿ ಬಿಜೆಪಿಯಲ್ಲಿದ್ದವರು ನಮ್ಮ ಜೊತೆ ಸೇರಿಕೊಳ್ಳುತ್ತಿರುವುದು ಉತ್ತಮ ವಿಚಾರವಾಗಿದೆ. ನನ್ನ ಹುಟ್ಟೂರ ಗ್ರಾಪಂ ನಲ್ಲಿ ಬಿಜೆಪಿ ಆಡಳಿತವಿತ್ತು ಅದನ್ನು ಬದಲಾವಣೆ ಮಾಡಲಾಗಿದೆ. ಗ್ರಾಪಂ ಸದಸ್ಯರು ಸೇರಿದಂತೆ ಅನೇಕ ಮಂದಿ ಇತರೆ ಪಕ್ಷದ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಂದಿ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ.


ನೂತನ ಆಡಳಿತ ಇತಿಹಾಸವನ್ನು ನಿರ್ಮಿಸಬೇಕು

ನೂತನವಾಗಿ ಅಧಿಕಾರಕ್ಕೆ ಬಂದ ಆಡಳಿತ ಇತಿಹಾಸವನ್ನು ನಿರ್ಮಿಸಬೇಕು. ಈ ಹಿಂದಿನ ಆಡಳಿತದಿಂದ ಬೇಸತ್ತ ಜನ ಬದಲಾವಣೆ ಬಯಸಿದ್ದರು ಈ ಕಾರಣಕ್ಕೆ ಹಿಂದಿನ ಮಾದರಿಯಲ್ಲಿ ಆಡಳಿತ ನಡೆಸಬಾರದು ಗ್ರಾಮದ ಪ್ರತೀಯೊಬ್ಬ ಪ್ರಜೆಗೂ ಪಂಚಾಯತ್ ಆಡಳಿತದ ಬಗ್ಗೆ ಉತ್ತಮ ಭಾವನೆ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. ಗ್ರಾಮದಲ್ಲಿ ಬಡವರಿಗೆ ಮನೆ ನಿರ್ಮಾಣಕ್ಕೆ ಸೈಟ್ ಮಾಡಿಕೊಡಬೇಕು. ಗ್ರಾಮದಲ್ಲಿ ಯಾರಿಗೂ ಮನೆ ಇಲ್ಲ, ಕುಡಿಯುವ ನೀರಿಲ್ಲ, ವಾಸಕ್ಕೆ ಮನೆ ಇಲ್ಲ ಎಂಬ ದೂರು ಬರಲೇಬಾರದು ಎಲ್ಲರಿಗೂ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಧಿಕಾರಗಳು ಹೇಳಿದ್ದನ್ನೇ ಕೇಳುವುದಲ್ಲ ಸರಕಾರದ ಸುತ್ತೋಲೆ ಯನ್ನು ನಾವು ಅಧ್ಯಯನ ನಡೆಸಬೇಕು, ಬಡವರಿಗೆ ನೆರವಾಗುವ ಯೋಜನೆಗಳನ್ನು ಗ್ರಾಪಂ ಜಾರಿಗೆ ತರಬೇಕು ಎಂದು ಹೇಳಿದರು. ಬಡವರ ಕೆಲಸವನ್ನು ಚಾಚೂ ತಪ್ಪದೆ ಮಾಡಬೇಕು, ಭೃಷ್ಟಾಚಾರ ಮುಕ್ತ ಆಡಳಿತ ನಡೆಸುವ ಮೂಲಕ ನಾವು ನೊಂದವರ ಕಣ್ಣೀರೊರೆಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.


ಡಿಜಿಟಲ್ ಪಂಚಾಯತ್ ಮಾಡುವ ಕನಸು ಇದೆ ಗ್ರಾಮಸ್ಥರ ಸಹಕಾರ ಬೇಕು: ಜಯಪ್ರಕಾಶ್ ಬದಿನಾರ್

ನೂತನವಾಗಿ ಅಧಿಕಾರ ಸ್ವೀಕರಿಸಿದ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ರವರು ಮಾತನಾಡಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಗ್ರಾಪಂ ಆಡಳಿತದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡಿಕೊಳ್ಳುತ್ತೇವೆ, ಪಂಚಾಯತ್‌ನ ಎಲ್ಲಾ ಸದಸ್ಯರನ್ನು ವಿಸ್ವಾಸಕ್ಕೆ ತೆಗೆದುಕೊಂಡು ನಾವು ಮುಂದಕ್ಕೆ ಕೆಲಸ ಮಾಡಲಿದ್ದೇವೆ. ಶಾಸಕರ ನಿರ್ದೇಶನದಂತೆ ಭೃಷ್ಟಾಚಾರ ರಹಿತ ಆಡಳಿತವನ್ನು ನೀಡಲಿದ್ದು ಗ್ರಾಪಂ ನ್ನು ಡಿಜಿಟಲ್ ಪಂಚಾಯತನ್ನಾಗಿ ಪರಿವರ್ತನೆ ಮಾಡುತ್ತೇವೆ ಎಲ್ಲದಕ್ಕೂ ಗ್ರಾಮಸ್ಥರ ಮತ್ತು ಗ್ರಾಪಂ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಗ್ರಾಮದಲ್ಲಿ ಮೂಲಬೂತ ಸೌಕರ್ಯಕ್ಕೆ ಮೊದಲ ಅಧ್ಯತೆಯನ್ನು ನೀಡಲಿದ್ದೇವೆ, ಕುಡಿಯುವ ನೀರು, ರಸ್ತೆ ಮತ್ತು ನಿವೇಶನ ರಹಿತರಿಗೆ ನಿವೇಶನವನ್ನು ನೀಡುವ ಯೋಜನೆ ನಮ್ಮ ಮುಂದೆ ಇದ್ದು ಇದಕ್ಕಾಗಿ ಶಾಸಕರ ನೆರವನ್ನು ನಾವು ಪಡೆಯಲಿದ್ದೇವೆ. ಅನೇಕ ವರ್ಷಗಳಿಂದ ಪೆಂಡಿಂಗ್ ಇರುವ ನಿವೇಶನ ಹಂಚಿಕೆಯನ್ನು ಈ ಬಾರಿ ಮಾಡಲಿದ್ದೇವೆರ, ಗ್ರಾಮದಲ್ಲಿ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಯೋಚನೆಯೂ ನಮ್ಮ ಮುಂದಿದ್ದು ಕೋಡಿಂಬಾಡಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲಿದ್ದೇವೆ ಎಂದು ಹೇಳಿದರು.


ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ; ಮಲ್ಲಿಕಾ ಅಶೋಕ್ ಪುಜಾರಿ

ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಮಾತನಾಡಿ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ, ಗ್ರಾಪಂ ನ ಎಲ್ಲಾ ಸದಸ್ಯರು, ಪಕ್ಷದ ಮುಖಂಡರು , ಶಾಸಕರ ಮಾರ್ಗದರ್ಶನದಂತೆ ಕೆಲಸವನ್ನು ಮಾಡಲಿದ್ದು ಪಂಚಾಯತ್‌ನಲ್ಲಿ ಬಾಕಿ ಇರುವ ಮತ್ತು ಆಗಬೇಕಾದ ಅಭಿವೃದ್ದಿ ಕೆಲಸಗಳನ್ನು ಎಲ್ಲರ ಸಹಕಾರದಿಂದ ಮಾಡಲಿದ್ದೇವೆ ಎಂದು ಹೇಳಿದರು. ಕಳೆದ ಹಲವು ವರ್ಷಗಳಿಂದ ಅನೇಕ ಕೆಲಸಗಳು ನೆನೆಗುದಿಗೆ ಬಿದ್ದಿದೆ ಅವುಗಳಿಗೆ ವೇಗವನ್ನು ನೀಡುವ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.


ಕೈವಶ ಮಾಡಿಕೊಂಡಿದ್ದೇವೆ: ಮುರಳೀಧರ್ ರೈ

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮುರಳೀದರ್ ರೈ ಮಠಂತಬೆಟ್ಟು ಮಾತನಾಡಿ ಬಿಜೆಪಿಯ ವಶದಲ್ಲಿದ್ದ ಕೋಡಿಂಬಡಿ ಗ್ರಾಪಂ ನ್ನು ಈ ಬಾರಿ ಕೈ ವಶ ಮಾಡಿಕೊಂಡಿದ್ದೇವೆ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ವ್ಯಾಪ್ತಿಯಲ್ಲಿ ಬಿಜೆಪಿ ತೆಕ್ಕೆಯಲ್ಲಿದ್ದ ನಾಲ್ಕು ಪಂಛಾಯತ್ ಕಾಂಗ್ರೆಸ್ ವಶ ಮಾಡಿಕೊಂಡಿದ್ದೇವೆ. ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆ ಮತ್ತು ಸುಭದ್ರ ಆಳಿತವನ್ನು ಮೆಚ್ಚಿ ನಮ್ಮ ಜೊತೆ ಗ್ರಾಪಂ ಸದಸ್ಯರುಗಳು ಕೈ ಜೋಡಿಸುತ್ತಿದ್ದಾರೆ, ಶಶಕರ ನೆರವಿನಿಂದ ನಾವು ನಾಲ್ಕು ಪಂಚಾಯತ್‌ಗಳಲ್ಲಿ ಅಧಿಕಾರ ಪಡೆದುಕೊಂಡಿದ್ದೇವೆ. ಉತ್ತಮ ಆಡಳಿತ ನೀಡುವ ಮೂಲಕ ಗ್ರಾಮದ ಬಡವರ ಸೇವೆಯೊಂದೇ ನಮ್ಮ ಉದ್ದೇಶವಾಗಿದೆ ವಿನಾ ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಕಾಂಗ್ರೆಸ್ ಪಂಚಾಯತ್ ಬರಬೇಕೆಂಬುದು ಗ್ರಾಮಸ್ಥರ ಆಶಯವಾಗಿತ್ತು ಅದರಂತೆ ನಾವು ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.


ಉತ್ತಮ ಆಡಳಿತ ನೀಡಲಿದ್ದೇವೆ: ಡಾ. ರಾಜಾರಾಂ ಕೆ ಬಿ

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿ ಅಧಿಕಾರಕ್ಕೆ ಬಂದ ನೂತನ ಅಧ್ಯಕ್ಷ ಉಪಾಧ್ಯಕ್ಷರು ಗ್ರಾಮದ ಜನತೆಗೆ ಉತ್ತಮ ಆಡಳಿತವನ್ನು ನೀಡಲಿದ್ದಾರೆ. ಶಸಕರ ತವರು ಗ್ರಾಮವಾದ ಕಾರಣ ಜನರ ನೋಟ ಕೋಡಿಂಬಾಡಿಯತ್ತ ಇರುತ್ತದೆ ಈ ಕಾರಣಕ್ಕೆ ನಮ್ಮ ಗ್ರಾಪಂ ಎಲ್ಲರಿಗೂ ಮಾದರಿಯಾಗಿ ಕೆಲಸವನ್ನು ಮಾಡಬೇಕಿದೆ. ಬಡವರ ಕೆಲಸಗಳು ಸುಸೂತ್ರವಾಗಿ ನಡೆಯಬೇಕು, ಗ್ರಾಮದ ಪ್ರತೀಯೊಬ್ಬ ಪ್ರಜೆಗೂ ಸಂತಸವನ್ನು ನೀಡುವ ಆಡಳಿತ ನಮ್ಮದಾಗಬೇಕು ಎಂಬ ಭಾವನೆ ಪ್ರತೀಯೊಬ್ಬ ಗ್ರಾಪಂ ಸದಸ್ಯರಲ್ಲಿ ಇರಬೇಕು, ಜನರ ಸೇವೆಯನ್ನೇ ಗುರಿಯಗಿಟ್ಟು ಎಲ್ಲರೂ ಒಟ್ಟಾಗಿ ಪಕ್ಷ ಬೇದವಿಲ್ಲದೆ ಕೆಲಸ ಮಾಡಿದರೆ ಗ್ರಾಪಂ ಆಡಳಿತ ಉತ್ತಮವಾಗಿರಲು ಸಾಧ್ಯ ಎಂದು ಹೇಳಿದರು.

ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗ್ರಾಪಂ ಪಿಡಿಒ ರೀಹಿತ್, ಗ್ರಾಪಂ ಸದಸ್ಯರುಗಳಾದ ಜಗನ್ನಾಥ ಶೆಟ್ಟಿ ನಡುಮನೆ,  ಪೂರ್ಣಿಮಾ ಯತೀಶ್ ಶೆಟ್ಟಿ , ಗೀತಾ ಉಪಸ್ಥಿತರಿದ್ದರು. ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್ ಕಾಂಗ್ರೆಸ್ ಮುಖಂಡರುಗಳಾದ ಕ್ಲೆಮಿನ್ ಮಸ್ಕರೇನಸ್, ಪ್ರವೀಣ್ ಚಂದ್ರ ಆಳ್ವ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಲ್ಲಾಸ್ ಕೋಟ್ಯಾನ್, ರಾಜಶೇಖರ ಜೈನ್, ಬನ್ನೂರು ಸೊಸೈಟಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್, ಜಾನ್ ಕೆನೋಟ್, ಕೇಶವ ಭಂಡಾರಿ, ಸೀತಾರಾಮ ಶೆಟ್ಟಿ, ಶಿವಪ್ರಸಾದ್, ಉದ್ಯಮಿ ಸುದೇಶ್ ಶೆಟ್ಟಿ ಶಾಂತಿನಗರ, ಯೋಗೀಶ್ ಸಾಮಾನಿ, ಪ್ರೇಮಲತಾ, ವಿನುತಾ, ರೇಣುಖಾ, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಮುಖಂಡರಾದ ನಝೀತ್ ಮಠ, ಅಬ್ದುಲ್ ರಹಿಮಾನ್ ಯೂನಿಕ್, , ಡಿಸಿಸಿ ಸದಸ್ಯೆ ಅಸ್ಮಾ ಗಟ್ಟಮನೆ, ವಿಜಯಲಕ್ಷ್ಮಿ, ಸುಬ್ಬಣ್ಣ ಶೆಟ್ಟಿ, ಪದ್ಮನಾಭ ಶೆಟ್ಟಿ, ಪ್ರಭಾಕರ ಸಾಮಾನಿ, ಸಿಲ್ವೆಸ್ಟರ್, ಪ್ರಕಾಶ್ ಗೌಡ ನೆಕ್ಕಿಲಾಡಿ, ಆಶಾ ಕಾರ್ಯಕರ್ತೆಯವರು, ಅಂಗನವಾಡಿ ಕಾರ್ಯಕತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.

ವಲಯಾಧ್ಯಕ್ಷರಾದ ಮೋನಪ್ಪ ಗೌಡ ಸ್ವಾಗತಿಸಿದರು.ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಉಪಾಧ್ಯಕ್ಷರ ಪರಿಚಯ

ನೂತನವಾಗಿ ಅದಿಕಾರ ಸ್ವೀಕರಿಸಿದ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್‌ರವರು ಪುತ್ತೂರು ವಿಧಾನಸಭಾ ಕ್ಷೇತ್ರ ಇಂಟಕ್ ಅಧ್ಯಕ್ಷರಾಗಿ, ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷರಾಗಿ, ಕೋಡಿಂಬಾಡಿ ಸಾರ್ವಜನಿಕ ಗಣೇಶೋತ್ಸವ ಉಪಾಧ್ಯಕ್ಷರಾಗಿ ಕೋಡಿಂಬಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾಗಿ, ಕಾಸರಗೋಡು ಚಿಪ್ಪಾರು ಕೋಟಿಚೆನ್ನಯ ಗರಡಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

ಶಾಸಕ ಸಮ್ಮುಖದಲ್ಲೇ ಅಧಿಕಾರ ಸ್ವೀಕಾರ

ಶಸಕರಾದ ಅಶೋಕ್ ರೈಯವರನ್ನು ಕೊಠಡಿಗೆ ಕರೆಸಿಕೊಂಡ ನೂತನ ಅಧ್ಯಕ್ಷ ಉಪಾಧ್ಯಕ್ಷರು ಶಾಸಕರ ಸಮ್ಮುಖದಲ್ಲೇ ಅಧಿಕಾರ ಸ್ವೀಕಾರ ಮಾಡಿದರು. ಶಾಸಕರು ನೂತನ ಸಾರಥಿಗಳಿಗೆ ಹಾರಾರ್ಪಣೆ ಮಾಡಿ ಗೌರವಿಸಿದರು. ಗ್ರಾಪಂ ಸಿಬಂದಿಗಳು ಮತ್ತು ನೂತನ ಆಡಳಿತ ಸಮಿತಿ ಪರವಾಗಿ ಶಾಕರನ್ನು ಶಾಲು ಹಾಕಿ ಪೇಟ ತೊಡಿಸಿ ಸನ್ಮಾನಿಸಿದರು.


ಪಟಾಕಿ ಸಿಡಿಸಿ ಸಂಭ್ರಮ

ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮವನ್ನು ವ್ಯ್ಕತಪಡಿಸಿದರು. ಸುಮಾರು ೧೦ ವರ್ಷಗಳ ಬಳಿಕ ಕೋಡಿಂಬಾಡಿ ಗ್ರಾಪಂ ನಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೆ ಬಂದಿದ್ದು ಕಾರ್ಯಕರ್ತರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಯಾರಿಗೂ ಮಣಿಯಬೇಡಿ: ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ : ಬಿಜೆಪಿ ಹೈಕಮಾಂಡ್‌ ಖಡಕ್‌ ಸೂಚನೆ

Posted by Vidyamaana on 2023-04-16 03:51:45 |

Share: | | | | |


ಯಾರಿಗೂ ಮಣಿಯಬೇಡಿ: ನಿರ್ಧಾರವನ್ನು ಯಾವುದೇ ಕಾರಣಕ್ಕೂ  ಬದಲಾಯಿಸುವುದಕ್ಕೆ ಸಾಧ್ಯವಿಲ್ಲ : ಬಿಜೆಪಿ ಹೈಕಮಾಂಡ್‌ ಖಡಕ್‌ ಸೂಚನೆ

ಬೆಂಗಳೂರು : ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಸೃಷ್ಟಿಯಾಗಿರುವ ಬಂಡಾಯವನ್ನು ಸಾಧ್ಯವಾದಷ್ಟು ಶಮನ ಮಾಡಿ. ಆದರೆ ಯಾರ ಹಠಕ್ಕೂ ಮಣಿಯಬೇಡಿ ಎಂದು ಬಿಜೆಪಿ ಹೈಕಮಾಂಡ್‌ ರಾಜ್ಯ ನಾಯಕರಿಗೆ ಖಡಕ್‌ ಸೂಚನೆ ನೀಡಿದೆ.ಟಿಕೆಟ್‌ ವಂಚಿತರ ಪಕ್ಷ ತ್ಯಾಗ ಹಾಗೂ ಬಹಿರಂಗ ಮಾತುಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಹೈಕಮಾಂಡ್‌ ಭಿನ್ನಮತ ಶಮನಕ್ಕಾಗಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅವರನ್ನು ನಿಯೋಜಿಸಿದೆ. ಅದರ ಜತೆಗೆ ಸಚಿವ ಪ್ರಹ್ಲಾದ್‌ ಜೋಷಿ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಮಾತುಕತೆ ನಡೆಸುವಂತೆ ಸೂಚಿಸಿದೆ. ಆದರೆ ಹೈಕಮಾಂಡ್‌ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬೆದರಿಕೆಗೆ ಮಣಿಯಬೇಡಿ. ಪರಿಣಾಮವನ್ನು ಎದುರಿಸುವ ಶಕ್ತಿ ಪಕ್ಷಕ್ಕೆ ಇದೆ ಎಂದು ಸಂದೇಶ ರವಾನಿಸಿದ್ದಾರೆ.

ಪಕ್ಷದಲ್ಲಿ ಬಂಡಾಯ ಹೆಚ್ಚುತ್ತಿದ್ದರೂ ಸಿಎಂ ಬೊಮ್ಮಾಯಿ ಟೆಂಪಲ್‌ರನ್‌ನಲ್ಲಿ ಬ್ಯುಸಿಯಾಗಿದ್ದು, ವರಿಷ್ಠರ ಕೋಪಕ್ಕೂ ಕಾರಣವಾಗಿದೆ. ಕಠಿಣ ಸಂದರ್ಭದಲ್ಲಿ ಜವಾಬ್ದಾರಿ ಹೊರುವುದಕ್ಕೆ ಹಿಂದೇಟು ಹಾಕಿದ ಬಗ್ಗೆ ಕೆಲ ರಾಜ್ಯ ನಾಯಕರು ಸಹಪ್ರಭಾರಿ ಮನ್ಸೂಖ್‌ ಮಾಂಡವೀಯ ಅವರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸುವಂತೆ ವರಿಷ್ಠರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರು ಶೆಟ್ಟರ್‌ ಜತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅದೇ ರೀತಿ ವಿಧಾನಸಭಾ ಟಿಕೆಟ್‌ ನೀಡುವಂತೆ ಸಂಸದ ಸಂಗಣ್ಣ ಕರಡಿ ಪಟ್ಟು ಹಿಡಿದಿದ್ದಾರೆ. ಕಳೆದ ಬಾರಿ ಅವರು ತಮ್ಮ ಪುತ್ರನಿಗೆ ಇದೇ ರೀತಿ ಹಠ ಮಾಡಿ ಟಿಕೆಟ್‌ ಪಡೆದಿದ್ದರು. ತಮಗೆ ಈ ಬಾರಿ ಅವಕಾಶ ನೀಡದೇ ಇದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಅವರ ಬೆದರಿಕೆಗೆ ಸೊಪ್ಪು ಹಾಕದಂತೆ ವರಿಷ್ಠರು ಸೂಚನೆ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನದ ಬಳಿಕ ಪುತ್ತೂರಿನ ಶಾಲೆ- ಕಾಲೇಜುಗಳಿಗೆ ರಜೆ

Posted by Vidyamaana on 2023-07-24 08:36:45 |

Share: | | | | |


ಸೋಮವಾರ ಮಧ್ಯಾಹ್ನದ ಬಳಿಕ ಪುತ್ತೂರಿನ ಶಾಲೆ- ಕಾಲೇಜುಗಳಿಗೆ ರಜೆ


ಪುತ್ತೂರು: ಭಾರೀ ಮಳೆ ಕಾರಣದಿಂದ ಪುತ್ತೂರು ತಾಲೂಕಿನ ಶಾಲಾ - ಕಾಲೇಜುಗಳಿಗೆ ಸೋಮವಾರ ಮಧ್ಯಾಹ್ನದ ಬಳಿಕ ರಜೆ ನೀಡಲಾಗಿದೆ.

ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. 

ನಾಳೆ ಅಂದರೆ ಮಂಗಳವಾರದ ಮಳೆ ಪರಿಸ್ಥಿತಿ ನೋಡಿ ನಿರ್ಧಾರ ಮಾಡುವಂತೆಯೂ ಶಾಸಕರು‌ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಪುರುಷರಕಟ್ಟೆ: ಪ್ರೇಮಕಥೆಯೊಂದರ ದುರಂತ ಅಂತ್ಯ

Posted by Vidyamaana on 2023-07-01 06:24:29 |

Share: | | | | |


ಪುರುಷರಕಟ್ಟೆ: ಪ್ರೇಮಕಥೆಯೊಂದರ ದುರಂತ ಅಂತ್ಯ

ಪುತ್ತೂರು : ಕೆಲ ವರುಷದ ಹಿಂದೆ ಗಂಡ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರುಷರಕಟ್ಟೆ ಇಂದಿರಾನಗರದಲ್ಲಿ ನಡೆದಿದ್ದು, ಪ್ರೇಮಕಥೆಯೊಂದರ ದುರಂತ ಅಂತ್ಯ ಕಂಡಿದೆ.


ಪುರುಷರಕಟ್ಟೆ ಇಂದಿರಾನಗರ ದಿ.ಪ್ರವೀಣ್ ಎಂಬವರ ಪತ್ನಿ ಕಾವ್ಯ (38) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. 20 ವರ್ಷಗಳ ಹಿಂದೆ ನೆರೆಮನೆಯ‌ ಪ್ರವೀಣ್ ಅವರನ್ನು ಅಂತರ್ ಜಾತಿಯ ವಿವಾಹವಾಗಿದ್ದರು. 7 ವರ್ಷಗಳ ಹಿಂದೆ ಪತಿ‌ ಪ್ರವೀಣ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅದೇ ಸ್ಥಳದಲ್ಲಿ ಇದೀಗ ಕಾವ್ಯಾ ಅವರು ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಜು.1ರಂದು ಕಾವ್ಯಾ ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಜೂ.30 ರಂದು ಕಾವ್ಯ ಅವರ ಪುತ್ರ ಪ್ರತೀಕ್ ಎಂಬವರು ಬೆದ್ರಾಳ ಸಮೀಪ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಅವರ ತಾಯಿ ಕಾವ್ಯ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಯಲ್ಲಿ ಮಗ, ತಬ್ಬಲಿಯಾದಳು ಮಗಳು:

ಪತಿ ಪ್ರವೀಣ್ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ, ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೆ ಏರಿಸಿಕೊಂಡ ಕಾವ್ಯಾ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರು. ಅತ್ತೆಯ ಮನೆಯಲ್ಲಿದ್ದುಕೊಂಡೇ ಮಕ್ಕಳನ್ನು ಸಾಕಿ ಸಲಹಿದರು. ಅತ್ತೆ, ಮೈದುನ, ಪುತ್ರ, ಪುತ್ರಿಯ ಜೊತೆಗೆ ಹೊಂದಿಕೊಂಡು ಅನ್ಯೋನ್ಯವಾಗಿದ್ದ ಕುಟುಂಬಕ್ಕೆ ಬರಸಿಡಿಲಂತೆ ಎರಗಿದ್ದು, ಕಾವ್ಯಾ ಅವರ ಮಾನಸಿಕ ಖಿನ್ನತೆ. ಕಳೆದ ಕೆಲ ತಿಂಗಳುಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಕಾವ್ಯಾ, ಕೊನೆಗೂ ಖಿನ್ನತೆಯಿಂದ ಹೊರಬರಲಾಗದೇ ಹೊರಟುಬಿಟ್ಟರು. ಅಪಘಾತಕ್ಕೀಡಾಗಿ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮನೆಯಲ್ಲಿ ಮಗಳು ತಬ್ಬಲಿಯಂತಾದಳು.

ರಾಜ್ಯಾದ್ಯಂತ ರಂಜಾನ್ ಆಚರಣೆ ; ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

Posted by Vidyamaana on 2024-04-11 15:31:58 |

Share: | | | | |


ರಾಜ್ಯಾದ್ಯಂತ ರಂಜಾನ್ ಆಚರಣೆ ; ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯಾದ್ಯಂತ ಮುಸ್ಲಿಂ ಬಾಂಧವರು ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದು, ಮುಸ್ಲಿಂ ಬಾಂಧವರಿಗೆ ಸಿಎಂ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.



Leave a Comment: