ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಸುದ್ದಿಗಳು News

Posted by vidyamaana on 2024-07-03 07:52:29 |

Share: | | | | |


ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಬಂಧಿತ ಯುವಕ.ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಮಗು ಜನನವಾಗಿದೆ. ಮಗುವಿನ ಅಳು ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ. ತಕ್ಷಣವೇ ಸಮೀಪದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಪನ್ಯಾಸಕರು ಬಾಲಕಿಯ ಪೋಷಕರಿಗೆ ವಿಚಾರ ಮುಟ್ಟಿಸಿದ್ದು, ಅವರೂ ಆಸ್ಪತ್ರೆಗೆ ಬಂದಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 Share: | | | | |


ಜೂನ್ 8ರಿಂದ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿಯ ಸಹಿತ ಭಾರೀ ಮಳೆಯ ಮುನ್ನೆಚ್ಚರಿಕೆ

Posted by Vidyamaana on 2024-06-08 06:54:08 |

Share: | | | | |


ಜೂನ್ 8ರಿಂದ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿಯ ಸಹಿತ ಭಾರೀ ಮಳೆಯ ಮುನ್ನೆಚ್ಚರಿಕೆ

ಮಂಗಳೂರು, ಜೂನ್ 8: ಕರಾವಳಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಜೂನ್ 8 ಮತ್ತು 9ರಂದು ಆರೆಂಜ್ ಅಲರ್ಟ್ ಘೋಷಿಸಿದೆ.

ಹೊಸ ಡ್ರೆಸ್ ಧರಿಸಲು ಸಂಸತ್ತಿನ ಭದ್ರತಾ ಸಿಬ್ಬಂದಿಗಳು ನಕಾರ ಕಾರಣವೇನು ಗೊತ್ತಾ

Posted by Vidyamaana on 2023-09-21 09:49:36 |

Share: | | | | |


ಹೊಸ ಡ್ರೆಸ್ ಧರಿಸಲು ಸಂಸತ್ತಿನ ಭದ್ರತಾ ಸಿಬ್ಬಂದಿಗಳು ನಕಾರ ಕಾರಣವೇನು ಗೊತ್ತಾ

ನವದೆಹಲಿ:ಹೊಸ ಸಂಸತ್ತಿನ ಕಟ್ಟಡಕ್ಕಾಗಿ ಸರ್ಕಾರ ತಂದ ಹೊಸ ಬಟ್ಟೆಗಳನ್ನು ಸಂಸತ್ತಿನ ಭದ್ರತಾ ವಿಭಾಗವು ಇನ್ನು ಮುಂದೆ ಧರಿಸುವುದಿಲ್ಲ, ಹಲವಾರು ಭದ್ರತಾ ಸಿಬ್ಬಂದಿಗಳು ಬಟ್ಟೆಗಳ ವಸ್ತುವು ಸಿಂಥೆಟಿಕ್ ಮತ್ತು ಶಾಖವನ್ನು ಉಂಟುಮಾಡುತ್ತದೆ ಎಂದು ದೂರಿದರು.ಬುಧವಾರ ಬೆಳಿಗ್ಗೆ ತುರ್ತು ಸಭೆಯ ನಂತರ, ಹಳೆಯ ನೇವಿ ಬ್ಲೂ ಸಫಾರಿ ಸೂಟ್‌ಗಳನ್ನು ಧರಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ವಿನ್ಯಾಸಗಳೊಂದಿಗೆ ಟೇಬಲ್ ಆಫೀಸ್, ನೋಟಿಸ್ ಆಫೀಸ್ ಮತ್ತು ಪಾರ್ಲಿಮೆಂಟರಿ ರಿಪೋರ್ಟಿಂಗ್ ವಿಭಾಗಗಳಲ್ಲಿನ ಸಿಬ್ಬಂದಿ ಸದಸ್ಯರು ಮತ್ತು ಭದ್ರತಾ ಸಿಬ್ಬಂದಿಯ ಬಟ್ಟೆಗಳನ್ನು ಸರ್ಕಾರ ಬದಲಾಯಿಸಿದೆ. ಟೇಬಲ್, ನೋಟಿಸ್ ಮತ್ತು ಸಂಸದೀಯ ವರದಿ ವಿಭಾಗಗಳ ಅಧಿಕಾರಿಗಳ ಶರ್ಟ್‌ಗಳ ಮೇಲೆ ಕಮಲದ ಚಿತ್ರಗಳು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿವೆ.


ಭದ್ರತಾ ಸಿಬ್ಬಂದಿಯ ಸದಸ್ಯರಿಗೆ ಅವರು ಧರಿಸಿದ್ದ ನೇವಿ ಬ್ಲೂ ಸಫಾರಿ ಸೂಟ್‌ಗಳ ಬದಲಿಗೆ ಮಿಲಿಟರಿ ಶೈಲಿಯ ಮರೆಮಾಚುವ ಉಡುಪುಗಳನ್ನು ನೀಡಲಾಯಿತು. ಆದಾಗ್ಯೂ, ಹಲವಾರು ಸಿಬ್ಬಂದಿಗಳಿಂದ ದೂರುಗಳ ನಂತರ, ಮುಂದಿನ ಸೂಚನೆಯವರೆಗೆ ಸಫಾರಿ ಸೂಟ್‌ಗಳಿಗೆ ಹಿಂತಿರುಗಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.


ಸೆಕ್ರೆಟರಿಯಟ್ ನೌಕರರು, ಮೊದಲು ಬಂಧಗಳಧರಿಸುತ್ತಾರೆ, ಈಗ ಮೆಜೆಂಟಾ ಬಣ್ಣದ ನೆಹರೂ ಜಾಕೆಟ್‌ಗಳು, ಕಮಲದ ಮೋಟಿಫ್‌ಗಳ ಕೆನೆ ಬಣ್ಣದ ಶರ್ಟ್‌ಗಳು ಮತ್ತು ಖಾಕಿ ಪ್ಯಾಂಟ್‌ಗಳನ್ನು ನೀಡಲಾಗುತ್ತದೆ. ಸದನದ ಮಹಡಿಯಲ್ಲಿದ್ದ ಮಾರ್ಷಲ್‌ಗಳಿಗೆ ಮಣಿಪುರಿ ಪೇಟಗಳನ್ನು ನೀಡಲಾಯಿತು.


ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕವೂ ಸಮವಸ್ತ್ರ ಬದಲಾವಣೆ ಬಗ್ಗೆ ಲೋಕಸಭೆಯ ಕೆಲ ಸದಸ್ಯರು ದೂರಿದರು ಎಂದು ಮೂಲಗಳು ತಿಳಿಸಿವೆ. "ಲೋಕಸಭೆಯ ಹಲವಾರು ಸದಸ್ಯರು ತಮ್ಮ ಆಸನ ವ್ಯವಸ್ಥೆಗಳ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದಾರೆ, ಏಕೆಂದರೆ ಕೆಲವರು ಮುಂಭಾಗಕ್ಕೆ ತೆರಳಿದರು ಮತ್ತು ಅನೇಕರು ಹಿಂದೆ ಸರಿಯಬೇಕಾಯಿತು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಶುಕ್ರವಾರ ಮುಕ್ತಾಯಗೊಳ್ಳಲಿರುವ ಐದು ದಿನಗಳ ಅಧಿವೇಶನವು ಮಂಗಳವಾರ ಹೊಸ ಕಟ್ಟಡಕ್ಕೆ ಪರಿವರ್ತನೆಯನ್ನು ಕಂಡಿದೆ. ಕೆಲವು ಕಾಮಗಾರಿಗಳು ಇನ್ನೂ ಹಳೆಯ ಕಟ್ಟಡದ ಹಿನ್ನಲೆಯಲ್ಲಿ ಬಾಕಿ ಇವೆ ಎಂದು ಸಚಿವರೊಬ್ಬರ ಸಿಬ್ಬಂದಿ ತಿಳಿಸಿದರು

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

Posted by Vidyamaana on 2024-04-21 15:46:43 |

Share: | | | | |


ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

ನವದೆಹಲಿ: ಗುಜರಾತ್‌ನ ಗಾಂಧಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ. ಈ ನಡುವೆ ಅವರ ಈ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 36 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

ಇದೇ ವೇಳೆ ಅವರು ತಮ್ಮ ಬಳಿಯಲ್ಲಿ ಯಾವುದೇ ಕಾರಿಲ್ಲ ಎಂದು ಹೇಳಿರುವ ಶಾ, ಅವರ ಪತ್ನಿ ಬಳಿ ಇದೆ 31 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. 

ಅಫಿಡವಿಟ್ ಪ್ರಕಾರ, ಶಾ ಮತ್ತು ಅವರ ಪತ್ನಿ ಒಟ್ಟು 65.67 ಕೋಟಿ ರೂ. ಗಮನಾರ್ಹವಾಗಿ, ಇದು 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ವರದಿಯಾದ 30.49 ಕೋಟಿ ರೂ.ಗಿಂತ ಗಮನಾರ್ಹ ಹೆಚ್ಚಳವನ್ನು ಸೂಚಿಸುತ್ತದೆ, ಕಳೆದ ಐದು ವರ್ಷಗಳಲ್ಲಿ ಶೇಕಡಾ 100 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ತೋರಿಸುತ್ತದೆ.

ಸವಣೂರು ಶ್ರೀ ವಿಷ್ಣು ಮೂರ್ತಿ ದೇವಾಲಯದ ಜಾತ್ರೋತ್ಸವ- ಹಸಿರು ಹೊರೆ ಕಾಣಿಕೆ ಸಮರ್ಪಣೆ

Posted by Vidyamaana on 2024-02-06 18:07:40 |

Share: | | | | |


ಸವಣೂರು ಶ್ರೀ ವಿಷ್ಣು ಮೂರ್ತಿ ದೇವಾಲಯದ ಜಾತ್ರೋತ್ಸವ- ಹಸಿರು ಹೊರೆ ಕಾಣಿಕೆ ಸಮರ್ಪಣೆ

ಪುತ್ತೂರು: ಫೆ. ೭ ಮತ್ತು ೮ ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಸಮರ್ಪಣೆಯು ಫೆ  ೬ ರಂದು ಸವಣೂರು ಶ್ರೀ ಪದ್ಮಾವತೀ ದೇವಿಯ ಬಸದಿ ವಠಾರದಿಂದ ಹೊರಟು ಸವಣೂರು ಮುಖ್ಯ ರಸ್ತೆಯಾಗಿ ಪರಣೆ ಮಾರ್ಗವಾಗಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ತಲುಪಿತು.

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿಯವರು ತೆಂಗಿನಕಾಯಿ ಒಡೆಯುವ ಮೂಲಕ ಹಸಿರುಹೊರೆ ಕಾಣಿಕೆ ಸಮರ್ಪಣೆಗೆ ಚಾಲನೆಗೈದರು. ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಅರ್ಚಕ ನಾರಾಯಣ ಬಡೆಕಿಲ್ಲಾಯರವರು ದೇವಾಲಯದ ವಠಾರದಲ್ಲಿ ಹಸಿರುಹೊರೆ ಕಾಣಿಕೆಗೆ ಆರತಿ  ಬೆಳಗಿ, ಸ್ವಾಗತಿಸಿದರು.  ಸವಣೂರಿನ ಹಿರಿಯ ಉದ್ಯಮಿ ಸವಣೂರು ಎನ್.ಸುಂದರ ರೈ, ಜಾತ್ರೋತ್ಸವ ಸಮಿತಿಯ ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಕಾರ್‍ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ್ ಸುಣ್ಣಾಜೆ, ನಿಕಟಪೂರ್ವಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಕಾರ್‍ಯದರ್ಶಿ ರಾಘವ ಗೌಡ ಸವಣೂರು, ಉಪಾಧ್ಯಕ್ಷ ಗಂಗಾಧರ್ ಸುಣ್ಣಾಜೆ, ಪುರಂದರ ಬಾರಿಕೆ, ಸತೀಶ್ ಬಲ್ಯಾಯ ಕನಡಕುಮೇರು, ನಾರಾಯಣ ಪೂಜಾರಿ ಕೆಯ್ಯೂರು,  ಜಯರಾಮ ರೈ ಮೂಡಂಬೈಲು ಕನಡಕುಮೇರು, ಜಯಪ್ಪ ಗೌಡ ಸವಣೂರು, ಭಾಸ್ಕರ ಗೌಡ ಅಡೀಲು, ರುಕ್ಮಯ್ಯ ಗೌಡ ಹೊಸವೊಕ್ಲು, ರಾಮಚಂದ್ರ ಕೊಡಂಕೀರಿ, ನಾರಾಯಣ ಪೂಜಾರಿ ಮಾಲೆತ್ತಾರು,  ಅಂಗಾರ ಸವಣೂರು, ಕಿರಣ್ ಕೋಡಿಬೈಲು, ವೆಂಕಪ್ಪ ಗೌಡ ಮಾಲೆತ್ತಾರು, ಪ್ರವೀಣ್ ಬಾರಿಕೆ ಸಹಿತ ನೂರಾರು ಮಂದಿ ಭಾಗವಹಿಸಿದರು. 

ಫೆ ೭-೮ ಜಾತ್ರೋತ್ಸವ 

ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಫೆ. ೭ ಮತ್ತು ೮ ರಂದು ಜರಗಲಿದೆ. ಫೆ ೭ ರಂದು ಬೆಳಿಗ್ಗೆ ತಂತ್ರಿಗಳ ಆಗಮನದ ಬಳಿಕ ವಿವಿಧ ವೈದಿಕ ಕಾರ್‍ಯಕ್ರಮಗಳು, ಮಧ್ಯಾಹ್ನನ ಪ್ರತಿಷ್ಠಾ ದಿನದ ಪೂಜೆಯ ಬಳಿಕ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರ ಸೇವಾರ್ಥ ಅನ್ನಸಂತರ್ಪಣೆ ನಡೆಯಲಿದೆ ಬಳಿಕ ರಾತ್ರಿ ರಂಗಪೂಜೆ , ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತಕಟ್ಟೆ ಪೂಜೆ ಸುಡುಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿಯ ಅನ್ನದಾನ ಸೇವಾಕರ್ತರಾಗಿ ಗ್ರಾಮಸ್ಥರು ಮತ್ತು ಪರವೂರದಾನಿಗಳು ಸಹಕರಿಸಲಿದ್ದಾರೆ. ಫೆ. ೮ ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮದ್ಯಾಹ್ನ ಅನ್ನಸಂತರ್ಪಣೆಯು ಸವಣೂರುಗುತ್ತು ಕುಟುಂಬಸ್ಥರ ಸೇವಾರ್ಥ ನಡೆಯಲಿದೆ. ರಾತ್ರಿ ೮ ರಿಂದ ಶ್ರೀ ಉಳ್ಳಾಲ್ತಿ ದೈವದ ನೇಮೋತ್ಸವ  ನಡೆದ ಬಳಿಕ ಅದೇ ದಿನ ಶ್ರೀಮತಿ ವಿಸ್ಮಿತಾ ಸಾಜನ್ ಹೆಗ್ಡೆರವರ ಸೇವಾರ್ಥ ಶ್ರೀ ಉಳ್ಳಾಲ್ತಿ ದೈವದ ಹರಿಕೆ ನೇಮೋತ್ಸವ ನಡೆಯಲಿದೆ. ರಾತ್ರಿಯ ಅನ್ನಸಂತರ್ಪಣೆಯು  ಶ್ರೀಮತಿ ಕವಿತಾ ವಿ.ಶೆಟ್ಟಿ ಮತ್ತು ಕು.ದೇಷ್ನಾ ಶೆಟ್ಟಿ ಬೆಂಗಳೂರುರವರ ಸೇವಾರ್ಥ ನಡೆಯಲಿದೆ  ಎಂದು ದೇವಾಲಯದ ಆಡಳಿತದಾರ ಸವಣೂರುಗುತ್ತು ಡಾ.ರತ್ನಾಕರ ಶೆಟ್ಟಿ, ಆಡಳಿತ ಸಮಿತಿಯ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಸೀತಾರಾಮ ರೈ, ಕಾರ್‍ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ ಹಾಗೂ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ್ ಸುಣ್ಣಾಜೆರವರು ತಿಳಿಸಿದ್ದಾರೆ.

ವಿಟ್ಲ : ಬಸ್-ಪಿಕಪ್‌ ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ

Posted by Vidyamaana on 2024-04-04 12:53:09 |

Share: | | | | |


ವಿಟ್ಲ : ಬಸ್-ಪಿಕಪ್‌ ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ

ವಿಟ್ಲ-ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ಬಸ್ಸಿಗೆ ಪಿಕಪ್ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡ ಘಟನೆ ನಡೆದಿದೆ.

ಕಾಞಂಗಾಡ್ ಸ್ನಾನಗೃಹದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

Posted by Vidyamaana on 2024-02-03 22:26:23 |

Share: | | | | |


ಕಾಞಂಗಾಡ್ ಸ್ನಾನಗೃಹದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

ಕಾಞಂಗಾಡ್ : ಸ್ನಾನ ಮಾಡಲು ತೆರಳಿದ್ದ ಮಹಿಳೆ ಸ್ನಾನಗೃಹದಲ್ಲೇ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕೇರಳದ ಕಾಞಂಗಾಡ್ ನಲ್ಲಿ ಸಂಭವಿಸಿದೆ.ಇಲ್ಲಿನ ಬಾವಾ ನಗರದ ನಿವಾಸಿ ಮಜೀದ್ ಮತ್ತು ಶಕೀಲಾ ದಂಪತಿಯ ಪುತ್ರಿ ಶುಹೈರಾ (36) ಮೃತ ದುರ್ದೈವಿಯಾಗಿದ್ದಾರೆ .ಸೇನಾ ಅಧಿಕಾರಿ ಕೋಝಿಕ್ಕೋಡ್ ಶರೀದ್ ಅವರ ಪತ್ನಿಯಾಗಿರುವ ಶುಹೈರಾ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಬಾತ್ ರೂಂ ಗೆ ಸ್ನಾನಕ್ಕೆಂದು ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.ಕೂಡಲೇ ಸ್ತಳಿಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಶುಹೈರಾ ಆದಾಗಲೇ ಇಹಲೋಕ ತ್ಯಜಿಸಿದ್ದರು ಎನ್ನಲಾಗಿದ್ದು. ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.



Leave a Comment: