ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆಯೇ ಹರಿದ ಚಿಕ್ಕಪ್ಪನ ಕಾರು; ಪುಟ್ಟ ಕಂದಮ್ಮ ದುರ್ಮರಣ

Posted by Vidyamaana on 2023-11-13 17:19:15 |

Share: | | | | |


ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆಯೇ ಹರಿದ ಚಿಕ್ಕಪ್ಪನ ಕಾರು; ಪುಟ್ಟ ಕಂದಮ್ಮ ದುರ್ಮರಣ

ಕಾಸರಗೋಡು: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆಯೇ ಚಿಕ್ಕಪ್ಪನ ಕಾರು ಹರಿದು ಪುಟ್ಟ ಕಂದಮ್ಮ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ಕಾಸರಗೋಡಿನ ಸೋಂಕಾಲ್ ಎಂಬಲ್ಲಿ ಈ ದುರಂತ ಸಂಭವಿಸಿದೆ. ಮನೆಯ ಅಂಗಳದಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿದ್ದರು.ದೊಡ್ದ ಮಗು ಸೈಕಲ್ ನ್ನು ಬದಿಗೆ ಇಡುತ್ತಿತ್ತು. ಈ ವೇಳೆ ಚಿಕ್ಕಪ್ಪನ ಕಾರು ಆಗಮಿಸಿದೆ. ಪುಟ್ಟ ಮಗು ಅಂಗಳದಲ್ಲಿ ಕಾರನ್ನು ನೋಡುತ್ತಾ ನಿಂತಿದೆ. ಕಾರು ನಿಲ್ಲಿಸುತ್ತಿದ್ದ ಚಿಕ್ಕಪ್ಪನಿಗೆ ಮಗು ನಿಂತಿದ್ದು ಕಾಣಿಸಿಲ್ಲ.


ಈ ವೇಳೆ ಕಾರಿನ ಮುಂದಿನ ಚಕ್ರಕ್ಕೆ ಸಿಲುಕಿ ಮಗು ಸಾವನ್ನಪ್ಪಿದೆ. ಮಗು ಕಾರಿನಡಿ ಸಿಲುಕುತ್ತಿದ್ದಂತೆ ದೊಡ್ಡ ಮಗು ಮಗುವನ್ನು ಎಳೆದು ಎತ್ತಿಕೊಂಡಿದೆ. ಆದರೆ ಅಷ್ಟರಲ್ಲೇ ಮಗು ಉಸಿರು ಚಲ್ಲಿದೆ.


ಮನೆಯ ಸಿಸಿ ಕ್ಯಾಮರಾದಲ್ಲಿ ಈ ಹೃದಯ ವಿದ್ರಾವಕ ದೃಶ್ಯ ಸೆರೆಯಾಗಿದೆ.

ಉಜಾಲ ಮೂಲಕ 4000 ಕೋಟಿ ರೂ.ಗಳ ಉಜ್ವಲ ಸಾಮ್ರಾಜ್ಯ ಕಟ್ಟಿದ ಕಥೆ ಇದು.!

Posted by Vidyamaana on 2023-10-25 07:20:53 |

Share: | | | | |


ಉಜಾಲ ಮೂಲಕ 4000 ಕೋಟಿ ರೂ.ಗಳ ಉಜ್ವಲ ಸಾಮ್ರಾಜ್ಯ ಕಟ್ಟಿದ ಕಥೆ ಇದು.!

     ಶೂನ್ಯದಿಂದ ಪ್ರಾರಂಭಿಸಿ ದೈತ್ಯಾಕಾರದ ಕನಸುಗಳನ್ನು ನಂಬಲಾಗದಂತೆ ನನಸಾಗಿಸಿದ ಓರ್ವ ವ್ಯಕ್ತಿಯೇ ಮೂತೇದತ್ ಪಂಜನ್ ರಾಮಚಂದ್ರನ್. ಇವರು 14,000 ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಬೆಳೆದು ನಿಂತ ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ.ಬಹುಶಃ ನಿಮಗೆ ಪಂಜನ್ ರಾಮಚಂದ್ರನ್ ಅಂದರೆ ಯಾರು ಎಂದು ತಿಳಿದಿರಲಿಕ್ಕಿಲ್ಲ.


ಆದರೆ ಬಿಳಿ ಬಣ್ಣದ ಉಡುಪುಗಳಲ್ಲಿ ನಿಷ್ಕಳಂಕ ಹೊಳಪು ಮತ್ತು ಬಿಳುಪನ್ನು ನೀಡುವ "ಉಜಾಲಾ ಬ್ಲೂ" ಅಂದರೆ ಥಟ್ಟನೆ ನೀಲಿ ಬಣ್ಣ ಪುಟ್ಟ ಬಾಟಲಿ ನಮ್ಮ ಕಣ್ಣಮುಂದೆ ಹಾದುಹೋಗುತ್ತದೆ. ಇದಲ್ಲದೇ ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ನ ಹಲವು ಉತ್ಪನ್ನಗಳು ಜನಪ್ರಿಯವಾಗಿದೆ. 

ಲಕ್ಷಾಂತರ ಯುವ ಉದ್ಯಮಿಗಳಿಗೆ ಉದಾಹರಣೆ

ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ಹುಟ್ಟು ಹಾಕಿದ ರಾಮಚಂದ್ರನ್ ಲಕ್ಷಾಂತರ ಯುವ ಉದ್ಯಮಿಗಳಿಗೆ ಉದಾಹರಣೆಯಾಗಿದ್ದಾರೆ. ಎಂ ಪಿ ರಾಮಚಂದ್ರನ್ ಅವರು ಕೇವಲ 5000 ರೂ ಸಾಲ ಪಡೆದು ವ್ಯವಹಾರ ಪ್ರಾರಂಭಿಸಿ, ತಮ್ಮ ಕಠಿಣ ಪರಿಶ್ರಮ ಮತ್ತು ತೀಕ್ಷ್ಣವಾದ ವ್ಯವಹಾರದ ಚಾತುರ್ಯದಿಂದ ಇಂದು ಬಹುಕೋಟಿ ಕಂಪನಿಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ಇಂದು ಉಜಾಲಾ ಲಿಕ್ವಿಡ್ ಕ್ಲೋತ್ ವೈಟ್‌ನರ್ ಮತ್ತು ಮ್ಯಾಕ್ಸೋ(Maxo) ಸೊಳ್ಳೆ ನಿವಾರಕ ಲಿಕ್ವಿಡ್, ಎಕ್ಸೋ, ಟಿ-ಶೈನ್ ಹೀಗೆ ಹತ್ತು ಹಲವು ಉತ್ಪನಗಳನ್ನು ಉತ್ಪದಿಸುತ್ತಿದ್ದು, ಅಂದು ತಮ್ಮ ಸ್ವಂತ ತಾತ್ಕಾಲಿಕ ಕಾರ್ಖಾನೆಯನ್ನು ಸ್ಥಾಪಿಸಲು ರಾಮಚಂದ್ರನ್ ಅವರು ತನ್ನ ಸಹೋದರನಿಂದ 5000 ರೂ ಸಾಲವನ್ನು ಪಡೆದು, ಇಂದು ಅದನ್ನು 13,583 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಕಂಪನಿಯನ್ನಾಗಿ ಪರಿವರ್ತಿಸಿದ್ದಾರೆ.


ಕೇರಳದವರಾದ ರಾಮಚಂದ್ರನ್ ಅವರು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಶಾಲಾ ಶಿಕ್ಷಣದ ಬಳಿಕ ತ್ರಿಶೂರ್‌ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿ ಪಡೆದುಕೊಂಡರು. ಮುಂದೆ ಓದಬೇಕೆಂಬ ಅತಿಯಾಸೆ ಇದ್ದರೂ ಆರ್ಥಿಕ ಸಮಸ್ಯೆಯಿಂದಾಗಿ ರಾಮಚಂದ್ರನ್ ಅವರು ಅಕೌಂಟೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.ಕೆಲ ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರೂ ಆ ಸಂಸ್ಥೆ ಸ್ಥಗಿತಗೊಂಡ ಕಾರಣ ಹೊಸ ಉದ್ಯೋಗವನ್ನು ಹುಡುಕುವ ಬದಲು ಹೊಸದಾಗಿರುವ ಮತ್ತು ಸ್ವಂತವಾಗಿರುವ ವ್ಯಾಪಾರ ಪ್ರಾರಂಭಿಸಬೇಕು ಅಂದುಕೊಂಡರು. ರಾಮಚಂದ್ರನ್ ಬಟ್ಟೆಗಾಗಿ ವೈಟ್ನರ್ ತಯಾರಿ ಮಾಡಲು ನಿರ್ಧರಿಸಿ ಇದಕ್ಕಾಗಿ ಅವರು ತಮ್ಮ ಅಡುಗೆಮನೆಯಲ್ಲಿ ಪ್ರಯೋಗವನ್ನು ಪ್ರಾರಂಭಿಸಿದರು, ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.


ಹೀಗಿರುವ ಒಂದು ದಿನ ರಾಮಚಂದ್ರನ್ ಅವರು ಕೆಮಿಕಲ್ ಇಂಡಸ್ಟ್ರಿ ಮ್ಯಾಗಜೀನ್ ಓದುತ್ತಿರುವಾಗ, ಅದರಲ್ಲಿ ಪರ್ಪಲ್ ಡೈ ಯಿಂದ ಜವಳಿ ತಯಾರಕರು ಸಾಧ್ಯವಾದಷ್ಟು ಬಿಳಿ ಮತ್ತು ಬ್ರೈಟ್ ಕಲರ್ ಪಡೆಯಬಹುದು ಎಂದು ಬರೆದಿತ್ತು. ಇದಾದ ನಂತರ, ರಾಮಚಂದ್ರನ್ ಒಂದು ವರ್ಷ ನೇರಳೆ ಬಣ್ಣಗಳ ಪ್ರಯೋಗವನ್ನು ಮುಂದುವರೆಸಿದರು.


ಜೀವನ ಬದಲಾಯಿಸಿದ ಉಜಾಲಾ


"ಉಜಾಲಾ" ಅವರ ಜೀವನವನ್ನು ಬದಲಾಯಿಸುವ ಈ ಕಥೆಯು 1983 ರಲ್ಲಿ ಪ್ರಾರಂಭವಾಯಿತು. ಅದೇ ವರ್ಷ ರಾಮಚಂದ್ರನ್ ಅವರು ಕೇರಳದ ತ್ರಿಶೂರ್‌ನಲ್ಲಿ ತಮ್ಮ ಕುಟುಂಬದ ಜಮೀನಿನ ಸ್ವಲ್ಪ ಭಾಗದಲ್ಲಿ ತಾತ್ಕಾಲಿಕ  ಕಾರ್ಖಾನೆಯೊಂದು ಸ್ಥಾಪಿಸಿದರು. ತಮ್ಮ ಕಂಪನಿಗೆ ಜ್ಯೋತಿ ಲ್ಯಾಬೋರೇಟರೀಸ್ ಎಂದು ತಮ್ಮ ಮಗಳು ಜ್ಯೋತಿಯ ಹೆಸರಿರಿಸಿದರು.


ಉಜಾಲಾ ನಿಜಕ್ಕೂ ನವೀನ ಪರಿಕಲ್ಪನೆಯಾಗಿ ಬಡವರಿಂದ ಸಿರಿವಂತರವರೆಗೆ ಇದು ಆಕರ್ಷಿಸಿತು. ಮೊದಲು 5 ಮಾರಾಟ ಮಹಿಳೆಯರ ಮೂಲಕ ಮನೆಯಿಂದ ಮನೆಗೆ ಮಾರಾಟ ಆರಂಭಿಸಿ ಉಜಾಲಾವನ್ನು ಹಲವು ಪ್ರಯತ್ನದ ಬಳಿಕ ಅಂಗಡಿಗಳಲ್ಲಿ ಮಾರಾಟಕ್ಕೆ ಸ್ವೀಕರಿಸಲಾಯಿತು ಮತ್ತು ವಾಣಿಜ್ಯಿಕವಾಗಿ ವಿಸ್ತರಿಸಲಾಯಿತು. ಉಳಿದ ಕಥೆ ಇತಿಹಾಸವಾಯಿತು!

ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ: ಫಲಿಸಿತು ಶತಕೋಟಿ ಭಾರತೀಯರ ಪ್ರಾರ್ಥನೆ ಸಿಹಿ ಹಂಚಿ ಸಂಭ್ರಮ

Posted by Vidyamaana on 2023-11-28 21:10:08 |

Share: | | | | |


ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ: ಫಲಿಸಿತು ಶತಕೋಟಿ ಭಾರತೀಯರ ಪ್ರಾರ್ಥನೆ ಸಿಹಿ ಹಂಚಿ ಸಂಭ್ರಮ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್​ಯಾರ್​ ಸುರಂಗದೊಳಗೆ ಸಿಲುಕಿ, ಕಳೆದ 17 ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಹೊಸ ಬದುಕಿಗಾಗಿ ಆಸೆಗಣ್ಣುಗಳಿಂದ ಎದುರು ನೋಡುತ್ತಿದ್ದ ಎಲ್ಲ 41 ಕಾರ್ಮಿಕರನ್ನು ಸುರಕ್ಷಿತವಾಗಿ ಸುರಂಗದಿಂದ ಇಂದು ಹೊರಕರೆತರಲಾಗಿದೆ.17 ದಿನಗಳ ನಿರಂತರ ಶ್ರಮ ಮತ್ತು ಅಸಂಖ್ಯಾತ ಜನಗಳ ಪ್ರಾರ್ಥನೆಗೆ ಫಲ ಸಿಕ್ಕಿದ್ದು, ಬಹುದೊಡ್ಡ ರಕ್ಷಣಾ ಕಾರ್ಯಾಚರಣೆ ದೊಡ್ಡ ಯಶಸ್ಸು ಸಾಧಿಸಿದೆ. ನಿಜಕ್ಕೂ ಇದೊಂದು ಬಿಗ್​ ಅಂಡ್​ ಸ್ವೀಟ್​ ನ್ಯೂಸ್​ ಎಂದೇ ಹೇಳಬಹುದಾಗಿದೆ.ಸುಮಾರು 50 ಮೀಟರ್​ಗೂ ಅಧಿಕ ದೂರದಲ್ಲಿ ಸುರಂಗದ ಒಳಗಡೆ ಸಿಲುಕಿದ್ದ ಎಲ್ಲ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಪೈಪ್​ ಮೂಲಕ ಗಾಲಿ ಸ್ಟ್ರೆಚರ್​ ಸಹಾಯದಿಂದ ರಕ್ಷಣಾ ತಂಡಗಳು ಹೊರಗೆಳೆದು ರಕ್ಷಣೆ ಮಾಡಿದವು. ಹೊರಗೆ ಬಂದರ ಕಾರ್ಮಿಕರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ಅಡಿಯಲ್ಲಿ ದೇಹ ಪರೀಕ್ಷೆ ಮಾಡಿ ತಕ್ಷಣ ಆಂಬ್ಯುಲೆನ್ಸ್​ಗಳ ಸಹಾಯದಿಂದ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎಲ್ಲ ಕಾರ್ಮಿಕರು ಆರೋಗ್ಯಯುತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪ್ರತೀ ಹಂತದಲ್ಲೂ ನಾಲ್ಕು ನಾಲ್ಕು ಕಾರ್ಮಿಕರನ್ನು ಹೊರಗೆ ಕರೆತರಲಾಯಿತು. ಕಾರ್ಮಿಕರ ರಕ್ಷಣೆಗೆ ಶತಕೋಟಿ ಭಾರತೀಯರು ಪ್ರಾರ್ಥಿಸಿದ್ದರು. ಎಲ್ಲರ ಪ್ರಾರ್ಥನೆ ಇಂದು ಫಲಿಸಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾರ್ಮಿಕರು ಹೊರಗೆ ಬರುತ್ತಿದ್ದಂತೆ ಸುತ್ತಲೂ ಜೈಕಾರಗಳು ಮೊಳಗಿದವು ಮತ್ತು ಸ್ಥಳದಲ್ಲಿ ನೆರೆದಿದ್ದ ಜನರು ಸಿಹಿ ಹಂಚಿ ಸಂಭ್ರಮಿಸಿದರು.ಸುರಂಗ ಮಾರ್ಗ ನಿರ್ಮಾಣದ ಉದ್ದೇಶವೇನು?

ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ.

ಪೊಲೀಸ್ ಠಾಣೆಗೆ ಪ್ರವೇಶಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದನೆ ಆರೋಪ : ಶಾಸಕ ಹರೀಶ್ ಪೂಂಜ ವಿರುದ್ಧ ಎಫ್.ಐ.ಆರ್

Posted by Vidyamaana on 2024-05-19 19:29:41 |

Share: | | | | |


ಪೊಲೀಸ್ ಠಾಣೆಗೆ ಪ್ರವೇಶಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದನೆ ಆರೋಪ : ಶಾಸಕ ಹರೀಶ್ ಪೂಂಜ ವಿರುದ್ಧ ಎಫ್.ಐ.ಆರ್

ಬೆಳ್ತಂಗಡಿ : ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಪ್ರವೇಶಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.


ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಎಂಬಲ್ಲಿ ನಡೆಯುತ್ತಿದ್ದ, ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಸದ್ರಿ ಗಣಿಗಾರಿಕೆಗಾಗಿ ಶೇಖರಿಸಲಾಗಿದ್ದ, ಅಪಾಯಕಾರಿ ಸ್ಪೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮೋದ್‌ ಉಜಿರೆ ಹಾಗೂ ಶಶಿರಾಜ್‌ ಶೆಟ್ಟಿ (35) ಎಂಬವರುಗಳ ವಿರುದ್ಧ, ಬೆಳ್ತಂಗಡಿ ಠಾಣೆಯಲ್ಲಿ ದಿನಾಂಕ 18.05.2024 ರಂದು ಅ.ಕ್ರ: 56/2024, ಕಲಂ: 9B(1)(b) Explosive act 1884 ಕಲಂ 5 The Explosives Substance Act-1908 ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪೈಕಿ ಶಶಿರಾಜ್‌ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ,

ಹಬ್ಬಗಳ ಹಿನ್ನಲೆ ಪುತ್ತೂರು ಠಾಣೆಯಲ್ಲಿ ಶಾಂತಿಸಭೆ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಿ- ಇನ್ಸ್ಪೆಕ್ಟರ್ ಸತೀಶ್‌ಕುಮಾರ್.

Posted by Vidyamaana on 2024-08-31 06:12:37 |

Share: | | | | |


ಹಬ್ಬಗಳ ಹಿನ್ನಲೆ ಪುತ್ತೂರು ಠಾಣೆಯಲ್ಲಿ ಶಾಂತಿಸಭೆ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಿ- ಇನ್ಸ್ಪೆಕ್ಟರ್ ಸತೀಶ್‌ಕುಮಾರ್.

ಪುತ್ತೂರು; ಪುತ್ತೂರಿನಲ್ಲಿ ಯಾವುದೇ ಧರ್ಮದ ಹಬ್ಬಗಳ ಸಂದರ್ಭದಲ್ಲಿಯೂ ಯಾವುದೇ ತೊಂದರೆ ಈ ತನಕ ಉಂಟಾಗಿಲ್ಲ. ಈ ಬಾರಿಯೂ ಅಂತಹ ಯಾವುದೇ ಕೆಟ್ಟ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಗೆ ಜನತೆಯ ಸಹಕಾರ ಬೇಕು ಎಂದು ಇನ್ಸ್ಪೆಕ್ಟರ್ ಸತೀಶ್‌ಕುಮಾರ್ ಹೇಳಿದರು.

ಗುರುವಾರ ಪುತ್ತೂರು ನಗರಠಾಣೆಯಲ್ಲಿ ಗಣೇಶೋತ್ಸವ ಹಾಗೂ ಈದ್‌ಮಿಲಾದ್ ಹಬ್ಬದ ಹಿನ್ನಲೆ ನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಹಬ್ಬಗಳ ಆಚರಣೆ ಮತ್ತು ಮೆರವಣಿಗೆ ಸಂದರ್ಭದಲ್ಲಿ ಡಿ.ಜೆಗೆ ಆವಕಾಶ ಇಲ್ಲ. ದೇವಾಲಯ, ಮಸೀದಿಗಳ ಮುಂಭಾಗದಲ್ಲಿ ಮೆರವಣಿಗೆ ಸಂದರ್ಭ ಯಾವುದೇ ಅನಗತ್ಯ ಘೋಷಣೆಗೆ ಅವಕಾಶ ಇಲ್ಲ. ಕಾರ್ಯಕ್ರಮಗಳನ್ನು ರಾತ್ರಿ ೧೦ ಗಂಟೆಯ ಒಳಗೆ ಮುಗಿಸಬೇಕು. ಸಮಯಪಾಲನೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಹಾಜರಿದ್ದ ವಿವಿಧ ಸಂಘಟನೆಗಳ ಮುಖಂಡರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದರು.


ಬೆಳ್ತಂಗಡಿ: ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ 9 ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು

Posted by Vidyamaana on 2023-04-28 11:35:40 |

Share: | | | | |


ಬೆಳ್ತಂಗಡಿ: ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ 9 ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ : ಇಲ್ಲಿನ ಬೆಳ್ತಂಗಡಿ ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ ತಾಲೂಕು ಪಂಚಾಯತ್ ನ ಪಕ್ಕದಲ್ಲಿರುವ ಸರಕಾರಿ ವಸತಿಗೃಹದಲ್ಲಿ ಬೆಳ್ತಂಗಡಿ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮಂಜಳಾ ಅವರ ತಂಗಿ ಭಾಗ್ಯಮ್ಮ ಅವರ ಮಗ ಶಿವಪ್ರಸಾದ್ (15) ವಸತಿಗೃಹದ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಚಿತ್ರದುರ್ಗ ಜಿಲ್ಲೆಯ ಹಿರುಯೂರು ತಾಲೂಕು ಹೊಸ ಎಲೆನಾಡು ಗ್ರಾಮದ ನಿವಾಸಿ ರಮೇಶ್ ಮತ್ತು ಭಾಗ್ಯಮ್ಮ ದಂಪತಿಗಳ ಮೂವರು ಮಕ್ಕಳಲ್ಲಿ ಎರಡನೇ ಮಗನಾದ ಶಿವಪ್ರಸಾದ್ (15) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಶಿವಪ್ರಸಾದ್ ಚಿತ್ರದುರ್ಗದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲೆಗೆ ರಜೆ ಇರುವುದರಿಂದ ದೊಡ್ಡಮ್ಮ ಮಂಜುಳಾ ಅವರ ಬೆಳ್ತಂಗಡಿ ವಸತಿಗೃಹಕ್ಕೆ ಬಂದಿದ್ದು ಘಟನೆ ವೇಳೆ ಮಂಜುಳಾ ಕೆಲಸಕ್ಕೆ ಹೋಗಿದ್ದು ,ಮಗಳು ಅಮೃತ ಕಾಲೇಜಿಗೆ ಹೋಗಿದ್ದಳು, ಮಗ ವಿರೇಂದ್ರ ಕೂಡ ಕೆಲಸಕ್ಕೆ ಹೋಗಿದ್ದರು.ಮಧ್ಯಾಹ್ನ ಮಂಜುಳಾ ಕೆಲಸದಿಂದ ವಸತಿಗೃಹಕ್ಕೆ ಬಂದಾಗ ಬಾಲಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಬೆಳ್ತಂಗಡಿ ಸಬ್ ಇನ್ಸೆಕ್ಟರ್ ಅರ್ಜುನ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು. ಚಿತ್ರದುರ್ಗದಲ್ಲಿರುವ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಮನೆಯವರು ಬರುವಿಕೆಗಾಗಿ ಪೊಲೀಸರು ಬಾಲಕ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯನ್ನು ಭದ್ರವಾಗಿ ಬೀಗಹಾಕಿ ಇಟ್ಟಿದ್ದಾರೆ.

Recent News


Leave a Comment: