ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಪಿಯು ರಿಸಲ್ಟ್ ನಲ್ಲಿ ಅಮೋಘ ಪ್ರಗತಿ – ವಿಜ್ಞಾನ ವಿಭಾಗದಲ್ಲಿ 100 ಸಾಧನೆ

Posted by Vidyamaana on 2024-04-14 16:09:20 |

Share: | | | | |


ಪಿಯು ರಿಸಲ್ಟ್ ನಲ್ಲಿ ಅಮೋಘ ಪ್ರಗತಿ – ವಿಜ್ಞಾನ ವಿಭಾಗದಲ್ಲಿ 100 ಸಾಧನೆ

ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ 2023-24ನೇ ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.99 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ ಒಟ್ಟು 10 ವಿದ್ಯಾರ್ಥಿಗಳಲ್ಲಿ 7 ಮಂದಿ ಪ್ರಥಮ, 2 ಮಂದಿ ದ್ವಿತೀಯ ಹಾಗೂ ಓರ್ವ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಒಟ್ಟು 56 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ-1, ಪ್ರಥಮ ಶ್ರೇಣಿಯಲ್ಲಿ 21, ದ್ವಿತೀಯ ಶ್ರೇಣಿಯಲ್ಲಿ22 ಹಾಗೂ 11 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಕಲಾ ವಿಭಾಗದಲ್ಲಿ ಒಟ್ಟು 5 ವಿದ್ಯಾರ್ಥಿಗಳಲ್ಲಿ ಇಬ್ಬರು ಪ್ರಥಮ, ಒಬ್ಬರು ದ್ವಿತೀಯ ಹಾಗೂ ಒಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಕೆ.ಹೇಮಲತಾ ಗೋಕಲ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಾಣಿಜ್ಯಶಾಸ್ತ್ರ/ಕಲಾ ವಿಭಾಗ

ದಿಶಾ-517, ಆಯಿಷಾತುಲ್ ಮಿಶ್ರಿಯಾ-479, ಹೇಮಂತ್ ಗೌಡ-459, ಚೈತಾಲಿ-447, ಗೌಡಪ್ಪ ಗೌಡ-425, ದರ್ಶನ್ ಸುಬ್ಬಯ್ಯ-413, ಧನುಷ್-410, ಧನುಷ್ ಪುಣಚ-410, ಮಹಮ್ಮದ್ ಯಝೀದ್-390, ಇಹ್‌ಶಾನ್-387, ಲಿಂಕಿತ್ ತಿಮ್ಮಯ್ಯ-386, ನಂದನಾ ಜೆ-352, ಮಹಮ್ಮದ್ ತಹಝ್ ಪಿ.-350, ಸಂಕೇತ್ ಪೂಜಾರಿ-349, ಮಹಮ್ಮದ್ ತಲ್‌ಹತ್-339, ಕುಮಾರಸ್ವಾಮಿ-335, ಶಂಬ್ರೀನಾ-327, ಯಶ್ವಂತ್-324, ನಿತಿನ್-320, ಲಿತಿಶ್-320.

ವಿಜ್ಞಾನ ಟ್ಯೂಷನ್ ವಿಭಾಗ :

ಅಶ್ವಿಜ-497, ಆಯಿಷಾ ಮುಶ್ರಿಫಾ-488, ಫಾತಿಮತ್ ಅಫೀದಾ-484, ಜೀವಿತಾ-450, ಇಬ್ರಾಹಿಂ ಅನಾಝ್-435, ಮಹಮ್ಮದ್ ರಿಝ್ವಾನ್-426, ಮಹಮ್ಮದ್ ಅನ್ಸಫ್-402, ಮಹಮ್ಮದ್ ಅಕ್ಮಲ್-337


ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವಿನ ರಕ್ಷಣೆ

Posted by Vidyamaana on 2023-09-26 21:54:16 |

Share: | | | | |


ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವಿನ ರಕ್ಷಣೆ

ಪುತ್ತೂರು: ಇಲ್ಲಿನ ಬಪ್ಪಳಿಗೆ ಎಂಬಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದನನ್ನ ಹಿಡಿದು ರಕ್ಷಣೆ ಮಾಡಲಾಗಿದೆ. ಬಪ್ಪಳಿಗೆ ಪರಿಸರದ ಜನನಿಬಿಡ ಪ್ರದೇಶ ರಸ್ತೆಯಲ್ಲಿ ಅಡ್ಡಲಾಗಿದ್ದ ಹೆಬ್ಬಾವನ್ನ ಕಂಡು ಯುವಕನೋರ್ವ ಬೆಚ್ಚಿ ಬಿದ್ದಿದ್ದಾನೆ.  ಬಳಿಕ ಸ್ನೇಕ್ ರಾಜೇಶ್ ನೂಜಿ ಅವರನ್ನ ಕರೆದು ಹೆಬ್ಬಾವನ್ನ ಹಿಡಿದು ರಕ್ಷಣೆ ಮಾಡಿ ಅರಣ್ಯವಲಯಕ್ಕೆ ಬಿಡಲಾಗಿದೆ.

ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

Posted by Vidyamaana on 2024-06-25 17:16:35 |

Share: | | | | |


ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

ರೀಲ್ಸ್ ಇಲ್ಲದೆ ದಿನವೇ ಮುಂದೆ ಸಾಗದ ಪರಿಸ್ಥಿತಿ ಎದುರಾಗಿದೆ. ರೀಲ್ಸ್‌ಗಾಗಿ ಜನರು ಅಪಾಯಕಾರಿ ಸ್ಟಂಟ್ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಈ ರೀತಿಯ ಸ್ಟಂಟ್ ದುರಂತದಲ್ಲಿ ಅಂತ್ಯವಾಗಿದೆ. ಶಾಲಾ ಬಾಲಕಿಯರಿಬ್ಬರು ರೀಲ್ಸ್‌ಗಾಗಿ ಸ್ಟಂಟ್ ಮಾಡಿದ್ದಾರೆ. ಒರ್ವ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ್ದಾಳೆ. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಪರಿಣಾಮ ಬಾಲಕಿ ಇದೀಗ ಎದ್ದು ನಿಲ್ಲದ ಪರಿಸ್ಥಿತಿಯಲ್ಲಿದ್ದಾಳೆ.ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಬಾಲಕಿಯರು ಹೆದ್ದಾರಿಯಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಬಾಲಕಿಯರ ಸ್ಟಂಟ್ ಮತ್ತಷ್ಟು  ವೈರಲ್ ಆಗಲಿದೆ ಎಂದು ಸಾಹಸ ಪ್ರದರ್ಶನ ಮಾಡಿದ್ದಾರೆ. ರಸ್ತೆಯಲ್ಲಿ ಬಾಲಕಿ ಮತ್ತೊಬ್ಬ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರದಿಂದ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ ಬಾಲಕಿ ನೆಲಕ್ಕೆ ಲ್ಯಾಂಡಿಂಗ್ ಆಗವಾಗ ಕಾಲು ಜಾರಿದೆ. ಪರಿಣಾಮ ದೊಪ್ಪನೆ ಬಿದ್ದಿದ್ದಾಳೆ.

ಅಮೆರಿಕ ಅಧ್ಯಕ್ಷರ ಐಫೋನ್‌ ಬಗ್ಗೆ ನಿಮಗೆಷ್ಟು ತಿಳಿದಿದೆ? ಹಿಂಬದಿಯ ಸೀಲ್‌ನಲ್ಲಿದೆ ರೋಚಕ ರಹಸ್ಯ

Posted by Vidyamaana on 2023-09-08 11:12:06 |

Share: | | | | |


ಅಮೆರಿಕ ಅಧ್ಯಕ್ಷರ ಐಫೋನ್‌ ಬಗ್ಗೆ ನಿಮಗೆಷ್ಟು ತಿಳಿದಿದೆ? ಹಿಂಬದಿಯ ಸೀಲ್‌ನಲ್ಲಿದೆ ರೋಚಕ ರಹಸ್ಯ

  ಭಾರತದ ನವದೆಹಲಿಯಲ್ಲಿ ಸೆಪ್ಟೆಂಬರ್ 9-10 ರವರೆಗೆ G20 ಶೃಂಗಸಭೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವುದಕ್ಕೆ ವಿಶ್ವ ನಾಯಕರೆಲ್ಲಾ ನವದೆಹಲಿಗೆ ಬರುತ್ತಿದ್ದಾರೆ. ಇದಕ್ಕೆ ಅಮೆರಿಕದ ಅಧ್ಯಕ್ಷ ಜೋ ಬಿಡನ್‌ ಕೂಡ ಬರಲಿದ್ದು, ಭಾರತದಲ್ಲಿ ಮೂರು ದಿನಗಳ ಕಾಲ ಪ್ರಮುಖ ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.ಹೌದು, ಅಮೆರಿಕದ ಅಧ್ಯಕ್ಷ ಜೋ ಬಿಡನ್‌ G20 ಶೃಂಗ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬರುತ್ತಿದ್ದಾರೆ. ಇದೇ ಸಮಯದಲ್ಲಿ ಜೋ ಬಿಡನ್‌ ಅವರ ವಿಶೇಷ ಐಫೋನ್‌ ಬಗ್ಗೆ ಕುತೂಹಲಕರ ಮಾಹಿತಿ ಹೊರಬಿದ್ದಿದೆ.

ಅಮೆರಿಕ ಅಧ್ಯಕ್ಷರ ಐಫೋನ್‌ ಹೇಗಿದೆ? ಅದರ ವಿವರಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.


ಅಮೆರಿಕ ಅಧ್ಯಕ್ಷರ ವಿಶೇಷ ಐಫೋನ್ ವಿವರ ಇಲ್ಲಿದೆ


ಅಮೆರಿಕ ಅಧ್ಯಕ್ಷರ ಐಫೋನ್‌ ಸಾಕಷ್ಟು ವಿಶೇಷವಾಗಿದೆ. ಅಮರಿಕ ಅಧ್ಯಕ್ಷರ ಫೋನ್‌ ವಿಚಾರದಲ್ಲಿಯೂ ಕೂಡ ಸಾಕಷ್ಟು ಸುರಕ್ಷತೆಗೆ ಅಧ್ಯತೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ವಿಶ್ವ ನಾಯಕರೊಂದಿಗಿನ ಪ್ರಮುಖ ಕರೆಗಳನ್ನು ಸುರಕ್ಷಿತವಾಗಿ ಮಾಡಲಾಗುತ್ತದೆ. ಇದರಿಂದ ಕರೆಯ ಇನ್ನೊಂದು ತುದಿಯಲ್ಲಿ ಯಾರಿದ್ದಾರೆ ಎಂಬುದರ ಬಗ್ಗೆ ಯಾರಿಗೂ ಕೂಡ ಮಾಹಿತಿ ಇರುವುದಿಲ್ಲ. ಸದ್ಯ ಅಮೆರಿಕ ಅಧ್ಯಕ್ಷರ ಐಫೋನ್‌ ಹಿಂಭಾಗದಲ್ಲಿ ವಿಶೇಷ ಚಿನ್ನದ ಅಧ್ಯಕ್ಷೀಯ ಮುದ್ರೆಯಿದೆ. ಈ ಸೀಲ್‌ನಲ್ಲಿ ಸೀಲ್ ಆಫ್ ದಿ ಪ್ರೆಸಿಡೆಂಟ್ ಆಫ್ ಅಮೇರಿಕಾ ಎಂದು ಬರೆಯಲಾಗಿದೆ.


ಈ ಸೀಲ್‌ ಅನ್ನು ಕೇವಲ ಲುಕ್‌ಗಾಗಿ ಅಳವಡಿಸಿರಬಹುದು. ಆದರೆ ನಿರ್ದಿಷ್ಟ ಡಿವೈಸ್‌ POTUS ಬಳಸುವ ಅಗತ್ಯ ಭದ್ರತಾ ಮಾನದಂಡಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಏಕೆಂದರೆ ಡೌಗ್ ಎಂಹಾಫ್, ಉಪಾಧ್ಯಕ್ಷ (ವಿಪಿ) ಹ್ಯಾರಿಸ್ ಅವರ ಪತಿ ಭದ್ರತಾ ಕಾರಣಗಳಿಂದಾಗಿ ಅವನ ಹೆಂಡತಿಗೆ ಕೂಡ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುತ್ತದೆ ಎಂದು ಹೇಳಲಾಗಿದೆ. ಅಂದರೆ ಸರ್ಕಾರವು ಸಂವಹನವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಭಾರತಕ್ಕೆ ಬಂದಿಳಿದ ಅಮೆರಿಕ ಅಧ್ಯಕ್ಷರ ಕಾರು

ಭಾರತದಲ್ಲಿ ನಡೆಯುತ್ತಿರುವ G20 ಶೃಂಗಸಭೆಗೆ ಅಮೆರಿಕ ಅಧ್ಯಕ ಜೋ ಬಿಡೆನ್‌ ಶುಕ್ರವಾರ ಆಗಮಿಸುತ್ತಿದ್ದಾರೆ. ಆದರೆ ಅಮೆರಿಕ ಅಧ್ಯಕರು ಬಳಸುವ ಕಾರು ಬೀಸ್ಟ್ ಭಾರತಕ್ಕೆ ಎಂಟ್ರಿ ನೀಡಿದೆ. ಇದು ಯುಎಸ್ ಅಧ್ಯಕ್ಷರಅಧಿಕೃತ ಕಾರಾಗಿದ್ದು, US ನಿಂದ ಭಾರತಕ್ಕೆ ಬೋಯಿಂಗ್ C-17 Globemaster III ಎಂಬ ಮಿಲಿಟರಿ ಸಾರಿಗೆ ವಿಮಾನದಲ್ಲಿ ಬಂದಿದೆ.


ಇನ್ನು ಜೋ ಬಿಡೆನ್ ಅವರ ದೆಹಲಿ ಭೇಟಿಗೆ ಮೂರು ಹಂತದ ಭದ್ರತೆಯನ್ನು ಏರ್ಪಡಿಸಲಾಗಿದೆ. ಮೊದಲನೆಯದ್ದು ಹೊರಗೆ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೆ, ಎರಡು ಭಾರತದ ವಿಶೇಷ ರಕ್ಷಣಾ ಗುಂಪಿನ ಕಮಾಂಡೋಗಳನ್ನು ಮತ್ತು ಮೂರು ಒಳಗೆ ರಹಸ್ಯ ಸೇವಾ ಏಜೆಂಟ್‌ಗಳ ಭದ್ರತೆಯನ್ನು ಹೊಂದಿರುತ್ತಾರೆ

ಬೆಳ್ತಂಗಡಿ : ಬೈಕಿಗೆ ಪಿಕಪ್ ಡಿಕ್ಕಿ ಹೊಡೆದು ಸಾವರ ಸಾವು ಪ್ರಕರಣ

Posted by Vidyamaana on 2024-03-27 11:57:36 |

Share: | | | | |


ಬೆಳ್ತಂಗಡಿ : ಬೈಕಿಗೆ ಪಿಕಪ್ ಡಿಕ್ಕಿ ಹೊಡೆದು ಸಾವರ ಸಾವು ಪ್ರಕರಣ

ಬೆಳ್ತಂಗಡಿ: ಹಳೇಕೋಟೆ ಬಳಿ ದ್ವಿಚಕ್ರ ವಾಹನಕ್ಕೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಾ.25 ರಂದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು .ಮತ್ತೊಬ್ಬ ಗಂಭೀರ ಗಾಯಗೊಂಡಿದ್ದ ಸಹಸವಾರ ಕೂಡ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದಾನೆ.

ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿಯತ್ತ ಹೋಗುತಿದ್ದ ದ್ವಿಚಕ್ರ ವಾಹನಕ್ಕೆ ಮಾ.25 ರಂದು ಎದುರಿನಿಂದ ಬರುತಿದ್ದ  ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿ ಚಕ್ರ ವಾಹನ ಮಗುಚಿ ಬಿದ್ದು ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟು ಸಾವರ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ರಾಘವೇಂದ್ರ ನಗರ್ ನಿವಾಸಿ ದಿ.ಜಯರಾಮ್ ಮತ್ತು ಜಯಂತಿ ದಂಪತಿಗಳ ಎರಡನೇ ಮಗ ಪುರುಷೋತ್ತಮ (19)  ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಸಹಸವಾರ ಲಾಯಿಲ ಗ್ರಾಮದ ರಾಘವೇಂದ್ರ ನಗರದ ತೌಶೀಫ್ ಮಗ ತೌಫೀಕ್(17)  ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಮಾ.26 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಅಪಘಾತ ಬಳಿಕ ಉಜಿರೆಯ ಪಿಕಪ್ KA-19-AE-3490 ವಾಹನ ಸಮೇತ ಪರಾರಿಯಾಗಿದ್ದು. ಬಳಿಕ ಸಂಜೆ ವೇಳೆ ಸಂಚಾರಿ ಪೊಲೀಸ್ ಠಾಣೆಗೆ ವಾಹನವನ್ನು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮಂಗಳೂರು ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

Posted by Vidyamaana on 2023-11-23 10:53:49 |

Share: | | | | |


ಮಂಗಳೂರು  ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

ಮಂಗಳೂರು: ಲಾಡ್ಜ್ ನ ರೂಮ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ಮೃತಪಟ್ಟಿರುವ ಘಟನೆ ನಗರದ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ನಡೆದಿದೆ.


ಯಶ್ರಾಜ್ ಎಸ್.ಸುವರ್ಣ(43) ಮೃತರು ಎಂದು ತಿಳಿದು ಬಂದಿದೆ.


ನಗದರ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ಮಧ್ಯರಾತ್ರಿ 12:35 ಕ್ಕೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಯಶ್ರಾಜ್ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿದ್ದು, ಬಾಗಿಲಿನ ಚಿಲಕ ಹಾಕಿಕೊಂಡಿದ್ದರು. ಅನಂತರ ಲಾಡ್ಜ್ ನವರು ತೆರೆದಾಗಬೆಂಕಿ ಆವರಿಸಿತ್ತು.


ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

Recent News


Leave a Comment: