ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಸುದ್ದಿಗಳು News

Posted by vidyamaana on 2024-07-05 10:22:02 |

Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು.

2016 ರ ಕರ್ನಾಟಕ ಕೇಡರ್ ನ IPS ಅಧಿಕಾರಿ ಯತೀಶ್ ಎನ್ ಈ ಹಿಂದೆ ಮಂಡ್ಯ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇನ್ನೂ ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 Share: | | | | |


ಪೆರುವಾಜೆ : ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಲೆಕ್ಕಪತ್ರ ಮಂಡನೆ

Posted by Vidyamaana on 2024-03-10 21:19:46 |

Share: | | | | |


ಪೆರುವಾಜೆ : ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಲೆಕ್ಕಪತ್ರ ಮಂಡನೆ

ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದ 2024 ನೇ ಸಾಲಿನ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಲೆಕ್ಕಪತ್ರ ಮಂಡನೆಯು ಮಾ.10 ರಂದು ಪೆರುವಾಜೆ ದೇವಾಲಯದ ವಠಾರದಲ್ಲಿ ನಡೆಯಿತು.

ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ‌ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಲೆಕ್ಕಪತ್ರ ಮಂಡಿಸಿ   91.30 ಲಕ್ಷ ರೂ.ಜಮೆ ಆಗಿದ್ದು ಖರ್ಚು ವೆಚ್ಚದ ವಿವರ, ಉಳಿತಾಯ ಮೊತ್ತ, ಶ್ರೀಕ್ಷೇತ್ರದ ದೈವ ದೇವರಿಗೆ ಆಭರಣ ಸಮರ್ಪಣೆಯ ವಿವರವನ್ನು ಅಂಕಿ ಅಂಶಗಳೊಂದಿಗೆ ಸಭೆಯ ಮುಂದಿಟ್ಟರು.

*ಜಮಾ-ಖರ್ಚು ಮಂಡನೆ*

ಶ್ರೀ ಕ್ಷೇತ್ರಕ್ಕೆ ಸಹಾಯಧನದ ರೂಪದಲ್ಲಿ 78.64 ಲಕ್ಷ ರೂ., ಹುಂಡಿ ಹರಿವಾಣ ಕಾಣಿಕೆ ಮೂಲಕ 2.80 ಲಕ್ಷ ರೂ., ಉಳಿಕೆ ಮರದ ಹರಾಜಿನಿಂದ 3.11 ಲಕ್ಷ ರೂ. ಸೇರಿದಂತೆ ಒಟ್ಟು‌ 91,30,028.00 ರೂ. ಜಮೆ ಆಗಿದೆ. ರಥದ ಕೆಲಸಕ್ಕೆ 27.70 ಲಕ್ಷ ರೂ.,ರಥದ ಶೆಡ್ ನಿರ್ಮಾಣಕ್ಕೆ 11.91 ಲಕ್ಷ ರೂ. ಸೇರಿದಂತೆ ಜಾತ್ರೆ ಹಾಗೂ ಬ್ರಹ್ಮರಥೋತ್ಸವಕ್ಕೆ ವಿವಿಧ ವಿಭಾಗದಲ್ಲಿ ಖರ್ಚಾದ ಮೊತ್ತ, ಉಳಿತಾಯದ ರೂಪದಲ್ಲಿ ಬ್ಯಾಂಕ್ ನಲ್ಲಿ 81,986 ರೂ., ನಗದು ರೂಪದಲ್ಲಿ 28,522 ರೂ. ಮೊತ್ತ ಲಭ್ಯತೆಯ ಲೆಕ್ಕವನ್ನು ಮಂಡಿಸಲಾಯಿತು.

*17.98 ಲಕ್ಷ ರೂ.ಮೊತ್ತದ ಆಭರಣ ಸಮರ್ಪಣೆ*

ಜಮೆಯಾದ 91.30 ಲಕ್ಷ ರೂ.ಮೊತ್ತದಲ್ಲಿ ರಥ ನಿರ್ಮಾಣಕ್ಕೆ ಹಾಗೂ ಜಾತ್ರೆಯ ಖರ್ಚು ಭರಿಸಿ ಉಳಿದ ಮೊತ್ತದಲ್ಲಿ 17.98 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಶ್ರೀ ಕ್ಷೇತ್ರದ ದೈವ ದೇವರಿಗೆ ಸಮರ್ಪಿಸಲಾಗಿದೆ. ಕಲ್ಲುರ್ಟಿ ದೈವಕ್ಕೆ ಚಿನ್ನದ ಹೂವು, ದೈವ ನರ್ತಕನಿಗೆ ಚಿನ್ನದ ಉಂಗುರ 14,049 ರೂ., ಉತ್ಸವ ಮೂರ್ತಿಗೆ ಚಿನ್ನದ ಕವಚ 7.57 ಲಕ್ಷ ರೂ., ಕಲ್ಕುಡ ದೈವಕ್ಕೆ ಬೆಳ್ಳಿಯ ತಲೆಪಟ್ಟಿ 87,612 ರೂ., ಪ್ರಭಾವಳಿಯ ಸತ್ತಿಗೆಗೆ ಚಿನ್ನ 5.40 ಲಕ್ಷ ರೂ., ಪಲ್ಲಕ್ಕಿಗೆ ಬೆಳ್ಳಿ 2.98 ಲಕ್ಷ ರೂ., ದೈವದ ಬೆಳ್ಳಿ 66,507 ರೂ.ಮೊತ್ತ ಸೇರಿದಂತೆ 17.98 ಲಕ್ಷ ರೂ. ವೆಚ್ಚವಾಗಿದೆ. ಉಳಿದಂತೆ 43 ಸಾವಿರ ರೂ. ವೆಚ್ಚದಲ್ಲಿ ರಂಗಪೂಜೆಯ ಸ್ಟ್ಯಾಂಡ್, 2.75 ಲಕ್ಷ ರೂ.ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಕೆ, 66 ಸಾವಿರ ರೂ. ವೆಚ್ಚದಲ್ಲಿ ವಿದ್ಯುತ್ ಉಪಕರಣ ಸೇರಿದಂತೆ ವಿವಿಧ ಪರಿಕರಗಳ ಖರೀದಿಸಲಾಗಿದೆ ಎಂದು ಪದ್ಮನಾಭ ಶೆಟ್ಟಿ ಹೇಳಿದರು.

ಅಪೂರ್ವ ಕಾರ್ಯಕ್ರಮ

ಕ್ಷೇತ್ರದಲ್ಲಿ‌ ನೂರು ವರ್ಷದ ಬಳಿಕ‌ ನಡೆದ ಬ್ರಹ್ಮರಥೋತ್ಸವವು ಐತಿಹಾಸಿಕ ದಾಖಲೆ ಬರೆದಿದ್ದು ಇದಕ್ಕೆ ಮೂಲ ಕಾರಣ ಭಕ್ರವೃಂದದ ಸಹಕಾರ. ಶ್ರೀ ಜಲದುರ್ಗಾದೇವಿಯ ಇಚ್ಛೆಯಂತೆ ಯಾರ ಕೈಯಲ್ಲಿ ಯಾವ ಕೆಲಸ ಮಾಡಬೇಕಿತ್ತೊ ಅದನ್ನು ಆ ಮಹಾತಾಯಿ ಮಾಡಿಸಿದ್ದಾಳೆ. ಪೆರುವಾಜೆ ರಥೋತ್ಸವ ಹತ್ತೂರಿನ ಜನರ ಮನಸ್ಸಿನಲ್ಲಿ ‌ಉಳಿದುಕೊಳ್ಳುವಂತೆ ನಡೆದಿದೆ. ಇಂತಹ ಅಪೂರ್ವ ಕ್ಷಣದಲ್ಲಿ‌ ನಾವೆಲ್ಲರೂ ಭಾಗಿಯಾಗಿರುವುದಕ್ಕೆ ಜಲದುರ್ಗಾದೇವಿಯೇ ಕಾರಣ ಎಂದು ಪದ್ಮನಾಭ ಶೆಟ್ಟಿ ಹೇಳಿದರು.


ದಾನ ರೂಪದಲ್ಲಿ ಬಂತು 50 ಲಕ್ಷ ರೂ.ಮೊತ್ತದ ಮರ..!

ಆರು ತಿಂಗಳ ಹಿಂದೆ ರಥ ನಿರ್ಮಾಣದ ಬಗ್ಗೆ ಚಿಂತನೆ‌ ನಡೆಯಿತು. 1 ಕೋ. ರೂ. ಅಂದಾಜು ವೆಚ್ಚ ನಿರೀಕ್ಷಿಸಲಾಗಿತ್ತು. ಇಷ್ಟೊಂದು ಮೊತ್ತದ ಕೆಲಸ ಕಾರ್ಯ ಆರಂಭಕ್ಕೆ ಸಣ್ಣ ಅಳಕು‌ ಇತ್ತು. ಆದರೆ ದೇವಿಯ ಇಚ್ಛೆ ಬೇರೆಯೇ ಇತ್ತು. ಎಲ್ಲವೂ ಪವಾಡದಂತೆ ನಡೆದು ಹೋಯಿತು. ಸುಮಾರು 50 ಲಕ್ಷ ರೂ. ಮೊತ್ತದ ಮರವನ್ನು ಭಕ್ತರು ದಾನ ರೂಪದಲ್ಲಿ ಕ್ಷೇತ್ರಕ್ಕೆ ಸರ್ಮಪಿಸಿದರು. ಹೀಗಾಗಿ ರಥ ನಿರ್ಮಾಣದ ಅರ್ಧ ಖರ್ಚು ದಾನ ರೂಪದಲ್ಲಿಯೇ ಭರ್ತಿಯಾಯಿತು. ಉಳಿದ ಮೊತ್ತ ದೇಣಿಗೆ ರೂಪದಲ್ಲಿ ಹರಿದು ಬಂತು. ವ್ಯವಸ್ಥಾಪನ ಸಮಿತಿ ಅವಧಿ‌ ಮುಕ್ತಾಯವಾದರೂ ಜಾತ್ರೆ, ಬ್ರಹ್ಮರಥೋತ್ಸವವು ಸಮಿತಿಯ ಮೂಲಕವೇ ನೆರವೇರಿತು. ಹೀಗಾಗಿ ಸಣ್ಣ ಅವಧಿಯಲ್ಲಿ ಬಹು‌ದೊಡ್ಡ ಕಾರ್ಯ‌ ನಡೆದಿದೆ. ಇದರ ಹಿಂದೆ ಸ್ಥಾನಮಾನದ ಫಲಾಫೇಕ್ಷೆ ಇಲ್ಲದೆ ದುಡಿದ ಸಾವಿರಾರು ಕಾರ್ಯಕರ್ತರ ಕರ ಸೇವೆಯು ಸೇರಿದೆ. ಅವರಿಗೆ ಶ್ರೀ ದೇವಿಯು ಎಲ್ಲ ಫಲವನ್ನು ಕರುಣಿಸಲಿ ಎಂದು ಪದ್ಮನಾಭ ಶೆಟ್ಟಿ ಹೇಳಿದರು.

ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಯಶಸ್ಸಿನ  ಹಿಂದೆ ದುಡಿದ ವ್ಯವಸ್ಥಾಪನ ಸಮಿತಿ ಭಕ್ತರು ಅಭಿನಂದಿಸಿದರು.

ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ‌ ಸದಸ್ಯರಾದ ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ವೆಂಕಟಕೃಷ್ಣ ರಾವ್, ನಾರಾಯಣ ಕೊಂಡೆಪ್ಪಾಡಿ, ದಾಮೋದರ ನಾಯ್ಕ ಪೆಲತ್ತಡ್ಕ, ಜಯಪ್ರಕಾಶ್ ರೈ ಪೆರುವಾಜೆ, ಜಗನ್ನಾಥ ರೈ ಪೆರುವಾಜೆ, ಪ್ರಮುಖರಾದ ದೇವದಾಸ ಶೆಟ್ಟಿ ಪೆರುವಾಜೆ, ರಾಮ ಯು, ಕುಶಾಲಪ್ಪ ಗೌಡ ಪೆರುವಾಜೆ, ವೇದಿತ್ ರೈ, ಸುಂದರ ನಾಗನಮಜಲು, ಸಚಿನ್ ರಾವ್ ಪೆರುವಾಜೆ, ವಿಜಯ ಪೆರುವಾಜೆ, ವಾಸುದೇವ ಪೆರುವಾಜೆ, ರವಿಚಂದ್ರ, ಜಯಚಂದ್ರ ಪೆರುವಾಜೆ, ಸುರೇಶ್ ಭಟ್ ಉಪ್ಪಂಗಳ, ಪ್ರಕಾಶ್ ಪೆರುವಾಜೆ, ಪ್ರಶಾಂತ್ ಪೆರುವಾಜೆ, ರಜನೀಶ್ ಸವಣೂರು, ರಕ್ಷಿತ್ ಪೆರುವಾಜೆ, ಪವನ್, ವಸಂತ ಆಚಾರ್ಯ ಪೆರುವಾಜೆ, ಚಿದಾನಂದ ಬಜ, ಚೇತನ್, ರಂಜಿತ್, ಯಶೋಧಾ ಬೀರುಸಾಗು ಮೊದಲಾದವರು ಉಪಸ್ಥಿತರಿದ್ದರು. ರಥ ಸಮರ್ಪಣ ಸಮಿತಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.

ಚೀನಾ ಫಂಡಿಂಗ್ ಆರೋಪ: ನ್ಯೂಸ್ ಕ್ಲಿಕ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸರಿಂದ ದಾಳಿ

Posted by Vidyamaana on 2023-10-03 11:34:47 |

Share: | | | | |


ಚೀನಾ ಫಂಡಿಂಗ್ ಆರೋಪ: ನ್ಯೂಸ್ ಕ್ಲಿಕ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸರಿಂದ ದಾಳಿ

ನವದೆಹಲಿ: ಚೀನಾ ಫಂಡಿಂಗ್, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ ಕ್ಲಿಕ್ ಸುದ್ದಿ ಪೋರ್ಟಲ್ ಗೆ ಸೇರಿದ ಹಲವಾರು ಪತ್ರಕರ್ತರ ಮನೆಗಳಿಗೆ ದಿಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

Readmore..,...

ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!


ಅಕ್ರಮ ಹಣ ವರ್ಗಾವಣೆ ಮತ್ತು ಚೀನಾ ಪರವಾದ ವಿಷಯವನ್ನು ತನ್ನ ವೇದಿಕೆಯಲ್ಲಿ ಪ್ರಕಟಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕ ಮಂಗಳವಾರ ನ್ಯೂಸ್ಕ್ಲಿಕ್ ಮಾಧ್ಯಮಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದೆ.


ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿನ ಮಾಧ್ಯಮ ಸಂಸ್ಥೆಯ ಅಧಿಕಾರಿಗಳು ಮತ್ತು ಅದರ ಉದ್ಯೋಗಿಗಳ ನಿವಾಸಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಸುದ್ದಿವಾಹಿನಿಯು ಅಮೆರಿಕದ ಬಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ 38 ಕೋಟಿ ರೂಪಾಯಿಗಳನ್ನು ಪಡೆದು ಭಾರತದಲ್ಲಿ ಚೀನಾ ಪರ ಪ್ರಚಾರವನ್ನು ಮಾಡುತ್ತಿದೆ ಎಂಬ ಆರೋಪದ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಪ್ರಕರಣದಲ್ಲಿ ನ್ಯೂಸ್ ಕ್ಲಿಕ್ ಮೇಲೆ ಇಡಿ ತನಿಖೆ ನಡೆಸುತ್ತಿದೆ.


ಮಾಧ್ಯಮವೊಂದರ ವರದಿ ಪ್ರಕಾರ ಪೊಲೀಸರು ತನಿಖೆ ವೇಳೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನೂ ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳು, ಹಾರ್ಡ್ ಡಿಸ್ಕ್ ಗಳು ಕೂಡ ಸೇರಿವೆ.

ಸರಕಾರಿ ಕಚೇರಿ ಜಾಲಾಡಿದ ಕಳ್ಳರು

Posted by Vidyamaana on 2023-09-05 02:56:06 |

Share: | | | | |


ಸರಕಾರಿ ಕಚೇರಿ ಜಾಲಾಡಿದ ಕಳ್ಳರು

ಪುತ್ತೂರು: ಇಲ್ಲಿನ ಕುಂಬ್ರದಲ್ಲಿ ಸರಕಾರಿ ಕಚೇರಿಗಳನ್ನೇ ಟಾರ್ಗೆಟ್ ಮಾಡಿ ಸರಣಿ ಕಳ್ಳತನ ನಡೆಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಕುಂಬ್ರದಲ್ಲಿರುವ ಒಳಮೊಗ್ರು ಗ್ರಾಮ ಪಂಚಾಯತ್ ಕಚೇರಿ, ಗ್ರಾಮ ಕರಣಿಕರ ಕಚೇರಿ, ಕೆ.ಪಿ.ಎಸ್. ಸ್ಕೂಲಿಗೆ ಕಳ್ಳರು ನುಗ್ಗಿದ್ದಾರೆ. ಕಚೇರಿಗಳ ಬಾಗಿಲು ಮುರಿದು ಒಳ ನುಗ್ಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಪುತ್ತೂರು : ಲಿಟ್ಲ್ ಫ್ಲವರ್ ಶಾಲೆಯಲ್ಲಿ ವಿಶ್ವ ಯೋಗದಿನಾಚರಣೆ

Posted by Vidyamaana on 2024-06-21 16:24:10 |

Share: | | | | |


ಪುತ್ತೂರು : ಲಿಟ್ಲ್ ಫ್ಲವರ್ ಶಾಲೆಯಲ್ಲಿ ವಿಶ್ವ ಯೋಗದಿನಾಚರಣೆ

ಪುತ್ತೂರು :ಲಿಟ್ಲ್ ಫ್ಲವರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿ ವಿಶ್ವ ಯೋಗದಿನಾಚರಣೆಯನ್ನು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ಜೂ. 21:ರಂದು ಆಚರಿಸಲಾಯಿತು. ಭಾರತೀಯ ವೈದ್ಯ ಪದ್ಧತಿಯಲ್ಲಿ ಆಯುರ್ವೇದಕ್ಕೆ ಮಹತ್ವದ ಸ್ಥಾನವಿದೆ.ಯೋಗದಿಂದ ದೈಹಿಕ ಮತ್ತು ಮಾನಸಿಕ ಸಮತೋಲನ ಸಾಧ್ಯವಿದ್ದು, ಯೋಗ ಇದ್ದರೆ ರೋಗವಿಲ್ಲ,

ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Posted by Vidyamaana on 2024-02-28 18:02:14 |

Share: | | | | |


ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಪುತ್ತೂರು :ಪುತ್ತೂರಿನ ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ನ ವಿದ್ಯಾಸಂಸ್ಥೆ ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಹಾಗೂ ಡಿಪ್ಲೊಮಾ ಇನ್ ಒಪ್ತಲ್ಮಿಕ್ ಟೆಕ್ನಾಲಜಿ ಕೋರ್ಸ್ ಗೆ ಪಾರಾ ಮೆಡಿಕಲ್ ಬೋರ್ಡ್ ಕರ್ನಾಟಕ ನಡೆಸಿದ  ಅಂತಿಮ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಂಸ್ಥೆಯು 100% ಫಲಿತಾಂಶ ಗಳಿಸಿದೆ.

DMLT ವಿದ್ಯಾರ್ಥಿನಿ ಕು. ಮೇಘ. ಕೆ        ಶೇ. 82.30 ಅಂಕಗಳೊಂದಿಗೆ ಪ್ರಥಮ ಸ್ಥಾನ ಕು.ಮೇಘಶ್ರೀ  ಶೇ.77.10 ಅಂಕಗಳೊಂದಿಗೆ ದ್ವಿತೀಯ ಸ್ಥಾನ     DOT and AT ವಿದ್ಯಾರ್ಥಿನಿ ಕು.ಸಂಜನಾ. ಎಂ ಶೇ. 76.3 ಅಂಕಗಳೊಂದಿಗೆ ಪ್ರಥಮ    ಕು.ಚೈತ್ರ. ಬಿ   ಶೇ.67.30 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ DOT ವಿದ್ಯಾರ್ಥಿನಿ ಕು.ಪವಿತ್ರ. ಕೆ   ಶೇ.80  ಅಂಕಗಳೊಂದಿಗೆ ಪ್ರಥಮ ಸ್ಥಾನ ಕು.ಪೂಜಾ ರೈ. ಎಸ್  ಶೇ.61.80    ಅಂಕಗಳೊಂದಿಗೆ ದ್ವಿತೀಯ ಸ್ಥಾನ   ಪಡೆದಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ  ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಶ್ರಮಿಸುತ್ತಿರುವ   ಉಪನ್ಯಾಸಕರಿಗೆ ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್ ಟ್ರಸ್ಟಿಗಳಾದ ಡಾ. ಸುಧಾ ಎಸ್ ರಾವ್, ಡಾ. ಸ್ಮಿತಾ ಎಸ್ ರಾವ್, ಡಾ. ಅಭೀಶ್ ಹೆಗ್ಡೆ ಹಾಗೂ ಸಂಸ್ಥೆಯ ಪ್ರಾಂಶುಪಾಲ ರಾದ ಶ್ರೀಮತಿ ಪ್ರೀತಾ ಹೆಗ್ಡೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕಳೆದ 10 ವರ್ಷಗಳಿಂದ ಸತತವಾಗಿ ಉತ್ತಮ ಫಲಿತಾಂಶ ಪಡೆಯುತ್ತಿದ್ದು  ಇಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ನ ಮೂಲಕ    ರಾಜೀವ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್  ನಿಂದ ಅಂಗೀಕೃತಗೊಂಡ  ಪುತ್ತೂರು ತಾಲೂಕಿನ ಏಕೈಕ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್   2022 ನೇ  ಸಾಲಿನಿಂದ ಕಾರ್ಯ ನಿರ್ವಹಿಸುತ್ತಿದ್ದು   ಬಿ ಎಸ್ಸಿ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಬಿ ಎಸ್ಸಿ ಆಪರೇಷನ್ ಥಿಯೇಟರ್ ಮತ್ತು  ಅನಸ್ತೇಶಿಯಾ ಟೆಕ್ನಾಲಜಿ , ಬಿಎಸ್ಸಿ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಹಾಗೂ ಬಿಎಸ್ಸಿ ಇನ್ ಎಮರ್ಜೆನ್ಸಿ ಮತ್ತು ಟ್ರಾಮಾ ಕೇರ್  ಟೆಕ್ನಾಲಜಿ ಕೋರ್ಸ್ ಗಳು  ಲಭ್ಯವಿದೆ.

ಪ್ರೇಮಿಗಳ ದಿನಾಚರಣೆ: ಶಾಸ್ರ್ತೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್!‌

Posted by Vidyamaana on 2024-02-14 20:38:30 |

Share: | | | | |


ಪ್ರೇಮಿಗಳ ದಿನಾಚರಣೆ: ಶಾಸ್ರ್ತೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್!‌

ಬೆಂಗಳೂರು : ಇಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆ ವಾಟಾಳ್ ನಾಗರಾಜ್ ವಿಶೇಷ ರೀತಿಯಲ್ಲಿ ಆಚರಣೆ‌ ಮಾಡಿದ್ದು ಕತ್ತೆಗಳಿಗೆ ಮದುವೆ ಮಾಡಿಸಿ ಪ್ರೇಮಿಗಳ ದಿನದ ಶುಭಕೋರಿದ್ದಾರೆ.ಒಂದು ಕತ್ತೆಗೆ ಸೀರೆ, ಮತ್ತೊಂದು ಕತ್ತೆ ಪಂಚೆ ತೊಡಿಸಿ ಮದುವೆ ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಡೆದ ವಿನೂತನ ಮದುವೆ ಹಣ್ಣು, ತಾಂಬೂಲ ಸೇರಿದಂತೆ ಶಾಸ್ರ್ತೋಕ್ತವಾಗಿ ಕತ್ತೆಗಳಿಗೆ ಮದುವೆ ಕತ್ತೆಗೆ ತಾಳಿ ಹಾಕಿ ಮದುವೆ ಮಾಡಿಸಿದ ಕನ್ನಡ ಪಕ್ಷದ ವಾಟಾಳ್ ವಿಶ್ವದೆಲ್ಲಡೆ ಇಂದು ಪ್ರೇಮಿಗಳು ಅವರ ದಿನ ಆಚರಣೆ ಮಾಡುತ್ತಿದ್ದಾರೆ ಅವರಿಗೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಲ್ಲರೂ ಪ್ರೀತಿಸಬೇಕು.. ಯಾರೂ ಕೂಡ ಹಿಂಜರಿಕೆ ಮಾಡಬಾರದು ಸರ್ಕಾರ ಪ್ರೇಮಿಗಳಿಗೆ ಪ್ರೋತ್ಸಾಹ ನೀಡಬೇಕು, ಭದ್ರತೆ ಕೊಡಬೇಕುಕಾನೂನಿನಲ್ಲಿ ಬದಲಾವಣೆ ಮಾಡಿ ಪ್ರೇಮಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು


ಪ್ರೇಮಿಗಳ ಭದ್ರತೆಗಾಗಿ ಸರ್ಕಾರದ ಕಾನೂನು ಜಾರಿ ಮಾಡಬೇಕು ಕಾಯಿದೆ ರೂಪಿಸಬೇಕು.. ಪ್ರೇಮಿಗಳಿಗೆ ಸರ್ಕಾರವೇ ಉತ್ತೇಜನ ಕೊಡಬೇಕು ಪ್ರತಿ ತಿಂಗಳಿಗೆ ಪ್ರೇಮಿಗಳಿಗೆ 1.50 ಲಕ್ಷ ರೂಪಾಯಿ ಪ್ರೋತ್ಸಾಹನ ಧನ ನೀಡಬೇಕುಯಾವುದೇ ಸಂಘಟನೆಗಳು ಪ್ರೇಮಿಗಳಿಗೆ ತೊಂದರೆ ಕೊಟ್ಟರೆ ಸಹಿಸಿಕೊಳ್ಳಲು ಆಗಲ್ಲ ಪ್ರೇಮಿಗಳಿಗೆ ತೊಂದರೆ ಕೊಡುವ ಸಂಘಟನೆಗಳ ವಿರುದ್ಧ ಸರ್ಕಾರ ಕ್ರಮ ತಗೋಬೇಕು ಎಂದು ಹೇಳಿದರು.

Recent News


Leave a Comment: