ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ

Posted by Vidyamaana on 2023-04-15 09:05:56 |

Share: | | | | |


ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ

ಪುತ್ತೂರು : ವಿಧಾನ ಸಭಾ ಚುನಾವಣಾ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಬಹಳ ಕುತೂಹಲಕಾರಿಯಾಗಿತ್ತು. ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸದ ಕೈ ಪಾಳಯ ಮೂರನೇ ಪಟ್ಟಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ.

ಈ ಬಾರಿಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾಮಾಜಿಕ, ಧಾರ್ಮಿಕ ಮುಂದಾಳು ಅಶೋಕ್ ಕುಮಾರ್ ರೈ ಯವರ ಹೆಸರು ಪ್ರಕಟಗೊಂಡಿದೆ.

ಬೆಳಿಯೂರುಕಟ್ಟೆ ಸರಕಾರಿ ಪ ಪೂ ಕಾಲೇಜು ವಾರ್ಷಿಕೋತ್ಸವ

Posted by Vidyamaana on 2023-12-18 12:23:08 |

Share: | | | | |


ಬೆಳಿಯೂರುಕಟ್ಟೆ ಸರಕಾರಿ  ಪ ಪೂ ಕಾಲೇಜು ವಾರ್ಷಿಕೋತ್ಸವ

ಪುತ್ತೂರು: ಮಕ್ಕಳನ್ನು ತಿದ್ದುವ ಮತ್ತು ಅವರಿಗೆ ಉತ್ತಮ ದಾರಿ ತೋರಿಸುವ ಕೆಲಸ ಕೇವಲ ಶಿಕ್ಷಕರು‌ಮಾತ್ರವಲ್ಲ ಪೋಷಕರಿಂದಲೂ ಆಗಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಬೆಳಿಯೂರು ಕಟ್ಟೆ ಸರಕಾರಿ ಪ ಪೂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಶಾಲೆಯಲ್ಲಿ ಶಿಸ್ತು ಕಡಿಮೆ ಎಂದು ಕೆಲವರು ಆಪಾದನೆ ಮಾಡುತ್ತಾರೆ. ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಶಿಸ್ತು ಪಾಲನೆ ಮಾಡಬೇಕಾದರೆ ಪೋಷಕರ ಸಹಕಾರ ಅತೀ ಅಗತ್ಯವಾಗಿದೆ.

ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡುವ ಕನಸು ಕಾಣಬೇಕು. ಕನಸೇ ಕಾಣದಿದ್ದರೆ ನನಸು ಮಾಡುವುದಾದರೂ ಏನನ್ನಯ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು,ದುಶ್ಚಟಗಳಿಗೆ ಯಾರೂ ಬಲಿಯಾಗಬಾರದು. ತಂದೆ ತಾಯಿಯ ಹೆಸರನ್ನು ಕೆಡಿಸುವ ಕರಲಸವನ್ನು ಎಂದೂ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಎರಡು ಗ್ರಾಮಕ್ಕೊಂದು ಕೆಪಿಎಸ್ ಸ್ಕೂಲ್


ಎರಡು ಗ್ರಾಮಕ್ಕೊಂದು ಕೆಪಿಎಸ್ ಸ್ಕೂಲ್ ಆರಂಭ ಮಾಡುವ ಉದ್ದೇಶ ಸರಕಾರಕ್ಕಿದ್ದು ,ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಖ್ಯ ಶಾಲೆಗೆ ಮರ್ಜಿ ಮಾಡಲಾಗುವುದು ಎಂದು ಹೇಳಿದರು.


15 ತಿಂಗಳಲ್ಲಿ 24 ಗಂಟೆಯೂ ನೀರು

ಮುಂದಿನ 15 ತಿಂಗಳೊಳಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ದಿನದ 24 ಗಂಟೆ ನೀರು ವಿತರಣೆಯಾಗಲಿದೆ ಎಂದು ಶಾಸಕರು ತಿಳಿಸಿದರು.

ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ರಾಜೀನಾಮೆ : ಟೆಕ್ ಮಹೀಂದ್ರಾ ಎಂ ಡಿ , ಸಿ ಇ ಓ ಆಗಿ ಸೇರ್ಪಡೆ

Posted by Vidyamaana on 2023-03-11 09:56:11 |

Share: | | | | |


ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ರಾಜೀನಾಮೆ : ಟೆಕ್ ಮಹೀಂದ್ರಾ ಎಂ ಡಿ , ಸಿ ಇ ಓ ಆಗಿ ಸೇರ್ಪಡೆ

 ನವದೆಹಲಿ :ಇನ್ಫೋಸಿಸ್‌ನ ಅಧ್ಯಕ್ಷ ಮೋಹಿತ್ ಜೋಶಿ (Infosys President Mohit Joshi) ಅವರು ಪ್ರತಿಸ್ಪರ್ಧಿ ಟೆಕ್ ಮಹೀಂದ್ರಾಗೆ ಸೇರಲು ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ. 2000 ರಿಂದ ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿರುವ ಮೋಹಿತ್ ಜೋಶಿ ಅವರನ್ನು ಟೆಕ್ ಮಹೀಂದ್ರಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂದು ಹೆಸರಿಸಲಾಗಿದೆ.ಡಿಸೆಂಬರ್ 20 ರಿಂದ ಜೋಶಿ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ.

ಭಾರತೀಯ ಐಟಿ ವಲಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಗುರ್ನಾನಿ ಅವರ ಸ್ಥಾನವನ್ನು ಮೋಹಿತ್ ಜೋಶಿ ಅವರು ವಹಿಸಲಿದ್ದಾರೆ. “ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ (ನಿಯೋಜಿತ) ಶ್ರೀ ಮೋಹಿತ್ ಜೋಶಿ ಅವರ ನೇಮಕಾತಿಯು ಕಂಪನಿಗೆ ಸೇರುವ ದಿನಾಂಕ 19 ಡಿಸೆಂಬರ್, 2023 ರವರೆಗೆ ಜಾರಿಯಲ್ಲಿರುತ್ತದೆ” ಎಂದು ಕಂಪನಿಯ ಹೇಳಿಕೆಯೊಂದು ತಿಳಿಸಿದೆ. ಮೋಹಿತ್ ಜೋಶಿ ಅವರು ಮಾರ್ಚ್ 11 ರಿಂದ ರಜೆಯಲ್ಲಿರುತ್ತಾರೆ ಮತ್ತು ಕಂಪನಿಯಲ್ಲಿ ಕೆಲಸ ಮಾಡುವ ಕೊನೆಯ ದಿನ ಜೂನ್ 9, 2023 ಎಂದು ಇನ್ಫೋಸಿಸ್ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಹೇಳಿಕೆಯಲ್ಲಿ ತಿಳಿಸಿದೆ.ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಸಲಹಾ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಇಂದು ಅಧ್ಯಕ್ಷ ಮೋಹಿತ್ ಜೋಶಿ ಅವರ ರಾಜೀನಾಮೆಯನ್ನು ಪ್ರಕಟಿಸಿದೆ. ಮಾರ್ಚ್ 11, 2023 ರಿಂದ ಅವರು ರಜೆಯಲ್ಲಿರುತ್ತಾರೆ ಮತ್ತು ಕಂಪನಿಯೊಂದಿಗೆ ಅವರ ಕೊನೆಯ ದಿನಾಂಕ ಜೂನ್ 09, 2023 ಆಗಿರುತ್ತದೆ. ನಿರ್ದೇಶಕರ ಮಂಡಳಿಯು ಮೋಹಿತ್ ಜೋಷಿ ಅವರು ಸಲ್ಲಿಸಿದ ಸೇವೆಗಳಿಗೆ ಮತ್ತು ಕಂಪನಿಗೆ ಅವರು ನೀಡಿದ ಕೊಡುಗೆಗಳಿಗಾಗಿ ತಮ್ಮ ಆಳವಾದ ಮೆಚ್ಚುಗೆಯನ್ನು ದಾಖಲಿಸಿದ್ದಾರೆ. . ಇದು ನಿಮ್ಮ ಮಾಹಿತಿ ಮತ್ತು ದಾಖಲೆಗಳಿಗಾಗಿ, "ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯಗಳಲ್ಲಿ BJP ಭರ್ಜರಿ ಜಯಭೇರಿ :ತೆಲಂಗಾಣದಲ್ಲಿ ಕೈಗೆ ಗದ್ದುಗೆ

Posted by Vidyamaana on 2023-12-03 13:35:46 |

Share: | | | | |


ರಾಜ್ಯಗಳಲ್ಲಿ BJP ಭರ್ಜರಿ ಜಯಭೇರಿ :ತೆಲಂಗಾಣದಲ್ಲಿ ಕೈಗೆ ಗದ್ದುಗೆ

ನವದೆಹಲಿ: 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲಾದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಭಾನುವಾರ (ಡಿ.03) ಬೆಳಗ್ಗೆ ಆರಂಭಗೊಂಡಿದ್ದು, ಈವರೆಗಿನ ಟ್ರೆಂಡ್‌ ಪ್ರಕಾರ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ ಗಢದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜನಾದೇಶ ಲಭಿಸಲಿದ್ದು, ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ ಎಸ್‌ ಗೆ ಮುಖಭಂಗವಾಗಿದ್ದು, ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ ದಾಪುಗಾಲಿಟ್ಟಿದೆ.ಸೋಮವಾರ (ಡಿ.4) ಮಿಜೋರಾಂ ವಿಧಾನಸಭಾ ಚುನಾವಣೆಯ ಮತಎಣಿಕೆ ನಡೆಯಲಿದೆ. ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಗೆ ರಾಜಸ್ಥಾನ ಮತ್ತು ಛತ್ತೀಸ್‌ ಗಢದಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಮಧ್ಯಪ್ರದೇಶದಲ್ಲಿಯೂ ಕಾಂಗ್ರೆಸ್‌ ಹೀನಾಯ ಸೋಲು ಕಂಡಿದ್ದು, ತೆಲಂಗಾಣದಲ್ಲಿ ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ.


ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಕಳೆದ ಚುನಾವಣೆಗಿಂತ ಈ ಬಾರಿ 49 ಸ್ಥಾನ ಕಳೆದುಕೊಂಡಂತಾಗಿದ್ದು, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಕಳೆದ ಬಾರಿಗಿಂತ 30 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಛತ್ತೀಸ್‌ ಗಢದಲ್ಲಿ ಈ ವಿಧಾನಸಭಾ ಚುನಾವಣೆಯಲ್ಲಿ 32 ಸ್ಥಾನ ಕಳೆದುಕೊಂಡಿದೆ. ಇದರೊಂದಿಗೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 2 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಮಧ್ಯಪ್ರದೇಶದಲ್ಲಿಯೂ ಅಧಿಕಾರದ ಗದ್ದುಗೆ ಏರುವ ಕನಸು ಭಗ್ನಗೊಳ್ಳುವ ಮೂಲಕ ಹೀನಾಯ ಮುಖಭಂಗ ಅನುಭವಿಸಿದೆ.ಫಲಿತಾಂಶದ ಟ್ರೆಂಡ್‌ ಪ್ರಕಾರ ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 164 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ 64 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷ 112 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್‌ 68 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮುಖಭಂಗ ಅನುಭವಿಸಿದೆ. ಛತ್ತೀಸ್‌ ಗಢದಲ್ಲಿ ಭಾರತೀಯ ಜನತಾ ಪಕ್ಷ 54 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್‌ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವಂತಾಗಿದೆ. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ ಎಸ್‌ 42 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ 62 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದೆ.

ಲೀಡ್ ಬಂದಕೂಡ್ಲೇ ಬೆಂಗಳೂರು ಬಸ್ ಹತ್ತಿ – ಕೈ ಅಭ್ಯರ್ಥಿಗಳಿಗೆ ಹೈಕಮಾಂಡ್ ಸ್ಪಷ್ಟ ಸೂಚನೆ

Posted by Vidyamaana on 2023-05-12 12:00:38 |

Share: | | | | |


ಲೀಡ್ ಬಂದಕೂಡ್ಲೇ ಬೆಂಗಳೂರು ಬಸ್ ಹತ್ತಿ – ಕೈ ಅಭ್ಯರ್ಥಿಗಳಿಗೆ ಹೈಕಮಾಂಡ್ ಸ್ಪಷ್ಟ ಸೂಚನೆ

ಬೆಂಗಳೂರು: ವಿಧಾನಸಭಾ ಚುನಾವಣೆ ಮುಗಿದು ಇದೀಗ ಮತ ಎಣಿಕೆಗೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣಗೊಳ್ಳಬಹುದೆಂಬ ಸೂಚನೆ ಸಿಕ್ಕಿರುವುದರಿಂದ ರಾಜ್ಯದಲ್ಲಿ ಮೂರೂ ಪಕ್ಷಗಳೂ ‘ಹೈ ಅಲರ್ಟ್’ನಲ್ಲಿವೆ.

ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವ ಸಾಧ್ಯತೆಗಳು ಕಡಿಮೆಯಿದ್ದು ಕಾಂಗ್ರೆಸ್ ಪಕ್ಷ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳನ್ನು ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ನೀಡಿರುವುದು ಆಡಳಿತಾರೂಢ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಇದೀಗ ಫಲಿತಾಂಶದ ಬಳಿಕ ‘ಅಪರೇಷನ್ ಕಮಲ’ ನಡೆಯುವ ಸಾಧ್ಯತೆ ದಟ್ಟವಾಗಿರುವ ಕಾರಣ ತನ್ನ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಹೊಸ ಪ್ಲ್ಯಾನ್ ಹೆಣೆದಿದ್ದು, ಮೇ13ರಂದು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಕಾಂಗ್ರೆಸ್ ಅಭ್ಯರ್ಥಿ ತನ್ನ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಳ್ಳುತ್ತಿದ್ದಂತೆ ನೇರವಾಗಿ ಬೆಂಗಳೂರಿಗೆ ಬರುವಂತೆ ಪಕ್ಷದ ಹೈಕಮಾಂಡ್ ‘ಸ್ಟ್ರಿಕ್ಟ್ ಆದೇಶ’ ರವಾನಿಸಿದೆ.

ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳ ಜೊತೆ ವರ್ಚ್ಯವಲ್ ಮೀಟಿಂಗ್ ನಡೆಸಿದ್ದು ಈ ಸಂದರ್ಭದಲ್ಲಿ ಇಂತಹದ್ದೊಂದು ಸೂಚನೆಯನ್ನು ‘ಕೈ’ ಅಭ್ಯರ್ಥಿಗಳಿಗೆ ರವಾನಿಸಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಬಡವರ ಮನೆಗೆ ಅಕ್ಕಿ ಮುಟ್ಟಿಸುವ ಯೋಜನೆಗೆ ನನ್ನ ಅಭಿನಂದನೆ

Posted by Vidyamaana on 2023-07-17 14:52:01 |

Share: | | | | |


ಬಡವರ ಮನೆಗೆ ಅಕ್ಕಿ ಮುಟ್ಟಿಸುವ ಯೋಜನೆಗೆ ನನ್ನ ಅಭಿನಂದನೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರದ ಅನ್ನ ಭಾಗ್ಯ ಯೋಜನೆ ಕುರಿತು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ವಿಧಾನಸಭೆಯಲ್ಲಿ ಸೋಮವಾರ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ಬಿಜೆಪಿ ಸದಸ್ಯನಾಗಿದ್ದರೂ ಬಡವರ ಮನೆಗೆ ಅಕ್ಕಿಯನ್ನು ಮುಟ್ಟಿಸುವ ಯೋಜನೆಯನ್ನು ಅಭಿನಂದಿಸುತ್ತೇನೆ.ಅನ್ನಭಾಗ್ಯ ಯೋಚನೆ ಮತ್ತು ಯೋಜನೆ ರೂಪಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದನ್ನು ಯಾವುದೇ ಸರಕಾರ ಜಾರಿ ಮಾಡಿರಲಿ, ಕೊನೆಗೆ ಬಡವನ ಮನೆಗೆ ಅದು ಮುಟ್ಟಿದೆ. ಬಡತನವನ್ನು ಅನುಭವಿಸಿದವನಿಗಷ್ಟೇ ಅದರ ಮೌಲ್ಯ ಗೊತ್ತಾಗುತ್ತೆ ಎಂದು ಹೇಳಿದರು.ಆದರೆ ಬಡತನ ಎನ್ನುವುದು ಅಣಕದ ವಿಚಾರವಾಗ ಕೂಡದು. ದುಡಿಯುವ ಕೈಗಳಿಗೆ ಕೆಲಸ ಒದಗಿಸಿದರೆ ಬಡತನ ಎನ್ನುವುದಕ್ಕೆ ತಿಲಾಂಜಲಿ ಹಾಡಬಹುದು. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು ಎಂದು ಗುರುರಾಜ್ ಅವರು ತಿಳಿಸಿದರು.

Recent News


Leave a Comment: