ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಸುದ್ದಿಗಳು News

Posted by vidyamaana on 2024-06-30 19:50:01 |

Share: | | | | |


ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಮಂಗಳೂರು , ಜೂ. 30: ಕುತ್ತಾರು ಮದನಿ ನಗರದಲ್ಲಿ ಇತೀಚೆಗೆ ಪಕ್ಕದ ಮನೆಯ ಗೋಡೆ ಮನೆಯೊಂದರ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣದ ಘಟನಾ ಸ್ಥಳಕ್ಕೆ ರವಿವಾರ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪರಿಶೀಲಿಸಿದರು.

ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಇದೇ ಸಂದರ್ಭ, ಉಳ್ಳಾಲ- ಸೋಮೇಶ್ವರ ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಡಲ್ಕೊರೆತ ತೀವ್ರಗೊಂಡಿರುವ ಉಚ್ಚಿಲ, ಮೊಗವೀರಪಟ್ನ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡಿದರು. 


ಸಮುದ್ರತೀರದ ಮನೆಗಳಲ್ಲಿ ವಾಸವಾಗಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದ ಸಂಸದ ಕ್ಯಾ. ಬ್ರಿಜೇಶ್, ಅಪಾಯದಂಚಿನಲ್ಲಿ ಇರುವ ಮನೆಮಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಉಳ್ಳಾಲ ತಾಲೂಕು ತಹಶಿಲ್ದಾರರಾದ ಪ್ರದೀಪ್ ಕುರುಡೇಕರ್, ಬಂದರು ಇಲಾಖೆಯ ಇಂಜಿನಿಯರ್ ಪ್ರವೀಣ್, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರು ಪ್ರಮೋದ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

 Share: | | | | |


ಪುತ್ತೂರು ಶಾಸಕರು ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಿದ್ದಾರೆ: ಬಡಗನ್ನೂರು

Posted by Vidyamaana on 2023-05-19 06:25:18 |

Share: | | | | |


ಪುತ್ತೂರು ಶಾಸಕರು ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಿದ್ದಾರೆ: ಬಡಗನ್ನೂರು

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್‌ಕುಮಾರ್ ರೈಯವರು ಸಮರ್ಥ, ಪ್ರಾಮಾಣಿಕ, ಅಬಿವೃದ್ದಿಪರ ಶಾಸಕರಾಗಿದ್ದು ಪಕ್ಕದ ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಮಹಮ್ಮದ್ ಬಡಗನ್ನೂರು ಹೇಳಿದರು.

ಪುತ್ತೂರಿಗೆ ಬಂದಿದ್ದ ಬೆಳ್ತಂಗಡಿ ಶಾಸಕರಾದ ಹರೀಶ್‌ಪೂಂಜಾರವರು ನಿಮಗೆ ಶಾಸಕರಿಲ್ಲದ ಕೊರಗು ಬೇಡ ನಾನೇ ನಿಮ್ಮ ಶಾಸಕರಂತೆ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಹಮ್ಮದ್ ಬಡಗನ್ನೂರು ಬೆಳ್ತಂಗಡಿಯಲ್ಲಿ ನೊಂದವರ ಪರವಾಗಿ, ಅಶಕ್ತರ ಪರವಾಗಿ, ಅನ್ಯಾಯಕ್ಕೊಳಗಾದವರ ಪರವಾಗಿ ನಮ್ಮ ಶಾಸಕರಾದ ಅಶೋಕ್ ರೈ ಕೆಲಸ ಮಾಡಲಿದ್ದು ಅವರಿಗೆ ಅಷ್ಟು ಸಾಮರ್ಥ್ಯ ಇದೆ ಎಂದು ಹೇಳಿದರು.ಚುನಾವಣೆಗೆ ಮೊದಲು ಆರಂಭಗೊಂಡ ಇವರೊಳಗಿನ ಯುದ್ದ ಚುನಾವಣೆ ಮುಗಿದ ಬಳಿಕ ಇನ್ನಷ್ಟು ಗಂಭೀರಾವಸ್ಥೆಗೆ ತಲುಪಿದೆ. ಅವರವರೇ ಹೊಡೆದಾಡಿಕೊಂಡು, ಬೈದಾಡಿಕೊಂಡು ಅದನ್ನು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ , ಇವೆಲ್ಲವನ್ನೂ ಜನ ಹತ್ತಿರದಿಂದ ಗಮನಿಸುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಯೇ ಇಷ್ಟು ದಿನ ಇಲ್ಲಿನ ಜನರನ್ನು ಮಂಗ ಮಾಡುತ್ತಿದ್ದರು ಈಗ ಅದೆಲ್ಲವೂ ಒಂದೊಂದಾಗಿ ಬಯಲಾಗುತ್ತಿದೆ ಎಂದು ಲೇವಡಿ ಮಾಡಿದರು. ಪುತ್ತೂರಿನಿಂದ ಆರಂಭಗೊಂಡ ಇವರ ಈ ಗುಂಪುಗಾರಿಕೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟಕ್ಕೂ ವಿಸ್ತರಣೆಪಡೆದುಕೊಳ್ಳಬಹುದು. ಜನರ ಭಾವನೆಯನ್ನು ಕೆರಳಿಸಿ ಅಧಿಕಾರ ಪಡೆಯುತ್ತಿದ್ದ ಬಿಜೆಪಿಗೆ ಈ ಬಾರಿ ಜನರ ಶಾಪ ತಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಬಡ ಜನರಿಗೆ ನ್ಯಾಯ ಸಿಕ್ಕಿದಂತಾಗಿದೆ. ಸೋಲಿನಿಂದ ದೃತಿಗೆಟ್ಟ ಬಿಜೆಪಿ ಶಾಸಕರು ಪುತ್ತೂರಿಗೆ ಬಂದು ನಾನೇ ನಿಮ್ಮ ಶಾಸಕ ಎಂದು ಹೇಳುತ್ತಿರುವುದು ಅವರ ಹತಾಶಾ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬೆಳ್ತಂಗಡಿ ಜನತೆಗೆ ತೊಂದರೆಯಾದಲ್ಲಿ, ಅನ್ಯಾಯವಾದಲ್ಲಿ ಪುತ್ತೂರು ಶಸಕರು ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಬಡಗನ್ನೂರು ಹೇಳಿದರು.

ಮಂಗಳೂರು: ರನ್ ವೇನಿಂದ ಟೇಕಾಫ್ ಆಗುತ್ತಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ

Posted by Vidyamaana on 2023-05-25 06:38:00 |

Share: | | | | |


ಮಂಗಳೂರು: ರನ್ ವೇನಿಂದ ಟೇಕಾಫ್ ಆಗುತ್ತಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ

ಮಂಗಳೂರು; ಟೇಕಾಫ್ ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿಯಾದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಪೈಲೆಟ್ ನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಬೆಳಗ್ಗೆ 8.30ಕ್ಕೆ ಪ್ರಯಾಣಿಕರ ಸಹಿತ ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಇಂಡಿಗೋ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ತಕ್ಷಣವೇ ಇದನ್ನರಿತ ಪೈಲಟ್ ಭಾರೀ ದುರಂತವನ್ನು ತಪ್ಪಿಸುವ ಮೂಲಕ ಪ್ರಯಾಣಿಕರ ಜೀವ ಉಳಿಸಿದ್ದಾರೆ. ಹಕ್ಕಿ ಡಿಕ್ಕಿ ಹೊಡೆದೊಡನೆ ಪೈಲಟ್ ಅಪಾಯದ ಸೂಚನೆ ಅರಿತು ಎಟಿಸಿಗೆ ಮಾಹಿತಿ ನೀಡಿದ್ದಾರೆ. ನಂತರ ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದ ವಾಪಾಸ್ ಬಂದಿಳಿದಿದೆ. ಸದ್ಯ ಅಧಿಕಾರಿಗಳು ಪ್ರಯಾಣಿಕರನ್ನ ಇಳಿಸಿ ವಿಮಾನದ ತಪಾಸಣೆ ಮಾಡುತ್ತಿದ್ದಾರೆ. ಇನ್ನು ಪ್ರಯಾಣಿಕರಿಗಾಗಿ ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ.

ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿಗಳ ಹತ್ಯೆ ಘನಘೋರ ಕೃತ್ಯ

Posted by Vidyamaana on 2023-07-10 16:52:13 |

Share: | | | | |


ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿಗಳ ಹತ್ಯೆ ಘನಘೋರ ಕೃತ್ಯ

ಮಂಗಳೂರು;ಅಹಿಂಸಾ ತತ್ವದ ಜೈನ ಮುನಿ ಧಾರ್ಮಿಕ ಆಚಾರ್ಯ  ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿಗಳ ಬೀಬತ್ಸ  ಹತ್ಯೆಯು ಇಡೀ ಮಾನವ ಕುಲಕ್ಕೆ ಕಪ್ಪು ಚುಕ್ಕೆಯಾಗಿದ್ದು ಇದು ಅಮನವೀಯವೂ  ರಾಕ್ಷಸೀಯವೂ ಆದ ಕೃತ್ಯವಾಗಿದೆ.

ಈ ಕ್ರೂರ ಕೃತ್ಯವೆಸಗಿದ ರಾಕ್ಷಸರನ್ನು ಜಾತಿ ಧರ್ಮದ ಹಂಗಿಗೆ ಒಳಗಾಗದೇ ಮರಣ ದಂಡನೆಯಂತಹ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.

ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಇದರ ಹಿಂದಿರುವ ಎಲ್ಲಾ ಷಡ್ಯಂತ್ರವನ್ನು ಬಯಲಿಗೆಳೆದು ನ್ಯಾಯಯುತವಾದ ತನಿಖೆ ನಡೆಸಿ ಜನರ ಗೊಂದಲವನ್ನು ನಿವಾರಿಸ ಬೇಕಾಗಿದೆ. 

ಇಂತಹ ಕ್ರೂರ ಕೃತ್ಯಗಳಿಂದಾಗಿ ಇಡೀ ದೇಶದ ಮಾನ ಹರಾಜಾಗುತ್ತಿದ್ದು ಇದನ್ನು ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳದೇ ಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿ ಕೊಳ್ಳ ಬೇಕಾದ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳಲು ಪಕ್ಷ ಭೇದ ಮೆರೆತು ಒತ್ತಾಯಿಸ ಬೇಕಿದೆ ಎಂದು ದಾರಿಮಿ ಒಕ್ಕೂಟ ಅಭಿಪ್ರಾಯ ಪಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಎಸ್ ಬಿ ದಾರಿಮಿ,ಕಾರ್ಯದರ್ಶಿ ಯುಕೆ ದಾರಿಮಿ,ಕೋಶಾಧಿಕಾರಿ ಹುಸೈನ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಾಡಿನ ಶಿಕ್ಷಕರಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಸ್ವರ್ಣ ನಮನ

Posted by Vidyamaana on 2023-09-04 23:00:18 |

Share: | | | | |


ನಾಡಿನ ಶಿಕ್ಷಕರಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಸ್ವರ್ಣ ನಮನ

ಪುತ್ತೂರು: ಸದಾ ಹೊಸತನಗಳನ್ನು, ವಿನೂತನ ಆಫರ್ ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸ್ಪೆಷಲ್ ಆಫರ್ ಒಂದನ್ನು ಪರಿಚಯಿಸಲಾಗಿದೆ.

ಸೆ.05 ರಿಂದ ಸೆ.12ರವರೆಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಪುತ್ತೂರು, ಸುಳ್ಯ, ಹಾಸನ ಮತ್ತು ಕುಶಾಲನಗರ ಶಾಖೆಗಳಲ್ಲಿ ಶಿಕ್ಷಕರು ಖರೀದಿಸುವ ಚಿನ್ನಾಭರಣದ ಮೇಲೆ ಪ್ರತೀ ಗ್ರಾಂಗೆ 100 ರೂಪಾಯಿ ರಿಯಾಯಿತಿ, ಬೆಳ್ಳಿ ಎಂ.ಆರ್.ಪಿ. ಆಭರಣಗಳ ಮೇಲೆ ಶೇ.5ರ ರಿಯಾಯಿತಿ, ಬೆಳ್ಳಿ ಆಭರಣ ಹಾಗೂ ಸಾಮಾಗ್ರಿಗಳ ಮೇಲೆ ಶೇ.3ರ ರಿಯಾಯಿತಿ ಸಿಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. 

ಸೆ. 5ರಿಂದ 12ರವರೆಗೆ ಶಿಕ್ಷಕರಿಗಾಗಿ ಈ ವಿಶೇಷ ಕೊಡುಗೆಗಳು ಲಭ್ಯವಿರಲಿದೆ. ಇದಕ್ಕಾಗಿ ಶಿಕ್ಷಕರು ಮಾಡಬೇಕಾಗಿರುವುದಿಷ್ಟೇ..

- ಶಿಕ್ಷಕರು ತಮ್ಮ ಶಾಲೆ ಅಥವಾ ಕಾಲೇಜಿನ ಐಡಿ ಕಾರ್ಡನ್ನು ತಮ್ಮೊಂದಿಗೆ ತರತಕ್ಕದ್ದು

- ಈ ಕೊಡುಗೆ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಅನ್ವಯವಾಗುವುದಿಲ್ಲ.

- ಈ ಕೊಡುಗೆಗಳು ಇನ್ನಿತರ ಯಾವುದೇ ಯೋಜನೆಗಳು ಮಾಸಿಕ ಕಂತಿನ ಯೋಜನೆಯೊಂದಿಗೆ ಸೇರಿಸಲಾಗುವುದಿಲ್ಲ

ದಾವಣಗೆರೆ: ಖಾಸಗಿ ವೀಡಿಯೋ ಚಿತ್ರಿಸಿ ಬ್ಲಾಕ್ ಮೇಲ್ : ಯುವತಿ ಆತ್ಮಹತ್ಯೆ

Posted by Vidyamaana on 2023-10-08 13:16:17 |

Share: | | | | |


ದಾವಣಗೆರೆ: ಖಾಸಗಿ ವೀಡಿಯೋ ಚಿತ್ರಿಸಿ ಬ್ಲಾಕ್ ಮೇಲ್ : ಯುವತಿ ಆತ್ಮಹತ್ಯೆ

ದಾವಣಗೆರೆ:ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ 17 ವರ್ಷದ ಬಾಲಕಿಯೊಬ್ಬಳು ತನ್ನ ಖಾಸಗಿ ವಿಡಿಯೋ ಮೂಲಕ ಇಬ್ಬರು ಹುಡುಗರಿಂದ ಬ್ಲಾಕ್ ಮೇಲ್ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಪಿಯುಸಿ ಓದುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ.


ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ

ಆಗಸ್ಟ್ 28 ರಂದು ಈ ಘಟನೆ ನಡೆದಿದ್ದು, ಬುಧವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಕೆ ಕಾಲೇಜಿಗೆ ಹೋದಾಗ ಆರೋಪಿಗಳಾದ ಇಬ್ಬರು ಹುಡುಗರು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಆಕೆಗೆ ಮಾದಕ ದ್ರವ್ಯ ಬೆರೆಸಿದ ಖಾದ್ಯವನ್ನು ನೀಡಿದ್ದು, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಕೆಯ ಖಾಸಗಿ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.


ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಆಕೆಗೆ ನಿರಂತರವಾಗಿ ಬ್ಲಾಕ್‌ಮೇಲ್ ಮಾಡಿದ್ದರು. ಬಾಲಕಿಯ ಪೋಷಕರು ಪೊಲೀಸರಿಗೂ ದೂರು ನೀಡಿದ್ದರು. ಆರೋಪಿಗಳು ಆಕೆಯ ಮನೆಯ ಮುಂದೆ ಬಂದು ಸಂತ್ರಸ್ತೆಯನ್ನು ತಮ್ಮೊಂದಿಗೆ ಬರುವಂತೆ ಕೇಳುತ್ತಿದ್ದರು. ಚಿತ್ರಹಿಂಸೆ ತಾಳಲಾರದೆ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಾವಿಗೂ ಮುನ್ನ ಬಾಲಕಿ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಳು,ಅದರಲ್ಲಿ ತನಗಿಂತ ಬೇರೆ ಯಾವ ಹುಡುಗಿಗೂ ಇಂತಹ ಅನ್ಯಾಯ ಆಗಬಾರದು ಎಂದು ಹೇಳಿದ್ದಾಳೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಮಾಡಿದರು. ಎಲ್ಲಾ ದುಷ್ಟ ಮನಸ್ಸಿನ ವ್ಯಕ್ತಿಗಳಿಗೆ ಇದೊಂದು ಪಾಠವಾಗಲಿ ಎಂದು ವಿಡಿಯೋದಲ್ಲಿ ಬಾಲಕಿ ಹೇಳಿದ್ದಾಳೆ. ನ್ಯಾಯಕ್ಕಾಗಿ ಬಾಲಕಿ ಕಣ್ಣೀರು ಸುರಿಸುತ್ತಾ ಬೇಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಜಗಳೂರು ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುತೂರು ತಾಲೂಕಿನಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ

Posted by Vidyamaana on 2023-09-28 22:20:38 |

Share: | | | | |


ಪುತೂರು ತಾಲೂಕಿನಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ

ಪುತ್ತೂರು: ಪುತ್ತೂರು ತಾಲೂಕಿನಾದ್ಯಂತ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಸೆ 28 ಗುರುವಾರದಂದು ಮುಸ್ಲಿಂ ಬಾಂಧವರು ಆಚರಿಸಿದರು.


ಬೆಳಿಗ್ಗೆ ಮುಸ್ಲಿಂ ಬಾಂಧವರು ಪ್ರಾರ್ಥನಾ ಮಂದಿರಗಳಿಗೆ ತೆರಳಿ ಪರಸ್ಪರ ಶುಭಾಶಯ ಕೋರಿದರು.


ಈದ್ ಮಿಲಾದ್ ಅಂಗವಾಗಿ ತಾ ದ.ಕ. ಜಿಲ್ಲಾ ಯುವಜನ ಪರಿಷತ್ ಪುತ್ತೂರು ತಾಲೂಕು ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ 31ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಹಾಗೂ ಬುರ್ಧಾ ಮಜ್ಜಿಸ್ ಗುರುವಾರ ನಗರದ ಕಿಲ್ಲೆ ಮೈದಾನದಲ್ಲಿ ಹಮ್ಮಿಕೊಂಡಿತು.ಸಂಜೆ ಕಬಕ ವೃತ್ತದಲ್ಲಿ ಜಾಥಾ ಕ್ಕೆ  ಕಬಕ ಟೈಲರ್ ಇಸ್ಮಾಯಿಲ್ ಸಾಹೇಬ್ ಚಾಲನೆ ನೀಡಿದರು. ಈಸ್ಟರ್ನ್ ಗ್ರೂಪ್ ಮಾಲಕ ಜ.ಕಲಂದರ್ ಧ್ವಜ ಸ್ವೀಕಾರ ಮಾಡಿದರು. ಬಳಿಕ ಹೊರಟ ಬೃಹತ್ ವಾಹನ ಜಾಥಾ ಮುಖ್ಯರಸ್ತೆಯಾಗಿ ಬೊಳುವಾರು, ದರ್ಬೆಯಿಂದಾಗಿ ಸಂಜೆ ಕಿಲ್ಲೆ ಮೈದಾನಕ್ಕೆ ತೆರಳಿ ಸಮಾಪನ ಗೊಂಡಿತು.


ಸಂಜೆ ಕಿಲ್ಲೆ ಮೈದಾನದಲ್ಲಿ ನಡೆದ ಸಮಾವೇಶವನ್ನು ಬಹು ಎಂ.ಎಂ. ಮಹ್ ರೂಫ್ ಸುಲ್ತಾನಿ ಅಲ್ಪುರ್ಖಾನಿ ಆತೂರು ಉದ್ಘಾಟಿದರು. ಕೇಂದ್ರ ಜುಮ್ಮಾ ಮಸೀದಿ ಮುದಗ್ರಿಸ್ ಬಹು.ಅಸ್ಸಯ್ಯದ್ ಅಹ್ಮದ್ ಪೊಕೋಯ ತಂಙಳ್     ದುವಾಶೀರ್ವಚನ ನೀಡಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಬಹು.ಆಶಿಕ್ ದಾರಿಮಿ ಅಲಂಪುಝ ಪ್ರಭಾಷಣ ಮಾಡಿದರು. ರಾತ್ರಿ ಬಹು. ಫಕ್ರೆ ಆಲಂ ಮುಂಬೈಯವರಿಂದ ನಾತೇ ಶರೀಫ್ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ಅನ್ನದಾನ ನಡೆಯಿತು. ನೂರಾರು ಮಂದಿ ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರುಸಮಾರಂಭದಲ್ಲಿ ತಾಲೂಕು ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ.ಮಹಮ್ಮದ್ ಹಾಜಿ, ಉದ್ಯಮಿ ರಿಯಾಝ್, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಬಶೀರ್ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ಇಫಾಝ್ ಬನ್ನೂರು, ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ, ನ್ಯಾಯವಾದಿ ಶಾಕಿರ್ ಹಾಜಿ, ನೌಷದ್ ಹಾಜಿ ಬೊಳ್ವಾರ್, ಹಸೈನಾರ್ ಬನಾರಿ, ಅಶ್ರಫ್ ಬಾವ, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.



Leave a Comment: