ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ನೆಲ್ಯಾಡಿ ಅಡಿಕೆ ಗೋದಾಮಿನಲ್ಲಿ ನಡೆದಿದೆನ್ನಲಾದ ಕಳ್ಳತನ ಪ್ರಕರಣ : ಆರೋಪಿಗಳು ದೋಷ ಮುಕ್ತ

Posted by Vidyamaana on 2024-05-01 15:40:39 |

Share: | | | | |


ನೆಲ್ಯಾಡಿ ಅಡಿಕೆ ಗೋದಾಮಿನಲ್ಲಿ ನಡೆದಿದೆನ್ನಲಾದ ಕಳ್ಳತನ ಪ್ರಕರಣ : ಆರೋಪಿಗಳು ದೋಷ ಮುಕ್ತ

ನೆಲ್ಯಾಡಿ : ಸುಮಾರು ಆರು ವರ್ಷಗಳ ಹಿಂದೆ ನೆಲ್ಯಾಡಿ ಜಂಕ್ಷನ್ ನಲ್ಲಿದ್ದ ಕೆ. ಮೊಹಮ್ಮದ್ ಹನೀಫ್ ಎಂಬುವರ ಗೋದಾಮ್ ಕೊಠಡಿಯ ಶಟರ್ ತೆಗೆದು ಅವರು ಖರೀದಿಸಿದ ಸುಮಾರು 250 ಕೆಜಿ ಅಡಿಕೆಯನ್ನು ಯಾರೋ ಆರೋಪಿಗಳು ಕಳ್ಳತನ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿರುತ್ತಾರೆ. ಸದರಿ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಪೊಲೀಸರು ಚಪ್ಪ (ಸರ್ಪರಾಜ್) ಮತ್ತು ಅಬ್ದುಲ್ ಅಸ್ಪರ್ (ಅಸ್ಫಕ್ ) ಎಂಬುವರನ್ನು ಆರೋಪಿಗಳೆಂದು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಸದ್ರಿ ಪ್ರಕರಣವನ್ನು ಕೈಗೆತ್ತಿಕೊಂಡು ನ್ಯಾಯಾಲಯವು ಈ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು 21

ಮಣಿಪುರದಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿ ಹಿಂಸಾಚಾರ ನಡೆಯುತ್ತಿದೆ :ಪುತ್ತೂರು ಕ್ರಿಶ್ಚಿಯನ್ಸ್ ಯೂನಿಯನ್

Posted by Vidyamaana on 2023-07-06 02:40:12 |

Share: | | | | |


ಮಣಿಪುರದಲ್ಲಿ ಕ್ರೈಸ್ತ  ಸಮುದಾಯವನ್ನು ಗುರಿಯಾಗಿಸಿ ಹಿಂಸಾಚಾರ ನಡೆಯುತ್ತಿದೆ :ಪುತ್ತೂರು ಕ್ರಿಶ್ಚಿಯನ್ಸ್ ಯೂನಿಯನ್

ಪುತ್ತೂರು : ಮಣಿಪುರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷವಾಗುತ್ತಲೇ ಜನಾಂಗೀಯ ಹಿಂಸಾಚಾರ ಮುಗಿಲು ಮುಟ್ಟಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ದೇಶದ ಪ್ರಧಾನಿಗಳು ಮೌನಕ್ಕೆ ಶರಣಾಗಿದ್ದಾರೆ.


ಅದರೇ ಇದೆ ವೇಳೆ ಕರ್ನಾಟಕ ಚುನಾವಣಾ ಸಂದರ್ಭ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ ಪ್ರಧಾನಿಗಳು ಮಣಿಪುರಕ್ಕೆ ಬಾರಿಯೂ ಭೇಟಿ ನೀಡಿಲ್ಲ. ಈಶಾನ್ಯ ರಾಜ್ಯದಲ್ಲಿ ಮತ್ತೆ ಶಾಂತಿ ಸುವ್ಯಸ್ಥೆ ನೆಲೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ತಕ್ಷಣ ಕೈಗೊಳ್ಳಬೇಕು ಎಂದು ಪುತ್ತೂರು ಕ್ರಿಶ್ಚಿಯನ್ಸ್ ಯೂನಿಯನ್ ಅಧ್ಯಕ್ಷ ಮೌರೀಸ್ ಮಸ್ಕರೇನಿಯಸ್ ಹೇಳಿದರು.ರಾಜ್ಯದಲ್ಲಿರುವ ಕ್ರೈಸ್ತರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗುತ್ತಿದ್ದೂ ಚರ್ಚ್ ಗಳಿಗೆ ಅಗಾಧ ಪ್ರಮಾಣದಲ್ಲಿ ಹಾನಿ ಮಾಡಲಾಗಿದೆ. ಮಣಿಪುರದ ಮೈತೇಯಿ ಬಂಡುಕೋರರು ಪೊಲೀಸ್‌ ಠಾಣೆಗಳಿಗೆ ದಾಳಿ ನಡೆಸಿ ಶಸ್ತ್ರಗಾರದಿಂದ 3500 ಶಸ್ತ್ರಾಸ್ತ್ರಗಳನ್ನು ಕೊಂಡೊಯ್ದ ಗಂಭೀರ ಪ್ರಕರಣ ನಡೆದಿದೆ. ಆದರೆ ಅಲ್ಲಿಗೆ ಇತ್ತೀಚೆಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆ ಬಂಡುಕೋರರ ಮೇಲೆ ನಿರ್ಧಾಕ್ಷಿಣ್ಯ ಕ್ರಮೈಗೊಳ್ಳುವುದು ಬಿಟ್ಟೂ ಶಸ್ತ್ರಾಸ್ತ್ರಗಳನ್ನು ವಾಪಾಸು ಮಾಡುವಂತೆ ಬಂಡುಕೋರರಲ್ಲಿ ಮನವಿ ಮಾಡಿದ್ದಾರೆ. ಇದರಿಂದಲೇ ಈ ಬಂಡುಕೋರರ ಹಿಂದೆ ಇರುವ ಶಕ್ತಿ ಯಾವುದು ತಿಳಿಯುತ್ತದೆ ಎಂದು ಬುಧವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಮಣಿಪುರದಲ್ಲಿ ಜನರು ಬೀದಿಯ ಹೆಣವಾಗುತ್ತಿದ್ದರೂ, ಮಾನವ ಹಕ್ಕು ಮತ್ತು ದೇಶದ ಕಾನೂನು ವ್ಯವಸ್ಥೆ ಮೌನವಾಗಿದೆ. ರಾಷ್ಟ್ರಪತಿಗಳು ತಕ್ಷಣ ಮಧ್ಯಪ್ರವೇಶಿಸಿ ಮಣಿಪುರದಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು. ತಪ್ಪುತಸ್ಥರಿಗೆ ಶಿಕ್ಷೆ ವಿಧಿಸುವ ಜತೆಗೆ, ಪ್ರಾಣ ಕಳೆದುಕೊಂಡವರಿಗೆ ಹಾಗೂ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ


ನೀಡಬೇಕೆಂದು ಆಗ್ರಹಿಸಿದರು.ಪದಾಧಿಕಾರಿಗಳಾದ ವಲರೇಯನ್ ಡಯಾಸ್, ವಾಲ್ಟರ್ ಸೀಕ್ಟೇರ, ವಿಕ್ಟರ್ ಪೈಸ್, ಜೆರೋಮಿಯಾಸ್ ಪೈಸ್, ಕಾನ್ಯೂಟ್ ಮಸ್ಕರೇನಿಯಸ್ ಉಪಸ್ಥಿತರಿದ್ದರು

ಇಂದು (ಆ 11)ದ.ಕ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

Posted by Vidyamaana on 2023-08-11 01:57:38 |

Share: | | | | |


ಇಂದು (ಆ 11)ದ.ಕ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಮಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಆ.11ರಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.

ವಿಮಾನದ ಮೂಲಕ ಅವರು ಆ.11ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಮಧ್ಯಾಹ್ನ 12.30ಕ್ಕೆ ಪುತ್ತೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವರು.


 ಮಧ್ಯಾಹ್ನ 2 ಗಂಟೆಗೆ ಪುತ್ತೂರು ನಿರೀಕ್ಷಣಾ ಮಂದಿರಲ್ಲಿ ವಾಸ್ತವ್ಯ ಮಾಡಿ, ಮಧ್ಯಾಹ್ನ 3 ಗಂಟೆಗೆ ಪುತ್ತೂರು ಸಾರ್ವಜನಿಕ ಆಸ್ಪತ್ರೆ ತಪಾಸಣೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು.


ಸಂಜೆ 6 ಗಂಟೆಗೆ  ದರ್ಭೆಯಲ್ಲಿರುವ ಪುತ್ತೂರು ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿ, ಕಾರ್ಯಕರ್ತರೊಂದಿಗೆ ವಿಚಾರ ವಿನಿಮಯ ಮಾಡುವರು. ರಾತ್ರಿ 8.30ಕ್ಕೆ ಮಂಗಳೂರಿಗೆ ಆಗಮಿಸಿ, 9.50ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರಿಷ್ಠರ ಭೇಟಿಗೆ ವಿಜಯೇಂದ್ರ, ಅಶೋಕ್‌ ಡಿ.1ರಂದು ದೆಹಲಿಗೆ

Posted by Vidyamaana on 2023-11-28 17:08:52 |

Share: | | | | |


ವರಿಷ್ಠರ ಭೇಟಿಗೆ ವಿಜಯೇಂದ್ರ, ಅಶೋಕ್‌ ಡಿ.1ರಂದು ದೆಹಲಿಗೆ

ಬೆಂಗಳೂರು (ನ.28) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಅವರು ಡಿ.1ರಂದು ಶುಕ್ರವಾರ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಸಂಬಂಧ ದೆಹಲಿಗೆ ತೆರಳಲಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಮತ್ತು ಅಶೋಕ್ ಅವರು ಪ್ರತಿಪಕ್ಷದ ನಾಯಕರಾದ ನಂತರ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ ತಿಳಿಸುವುದರ ಜತೆಗೆ ಕೋರ್ ಕಮಿಟಿ ಪುನಾರಚನೆ, ರಾಜ್ಯ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ, ವಿಧಾನಸಭೆಯ ಉಪನಾಯಕ, ಮುಖ್ಯ ಸಚೇತಕ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ, ಉಪನಾಯಕ ಮತ್ತು ಮುಖ್ಯ ಸಚೇತಕ ಹುದ್ದೆಗಳಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ ಎಂದು ಮುೂಲಗಳು ತಿಳಿಸಿವೆ.ಅಲ್ಲದೆ, ಉಭಯ ನಾಯಕರ ನೇಮಕಕ್ಕೆ ಸಂಬಂಧಿಸಿದಂತೆ ಬೃಹತ್ ಸಮಾವೇಶ ಆಯೋಜಿಸುವ ಉದ್ದೇಶವನ್ನು ಹೊಂದಲಾಗಿದೆ. ಹೀಗಾಗಿ, ಈ ಸಮಾವೇಶದ ದಿನಾಂಕ, ರಾಷ್ಟ್ರೀಯ ನಾಯಕರ ಲಭ್ಯತೆ ಆಧರಿಸಿ ಅವರನ್ನು ಆಹ್ವಾನಿಸುವ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.


ಜತೆಗೆ ಪಕ್ಷದ ಸಂಘಟನೆ ಬಲಪಡಿಸುವ ಕುರಿತಂತೆ ಹೋರಾಟಗಳನ್ನು ಹಮ್ಮಿಕೊಳ್ಳುವ ಬಗ್ಗೆ ವರಿಷ್ಠರಿಂದ ಸಲಹೆ- ಸೂಚನೆಗಳನ್ನು ಪಡೆಯಬಹುದು. ಮುಖ್ಯವಾಗಿ ಪಕ್ಷ ತೊರೆಯಲು ಸಜ್ಜಾಗಿರುವ ಕೆಲವು ನಾಯಕರನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿಜಯೇಂದ್ರ ಅವರು ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಂಭ‍ವ ಹೆಚ್ಚಾಗಿದೆ ಎನ್ನಲಾಗಿದೆ.

ತೆಂಗಿನಮರದಿಂದ ಬಿದ್ದು ರಾಮಣ್ಣ ಪೂಜಾರಿ ಮೃತ್ಯು

Posted by Vidyamaana on 2023-09-23 19:29:32 |

Share: | | | | |


ತೆಂಗಿನಮರದಿಂದ ಬಿದ್ದು ರಾಮಣ್ಣ ಪೂಜಾರಿ ಮೃತ್ಯು

ಇರ್ದೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇರ್ದೆ ಗ್ರಾಮದ ಪದರಂಜ ಎಂಬಲ್ಲಿ ನಡೆದಿದೆ.

ಪದರಂಜ ನಿವಾಸಿ ರಾಮಣ್ಣ ಪೂಜಾರಿ ಮೃತಪಟ್ಟ ದುರ್ದೈವಿ.

ಸೆ. 23ರಂದು ಮನೆ ಬಳಿಯ ತೆಂಗಿನ ಮರ ಹತ್ತುವ ಸಂದರ್ಭ ಘಟನೆ ನಡೆದಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ, ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ.

ಮಾರ್ಚ್ 24ರಂದು ಚುನಾವಣಾ ದಿನಾಂಕ ಪ್ರಕಟ ಸಾಧ್ಯತೆ!

Posted by Vidyamaana on 2023-02-21 04:05:24 |

Share: | | | | |


ಮಾರ್ಚ್ 24ರಂದು ಚುನಾವಣಾ ದಿನಾಂಕ ಪ್ರಕಟ ಸಾಧ್ಯತೆ!

ಪುತ್ತೂರು: ವಿಧಾನಸಭಾ ಚುನಾವಣೆಯ ಗುಂಗು ಹೆಚ್ಚುತ್ತಿದ್ದಂತೆ, ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆಯೂ ಬಹುತೇಕ ಸ್ಪಷ್ಟವಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್ 24ರಂದೇ ಚುನಾವಣಾ ದಿನಾಂಕ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಚುನಾವಣೆಗಾಗಿ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿವೆ. ಆಕಾಂಕ್ಷಿ ಅಭ್ಯರ್ಥಿಗಳಂತೂ ಭರ್ಜರಿಯಾಗಿಯೇ ತಯಾರಾಗುತ್ತಿದ್ದಾರೆ. ಇದರ ನಡುವೆ ರಾಜಕೀಯ ಊಹಾಪೋಹಗಳು, ಅಭ್ಯರ್ಥಿಗಳ ಕುರಿತಾದ ಅಂತೆ-ಕಂತೆಗಳ ಸುದ್ದಿಗಳು ಎಗ್ಗಿಲ್ಲದೆ ಹರಿದಾಡುತ್ತಿದೆ. ಇದಕ್ಕೆಲ್ಲಾ ಮಾರ್ಚ್ 24ರ ಹೊತ್ತಿಗೆ ತೆರೆ ಬೀಳಲಿದೆ.

ಒಂದು ವೇಳೆ ಮಾರ್ಚ್ 24ರಂದು ಚುನಾವಣಾ ದಿನಾಂಕ ಪ್ರಕಟವಾದರೆ, ಮುಂದೆ ಅಂತಿಮ ಸಿದ್ಧತೆಗಳಿಗಷ್ಟೇ ಸಮಯ ಮೀಸಲು. ಪ್ರಚಾರದ ಅಂತಿಮ ದಿನ, ನಾಮಪತ್ರ ಸಲ್ಲಿಕೆಯಿಂದ ಹಿಡಿದು, ಚುನಾವಣಾ ಫಲಿತಾಂಶದವರೆಗಿನ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟ ಮಾಡಲಿದೆ. ರಾಜಕೀಯ ಕುರಿತಾಗಿ ಈಗ ಮೂಡಿರುವ ಎಲ್ಲಾ ಪ್ರಶ್ನೆಗಳಿಗೆ, ಕುತೂಹಲಗಳಿಗೆ ಮಾರ್ಚ್ 24ರಂದೇ ತೆರೆಬೀಳುವ ಸಾಧ್ಯಾತೆ ದಟ್ಟವಾಗಿದೆ.



Leave a Comment: