ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಬಿಜೆಪಿಗೆ ಪುತ್ತಿಲ ಪರಿವಾರದ ಬಲ - ಸಕ್ಸಸ್ ಆಯ್ತು ಸಂಧಾನ ಸೂತ್ರ

Posted by Vidyamaana on 2024-02-08 20:03:34 |

Share: | | | | |


ಬಿಜೆಪಿಗೆ ಪುತ್ತಿಲ ಪರಿವಾರದ ಬಲ - ಸಕ್ಸಸ್ ಆಯ್ತು ಸಂಧಾನ ಸೂತ್ರ

ಪುತ್ತೂರು : ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಪುತ್ತೂರಿನಲ್ಲಿ ಕಗ್ಗಂಟಾಗಿ ಪರಿಣಮಿಸಿದ ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ವಿಚಾರ ಬಹುತೇಕ ಸುಖ್ಯಾಂತಗೊಳ್ಳುವತ್ತ ಸಾಗಿದೆ . ರಾಜ್ಯ ಹೈಕಮಾಂಡ್ ಅರುಣ್ ಪುತ್ತಿಲರಿಗೆ ಗೌರವಯುತ ಹುದ್ದೆ ನೀಡಲು ನಿರ್ಧರಿಸಿದೆ ಹಾಗೂ ಈ ಕುರಿತ ಮಾಹಿತಿಯನ್ನು ಅರುಣ್ ಪುತ್ತಿಲರವರಿಗೆ ರವಾನಿಸಿದೆ ಎಂಬ ಸ್ಪೋಟಕ ಮಾಹಿತಿ ಲಭಿಸಿದೆ.


ರಾಜ್ಯ ಬಿಜೆಪಿಯ ವರಿಷ್ಠರಾದ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ , ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆವಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಈ ಕುರಿತು ಅರುಣ್ ಪುತ್ತಿಲ ಜತೆ ಮಾತನಾಡಿದ್ದು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವುದಾಗಿ ತಿಳಿಸಿದ್ದಾರೆ. ಪಕ್ಷದ ಹಿರಿಯರ ಮಾತಿಗೆ ಅರುಣ್ ಪುತ್ತಿಲ ಸಮ್ಮತಿ ಸೂಚಿಸಿರುವುದಾಗಿ ಪುತ್ತಿಲ ಪರಿವಾರದ ಉನ್ನತ ಮೂಲಗಳು ಖಚಿತ ಪಡಿಸಿವೆ.


ಈ ಕುರಿತು ದೂರವಾಣಿ ಮೂಲಕ ವರದಿಗಾರರ ಜತೆ ಮಾತನಾಡಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತರವರು “ ಪುತ್ತಿಲ ಪರಿವಾರ ಹಾಗೂ ಬಿಜೆಪಿಗೆ ಸೇರಿದ ಎಲ್ಲರಿಗೂ ಇಂದಿನ ಬೆಳವಣಿಗೆ ಖುಷಿ ಸಂದಿದೆ. ನಾವು ಹಿಂದೆಯೂ ಬಿಜೆಪಿಯೇ ಆಗಿ ಇದ್ದೇವು . ಮುಂದಿನ ಕೆಲ ದಿನಗಳಲ್ಲಿ ನಾವು ಇನ್ನಷ್ಟು ಸಕ್ರಿಯವಾಗಿ ಬಿಜೆಪಿ ಜತೆ ಗುರುತಿಸಿಕೊಂಡು ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುವ ವಾತವಾರಣ ನಿರ್ಮಾಣವಾಗಲಿದೆ. . ಸದ್ಯದಲ್ಲೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಅರುಣ್ ಪುತ್ತಿಲ ಬೇಟಿಯಾಗಲಿದ್ದಾರೆ.


ಪಕ್ಷ ಸೇರ್ಪಡೆ ಯಾವಗ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಅವರು “ ನಾವು ಬಿಜೆಪಿಯೇ … ಹಾಗಾಗಿ ನಾವು ಮತ್ತೆ ಸೇರ್ಪಡೆಯಾಗುವ ಅಗತ್ಯವಿಲ್ಲ . ಪುತ್ತಿಲ ಪರಿವಾರವನ್ನು ವಿಲೀನಗೊಳಿಸುವುದಷ್ಟೆ ಬಾಕಿ ಇರುವುದು” ಎಂದರು. ಮುಂದುವರಿದು “ ಇಂತಹದೊಂದು ಸುಸಂದರ್ಭ ಕೂಡಿ ಬರಲು ಕಾರಣರಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ , ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆವಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ


ಈ ಕುರಿತ ಮಾಹಿತಿಯನ್ನು ಜಿಲ್ಲಾಧ್ಯಕ್ಷರು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಜೂ.16ರಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ.

Posted by Vidyamaana on 2023-06-13 08:10:31 |

Share: | | | | |


ಜೂ.16ರಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ.

ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡಲು ಜೂ.16ರಿಂದ 22ರ ವರಗೆ ಗೋವಾದ ಶ್ರೀ ರಾಮನಾಥ ದೇವಸ್ಥಾನದಲ್ಲಿ 11ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮುಂದೆ ನಡೆಯುವ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಗೌರವಾನ್ವಿತರ ಸಂದರ್ಶನ ಈ ಬಾರಿಯ ಅಧಿವೇಶನದ ವಿಶೇಷ ಆಕರ್ಷಣೆಯಾಗಲಿದೆ.


ಲವ್ ಜಿಹಾದ್, ಹಲಾಲ್ ಸರ್ಟಿಫೀಕೇಶನ್, ಲ್ಯಾಂಡ್ ಜಿಹಾದ್, ಕಾಶಿ-ಮಥುರಾ ಮುಕ್ತಿ, ಮತಾಂತರ, ಗೋಹತ್ಯೆ, ಕೋಟೆ ದೇವಸ್ಥಾನಗಳ ಮೇಲಿನ ಇಸ್ಲಾಮಿ ಅತಿಕ್ರಮಣ, ದೇವಸ್ಥಾನ ಸಂಸ್ಕೃತಿಯ ರಕ್ಷಣೆ, ಕಾಶ್ಮೀರಿ ಹಿಂದೂ ಪುನರ್ವಸತಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲೆ ವಿಚಾರ ವಿನಿಮಯ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅಧಿವೇಶನದಲ್ಲಿ ಅಮೆರಿಕ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಡ್, ಸಿಂಗಾಪುರ ಹಾಗೂ ಭಾರತದ 28 ರಾಜ್ಯದಲ್ಲಿನ 350ಕ್ಕೂ ಅಧಿಕ ಹಿಂದೂ ಸಂಘಟನೆಗಳ 1500ಕ್ಕಿಂತ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕರ್ನಾಟಕದಿಂದ ಚಕ್ರವರ್ತಿ ಸೂಲಿಬೆಲೆ, ಹಿಂದೂ ನಾಯಕರಾದ ಅರುಣ್ ಪುತ್ತಿಲ, ಡಾ.ಎಸ್.ಆರ್. ಲೀಲಾ, ಅಡ್ಡಂಡ ಕಾರ್ಯಪ್ಪ ರುಕ್ಮಿಣಿ ವಲ್ಲಭ ಪೀಠದ ಜಗದ ಧರ್ಮಾಚಾರ್ಯ ಜನಾರ್ದನ ಮಹಾರಾಜ್ ಮೇಟೆ ಸೇರಿದಂತೆ ರಾಜ್ಯ 250ಕ್ಕೂ ಅಧಿಕ ಹಿಂದುತ್ವವಾದಿ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ವಿಧಿಜ್ಞ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷ ಅಮೃತೇಶ್ ಎನ್.ಪಿ, ಹಿಂದೂ ಜೈ ಭೀಮ್ ಸಂಘಟನೆ ಅಧ್ಯಕ್ಷ ಚಂದ್ರಶೇಖರ್, ಅಯ್ಯಪ್ಪ ಸೇವಾ ಸಮಾಜಮ್ ಕರ್ನಾಟಕ ಅಧ್ಯಕ್ಷ ಎನ್.ಜಯರಾಮ, ರಾಮಾನುಜ ಪೀಠಂ, ಉದ್ಯಮಿ ಜಯರಾಮ ಎಸ್.ಉಪಸ್ಥಿತರಿದ್ದರು.

ಸಂಸತ್ತಿನಲ್ಲಿ ಭದ್ರತಾ ವೈಫಲ್ಯ: ಮಾಸ್ಟರ್​ ಮೈಂಡ್​ ಲಲಿತ್​ ಝಾ ಬಂಧನ

Posted by Vidyamaana on 2023-12-15 15:05:13 |

Share: | | | | |


ಸಂಸತ್ತಿನಲ್ಲಿ ಭದ್ರತಾ ವೈಫಲ್ಯ: ಮಾಸ್ಟರ್​ ಮೈಂಡ್​ ಲಲಿತ್​ ಝಾ ಬಂಧನ

ನವದೆಹಲಿ: ಸಂಸತ್ತಿನ ಭದ್ರತೆಯಲ್ಲಿ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್​ ಮೈಂಡ್​ ಲಲಿತ್​ ಝಾರನ್ನು ಪೊಲೀಸರು ಬಂಧಿಸಿದ್ದಾರೆ.

ಗುರುವಾರ ತಡರಾತ್ರಿ ಝಾ ಪೊಲೀಸರಿಗೆ ಶರಣಾಗಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದರು. ಬುಧವಾರ ಮಧ್ಯಾಹ್ನ ಲೋಕಸಭೆಯ ಶೂನ್ಯ ವೇಳೆಯಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಸ್ಮೋಕ್​ ಬಾಂಬ್​ ಎಸೆದಿದ್ದರು, ಇದರಿಂದ ಇಡೀ ಸದನವೇ ದಟ್ಟ ಹೊಗೆಯಿಂದ ಕೂಡಿತ್ತು. ಸಾಗರ್​ ಹಾಗೂ ಮನೋರಂಜನ್ ಎಂಬುವವರನ್ನು ತಕ್ಷಣವೇ ಬಂಧಿಸಲಾಗಿತ್ತು.

ಹಳ್ಳಿಗಳಲ್ಲೂ ಕಾಡಿದ ಹುಲಿ ಉಗುರು

Posted by Vidyamaana on 2023-10-26 20:21:57 |

Share: | | | | |


ಹಳ್ಳಿಗಳಲ್ಲೂ ಕಾಡಿದ ಹುಲಿ ಉಗುರು

ಸುಳ್ಯ :ಅ.25: ಸೆಲೆಬ್ರಿಟಿಗಳನ್ನು ಕಾಡುತ್ತಿರುವ ಹುಲಿ ಉಗುರು ಪ್ರಕರಣ ಈಗ ಹಳ್ಳಿಗಳಲ್ಲೂ ಸದ್ದು ಮಾಡತೊಡಗಿದೆ. ಸುಳ್ಯದ ನಗರ ಪಂಚಾಯತ್ ಉದ್ಯೋಗಿ ಮಹಿಳೆಯ ಕೊರಳಲ್ಲಿ ಹುಲಿ ಉಗುರು ಮಾದರಿ ಇದ್ದ ಫೋಟೊಗಳು ವೈರಲ್ ಆಗಿದ್ದು ಅರಣ್ಯಾಧಿಕಾರಿಗಳು ತನಿಖೆ ನಡೆಸಿದ್ದಾರೆ. 


ಸುಳ್ಯ ನಗರ ಪಂಚಾಯತ್ ಸಿಬ್ಬಂದಿ ತೆಗೆಸಿಕೊಂಡಿದ್ದ ಪೋಟೋ ಒಂದರಲ್ಲಿ ಅಲ್ಲಿನ ಉದ್ಯೋಗಿಯ ಕೊರಳಿನಲ್ಲಿ ಹುಲಿ ಉಗುರನ್ನು ಹೋಲುವ ಲಾಕೆಟ್ ಇತ್ತು. ಇದರ ಪೋಟೊ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸುಳ್ಯ ಅರಣ್ಯ ಇಲಾಖೆಯವರು ಸುಳ್ಯ ನಗರ ಪಂಚಾಯತ್ ಸಿಬ್ಬಂದಿ   ಅವರನ್ನು ಸಂಪರ್ಕಿಸಿ ಕಚೇರಿಗೆ ಬರುವಂತೆ ಸೂಚಿಸಿದ್ದರು.  ಆ ಲಾಕೆಟ್‌ ನೊಂದಿಗೆ ಸಿಬ್ಬಂದಿ ವಲಯಾರಣ್ಯಾಧಿಕಾರಿಗಳ ಕಚೇರಿಗೆ ತೆರಳಿ ಅದನ್ನು ಅಲ್ಲಿ ಒಪ್ಪಿಸಿದ್ದಾರೆ. 


ಇದು ಅಸಲಿ ಹುಲಿ ಉಗುರಿನ ಲಾಕೆಟ್ ಅಲ್ಲ. ಮಾರಾಟ ಮಾಡಲು ಬಂದವರಿಂದ ನನ್ನ ತಾಯಿ ಖರೀದಿಸಿ, ಧರಿಸುತ್ತಿದ್ದರು. ನಾನು ಕೂಡಾ ಅನೇಕ ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ಫೋಟೋ ವೈರಲ್ ಆಗಿದ್ದರಿಂದ ಅರಣ್ಯ ಇಲಾಖೆಯವರು ಫೋನ್ ಮಾಡಿದಾಗ ಲಾಕೆಟ್ ಕೊಟ್ಟು ಬಂದಿದ್ದೇನೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ  ಹುಲಿ ಉಗುರು ಧರಿಸಿರುವ ಪೋಟೋ ವೈರಲ್ ಆಗಿರುವುದರಿಂದ ತನಿಖೆ ನಡೆಸಿದ್ದೇವೆ. ಲಾಕೆಟನ್ನು ಪಡೆದಿದ್ದು, ಲ್ಯಾಬ್ ನಲ್ಲಿ ಪರೀಕ್ಷೆ ನಡೆಸುತ್ತೇವೆ. ಒರಿಜಿನಲ್ ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನ ಪೋಸ್ಟ್ , ಬೆಳ್ತಂಗಡಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲು

Posted by Vidyamaana on 2023-10-27 16:43:17 |

Share: | | | | |


ಮುಖ್ಯಮಂತ್ರಿ  ಸಿದ್ದರಾಮಯ್ಯ ಬಗ್ಗೆ ಅವಹೇಳನ ಪೋಸ್ಟ್ , ಬೆಳ್ತಂಗಡಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲು

ಮಂಗಳೂರು, ಅ.27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 


"ಕಲೆಕ್ಷನ್ ಮಾಸ್ಟರ್ (ಸಿಎಂ) ಆಫ್ ಕರ್ನಾಟಕ" ಎಂದು ಬರೆದು ಸಿಎಂ ಸಿದ್ದರಾಮಯ್ಯ ಮತ್ತು ಬೆಂಗಳೂರಿನ ಸಿಎಂ ನಿವಾಸದ ಫೋಟೊ ಪೋಸ್ಟ್ ಮಾಡಿದ್ದ ಹರೀಶ್ ಪೂಂಜ ವಿರುದ್ಧ ಕಾಂಗ್ರೆಸ್ ಮುಖಂಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ರಾಜ್ಯದ ಮುಖ್ಯಮಂತ್ರಿ ಅವರನ್ನು ಅವಹೇಳನ ಮಾಡಿದ್ದಾಗಿ ದೂರು ನೀಡಿದ್ದು ಇದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 


ಇತ್ತೀಚೆಗೆ ಅರಣ್ಯ ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ ವಿಚಾರದಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಒಂದು ವಾರದ ಅಂತರದಲ್ಲಿ ಮತ್ತೊಂದು ಎಫ್ಐಆರ್ ಆಗಿದೆ.‌

ಪುತ್ತೂರು : ಫಿಕ್ಸಲ್ ಕ್ರಿಯೇಟಿವ್ಸ್ ಸಂಸ್ಥೆಯ ಪಾಲುದಾರ ಪ್ರಶಾಂತ್ ಪಲ್ಲತ್ತಡ್ಕ ನಿಧನ

Posted by Vidyamaana on 2023-10-31 07:45:34 |

Share: | | | | |


ಪುತ್ತೂರು : ಫಿಕ್ಸಲ್ ಕ್ರಿಯೇಟಿವ್ಸ್ ಸಂಸ್ಥೆಯ ಪಾಲುದಾರ ಪ್ರಶಾಂತ್ ಪಲ್ಲತ್ತಡ್ಕ ನಿಧನ

ಪುತ್ತೂರು : Pixel Creatives ಸಂಸ್ಥೆಯ ಸಹ ಮಾಲಕರಾದ ಪ್ರಶಾಂತ್ ಪಲ್ಲತ್ತಡ್ಕ (32) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.



ಸಮಾರಂಭಗಳಿಗೆ ಎಲ್ಇಡಿಗಳನ್ನು ಅಳವಡಿಸುವ Pixel Creatives ಮೂಲಕ ಖ್ಯಾತರಾಗಿದ್ದ ಪ್ರಶಾಂತ್ ರವರು ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು.


ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಪುತ್ತೂರು, ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸಮಾರಂಭಕ್ಕೆ ಎಲ್ಇಡಿ ಹಾಗೂ ನೇರಪ್ರಸಾರಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುವ ಖ್ಯಾತ ಸಂಸ್ಥೆ ಇದಾಗಿದೆ.


ಮೃತರು ಪತ್ನಿ, ತಂದೆ ತಾಯಿ ಅಕ್ಕಂದಿರು, ಸಿಬ್ಬಂದಿ ವರ್ಗ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ



Leave a Comment: