ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಅಮೆರಿಕ ಅಧ್ಯಕ್ಷರ ಐಫೋನ್‌ ಬಗ್ಗೆ ನಿಮಗೆಷ್ಟು ತಿಳಿದಿದೆ? ಹಿಂಬದಿಯ ಸೀಲ್‌ನಲ್ಲಿದೆ ರೋಚಕ ರಹಸ್ಯ

Posted by Vidyamaana on 2023-09-08 11:12:06 |

Share: | | | | |


ಅಮೆರಿಕ ಅಧ್ಯಕ್ಷರ ಐಫೋನ್‌ ಬಗ್ಗೆ ನಿಮಗೆಷ್ಟು ತಿಳಿದಿದೆ? ಹಿಂಬದಿಯ ಸೀಲ್‌ನಲ್ಲಿದೆ ರೋಚಕ ರಹಸ್ಯ

  ಭಾರತದ ನವದೆಹಲಿಯಲ್ಲಿ ಸೆಪ್ಟೆಂಬರ್ 9-10 ರವರೆಗೆ G20 ಶೃಂಗಸಭೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವುದಕ್ಕೆ ವಿಶ್ವ ನಾಯಕರೆಲ್ಲಾ ನವದೆಹಲಿಗೆ ಬರುತ್ತಿದ್ದಾರೆ. ಇದಕ್ಕೆ ಅಮೆರಿಕದ ಅಧ್ಯಕ್ಷ ಜೋ ಬಿಡನ್‌ ಕೂಡ ಬರಲಿದ್ದು, ಭಾರತದಲ್ಲಿ ಮೂರು ದಿನಗಳ ಕಾಲ ಪ್ರಮುಖ ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.ಹೌದು, ಅಮೆರಿಕದ ಅಧ್ಯಕ್ಷ ಜೋ ಬಿಡನ್‌ G20 ಶೃಂಗ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬರುತ್ತಿದ್ದಾರೆ. ಇದೇ ಸಮಯದಲ್ಲಿ ಜೋ ಬಿಡನ್‌ ಅವರ ವಿಶೇಷ ಐಫೋನ್‌ ಬಗ್ಗೆ ಕುತೂಹಲಕರ ಮಾಹಿತಿ ಹೊರಬಿದ್ದಿದೆ.

ಅಮೆರಿಕ ಅಧ್ಯಕ್ಷರ ಐಫೋನ್‌ ಹೇಗಿದೆ? ಅದರ ವಿವರಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.


ಅಮೆರಿಕ ಅಧ್ಯಕ್ಷರ ವಿಶೇಷ ಐಫೋನ್ ವಿವರ ಇಲ್ಲಿದೆ


ಅಮೆರಿಕ ಅಧ್ಯಕ್ಷರ ಐಫೋನ್‌ ಸಾಕಷ್ಟು ವಿಶೇಷವಾಗಿದೆ. ಅಮರಿಕ ಅಧ್ಯಕ್ಷರ ಫೋನ್‌ ವಿಚಾರದಲ್ಲಿಯೂ ಕೂಡ ಸಾಕಷ್ಟು ಸುರಕ್ಷತೆಗೆ ಅಧ್ಯತೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ವಿಶ್ವ ನಾಯಕರೊಂದಿಗಿನ ಪ್ರಮುಖ ಕರೆಗಳನ್ನು ಸುರಕ್ಷಿತವಾಗಿ ಮಾಡಲಾಗುತ್ತದೆ. ಇದರಿಂದ ಕರೆಯ ಇನ್ನೊಂದು ತುದಿಯಲ್ಲಿ ಯಾರಿದ್ದಾರೆ ಎಂಬುದರ ಬಗ್ಗೆ ಯಾರಿಗೂ ಕೂಡ ಮಾಹಿತಿ ಇರುವುದಿಲ್ಲ. ಸದ್ಯ ಅಮೆರಿಕ ಅಧ್ಯಕ್ಷರ ಐಫೋನ್‌ ಹಿಂಭಾಗದಲ್ಲಿ ವಿಶೇಷ ಚಿನ್ನದ ಅಧ್ಯಕ್ಷೀಯ ಮುದ್ರೆಯಿದೆ. ಈ ಸೀಲ್‌ನಲ್ಲಿ ಸೀಲ್ ಆಫ್ ದಿ ಪ್ರೆಸಿಡೆಂಟ್ ಆಫ್ ಅಮೇರಿಕಾ ಎಂದು ಬರೆಯಲಾಗಿದೆ.


ಈ ಸೀಲ್‌ ಅನ್ನು ಕೇವಲ ಲುಕ್‌ಗಾಗಿ ಅಳವಡಿಸಿರಬಹುದು. ಆದರೆ ನಿರ್ದಿಷ್ಟ ಡಿವೈಸ್‌ POTUS ಬಳಸುವ ಅಗತ್ಯ ಭದ್ರತಾ ಮಾನದಂಡಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಏಕೆಂದರೆ ಡೌಗ್ ಎಂಹಾಫ್, ಉಪಾಧ್ಯಕ್ಷ (ವಿಪಿ) ಹ್ಯಾರಿಸ್ ಅವರ ಪತಿ ಭದ್ರತಾ ಕಾರಣಗಳಿಂದಾಗಿ ಅವನ ಹೆಂಡತಿಗೆ ಕೂಡ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುತ್ತದೆ ಎಂದು ಹೇಳಲಾಗಿದೆ. ಅಂದರೆ ಸರ್ಕಾರವು ಸಂವಹನವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಭಾರತಕ್ಕೆ ಬಂದಿಳಿದ ಅಮೆರಿಕ ಅಧ್ಯಕ್ಷರ ಕಾರು

ಭಾರತದಲ್ಲಿ ನಡೆಯುತ್ತಿರುವ G20 ಶೃಂಗಸಭೆಗೆ ಅಮೆರಿಕ ಅಧ್ಯಕ ಜೋ ಬಿಡೆನ್‌ ಶುಕ್ರವಾರ ಆಗಮಿಸುತ್ತಿದ್ದಾರೆ. ಆದರೆ ಅಮೆರಿಕ ಅಧ್ಯಕರು ಬಳಸುವ ಕಾರು ಬೀಸ್ಟ್ ಭಾರತಕ್ಕೆ ಎಂಟ್ರಿ ನೀಡಿದೆ. ಇದು ಯುಎಸ್ ಅಧ್ಯಕ್ಷರಅಧಿಕೃತ ಕಾರಾಗಿದ್ದು, US ನಿಂದ ಭಾರತಕ್ಕೆ ಬೋಯಿಂಗ್ C-17 Globemaster III ಎಂಬ ಮಿಲಿಟರಿ ಸಾರಿಗೆ ವಿಮಾನದಲ್ಲಿ ಬಂದಿದೆ.


ಇನ್ನು ಜೋ ಬಿಡೆನ್ ಅವರ ದೆಹಲಿ ಭೇಟಿಗೆ ಮೂರು ಹಂತದ ಭದ್ರತೆಯನ್ನು ಏರ್ಪಡಿಸಲಾಗಿದೆ. ಮೊದಲನೆಯದ್ದು ಹೊರಗೆ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೆ, ಎರಡು ಭಾರತದ ವಿಶೇಷ ರಕ್ಷಣಾ ಗುಂಪಿನ ಕಮಾಂಡೋಗಳನ್ನು ಮತ್ತು ಮೂರು ಒಳಗೆ ರಹಸ್ಯ ಸೇವಾ ಏಜೆಂಟ್‌ಗಳ ಭದ್ರತೆಯನ್ನು ಹೊಂದಿರುತ್ತಾರೆ

ಐನಾಝ್ ಮತ್ತು ಅಫ್ನಾನ್ ನೆಲೆಸಿದ್ದ ಬಾಡಿಗೆ ಮನೆಯಲ್ಲಿ ಸಿಕ್ಕ ವಸ್ತುಗಳನ್ನು ನೋಡಿ ಕಣ್ಣೀರಿಟ್ಟಿ ತಂದೆ

Posted by Vidyamaana on 2023-11-27 04:29:57 |

Share: | | | | |


ಐನಾಝ್ ಮತ್ತು ಅಫ್ನಾನ್ ನೆಲೆಸಿದ್ದ ಬಾಡಿಗೆ ಮನೆಯಲ್ಲಿ ಸಿಕ್ಕ ವಸ್ತುಗಳನ್ನು ನೋಡಿ ಕಣ್ಣೀರಿಟ್ಟಿ ತಂದೆ

ಮಂಗಳೂರು, ನ.26: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಗೈದ ಪ್ರಕರಣದಲ್ಲಿ ಪತ್ನಿ, ಮಕ್ಕಳನ್ನು ಕಳಕೊಂಡ ನೂರ್ ಮಹಮ್ಮದ್ ಮಂಗಳೂರಿನಲ್ಲಿ ಮಕ್ಕಳಾದ ಐನಾಝ್ ಮತ್ತು ಅಫ್ನಾನ್ ನೆಲೆಸಿದ್ದ ಬಾಡಿಗೆ ಮನೆಗೆ ಆಗಮಿಸಿದ್ದು, ಮನೆಯಲ್ಲಿ ಸಿಕ್ಕ ವಸ್ತುಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ. 


ಮಕ್ಕಳಿಬ್ಬರೂ ಒಂದೇ ಕೊಠಡಿಯಲ್ಲಿ ನೆಲೆಸಿದ್ದರು. ತಾವೇ ಅಡುಗೆಯನ್ನೂ ಮಾಡಿಕೊಳ್ಳುತ್ತಿದ್ದರು. ಆರಂಭದಲ್ಲಿ ಬಾಡಿಗೆ ಮನೆ ಹುಡುಕಿಕೊಡಲು ಪ್ರವೀಣ್ ಚೌಗುಲೆ ನೆರವಾಗಿದ್ದ. ಈ ಬಗ್ಗೆ ಮನೆ ಮಾಲೀಕರ ಜೊತೆಗೂ ಮಾತನಾಡಿದ್ದು, ಮನೆ ತೋರಿಸುವುದಕ್ಕೆ ಮಾತ್ರ ಪ್ರವೀಣ್ ಇಲ್ಲಿಗೆ ಬಂದಿದ್ದ ಎಂದು ಹೇಳಿದ್ದಾರೆ. ಈ ನಡುವೆ, ಪ್ರವೀಣ ಚೌಗುಲೆ ಹೊಸತಾಗಿ ಕಾರು ಖರೀದಿಸಿದ್ದು ತನ್ನಲ್ಲಿದ್ದ ಸ್ಕೂಟರನ್ನು ಐನಾಝ್ ಗೆ ನೀಡಿದ್ದ. ಇದನ್ನು ಐನಾಝ್ ಕೂಡ ತನಗೆ ಮಾಹಿತಿ ನೀಡಿದ್ದಳು. ಸ್ಕೂಟರಿಗೆ 28 ಸಾವಿರ ರೂಪಾಯಿ ನೀಡಿದ್ದೇನೆ ಎಂದು ತಿಳಿಸಿದ್ದಳು. 


ಮನೆಯ ಹೊರಗಡೆ ಆ ಸ್ಕೂಟರ್ ಹಾಗೇ ಇದೆ. ಮನೆಯಲ್ಲಿ ಮಕ್ಕಳಿಬ್ಬರ ವಸ್ತುಗಳನ್ನು ನೋಡಿ ದುಃಖ ಉಕ್ಕಿ ಬಂದಿದೆ. ಹೆತ್ತವರು ಮುಸ್ಸಂಜೆಯಲ್ಲಿರುವಾಗ ಯೌವನಕ್ಕೆ ಬಂದ ಮಕ್ಕಳು ಈ ರೀತಿ ಕೊಲೆಯಾಗುತ್ತಾರೆಂದು ಯಾರೂ ಅಂದುಕೊಳ್ಳಲ್ಲ. ಮನೆಯಲ್ಲಿ ಐರನ್ ಬಾಕ್ಸ್, ಬಟ್ಟೆಗಳು, ಇದರ ನಡುವೆ ಖುರಾನ್ ಪುಸ್ತಕವೂ ಸಿಕ್ಕಿದೆ. ನನ್ನ ಹೆಣ್ಮಕ್ಕಳಿಬ್ಬರು ಇಸ್ಲಾಂ ಧರ್ಮದ ಚೌಕಟ್ಟಿನಲ್ಲಿ ಬದುಕುತ್ತಿದ್ದರು ಎಂದು ನೂರ್ ಮಹಮ್ಮದ್ ಹೇಳಿದ್ದಾರೆ. 


ಉದ್ಯೋಗದಲ್ಲಿ ಸೀನಿಯರ್ ಆಗಿದ್ದರಿಂದ ಪ್ರವೀಣ್ ಚೌಗುಲೆಗೆ ಮಂಗಳೂರಿನಲ್ಲಿ ಪರಿಚಯ ಇದ್ದುದರಿಂದ ಬಾಡಿಗೆ ಮನೆ ಪಡೆಯುವಾಗ ಆತನ ನೆರವು ಕೇಳಿದ್ದಳು. ಈ ಬಗ್ಗೆ ತನ್ನಲ್ಲಿಯೂ ಐನಾಝ್ ಹೇಳಿಕೊಂಡಿದ್ದಳು. ಮನೆಯನ್ನೂ ನೋಡುವುದಕ್ಕೆ ನಾನು ಈ ಹಿಂದೆ ಬಂದಿದ್ದೆ. ಮನೆಯಲ್ಲಿ ಅಡುಗೆ ಇನ್ನಿತರ ಎಲ್ಲದಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದರು. ಇಬ್ಬರೂ ಸೇರಿಕೊಂಡು ಮನೆ ನಡೆಸುತ್ತಿದ್ದರು. ಮನೆಯಲ್ಲಿ ಬುರ್ಖಾ, ಇನ್ನಿತರ ಎಲ್ಲ ಬಟ್ಟೆ ಬರೆಗಳೂ ಇವೆ ಎಂದು ಎಲ್ಲವನ್ನೂ ನೋಡುತ್ತಲೇ ಕಣ್ಣೀರು ಹಾಕಿದ್ದಾರೆ. ಆರೋಪಿ ಪ್ರವೀಣ್ ಚೌಗುಲೆಯನ್ನು ಬಂಧಿಸಿ ಜೈಲಿಗಟ್ಟಿದ ಬಳಿಕ ಮೊದಲ ಬಾರಿಗೆ ನೂರ್ ಮಹಮ್ಮದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಚಕ್ರವರ್ತಿ ಸೂಲಿಬೆಲೆಯವರ ನಮೋ ಬ್ರಿಗೇಡ್ ಮುಕ್ತಾಯ.. ಕಾರಣ ಏನು..?

Posted by Vidyamaana on 2024-05-08 22:30:53 |

Share: | | | | |


ಚಕ್ರವರ್ತಿ ಸೂಲಿಬೆಲೆಯವರ ನಮೋ ಬ್ರಿಗೇಡ್ ಮುಕ್ತಾಯ.. ಕಾರಣ ಏನು..?

ಚಕ್ರವರ್ತಿ ಸೂಲಿಬೆಲೆಯ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಮೋ ಬ್ರಿಗೇಡ್ ಮುಕ್ತಾಯ ಮಾಡಲು ನಿರ್ಧರಿಸಲಾಗಿದೆ. ನಮೋಬ್ರಿಗೇಡ್ 2.O ಇಷ್ಟು ದಿನ ಮೋದಿ ಪ್ರಧಾನಿಯಾಗಲು ಏನೇನು ಪ್ರಯತ್ನ ಮಾಡಬಹುದೋ, ಆ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ರಾಜಕೀಯಕ್ಕಾಗಿ ಅಷ್ಟೇ ಬ್ರಿಗೇಡ್ ನಡೆಸಲು ಇಷ್ಟವಿಲ್ಲವೆಂದು, ಚುನಾವಣೆ ಮುಗಿದ ಬಳಿಕವೇ, ನಮೋ ಬ್ರಿಗೇಡ್ ಮುಕ್ತಾಯ ಮಾಡಲು ನಿರ್ಧರಿಸಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಶ್ರೀ ಅನಂತಪುರದಲ್ಲಿ ಪೂರ್ಣ ದರ್ಶನ ತೋರಿದ ಬಬಿಯಾ

Posted by Vidyamaana on 2024-06-16 08:13:42 |

Share: | | | | |


ಶ್ರೀ ಅನಂತಪುರದಲ್ಲಿ ಪೂರ್ಣ ದರ್ಶನ ತೋರಿದ ಬಬಿಯಾ

ಕುಂಬಳೆ : ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಶ್ರೀ ಅನಂತಪುರದಲ್ಲಿ ತಿಂಗಳುಗಳ ಹಿಂದೆ ಪ್ರತ್ಯಕ್ಷಗೊಂಡ ನೂತನ ಮೊಸಳೆ ಮರಿ (ಬಬಿಯಾ – 3) ಇದೇ ಮೊದಲ ಬಾರಿಗೆ ಶುಕ್ರವಾರ ಸಂಜೆ ಕ್ಷೇತ್ರ ಪ್ರಾಂಗಣ ಏರುವ ಮೂಲಕ ತನ್ನ ಪೂರ್ಣ ದರ್ಶನ ತೋರಿದೆ.

ಸುಮಾರು 80 ವರ್ಷಗಳಿಂದ ಕ್ಷೇತ್ರದ ಕೊಳದಲ್ಲಿ ನೆಲೆಸಿದ್ದ ಮೊಸಳೆಯು 2022ರ ಅಕ್ಟೋಬರ್‌ 9ರಂದು ರಾತ್ರಿ ಈ ಹಿಂದೆ ಇದ್ದ ಮೊಸಳೆ (ಬಬಿಯಾ) ಮೃತಪಟ್ಟಿತ್ತು

ಪುತ್ತೂರು ಮುಸ್ಲಿಂ ಯುವಕನ ಮೇಲೆ ಹಲ್ಲೆ ಕಠಿಣ ಕ್ರಮಕ್ಕೆ -ಎಸ್‌ಡಿಪಿಐ ಒತ್ತಾಯ

Posted by Vidyamaana on 2023-05-03 23:14:26 |

Share: | | | | |


ಪುತ್ತೂರು  ಮುಸ್ಲಿಂ ಯುವಕನ ಮೇಲೆ ಹಲ್ಲೆ  ಕಠಿಣ ಕ್ರಮಕ್ಕೆ -ಎಸ್‌ಡಿಪಿಐ ಒತ್ತಾಯ

ಪುತ್ತೂರು: ಸಹಪಾಠಿ ವಿಧ್ಯಾರ್ಥಿನಿಯೊಂದಿಗೆ ಮಾತನಾಡಿದ ಎಂಬ ಕ್ಷುಲ್ಲಕ ಕಾರಣವಿಟ್ಟು ಮಹಮ್ಮದ್ ಫಾರಿಸ್ ಎಂಬ ಮುಸ್ಲಿಂ ಯುವಕನ ಮೇಲೆ ಸಂಘಪರಿವಾರದ ಕಾರ್ಯಕರ್ತರು ಪಂಚವಟಿ ಎಂಬಲ್ಲಿಗೆ ಬಲವಂತವಾಗಿ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ  ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಚುನಾವಣೆಗೆ ಇನ್ನೇನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇರುವ ಸಮಯದಲ್ಲಿ ಪುತ್ತೂರು ತಾಲ್ಲೂಕಿನಲ್ಲಿ ಸಂಘಪರಿವಾರ ಕೋಮು ಗಲಭೆ ನಡೆಸಿ ರಾಜಕೀಯ ದುರ್ಲಾಭವನ್ನು ಪಡೆಯಲು ಯತ್ನಿಸುತ್ತಿದೆ.ಅದರ  ಭಾಗವಾಗಿ ಮುಸ್ಲಿಂ ವಿಧ್ಯಾರ್ಥಿಯ ಮೇಲೆ ಸಹಪಾಠಿನಿಯೊಂದಿಗೆ ಮಾತನಾಡಿದ ಎಂಬ ಕ್ಷುಲ್ಲಕ ಕಾರಣ ಇಟ್ಟುಕೊಂಡು ಸಂಘಪರಿವಾರದ ಕಾರ್ಯಕರ್ತರಿಗೆ ಕೋಮು ವಿಷ ಬೀಜ ಬಿತ್ತುವ ಕೇಂದ್ರವಾದ ಪಂಚವಟಿ ಎಂಬಲ್ಲಿಗೆ ಬಲವಂತವಾಗಿ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿ ಕೊಲೆಗೆ ಯತ್ನ ನಡೆಸಲಾಗಿದೆ.

ಪುತ್ತೂರಿನಲ್ಲಿ ಬಿಜೆಪಿ ಒಡೆದ ಮನೆಯಂತಾಗಿ ಸೋಲು ಗ್ಯಾರಂಟಿ ಎಂಬಂತಾಗಿದೆ,ಹಾಗಾಗಿ ತಾಲ್ಲೂಕಿನಲ್ಲಿ ಇಂತಹ ದುಷ್ಕೃತ್ಯ ನಡೆಸಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಮತ ಪಡೆಯುವ ಹುನ್ನಾರವಾಗಿದೆ.

ಕೆಲವು ವರ್ಷಗಳ ಹಿಂದೆ ಎಬಿವಿಪಿ ಕಾರ್ಯಕರ್ತರು ಹಿಂದು ವಿಧ್ಯಾರ್ಥಿನಿಯೋರ್ವಳನ್ನು ಅತ್ಯಾಚಾರ ನಡೆಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಾಗ ಸುಮ್ಮನಾಗಿದ್ದಾವರು ಇಂದು ಅನ್ಯ ಧರ್ಮದ ಸಹಪಾಠಿ ವಿಧ್ಯಾರ್ಥಿನಿಯೊಂದಿಗೆ ಮಾತನಾಡಿದ ಎಂಬ ಕಾರಣಕ್ಕಾಗಿ ಗೂಂಡಾಗಿರಿ ನಡೆಸುವುದಾದರೆ ಇದರ ಒಳಗುಟ್ಟು ಪುತ್ತೂರಿನ ಜನತೆಗೆ ಅರ್ಥವಾಗದ ವಿಚಾರವಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಹಾಗಾಗಿ ವಿಧ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಂಡು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಉಪ್ಪಿನಂಗಡಿ; ವಿದ್ಯಾರ್ಥಿಯನ್ನು ಕೂಡಿ ಹಾಕಿ ಹಲ್ಲೆ ದೂರು ದಾಖಲು

Posted by Vidyamaana on 2023-10-08 08:27:42 |

Share: | | | | |


ಉಪ್ಪಿನಂಗಡಿ; ವಿದ್ಯಾರ್ಥಿಯನ್ನು ಕೂಡಿ ಹಾಕಿ ಹಲ್ಲೆ ದೂರು ದಾಖಲು

ಉಪ್ಪಿನಂಗಡಿ: ವಿದ್ಯಾರ್ಥಿಯನ್ನು ಕೂಡಿ ಹಾಕಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ನೆಲ್ಯಾಡಿಯ ಮದ್ರಸವೊಂದರ ವಿದ್ಯಾರ್ಥಿ ಜಿ.ಎಚ್. ಮುಹಮ್ಮದ್ ಸುಹೈಲ್(19) ಮೇಲೆ ಸೆಪ್ಟೆಂಬರ್ 28 ರಂದು ಉಮ್ಮರಬ್ಬ (65), ಉಸ್ಮಾನ್ (25), ಅಬ್ದುಲ್ಲಾ (35), ರಫೀಕ್(35), ಶಕೀರ್(35), ಶಕಿಲ್(30) ಎಂಬವರು ನೆಲ್ಯಾಡಿ ಮಸೀದಿಯ ಮದ್ರಸ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆಂದೂ, ಹಲ್ಲೆಗೊಳಗಾದವ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿರುವೆನೆಂದು ಆರೋಪಿಸಿ ಪುತ್ತೂರು ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು.


ಈ ಬಗ್ಗೆ ನ್ಯಾಯಾಲಯವು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವಂತೆ ಉಪ್ಪಿನಂಗಡಿ ಪೊಲೀಸರಿಗೆ ನಿರ್ದೇಶನವನ್ನು ನೀಡಿತ್ತು. ಅದರಂತೆ ಶನಿವಾರ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



Leave a Comment: