ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಉತ್ತರಕರ್ನಾಟಕ ಭಾಗದ SSLC ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು : MLC ಅಭ್ಯರ್ಥಿ ಭೋಜೇಗೌಡ ಆರೋಪ

Posted by Vidyamaana on 2024-05-19 17:56:29 |

Share: | | | | |


ಉತ್ತರಕರ್ನಾಟಕ ಭಾಗದ SSLC ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು : MLC ಅಭ್ಯರ್ಥಿ ಭೋಜೇಗೌಡ ಆರೋಪ

ಮಂಗಳೂರು : ಪ್ರತಿವರ್ಷ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕದ ಭಾಗದ ಎಲ್ಲಾ ವಿದ್ಯಾರ್ಥಿಗಳು ಮಾಸ್ ಕಾಪಿ ಮಾಡುತ್ತಿದ್ದರು ಎಂದು ಎಂಎಲ್ಸಿ ಬೋಜೆ ಗೌಡ ಗಂಭೀರವಾದಂತ ಆರೋಪವನ್ನು ಮಾಡಿದ್ದಾರೆ.ಮಂಗಳೂರಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದು ವಿದ್ಯಾರ್ಥಿಗಳ ಭವಿಷ್ಯದ ವಿದ್ಯಾಭ್ಯಾಸಕ್ಕೆ ಮಾರಕವಾಗುತ್ತಿತ್ತು.ಈ ಹಿನ್ನಲೆ ನೈರುತ್ಯ ಕ್ಷೇತ್ರಗಳಿಗೆ ಪರೀಕ್ಷೆ ಸಮಯ ಅನ್ಯಾಯ ಆಗುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಹೇಳಿದ್ದೆ. ಜೊತೆಗೆ ಪರೀಕ್ಷೆ ವೇಳೆ ಸಿಸಿಟಿವಿ ಅಳವಡಿಕೆ ಕುರಿತು ಪರಿಷತ್​​ನಲ್ಲಿ ಆಗ್ರಹಿಸಿದ್ದೆ ಎಂದರು.

ಶಿವಮೊಗ್ಗ ರಾಗಿಗುಡ್ಡದಲ್ಲಿ ಹಿಂಸಾಚಾರ ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನ್ಯಾಯಾಂಗ ತನಿಖೆಗೆ ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯ

Posted by Vidyamaana on 2023-10-07 04:49:46 |

Share: | | | | |


ಶಿವಮೊಗ್ಗ ರಾಗಿಗುಡ್ಡದಲ್ಲಿ ಹಿಂಸಾಚಾರ  ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನ್ಯಾಯಾಂಗ ತನಿಖೆಗೆ ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯ

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್ ನಂತರ ಭಯಾನಕ ಹಿಂಸಾಚಾರ ನಡೆದ ಎಲ್ಲಾ ಮನೆಗಳಿಗೆ ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನೀಡಿತು. ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆಯಲ್ಲಿ ಮತಾಂಧ ಟಿಪ್ಪು, ಔರಂಗಜೇಬನನ್ನು ವೈಭವೀಕರಿಸಿ ತಲವಾರು ತೋರಿಸಿ ಪೊಲೀಸರಿಗೆ ಕಲ್ಲುತೂರಾಟ ನಡೆಸಿ, ನೂರಾರು ಮನೆಗಳಿಗೆ ಹಾನಿ ಉಂಟು ಮಾಡಿದ ಪ್ರದೇಶಗಳಿಗೆ ಅರುಣ್‌ ಕುಮಾರ್‌ ಪುತ್ತಿಲ ಭೇಟಿ ಸಂತ್ರಸ್ತರಿಗೆ ಸಾಂತ್ವನ ತಿಳಿಸಿದರು.


ಶಿವಮೊಗ್ಗ ರಾಗಿಗುಡ್ಡದಲ್ಲಿ ಲಕ್ಷ್ಮೀ ಎಂಬವರು ತಾಳಿ ಅಡವಿಟ್ಟು ಆಟೋ ಖರೀದಿಸಿದ್ದು ಮತಾಂದರ ಕ್ರೂರತೆಗೆ ಆಟೋ ಜಖಂಗೊಂಡಿದೆ. ಹಲವು ಮನೆಗಳ ಕಿಟಕಿ, ಬಾಗಿಲು , ಗೋಡೆ ಜಖಂಗೊಂಡಿದೆ. ಸ್ವಂತ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕಿ ಮನೆಗೆ ಅವರ ಶಿಷ್ಯಂದಿರೇ ಕಲ್ಲು ತೂರಾಟ ನಡೆಸಿದ್ದು ನೆನೆಸಿಕೊಂಡು ನಿವೃತ್ತ ಶಿಕ್ಷಕಿ ಬೇಸರ ವ್ಯಕ್ತಪಡಿಸಿದರು. ಈಗಲೂ ಹಿಂದೂಗಳು ಅಲ್ಲಿ ಭಯದ ವಾತಾವರಣದಲ್ಲಿ ಬದುಕು ಸವೆಸುತ್ತಿದ್ದಾರೆ. ಈ ಘಟನೆಯಲ್ಲಿ ಭಯೋತ್ಪಾದಕ ಬೆಂಬಲಿಗರ ಕೈವಾಡವಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಪುತ್ತಿಲ ತಂಡ ಹೇಳಿತು.

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?

ಸರ್ಕಾರ ಈ ಕ್ರೌರ್ಯ ಘಟನೆಯನ್ನು ಶೀಘ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ಸಂತ್ರಸ್ಥರಿಗೆ ಸೂಕ್ತ ಭದ್ರತೆ ಹಾಗೂ ಪರಿಹಾರ ಒದಗಿಸಬೇಕು ಎಂದು ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯಿಸಿದ್ದಾರೆ.

ಕರ್ತವ್ಯದಲ್ಲಿರೋ ಮಾಧ್ಯಮ ಸಿಬ್ಬಂದಿಗೆ ಅಂಚೆ ಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ : ಚುನಾವಣಾ ಆಯೋಗ

Posted by Vidyamaana on 2024-03-20 10:07:44 |

Share: | | | | |


ಕರ್ತವ್ಯದಲ್ಲಿರೋ ಮಾಧ್ಯಮ ಸಿಬ್ಬಂದಿಗೆ ಅಂಚೆ ಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ : ಚುನಾವಣಾ ಆಯೋಗ

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೊಸ ಅಧಿಸೂಚನೆ ಹೊರಡಿಸಿದೆ. ಚುನಾವಣಾ ಆಯೋಗವು ಈಗ ಮಾಧ್ಯಮ ಸಿಬ್ಬಂದಿಗೆ ಅಂಚೆ ಮತಪತ್ರದ ಸೌಲಭ್ಯವನ್ನ ಒದಗಿಸಿದೆ. ಅಂದ್ರೆ, ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಎಲ್ಲಾ ಅಧಿಕೃತ ಮಾಧ್ಯಮ ಸಿಬ್ಬಂದಿ ಅವರು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಸಾಧ್ಯವಾಗುತ್ತದೆ.ಆದಾಗ್ಯೂ, ಚುನಾವಣಾ ಆಯುಕ್ತರು ಮಾಧ್ಯಮ ಪ್ರಸಾರ ಪಾಸ್ ನೀಡುವ ಮಾಧ್ಯಮ ಸಿಬ್ಬಂದಿಗೆ ಮಾತ್ರ ಮತ ಚಲಾಯಿಸಲು ಸಾಧ್ಯವಾಗುತ್ತದೆ. 


ವಾಸ್ತವವಾಗಿ, ಚುನಾವಣಾ ಆಯೋಗವು ಯಾವುದೇ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಮತದಾರರನ್ನು ಭಾಗವಹಿಸಲು ಪ್ರಯತ್ನಿಸುತ್ತದೆ. ಆದರೆ ಚುನಾವಣೆಗಳಲ್ಲಿ, ಸಾವಿರಾರು ಮತ್ತು ಲಕ್ಷಾಂತರ ನೌಕರರು ಮತ್ತು ಭದ್ರತಾ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದಾರೆ. ಇದಲ್ಲದೆ, ಗಡಿಯಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ತಮ್ಮ ಕರ್ತವ್ಯವನ್ನ ಬಿಟ್ಟು ಚುನಾವಣೆಯಲ್ಲಿ ಮತ ಚಲಾಯಿಸಲು ತಮ್ಮ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಿಬ್ಬಂದಿ ಮತ್ತು ಸೈನಿಕರಿಗೆ, ಚುನಾವಣಾ ಆಯೋಗವು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀಡುತ್ತದೆ.

ಶಾಸಕರ ಇಂದಿನ ಕಾರ್ಯಕ್ರಮ ಆ 12

Posted by Vidyamaana on 2023-08-11 23:13:55 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 12

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 12 ರಂದು


ಬೆಳಿಗ್ಗೆ 10 ಗಂಟೆಗೆ ಪಡ್ನೂರು ಗ್ರಾಮದ ಪರಂಬಾಜೆ ಎಂಬಲ್ಲಿ ತಾಳೆ ಕೃಷಿ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಕಾರ್ಯಕ್ರಮ ಇದರ ಉದ್ಘಾಟನೆ



11 ಗಂಟೆಗೆ ಸಾಮೆತ್ತಡ್ಕ ಸರಕಾರಿ ಶಾಲೆಯಲ್ಲಿ ಕೊಠಡಿ ಉದ್ಘಾಟನೆ



11.30 ಕ್ಕೆ ಮೌಂಟನ್ ವ್ಯೂ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ


12.30 ಕ್ಕೆ ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ಅಭಿನಂದನಾ  ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ

10 ಬಿಲಿಯನ್ ವರ್ಷದ ಕ್ಯಾಲೆಂಡರ್ ನಾಲಗೆ ತುದಿಯಲ್ಲಿ | ಮೆಮೊರಿ ಪ್ರಶಾಂತ್

Posted by Vidyamaana on 2023-01-19 08:37:59 |

Share: | | | | |


10 ಬಿಲಿಯನ್ ವರ್ಷದ ಕ್ಯಾಲೆಂಡರ್ ನಾಲಗೆ ತುದಿಯಲ್ಲಿ | ಮೆಮೊರಿ ಪ್ರಶಾಂತ್

                 25 ವರ್ಷ ವಯಸ್ಸಿನ ಓರ್ವ ಭಿನ್ನ ಸಾಮರ್ಥ್ಯವುಳ್ಳ ವ್ಯಕ್ತಿ ತನ್ನ ಸ್ವಂತ ಸ್ಮರಣೆಯಲ್ಲಿ ಹತ್ತು ಮಿಲಿಯನ್ ವರ್ಷಗಳವರೆಗಿನ ಕ್ಯಾಲೆಂಡರ್ ಅನ್ನು ನೆನಪಿನಲ್ಲಿ ಉಳಿಸಬಲ್ಲ ಎಂದರೆ ನಂಬುವುದು ಸಾಧ್ಯವೇ?. ತಂತ್ರಜ್ಞಾನಗಳನ್ನು ಸೋಲಿಸಬಲ್ಲ ಈ ಯುವಕನ ಹೆಸರು ಪ್ರಶಾಂತ್. ‘ಮೆಮೊರಿ ಪ್ರಶಾಂತ್’ ಎಂದು ಕೇರಳೀ ಯರು ಪ್ರೀತಿಯಿಂದ ಕರೆಯುವ ಈತನ ಇನ್ನಷ್ಟು ಸಾಮರ್ಥ್ಯಗಳ ಬಗ್ಗೆ ತಿಳಿದರೆ ಅಚ್ಚರಿಯ ಮೇಲೆ ಅಚ್ಚರಿ ಎನ್ನಲೇಬೇಕು. ವಿಪರ್ಯಾಸವೆಂದರೆ, ಸಾಮಾನ್ಯ ಮನುಷ್ಯನಿಗೆ ಇರಬೇಕಾಗುವಷ್ಟು ದೈಹಿಕ ಸಾಮರ್ಥ್ಯ ಪ್ರಶಾಂತ್ಗೆ ಇಲ್ಲ. ಆದರೆ, ಕ್ರಿ.ಶ. ಒಂದರಿಂದ ಹತ್ತು ಕೋಟಿ ವರ್ಷಗಳವರೆಗಿನ ಕ್ಯಾಲೆಂಡರ್ನಿಂದ ಯಾವ ದಿನಾಂಕದ ವಿಶೇಷತೆಗಳೇನು? ಅದು ಯಾವ ದಿನ ಬರುತ್ತದೆ ಎಂಬುದನ್ನು ಪ್ರಶಾಂತ್ ನಿಖರವಾಗಿ ಹೇಳಬಲ್ಲರು. ಹೀಗೆ ಪ್ರಶಾಂತ್ ಮೂವತ್ತಾರು ಸಾವಿರದ ಐನೂರ ಇಪ್ಪತ್ತೈದು ಕೋಟಿ ದಿನಗಳ ಬಗೆಗಿನ ಮಾಹಿತಿಯನ್ನು ಕಂಠಪಾಠ ಮಾಡಿದ್ದಾರೆ.

        ಪ್ರಶಾಂತ್ ಒಂದು ತಿಂಗಳ ಕ್ಯಾಲೆಂಡರ್ ಮಾಡಲು ಒಂದು ನಿಮಿಷ ಸಾಕು. ಅದೇ ರೀತಿ ಒಂದು ವರ್ಷದ ಕ್ಯಾಲೆಂಡರ್ ತಯಾರಿಸಲು ಆತನಿಗೆ ಬೇಕಾಗುವ ಸಮಯ ಕೇವಲ ಹತ್ತು ನಿಮಿಷಗಳು!. ಯಾವುದೇ ವರ್ಷದ ವಿಶೇಷ ದಿನ ಗಳನ್ನು ಸೆಕೆಂಡ್ಗಳಲ್ಲಿ ಪ್ರಶಾಂತ್ ನೆನಪಿನಿಂದ ನಕಲು ಮಾಡಬಲ್ಲರು. ಅಷ್ಟೇ ಅಲ್ಲ, ಆ ದಿನಕ್ಕೆ ಈ ದಿನದಿಂದ ಎಷ್ಟು ದಿನ ಬಾಕಿ ಉಳಿದಿದೆ ಎಂಬುದನ್ನೂ ನಿಖರವಾಗಿ ಪ್ರಶಾಂತ್ ಹೇಳಬಲ್ಲರು.

        ಕೇರಳದ ತಿರುವನಂತಪುರಂ ಜಿಲ್ಲೆಯ ಕರಮನ ಬಳಿಯ ಡಿ.ಬಿ. ಸ್ಟ್ರೀಟ್ ನಿವಾಸಿಯಾಗಿರುವ ಪ್ರಶಾಂತ್, ಚಂದ್ರನ್ ಮತ್ತು ಸುಹಿತಾ ದಂಪತಿಯ ಪುತ್ರನಾಗಿದ್ದು, ಅವರ ಸಹೋದರಿ ಪ್ರಿಯಾಂಕಾಗೆ ಮದುವೆಯಾಗಿದೆ. ದೃಷ್ಟಿ ಮತ್ತು ಶ್ರವಣ ದೋಷ, ಮಾತಿನ ದುರ್ಬಲತೆ, ಹೃದಯದಲ್ಲಿ ಎರಡು ರಂಧ್ರಗಳು ಮತ್ತು ಹಲವಾರು ನರ ಸಂಬಂಧಿತ ಕಾಯಿಲೆಗಳು ಹುಟ್ಟಿನಿಂದಲೇ ಕಾಡುತ್ತಿರುವ ಇವರು, ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಹೆಚ್ಚು ದಿನ ಬದುಕುವುದು ಸಾಧ್ಯವಿಲ್ಲ ಎಂದುಕೊಂಡಿದ್ದ ಮಗು ಅದ್ಭುತವಾಗಿ ಬೆಳೆದು ನಿಂತಿತು. ಆ ಪಯಣದಲ್ಲಿ ವಿಜ್ಞಾನ ಲೋಕವೂ ಆತನ ಎದುರಲ್ಲಿ ಬೆರಗಾಗಿ ನಿಂತಿತ್ತು. ಬಾಲ್ಯದಲ್ಲಿ ಹೆತ್ತವರು ನೀಡಿದ ಪ್ಲಾಸ್ಟಿಕ್ ಅಕ್ಷರಗಳು ಮತ್ತು ಸಂಖ್ಯೆಗಳ ಆಟಿಕೆಗಳ ಮೂಲಕ ಪ್ರಶಾಂತ್ ಅವರ ವಿಸ್ಮಯ ಜಗತ್ತು ತೆರೆಯಲ್ಪಟ್ಟಿತು.

        ಗಣಿತದಲ್ಲಿ ಆಸಕ್ತಿ ಹುಟ್ಟಿ ಕ್ಯಾಲೆಂಡರ್ ಕಂಠಪಾಠ ಮಾಡಲು ಆರಂಭಿಸಿದಾಗ ಅವರ ಜೀವನವೇ ಬದಲಾಯಿತು. ಅದಕ್ಕೆ ಕಾರಣ ಅಕ್ಕ ಪ್ರಿಯಾಂಕಾ ಉಡುಗೊರೆಯಾಗಿ ನೀಡಿದ ಮೊಬೈಲ್ ಫೋನ್. ಪ್ರಥಮವಾಗಿ ಪ್ರಶಾಂತ್ 150 ವರ್ಷಗಳ ಕ್ಯಾಲೆಂಡರ್ ಅನ್ನು ಮಂದ ದೃಷ್ಟಿಯ ಸಹಾಯದಿಂದ ಎರಡು ದಿನಗಳಲ್ಲಿ ಫೋನ್ ಮೂಲಕ ಕಂಠಪಾಠ ಮಾಡಿದರು. ನಂತರದ ಪ್ರತಿ ದಿನ, ಹೊಸ ಜ್ಞಾನವನ್ನು ನೆನಪಿನಲ್ಲಿ ನಕಲು ಮಾಡಲು ಪ್ರಾರಂಭಿಸಿದರು. ಕಣ್ಣಿಗೆ ಹತ್ತಿರವಾಗಿ ಹಿಡಿದಿರುವ ಮೊಬೈಲ್ ಫೋನ್ನೊಂದಿಗೆ ಹೆಚ್ಚಿನ ವೇಗದಲ್ಲಿ ಅವರು ಚಲಿಸುತ್ತಾರೆ. ಈ ಮಧ್ಯೆ, ಅವರು 150 ವರ್ಷಗಳ ಯಾವುದೇ ದಿನಾಂಕದ ಬಗ್ಗೆ ಯಾವುದೇ ಪ್ರಶ್ನೆಗೆ ಸರಿಯಾದ ಉತ್ತರಗಳನ್ನು ನೀಡಲು ಪ್ರಾರಂಭಿಸಿದರು. ಇದರೊಂದಿಗೆ ಪೋಷಕರು ಹತ್ತು ಸಾವಿರ ವರ್ಷಗಳ ವರೆಗಿನ ಕ್ಯಾಲೆಂಡರ್ ಅನ್ನು ಅಂತರ್ಜಾಲದಿಂದ ಡೌನ್ಲೋಡ್ ಮಾಡಿ ಕೊಟ್ಟರು. ಸರಿಯಾಗಿ ಒಂದು ವಾರದಲ್ಲಿ ಪ್ರಶಾಂತ್ ಅಷ್ಟೂ ದಿನಾಂಕಗಳನ್ನು ಕಂಠಪಾಠ ಮಾಡಿದರು. ಅವರ ಅಸಾಧಾರಣ ಸ್ಮರಣೆಶಕ್ತಿಯು ಕಾಲಕ್ರಮೇಣ ಹೆಚ್ಚಾಗತೊಡಗಿತು. 2018ರಲ್ಲಿ ಕ್ರಿ.ಶ. ಒಂದರಿಂದ ಹತ್ತು ಮಿಲಿಯನ್ ವರ್ಷಗಳ ವರೆಗಿನ ಕ್ಯಾಲೆಂಡರ್ಗಳನ್ನು ಆತ ಮನನ ಮಾಡಿಯೇ ಬಿಟ್ಟರು.

         ಜನಿಸುವಾಗಲೇ ಮಾನಸಿಕವಾಗಿಯೂ, ದೈಹಿಕವಾಗಿಯೂ ವಿಕಲತೆ ಹೊಂದಿದ್ದ ಪ್ರಶಾಂತ್, ಮೂರು ತಿಂಗಳು ಮಾತ್ರ ಜೀವಿಸುವುದು ಸಾಧ್ಯ ಎಂದು ವೈದ್ಯರು ಹೇಳಿದ್ದರು. ಆರು ತಿಂಗಳು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ಬಳಿಕ ಮಗುವನ್ನು ನಮಗೆ ಹಸ್ತಾಂತರಿಸಿದ್ದರು. ಆ ಬಳಿಕ ಹಲವಾರು ಸರ್ಜರಿಗಳ ಮೂಲಕ ಮುಖವನ್ನು ಇಂದು ಕಾಣುವ ರೀತಿಗೆ ಬದಲಾಯಿಸಿದ್ದೆವು. ಸೊಂಡಿಲಿನಂತಹ ಮೂಗು, ಪುಟ್ಟ ಕಣ್ಣುಗಳು, ದೊಡ್ಡ ಕಿವಿಗಳನ್ನು ಮಗು ಹೊಂದಿದ್ದವು. ಚಿಕಿತ್ಸೆ ನೀಡಿದ ಡಾಕ್ಟರ್ಗಳು ಮುಂಚಿತವಾಗಿ ತಿಳಿಸಿದಂತೆ, ಅತ್ಯಂತ ಕಾಳಜಿಯಿಂದ ನೋಡಿಕೊಂಡೆವು. ಇದೀಗ ಇಪ್ಪತ್ತೈದರ ಹರೆಯದಲ್ಲಿ ಪ್ರಶಾಂತ್ ಇದ್ದು, ಹಲವಾರು ರೋಗಗಳು ಆತನನ್ನು ಕಾಡುತ್ತಿದ್ದು, ಆ ನೋವು ನಮ್ಮನ್ನೂ ಕಾಡುತ್ತಿದೆ.

ಚಂದ್ರನ್ ಕೆ. (ಪ್ರಶಾಂತ್ ತಂದೆ)

ಇಂದು ಪ್ರಶಾಂತ್ ದಾಖಲೆಗಳ ಸರದಾರ. ಏಶ್ಯ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಯುಆರ್ಎಫ್ ನ್ಯಾಶನಲ್ ರೆಕಾರ್ಡ್ಸ್, ಯುಆರ್ಎಫ್ ಹಾಲ್ ಆಫ್ ಫೇಮ್, ಇನ್ಕ್ರಿಡಬಲ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ಡ್ ಕಿಂಗ್ಸ್ ಟಾಪ್ ರೆಕಾರ್ಡ್ಸ್, ಇನ್ಕ್ರೆಡಿಬಲ್ ಪೀಪಲ್ ಪ್ರಶಸ್ತಿ ಮತ್ತು ಭಾರತದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅವಾರ್ಡ್ ಗಳು ಮತ್ತು ವಿದೇಶದಲ್ಲಿ ಪ್ರಶಾಂತ್ ಹೆಸರು ದಾಖಲೆ ಪುಸ್ತಕದಲ್ಲಿದೆ. 2018ರಲ್ಲಿ ಪ್ರಶಾಂತ್ ಅವರ ಸಾಧನೆಗಳೆಂದರೆ ವಂಡರ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್, ವರ್ಲ್ಡ್ಡ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್, ಹೈ ರೇಂಜ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್ ಮತ್ತು ಗ್ಲೋಬಲ್ ರೆಕಾರ್ಡ್ಸ್. ರಾಷ್ಟ್ರಪತಿಯವರು 2016ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ್ದು, 2017ರಲ್ಲಿ ಯುಕೆ ವಿಶ್ವ ದಾಖಲೆ ವಿಶ್ವವಿದ್ಯಾನಿಲಯದಿಂದ ಪ್ರಶಾಂತ್ ಡಾಕ್ಟರೇಟ್ ಕೂಡ ಪಡೆದುಕೊಂಡರು.

    ಹಲವು ಅಂತರ್ರಾಷ್ಟ್ರೀಯ ಪ್ರಶಸ್ತಿಗಳು, ಮೂರು ನ್ಯಾಶನಲ್ ಅವಾರ್ಡ್ಗಳಿಗೆ ಭಾಜನರಾದರೂ, ಒಂದೇ ಒಂದು ರಾಜ್ಯ ಪ್ರಶಸ್ತಿ ಲಭಿಸದಿರುವುದು ಪ್ರಶಾಂತ್ ರಲ್ಲಿ ಮಾನಸಿಕ ಮುಜುಗರವನ್ನು ಉಂಟುಮಾಡಿತ್ತು. ಕಳೆದ ಬಾರಿ ಆ ಬಗೆಗಿನ ಫೈಲ್ ಮುಂದುವರಿಸಿದ್ದರೂ, ಅದು ಆಡಳಿತಾತ್ಮಕ ವ್ಯವಸ್ಥೆಯನ್ನು ತಲುಪಿರಲಿಲ್ಲ. ಅದೂ ಅಲ್ಲದೆ, ಆ ಬಗ್ಗೆ ಹಲವಾರು ವಿವಾದಗಳೂ ಹುಟ್ಟಿಕೊಂಡಿದ್ದವು. ಆ ಬಳಿಕ ಕಳೆದ ಡಿಸೆಂಬರ್ 3ಕ್ಕೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದವು’ ಎಂದು ಪ್ರಶಾಂತ್ರ ತಾಯಿ ಸುಹಿತಾ ಹೇಳುತ್ತಾರೆ.

        ಪ್ರಶಾಂತ್ ಎನ್ನುವ ಹೆಸರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕಾಣಿಸಿಕೊಳ್ಳಬೇಕಾ ಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಇದು ವಿಳಂಬವಾ ಗಿದೆ. ಅಚ್ಚರಿಯ ವಿಷಯವೆಂದರೆ, ಅಷ್ಟು ವರ್ಷಗಳ ನಿಖರತೆಯನ್ನು ಅಳೆಯುವ ಅಧಿಕೃತ ವ್ಯವಸ್ಥೆಗಳಿಲ್ಲದ ಕಾರಣ ಗಿನ್ನ್ನೆಸ್ ಅಧಿಕಾರಿಗಳು ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದ್ದಾರೆ ಎನ್ನುವುದು!. ವ್ಯಕ್ತಿಗಳ ಹೆಸರಿನಲ್ಲಿರುವ ಮಾಹಿತಿಗಳು ಗೂಗಲ್ನಲ್ಲಿ ಲಭ್ಯವಿವೆ. ಆದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಮತ್ತು ಸ್ಪರ್ಧಿಸಲು ಯಾವುದೇ ಪ್ರತಿಸ್ಪರ್ಧಿ ಇಲ್ಲದಿರುವುದೂ ಒಂದು ಕಾರಣ ಎನ್ನಲಾ ಗಿದೆ. ಪ್ರಶಾಂತ್ ತನ್ನ ಹೆಸರು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಲು ಯಾವುದೇ ಸರಕಾರ ಅಥವಾ ಪ್ರಾಧಿಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಅರ್ಜಿಗಾಗಿ ಕಾಯಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಗಿನ್ನೆಸ್ ದಾಖಲೆಯೂ ಪ್ರಶಾಂತ್ ಮುಂದೆ ತಲೆಬಾಗಿ ಕುಳಿತಿದೆ ಎನ್ನಬೇಕಾಗಿದೆ.

ಜ 30ಕ್ಕೆ ಮತ್ತೆ 17 ಅವಾರ್ಡ್ಗಳ ಹಸ್ತಾಂತರ!

ಪ್ರಶಾಂತ್ ಬಂಗಾಳ್ ಬುಕ್ ಆಫ್ ರೆಕಾರ್ಡ್, ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್, ಅಸ್ಸಾಂ ಬುಕ್ ಆಫ್ ರೆಕಾರ್ಡ್, ಇಂಡಿಯನ್ಸ್ ವರ್ಲ್ಡ್ ರೆಕಾರ್ಡ್, ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್, ಬೆಸ್ಟ್ ಇಂಡಿಯಾ, ಒಎಂಜಿ ಬುಕ್ ಆಫ್ ರೆಕಾರ್ಡ್, ನ್ಯಾಶನಲ್ ಬುಕ್ ಆಫ್ ರೆಕಾರ್ಡ್, ಫ್ಯೂಚರ್ ಕಲಾಂ ಆಫ್ ಇಂಡಿಯಾ ಬುಕ್ ಆಫ್ ರೆಕಾರ್ಡ್, ಅಮೇಝಿಂಗ್ ಬುಕ್ ಆಫ್ ರೆಕಾರ್ಡ್ ಮತ್ತಿತರ 17 ಅವಾರ್ಡ್ಗಳನ್ನು ಹಸ್ತಾಂತ ರಿಸುವ ಕಾರ್ಯಕ್ರಮವನ್ನು ಜ.30ರಂದು ತಿರುವನಂತಪುರದಲ್ಲಿ ಹಮ್ಮಿಕೊಳ್ಳಲಾಗಿದೆ.

ಲೋಕಸಭಾ ಚುನಾವಣೆ ಕಾಂಗ್ರೆಸ್ ನ 46 ಅಭ್ಯರ್ಥಿಗಳ ಪಟ್ಟಿ ಪ್ರಕಟ ದಕ್ಷಿಣ ಕನ್ನಡದ ಡಿಸಿಯಾಗಿದ್ದ ಸಸಿಕಾಂತ್ ಸೆಂಥಿಲ್ ಗೆ ಟಿಕೆಟ್

Posted by Vidyamaana on 2024-03-24 04:48:37 |

Share: | | | | |


ಲೋಕಸಭಾ ಚುನಾವಣೆ  ಕಾಂಗ್ರೆಸ್ ನ 46 ಅಭ್ಯರ್ಥಿಗಳ ಪಟ್ಟಿ ಪ್ರಕಟ  ದಕ್ಷಿಣ ಕನ್ನಡದ ಡಿಸಿಯಾಗಿದ್ದ ಸಸಿಕಾಂತ್ ಸೆಂಥಿಲ್ ಗೆ ಟಿಕೆಟ್

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನ 46 ಅಭ್ಯರ್ಥಿಗಳ ನಾಲ್ಕೆನೇ ಪಟ್ಟಿ ಬಿಡುಗಡೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಿರುವಳ್ಳೂರಿನಿಂದ ಸ್ಪರ್ಧಿಸಲಿದ್ದಾರೆ.

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ವಾರ್ ರೂಂ ನಿರ್ವಹಿಸಿ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸಸಿಕಾಂತ್ ಸೆಂಥಿಲ್ ಗೆ ತಮಿಳುನಾಡಿನ ತಿರುವಳ್ಳೂರಿನಿಂದ ಟಿಕೆಟ್ ನೀಡಲಾಗಿದೆ.ಅಸ್ಸಾಂ 1, ಅಂಡಮಾನ್ ನಿಕೋಬಾರ್ 1, ಚತ್ತೀಸ್ ಗಡ್ 1, ಜಮ್ಮು ಕಾಶ್ಮೀರ 2, ಮಧ್ಯಪ್ರದೇಶ 12, ಮಹಾರಾಷ್ಟ್ರ 4, ಮಣಿಪುರ 2, ಮಿಜೋರಾಂ 1, ರಾಜಸ್ಥಾನ 3, ತಮಿಳುನಾಡು 7, ಉತ್ತರ ಪ್ರದೇಶ 9, ಉತ್ತರಾಖಂಡ 2, ಪಶ್ಚಿಮ ಬಂಗಾಳದ 1 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ.



Leave a Comment: