ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಬೆಳ್ತಂಗಡಿ : ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ಶಿವಮೊಗ್ಗ ಮೂಲದ ಕಾರ್ತಿಕ್ ಆತ್ಮಹತ್ಯೆ

Posted by Vidyamaana on 2023-06-29 09:17:37 |

Share: | | | | |


ಬೆಳ್ತಂಗಡಿ : ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ಶಿವಮೊಗ್ಗ ಮೂಲದ ಕಾರ್ತಿಕ್ ಆತ್ಮಹತ್ಯೆ

ಬೆಳ್ತಂಗಡಿ : ಶಿವಮೊಗ್ಗದ ಅವಿವಾಹಿತ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಖಾಸಗಿ ಲಾಡ್ಜ್ ನ ರೂಂನಲ್ಲಿ ನಡೆದಿದೆ.ಜೂನ್ 26 ರಂದು ಶಿವಮೊಗ್ಗ ಜಿಲ್ಲೆಯ ಅವಿವಾಹಿತ ಯುವಕ ಕಾರ್ತಿಕ್ (29) ಎಂಬಾತ ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದು. ರೂಂ ನಂಬರ್ 303 ರಲ್ಲಿ ರೂಂ ಪಡೆದುಕೊಂಡು ಉಳಿದುಕೊಂಡಿದ್ದು. ಜೂನ್ 28 ರಂದು ರೂಂ ಒಳಗೆ ಹಗ್ಗವನ್ನು ಪ್ಯಾನ್ ಗೆ ಹಾಕಿ ಪ್ಲಾಸ್ಟಿಕ್ ಚೆಯರ್ ನಲ್ಲಿ ನಿಂತುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಜೂನ್ 29 (ಇಂದು) ರೂಂ ನಿಂದ ಕಾರ್ತಿಕ್ ಹೊರಬಾರದೆ ಇದ್ದಾಗ ಲಾಡ್ಜ್ ಸಿಬ್ಬಂದಿ ಬಾಗಿಲು ಎಷ್ಟೇ ಬಡಿದರು  ಒಳಗಡೆಯಿಂದ ಮಾತನಾಡದೇ ಇದ್ದಾಗ ಅನುಮಾನದಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಅದರಂತೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್ ಮತ್ತು ತಂಡ ಲಾಡ್ಜ್ ಗೆ ತೆರಳಿ ಬಾಗಿಲು ಮುರಿದು ಒಳಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಮನೆಯ ವಿಳಾಸ ಪತ್ತೆಯಾಗಿದ್ದು ಮನೆಯವರನ್ನು ಬೆಳ್ತಂಗಡಿ ಪೊಲೀಸರು ಸಂಪರ್ಕಿಸಿದ್ದು. ಸಂಜೆ ವೇಳೆಗೆ ಕಾರ್ತಿಕ್ ಮನೆಯವರು ಪೊಲೀಸ್ ಠಾಣೆಗೆ ತಲುಪಲಿದ್ದಾರೆ. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರ್ಲಡ್ಕ: ಸುನ್ನೀ ಮಹಲ್ ಫೆಡರೇಷನ್ ( ಎಸ್ ಎಂ ಎಫ್) ತಾಲೂಕು ಸಂಯೋಜಕರ ಸಭೆ

Posted by Vidyamaana on 2023-06-13 07:39:45 |

Share: | | | | |


ಪರ್ಲಡ್ಕ:  ಸುನ್ನೀ ಮಹಲ್ ಫೆಡರೇಷನ್ ( ಎಸ್ ಎಂ ಎಫ್) ತಾಲೂಕು ಸಂಯೋಜಕರ ಸಭೆ

ಪುತ್ತೂರು: ಮೊಹಲ್ಲಗಳ ಸಬಲೀಕರಣ ಹಾಗೂ ಅಭಿವೃದ್ಧಿಗೆ ಸಂಘಟಿತ ಪ್ರಯತ್ನವು ಅಗತ್ಯವಾಗಿದ್ದು,ಈ ನಿಟ್ಟಿನಲ್ಲಿ ಸಮಸ್ತದ ಅಂಗ ಸಂಸ್ಥೆಯಾದ ಸುನ್ನೀ ಮಹಲ್ ಫೆಡರೇಷನ್ ಸ್ತುತ್ಯರ್ಹವಾಗಿ ಕಾರ್ಯಾಚರಿಸುತ್ತಿದೆ ಎಂದು ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಹೇಳಿದರು.

         ಪರ್ಲಡ್ಕ ಶಂಸುಲ್ ಉಲಮಾ ಮೆಮೋರಿಯಲ್ ಕಾಲೇಜಿನ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆದ ಸುನ್ನೀ ಮಹಲ್ ಫೆಡರೇಷನ್ ( ಎಸ್ ಎಂ ಎಫ್) ತಾಲೂಕು ಸಂಯೋಜಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸಮುದಾಯದ ಆಧ್ಯಾತ್ಮಿಕ,ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮೊಹಲ್ಲಾಗಳು ಪ್ರಮುಖ ಪಾತ್ರ ವಹಿಸುತ್ತಿದ್ದು,ಸುನ್ನತ್ ಜಮಾಅತ್ ನ ಬಲಿಷ್ಠತೆಗೆ ಪ್ರತಿ ಮೊಹಲ್ಲಾದಲ್ಲಿ ಎಸ್ ಎಂ ಎಫ್ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಪ್ರತಿ ಮೊಹಲ್ಲಾದ ಆಡಳಿತ ಸಮಿತಿಯು ತಮ್ಮ ಮೊಹಲ್ಲಾ ವನ್ನು ಎಸ್ ಎಂ ಎಫ್ ಸಂಘಟನೆಯಲ್ಲಿ ನೋಂದಣಿ ಮಾಡಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಎಸ್ ಎಂ ಎಫ್ ಸದಸ್ಯತ್ವ ಅಭಿಯಾನವು ಜೂನ್ 20 ರಿಂದ ಆಗಸ್ಟ್ 20 ರವರೆಗೆ ಜಿಲ್ಲಾದ್ಯಂತ ನಡೆಯಲಿದೆ ಎಂದು ಖಾಝಿಯವರು ಘೋಷಿಸಿದರು.

          ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್ ದುಆಗೈದರು.ಸಮಸ್ತ ಮುಶಾವರ ಸದಸ್ಯರಾದ ಉಸ್ಮಾನ್ ಫೈಝಿ ತೋಡಾರ್ ಉದ್ಘಾಟನೆಗೈದರು. ಎಸ್ ಎಂ ಎಫ್ ಕೇಂದ್ರ ಸಮಿತಿ ನಾಯಕರಾದ ಎ.ಕೆ ಆಲಿಪ್ಪರಂಬ್ ಉಸ್ತಾದ್, ಸಮಸ್ತ ಟ್ರೈನರ್ ಪಿ.ಸಿ ಉಮರ್ ದಾರಿಮಿ ವಿಷಯ ಮಂಡನೆಗೈದರು. 

       ಸಭೆಯಲ್ಲಿ ಜಿಫ್ರಿ ತಂಙಳ್ ಬೆಳ್ತಂಗಡಿ,ಶರೀಫ್ ದಾರಿಮಿ ಕೋಟ್ಟಯಂ,ಶರೀಫ್ ಫೈಝಿ ಕಡಬ,ಹುಸೈನ್ ದಾರಿಮಿ ರೆಂಜಲಾಡಿ,ಇರ್ಶಾದ್ ದಾರಿಮಿ ಮಿತ್ತಬೈಲ್,ರಶೀದ್ ರಹ್ಮಾನಿ ಪರ್ಲಡ್ಕ,ಹುಸೈನ್ ರಹ್ಮಾನಿ ಕಾಶಿಪಟ್ನ,ಮುಫತ್ತಿಷ್ ಉಮರ್ ದಾರಿಮಿ,ಎಲ್ ಟಿ ಅಬ್ದುಲ್ ರಝಾಕ್ ಹಾಜಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ,ಖಾದರ್ ಹಾಜಿ ಸುಂಕದಕಟ್ಟೆ,ಖಾದರ್ ಮಾಸ್ಟರ್ ಬಂಟ್ವಾಳ,ಇಬ್ರಾಹಿಂ ಕೊಣಾಜೆ,ಅಶ್ರಫ್ ಶೇಡಿಗುಂಡಿ ಉಪಸ್ಥಿತರಿದ್ದರು.ಹನೀಫ್ ಹಾಜಿ ಬಂದರ್ ಸ್ವಾಗತಿಸಿ, ಅಡ್ವೊಕೇಟ್ ಹನೀಫ್ ಹುದವಿ ಧನ್ಯವಾದಗೈದರು.

ಪಿಲಿಕ್ ಮೈಟ್ ಬತ್ತಂಡ್ ಉಡುಪಿಯಲ್ಲೊಂದು ವಿಸ್ಮಯ

Posted by Vidyamaana on 2023-09-07 15:00:06 |

Share: | | | | |


ಪಿಲಿಕ್ ಮೈಟ್ ಬತ್ತಂಡ್ ಉಡುಪಿಯಲ್ಲೊಂದು ವಿಸ್ಮಯ

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಆಚರಣೆಗಳಲ್ಲಿ ಹುಲಿ ಕುಣಿತಕ್ಕೆ ತನ್ನದೇ ಆದ ನಂಬಿಕೆ ಮತ್ತು ಪ್ರಾಮುಖ್ಯತೆ ಇದೆ.

ದಕ್ಷಿಣ ಕನ್ನಡ ಭಾಗದಲ್ಲಿ ನವರಾತ್ರಿ ಸಂದರ್ಭದಲ್ಲಿ ಹುಲಿ ಕುಣಿತ ಕಂಡುಬಂದರೆ, ಉಡುಪಿ ಭಾಗದಲ್ಲಿ ಅಷ್ಟಮಿ ಮತ್ತು ಅದರ ಮರುದಿನ ವಿಟ್ಲ ಪಿಂಡಿ ಸಂದರ್ಭದಲ್ಲಿ ಹುಲಿಗಳ ಅಬ್ಬರ ಜೋರಾಗಿರುತ್ತದೆ.

ಆದರೆ, ಈ ಹುಲಿ ವೇಷ ಹಾಕುವುದರ ಹಿಂದೆ ಒಂದು ನಂಬಿಕೆ ಇದೆ. ದೇವಿಯ ವಾಹನವೆಂದೇ ನಂಬುವ ಹುಲಿಯನ್ನು ಈ ಹುಲಿ ವೇಷಧಾರಿ ತಂಡದವರು ಆರಾಧಿಸಿ ಬಳಿಕವೇ ಹುಲಿ ವೇಷವನ್ನು ಹಾಕಿಕೊಳ್ಳುತ್ತಾರೆ.

ಕೆಲವರು ತಮ್ಮ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಹರಕೆ ಹೇಳಿಕೊಂಡು ಹುಲಿ ವೇಷ ಹಾಕುವುದೂ ಇದೆ. ಇನ್ನು ಹುಲಿ ವೇಷಕ್ಕೆ ತಮ್ಮ ಮೈಯನ್ನು ಒಡ್ಡುವ ಮುನ್ನ ಅಲ್ಲಿ ಕೆಲವು ದೈವಿಕ ಕ್ರಮಗಳನ್ನು ಪಾಲಿಸಲಾಗುತ್ತದೆ.

ಮತ್ತು ಹುಲಿ ವೇಷಧಾರಿ ನಿರ್ಧಿಷ್ಟ ವ್ರತಾಚರಣೆಯಲ್ಲೂ ಇರಬೇಕಾಗಿರುವುದು ಕಡ್ಡಾಯವಾಗಿರುತ್ತದೆ.

ಮೊದಲ ಬಾರಿಗೆ ಹುಲಿ ವೇಷ ಹಾಕಿಕೊಳ್ಳುತ್ತಿರುವವರಲ್ಲಿ ಅವರ ದೇಹಕ್ಕೆ ಬಣ್ಣವನ್ನು ಬಲಿಯುವಾಗ ಕೆಲವೊಮ್ಮೆ ಅವರಲ್ಲಿ ಅಗೋಚರ ಶಕ್ತಿಯೊಂದು ಆವಾಹನೆಗೊಂಡು ಅವರು ಆವೇಶಕ್ಕೊಳಗಾಗುವುದು ಸಾಮಾನ್ಯವಾಗಿರುತ್ತದೆ.

ಹುಲಿ ವೇಷಧಾರಿಯ ಮೈಮೇಲೆ ಶಕ್ತಿ ಆವಾಹನೆಗೊಳ್ಳುವ ವಿಡಿಯೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

ಉಡುಪಿಯ ನಿಟ್ಟೂರಿನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಹುಲಿ ತಂಡವೊಂದರ ಸದಸ್ಯ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲೇ ಅವರು ಆವೇಶಕ್ಕೊಳಗಾಗಿ ಅಲ್ಲಿದ್ದ ಮ್ಯಾಟ್ ಚೂರನ್ನು ಬಾಯಿಂದ ಹರಿದು, ತನ್ನ ಸಹ ವೇಷಧಾರಿಗಳು ಮತ್ತು ತಂಡದ ಇತರರಿಗೂ ಹಿಡಿಯಲು ಸಾಧ್ಯವಾಗದಿರುವ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಇಂದು ಪುತ್ತೂರಿನ ಬಹುತೇಕ ಕಡೆ ವಿದ್ಯುತ್‌ ನಿಲುಗಡೆ

Posted by Vidyamaana on 2023-12-07 05:21:44 |

Share: | | | | |


ಇಂದು ಪುತ್ತೂರಿನ ಬಹುತೇಕ ಕಡೆ ವಿದ್ಯುತ್‌ ನಿಲುಗಡೆ

ಪುತ್ತೂರು: ರಸ್ತೆ ಅಗಲೀಕರಣಕ್ಕಾಗಿ ವಿದ್ಯುತ್ ಲೈನ್ ಸ್ಥಳಾಂತರ ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ದರ್ಬೆ, ವಾಟರ್ ಸಪ್ಪೆ ಮತ್ತು ಉಪ್ಪಿನಂಗಡಿ ಎಕ್ಸ್‌ಪ್ರೆಸ್ ಹಾಗೂ 110/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ ಫೀಡರ್‌ನಲ್ಲಿ ಡಿ.7ರಂದು ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 5:00 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 1110/33/1183 ಕೆ ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಮತ್ತು 110/11ಕೆ ವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ರ ಸರಬರಾಜಾಗುವ ಹಾರಾಡಿ, ಚಿಕ್ಕಪುತ್ತೂರು, ನೆಲ್ಲಿಕಟ್ಟೆ, ಎಳ್ಳುಡಿ, ಕೆಎಸ್‌ಆರ್‌ಟಿಸಿ ಬಸ್‌ ಈ ನಿಲ್ದಾಣ ಪರಿಸರ, ಕಲ್ಲಾರೆ, ಕೂರ್ನಡ್ಕ, ದರ್ಬೆ, ಮರೀಲು, ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲದಲ್ಲಿ ಮಂಡ್ಯ ಮೂಲದ ವ್ಯಕ್ತಿ ಲಕ್ಕಪ್ಪ ಅರೆಸ್ಟ್ ಮತ್ತೊಬ್ಬ ಪರಾರಿ

Posted by Vidyamaana on 2023-06-24 11:18:56 |

Share: | | | | |


ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲದಲ್ಲಿ ಮಂಡ್ಯ ಮೂಲದ ವ್ಯಕ್ತಿ ಲಕ್ಕಪ್ಪ ಅರೆಸ್ಟ್ ಮತ್ತೊಬ್ಬ ಪರಾರಿ

ಮಂಗಳೂರು : ಮಂಗಳೂರು ನಗರದ ಕುಲಶೇಖರದ ಕಾಂಪ್ಲೆಕ್ಸ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂದರ್ಭ ಅಲ್ಲಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರದ ಬಳಿ ಇರುವ ಅಬ್ಬಿ ಕಾಂಪ್ಲೆಕ್ಸ್ ನಲ್ಲಿ ಕೃಷ್ಣ ಎಂಬಾತನು ಫ್ಲಾಟ್ ಬಾಡಿಗೆಗೆ ಪಡೆದು ಮಂಡ್ಯ ನಿವಾಸಿ ಲಕ್ಕಪ್ಪ ಎಂಬಾತನ ಜೊತೆ ಸೇರಿ ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.ಈ ಸಂದರ್ಭ ಅಲ್ಲಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಮಂಡ್ಯ ಮೂಲದ ಲಕ್ಕಪ್ಪ(25 ವರ್ಷ),ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ:ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಕಸ್ಟಡಿಗೆ

Posted by Vidyamaana on 2023-06-30 11:45:49 |

Share: | | | | |


ಅಕ್ರಮ ಆಸ್ತಿ ಗಳಿಕೆ:ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಕಸ್ಟಡಿಗೆ

ಬೆಂಗಳೂರು: ಲೋಕಾಯುಕ್ತ ದಾಳಿ ವೇಳೆ ಅಕ್ರಮ ಆಸ್ತಿ, ಸಂಪತ್ತು ಪತ್ತೆಯಾದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತಹಶೀಲ್ದಾರ್ ಅಜಿತ್ ರೈ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಅವರನ್ನು ಹೆಚ್ಚಿನ ತನಿಖೆಗಾಗಿ ಏಳು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ಒಪ್ಪಿಸಿ ಶುಕ್ರವಾರ ಆದೇಶ ನೀಡಿದೆ.

24 ಗಂಟೆಗಳಿಗೂ ಹೆಚ್ಚು ಕಾಲ ನಡೆದ ದಾಳಿ, ಶೋಧ ಕಾರ್ಯದ ವೇಳೆ ತಹಶೀಲ್ದಾರ್ ಅವರ ನಿವಾಸ ಮತ್ತು ಇತರ ಕಡೆಗಳಲ್ಲಿ ಆಸ್ತಿಗಳಲ್ಲಿ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಗುರುವಾರ ಅವರನ್ನು ಬಂಧಿಸಿದ್ದರು.



Leave a Comment: