ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಬೆಳ್ತಂಗಡಿ ಸೌಜನ್ಯ ಕೊಲೆ ಪ್ರಕರಣ:ಇಂದು ಜೂನ್ 16 ರಂದು ಸಿಬಿಐ ವಿಶೇಷ ಕೋರ್ಟಿನಿಂದ ತೀರ್ಪು

Posted by Vidyamaana on 2023-06-16 03:18:18 |

Share: | | | | |


ಬೆಳ್ತಂಗಡಿ ಸೌಜನ್ಯ ಕೊಲೆ ಪ್ರಕರಣ:ಇಂದು  ಜೂನ್ 16 ರಂದು ಸಿಬಿಐ ವಿಶೇಷ ಕೋರ್ಟಿನಿಂದ ತೀರ್ಪು

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿ ಪುತ್ರಿ ಸೌಜನ್ಯ ಕೊಲೆ ಪ್ರಕರಣದ ತೀರ್ಪು ಅನ್ನು ಸಿಬಿಐ ವಿಶೇಷ ನ್ಯಾಯಾಲಯ ಜೂನ್ 16ರಂದು ಪ್ರಕಟಿಸಲಿದೆ.


ಉಜಿರೆಯ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಅವರು 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಹೋಗುವಾಗ ನಾಪತ್ತೆಯಾಗಿದ್ದರು. ಮರು ದಿನ ರಾತ್ರಿ ಧರ್ಮಸ್ಥಳದ ಮಣ್ಣಸಂಕ ಬಳಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು.


ಶಂಕಿತ ಆರೋಪಿ, ಕಾರ್ಕಳ ತಾಲ್ಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿ ಸಂತೋಷ್ ರಾವ್‌ ಧರ್ಮಸ್ಥಳದ ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರ ಕೈಗೆ ಸಿಕ್ಕಿದ್ದು, ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಪೊಲೀಸರು ಆತನನ್ನು ಬಂಧಿಸಿದ್ದರು. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಂತೋಷ್ ರಾವ್ ಸುಮಾರು ಆರು ಬಾರಿ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗದೆ, ತಲೆ ಮರೆಸಿಕೊಂಡಿದ್ದ.

ಬೈಕ್ ಗಳ ನಡುವೆ ಭೀಕರ ಅಪಘಾತ: ಬ್ಯಾಂಕ್ ಉದ್ಯೋಗಿ ಅಮೃತ ಮೃತ್ಯು

Posted by Vidyamaana on 2023-08-19 07:11:04 |

Share: | | | | |


ಬೈಕ್ ಗಳ ನಡುವೆ ಭೀಕರ ಅಪಘಾತ: ಬ್ಯಾಂಕ್ ಉದ್ಯೋಗಿ ಅಮೃತ ಮೃತ್ಯು

ಕೊಡಗು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬ್ಯಾಂಕ್ ಉದ್ಯೋಗಿ ಒಬ್ಬರು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಅಮ್ಮತ್ತಿಯಲ್ಲಿ ತಡರಾತ್ರಿ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಗ್ರಾಮ ಅಪಘಾತ ಸಂಭವಿಸಿದ್ದು, ಅಮೃತ (24) ಹೆಸರಿನ ಬ್ಯಾಂಕ್ ಉದ್ಯೋಗಿ ಮೃತಪಟ್ಟಿದ್ದಾರೆ.

ಮೂಲತಃ ಕೇರಳದ ತ್ರಿಶೂರ್ ಮೂಲದ ಅಮೃತ, ಅಮ್ಮತಿ ಕೆನರಾ ಬ್ಯಾಂಕ್ ಉದ್ಯೋಗಿ ಆಗಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ ಅಮೃತಾಳನ್ನು ಮೈಸೂರು ಅಪೊಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಮೃತ ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ : ಬೇಸರ ವ್ಯಕ್ತಪಡಿಸಿದ ಡಿವಿಎಸ್‌

Posted by Vidyamaana on 2023-10-28 05:17:56 |

Share: | | | | |


ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ : ಬೇಸರ ವ್ಯಕ್ತಪಡಿಸಿದ ಡಿವಿಎಸ್‌

ಬೆಂಗಳೂರು : ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಬಗ್ಗೆ ಮಾತನಾಡೋದಕ್ಕೆ ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ ಎಂದು ದೆಹಲಿಗೆ ತೆರಳಿದ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ನಿರಾಸೆ ವ್ಯಕ್ತಪಡಿಸಿದ್ದಾರೆ.ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಕುರಿತು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಅವರಿಗೆ ಡಿವಿ ಸದಾನಂದಗೌಡ ಪತ್ರ ಬರೆದಿದ್ದರು.

ಪತ್ರ ಓದಿದ್ದ ಜೆಪಿ ನಡ್ಡಾ ದೆಹಲಿಯಲ್ಲಿ ಬಂದು ಭೇಟಿ ಮಾಡಿ, ಚರ್ಚಿಸಲು ಸೂಚನೆ ನೀಡಿದ್ದರು. ಈ ಬೆನ್ನಲ್ಲೆ ಡಿವಿಎಸ್, ಜೆಪಿ ನಡ್ಡಾ ಸೇರಿದಂತೆ ಬೇರೆ ಬೇರೆ ನಾಯಕರ ಭೇಟಿಗೆ ದೆಹಲಿಗೆ ಬಂದಿದ್ದರು .ಪಂಚ ರಾಜ್ಯಗಳ ಚುನಾವಣೆ ಭರದಲ್ಲಿರುವ ವರಿಷ್ಠರು ಭೇಟಿಗೆ ಸಮಯ ನೀಡಿಲ್ಲ ಎಂದಿದ್ದಾರೆ.

ದಿನನಿತ್ಯ ಟ್ರಾಫಿಕ್ ಜಾಮಿಗೆ ಕಾರಣವಾಗಿದೆ Ksrtc ಮುಂಭಾಗದ ಬ್ಯಾರಿಕೇಡ್

Posted by Vidyamaana on 2023-06-10 08:00:53 |

Share: | | | | |


ದಿನನಿತ್ಯ ಟ್ರಾಫಿಕ್ ಜಾಮಿಗೆ ಕಾರಣವಾಗಿದೆ Ksrtc ಮುಂಭಾಗದ ಬ್ಯಾರಿಕೇಡ್

ಪುತ್ತೂರು: ಇಲ್ಲಿನ‌ KSRTC ಬಸ್ ನಿಲ್ದಾಣಕ್ಕೆ ಜನ ಬರಬೇಕು. ಅದಕ್ಕಾಗಿಯೇ ಬೃಹತ್ ಸಂಕೀರ್ಣ ಕಟ್ಟಿಸಿರುವುದು. ಆದರೆ ಈ ವಾಣಿಜ್ಯ ಸಂಕೀರ್ಣದ ಮುಂಭಾಗ ಪ್ರಯಾಣಿಕರ, ಸಾರ್ವಜನಿಕರ ವಾಹನ ನಿಲ್ಲಿಸಬಾರದು. ಹೇಗಿದೆ ನೋಡಿ‌ ಇಲಾಖೆಯ ಲಾಜಿಕ್!

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಬದಿಯ ಸ್ಬಲ್ಪ ಜಾಗ ಪ್ರಯಾಣಿಕರ ಅನುಕೂಲಕ್ಕಾಗಿ ಈ ಹಿಂದೆ ಬಳಕೆ ಆಗುತ್ತಿತ್ತು. ಅಂದರೆ ತಮ್ಮ ಸ್ವಂತ ವಾಹನ ಅಥವಾ ರಿಕ್ಷಾದಲ್ಲಿ ಬರುವ ಪ್ರಯಾಣಿಕರು ಹತ್ತಿಳಿಯಲು ಇದು ಪ್ರಯೋಜನಕಾರಿಯಾಗಿತ್ತು. ಆದರೆ ಈಗ ಈ ಜಾಗವನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಪರಿಣಾಮ ಬಸ್ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರು ರಸ್ತೆಯಲ್ಲೇ ವಾಹನ ನಿಲ್ಲಿಸಬೇಕಾಗಿದೆ. ಸಮಸ್ಯೆ ಶುರುವಾಗಿದ್ದೇ ಇಲ್ಲಿ. ಇದೀಗ ರಸ್ತೆಯಿಡೀ ಬ್ಲಾಕ್.

ನಿಲ್ದಾಣಕ್ಕೆ ಬರುವ ವಾಹನಗಳು, ನಿರ್ಗಮಿಸುವ ಬಸ್ ಗಳು, ಎಪಿಎಂಸಿ ರಸ್ತೆಯಿಂದ ಆಗಮಿಸುವ ಸಾರ್ವಜನಿಕ ವಾಹನಗಳು ಮುಖ್ಯರಸ್ತೆಯಿಂದ‌ ಆಗಮಿಸುವ ವಾಹನಗಳ ಸಂಚಾರಕ್ಕೆ ತೊಡಕಾಗಿ‌ ಪರಿಣಮಿಸಿದೆ.

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಕೋಟಿ - ಚೆನ್ನಯರ ಹೆಸರು ನಾಮಕರಣದಂದು ಈ ಬ್ಯಾರಿಕೇಡ್ ಹಾಕಲಾಗಿತ್ತು. ಅದು, ಸಚಿವರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದು. ಆದರೆ ಈ ಬ್ಯಾರಿಕೇಡನ್ನು ಅದೇ ಸ್ಥಳದಲ್ಲಿ ಶಾಶ್ವತವಾಗಿಸುವುದೇ?

Ksrtc ನಿಲ್ದಾಣ ಮುಂಭಾಗ ಹಾಕಿರುವ ಬ್ಯಾರಿಕೇಡ್ ಗಳಿಂದ ಪ್ರಯಾಣಿಕರಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ತೊಂದರೆಯಾಗಿದೆ. ಆದ್ದರಿಂದ ಈ ಬ್ಯಾರಿಕೇಡ್ ಗಳನ್ನು ತೆರವು ಮಾಡಬೇಕು ಎಂದು ಪುತ್ತೂರು ವರ್ತಕ ಸಂಘ ಮನವಿ ನೀಡಿತ್ತು. ಆದರೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಂದ ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಉಡುಪಿ ಜಯಲಕ್ಷ್ಮಿ ಸಿಲ್ಕ್ಸ್ ಬಟ್ಟೆ ಮಳಿಗೆಯಲ್ಲಿ ಮಿಸ್ ಫೈರಿಂಗ್

Posted by Vidyamaana on 2023-12-30 22:43:45 |

Share: | | | | |


ಉಡುಪಿ ಜಯಲಕ್ಷ್ಮಿ ಸಿಲ್ಕ್ಸ್ ಬಟ್ಟೆ ಮಳಿಗೆಯಲ್ಲಿ ಮಿಸ್ ಫೈರಿಂಗ್

ಉಡುಪಿ, ಡಿ.30: ನಗರದ ಪ್ರಸಿದ್ದ ಬಟ್ಟೆ ಮಳಿಗೆ ಜಯಲಕ್ಷ್ಮಿ ಸಿಲ್ಕ್ಸ್ ನಲ್ಲಿ ಶನಿವಾರ ಮಧ್ಯಾಹ್ನ ಗನ್ ಮಿಸ್‌ ಫೈರಿಂಗ್‌ ಆಗಿದ್ದು ಸಿಬ್ಬಂದಿಯೊಬ್ಬರು ಗಾಯಗೊಂಡ ಘಟನೆ ನಡೆದಿದೆ.


ಬಟ್ಟೆ ಮಳಿಗೆಯಲ್ಲಿ ಗ್ರಾಹಕರು ಯಾರೋ ಗನ್ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದ್ದು ಅದನ್ನು ಎತ್ತಿಕೊಂಡ ಸಿಬ್ಬಂದಿ ಆಪರೇಟ್‌ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡು ತಗುಲಿದ್ದು, ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ದೌಡಾಯಿಸಿದ್ದು, ಗನ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಗನ್‌ ಯಾರಿಗೆ ಸೇರಿದ್ದು, ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿ

Posted by Vidyamaana on 2023-10-01 18:36:02 |

Share: | | | | |


ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ತಮ್ಮ ಮನೋಜ್ಞ ಅಭಿನಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಟ ನಾಗಭೂಷಣ್ ವಿರುದ್ಧ ಹಿಟ್ ಅಂಡ್ ರನ್ ಕೇಸು ದಾಖಲಾಗಿ ಪೊಲೀಸರು ಅವರನ್ನು ಬಂಧಿಸಿದ್ದಾರೆ  ಎಂದು ತಿಳಿದುಬಂದಿದೆ.


ಕಳೆದ ರಾತ್ರಿ ಬೆಂಗಳೂರಿನಲ್ಲಿ ನಟ ನಾಗಭೂಷಣ್ ಕಾರು ಕನಕಪುರ ರಸ್ತೆಯ ವಸಂತಪುರ ರಸ್ತೆಯ ಅಪಾರ್ಟ್ ಮೆಂಟ್ ಬಳಿ ಆಪಘಾತವಾಗಿದ್ದು, ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ 48 ವರ್ಷದ ಪ್ರೇಮಾ ಎಂಬ ಮಹಿಳೆ ಮೃತಪಟ್ಟರೆ, ಅವರ ಪತಿ ಗಂಭೀರ ಗಾಯಗೊಂಡಿದ್ದಾರೆ. ಉತ್ತರ ಹಳ್ಳಿಯ ಕೆ ಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ನಡೆಯುತ್ತಿದೆ.


ಖಾಸಗಿ ವಾಹಿನಿಯ ಕಾರ್ಯಕ್ರಮ ಮುಗಿಸಿ ಬರುವ ವೇಳೆ ನಾಗಭೂಷಣ ಅವರು ಕಾರು ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ನಾಗಭೂಷಣ ಅವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ ಮೃತಪಟ್ಟಿದ್ದಾರೆ. 

ನಾಗಭೂಷಣ್ ಅವರು ಕಳೆದ ರಾತ್ರಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡುಬಂದು ಫುಟ್​ಪಾತ್​ನಲ್ಲಿ ನಡೆದುಹೋಗುತ್ತಿದ್ದ ಕೃಷ್ಣ ಬಿ (58) ಮತ್ತು ಅವರ ಪತ್ನಿ ಎಸ್ ಪ್ರೇಮ ಅವರಿಗೆ ಡಿಕ್ಕಿ ಹೊಡೆದಿದೆ. ಫುಟ್​ ಪಾತ್​​ಗೆ ಬಂದ ಕಾರು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪ್ರೇಮ ಅವರ ಮುಖ, ತಲೆಗೆ ಗಾಯವಾಗಿ ತೀವ್ರ ರಕ್ತಸ್ತ್ರಾವ ಮೂಗು ಹಾಗೂ ಬಾಯಿಯಿಂದ ರಕ್ತಬಂದು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾರೆ.



Leave a Comment: