ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ಮಂಗಳೂರು | ಜನತಾ ದರ್ಶನದಲ್ಲಿ‌ 366 ಅರ್ಜಿ ಸ್ವೀಕಾರ: ದಿನೇಶ್ ಗುಂಡೂರಾವ್

Posted by Vidyamaana on 2023-09-25 20:27:18 |

Share: | | | | |


ಮಂಗಳೂರು | ಜನತಾ ದರ್ಶನದಲ್ಲಿ‌ 366 ಅರ್ಜಿ ಸ್ವೀಕಾರ: ದಿನೇಶ್ ಗುಂಡೂರಾವ್

ಮಂಗಳೂರು: ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ನಡೆದ‌ ಜನತಾ ದರ್ಶನದಲ್ಲಿ ಒಟ್ಟು 366 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಆರೋಗ್ಯ ‌ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.


ಜನತಾ ದರ್ಶನದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು, ಆ ಅರ್ಜಿಗಳಿಗೆ ಸಕಾಲಕ್ಕೆ ಪರಿಹಾರ ನೀಡುವ ಮೂಲಕ ಜನರಿಗೆ ಸ್ಪಂದಿಸಬೇಕು. ಆದಾಗ ಮಾತ್ರ ಅವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿದೆ‌ ಎನ್ನುವ ಭಾವನೆ ಬರುತ್ತದೆ, ಅದಕ್ಕೆ ಪ್ರಮಾಣಿಕ ಯತ್ನ ಮಾಡುವಂತೆ ಅವರು ಕಿವಿಮಾತು ಹೇಳಿದರು.


ಸ್ವೀಕರಿಸಲಾದ ಎಲ್ಲಾ‌ 366 ಅರ್ಜಿಗಳಿಗೆ ಯಾವ ಕ್ರಮವಹಿಸಬೇಕೆಂಬುದನ್ನು ಅರ್ಜಿ ಮೇಲೆ ನಮೂದಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಜನತಾ ದರ್ಶನ‌ ಮಾಡಲಾಗುವುದು, ಇದರ‌ ಮುಖ್ಯ ಉದ್ದೇಶ ಸಾರ್ವಜನಿಕರಿಗೆ ಆಗಬೇಕಾದ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡುವುದು ಹಾಗೂ ಅವರ ಕಾನೂನು ಬದ್ದ ಬೇಡಿಕೆಯನ್ನು ಈಡೇರಿಸುವುದಾಗಿದೆ, ಇಲ್ಲಿ ವಿಳಂಬ ಆಗಬಾರದು, ಜನರ ಕೆಲಸ ಕಾರ್ಯಗಳಿಗೆ ಅವರನ್ನು ವೃಥಾ ಓಡಾಡಿಸಬಾರದು,‌ ಜನರಿಗೆ ಕಿರುಕುಳ, ತೊಂದರೆ‌ ಆಗದಂತೆ ಕ್ರಮವಹಿಸಬೇಕು ಎಂದರು.


 ಮುಖ್ಯಮಂತ್ರಿಗಳು ಈ ಜನ ಸ್ಪಂದನ ಕಾರ್ಯಕ್ರಮವನ್ನು ಇಡೀ ವರ್ಷದ ಕಾರ್ಯಕ್ರಮವಾಗಿ ತೆಗೆದುಕೊಂಡಿದ್ದು, ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಯತ್ನಿಸಿದ್ದಾರೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ,‌ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ‌ ಇಲಾಖೆಗಳ ಅಧಿಕಾರಿಗಳುನುತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.


ವಿಧಾನ ಸಭಾ ಸದಸ್ಯರಾದ ಅಶೋಕ್ ಕುಮಾರ್‌ ರೈ, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಡಿಸಿ ಮುಲ್ಲೈ ಮುಗಿಲನ್,‌ ಜಿ.ಪಂ. ಸಿಇಒ ಡಾ. ಆನಂದ್,‌‌ ನಗರ‌ ಪೊಲೀಸ್ ಆಯುಕ್ತ ಅನುಪಮ್‌ ಅರ್ಗವಾಲ್, ಎಸ್ಪಿ ರಿಷ್ಯಂತ್ ಸಿ.ಬಿ., ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನೂರಾರು ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

ಪುತ್ತೂರು ನಗರ ಸಭೆ ಉಪಚುನಾವಣೆ ಕೈ ಅಭ್ಯರ್ಥಿಗಳ ಪಟ್ಟಿ ಫೈನಲ್

Posted by Vidyamaana on 2023-12-14 20:44:12 |

Share: | | | | |


ಪುತ್ತೂರು ನಗರ ಸಭೆ ಉಪಚುನಾವಣೆ ಕೈ ಅಭ್ಯರ್ಥಿಗಳ ಪಟ್ಟಿ ಫೈನಲ್

ಪುತ್ತೂರು : ನಗರಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ ಎಂದು ತಿಳಿದು ಬಂದಿದೆ.ಕಾಂಗ್ರೆಸ್ ನಿಂದ ನಗರಸಭೆಯ ವಾರ್ಡ್ 1ರ ಅಭ್ಯರ್ಥಿಯಾಗಿ ದಿನೇಶ್ ಶೇವಿರೆ ಹಾಗೂ ಅದೇ ರೀತಿ ನಗರಸಭೆಯ ವಾರ್ಡ್ 11ರ ಅಭ್ಯರ್ಥಿಯಾಗಿ ದಾಮೋದರ ಭಂಡಾರ್ಕರ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ ಅವರು ತಿಳಿಸಿದ್ದಾರೆ.


ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಡಿ.8 ರಂದು ಜಿಲ್ಲಾಧಿಕಾರಿಗಳು ಅದಿಸೂಚನೆ ಪ್ರಕಟಗೊಳಿಸಲಿದ್ದು, ಅದೇ ದಿನ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಡಿ.15 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಡಿ.16ರಂದು ನಾಮಪತ್ರ ಪರಿಶೀಲನೆ, ಡಿ.18ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ.


ಡಿ.27 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಅವಶ್ಯವಿದ್ದರೆ ಡಿ.29ರಂದು ಮರು‌ಮತದಾನ ನಡೆದು ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.


ನಗರ ಸಭಾ ವ್ಯಾಪ್ತಿ ಹಾಗೂ ಉಪ ಚುನಾವಣೆ ನಡೆಯುವ ವಾರ್ಡ್ ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ಡಿ.8 ರಿಂದ 30 ರ ತನಕ ಜಾರಿಯಲ್ಲಿರಲಿದೆ.

ಕಡಬ : ತನ್ನದಲ್ಲದ ತಪ್ಪಿಗೆ 11 ತಿಂಗಳು ಜೈಲು

Posted by Vidyamaana on 2023-11-21 08:58:31 |

Share: | | | | |


ಕಡಬ : ತನ್ನದಲ್ಲದ ತಪ್ಪಿಗೆ 11 ತಿಂಗಳು ಜೈಲು

ಮಂಗಳೂರು: ತಾನು ಮಾಡದ ತಪ್ಪಿಗೆ ದೂರದ ಸೌದಿ ಅರೇಬಿಯಾದಲ್ಲಿ 11 ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದ. ಯಾರೋ ಮಾಡಿದ ತಪ್ಪಿಗೆ ಆ ಯುವಕ ಬಲಿಪಶುವಾಗಿದ್ದ. ವಿದೇಶಾಂಗ ಇಲಾಖೆ ಸೇರಿದಂತೆ ಎಲ್ಲರ ಪ್ರಯತ್ನದ ಬಳಿಕ ಕಡಬ ಮೂಲದ ಯುವಕ ಮರಳಿ ತಾಯ್ನಾಡು ಸೇರಿದ್ದಾನೆ. ಮಂಗಳೂರು ವಿಮಾನ ನಿಲ್ದಾಣದಿಂದ ಹೊರಬರುತ್ತಲೇ ತಾಯಿ ತನ್ನ ಮಗನನ್ನು ಅಪ್ಪಿ ಹಿಡಿದು ದುಃಖ ಮತ್ತು ಆನಂದ ಎರಡನ್ನೂ ಹರಿಸಿದರು.


ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಚಂದ್ರಶೇಖರ್ ಸೌದಿಯಲ್ಲಿ ಜೈಲು ಪಾಲಾಗಿ ಕಡೆಗೂ ಜೈಲು ಕುಣಿಕೆಯಿಂದ ಪಾರಾಗಿ ಬಂದಿದ್ದಾರೆ. ಅಲ್ಫನಾರ್ ಸಿರಾಮಿಕ್ಸ್ ಎನ್ನುವ ಕಂಪನಿಯಲ್ಲಿ ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಚಂದ್ರು ಅವರಿಗೆ ಭಡ್ತಿ ಸಿಕ್ಕಿದ್ದರಿಂದ ಒಂದು ವರ್ಷದ ಹಿಂದೆ ಸೌದಿ ಅರೇಬಿಯಾದಲ್ಲಿ ಕೆಲಸ ಸಿಕ್ಕಿತ್ತು. ಅಲ್ಲಿಗೆ ತೆರಳಿ ಕೆಲವು ತಿಂಗಳಲ್ಲೇ ಊರಿಗೆ ಮರಳಬೇಕು ಎನ್ನುವಷ್ಟರಲ್ಲಿ ಚಂದ್ರು ಮೊಬೈಲ್ ಸಿಮ್ ಖರೀದಿಗೆ ತೆರಳಿದ್ದರು. ಸಿಮ್ ಖರೀದಿಗಾಗಿ ಕೈ ಬೆರಳಚ್ಚು ನೀಡಿದ್ದ ಅವರು ಸಿಮ್ ಪಡೆಯಲಿದ್ದ ಪ್ರಕ್ರಿಯೆಯನ್ನೂ ಪೂರೈಸಿದ್ದರು. ಮೊಬೈಲಿಗೆ ಬಂದಿದ್ದ ಸಂದೇಶ ಪ್ರಕಾರ, ಓಟಿಪಿಯನ್ನೂ ನೀಡಿದ್ದರು.



ಆದರೆ ವಾರದ ನಂತರ, ರಿಯಾದ್ ಪೊಲೀಸರು ನೇರವಾಗಿ ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು. ಮಹಿಳೆಯೊಬ್ಬರು ತನ್ನ ಖಾತೆಯಿಂದ ಚಂದ್ರು ಖಾತೆಗೆ 22 ಸಾವಿರ ರಿಯಾಲ್ ಹಣ ಹೋಗಿರುವುದಾಗಿ ದೂರು ನೀಡಿದ್ದರು. ಪೊಲೀಸರ ತನಿಖೆಯಲ್ಲಿ ತನ್ನಲ್ಲಿ ಒಂದೇ ಬ್ಯಾಂಕ್ ಖಾತೆ ಇರೋದು, ಅದರಿಂದ ಹಣ ಹೋಗಿಲ್ಲ ಎಂದರೂ ಕೇಳಲಿಲ್ಲ. ಚಂದ್ರು ಹೆಸರಲ್ಲಿಯೇ ನಕಲಿ ಬ್ಯಾಂಕ್ ಖಾತೆ ತೆರೆದಿದ್ದ ಹ್ಯಾಕರ್ಸ್, ಆ ಖಾತೆಗೆ ಮಹಿಳೆಯ ಖಾತೆಯಿಂದ ಹಣವನ್ನು ವರ್ಗಾಯಿಸಿದ್ದರು. ಆನಂತರ, ನಕಲಿ ಖಾತೆಯಿಂದಲೇ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಆಗಿತ್ತು. ಯಾರೋ ಹ್ಯಾಕ್ ಮಾಡಿ ಈ ರೀತಿಯಾಗಿದೆ ಎಂದು ಮನವರಿಕೆ ಮಾಡಿದರೂ, ಪೊಲೀಸರು ಕೇಳದೆ ಚಂದ್ರುವನ್ನು ನೇರವಾಗಿ ಜೈಲಿಗೆ ತಳ್ಳಿದ್ದರು.



ಆನಂತರ, ಚಂದ್ರು ಕೆಲಸ ಮಾಡುತ್ತಿದ್ದ ಕಂಪನಿಯ ಪ್ರತಿನಿಧಿಗಳು ಮತ್ತು ಇತರ ಗೆಳೆಯರು ಸೇರಿ ಸೌದಿ ಕೋರ್ಟಿಗೆ ಮನವರಿಕೆ ಮಾಡಿದರು. ಅಲ್ಲದೆ, ದಂಡ ಕಟ್ಟಲು ಮತ್ತು ಮಹಿಳೆಯ ಹಣವನ್ನು ತೀರಿಸುವುದಕ್ಕೂ ಮುಂದಾಗಿದ್ದರು. ಕೊನೆಗೆ, ಹತ್ತು ಲಕ್ಷ ರೂಪಾಯಿಯಷ್ಟು ಹಣ ಕೊಡುವುದಕ್ಕೆ ಬಂದಿದ್ದು, ಎಲ್ಲವನ್ನೂ ಮಂಗಳೂರು ಮೂಲದ ಗೆಳೆಯರು ಪೂರೈಸಿದ್ದಾರೆ. ಆಮೂಲಕ ಸೌದಿ ಕೋರ್ಟಿನಲ್ಲಿ ಬಿಡುಗಡೆಯಾಗಿ ಬಂದ ಚಂದ್ರಶೇಖರ್ ನನ್ನು ರಿಯಾದ್ ಪೊಲೀಸರು ನೇರವಾಗಿ ಭಾರತಕ್ಕೆ ಕಳಿಸಿಕೊಟ್ಟಿದ್ದಾರೆ. ರಿಯಾದ್ ನಿಂದ ನೇರವಾಗಿ ಮುಂಬೈಗೆ ಬಂದು ಸೋಮವಾರ ಸಂಜೆ ಅಲ್ಲಿಂದ ಮಂಗಳೂರಿಗೆ ರಾತ್ರಿ 7.45ರ ವೇಳೆಗೆ ತಲುಪಿದ್ದಾರೆ. ಅಷ್ಟರಲ್ಲಿ ತಾಯಿ ಹೇಮಾವತಿ, ಅಣ್ಣ ಹರೀಶ್, ಈತನ ಬಿಡುಗಡೆಗಾಗಿ ಪ್ರಯತ್ನಿಸಿದ್ದ ಸಾಮಾಜಿಕ ಕಾರ್ಯಕರ್ತ ಶ್ರೀಧರ ಗೌಡ ಕೊಕ್ಕಡ ಸೇರಿದಂತೆ ಹಲವರು ಇದ್ದರು. ಚಂದ್ರು ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಸ್ವಾಗತಿಸಿದರು.


ಕೋಟಿ ಕೋಟಿ ಅಭಿನಂದನೆ ಎಂದ ಚಂದ್ರು


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಂದ್ರಶೇಖರ್, ನನ್ನ ಬಿಡುಗಡೆಗಾಗಿ ಹಲವರು ಪ್ರಯತ್ನ ಮಾಡಿದ್ದಾರೆ. ಎಲ್ಲರಿಗೂ ಕೋಟಿ ಕೋಟಿ ಅಭಿನಂದನೆ ಹೇಳುತ್ತೇನೆ. ಎಲ್ಲರಿಗೂ ಆಭಾರಿಯಾಗಿದ್ದೇನೆ. ಜೈಲಿನಲ್ಲಿದ್ದರೂ ಕಂಪನಿ ಪ್ರತಿನಿಧಿಗಳು, ಮಂಗಳೂರು ಮೂಲದ ಹಲವರು ಸಹಾಯ ಮಾಡಿದ್ದಾರೆ. ಜೈಲಿನಲ್ಲಿದ್ದಾಗ ಮನೆಯವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಇದರಿಂದ ತುಂಬ ದುಃಖಿತನಾಗಿದ್ದೆ. ಮೊಬೈಲ್ ಕೊಟ್ಟರೂ ಎರಡು ನಿಮಿಷ ಮಾತ್ರ ಬಳಕೆಗೆ ಅವಕಾಶ ಇತ್ತು. ಜೈಲಿನಲ್ಲಿ ಪೊಲೀಸರು ನನಗೆ ಯಾವುದೇ ತೊಂದರೆ ಮಾಡಿಲ್ಲ. ಮರಳಿ ಬರಲು ಕಾರಣವಾದ ಎಲ್ಲರಿಗೂ ಥ್ಯಾಂಕ್ಸ್ ಎಂದು ಹೇಳಿದ್ದಾರೆ. ದೀರ್ಘ ಕಾಲ ಜೈಲಿನಲ್ಲಿದ್ದರಿಂದಲೋ ಏನೋ, ಚಂದ್ರಶೇಖರ್ ಆರಂಭದಲ್ಲಿ ಮಾತನಾಡುವುದಕ್ಕೂ ತೊದಲಿದರು. ಅರಬ್ಬರ ಊರಿನಲ್ಲಿ ಮೌನದಲ್ಲೇ ಇದ್ದವರು ನೇರವಾಗಿ ವಿಮಾನದಲ್ಲಿ ಬಂದು ತಾಯಿ ನೆಲದಲ್ಲಿಯೇ ಬಾಯಿ ತೆರೆದಂತಿತ್ತು. ತಾಯಿ ಹೇಮಾವತಿ, ಅಣ್ಣ ಹರೀಶ್ ಮುಖದಲ್ಲಿ ಅಳುವೇ ಆವರಿಸಿತ್ತು. ಕಣ್ಣೀರು ಹಾಕುತ್ತಾ ಮನೆ ಮಗನನ್ನು ಅಪ್ಪಿ ಹಿಡಿದು ಆಲಿಂಗಿಸಿದರು. ಕಂಪನಿ ಕೆಲಸವೆಂದು ಹೋಗಿದ್ದ ಮಗನಿಗೆ ಹೀಗಾಯಿತಲ್ಲ ಎಂದು ತಾಯಿ ಕಣ್ಣೀರು ಹಾಕಿದರು.

ಪುತ್ತೂರು: ಪ್ರಿಂಟಿಂಗ್ ಪ್ರೆಸ್ ಮಾಲೀಕ ಪದ್ಮಯ್ಯ ಗೌಡ ಆತ್ಮಹತ್ಯೆ

Posted by Vidyamaana on 2023-08-18 03:25:27 |

Share: | | | | |


ಪುತ್ತೂರು: ಪ್ರಿಂಟಿಂಗ್ ಪ್ರೆಸ್ ಮಾಲೀಕ ಪದ್ಮಯ್ಯ ಗೌಡ ಆತ್ಮಹತ್ಯೆ

ಪುತ್ತೂರು: ಅಡ್ಯನಡ್ಕದಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದ ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದ ಪೋಳ್ಯ ನಿವಾಸಿ ಪದ್ಮಯ್ಯ ಗೌಡ (50) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಪುತ್ತೂರಿನ ಕೆನರಾ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪದ್ಮಯ್ಯ ಗೌಡ ಅವರು ಕೆಲ ವರ್ಷದ ಹಿಂದೆ ಅಡ್ಯನಡ್ಕದಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿ, ಅಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸ್ಯವ್ಯವಿದ್ದುಕೊಂಡು ವಾರಕ್ಕೊಮ್ಮೆ ಪೋಳ್ಯದಲ್ಲಿರುವ ಮನೆಗೆ ಹೋಗುತ್ತಿದ್ದರು.ಸೋಮವಾರ ಪದ್ಮಯ್ಯ ಗೌಡ ಅವರ ಸ್ಕೂಟರ್ ಪೋಳ್ಯ ಮನೆಗೆ ಹೋಗುವ ರಸ್ತೆ ಬದಿಯಲ್ಲಿ ಕಂಡು ಬಂದಿತ್ತು. ಅವರ ಮೊಬೈಲಿಗೆ ಕರೆ ಮಾಡಿದಾಗ ಪೋನ್ ರಿಂಗಣಿಸುತ್ತಿತ್ತು. ಇದರ ಜಾಡು ಹಿಡಿದು ಹುಡುಕಾಡಿದಾಗ ಮನೆ ಸಮೀಪದ ತೋಟದ ಬಾವಿಯ ಬಳಿ ಪದ್ಮನಾಭ ಗೌಡ ಅವರ ಬಟ್ಟೆ ಪತ್ತೆಯಾಗಿತ್ತು. ಬಾವಿಯಲ್ಲಿ ಹುಡುಕಾಡಿದಾಗ ಶವ ಪತ್ತೆಯಾಗಿದೆ.


ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIGG NEWS : ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು KEA ಅನುಮತಿ

Posted by Vidyamaana on 2023-10-20 11:08:34 |

Share: | | | | |


BIGG NEWS : ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು KEA ಅನುಮತಿ

ಬೆಂಗಳೂರು : ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ನಡೆಯಲಿರುವ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅನುಮತಿ ನೀಡಿದೆ. ಕೆಇಎ ವಿವಿಧ ನಿಗಮ ಮಂಡಳಿಗಳ ಹುದ್ದೆ ಪರೀಕ್ಷೆಗೆ ಹಿಜಾಬ್ ಧರಿಸಲು ಅವಕಾಶ ನೀಡಿದೆ. ಪರೀಕ್ಷೆಗೆ ಅಭ್ಯರ್ಥಿಗಳು ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್‌ಇ ಹಾಜರಿರಬೇಕು. ಅವರನ್ನು ಮಹಿಳಾ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ ಎಂದು ಕೆಇಎ ತಿಳಿಸಿದೆ.


ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಫೋಟೋ, ಸರ್ಕಾರದ ಮಾನ್ಯ ಮಾಡಿರುವ ಗುರುತಿನ ಚೀಟಿ ತರಬೇಕು. ಪರೀಕ್ಷೆ ಮುಗಿಯುವವರೆಗೂ ಹೊರ ಹೋಗಲು ಅವಕಾಶವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಮುಖ್ಯ ಚುನಾವಣಾ ಆಯುಕ್ತರಿಗೆ Z ಶ್ರೇಣಿಯ ಭದ್ರತೆ

Posted by Vidyamaana on 2024-04-10 06:19:14 |

Share: | | | | |


ಮುಖ್ಯ ಚುನಾವಣಾ ಆಯುಕ್ತರಿಗೆ Z ಶ್ರೇಣಿಯ ಭದ್ರತೆ

ನವದೆಹಲಿ :ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಗೃಹ ಸಚಿವಾಲಯವು ಝಡ್ ಶ್ರೇಣಿಯ ಭದ್ರತೆ ಕಲ್ಪಿಸಿದೆ.ಚುನಾವಣಾ ಆಯೋಗದ ಕಚೇರಿಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಗಲಾಟೆ ನಡೆಸಿದ್ದರು. ಬೆದರಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಭದ್ರತೆ ನೀಡಿದೆ



Leave a Comment: