ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಆಸ್ಪತ್ರೆಗೆ ತೆರಳಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

Posted by Vidyamaana on 2023-09-01 01:50:24 |

Share: | | | | |


ಆಸ್ಪತ್ರೆಗೆ ತೆರಳಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಯನಗರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು.


ಸುಸ್ತು, ಬಳಲಿಕೆಯಿಂದಾಗಿ ಹೆಚ್‌ಡಿಕೆ ಮಂಗಳವಾರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಿನ್ನೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಕೂಡ ಸಿಎಂ ಜೊತೆಗಿದ್ದರು.


ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಸ್ಥಿರವಾಗಿದೆ. ಐಸಿಯುನಿಂದ ಜನರಲ್ ವಾರ್ಡ್‌ಗೆ ಶಿಫ್ಟ್ ಆಗಿದ್ದು, ನಾಳೆ ಅಥವಾ ನಾಡಿದ್ದು ಡಿಸ್ಚಾರ್ಜ್‌ ಆಗುವ ಸಾಧ್ಯತೆ ಇದೆ.


ತಂದೆ ಆರೋಗ್ಯ ಸ್ಥಿರವಾಗಿದ್ದು, ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಕೆಲ ದಿನಗಳು ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದು, ಯಾರೂ ಕೂಡ ಆತಂಕಕ್ಕೆ ಒಳಗಾಗೋದು ಬೇಡ ಅಂತ ನಿಖಿಲ್‌ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಮಾ.7 ಪುತ್ತೂರಿನಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಪುತ್ತೂರು ಸಮಾವೇಶ

Posted by Vidyamaana on 2024-03-06 22:32:01 |

Share: | | | | |


ಮಾ.7 ಪುತ್ತೂರಿನಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಪುತ್ತೂರು ಸಮಾವೇಶ

ಪುತ್ತೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳ ಸಮಾವೇಶವು ಮಾ.7ರಂದು ಕಿಲ್ಲೆಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್‌ ಕುಮಾರ್ ರೈ ಶಾಸಕರ ಕಚೇರಿಯಲ್ಲಿ ಮಾ.4ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ರಾಜ್ಯ ಸರಕಾರ ಆಯೋಜಿಸುವ ಫಲಾನುಭವಿಗಳ ಸಮಾವೇಶವು ಇಡೀ ರಾಜ್ಯದಾದ್ಯಂತ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ನಡೆಯಲಿದೆ. ದ.ಕ ಜಿಲ್ಲೆಯಲ್ಲಿ ಮಾ.5ರಿಂದ ಪ್ರಾರಂಭಗೊಂಡು ಮಾ.10ರ ತನಕ ನಡೆಯಲಿದೆ. ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ಅವರೂ ಭಾಗವಹಿಸುವ ಸಾಧ್ಯತೆಗಳಿವೆ. ಸಮಾವೇಶವು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯ ಮೂಲಕ ಮೂಲೆ ಮೂಲೆಗಳಿಂದ ಫಲಾನುಭವಿಗಳು ಆಗಮಿಸಲಿದ್ದು ಸಮಾವೇಶದಲ್ಲಿ ಸುಮಾರು 20,000 ಮಂದಿ ಸೇರುವ ನಿರೀಕ್ಷೆಯಿದೆ.5 ಗ್ಯಾರಂಟಿ ಯೋಜನೆಗಳಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಕ್ತಿ ಯೋಜನೆಯ ಮೂಲಕ 81.90ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಇದರ ಒಟ್ಟು ಮೊತ್ತ ರೂ.17.88ಕೋಟಿ ಆಗಿದ್ದು ಅದನ್ನು ಸರಕಾರದಿಂದ ಸಾರಿಗೆ ನಿಗಮಕ್ಕೆ ಪಾವತಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ 59,727 ಮಂದಿ, ಗೃಹಜ್ಯೋತಿಯಲ್ಲಿ 30,000 ಮಂದಿ, ಅನ್ನಭಾಗ್ಯದಲ್ಲಿ 24,948 ಮಂದಿ, ಅಂತ್ಯೋದಯದಲ್ಲಿ 2,944 ಹಾಗೂ ಇತ್ತೀಚೆಗೆ ಆರಂಭಗೊಂಡಿರುವ ಯುವನಿಧಿಯಲ್ಲಿ 356 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಲ್ಲಿ ಶೇ.98 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ತಾಂತ್ರಿಕ ತೊಂದರೆಗಳಿಂದ ಕೆಲವು ಮಂದಿಗೆ ಬಾಕಿಯಿದೆ. ಫಲಾನುಭವಿಗಳ ಸಮಾವೇಶದಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಾಗುತ್ತಿದ್ದು ಫಲಾನುಭವಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಚಾರ ವಿಮರ್ಶೆ ಮಾಡಲಾಗುವುದು ಎಂದರು.

ಪುತ್ತೂರು : ಪಕ್ಷೇತರ ಸ್ಪರ್ಧಿಯ ವಿರುದ್ಧ ಬಿಜೆಪಿ ಅಭ್ಯರ್ಥಿಯ ಚುನಾವಣಾ ಏಜೆಂಟರಿಂದ ದೂರು - ಪಕ್ಷದ ಚಿಹ್ನೆ, ದೇಶದ ಪ್ರಧಾನಿ ಹೆಸರು, ಭಾವಚಿತ್ರ ದುರ್ಬಳಕೆ ಆರೋಪ

Posted by Vidyamaana on 2023-04-29 22:59:20 |

Share: | | | | |


ಪುತ್ತೂರು : ಪಕ್ಷೇತರ ಸ್ಪರ್ಧಿಯ ವಿರುದ್ಧ ಬಿಜೆಪಿ ಅಭ್ಯರ್ಥಿಯ ಚುನಾವಣಾ ಏಜೆಂಟರಿಂದ ದೂರು - ಪಕ್ಷದ ಚಿಹ್ನೆ, ದೇಶದ ಪ್ರಧಾನಿ ಹೆಸರು, ಭಾವಚಿತ್ರ ದುರ್ಬಳಕೆ ಆರೋಪ

ಪುತ್ತೂರು : ರಾಜ್ಯದ ಗಮನ ಸೆಳೆದಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮೊದಲ ಬಾರಿಗೆ ಅಭ್ಯರ್ಥಿಯ ಚುನಾವಣಾ ಏಜೆಂಟ್ ಮತ್ತೊರ್ವ ಅಭ್ಯರ್ಥಿಯ ಪರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ಪುತ್ತೂರು ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರವರ ಚುನಾವಣಾ ಏಜೆಂಟ್ ರಾಜೇಶ್ ಬನ್ನೂರು ದೂರು ನೀಡಿದವರು.ಅವರು ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಚಿಹ್ನೆ ಭಾವಚಿತ್ರ, ಪ್ರಧಾನಿ ಹೆಸರು ಭಾವಚಿತ್ರ, ದುರ್ಬಳಕೆ ಮಾಡುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.ಪುತ್ತೂರಿನ ಚುನಾವಣಾ ಕಣದಲ್ಲಿ 8 ಮಂದಿ ಅಭ್ಯರ್ಥಿಗಳಿದ್ದು, ಭಾರತೀಯ ಜನತಾ ಪಾರ್ಟಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ, ಪಕ್ಷೇತರರು ಸ್ಪರ್ಧಿಸುತ್ತಿದ್ದಾರೆ. ಈ ಪೈಕಿ ಓರ್ವ ಪಕ್ಷೇತರ ಅಭ್ಯರ್ಥಿ ತನ್ನ ಪ್ರಚಾರ ಸಾಮಾಗ್ರಿಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಿಕಾ ಪ್ರಟಕಣೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರ ಹೆಸರನ್ನು ಉಲ್ಲೇಖಿಸುತ್ತಿದ್ದಾರೆ ಹಾಗೂ ಭಾವಚಿತ್ರವನ್ನು ಉಪಯೋಗಿಸುತ್ತಿದ್ದು ಮತ್ತು ತಾನು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ ಎಂದು ದೂರಲಾಗಿದೆ.ಆ ಪಕ್ಷೇತರ ಅಭ್ಯರ್ಥಿ ಚುನಾವಣಾ ಆಯೋಗ ತನಗೆ ನೀಡಿದ ಚಿಹ್ನೆಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕೇ ವಿನಃ ರಾಷ್ಟ್ರೀಯ ಪಕ್ಷವೊಂದರ ಚಿಹ್ನೆಯನ್ನು ಪ್ರಚಾರದದಲ್ಲಿ ಉಪಯೋಗಿಸುವುದು, ರಾಷ್ಟ್ರೀಯ ಪಕ್ಷದ ನಾಯಕರ ಭಾವಚಿತ್ರಗಳನ್ನು ಪ್ರಚಾರ ಕಾರ್ಯದಲ್ಲಿ ಕಾನೂನು ರೀತ್ಯಾ ಉಪಯೋಗಿಸುವಂತಿಲ್ಲ.

ಪುತ್ತೂರು: ಕುರಿಯ ಜಾಗದ ತಕರಾರು ಅಕ್ರಮ ಪ್ರವೇಶ ಮನೆ ಧ್ವಂಸ ಲಕ್ಷಾಂತರ ರೂ. ನಷ್ಟ ದೂರು ದಾಖಲು

Posted by Vidyamaana on 2024-03-10 15:42:26 |

Share: | | | | |


ಪುತ್ತೂರು: ಕುರಿಯ ಜಾಗದ ತಕರಾರು ಅಕ್ರಮ ಪ್ರವೇಶ ಮನೆ ಧ್ವಂಸ ಲಕ್ಷಾಂತರ ರೂ. ನಷ್ಟ ದೂರು ದಾಖಲು

ಪುತ್ತೂರು:ಸಂಬಂಧಿಸಿದ ಯಾರೂ ಇಲ್ಲದ ಸಮಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆಸಿಬಿಯಿಂದ ಹೆಂಚಿನ ಮಾಡಿನ ಮನೆಯೊಂದನ್ನು ಕೆಡವಿ ನಷ್ಟ ಉಂಟು ಮಾಡಿದ ಘಟನೆ ಮಾ.9ರ ಮಧ್ಯಾಹ್ನ ಕುರಿಯದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಪುತ್ತೂರು ಆದರ್ಶ ಆಸ್ಪತ್ರೆ ಬಳಿಯಿರುವ ಹೊಟೇಲ್ ಶ್ರೀಲಕ್ಷ್ಮೀ ಇದರ ಮಾಲಕ, ಕುರಿಯ ಹೊಸಮಾರು ನಿವಾಸಿ ವಸಂತ ಪೂಜಾರಿ ಎಂಬವರು ಘಟನೆ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಿ. ನಮ್ಮ ಸ್ವಾಧೀನದಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯೊಳಗೆ ಜೆಸಿಬಿ ನುಗ್ಗಿಸಿ ಮನೆಯನ್ನು ಕೆಡವಿ ಮನೆಯ ವಸ್ತುಗಳನ್ನೆಲ್ಲಾ ನಾಶ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.ಶಶಿಕಲಾ ರೈ,ಮತ್ತವರ ಮಗ ಉಜ್ವಲ್ ರೈ ಹಾಗೂ ಜೆಸಿಬಿ ಆಪರೇಟರ್ ವಿರುದ್ಧ ಅವರು ದೂರು ನೀಡಿದ್ದಾರೆ.ಪೊಲೀಸರು ಕಲಂ 447,448,427,34 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತಕ್ಕೆ 302 ರನ್ ಗಳ ಗೆಲುವು: ಶಮಿ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಲಂಕಾ

Posted by Vidyamaana on 2023-11-02 21:07:57 |

Share: | | | | |


ಭಾರತಕ್ಕೆ 302 ರನ್ ಗಳ  ಗೆಲುವು: ಶಮಿ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಲಂಕಾ

ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂ ನಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಅಬ್ಬರಕ್ಕೆ ನಲುಗಿ ಹೋದ ಶ್ರೀಲಂಕಾ ವಿಶ್ವಕಪ್ ಆಸೆ ಕೈಬಿಟ್ಟಿತು. 302 ರನ್‌ಗಳ ದಾಖಲೆಯ ಜಯ ಸಾಧಿಸಿದ ಭಾರತ ಅಜೇಯ ಯಾತ್ರೆ ಮುಂದುವರಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮತ್ತೆ ವಿರಾಜಮಾನವಾಗಿದೆ. ಲಂಕಾ ಆಡಿದ 7 ಪಂದ್ಯಗಳಲ್ಲಿ 5 ನೇ ಸೋಲು ಅನುಭವಿಸಿತು.

ಭಾರತ ತಂಡ ನೀಡಿದ 358 ರನ್ ಗಳ ದೊಡ್ಡ ಮೊತ್ತ ಬೆನ್ನಟ್ಟಿದ್ದ ಲಂಕಾ ಆರಂಭದಿಂದಲೇ ಭಾರತದ ವೇಗಿಗಳ ದಾಳಿ ತಡೆಯಲಾಗದೆ ನಡುಗಿತು. ಒಬ್ಬರಾದ ಬಳಿಕ ಒಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. 14ಕ್ಕೆ 6 ವಿಕೆಟ್ ಕಳೆದುಕೊಂಡ ಲಂಕಾ ಕೊನೆಗೂ 55 ರನ್ ಗಳಿಸುವಲ್ಲಿ ಯಶಸ್ವಿಯಾಗಿ ಏಷ್ಯಾ ಕಪ್ ಫೈನಲ್ ನಲ್ಲಿ ಅನುಭವಿಸಿದ ಸೋಲಿನ ಕೆಟ್ಟ ದಾಖಲೆಯಿಂದ ದೂರವಾಯಿತು. ಏಷ್ಯಾ ಕಪ್ ನಲ್ಲಿ ಸಿರಾಜ್ ದಾಳಿಗೆ ನಲುಗಿ 50 ಕ್ಕೆ ಆಲೌಟಾಗಿ ಹೀನಾಯ ಸೋಲು ಅನುಭವಿಸಿತ್ತು. 19.4 ಓವರ್ ಗಳಲ್ಲಿ 55 ರನ್ ಗಳಿಗೆ ಆಲೌಟಾಯಿತು.


ಶಮಿ ಮತ್ತೆ ಮೋಡಿ

ಹಾರ್ದಿಕ್ ಪಾಂಡ್ಯ ಗಾಯಾಳಾಗಿ ತಂಡದಿಂದ ಹೊರ ಬಿದ್ದ ಕಾರಣ ಆಡುವ ಬಳಗದಲ್ಲಿ ಕಾಣಿಸಿಕೊಂಡ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್ ನಲ್ಲಿ ಮತ್ತೊಮ್ಮೆ ಐದು ವಿಕೆಟ್ ಸಾಧನೆ ಮಾಡಿದರು. 5 ಓವರ್ ಎಸೆದು 1 ಮೇಡನ್ ಸಹಿತ 18 ರನ್ ನೀಡಿ 5 ವಿಕೆಟ್ ಕಬಳಿಸಿ ತಂಡದಲ್ಲಿ ತನ್ನ ಸಾಮರ್ಥ್ಯ ಮೆರೆದರು.


ಶಮಿ ಏಕದಿನ ಇತಿಹಾಸದಲ್ಲಿ ಸತತ ಮೂರು ಬಾರಿ 4 ಪ್ಲಸ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. 2019 ರ ವಿಶ್ವಕಪ್‌ನಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 4/40, 4/16 ಮತ್ತು 5/69 ರ ನಂತರ ಇದು ಅವರ ಎರಡನೇ ಸರಣಿಯಾಗಿದೆ. ವಕಾರ್ ಯೂನಿಸ್ ಮಾತ್ರ ಈ ಸಾಧನೆಯನ್ನು ಸಾಧಿಸಿದ್ದರು ಮೂರು ಬಾರಿ (1990 ರಲ್ಲಿ ಎರಡು ಬಾರಿ ಮತ್ತು 1994 ರಲ್ಲಿ ಒಮ್ಮೆ). ವಿಶ್ವಕಪ್‌ನಲ್ಲಿ ಭಾರತದ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮೊಹಮ್ಮದ್ ಶಮಿ ಅವರ ಹೆಸರಿನಲ್ಲಿ ದಾಖಲಾಯಿತು. ಒಟ್ಟು 45 ವಿಕೆಟ್ ಪಡೆದಿದ್ದಾರೆ. ಜಹೀರ್ ಖಾನ್ 44 ವಿಕೆಟ್ ಪಡೆದಿದ್ದರು.

ಸಿದ್ದರಾಮಯ್ಯನವರೇ.. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ, ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿ ಮರೀಬೇಡಿ: ಯತ್ನಾಳ್

Posted by Vidyamaana on 2023-12-12 12:37:53 |

Share: | | | | |


ಸಿದ್ದರಾಮಯ್ಯನವರೇ.. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ, ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿ ಮರೀಬೇಡಿ: ಯತ್ನಾಳ್

ಬೆಳಗಾವಿ: ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಯತ್ನಾಳ್ ವಿರುದ್ಧ ಸಿಎಂ ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ. ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿಯನ್ನು ಮಾಡದೇ ಇರಬೇಡಿ ಎಂದು ಎಚ್ಚರಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯನವರೇ.. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ. ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿಯನ್ನು ಮಾಡದೇ ಇರಬೇಡಿ. ಬಿ.ಕೆ.ಹರಿಪ್ರಸಾದ್ ಅವರು ಮಾಧ್ಯಮದಲ್ಲಿ ಯಾರೋ ಹೊರಗಿನಿಂದ ಬಂದವರು ಅಂತಾ ಬೈಯ್ಯುತ್ತಿದ್ದರು. ಮೂಲ ಕಾಂಗ್ರೆಸ್ಸಿಗರು ನಿಮ್ಮನ್ನು ಹೊರಗೆ ಹಾಕಲು ಸಂಚು ರೂಪಿಸುತ್ತಿರುವಂತಿದೆ. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಯತ್ನಾಳ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



Leave a Comment: