ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಡ್ರೀಮ್ ಡೀಲ್ - ಸದಸ್ಯರಿಗೆ ಭರಪೂರ ಬಹುಮಾನ ಇಲ್ಲಿ ಗೆದ್ದವನೇ ಯಜಮಾನ!

Posted by Vidyamaana on 2024-05-01 13:12:24 |

Share: | | | | |


ಡ್ರೀಮ್ ಡೀಲ್ - ಸದಸ್ಯರಿಗೆ ಭರಪೂರ ಬಹುಮಾನ ಇಲ್ಲಿ ಗೆದ್ದವನೇ ಯಜಮಾನ!

(Advertisement)

ಸುರತ್ಕಲ್: ರಾಜ್ಯದಲ್ಲೇ ಪ್ರಥಮ‌ ಎಂಬಂತೆ ತಮ್ಮ ಸದಸ್ಯರಿಗೆ ಭರಪೂರ ಬಹುಮಾನ, ನೂರಾರು ಉಡುಗೊರೆಗಳೊಂದಿಗೆ ಸಾವಿರಾರು ಸದಸ್ಯರನ್ನು ಹೊಂದಿರುವ ಸ್ಕೀಮ್ ಆಗಿದೆ‌ "ಡ್ರೀಮ್ ಡೀಲ್". 

ಡ್ರೀಮ್ ಡೀಲ್ ಬಡವರ ಕನಸಿಗೆ ಬೆಳಕಾಗುವ ಒಂದು ವಿಭಿನ್ನ ಯೋಜನೆ. ಮಂಗಳೂರು, ಬೆಳ್ತಂಗಡಿ, ಮಡಿಕೇರಿ, ಮೈಸೂರು, ಉತ್ತರಕನ್ನಡ, ಚಿಕ್ಕಮಂಗಳೂರು, ಉಡುಪಿ, ಬೆಂಗಳೂರು ಜಿಲ್ಲೆಗಳಲ್ಲಿ ಪ್ರಪ್ರಥಮವಾಗಿ ಆರಂಭವಾಗಿರುವ, ಆರು ಮನೆಗಳು, ಆರು ಕಾರು, ಬೈಕು, ಆಕ್ಟಿವಾ, ಚಿನ್ನದ ಆಭರಣಗಳು, ಡೈಮಂಡ್ ಆಭರಣಗಳು, ನಗದು, ಟೂರ್ ಪ್ಯಾಕೇಜ್ ಹೀಗೆ ಲಕ್ಷಾಂತರ ರೂ.ಮೌಲ್ಯದ ಬಹುಮಾನಗಳ ಸುರಿಮಳೆ ಸುರಿಯುವ ಒಂದು ವಿಭಿನ್ನ ಸ್ಕೀಮ್ ಯೋಜನೆಯಾಗಿದೆ ಡ್ರೀಮ್ ಡೀಲ್. 

ಡ್ರೀಮ್ ಡೀಲ್‌ನಲ್ಲಿ 20ತಿಂಗಳವರೆಗೆ ಪ್ರತಿ ತಿಂಗಳು 1ಸಾವಿರ ರೂ.ಯಂತೆ ಪಾವತಿಸಬೇಕು. ಬಹುಮಾನ ಲಭಿಸದೇ ಇರುವ ಸದಸ್ಯರಿಗೆ, ಅವರ ಉಳಿತಾಯದ ಮೌಲ್ಯಕ್ಕೆ ಸಮಾನವಾದ ಅಥವಾ ಮೊತ್ತಕ್ಕಿಂತ ಹೆಚ್ಚಿನ ಮೌಲ್ಯದ ಬ್ರಾಂಡ್ ಮತ್ತು ಉತ್ತಮ ಗುಣಮಟ್ಟದ ವಸ್ತುಗಳನ್ನು ಆಯ್ಕೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ.

ಉಪ್ಪಿನಂಗಡಿ : ಪತ್ನಿಗೆ ಕಿರುಕುಳ ವಂಚನೆ ಪ್ರಕರಣ

Posted by Vidyamaana on 2023-09-27 12:54:39 |

Share: | | | | |


ಉಪ್ಪಿನಂಗಡಿ : ಪತ್ನಿಗೆ ಕಿರುಕುಳ ವಂಚನೆ ಪ್ರಕರಣ

ಉಪ್ಪಿನಂಗಡಿ : ಪತ್ನಿಗೆ ವಂಚಿಸಿ ಇನ್ನೊಂದು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಮಹಮ್ಮದ್ ಜಲೀಲ್ ಬಂಧಿತ ಆರೋಪಿ.ಜಲೀಲ್ ಮೊದಲ ಪತ್ನಿಯ ತಂದೆ 2020 ರಲ್ಲಿ ಈ ಬಗ್ಗೆ ಠಾಣೆಗೆ ದೂರು ನೀಡಿದ್ದರು.


ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 128 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಾಗಿತ್ತು.


ಜಲೀಲ್ ಪತ್ನಿ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.


2019 ರಲ್ಲಿ ಜಲೀಲ್ ಮದುವೆಯಾಗಿದ್ದು, ಮದುವೆ ಆದ ನಂತರದಲ್ಲಿ ಜಲೀಲ್ ವಿದೇಶಕ್ಕೆ ಹೋಗಿದ್ದು, ಜಲೀಲ್ ಸಹೋದರರು  ಆತನ ಪತ್ನಿ ವಾಸ ಇರುವ ಮನೆಯಲ್ಲಿಯೇ ವಾಸವಿದ್ದು, ಜಲೀಲ್ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದು, ಫೋನ್ ಕರೆಯಲ್ಲಿ  ಕುಟುಂಬಕ್ಕೆ ಮತ್ತು ಜಲೀಲ್ ಪತ್ನಿಗೆ ಅವಾಚ್ಯ ಶಬ್ದಗಳಿಂದ

ಬೈಯುವುದು ಅಲ್ಲದೆ ನೀನು ಮನೆಯಿಂದ ಹೊರಗೆ ಹೋಗು ನಾನು ನಿನಗೆ ತಲಾಖ್ ನೀಡಿರುತ್ತೇನೆ. ನೀನು ನಿನ್ನ ತವರು ಮನೆಗೆ ಹೋಗದಿದ್ದರೆ ನನ್ನ ತಮ್ಮಂದಿರಿಂದ ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ.


 ಬೈದಿರುವುದಲ್ಲದೆ  ನಿಂದಿಸುವುದು, ಆಕೆಗೆ ಆಹಾರ ನೀರು ನೀಡದೆ ಸತಾಯಿಸುವುದು, ಜೀವ ಬೆದರಿಕೆ ಹಾಕಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ.


 ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದವನ್ನು ಪಿಎಸ್ಐ  ರವರ ಮಾರ್ಗದರ್ಶನದಲ್ಲಿ ಹೆಚ್ ಸಿ ಗಜೇಂದ್ರ, ಪಿಸಿ ಅಭಿಜಿತ್ ರವರು ದಸ್ತಗಿರಿ ಮಾಡಿ ಪುತ್ತೂರು ನ್ಯಾಯಲಯಕ್ಕೆ ಹಾಜರುಪಡಿಸಿದರು.

1419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ

Posted by Vidyamaana on 2024-06-19 13:58:32 |

Share: | | | | |


1419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ

ಬೆಂಗಳೂರು : 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ/ ಇತರೆ ಮಾಧ್ಯಮದ ಜೊತೆ ಆಂಗ್ಲ ಮಾಧ್ಯಮ (ದ್ವಿ ಭಾಷಾ) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವ ಬಗ್ಗೆ ಆದೇಶವನ್ನು ಹೊರಡಿಸಲಾಗಿದೆ.ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ 2024-25ನೇ ಸಾಲಿನ (ಫೆಬ್ರವರಿ) ಅಯವ್ಯಯ ಭಾಷಣದ ಕಂಡಿಕೆ 96(5)ರಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಯವರು ಈ ಕೆಳಕಂಡಂತೆ ಘೋಷಿಸಿರುತ್ತಾರೆ.

2000 ಸರ್ಕಾರಿ ಪಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲೀಷ್) ಶಾಲೆಗಳಾಗಿ ಪರಿವರ್ತಿಸಲಾಗುವುದು " ಮೇಲೆ ಓದಲಾದ ಕ್ರಮಾಂಕ (2)ರ ಸರ್ಕಾರದ ಆದೇಶದಲ್ಲಿ ರಾಜ್ಯದ 1000 ಸರ್ಕಾರಿ ಶಾಲೆಗಳಲ್ಲಿ 2019-20ನೇ ಸಾಲಿನಿಂದ 1ನೇ ತರಗತಿಯಿಂದ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆ ಆಂಗ್ಲ ಮಾಧ್ಯಮ (ದ್ವಿ ಭಾಷಾ ಮಾಧ್ಯಮ) ತರಗತಿಯನ್ನು ಕೆಲವು ಷರತ್ತುಗಳೊಂದಿಗೆ ಪ್ರಾರಂಭಿಸಲು ಅನುಮತಿ ನೀಡಿ ಆದೇಶಿಸಲಾಗಿರುತ್ತದೆ.

ಬೆಳ್ಳಾರೆ :ಎನ್‌ಐಎ ಅಧಿಕಾರಿಗಳ ತಂಡ ಮನೆಯೊಂದಕ್ಕೆ ದಿಢೀ‌ರ್ ದಾಳಿ

Posted by Vidyamaana on 2024-03-05 10:14:24 |

Share: | | | | |


ಬೆಳ್ಳಾರೆ :ಎನ್‌ಐಎ ಅಧಿಕಾರಿಗಳ ತಂಡ ಮನೆಯೊಂದಕ್ಕೆ ದಿಢೀ‌ರ್ ದಾಳಿ

ಬೆಳ್ಳಾರೆ, ಮಾ. 05. ಎನ್‌ಐಎ ಅಧಿಕಾರಿಗಳ ತಂಡವೊಂದು ದಾಳಿ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಣೂರು ಸಮೀಪದ ಕುಲಾಯಿತೋಡು ಎಂಬಲ್ಲಿ ಮಂಗಳವಾರದಂದು ಬೆಳ್ಳಂಬೆಳಗ್ಗೆ ನಡೆದಿದೆ.ಎನ್‌ಐಎ ಅಧಿಕಾರಿಗಳ ತಂಡವು ಮನೆಯೊಂದಕ್ಕೆ ದಿಢೀ‌ರ್ ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ನಡೆದ ದಾಳಿ ಇದಾಗಿದೆ ಎನ್ನಲಾಗಿದ್ದು, . ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಬೆಳ್ತಂಗಡಿ: ನದಿಯಲ್ಲಿ ಒಡೆದ ರೀತಿಯಲ್ಲಿ ಕಾಣಿಕೆ ಡಬ್ಬಿಗಳು ಪತ್ತೆ

Posted by Vidyamaana on 2023-06-10 10:49:46 |

Share: | | | | |


ಬೆಳ್ತಂಗಡಿ: ನದಿಯಲ್ಲಿ ಒಡೆದ ರೀತಿಯಲ್ಲಿ  ಕಾಣಿಕೆ ಡಬ್ಬಿಗಳು ಪತ್ತೆ

ಬೆಳ್ತಂಗಡಿ:  ಎರಡು  ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ  ಬಜಕ್ರೆಸಾಲು ಸೇತುವೆ ಅಡಿಯಲ್ಲಿ ಪತ್ತೆಯಾಗಿದೆ. 

ಬೆಳ್ತಂಗಡಿ ತಾಲೂಕಿನ ಲಾಯಿಲದಿಂದ ಮುಂಡೂರು ಸಂಪರ್ಕಿಸುವ ಸೋಮವತಿ ನದಿಗೆ ಬಜಕ್ರೆಸಾಲು ಎಂಬಲ್ಲಿ ಸೇತುವೆಯ ಅಡಿ ಭಾಗದಲ್ಲಿ (ಇಂದು) ಜೂ 10 ರಂದು  ಮಧ್ಯಾಹ್ನ  ಸ್ಥಳೀಯ ನಿವಾಸಿ ರಾಜು ಅವರು  ಕಲ್ಲಿನ ಮೇಲೆ ಇರುವ ಪ್ಲಾಸ್ಟಿಕ್ ಗೋಣಿಗಳನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಎರಡು ಸ್ಟೀಲ್ ಡಬ್ಬಗಳು ಪತ್ತೆಯಾಗಿವೆ. ಈ ಬಗ್ಗೆ ಅವರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಅವರ ಗಮನಕ್ಕೆ ತಂದಾಗ ಅವರು ಪೊಲೀಸ್ ಅವರಿಗೆ ಮಾಹಿತಿ ನೀಡಿದ್ದಾರೆ. ಯಾರೋ ಕಳ್ಳರು ಕಳೆದ ರಾತ್ರಿ ಎಲ್ಲಿಂದಲೂ ಕಳ್ಳತನ ಎಸಗಿ ಗೋಣಿಗಳಲ್ಲಿ ತುಂಬಿಸಿಕೊಂಡು ಬಂದು ಸೇತುವೆ ಅಡಿಯಲ್ಲಿ ಇದನ್ನು ಒಡೆದು ಹಣ ಕಳವು ಗೈದಿರುವ ಶಂಕೆ ಮೂಡಿದೆ. 

ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್ಐ ದೇವಪ್ಪ , ಕ್ರೈಂ ಪಿಸಿಗಳಾದ ಚರಣ್ ರಾಜ್ , ಅಶೋಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಡಬ್ಬದೊಳಗೆ ಬೀಗ ಮತ್ತು ಕೀ ಪತ್ತೆಯಾಗಿದ್ದು . ತನಿಖೆಗಾಗಿ ಎರಡು ಕಾಣಿಕೆ ಡಬ್ಬಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಣಿಕೆ ಡಬ್ಬಿಗಳು ಎಲ್ಲಿಂದ ಕಳ್ಳತನವಾಗಿದೆ. ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಆಂಧ್ರಪ್ರದೇಶ ರಾಜ್ಯಪಾಲರಾಗಿ ಆಗಿ ನೇಮಕ

Posted by Vidyamaana on 2023-02-12 10:44:47 |

Share: | | | | |


ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಆಂಧ್ರಪ್ರದೇಶ ರಾಜ್ಯಪಾಲರಾಗಿ ಆಗಿ ನೇಮಕ

ನವದೆಹಲಿ; ಮೂಡಬಿದರೆ ಮೂಲದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಆಂಧ್ರಪ್ರದೇಶ ಗವರ್ನರ್ ಆಗಿ ನೇಮಕವಾಗಿದ್ದಾರೆ. ಆಂಧ್ರಪ್ರದೇಶದ ಹಾಲಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ.ನೇಮಕಾತಿಗೆ ರಾಷ್ಟ್ರಪತಿ ದೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ಎಸ್.ಅಬ್ದುಲ್ ನಜೀರ್ ಅವರು ದಕ್ಷಿಣ ಕನ್ನಡದ ಬೆಳುವಾಯಿ ಮೂಲದವರಾಗಿದ್ದು, ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಬೆಂಚ್ ಸದಸ್ಯರಾಗಿದ್ದ ಎಸ್.ಅಬ್ದುಲ್ ನಜೀರ್ ಅವರು ಜನವರಿ 14ರಂದು ನಿವೃತ್ತರಾಗಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಲಯ ಸಂಕೀರ್ಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜಸ್ಟಿಸ್ ನಜೀರ್ ಅವರು 1958ರ ಜನವರಿ 5ರಂದು ಜನಿಸಿದರು. ಫೆಬ್ರವರಿ 18, 1983 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಕರ್ನಾಟಕ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ ಅವರು 2003ರ ಮೇ 12 ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.



Leave a Comment: