ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಶ್ರೀ ರಾಮಚಂದ್ರಮನ ನಾಡಿನಿಂದ ಮಹಾಲಿಂಗೇಶ್ವರನ ಸನ್ನಿಧಿಗೆ ಬಂತು ಪವಿತ್ರ ಅಕ್ಷತೆ

Posted by Vidyamaana on 2023-11-27 16:39:47 |

Share: | | | | |


ಶ್ರೀ ರಾಮಚಂದ್ರಮನ ನಾಡಿನಿಂದ ಮಹಾಲಿಂಗೇಶ್ವರನ ಸನ್ನಿಧಿಗೆ ಬಂತು ಪವಿತ್ರ ಅಕ್ಷತೆ

ಪುತ್ತೂರು: ಅಯೋಧ್ಯೆಯಿಂದ ಅಕ್ಷತೆ ಹೊತ್ತ ರಥ ಪುತ್ತೂರನ್ನು ಸೋಮವಾರ ಪ್ರವೇಶಿಸಿತು.

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ. 22ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವತಿಯಿಂದ ದೇಶಾದ್ಯಂತ ಏಕಕಾಲದಲ್ಲಿ ನಡೆಯುವ ಅಕ್ಷತೆ ವಿತರಣೆ ಕಾರ್ಯಕ್ರಮದ ಅಂಗವಾಗಿ ರಥ ಹೊರಟಿದೆ. ರಥ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ ಮೂಲಕ ಆಗಮಿಸಿತು. ಈ ಸಂದರ್ಭದಲ್ಲಿ ಅಕ್ಷತೆ ಹೊತ್ತ ರಥವನ್ನು ಕಳಶ ಹಿಡಿದ ಮಹಿಳೆಯರು ಚೆಂಡೆ, ವಾದ್ಯಗಳ ಮೂಲಕ ಸ್ವಾಗತಿಸಿದರು.ಬಳಿಕ ಅಕ್ಷತೆ ತುಂಬಿದ ಕಲಶವನ್ನು ಮೆರವಣಿಗೆ ಮೂಲಕ ದೇವಸ್ಥಾನದ ಹೊರಾಂಗಣದಲ್ಲಿ ಸುತ್ತು ಬಂದು ದೇವಸ್ಥಾನದ ಒಳಾಂಗಣಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಗರ್ಭಗುಡಿಯಲ್ಲಿ ಅಕ್ಷತೆಯನ್ನಿರಿಸಿ ಪ್ರಾರ್ಥನೆ ಮೂಲಕ ಪೂಜೆ ನೆರವೇರಿಸಲಾಯಿತು. ಬಳಿಕ ಅಕ್ಷತೆಯನ್ನು ಪಾವಿತ್ರ್ಯತೆಯೊಂದಿಗೆ ಇರಿಸಲಾಯಿತು. ಅಕ್ಷತೆಯನ್ನು ಪ್ರತೀ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮನೆ ಮನೆ ಸಂಪರ್ಕ ಅಭಿಯಾನ ಜ. 1 ರಿಂದ 15 ರ ತನಕ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಹಿಂದುವಿನ ಮನೆಗೆ ಈ ಅಕ್ಷತೆಯನ್ನು ಸಂಪರ್ಕ ಅಭಿಯಾನದ ಮೂಲಕ ತಲುಪಿಸಲಾಗುವುದು. ಜ. 7 ರಂದು ಸಂಪರ್ಕ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಮಹಾಸಂಪರ್ಕ ಅಭಿಯಾನ ನಡೆಯಲಿದೆ.ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಮಿತಿ ಸಂಯೋಜಕ್ ರವೀಂದ್ರ ಪಿ., ಸಂಚಾಲಕ ಡಾ. ಕೃಷ್ಣ ಪ್ರಸನ್ನ ಸೇರಿದಂತೆ ಮತ್ತಿತರ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಮೂರೇ ತಿಂಗಳಲ್ಲಿ ಫಲಿಸಿದ ಕೋರಿಕೆ – ಕೊರಗಜ್ಜನ ಸನ್ನಿಧಿಗೆ ಬಂದು ಆ ನಟಿ ತೀರಿಸಿದ್ರು ಹರಕೆ

Posted by Vidyamaana on 2023-08-09 12:32:22 |

Share: | | | | |


ಮೂರೇ ತಿಂಗಳಲ್ಲಿ ಫಲಿಸಿದ ಕೋರಿಕೆ – ಕೊರಗಜ್ಜನ ಸನ್ನಿಧಿಗೆ ಬಂದು ಆ ನಟಿ ತೀರಿಸಿದ್ರು ಹರಕೆ

ಮಂಗಳೂರು: ತುಳುನಾಡಿನ ಕಾರಣಿಕದ ಶಕ್ತಿ ಕೊರಗಜ್ಜನ ಕಾರಣಿಕ ಮತ್ತೊಮ್ಮೆ ಸಾಬೀತುಗೊಂಡಿದೆ. ಇಲ್ಲಿನ ಕುತ್ತಾರು ಕೊರಗಜ್ಜನ ಆದಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ ಹೋಗಿದ್ದ ಮೂರೇ ತಿಂಗಳಿನಲ್ಲಿ ತಮ್ಮ ಬೇಡಿಕೆ ಈಡೇರಿದ ಕಾರಣದಿಂದ ಸ್ಯಾಂಡಲ್ ವುಡ್ ನ ಖ್ಯಾತ ನಟಿ  ಮಾಲಾಶ್ರೀ ಇದೀಗ ಕುತ್ತಾರಿಗೆ ಕುಟುಂಬ ಸಮೇತ ಆಗಮಿಸಿ ತಮ್ಮ ಹರಕೆ ತೀರಿಸಿದ್ದಾರೆ.


ಆ.09ರ ಬುಧವಾರದಂದು ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಕ್ಷೇತ್ರಕ್ಕೆ ತಮ್ಮ ಮಗಳು ಅನನ್ಯಾಳೊಂದಿಗೆ ಆಗಮಿಸಿದ ಮಾಲಾಶ್ರಿ ಅವರು ಇಲ್ಲಿ ಕೊರಗಜ್ಜನಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು. ಆ ಬಳಿಕ ನಮ್ಮ ಕೋರಿಕೆ ಪವಾಡ ಸದೃಶವಾಗಿ ಈಡೇರಿತ್ತು. ಈ ಕ್ಷೇತ್ರದ ಶಕ್ತಿ ಅಪಾರವಾದುದು..’ ಎಂದು ಮಾಲಾಶ್ರೀ ಹೇಳಿದ್ದಾರೆ.


ನಮ್ಮ ಬೇಡಿಕೆಯನ್ನು ಕೊರಗಜ್ಜ ಈಡೇರಿಸಿದ ಕಾರಣ ಹರಕೆ ತೀರಿಸಿ ಆಶೀರ್ವಾದ ಪಡೆದುಕೊಳ್ಳುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆ ನಾನಿಲ್ಲಿ ಬಂದಿದ್ದೇನೆ, ಮುಂದೆಯೂ ಬರುತ್ತೇನೆ ಎಂದು ಮಾಲಾಶ್ರಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಉಪ್ಪಿನಂಗಡಿ : ಇ-ಸಿಗರೇಟು ಮಾರಾಟ ಮೊಬೈಲ್ ಅಂಗಡಿಗೆ ಪೊಲೀಸ್ ದಾಳಿ .

Posted by Vidyamaana on 2023-02-26 03:09:22 |

Share: | | | | |


ಉಪ್ಪಿನಂಗಡಿ : ಇ-ಸಿಗರೇಟು ಮಾರಾಟ ಮೊಬೈಲ್ ಅಂಗಡಿಗೆ ಪೊಲೀಸ್ ದಾಳಿ .

ಉಪ್ಪಿನಂಗಡಿ: ಇ- ಸಿಗರೇಟ್ ಮಾರಾಟ ಮಾಡುತ್ತಿದ್ದ ಮೊಬೈಲ್ ಅಂಗಡಿಯೊಂದಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಮುಕ್ವೆ ಮಣಿಯ ನಿವಾಸಿ ಶೇಖ್ ಹಾರೂನ್ ರವರ ಮಗ ಶೇಖ್ ಶಾಹಿದ್ ನನ್ನು ವಶಕ್ಕೆ ಪಡೆದು ಜಾಮೀನಿನ ಮೂಲಕ ಬಿಡುಗಡೆ ಯಾದ ಘಟನೆ ಫೆ.25 ಶನಿವಾರ ರಾತ್ರಿ ನಡೆದಿದೆ.

ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್‌ನ ಹಿಂಬದಿಯ ಒಳಸಂದಿನಲ್ಲಿರುವ  4 U Best service ಮೊಬೈಲ್‌ ಅಂಗಡಿಯೊಂದರಲ್ಲಿ ಇ- ಸಿಗರೇಟ್ ಮಾರಲಾಗುತ್ತಿದ್ದ ಮಾಹಿತಿ ಪಡೆದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್‌. ಹಾಗೂ ಉಪ್ಪಿನಂಗಡಿ ಪೊಲೀಸ್‌ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ. ಅವರ ತಂಡ ಮೊಬೈಲ್ ಅಂಗಡಿಯಿಂದ ಇ- ಸಿಗರೇಟ್ ಗೆ ಬಳಸಲಾಗುವ ಅಮಲು ಪದಾರ್ಥ, ಸ್ಟೋಕ್ ಮಾಡಲು ಬೇಕಾದ ಟ್ಯೂಬ್ ಗಳನ್ನು ವಶಕ್ಕೆ ತೆಗೆದುಕೊಂಡಿದೆ. ಯುವ ಜನತೆಯನ್ನು ಆಕರ್ಷಿಸುವ ಇ- ಸಿಗರೇಟ್ ಮಾರಾಟ ಕಾನೂನು ಬಾಹಿರವಾಗಿದ್ದು, ಇದು ರಾಜ್ಯದಲ್ಲೇ ಅಪರೂಪದ ಪ್ರಕರಣವಾಗಿದೆ. ಅಕ್ರಮವಾಗಿ ಮಾರಾಟ ಮಾಡಲು ಇರಿಸಿಕೊಂಡಿದ್ದ  ಸುಮಾರು 52  ನಿಷೇಧಿತ ಇ-ಸಿಗರೇಟ್‌ ಇದ್ದು, ಇವುಗಳ ಅಂದಾಜು ಮೌಲ್ಯ ಒಟ್ಟು 26,000/ ಅಂದಾಜಿಸಲಾಗಿದೆ.ನಿಷೇಧಿತ ಇ- ಸಿಗರೇಟ್ ಮಾರಾಟ ಮಾಡುತ್ತಿದ್ದವನ ಮೇಲೆ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ  ಕಾಯ್ದೆ 2019 ರಂತೆ ಕ್ರಮ ಕೈಗೊಳ್ಳಲಾಗಿದೆ.

ವಿಧಾನಸಭಾ ಚುನಾವಣೆ: ಎಸ್‌ಡಿಪಿಐ ಗೆ ಬೆಂಬಲ ಘೋಷಿಸಿದ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್.

Posted by Vidyamaana on 2023-05-06 07:45:04 |

Share: | | | | |


ವಿಧಾನಸಭಾ ಚುನಾವಣೆ: ಎಸ್‌ಡಿಪಿಐ ಗೆ ಬೆಂಬಲ ಘೋಷಿಸಿದ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್.

ಮಂಗಳೂರು: 2023 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದೆ ಈ ಚುನಾವಣೆಯಲ್ಲಿ ಕಾರ್ಮಿಕ ಸಂಘಟನೆಯಾದ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಎಸ್‌ಡಿಪಿಐ ಪಕ್ಷವನ್ನು ಬೆಂಬಲಿಸುತ್ತದೆ ಎಂದು SDTU ರಾಜ್ಯಾಧ್ಯಕ್ಷ ಫಝಲುಲ್ಲಾ ರವರ ಅಧ್ಯಕ್ಷತೆಯಲ್ಲಿ ಏ.28 ರಂದು ರಾಜ್ಯ ಕಚೇರಿಯಲ್ಲಿ ನಡೆದ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ SDTU ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, SDTU ಕಾರ್ಮಿಕರ ಹಕ್ಕು ಮತ್ತು ಅವಕಾಶಗಳಿಗಾಗಿ ನಡೆಸುವ ಎಲ್ಲಾ ಪ್ರಜಾಸತ್ತಾತ್ಮಕ ಹೋರಾಟಗಳಿಗೆ SDPI ಬೆಂಬಲ ಸೂಚಿಸಿ ಸಹಕರಿಸಿವೆ. ಮಾತ್ರವಲ್ಲ ದುಡಿಯುವ ಮತ್ತು ದುರ್ಬಲ ವರ್ಗಗಳ ಮಧ್ಯೆ ಸಾಮಾಜಿಕ ಚಳುವಳಿಯ ಪ್ರಜ್ಞೆ ಹುಟ್ಟಿಸಿ ದೇಶದಾದ್ಯಂತ ಒಂದು ಆಂದೋಲನವಾಗಿ ಪಕ್ಷವೂ ರುಪುಗೊಂಡಿದೆ. ಕಾರ್ಮಿಕರು ಮತ್ತು ಅನ್ನದಾತ ರೈತ ಸೇರಿದಂತೆ ಭಾರತದ ಎಲ್ಲಾ ನಾಗರಿಕರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಕಾರ್ಯನಿರ್ವಹಿಸುವ ಕ್ಯಾಡರ್ ಆಧಾರಿತ ಪಕ್ಷವಾಗಿದ್ದು, ಈ ನಿಟ್ಟಿನಲ್ಲಿ SDPI ಪಕ್ಷಕ್ಕೆ ಕಾರ್ಮಿಕರ ಪರ ಇರುವ ಬಲವಾದ ಗುರಿ SDTU ಸಂಘಟನೆಗಿರುವ ಗುರಿಯಲ್ಲಿ ಸಾಮಿಪ್ಯ ಇದೆ. ಹಾಗಾಗಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಮಟ್ಟದಲ್ಲಿ SDPI ಪಕ್ಷವನ್ನು ಬೆಂಬಲಿಸುತ್ತದೆ ನಮ್ಮ ಎಲ್ಲಾ ಯೂನಿಯನ್ ಸದಸ್ಯರು SDPI ಪಕ್ಷವನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ SDTU ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಕಣ್ಣಂಗಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಾನ, ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಪಾರ್ಲಿಯಾ, ಮಂಗಳೂರು ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್, SDTU ಮಂಗಳೂರು ಘಟಕ ಅಧ್ಯಕ್ಷ ಇಲ್ಯಾಸ್ ಬೆಂಗರೆ ಉಪಸ್ಥಿತರಿದ್ದರು.

ATM ಗ್ರಾಹಕರಿಗೆ ಬಿಗ್ ಶಾಕ್ : ನಗದು ಹಿಂಪಡೆಯುವಿಕೆ ಪ್ರತಿ ವಹಿವಾಟಿಗೆ 23ರೂ.ವರೆಗೆ ಶುಲ್ಕ ಹೆಚ್ಚಳ

Posted by Vidyamaana on 2024-06-19 11:31:50 |

Share: | | | | |


ATM ಗ್ರಾಹಕರಿಗೆ ಬಿಗ್ ಶಾಕ್ : ನಗದು ಹಿಂಪಡೆಯುವಿಕೆ ಪ್ರತಿ ವಹಿವಾಟಿಗೆ 23ರೂ.ವರೆಗೆ ಶುಲ್ಕ ಹೆಚ್ಚಳ

ನವದೆಹಲಿ : ಎಟಿಎಂ ಬಳಸುವ ಗ್ರಾಹಕರಿಗೆ ಎಟಿಎಂ ಇಂಡಸ್ಟ್ರೀ ಒಕ್ಕೂಟ (CATMI) ಬಿಗ್‌ ಶಾಕ್‌ ನೀಡಿದ್ದು, ಎಟಿಎಂನಿಂದ ನಗದು ಹಿಂಪಡೆಯುವಿಕೆಗೆ ವಿನಿಮಯ ಶುಲ್ಕವನ್ನು ಹೆಚ್ಚಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಮತ್ತು ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (NPCI) ಗೆ ಮನವಿ ಮಾಡಿದೆ.

ಜುಲೈ 1 ರಿಂದ ಎಟಿಎಂನಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗಲಿದೆ. ಭಾರತದಲ್ಲಿ ಹೆಚ್ಚಿನ ಜನರು ಹಣವನ್ನು ವಿತ್ ಡ್ರಾ ಮಾಡಲು ಎಟಿಎಂ ಬಳಸುತ್ತಾರೆ ಆದರೆ ಜುಲೈ 1 ರಿಂದ ಬ್ಯಾಂಕ್ ಶಾಖೆಯಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗಲಿದೆ.

ಏಕೆಂದರೆ ಎಟಿಎಂ ನಿರ್ವಾಹಕರು ಶುಲ್ಕವನ್ನು ಹೆಚ್ಚಿಸಲು ಒತ್ತಾಯಿಸುತ್ತಿದ್ದಾರೆ. ಎಟಿಎಂ ನಿರ್ವಾಹಕರು ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಲು ಒತ್ತಾಯಿಸಿದ್ದಾರೆ. ಇಂಟರ್ಚೇಂಜ್ ಶುಲ್ಕವು ಎಟಿಎಂಗಳಿಂದ ಹಣವನ್ನು ಹಿಂಪಡೆಯುವಾಗ ಗ್ರಾಹಕರು ಪಾವತಿಸುವ ಶುಲ್ಕವಾಗಿದೆ. ಇದರ ಶುಲ್ಕವನ್ನು ಹೆಚ್ಚಿಸಿದರೆ, ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ಗ್ರಾಹಕರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ರಾಜಧರ್ಮ ಪಾಲಿಸಿದ ಶಾಸಕ ಅಶೋಕ್ ಕುಮಾರ್ ರೈ

Posted by Vidyamaana on 2023-09-30 22:09:16 |

Share: | | | | |


ರಾಜಧರ್ಮ ಪಾಲಿಸಿದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು; ಅಧಿಕಾರದಲ್ಲಿರುವವರು ನ್ಯಾಯ ಪಾಲಿಸಬೇಕು, ರಾಜಧರ್ಮ ಪಾಲಿಸಬೇಕಾಗಿರುವುದು ಕರ್ತವ್ಯವೂ ಆಗಿದೆ ಆದರೆ ಕೆಲವರು ಆ ಕರ್ತವ್ಯವನ್ನು ಮರೆತು ಅಧಿಕಾರ ಅನುಭವಿಸಿದವರೂ ಇದ್ದಾರೆ . ಆದರೆ ಪುತ್ತೂರು ಶಾಸಕರು ಈ ವಿಚಾರದಲ್ಲಿ ತಮ್ಮ ಕರ್ತವ್ಯವನ್ನು ಮರೆತಿಲ್ಲ. ತನ್ನ ಸಹೋದರಿ ನಳಿನಿ ಶೆಟ್ಟಿ ಶನಿವಾರದಂದು ಶಾಸಕರನ್ನು ಭೇಟಿಯಾಗಲು ಶಾಸಕರ ಕಚೇರಿಗೆ ಬಂದಿದ್ದರು. ಶಾಸಕರನ್ನು ಭೇಟಿಯಾಗಲು ಬಂದಿರುವ ಸಾರ್ವಜನಿಕರ ಸಂಖ್ಯೆಯೂ ಅಪಾರವಾಗಿತ್ತು. ತನ್ನ ಸಹೋದರಿ ತನಗಾಗಿ ಕಾಯುತ್ತಿದ್ದಾರೆ ಎಂಬ ವಿಚಾರ ಶಾಸಕರಿಗೆ ಗೊತ್ತಿತ್ತು. ಆದರೆ ಶಾಸಕರು ತನ್ನ ಸಹೋದರಿಯನ್ನು ಕರೆಯಲಿಲ್ಲ.‌ಸರತಿ ಸಾಲಿನಲ್ಲೇ ಬಂದ ನಳಿನಿ ಶೆಟ್ಟಿಯವರು ಅರ್ಜಿ ಸಲ್ಲಿಸಿ ಅಲ್ಲಿಂದ ತೆರಳಿದರು.‌ಶಾಸಕರ ಈ ನ್ಯಾಯದ ನಡೆ ಅಲ್ಲಿದ್ದವರಿಗೆ ಶಾಸಕರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿತು



Leave a Comment: