ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಸುಳ್ಯ ಪೈಚಾರ ನಿವಾಸಿ ಇಸಾಕ್ ನೇಣು ಬಿಗಿದು ಆತ್ಮಹತ್ಯೆ

Posted by Vidyamaana on 2024-03-04 14:42:34 |

Share: | | | | |


ಸುಳ್ಯ ಪೈಚಾರ ನಿವಾಸಿ ಇಸಾಕ್  ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ಇಲ್ಲಿನ ಜೂನಿಯರ್ ಕಾಲೇಜು ರಸ್ತೆ ಬಳಿ ಇರುವ ಸದರ್ನ್ ರೆಸಿಡೆನ್ಸಿಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾ :04 ರಂದು ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ  ಪೈಚಾರ್‌ ಮೂಲದ ನಿವಾಸಿ ಲಾರಿ ಚಾಲಕ ಇಸಾಕ್ ಎಂದು ಗುರುತಿಸಲಾಗಿದೆ.   ಮಾ ೨ ರಂದು ರೆಸಿಡೆನ್ಸಿಗೆ ಬಂದಿದ್ದರು. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಾವರದಲ್ಲಿ ಮನೆಯೊಂದರ ಮೇಲೆ ಕುಸಿದ ಗುಡ್ಡ

Posted by Vidyamaana on 2023-07-07 04:37:35 |

Share: | | | | |


ನಂದಾವರದಲ್ಲಿ ಮನೆಯೊಂದರ ಮೇಲೆ ಕುಸಿದ ಗುಡ್ಡ

ಬಂಟ್ವಾಳ : ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಗುಂಪು ಮನೆಯಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು ಮಹಿಳೆಯೋರ್ವರು ಮೃತಪಟ್ಟು, ಯುವತಿಯೋರ್ವಳು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

   ಮನೆಯೊಳಗೆ ಸಿಲುಕಿ ಹಾಕಿಕೊಂಡಿದ್ದ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಣ್ಣಿನೊಳಗಿದ್ದ ಮಹಿಳೆಯನ್ನು ರಕ್ಷಣೆ ಮಾಡಲು ಮಾಡಿದ ಸತತ ಪ್ರಯತ್ನ ವಿಫಲವಾಗಿದೆ. ಮಹಿಳೆ ಮೃತಪಟ್ಟಿದ್ದಾರೆ.

   ನಂದಾವರ ನಿವಾಸಿ ಮಹಮ್ಮದ್ ಅವರ ಪತ್ನಿ ಝರೀನಾ(47) ಹಾಗೂ ಶಫಾ(20) ಮನೆಯಡಿಯಲ್ಲಿ ಸಿಲುಕಿ ಹಾಕಿಕೊಂಡವರು. ಝರಿನಾ ಅವರು ಮೃತಪಟ್ಟಿದ್ದು,  ಸಫಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕೆಲವು ಗಂಟೆಗಳ ಕಾಲ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ತೊಡಗಿದ್ದರು. ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು, ತಾಲೂಕು ಆಡಳಿತದ ಸಿಬಂದಿ, ತಹಶೀಲ್ದಾರ್ ಎಸ್.ಬಿ.ಕೂಡಲಗಿ ಸ್ಥಳಕ್ಕೆ ಧಾವಿಸಿದ್ದಾರೆ.

ಕುರಿಯ ; ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರೆಯುವ ಪುಸ್ತಕ, ಛತ್ರಿ ವಿತರಣೆ

Posted by Vidyamaana on 2024-06-26 13:25:21 |

Share: | | | | |


ಕುರಿಯ ; ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರೆಯುವ ಪುಸ್ತಕ, ಛತ್ರಿ ವಿತರಣೆ

ಪುತ್ತೂರು: ದ.ಕ.ಜಿ.ಪಂ, ಹಿರಿಯ ಪ್ರಾಥಮಿಕ ಶಾಲೆ ಕುರಿಯದಲ್ಲಿ ಜೂ. ೨೧ ರಂದು ೭೭ ಮಂದಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ, ಛತ್ರಿ ವಿತರಣೆ ಮಾಡಲಾಯಿತು.

ಕೊಡುಗೆ: ಆರ್ಯಾಪು ಗ್ರಾ.ಪಂ ಸದಸ್ಯ  ಬೂಡಿಯಾರ್ ಪುರುಷೋತ್ತಮ ರೈರವರು ತನ್ನ ಸಹೋದರ ಮಾಧವ ರೈಯವರ ೫೦ನೇ ವರ್ಷದ ಪುಣ್ಯ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕವನ್ನು ಕೊಡುಗೆ ನೀಡಿದರು. ಇದೇ ಸಂಧರ್ಭದಲ್ಲಿ  ಆರ್ಯಾಪು ಗ್ರಾ.ಪಂ, ಸದಸ್ಯ ನಾಗೇಶ್‌ರವರು ಛತ್ರಿ ಕೊಡುಗೆಯಾಗಿ ನೀಡಿದರು.

ಕನ್ನಡ ಮಾಧ್ಯಮ ಕಲಿಕೆಯಿಂದಲೂ ಉನ್ನತ ಸ್ಥಾನ- ಪುರುಷೋತ್ತಮ ರೈ: ಆರ್ಯಾಪು ಗ್ರಾ.ಪಂ, ಸದಸ್ಯ ಬೂಡಿಯಾರ್ ಪುರುಷೋತ್ತಮ ರೈಯವರು ಮಾತನಾಡಿ ಈಗಿನ ಪೋಷಕರಿಗೆ ಇಂಗ್ಲೀಷ್ ಮಾಧ್ಯಮ ಫ್ಯಾಶನ್ ಆಗಿದೆ. ಆದರೆ  ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಮಾಡುವುದರಿಂದಲೂ ಉನ್ನತವಾದ ಸ್ಥಾನವನ್ನು ಪಡೆದವರು ತುಂಬಾ ಮಂದಿ ಇದ್ದಾರೆ. ಈ ನಿಟ್ಟಿನಲ್ಲಿ ಕುರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ಒಂದನೆ ತರಗತಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕುರಿಯ ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಹೆಚ್ಚು ಮುತುವರ್ಜಿಯನ್ನು ವಹಿಸಿಕೊಳ್ಳಬೇಕು. ನಾನು ಕಳೆದ  ೨೫ ವರ್ಷಗಳಿಂದ ಇಡಬೆಟ್ಟು ಹಾಗೂ ೫ ವರ್ಷಗಳಿಂದ ಕುರಿಯ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಕೊಡುಗೆಯಾಗಿ ನೀಡುತ್ತಿzನೆ. ಪ್ರತಿಯೊಬ್ಬರು ನಮ್ಮ ಊರಿನ ಶಾಲೆಯ  ಮೇಲೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ

Posted by Vidyamaana on 2024-04-16 12:19:46 |

Share: | | | | |


ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ

ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ ಅವರು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.


ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ದ್ವಾರಕೀಶ್ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ದ್ವಾರಕೀಶ್, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದ್ದರು.

28 ವರ್ಷಗಳಿಂದ ಗ್ರಾಹಕರ ಪಾದ ರಕ್ಷಣೆ ಯಲ್ಲಿ ಸಾರ್ಥಕ ವ್ಯವಹಾರಕ್ಕೆ ಹೊಸ ರೂಪ ನವೀಕೃತ ಚಪ್ಪಲ್ ಬಜಾರ್ ಮಳಿಗೆ ಶುಭಾರಂಭ

Posted by Vidyamaana on 2024-03-08 07:58:29 |

Share: | | | | |


28 ವರ್ಷಗಳಿಂದ ಗ್ರಾಹಕರ ಪಾದ ರಕ್ಷಣೆ ಯಲ್ಲಿ ಸಾರ್ಥಕ ವ್ಯವಹಾರಕ್ಕೆ ಹೊಸ ರೂಪ ನವೀಕೃತ ಚಪ್ಪಲ್ ಬಜಾರ್ ಮಳಿಗೆ ಶುಭಾರಂಭ

ಪುತ್ತೂರು: ಸುಮಾರು 26 ವರ್ಷಗಳ ಸುದೀರ್ಘ ಪಯಣದಲ್ಲಿ  ಗ್ರಾಹಕರ ಮನಸೂರೆಗೊಂಡಿರುವ ರಫೀಕ್ ಎಂ.ಜಿ. ಮಾಲಕತ್ವದ ನಯಾ ಚಪ್ಪಲ್ ಬಜಾರ್ ಇದೀಗ ಆಧುನಿಕತೆಗೆ ತಕ್ಕಂತೆ ನವೀಕೃತಗೊಂಡು ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿ ಹವಾನಿಯಂತ್ರಿತವುಳ್ಳ ಹೊಸತನದ ರೂಪವನ್ನು ಕಂಡುಕೊಂಡು ಮಾ.7 ರಂದು ಗ್ರಾಹಕರ ಸೇವೆಗೆ ಸಿದ್ಧವಾಗಿ ಲೋಕಾರ್ಪಣೆಗೊಂಡಿದೆ.


ನವೀಕೃತಗೊಂಡ ಮಳಿಗೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆಗೊಳಿಸಿ ಮಾತನಾಡಿ, ನಾನೋರ್ವ ಸಾಮಾನ್ಯ ಮನುಷ್ಯ. ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ ಮುಂತಾದೆಡೆ ಕಿತ್ತಳೆ ಹಣ್ಣನ್ನು ಮಾರಿಕೊಂಡಿದ್ದ ನನ್ನ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ 2013 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2020ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ನನ್ನ ಸಾಧನೆಯ ಹಿಂದೆ ಮಾಧ್ಯಮಗಳ ಪ್ರಚಾರ ಕೂಡ ಬಹಳ ಮಹತ್ವದ್ದು.


ನವೀಕೃತಗೊಂಡ ಪ್ರಾರಂಭಗೊಂಡ ಈ ಪಾದರಕ್ಷೆ ಮಳಿಗೆಯು ಮತ್ತಷ್ಟು ಜನಮನ್ನಣೆ ಗಳಿಸುತ್ತಾ ಮುಂದುವರೆಯಲಿ ಎಂದು ಹೇಳಿ ಶುಭಹಾರೈಸಿದರು.

ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ರಫೀಕ್ ಸಹೋದರರ ಪಾದರಕ್ಷೆ ಮಳಿಗೆಯು ಪುತ್ತೂರಿನಲ್ಲಿ ಕ್ರಾಂತಿಯನ್ನು ಎಬ್ಬಿಸಿದೆ. ಉತ್ತಮ ನಡವಳಿಕೆ, ವ್ಯಕ್ತಿತ್ವವುಳ್ಳವರು ನರನು ನಾರಾಯಣ, ಮನುಷ್ಯ ಮಾಧವನಾಗಬಲ್ಲ ಅಲ್ಲದೆ ಎತ್ತರದ ಶಿಖರಕ್ಕೆ ಏರಬಲ್ಲವನಾಗಿದ್ದಾನೆ. ಸಾಧನೆ ಮೂಲಕ ಹಾಜಬ್ಬರವರು ಸಮಾಜದಲ್ಲಿ ಹೇಗೆ ಗುರುತಿಸಿಕೊಂಡಿದ್ದಾರೋ ನಾವು ಕೂಡ ಅಂತಹ ಸಾಧನೆಯನ್ನು ಮಾಡುವವರಾಗಬೇಕು. ಈ ನಿಟ್ಟಿನಲ್ಲಿ ಕಳೆದ 40 ವರ್ಷಗಳ ಆತ್ಮೀಯತೆ ಹೊಂದಿರುವ ನನ್ನ ಸಹಪಾಠಿ ಎಂ.ಜಿ ರಝಾಕ್ಸಹೋದರರ ಈ ಉದ್ದಿಮೆ ಯಶಸ್ವಿಯಾಗಲಿ ಎಂದರು.


ಅಧ್ಯಕ್ಷತೆ ವಹಿಸಿದ ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ನನ್ನ ಮತ್ತು ರಫೀಕ್‌ರವರ ಸ್ನೇಹ 23 ವರ್ಷದ್ದು. ರಫೀಕ್‌ರವರು ರಿಸ್ಕ್ ಎದುರಿಸಿಕೊಂಡು ಹಾಗೂ ಪ್ರಯತ್ನ ಹಾಕಿಕೊಂಡು ಉದ್ಯಮಕ್ಕೆ ಕೈ ಹಾಕಿ ಯಶಸ್ಸನ್ನು ಕಂಡುಕೊಂಡವರು. ಅವರ ಪಾರದರ್ಶಕ ಹಾಗೂ ಗುಣಮಟ್ಟದ ಸೇವೆಯು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅಲ್ಲದೆ ನ್ಯೂರೋ ಸರ್ಜನ್ ಡಾ.ಜಸ್ಪೀತ್‌ ಸಿಂಗ್‌ರವರು ತಿಂಗಳಿಗೆ ಒಂದು ಬಾರಿ ಪುತ್ತೂರಿನ ಜನೆತೆಗೆ ಸೇವೆ ನೀಡುವಂತಾಗಲಿ ಎಂದರು.


ಜಿಲ್ಲೆ 317ಡಿ ಇದರ ಲಿಯೋ ಅಧ್ಯಕ್ಷೆ ಹಾಗೂ 2023-24ರ ಲಿಯೋ/ಲಯನ್ ಕ್ಯಾಬಿನೆಟ್ ಸದಸ್ಯೆ ಡಾ.ರಂಜಿತಾ ಎಚ್‌.ಶೆಟ್ಟಿ ಮಾತನಾಡಿ, ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭ ನನ್ನ ತಾಯಿ ಪಾದರಕ್ಷೆ ಖರೀದಿಗೆ ಇದೇ ಅಂಗಡಿಗೆ ಕರೆದುಕೊಂಡು ಬರುತ್ತಿದ್ದರು. ಪುತ್ತೂರು ಪರ್ಲ್ ಸಿಟಿಗೆ ತೆರೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಮಳಿಗೆಗಳು ಪೂರಕವಾಗಿ ಪರಿಣಮಿಸುತ್ತದೆ. ಹಿಂದೆಯೂ ಪುತ್ತೂರಿನ ಜನತೆಗೆ ಓಳ್ಳೆಯ ಸೇವೆಯನ್ನು ನೀಡಿದೆ, ಮುಂದಿನ ದಿನಗಳಲ್ಲೂ ಅದೇ ಸೇವೆ ಮುಂದುವರೆಯಲಿ ಎಂದರು.

ಪುತ್ತೂರು ಸಂಯುಕ್ತ ಜಮಾಅತ್ ಸಮಿತಿ ಅಧ್ಯಕ್ಷ ಹಾಗೂ ಕಲ್ಲೇಗ ಜುಮಾ ಮಸ್ಟಿದ್ ಅಧ್ಯಕ್ಷ ಮೊಹಮದ್ ಹಾಜಿ ಕೆ.ಪಿ, ಪುತ್ತೂರು-ದರ್ಬೆ ಬಿ.ಒ.ಬಿ ಚೀಫ್ ಮ್ಯಾನೇಜರ್ ಸಾದಿಕ್ ಎಸ್.ಎಂ, ಪುತ್ತೂರು ಸಿಝರ್, ಅಗ್ರಿನ್ ಸಂಸ್ಥೆಯು ಮುಖ್ಯಸ್ಥ ಪಿ.ಎನ್ ಪ್ರಸನ್ನ ಕುಮಾರ್ ಶೆಟ್ಟಿ, ನಗರ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಮಹಮದ್ ಆಲಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನ್ಯೂ ಮಂಗಳೂರು ಫರ್ನಿಚರ್ ಸಂಸ್ಥೆಯ ಮುಖ್ಯಸ್ಥ ಇಸ್ಮಾಯಿಲ್, ರೋಟರಿ ಕ್ಲಬ್ ಪುತ್ತೂರು ಇದರ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು, ಪುತ್ತೂರು ವರ್ತಕರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಸಹಿತ ಹಲವರು ಉಪಸ್ಥಿತರಿದ್ದರು.

ಪುಟಾಣಿ ಮಕ್ಕಳು ಪ್ರಾರ್ಥಿಸಿದರು. ನಯಾ ಚಪ್ಪಲ್ ಬಝಾರ್ ಮಾಲಕ ಎಂ.ಜಿ ರಫೀಕ್ ಸ್ವಾಗತಿಸಿ, ಹಿರಿಯ ಸಹೋದರ ಪುತ್ತೂರು ಮದರ್ ಇಂಡಿಯಾ ಮಾಲಕ ಎಂ.ಜಿ ರಝಾಕ್ ವಂದಿಸಿದರು. ನಿವೃತ್ತ ಹಿರಿಯ ಶಿಕ್ಷಕ ಹಾಗೂ ರೋಟರಿ ಕ್ಲಬ್ ಪುತ್ತೂರು ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹಿಂದೂ ಧರ್ಮ ದ ಬಗ್ಗೆ ಅವಹೇಳನ ಹೇಳಿಕೆ ಆರೋಪ : ಶಾಲಾ ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತು

Posted by Vidyamaana on 2024-02-12 16:14:10 |

Share: | | | | |


ಹಿಂದೂ ಧರ್ಮ ದ ಬಗ್ಗೆ ಅವಹೇಳನ ಹೇಳಿಕೆ ಆರೋಪ : ಶಾಲಾ ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತು

ಮಂಗಳೂರು: ಶಾಲೆಯೊಂದರ ಶಿಕ್ಷಕಿಯೊಬ್ಬರು ಹಿಂದೂ ಧರ್ಮ, ಶ್ರೀರಾಮ, ಅಯೋಧ್ಯೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಶಿಕ್ಷಕಿಯನ್ನು ಅಮಾನತುಗೊಳಿಸಿ ಶಾಲಾ ಆಡಳಿತ ಮಂಡಳಿ ಆದೇಶಿಸಿದೆ.ಮಂಗಳೂರಿನ ಸಂತ ಜೆರೋಸಲಾ ಶಾಲೆಯಲ್ಲಿನ 7ನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬುವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು.ಶಿಕ್ಷಕಿಯ ಹೇಳಿಕೆ ಖಂಡಿಸಿ ಶಾಸಕ ವೇದವ್ಯಾಸ ಕಾಮತ್ ಜೊತೆಗೂಡಿ ಹಿಂದೂ ಕಾರ್ಯಕರ್ತರು ಶಾಲೆಯ ಬಳಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಮುತ್ತಿಗೆಗೂ ಯತ್ನಿಸಿದ್ದರು.


ಈ ಘಟನೆಯ ನಂತ್ರ ಸಂತ ಜೆರೋಸಲಾ ಶಾಲೆಯ ಆಡಳಿತ ಮಂಡಳಿಯು 7ನೇ ತರಗತಿ ಶಿಕ್ಷಕಿ ಪ್ರಭಾ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ. ಈ ಮೂಲಕ ತಾತ್ಕಾಲಿಕವಾಗಿ ಪ್ರಕರಣಕ್ಕೆ ಬ್ರೇಕ್ ನೀಡಲಾಗಿದೆ.



Leave a Comment: