ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಮಂಗಳೂರು ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

Posted by Vidyamaana on 2023-11-23 10:53:49 |

Share: | | | | |


ಮಂಗಳೂರು  ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

ಮಂಗಳೂರು: ಲಾಡ್ಜ್ ನ ರೂಮ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ಮೃತಪಟ್ಟಿರುವ ಘಟನೆ ನಗರದ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ನಡೆದಿದೆ.


ಯಶ್ರಾಜ್ ಎಸ್.ಸುವರ್ಣ(43) ಮೃತರು ಎಂದು ತಿಳಿದು ಬಂದಿದೆ.


ನಗದರ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ಮಧ್ಯರಾತ್ರಿ 12:35 ಕ್ಕೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಯಶ್ರಾಜ್ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿದ್ದು, ಬಾಗಿಲಿನ ಚಿಲಕ ಹಾಕಿಕೊಂಡಿದ್ದರು. ಅನಂತರ ಲಾಡ್ಜ್ ನವರು ತೆರೆದಾಗಬೆಂಕಿ ಆವರಿಸಿತ್ತು.


ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

ಇನ್ನರ್‌ವೀಲ್ ಕ್ಲಬ್ ಪುತ್ತೂರು ಅಧ್ಯಕ್ಷರಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ಶ್ರೀದೇವಿ ರೈ

Posted by Vidyamaana on 2023-06-13 23:20:14 |

Share: | | | | |


ಇನ್ನರ್‌ವೀಲ್ ಕ್ಲಬ್ ಪುತ್ತೂರು ಅಧ್ಯಕ್ಷರಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ಶ್ರೀದೇವಿ ರೈ

ಪುತ್ತೂರು: ಪುತ್ತೂರು ಇನ್ನ‌ವೀಲ್ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ಶ್ರೀದೇವಿ ರೈ, ಕೋಶಾಧಿಕಾರಿಯಾಗಿ ಸೀಮಾ ನಾಗರಾಜ್‌ರವರು ಆಯ್ಕೆಗೊಂಡಿದ್ದಾರೆ.

ಕ್ಲಬ್‌ನ ಸಂಪಾದಕಿಯಾಗಿ ಸುಧಾ ಕಾರ್ಯಪ್ಪ, ISO ಆಗಿ ಆಶಾ ನಾಯಕ್, ವೆಬ್ ಕೋ-ಆರ್ಡಿನೇಟರ್ ಆಗಿ ವಚನಾ ಜಯರಾಮ್‌ ರವರು ಆಯ್ಕೆಯಾಗಿರುತ್ತಾರೆ.

ನಿಕಟಪೂರ್ವ ಅಧ್ಯಕ್ಷೆಯಾಗಿ ಟೈನಿ ದೀಪಕ್, ಉಪಾಧ್ಯಕ್ಷೆಯಾಗಿ ರಾಜೇಶ್ವರಿ ಆಚಾ‌ ಹಾಗೂ ನಿರ್ದೇಶಕರುಗಳಾಗಿ ರಾಜೇಶ್ವರಿ ಬಲರಾಮ್, ರಮಾ ಪ್ರಭಾಕರ್, ಪುಷ್ಪಾ ಕೆದಿಲಾಯ, ವೈ. ವಿಜಯಲಕ್ಷ್ಮಿ ಶೆಣೈ ಮತ್ತು ವೀಣಾ ಜಿ.ಕೆರವರು ಆಯ್ಕೆಯಾಗಿರುತ್ತಾರೆ.

ಲೈನ್ ಎ ಲೈಟ್" ಎನ್ನುವುದು ಇನ್ನರ್‌ವೀಲ್ ಕ್ಲಬ್‌ನ ಈ ವರ್ಷದ ಧೈಯ ವಾಕ್ಯ. ಆರೋಗ್ಯ, ಸ್ವಚ್ಛತೆ, ಕಡಿಮೆ ಪೇಪರ್ ಬಳಕೆ, ಮಹಿಳಾ ಸಬಲೀಕರಣ, ಪರಿಸರ ಕಾಳಜಿ, ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು ಹೀಗೆ ಹಲವಾರು ಯೋಜನೆಗಳು ಈ ಧೈಯ ವಾಕ್ಯದಡಿ ಬರುತ್ತದೆ. ಕ್ಲಬ್‌ನ ಎಲ್ಲಾ ಸದಸ್ಯರುಗಳು ಇದಕ್ಕೆ ಪೂರಕವಾದ ಚಟುವಟಿಕೆಗಳನ್ನು ಮಾಡಲಿದ್ದಾರೆ ಎಂದು ನಿಯೋಜಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಇವರು ತಿಳಿಸಿದ್ದಾರೆ.

ನಾಳೆ ಪದಗ್ರಹಣ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.15ರಂದು ಬೆಳಗ್ಗೆ 11ರಿಂದ ರೋಟರಿ ಮನೀಷಾ ಹಾಲ್‌ನಲ್ಲಿ ನಡೆಯಲಿದೆ. ಪದಗ್ರಹಣವನ್ನು ಜಿಲ್ಲಾ ISO ರಜನಿ ಭಟ್‌ರವರು ನಡೆಸಿಕೊಡಲಿದ್ದಾರೆ.

ನಮ್ಮ MLA ಇನಿ ಒಂಚಿ ಉಲ್ಲೆರಿಗೆ.

Posted by Vidyamaana on 2023-08-14 02:58:39 |

Share: | | | | |


ನಮ್ಮ MLA ಇನಿ ಒಂಚಿ ಉಲ್ಲೆರಿಗೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 14 ರಂದು


ಬೆಳಗ್ಗೆ  10:00 ವಿದ್ಯಾ ರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ  12 ನೇ ವರ್ಷದ ಸ್ಥಾಪಕರ ದಿನಾಚರಣೆ 



ಬೆಳಗ್ಗೆ  11:00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್  ನಿ. ಬ್ಯಾಂಕಿನ  ಪುತ್ತೂರು ಶಾಖಾ ಕಟ್ಟಡದಲ್ಲಿ  ಹೊಸ ಎಟಿಎಂ ಉದ್ಘಾಟನೆ 


ಮದ್ಯಾಹ್ನ  3:00 ಗಂಟೆಗೆ ಲಯನ್ಸ್ ಕ್ಲಬ್ ತಾಲೂಕ್ ಒಕ್ಕೂಟ ಸಂಘ ಸಂಸ್ಥೆಯಿಂದ  ಆಟಿದ ಕೂಟ  ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ

ಪೆನ್‌ಡ್ರೈವ್ ಪ್ರಕರಣ: ಕೊನೆಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ- ಮೇ 31ಕ್ಕೆ ಭಾರತಕ್ಕೆ ಬರ್ತೀನಿ: ವಿದೇಶದಿಂದಲೇ ಹೇಳಿಕೆ ಕೊಟ್ಟ ಪ್ರಜ್ವಲ್

Posted by Vidyamaana on 2024-05-27 16:35:55 |

Share: | | | | |


ಪೆನ್‌ಡ್ರೈವ್ ಪ್ರಕರಣ: ಕೊನೆಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ- ಮೇ 31ಕ್ಕೆ ಭಾರತಕ್ಕೆ ಬರ್ತೀನಿ: ವಿದೇಶದಿಂದಲೇ ಹೇಳಿಕೆ ಕೊಟ್ಟ ಪ್ರಜ್ವಲ್

ಬೆಂಗಳೂರು : ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶದೆಲ್ಲೆಡೆ ಕಿಡಿ ಹೊತ್ತಿದ ನಂತರ ಒಂದು ತಿಂಗಳ ಬಳಿಕ ಪ್ರತ್ಯಕ್ಷರಾಗಿದ್ದಾರೆ. ಈ ಕುರಿತು ವಿಡಿಯೋ ರಿಲೀಸ್ ಮಾಡಿರುವ ಪ್ರಜ್ವಲ್, ಮೇ 31ಕ್ಕೆ ಎಸ್‌ಐಟಿ ತನಿಖೆಗೆ ಬರುವುದಾಗಿ ಖುದ್ದು ಹೇಳಿದ್ದಾರೆ.ಇನ್ನು ಪ್ರಕರಣ ಸಂಬಂಧ ಮಾತನಾಡುತ್ತಾ ರಾಜ್ಯದ ಹಾಗೂ ಜೆಡಿಎಸ್ ಕಾರ್ಯಕರ್ತರ ಕ್ಷೆಮೆಯಾಚಿಸಿದ್ದಾರೆ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ ಕೆಲ ಶಕ್ತಿಗಳು ನನ್ನ ವಿರುದ್ಧ ಈ ರೀತಿ ಪಿತೂರಿ ಮಾಡಿದ್ದಾರೆ. ಹೀಗಾಗಿ ಎಲ್ಲರ ಕ್ಷಮೆ ಕೇಳುವೆ ಎಂದಿದ್ದಾರೆ.

ದ.ಕ ಜಿಲ್ಲೆ ಸೇರಿ ಕರಾವಳಿಯಲ್ಲಿ ಮೂರು ದಿನ ಬಿಸಿಗಾಳಿ ಸಾಧ್ಯತೆ: ಹವಾಮಾನ ಇಲಾಖೆ

Posted by Vidyamaana on 2024-04-27 13:31:37 |

Share: | | | | |


ದ.ಕ ಜಿಲ್ಲೆ ಸೇರಿ ಕರಾವಳಿಯಲ್ಲಿ ಮೂರು ದಿನ ಬಿಸಿಗಾಳಿ ಸಾಧ್ಯತೆ: ಹವಾಮಾನ ಇಲಾಖೆ

ಮಂಗಳೂರು: ದ.ಕ. ಜಿಲ್ಲೆ‌ ಸೇರಿ ಕರಾವಳಿಯಲ್ಲಿ ಬೇಸಿಗೆಯ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎ.30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಹೇಳಿದೆ.

ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ದ.ಕ, ಉಡುಪಿ ಸಹಿತ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ವರದಿ ಮಾಡಿದೆ.

ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಇರಬಾರದು ಸೂರು ನೀರು ಕರೆಂಟಿಲ್ಲದ ಮನೆಯೇ ಇರಬಾರದು: ಶಾಸಕ ಅಶೋಕ್ ಕುಮಾರ್ ರೈ

Posted by Vidyamaana on 2023-08-28 13:54:49 |

Share: | | | | |


ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಇರಬಾರದು ಸೂರು ನೀರು ಕರೆಂಟಿಲ್ಲದ ಮನೆಯೇ ಇರಬಾರದು: ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ನಾನು ಬಡತನದಿಂದ ಮೇಲೆ ಬಂದವ, ಬಡತನ ಏನೆಂಬುದು ನನಗೆ ಗೊತ್ತಿದೆ ಈ ಕಾರಣ ನಾನು ಹಸಿವನ್ನು ಚೆನ್ನಗಿ ಬಲ್ಲೆ, ನಾನು ಈಗ ಶಾಸಕನಾಗಿದ್ದೇನೆ ನನ್ನ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಹಸಿವಿನಿಂದ ಮಲಗಬಾರದು, ಸೂರು, ಕುಡಿಯುವ ನೀರು ಮತ್ತು ಕರೆಂಟ್ ಎಲ್ಲರಿಗೂ ಸಿಗುವಂತಾಗಬೇಕಂಬುದೇ ನನ್ನ ಉದ್ದೇಶವಾಗಿದೆ ನನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ಇವೆಲ್ಲವನ್ನೂ ನೀಡಿಯೇ ಸಿದ್ದ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಆ. ೨೮ ರಂದು ಪುತ್ತೂರಿನಲ್ಲಿ ತನ್ನ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

೯೪ಸಿ ಮತ್ತು ೯೪ ಸಿಸಿ ಇದು ಇಲ್ಲಿನ ಬಡವರ ಹಕ್ಕು. ಯಾರೆಲ್ಲಾ ಸರಕಾರಿ ಜಾಗದಲ್ಲಿ ಮನೆ ಮಾಡಿಕೊಂಡಿದ್ದಾರೆ, ಅವರು ಮನೆ ಕಟ್ಟಿರುವ ಜಾಗ ಕಾನೂನು ಪ್ರಕಾರ ಸರಕಾರಕ್ಕೆ ಸೇರಿದ್ದೇ ಅದಲ್ಲಿ ಅವರಿಗೆ ಹಕ್ಕು ಪತ್ರ ಕೊಟ್ಟೇ ಕೊಡ್ತೇನೆ. ಅಕ್ರಮ ಸಕ್ರಮ ಅರ್ಜಿಗಳನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಿದ್ದು ನಯಾ ಪೈಸೆ ಲಂಚ ಕೊಡದೆ ಅಕ್ರಮಸಕ್ರಮ ಕಡತವನ್ನು ವಿಲೇವಾರಿ ಮಾಡಿಸುತ್ತೇನೆ. ಮನೆ ಕಟ್ಟಲು ಜಾಗವೇ ಇಲ್ಲದವರಿಗೆ ೩ ಸೆಂಟ್ಸ್ ಜಾಗವನ್ನು ನೀಡಿ ಅವರಿಗೆ ಸೂರು ಕಲ್ಪಿಸುವ ಯೋಜನೆ ಇದೆ ಇದಕ್ಕಾಗಿ ವಿಟ್ಲದಲ್ಲಿ ೭ ಎಕ್ರೆ ಜಾಗ ಮತ್ತು ಕುಂಬ್ರ ಸಮೀಪ ಸ್ವಂತ ಹಣದಿಂದ ಜಾಗವನ್ನು ಖರೀದಿ ಮಾಡಿದ್ದೇನೆ. ಈಗಾಗಲೇ ಜಾಗವೇ ಇಲ್ಲದ ೬೦೦ ಮಂದಿ ನಿವೇಶನಕ್ಕಾಗಿ ಅರ್ಜಿ ಕೊಟ್ಟಿದ್ದಾರೆ. ವಿಧವೆಯವರಿಗೆ , ಅನಾಥರಿಗೆ, ನಿರ್ಗತಿಕರಿಗೆ ಮೊದಲ ಆದ್ಯತೆ ಮೇರೆಗೆ ಜಾಗವನ್ನು ಕೊಡಲಿದ್ದೇನೆ ಮತ್ತು ಪ್ರತೀ ಗ್ರಾಮದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಅದನ್ನು ಕಾನೂನಾತ್ಮಕವಾಗಿ ಬಡವರಿಗೆ ಹಂಚುವ ಕೆಲಸವನ್ನು ಮಾಡುತ್ತೇನೆ. ನಾನು ಚುನಾವಣೆಗೆ ಮುಂಚೆ ನಿಮಗೆ ಕೊಟ್ಟ ಭರವಸೆಯನ್ನು ಮರೆತಿಲ್ಲ ಎಂದು ಹೇಳಿದ ಶಾಸಕರು ಕ್ಷೇತ್ರದ ಅಭಿವೃದ್ದಿಗೆ ಜನರ ಸಹಕಾರವನ್ನು ಕೋರಿದರು.



Leave a Comment: