ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಫೆ 11.ಶಾರ್ಜಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಮಹಬ್ಬ ಫ್ಯಾಮಿಲಿ ಫೆಸ್ಟ್ -24

Posted by Vidyamaana on 2024-02-03 17:37:33 |

Share: | | | | |


ಫೆ 11.ಶಾರ್ಜಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಮಹಬ್ಬ ಫ್ಯಾಮಿಲಿ ಫೆಸ್ಟ್ -24

ದುಬೈ: ಶಾರ್ಜಾದ ಅಲ್ ಬತ್ತೆಯ್ಯ ಪಾರ್ಕ್ ನಲ್ಲಿ ನಡೆಯುವ ಮಹಬ್ಬ ಫ್ಯಾಮಿಲಿ ಫೆಸ್ಟ್ -24ಕ್ಕೆ

ನಫೀಸ್ ಗ್ರೂಪ್ ನ ಚೈರ್ಮನ್ ಜನಾಬ್ ಅಬುಸ್ವಾಲಿ ಹಾಜಿ ಅವರಿಗೆ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.

ಜನಾಬ್ ಅಬುಸ್ವಾಲಿ ಹಾಜಿ ಅವರ ದುಬೈ ನಿವಾಸದಲ್ಲಿ ಕೆ.ಸಿ.ಎಫ್. ನಾಯಕರು ಊರಿನ ಹಾಗೂ ದುಬೈಯಲ್ಲಿರುವ ಎಲ್ಲಾ ಉದ್ಯಮಿಯವರಿಗೆ ಆಮಂತ್ರಣ ಪತ್ರಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಯು.ಎ.ಇ ಕರ್ನಾಟಕ ಕಲ್ಚರಲ್ ಫೌಂಡೇಶನಿನ  ದಶಮಾನೋತ್ಸವ ಪ್ರಯುಕ್ತ ಫೆಬ್ರವರಿ 11ರಂದು ಮಹಬ್ಬ ಫ್ಯಾಮಿಲಿ ಫೆಸ್ಟ್ -24 ನಡೆಯಲಿದೆ.

ಕೆ.ಸಿ.ಎಫ್ ಯು.ಎ.ಇ  ಮಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಝಐನುದ್ದೀನ್ ಹಾಜಿ ಬೆಳ್ಳಾರೆ,

ಕೆ.ಸಿ.ಎಫ್ ಯು.ಎ.ಇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೂಸಹಾಜಿ ಬಸರ, ಕೆ.ಸಿ.ಎಫ್ ಮಹಬ್ಬ ಸ್ವಾಗತ ಸಮಿತಿ ಕೋಶಾಧಿಕಾರಿ ಶುಕೂರ್ ಹಾಜಿ ಉಳ್ಳಾಲ, ಉದ್ಯಮಿಗಳಾದ ಜನಾಬ್ ಅಬುಸ್ವಾಲಿ ಹಾಜಿ, ಜನಾಬ್ ಮನ್ಸೂರ್ ಆಝದ್, ಜನಾಬ್ ಮಮ್ತಾಜ್ ಆಲಿ, ಬ್ಯಾರಿ ಕಲ್ಚರಲ್ ಫೋರಂ ಅಧ್ಯಕ್ಷ ಡಾಕ್ಟರ್ ಯೂಸುಫ್, ಜನಾಬ್ ಲತೀಫ್ ಮುಲ್ಕಿ, ಜನಾಬ್ ಇಬ್ರಾಹಿಂ ಹಾಜಿ ಗಡಿಯಾರ್, ಜನಾಬ್ ಅಬ್ದುಲ್ ಸಮದ್ ಹಾಜಿ, ಜನಾಬ್ ಜಾವೀದ್ ಹಾಜಿ, ಖಯಿರತ್ ಅಲ್ ಶಮ್ಸ್ ಕಾಂಟ್ರಾಕ್ಟ್ಯಿಂಗ್ ಕಂಪನಿ ದುಬೈ ಇದರ ಮಾಲೀಕ ಜನಾಬ್ ಆಶ್ರಫ್ ಶಾ ಮಂತೂರ್ ಉಪಸ್ಥಿತರಿದ್ದರು.

ಗಾಂಜಾ ನಶೆಯಲ್ಲಿ ಚೂರಿ ಹಿಡಿದು ರಸ್ತೆ ಮಧ್ಯೆ ಯುವಕನ ಧಾಂದಲೆ ! ಸಿನಿಮೀಯ ರೀತಿಯಲ್ಲಿ ಲಾಕ್ ಮಾಡಿದ ಕೊಣಾಜೆ ಪೊಲೀಸರು

Posted by Vidyamaana on 2023-08-20 09:45:26 |

Share: | | | | |


ಗಾಂಜಾ ನಶೆಯಲ್ಲಿ ಚೂರಿ ಹಿಡಿದು ರಸ್ತೆ ಮಧ್ಯೆ  ಯುವಕನ ಧಾಂದಲೆ ! ಸಿನಿಮೀಯ ರೀತಿಯಲ್ಲಿ ಲಾಕ್ ಮಾಡಿದ ಕೊಣಾಜೆ ಪೊಲೀಸರು

ಉಳ್ಳಾಲ: ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ತೇಲುತ್ತಿದ್ದ ಯುವಕನೋರ್ವ ನಾಟೆಕಲ್ ಎಂಬಲ್ಲಿ ರಸ್ತೆ ಡಿವೈಡರ್ ನಲ್ಲಿ ದಾಂಧಲೆ ನಡೆಸಿದ್ದು ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು ಯುವಕನನ್ನ ಸಿನಿಮೀಯ ರೀತಿಯಲ್ಲಿ ಲಾಕ್ ಮಾಡಿ ಜೈಲಿಗಟ್ಟಿದ್ದಾರೆ. 


ಉಳ್ಳಾಲ ಮುಕ್ಕಚ್ಚೇರಿ, ಕೈಕೋ ರೋಡ್ ನಿವಾಸಿ ಅಬ್ಬೂಬಕ್ಕರ್ ಸಿದ್ಧೀಕ್(24) ಬಂಧಿತ ಯುವಕ. ನಿನ್ನೆ ದೇರಳಕಟ್ಟೆ ಸಮೀಪದ ನಾಟೆಕಲ್ ಜಂಕ್ಷನ್ ನಲ್ಲಿ ಘಟನೆ ನಡೆದಿದೆ. ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಸಿದ್ಧೀಕ್ ರಸ್ತೆ ಮಧ್ಯದ ಡಿವೈಡರ್ ನಲ್ಲಿ ಕಲ್ಲು ಮತ್ತು ಚೂರಿ ಹಿಡಿದು ಧಾಂದಲೆ ನಡೆಸುತ್ತಿದ್ದ. ಈ ವೇಳೆ ಯಾರೋ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಕೊಣಾಜೆ ಮತ್ತು ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಸಿದ್ಧೀಕನ್ನ ಲಾಕ್ ಮಾಡಿ ಪೊಲೀಸ್ ವಾಹನಕ್ಕೆ ತಳ್ಳಿದ್ದಾರೆ.ಕೊಣಾಜೆ ಠಾಣೆಯ ಪೊಲೀಸ್ ಸಿಬ್ಬಂದಿ ಮಾಜಿ ಯೋಧ ಸಂತೋಷ್ ಎಂಬವರು ಚಾಣಾಕ್ಷತನದಿಂದ ಸಿದ್ಧೀಕನ್ನ ಲಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆಯನ್ನ ಯಾರೋ ಮೊಬೈಲಲ್ಲಿ ರೆಕಾರ್ಡ್ ಮಾಡಿದ್ದು ವೀಡಿಯೋ ತುಣುಕು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರೋಪಿ ಅಬ್ಬೂಬಕ್ಕರ್ ಸಿದ್ಧೀಕ್ ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಅಮಲು ಪದಾರ್ಥ ಸೇವಿಸಿದ್ದು ಧೃಢಪಟ್ಟ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


IAS ಅಧಿಕಾರಿ ಪುತ್ರಿ ಸೂಸೈಡ್, ಡೆತ್ ನೋಟ್‌ನಲ್ಲಿದೆ ಸಾವಿನ ರಹಸ್ಯ

Posted by Vidyamaana on 2024-06-03 18:53:29 |

Share: | | | | |


IAS ಅಧಿಕಾರಿ ಪುತ್ರಿ ಸೂಸೈಡ್, ಡೆತ್ ನೋಟ್‌ನಲ್ಲಿದೆ ಸಾವಿನ ರಹಸ್ಯ

ಮಹಾರಾಷ್ಟ್ರ ಕೇಡರ್ ಐಎಎಸ್ ಅಧಿಕಾರಿಗಳ (IAS Officers) 27 ವರ್ಷದ ಪುತ್ರಿಯೊಬ್ಬಳು ಇಂದು ಮುಂಜಾನೆ ದಕ್ಷಿಣ ಮುಂಬೈನ ಬಹುಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಎಎಸ್ ಅಧಿಕಾರಿಗಳಾದ ರಾಧಿಕಾ ಮತ್ತು ವಿಕಾಸ್ ರಸ್ತೋಗಿ (R

non

hika And Vikas Rastogi) ಅವರ ಪುತ್ರಿ ಲಿಪಿ ರಸ್ತೋಗಿ ಆತ್ಮಹತ್ಯೆಗೆ (Lipi Rastogi Suicide) ಶರಣಾದ ಯುವತಿ ಎಂದು ತಿಳಿದು ಬಂದಿದೆ.

ಕಾನೂನು ವಿದ್ಯಾರ್ಥಿನಿಯಾಗಿದ್ದ ಲಿಪಿ, ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರಾಜ್ಯ ಸಚಿವಾಲಯದ ಬಳಿಯ ಸುರುಚಿ ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಜಿಗಿದಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

ಸಾವಿನ ಹಿಂದಿನ ಕಾರಣ

ನಾನು ಎಲ್ಲರ ಸ್ಪೀಕರ್ : ಸಚಿವ ಝಮೀರ್ ಹೇಳಿಕೆಗೆ ಯು.ಟಿ. ಖಾದರ್ ಆಕ್ಷೇಪ

Posted by Vidyamaana on 2023-11-18 15:07:05 |

Share: | | | | |


ನಾನು ಎಲ್ಲರ ಸ್ಪೀಕರ್ : ಸಚಿವ ಝಮೀರ್ ಹೇಳಿಕೆಗೆ ಯು.ಟಿ. ಖಾದರ್ ಆಕ್ಷೇಪ

ಮಂಗಳೂರು: ನಾನು ಎಲ್ಲರ ಸ್ಪೀಕರ್. ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ ಎಂದು ಹೇಳುವ ಮೂಲಕ ಸಚಿವ ಝಮೀರ್ ಅಹ್ಮದ್ ಹೇಳಿಕೆಗೆ ಸ್ಪೀಕರ್ ಯು.ಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.



ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನು ಕೂಡ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದೆ. ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ಕೊಡೋದು ಅಲ್ಲ. ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಹಾಗೂ ಅಲ್ಲಿ ಕೂರುವ ನಾವು ಗೌರವ ಉಳಿಸುವ ಕೆಲಸ ಮಾಡಬೇಕು ಎಂದರು.



ನಾನು ಯಾರ ಹೇಳಿಕೆಗೂ ಕಮೆಂಟ್ ಮಾಡೋದಿಲ್ಲ. ನನ್ನನ್ನು ಜಾತಿ, ಧರ್ಮದ ಆಧಾರದಲ್ಲಿ ಯಾರು ಸಹ ಆ ಪೀಠದಲ್ಲಿ ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಕೂರಿಸಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದ ಕುಮಾರಸ್ವಾಮಿ

Posted by Vidyamaana on 2023-07-14 16:02:32 |

Share: | | | | |


123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದ ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಮುಂಗಾರು ಜಂಟಿ ಅಧಿವೇಶನ ಮುಂದುವರಿದಿದೆ. ವಿಧಾನ ಪರಿಷತ್​​ನಲ್ಲಿ ರಾಜ್ಯಪಾಲರ ಭಾಷಣದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.  


5 ಚುನಾವಣೆಗಳ ಪೈಕಿ 2 ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದ ಸಿದ್ದರಾಮಯ್ಯ ಕಾಂಗ್ರೆಸ್​​ ಚುನಾವಣೆ ವೇಳೆ 5 ಗ್ಯಾರಂಟಿ ಘೋಷಣೆ ಮಾಡಿದ್ದೆವು. ಜನ ನಮ್ಮ ಪಕ್ಷವನ್ನು ನಂಬುತ್ತಾರೆ ನಿಮ್ಮನ್ನು ನಂಬಲ್ಲ. ಜೆಡಿಎಸ್​ ಕೂಡ ಪಂಚರತ್ನ ಘೋಷಣೆ ಮಾಡಿತ್ತು. ಹೆಚ್ ​ಡಿ ಕುಮಾರಸ್ವಾಮಿ 123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

 ಜೆಡಿಎಸ್ (JDS)​​ ಶೇಕಡಾವಾರು ಮತ ಶೇ.19ರಿಂದ ಶೇ.13ಕ್ಕೆ ಕುಸಿದಿದೆ. 2005ರವರೆಗೆ ನಾನು ಜೆಡಿಎಸ್​ನಲ್ಲೇ ಇದ್ದೆ. ನಾನು ಜೆಡಿಎಸ್​ ಬಿಡಲಿಲ್ಲ, ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ನನ್ನನ್ನು ಉಚ್ಚಾಟಿಸಿದರು. ಕಾಂಗ್ರೆಸ್​​ ಪಕ್ಷದಿಂದ 2 ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ. ಕಾಂಗ್ರೆಸ್​ಗೆ ನಾನು ಚಿರಋಣಿ ಆಗಿರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಂಗಳೂರು: ನೂತನ ಪೊಲೀಸ್ ಆಯುಕ್ತರಾಗಿ ಅನುಪಮ್ ಅಗರ್ವಾಲ್ ಅಧಿಕಾರ ಸ್ವೀಕಾರ

Posted by Vidyamaana on 2023-09-07 16:05:24 |

Share: | | | | |


ಮಂಗಳೂರು: ನೂತನ ಪೊಲೀಸ್ ಆಯುಕ್ತರಾಗಿ ಅನುಪಮ್ ಅಗರ್ವಾಲ್ ಅಧಿಕಾರ ಸ್ವೀಕಾರ

ಮಂಗಳೂರು: ನೂತನ ಪೊಲೀಸ್ ಆಯುಕ್ತರಾಗಿ ಅನುಪಮ್ ಅಗರ್ವಾಲ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ಅಧಿಕಾರ ಹಸ್ತಾಂತರಿಸಿದರು.

ನೂತನ ಆಯುಕ್ತ ಅಗರ್ವಾಲ್ ರಾಜಸ್ಥಾನದ ಜೋಧ್ಪುರದವರು. ಈ ಹಿಂದೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ, ದಾವಣಗೆರೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಳಗಾವಿಯಲ್ಲಿ ಉಪಪೊಲೀಸ್ ಆಯುಕ್ತರಾಗಿ, ರಾಮನಗರ ಮತ್ತು ವಿಜಯಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.



Leave a Comment: