ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ಬಿ.ಆರ್. ಶೆಟ್ಟಿ ಎಂಬ ಬ್ಯಸಿನೆಸ್ ಟೈಕೂನ್ ರಾತ್ರೋರಾತ್ರಿ ಬೀದಿಗೆ ಬಂದಿದ್ದು ಹೇಗೆ?

Posted by Vidyamaana on 2023-10-05 08:28:34 |

Share: | | | | |


ಬಿ.ಆರ್. ಶೆಟ್ಟಿ ಎಂಬ ಬ್ಯಸಿನೆಸ್ ಟೈಕೂನ್ ರಾತ್ರೋರಾತ್ರಿ ಬೀದಿಗೆ ಬಂದಿದ್ದು ಹೇಗೆ?

ಸಾವಿರಾರು ಕೋಟಿ ಆಸ್ತಿ ಹೊಂದಿದ್ದ ವ್ಯಕ್ತಿ ರಾತ್ರೋರಾತ್ರಿ ಬೀದಿಗೆ ಬಂದಿದ್ದಾರೆ ಎಂದು ಯಾರಾದರೂ ಹೇಳಿದರೆ ನಂಬಲು ಸ್ವಲ್ಪ ಕಷ್ಟವಾಗುತ್ತದೆ. ಆದಾಗ್ಯೂ, ಒಂದು ಕಾಲದಲ್ಲಿ ಕೋಟ್ಯಾಧಿಪತಿಯಾಗಿದ್ದ ಬಿ.ಆರ್.ಶೆಟ್ಟಿ (ಬಾವಗುತ್ತು ರಘುರಾಮ ಶೆಟ್ಟಿ) ಅವರ ಬದುಕಲ್ಲೂ ಅಂತಹುದೇ ದುರಂತ ಸಂಭವಿಸಿದೆ.


ಶೆಟ್ಟಿಯವರ ಸಂಪತ್ತಿನ ನಿವ್ವಳ ಮೌಲ್ಯ 18,000 ಕೋಟಿ ರೂ. ಅವರು ಬುರ್ಜ್ ಖಲೀಫಾದಲ್ಲಿ 2 ಸಂಪೂರ್ಣ ಮಹಡಿಗಳನ್ನು ಹೊಂದಿದ್ದರು. ಅವರ ಬೆಲೆ 25 ಮಿಲಿಯನ್ ಡಾಲರ್ ಆಗಿತ್ತು. ಅಲ್ಲದೇ ಅವರು ಖಾಸಗಿ ಜೆಟ್, ಐಷಾರಾಮಿ ಕಾರು ಮತ್ತು ಪಾಮ್ ಜುಮೇರಾದಲ್ಲಿ ಆಸ್ತಿಯಂತಹ ಎಲ್ಲಾ ಐಷಾರಾಮಿ ಸೌಲಭ್ಯ ಹೊಂದಿದ್ದರು. ಆದರೀಗ ಅವರ ಒಂದು ಟ್ವೀಟ್ ಅವರ ಇಡೀ ಸಾಮ್ರಾಜ್ಯವನ್ನು ಮುಳುಗಿಸಿದೆ.

ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!

ಹಿಂಡನ್ಬರ್ಗ್ ಪ್ರಕರಣದಲ್ಲಿ ಅದಾನಿ ಗ್ರೂಪ್ನಲ್ಲಿ ಸಂಭವಿಸಿದಂತೆ, ಬಿಆರ್ ಶೆಟ್ಟಿ ಪ್ರಕರಣದಲ್ಲಿ ಹಗರಣವು ಹಲವು ಪಟ್ಟು ದೊಡ್ಡದಾಗಿದೆ. ಇದರ ಪರಿಣಾಮವಾಗಿ 2 ಬಿಲಿಯನ್ ಡಾಲರ್ (16,650 ಕೋಟಿ) ಮೌಲ್ಯದ ಕಂಪನಿಯನ್ನ 74 ರೂಪಾಯಿಗೆ ಸಮನಾದ 1 ಡಾಲರ್ಗೆ ಮಾರಬೇಕಾಯ್ತು.

ನೀರಿನಂತೆ ಹಣ ವ್ಯಯಿಸಿದ್ದ ಉದ್ಯಮಿ

ಬಿ ಆರ್ ಶೆಟ್ಟಿ ಬುರ್ಜ್ ಖಲೀಫಾದಲ್ಲಿ 2 ಸಂಪೂರ್ಣ ಮಹಡಿಗಳನ್ನು ಹೊಂದಿದ್ದರು, ಇದು ವಿಶ್ವದ ಅತ್ಯಂತ ಪ್ರಸಿದ್ಧ ಕಟ್ಟಡಗಳಲ್ಲಿ ಒಂದಾಗಿದೆ. ಅವರು ಇಲ್ಲಿ ಐಷಾರಾಮಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಖಾಸಗಿ ಜೆಟ್ ನಲ್ಲಿ ದುಬೈಗೆ ಹೋಗುತ್ತಿದ್ದರು. ರೋಲ್ಸ್ ರಾಯ್ಸ್ ಮತ್ತು ಮೇಬ್ಯಾಕ್ ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದರು. ಅವರು ವಿಂಟೇಜ್ ಕಾರುಗಳ ಬಗ್ಗೆಯೂ ಒಲವು ಹೊಂದಿದ್ದರು.

ಮೋರಿಸ್ ಮೈನರ್ 1000 ವನ್ನೂ ಅವರ ಕಾರು ಬೆಂಗಾವಲು ಪಡೆಯಲ್ಲಿ ಸೇರಿಸಲಾಯಿತು. ಶೆಟ್ಟಿ ಪಾಮ್ ಜುಮೇರಾ ಮತ್ತು ದುಬೈನ ವರ್ಲ್ಡ್ ಸೆಂಟರ್ನಲ್ಲಿಯೂ ಆಸ್ತಿ ಹೊಂದಿದ್ದರು. ಖಾಸಗಿ ಜೆಟ್ನಲ್ಲಿ ಶೇ 50ರಷ್ಟು ಪಾಲನ್ನು ಹೊಂದಿದ್ದರು. ಅದನ್ನು ಅವರು ಇನ್ನೊಬ್ಬ ಬಿಲಿಯನೇರ್ನಿಂದ 42 ಲಕ್ಷ ಡಾಲರ್ಗೆ ಖರೀದಿಸಿದ್ದರು.

ಆ ಒಂದು ಟ್ವೀಟ್ ಮತ್ತು ಎಲ್ಲವೂ ಖತಂ

2019 ರಲ್ಲಿ, ಯುಕೆಯ ಮಡ್ಡಿ ವಾಟರ್ಸ್ ಅವರ ಕಂಪನಿ ಬಗ್ಗೆ ಒಂದು ಟ್ವೀಟ್ ಮಾಡಿತ್ತು. ನಾಲ್ಕು ತಿಂಗಳ ನಂತರ, ಇದೇ ಕಂಪನಿಯು ಸಂಪೂರ್ಣ ವರದಿ ಪ್ರಕಟಿಸಿತು, ಇದರಲ್ಲಿ ಎನ್ಎಂಸಿ ಹೆಲ್ತ್ನಲ್ಲಿನ ಹಣಕಾಸಿನ ಅಕ್ರಮಗಳ ಬಗ್ಗೆ ಕ್ಲೈಮ್ ಮಾಡಲಾಗಿದೆ. ಎನ್ಎಂಸಿ ಹೆಲ್ತ್ ಸಾಲವನ್ನು ಕಡಿಮೆ ಮಾಡುತ್ತಿದೆ ಮತ್ತು ನಗದು ಹರಿವನ್ನು ಅತಿಯಾಗಿ ತೋರಿಸುತ್ತಿದೆ ಎಂದು ವರದಿ ಹೇಳಿತ್ತು.

ಎನ್ ಎಂಸಿ ಹೆಲ್ತ್ ಬಿಆರ್ ಶೆಟ್ಟಿ ಅವರ ಕಂಪನಿಯಾಗಿತ್ತು. ಇದು ಯುಎಇಯಲ್ಲಿ ಅತಿ ದೊಡ್ಡ ಖಾಸಗಿ ಆರೋಗ್ಯ ಆಪರೇಟರ್ ಆಗಿತ್ತು. ಈ ಕಂಪನಿಯನ್ನು ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿ ಮಾಡಲಾಗಿದೆ. ಈ ಕಂಪನಿಯು ಮಡ್ಡಿ ವಾಟರ್ಸ್ನ ರಾಡಾರ್ಗೆ ಒಳಪಟ್ಟಿರುವುದು ಶೆಟ್ಟಿಯವರ ದುರಾದೃಷ್ಟ.

ಕಂಪನಿಯ ಹಣಕಾಸಿನ ಅಕ್ರಮಗಳ ಹಕ್ಕುಗಳು ಷೇರುಗಳಲ್ಲಿ ಮಾರಾಟವನ್ನು ಪ್ರಚೋದಿಸಿತು ಮತ್ತು ಸ್ವಲ್ಪ ಸಮಯದೊಳಗೆ ಶೆಟ್ಟಿ ಕುಟುಂಬದ ಸಂಪತ್ತು $ 1.5 ಶತಕೋಟಿಗಳಷ್ಟುಕುಸಿಯಿತು. ಹಿಂಡೆನ್ಬರ್ಗ್ನಂತೆಯೇ ಮಡ್ಡಿ ವಾಟರ್ಸ್ ಕೂಡ ಒಂದು ಸಣ್ಣ ಮಾರಾಟಗಾರ ಎಂಬುವುದು ಉಲ್ಲೇಖನೀಯ.

ಕಂಪನಿ 1 ಡಾಲರ್ಗೆ ಮಾರಾಟ

ಷೇರುಗಳ ಮಾರಾಟವು ಕಂಪನಿಯ ಮೌಲ್ಯವನ್ನು ಸಂಪೂರ್ಣವಾಗಿ ನಾಶಪಡಿಸಿತು. ಇದಲ್ಲದೆ, ಕಂಪನಿಯು $ 1 ಬಿಲಿಯನ್ ಸಾಲವನ್ನು ಹೊಂದಿದ್ದು ಅದು ವರದಿಯಾಗಿಲ್ಲ. ಒಂದು ಕಾಲದಲ್ಲಿ ಕಂಪನಿಯ ಶೇರುಗಳ ಗರಿಷ್ಠ ಮೌಲ್ಯ 10 ಬಿಲಿಯನ್ ಡಾಲರ್ ತಲುಪಿತ್ತು, ಆದರೆ ಒಂದರ ಹಿಂದೆ ಒಂದರಂತೆ ಬಹಿರಂಗಪಡಿಸಿದ ಶೆಟ್ಟಿ ಕಂಪನಿಯನ್ನು 1 ಡಾಲರ್ಗೆ ಮಾರಾಟ ಮಾಡಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿತು.

ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

Posted by Vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವುದು ತಪ್ಪು

Posted by Vidyamaana on 2023-07-28 14:57:50 |

Share: | | | | |


ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವುದು ತಪ್ಪು

ಬೆಂಗಳೂರು: ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರಿಗೆ ಸ್ಟೇಷನ್ ಜಾಮೀನು ಲಭಿಸಿದೆ.  


ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಬಳಿಕ ಶಕುಂತಲಾ ನಟರಾಜ್ ಅವರನ್ನು ಠಾಣಾ ಜಾಮೀನು(ಸ್ಟೇಷನ್ ಜಾಮೀನು) ನೀಡಿ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.  


ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಣದ ಬಗ್ಗೆ ಟ್ವೀಟ್ ಮಾಡಿದ್ದ ಶಕುಂತಲಾ, “ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್​ನವರ ಪ್ರಕಾರ ಮಕ್ಕಳಾಟವಂತೆ. ಸಿದ್ದರಾಮಯ್ಯನವರ ಸೊಸೆ ಅಥವಾ ಹೆಂಡ್ತಿ ವಿಡಿಯೋವನ್ನು ಇದೇ ರೀತಿ ಮಾಡಿದ್ದಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ?” ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹನುಮಂತರಾಯ ಎಂಬವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಜು.27ರಂದು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಶಕುಂತಲಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.ಶಕುಂತಲಾ ನಟರಾಜ್ ಅವರನ್ನು ಇಂದು ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸ್ವೇಷನ್ ಜಾಮೀನಿನ ಮೇಲೆ ಮನೆಗೆ ಕಳುಹಿಸಿದ್ದಾರೆ.

‘ಸಿಎಂ ಕುಟುಂಬದ ಮಹಿಳೆಯರ ಬಗ್ಗೆ ವೈಯಕ್ತಿಕವಾಗಿ ಆ ರೀತಿ ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವುದು ತಪ್ಪು. ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ’ ಎಂದು ಠಾಣೆಯಲ್ಲಿ ಶಕುಂತಲಾ ನಟರಾಜ್ ತಪ್ಪೊಪ್ಪಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ

ನಾಲ್ವರ ಕೊಲೆ ಆರೋಪಿ ಪ್ರವೀಣ್‌ ಚೌಗುಲೆ ಅರ್ಜಿ ವಜಾಗೊಳಿಸಿದ ಉಡುಪಿ ನ್ಯಾಯಾಲಯ

Posted by Vidyamaana on 2023-12-30 17:30:02 |

Share: | | | | |


ನಾಲ್ವರ ಕೊಲೆ ಆರೋಪಿ  ಪ್ರವೀಣ್‌ ಚೌಗುಲೆ ಅರ್ಜಿ ವಜಾಗೊಳಿಸಿದ ಉಡುಪಿ ನ್ಯಾಯಾಲಯ

ಉಡುಪಿ: ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಉಡುಪಿ ನೇಜಾರು ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್‌ ಚೌಗುಲೆ ಸಲ್ಲಿಸಿರುವ ಜಾಮೀನು ಅರ್ಜಿ ತಿರಸ್ಕೃತವಾಗಿದೆ.ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ನೀಡಿದೆ.


ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಕೋರಿ ಡಿ.14ರಂದು ವಕೀಲ ಕೆ.ಎಸ್‌.ಎನ್‌.ರಾಜೇಶ್ ಮೂಲಕ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಗೆ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿದ್ದರು.


ಈ ಕುರಿತು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ

ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

Posted by Vidyamaana on 2024-06-25 17:16:35 |

Share: | | | | |


ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

ರೀಲ್ಸ್ ಇಲ್ಲದೆ ದಿನವೇ ಮುಂದೆ ಸಾಗದ ಪರಿಸ್ಥಿತಿ ಎದುರಾಗಿದೆ. ರೀಲ್ಸ್‌ಗಾಗಿ ಜನರು ಅಪಾಯಕಾರಿ ಸ್ಟಂಟ್ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಈ ರೀತಿಯ ಸ್ಟಂಟ್ ದುರಂತದಲ್ಲಿ ಅಂತ್ಯವಾಗಿದೆ. ಶಾಲಾ ಬಾಲಕಿಯರಿಬ್ಬರು ರೀಲ್ಸ್‌ಗಾಗಿ ಸ್ಟಂಟ್ ಮಾಡಿದ್ದಾರೆ. ಒರ್ವ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ್ದಾಳೆ. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಪರಿಣಾಮ ಬಾಲಕಿ ಇದೀಗ ಎದ್ದು ನಿಲ್ಲದ ಪರಿಸ್ಥಿತಿಯಲ್ಲಿದ್ದಾಳೆ.ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಬಾಲಕಿಯರು ಹೆದ್ದಾರಿಯಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಬಾಲಕಿಯರ ಸ್ಟಂಟ್ ಮತ್ತಷ್ಟು  ವೈರಲ್ ಆಗಲಿದೆ ಎಂದು ಸಾಹಸ ಪ್ರದರ್ಶನ ಮಾಡಿದ್ದಾರೆ. ರಸ್ತೆಯಲ್ಲಿ ಬಾಲಕಿ ಮತ್ತೊಬ್ಬ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರದಿಂದ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ ಬಾಲಕಿ ನೆಲಕ್ಕೆ ಲ್ಯಾಂಡಿಂಗ್ ಆಗವಾಗ ಕಾಲು ಜಾರಿದೆ. ಪರಿಣಾಮ ದೊಪ್ಪನೆ ಬಿದ್ದಿದ್ದಾಳೆ.

ಏಷ್ಯಾ ಕಪ್ : ನೇಪಾಲದ ಎದುರು ಭಾರಿ ಜಯದೊಂದಿಗೆ ಶುಭಾರಂಭ ಮಾಡಿದ ಪಾಕ್

Posted by Vidyamaana on 2023-08-30 23:15:16 |

Share: | | | | |


ಏಷ್ಯಾ ಕಪ್ : ನೇಪಾಲದ ಎದುರು ಭಾರಿ ಜಯದೊಂದಿಗೆ ಶುಭಾರಂಭ ಮಾಡಿದ ಪಾಕ್

ಮುಲ್ತಾನ್‌ : ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ಥಾನ ತಂಡ ನೇಪಾಲದ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.



ಪಾಕಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ 6 ವಿಕೆಟ್ ನಷ್ಟಕ್ಕೆ 342 ರನ್ ಕಲೆಹಾಕಿ ಭರ್ಜರಿ ಮೊತ್ತವನ್ನು ನೇಪಾಲ ತಂಡದ ಮುಂದಿಟ್ಟಿತು. ನೇಪಾಲ ಪಾಕ್ ಬಿಗಿದಾಳಿಗೆ ಸಿಲುಕಿ 23.4 ಓವರ್ ಗಳಲ್ಲಿ 104 ರನ್ ಗಳಿಗೆ ಆಲೌಟಾಯಿತು. ಪಾಕಿಸ್ಥಾನ 238 ರನ್ ಗಳ ಭಾರಿ ಜಯ ಸಾಧಿಸಿತು. ಶಾದಾಬ್ ಖಾನ್ 4 ವಿಕೆಟ್ ಪಡೆದರು. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರು.


ನೇಪಾಲ ಪರ ಆರಿಫ್ ಶೇಖ್ 26 ಮತ್ತು ಸೋಂಪಾಲ್ ಕಾಮಿ 28 ರನ್ ಹೊರತು ಪಡಿಸಿ ಉಳಿದ ಆಟಗಾರರ್ಯಾರು ಒಂದಂಕಿ ದಾಟಲಿಲ್ಲ.


ಪಾಕಿಸ್ಥಾನ 25 ರನ್ ಆಗುವಷ್ಟರಲ್ಲಿ ಮೊದಲ 2 ವಿಕೆಟ್ ಕಳೆದುಕೊಂಡಿತು.ಫಖರ್ ಜಮಾನ್ 14, ಇಮಾಮ್-ಉಲ್-ಹಕ್ 5 ರನ್ ಗಳಿಸಿದ್ದ ವೇಳೆ ರನೌಟಾದರು.ಆ ಬಳಿಕ ಬಂದ ಏಕದಿನ ಕ್ರಿಕೆಟ್ ನ ನಂಬರ್ ಒನ್ ಬ್ಯಾಟ್ಸ್ ಮ್ಯಾನ್ ಬಾಬರ್ ಅಜಂ ಅಬ್ಬರಿಸಿದರು. ತಾಳ್ಮೆಯ ಆಟವಾಡಿ ಶತಕ ಪೂರ್ತಿಗೊಳಿಸಿದರು.151(131 ಎಸೆತ) ರನ್ ಗಳಿಸಿದ್ದ ವೇಳೆ ಕೊನೆಯಲ್ಲಿ ಔಟಾದರು. ಬಾಬರ್ ರೊಂದಿಗೆ ಉತ್ತಮ ಆಟವಾಡುತ್ತಿದ್ದ ಮೊಹಮ್ಮದ್ ರಿಜ್ವಾನ್ ವಿಲಕ್ಷಣ ರನೌಟ್ (ದೀಪೇಂದ್ರ ಸಿಂಗ್) ಆದರು. ಅವರು 44 ರನ್ ಗಳಿಸಿದ್ದರು. ಆಬಳಿಕ ಬಾಬರ್ ಅವರಿಗೆ ಸಾಥ್ ನೀಡಿದ ಇಫ್ತಿಕಾರ್ ಅಹ್ಮದ್ ಔಟಾಗದೆ 109 ರನ್ ಗಳಿಸಿದರು. ಸ್ಪೋಟಕ ಶತಕ ಸಿಡಿಸಿದ ಅವರು ಒಟ್ಟು 71 ಎಸೆತಗಳಲ್ಲಿ 109 ರನ್ ಗಳಿಸಿದರು

ಸೆ.02(ಶನಿವಾರ) ರಂದು ಭಾರತದ ವಿರುದ್ಧ ಪಾಕಿಸ್ಥಾನ ಏಷ್ಯಾ ಕಪ್ ನ ಎ ಗುಂಪಿನ 3 ನೇ ಪಂದ್ಯವನ್ನು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ,ಪಲ್ಲೆಕೆಲೆಯಲ್ಲಿ ಆಡಲಿದೆ.



Leave a Comment: