ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Posted by Vidyamaana on 2024-05-06 16:16:36 |

Share: | | | | |


ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

ಬಂಟ್ವಾಳ: ಕಾರಿನ ಚಾಲಕರಿಗೆ ಸೈಡ್ ಕೊಟ್ಟಿಲ್ಲ ಕಾರಣಕ್ಕಾಗಿ ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ಅಪರಿಚಿತರ ತಂಡವೊಂದು ಹಲ್ಲೆ ನಡೆಸಿ, ಬಸ್ ಗೆ ಹಾನಿಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಆದಿತ್ಯವಾರ ಸಂಜೆ ವೇಳೆ ನಡೆದಿದೆ.ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ಅವರು ಬಸ್ ಚಾಲಕನಾಗಿದ್ದು, ಅವರ ಮೇಲೆ ಹಲ್ಲೆಯಾಗಿದೆ ಎಂದು ಬಂಟ್ವಾಳ ನಗರ ಪೋಲಿಸ್ ‌ಠಾಣೆಗೆ ದೂರು ನೀಡಿದ್ದಾರೆ. ಘಟನೆಯಿಂದ ಸುಮಾರು 30 ಸಾವಿರ ರೂ ನಷ್ಟ ಸಂಭವಿಸಿದೆ ಎಂದು ತಿಳಿಸಲಾಗಿದೆ.

ಕೆಎಸ್ಆರ್ ಟಿಸಿಗೆ ಬಸ್ ಗೆ ಕಾರು ಅಡ್ಡಗಟ್ಟಿ ಜಖಂಗೊಳಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಂಡದ ಮೇಲೆ ಕಾನೂನು ಕ್ರಮಕ್ಕೆ ಕೃಷ್ಣಪ್ಪ ದೂರಿನಲ್ಲಿ ತಿಳಿಸಿದ್ದಾರೆ

ಕಡಬ: ಅಪರಿಚಿತ ವಾಹನದಿಂದ ಹಿಟ್ ಆ್ಯಂಡ್ ರನ್ - ಬೈಕ್ ಸವಾರ ಚಿದಾನಂದ್ ಗಂಭೀರ

Posted by Vidyamaana on 2023-08-08 15:38:54 |

Share: | | | | |


ಕಡಬ: ಅಪರಿಚಿತ ವಾಹನದಿಂದ ಹಿಟ್ ಆ್ಯಂಡ್ ರನ್ - ಬೈಕ್ ಸವಾರ ಚಿದಾನಂದ್ ಗಂಭೀರ

ಕಡಬ :ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ತೆರಳಿದ ಪರಿಣಾಮ ಬೈಕ್ ಸವಾರರೊಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ - ಹೆದ್ದಾರಿಯ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.

  ಗಂಭೀರ ಗಾಯಗೊಂಡ ಚಿದಾನಂದ ಎಂಬವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ವಾಹನದ ಪತ್ತೆಗೆ ಬಲೆ ಬೀಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ನಿರ್ವಹಣಾಗಾರರ ಸಭೆ ನಡೆಸಿದ ಅಶೋಕ್ ಕುಮಾರ್ ರೈ

Posted by Vidyamaana on 2023-04-21 22:44:15 |

Share: | | | | |


ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ನಿರ್ವಹಣಾಗಾರರ ಸಭೆ ನಡೆಸಿದ ಅಶೋಕ್ ಕುಮಾರ್ ರೈ

ಪುತ್ತೂರು: ಕಾಂಗ್ರೆಸ್ ಪಕ್ಷದ  ಸಾಮಾಜಿಕ ಜಾಲತಾಣವನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಕಚೇರಿಯಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆಗಾರರ ಸಭೆ ಏ 21 ರಂದು ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆಯಿತು.

ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಾಮಾಜಿಕ ಜಾಲತಾಣ ನಿರ್ವಹಣಾಗಾರರಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು. ಸುಮಾರು 50ಕ್ಕೂ ಅಧಿಕ ಸಾಮಾಜಿಕ ಜಾಲತಾಣ ನಿರ್ವಹಣಾಗಾರರು ಸಭೆಯಲ್ಲಿ ಭಾಗವಹಿಸಿದ್ದರು.

ಅಶೋಕ್ ರೈ ಅವರ ಪರ ಹಾಗೂ ವಿರೋಧವಾಗಿ ಪ್ರಕಟವಾಗುವ ಸಂದೇಶ, ವರದಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಅಪಪ್ರಚಾರ ನಡೆಸುವ ಸಂದೇಶಗಳನ್ನು ಯಾವ ರೀತಿ ನಿರ್ವಹಿಸಬೇಕು ಎನ್ನುವುದರ ಬಗ್ಗೆ ಅವರಿಗೆ ತಿಳಿಸಲಾಯಿತು.

ಕರಾವಳಿಯ ಸಾರಿಗೆ ಕ್ಷೇತ್ರದಲ್ಲಿ 50 ವರ್ಷಗಳ ಬಸ್ ಸಂಚಾರ ಸೇವೆಯ ಸಾಧನೆ

Posted by Vidyamaana on 2023-10-01 21:28:45 |

Share: | | | | |


ಕರಾವಳಿಯ ಸಾರಿಗೆ ಕ್ಷೇತ್ರದಲ್ಲಿ 50 ವರ್ಷಗಳ ಬಸ್ ಸಂಚಾರ ಸೇವೆಯ ಸಾಧನೆ

ಮಂಗಳೂರು, ಅ.1: ಮಂಗಳೂರಿನಲ್ಲಿ ಮಹೇಶ್ ಬಸ್ ಟ್ರಾವೆಲ್ಸ್ ಉದ್ಯಮದ ಮೂಲಕ ಹೆಸರು ಮಾಡಿದ್ದ ಪ್ರಕಾಶ್ ಶೇಖ (43) ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 


50 ವರ್ಷಗಳ ಹಿಂದೆಯೇ 1972ರ ವೇಳೆಗೆ ಜಯರಾಮ ಶೇಖ ಅವರು ಮಹೇಶ್ ಬಸ್ ಟ್ರಾವೆಲ್ಸ್ ಉದ್ಯಮ ಆರಂಭಿಸಿದ್ದರು. ಮೊದಲಿಗೆ ಜ್ಯೋತಿ ಎಂದಿದ್ದ ಹೆಸರನ್ನು ಬಳಿಕ ಎರಡನೇ ಮಗ ಮಹೇಶ್ ಹೆಸರಿಗೆ ಬದಲಿಸಿದ್ದರು.‌  ಆರಂಭದಿಂದಲೇ ಮಂಗಳೂರಿನಿಂದ ಕೊಣಾಜೆ ರೂಟಿನಲ್ಲಿ ಬಸ್ ಉದ್ಯಮ ಆರಂಭಿಸಿದ್ದರು. ಆನಂತರ ಇತರ ರೂಟಿನಲ್ಲೂ ಮಹೇಶ್ ಬಸ್ ಸಂಚಾರ ಆರಂಭಿಸಿತ್ತು. ಮೂರನೇ ಮಗ ಪ್ರಕಾಶ್ ಶೇಖ ಉದ್ಯಮದಲ್ಲಿ ತೊಡಗಿಸಿಕೊಂಡ ಬಳಿಕ ವ್ಯವಹಾರ ವಿಸ್ತರಣೆಯಾಗಿತ್ತು.‌


ಕಳೆದ 15 ವರ್ಷಗಳಲ್ಲಿ ಮಹೇಶ್ ಹೆಸರಲ್ಲಿ ಟೂರಿಸ್ಟ್ ಉದ್ಯಮ, ಟಿಪ್ಪರ್, ಸಿಮೆಂಟ್ ಮಿಕ್ಸರ್ ಲಾರಿ ಹೀಗೆ ಹಲವಾರು ವ್ಯವಹಾರ ಮಾಡಿಕೊಂಡಿದ್ದರು. ಹಿರಿಯ ಪುತ್ರರಿಬ್ಬರು ಬೆಂಗಳೂರು, ಮುಂಬೈನಲ್ಲಿ ನೆಲೆಸಿದ ಬಳಿಕ ಪೂರ್ತಿ ಬಸ್ ಉದ್ಯಮದ ವ್ಯವಹಾರವನ್ನು ಪ್ರಕಾಶ್ ಅವರೇ ನೋಡಿಕೊಂಡಿದ್ದರು. ಆಪ್ತರ ಪ್ರಕಾರ, ನೂರಕ್ಕೂ ಹೆಚ್ಚು ಬಸ್ ಗಳು ಅವರ ಒಡೆತನದಲ್ಲಿದ್ದವು. ಹಲವಾರು ಬಸ್ ಗಳನ್ನು ಬೇರೆ ಬೇರೆ ಕಡೆ ಖಾಸಗಿಯಾಗಿ ಕಾಂಟ್ರಾಕ್ಟ್ ಕೊಟ್ಟಿದ್ದರು. ಪ್ರಕಾಶ್ ಅವರು ಪತ್ನಿ ಮಕ್ಕಳ ಜೊತೆಗೆ ಕದ್ರಿಯ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದರು. 80ರ ಹರೆಯದ ಜಯರಾಮ ಶೇಖ ಕುಲಶೇಖರದ ನಿವಾಸದಲ್ಲಿಯೇ ನೆಲೆಸಿದ್ದಾರೆ. 


ಇಂದು ಬೆಳಗ್ಗೆ ಹೊರಗೆ ಹೋಗಿ ಬಂದಿದ್ದ ಪ್ರಕಾಶ್ ಮತ್ತೆ ಬೆಡ್ ರೂಮಿಗೆ ತೆರಳಿದ್ದರು. ಮಧ್ಯಾಹ್ನ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಪತ್ನಿ ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಬಸ್ ಉದ್ಯಮದ ಬಗ್ಗೆ ಭಾರೀ ಪ್ರೀತಿ ಇಟ್ಟುಕೊಂಡಿದ್ದ ಪ್ರಕಾಶ್ ಯಾಕಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುವುದು ಆಪ್ತ ಬಳಗಕ್ಕೆ ಶಾಕ್ ನೀಡಿದೆ.

ಬಸ್ ಮಾಲಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಪ್ರತಿಕ್ರಿಯಿಸಿ, ಪ್ರಕಾಶ್ ತುಂಬ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರ ತಂದೆಯ ಕಾಲದಿಂದಲೂ ಒಡನಾಟ ಇದೆ. ಜಿಲ್ಲಾ ಬಸ್ ಮಾಲಕರ ಸಂಘ ಗಾಢ ಶೋಕ ವ್ಯಕ್ತಪಡಿಸುತ್ತದೆ ಎಂದಿದ್ದಾರೆ


ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್‌, ಮಾಜಿ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ, ದಿಲ್‌ರಾಜ್‌ ಆಳ್ವ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.


ಅಂತ್ಯಕ್ರಿಯೆ ಅ.2ರಂದು ಸಂಜೆ 4ಕ್ಕೆ ಕುಲಶೇಖರದಲ್ಲಿರುವ ಅವರ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರದ್ವಿನ್ ಪರಿಸರ ಪ್ರೇಮಕ್ಕೆ ಬರ್ತ್ ಡೇ ಗಿಫ್ಟ್ ಕೊಟ್ಟ ಮರ

Posted by Vidyamaana on 2023-06-26 10:43:10 |

Share: | | | | |


ಪ್ರದ್ವಿನ್ ಪರಿಸರ ಪ್ರೇಮಕ್ಕೆ ಬರ್ತ್ ಡೇ  ಗಿಫ್ಟ್ ಕೊಟ್ಟ ಮರ

ಪುತ್ತೂರು: ಎರಡು ವರ್ಷದ ಹಿಂದೆ ತನ್ನ ಹುಟ್ಟುಹಬ್ಬದಂದು ನೆಟ್ಟ ಗಿಡದ ಅಡಿಯಲ್ಲೇ ಈ ಬಾರಿ ಮತ್ತೆ ಹುಟ್ಟು ಹಬ್ಬ ಆಚರಿಸುವ ಮೂಲಕ ಪುತ್ತೂರು ಅಂಬಿಕಾ ವಿದ್ಯಾಲಯದ ನಾಲ್ಕನೇ ತರಗತಿ ವಿದ್ಯಾರ್ಥಿ ಪ್ರದ್ವಿನ್ ಎಲ್ಲರಿಗೂ ಮಾದರಿಯಾಗಿದ್ದಾನೆ.

ತನ್ನ ಹುಟ್ಟುಹಬ್ಬದಂದು ಪ್ರತೀ ವರ್ಷವೂ ಒಂದು ಗಿಡ ತನ್ನ ಮನೆಯ ಬಳಿ ನೆಡುವ ಮೂಲಕ ಬರ್ತ್‌ಡೇ ಆಚರಣೆ ಮಾಡುತ್ತಿದ್ದಾನೆ. ತನ್ನ ಏಳನೇ ವರ್ಷದ ಹುಟ್ಟುಹಬ್ಬದಂದು ಮನೆಯ ಅಂಗಳದಲ್ಲಿ ನೆಟ್ಟಿದ್ದ ಕದಂಬ ಗಿಡದ ಬುಡದಲ್ಲೇ ಈ ಬರಿ ತನ್ನ ೯ ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದು ಪರಿಸರ ಪ್ರೇಮಿಗಳಿಗೆ ಈ ಮೂಲಕ ತನ್ನ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾನೆ.

ತಾನು ನೆಟ್ಟ ಗಿಡವನ್ನೇ ಹಬ್ಬಕ್ಕಾಗಿ ಬಲೂನ್ ಕಟ್ಟಿ ಶೃಂಗಾರ ಮಾಡಿ ಅದರ ಅಡಿಯಲ್ಲೇ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿ ಈ ಬಾರಿಯ ಹುಟ್ಟುಹಬ್ಬದಂದು ಇನ್ನೊಂದು ಗಿಡವನ್ನು ನೆಟ್ಟಿದ್ದಾನೆ. ಪ್ರದ್ವಿನ್ ಕೋಡಿಂಬಾಡಿ ಗ್ರಾಮದ ಬದಿನಾರು ನಿವಾಸಿ ಜಯಪ್ರಕಾಶ್ ಮತ್ತು ವಿನುತಾ ದಂಪತಿಗಳ ಪುತ್ರ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಯಪ್ರಕಾಶ್ ಬದಿನಾರ್ ಪರಿಸರದ ಬಗ್ಗೆ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಪ್ರೀತಿ ಹುಟ್ಟುವಂತೆ ಮಾಡುವ ಏಕೈಕ ಉದ್ದೇಶದಿಂದ ತನ್ನ ಎರಡೂ ಮಕ್ಕಳ ಹುಟ್ಟು ಹಬ್ಬದಂದು ಪ್ರತೀ ವರ್ಷವೂ ಗಿಡ ನೆಡುವ ಮೂಲಕವೇ ಆಚರಣೆ ಮಾಡುತ್ತೇವೆ. ಇದು ಇನ್ನೊಬ್ಬರಿಗೆ ಪ್ರೇರಣೆಯಗಿ ಯಾರಾದರೂ ಒಂದು ಗಿಡ ನೆಟ್ಟರೂ ನಮಗೆ ಅದುವೇ ದೊಡ್ಡ ಸಂತೋಷ ಎಂದು ಹೇಳುತ್ತಾರೆ.

ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ : ಇಬ್ಬರು ವಿದ್ಯಾರ್ಥಿಗಳ ಬಂಧನ

Posted by Vidyamaana on 2023-08-12 11:14:48 |

Share: | | | | |


ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ : ಇಬ್ಬರು ವಿದ್ಯಾರ್ಥಿಗಳ ಬಂಧನ

ಹುಬ್ಬಳ್ಳಿ: ಖಾಸಗಿ ಕಾಲೇಜುವೊಂದರ ವಿದ್ಯಾರ್ಥಿನಿಯ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಹಾಗೂ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ತಿರುವು ಪಡೆದಿದ್ದು, ಮೂಲ ಆರೋಪಿಗಳಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಏಳು ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಶಂಕಿತ ಆರೋಪಿ ಹಾಗೂ ಖಾಸಗಿ ಕಾಲೇಜಿನ ಹಳೇ ವಿದ್ಯಾರ್ಥಿ ರಜನಿಕಾಂತ್ ತಳವಾರ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ಏಳು ದಿನ ವಿಚಾರಣೆಗೆ ಒಳಪಡಿಸಿದ್ದರು. ಅಷ್ಟೇ ಅಲ್ಲದೆ ಈ ಪ್ರಕರಣದ ಹಿಂದೆ ಇನ್ನೂ ಕೆಲವರು ಇದ್ದಾರೆ ಎಂಬ ಸಂಶಯದ ಮೇರೆಗೆ ತನಿಖೆ ಮುಂದುವರಿಸಿದ್ದರು.


ಜಾಲತಾಣದ ಅಧಿಕೃತ ಮಾಹಿತಿಯ ಹಿಂದೆ ಬಿದ್ದಾಗ ರಜನಿಕಾಂತ್ ಆರೋಪಿ ಅಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಶಂಕಿತ ಆರೋಪಿಯಾಗಿದ್ದ ರಜನಿಕಾಂತ್‌ನ ಇನ್‌ಸ್ಟಾಗ್ರಾಂ ಖಾತೆ, ಇ-ಮೇಲ್ ಐಡಿ ಹಾಗೂ ಸಾಮಾಜಿಕ ಜಾಲತಾಣದ ವಿವವರಗಳನ್ನು ಪೊಲೀಸರು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ ಈ ವರದಿ ಬರುವವರೆಗೂ ಉಳಿದ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ಪ್ರಕರಣ ಗಂಭೀರವಾಗಿದ್ದರಿಂದ ಸೈಬರ್ ಠಾಣಾ ಪೊಲೀಸರು ಹ್ಯಾಕ್ ಮಾಡಲಾದ ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಂ ಖಾತೆ ವಿವರ ಸಂಗ್ರಹಿಸಿ ಫೇಸ್‌ಬುಕ್ ಸಂಸ್ಥೆಗೆ ಮಾಹಿತಿ ನೀಡಲು ಪತ್ರ ಬರೆದಿದ್ದರು.


ಅಲ್ಲಿಂದ ದೊರೆತ ಅಧಿಕೃತ ಮಾಹಿತಿಯೇ ಆರೋಪಿಗಳ ಪತ್ತೆಗೆ ಸಹಕಾರಿಯಾಗಿದೆ. ಬಂಧನಕ್ಕೆ ಒಳಗಾದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದುತ್ತಿರುವ ಕಾಲೇಜಿನಲ್ಲಿಯೇ ಅಧ್ಯಯನ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿನಿ ಇನ್ನೊಬ್ಬ ವಿದ್ಯಾರ್ಥಿಯ ಜೊತೆ ಸಲುಗೆಯಿಂದ ಇದ್ದಳು. ಅದನ್ನು ಸಹಿಸದ ಆರೋಪಿ ತಮ್ಮ ಊರಿನ ಮತ್ತೊಂದು ಕಾಲೇಜಿನಲ್ಲಿ ಓದುತ್ತಿದ್ದ ಸ್ನೇಹಿತನ ಸಹಾಯ ಪಡೆದು, ಆ ವಿದ್ಯಾರ್ಥಿನಿಯ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿಸಿದ್ದಾನೆ. ತನ್ನ ಹೆಸರು ಎಲ್ಲಿಯೂ ಬರಬಾರದು ಎಂದು ದಿಕ್ಕು ತಪ್ಪಿಸಲು ಪೊಲೀಸ್ ಬಗ್ಗೆ ಅವಹೇಳನ ಪದ ಬಳಸಿ ಪೋಸ್ಟ್ ಮಾಡಿದ್ದ. ಎಲ್ಲಾ ವಿಚಾರ ತಿಳಿದ ಬೆನ್ನಲ್ಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.



Leave a Comment: