ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ವಿಟ್ಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

Posted by Vidyamaana on 2023-07-30 02:11:27 |

Share: | | | | |


ವಿಟ್ಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯಲ್ಲಿದ್ದಾರೆ, ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ದೊರೆಯುತ್ತಿದೆ, ಈ ಯೋಜನೆಗಳು ಜನರಿಗೆ ಪ್ರಯೋಜನವಾಗಿದ್ದು ಜನ ಸರಕರದ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ, ಕಾರ್ಯಕರ್ತರು ಪ್ರತೀ ಮನೆಗೆ ತೆರಳಿ ಕಾಂಗ್ರೆಸ್ ಸಾಧನೆಯನ್ನು ತಿಳಿಸಿ ಅದನ್ನು ಮತವಾಗಿ ಪರಿವರ್ತನೆ ಮಾಡಬೇಕಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜು.೨೯ ರಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರು ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಮುಂದಿನ ತಿಂಗಳು ಪ್ರತೀ ಮನೆ ಯಜಮನಿಯ ಖಾತೆಗೆ ೨ ಸಾವಿರ ಜಮೆಯಾಗಲಿದೆ, ವಿದ್ಯುತ್ ಉಚಿತವಾಗಲಿದೆ, ೫ ಕೆ ಜಿ ಅಕ್ಕಿ ಮತ್ತು ೫ ಕೆ ಜಿ ಅಕ್ಕಿಯ ಹಣ ಖಾತೆಗೆ ಜಮಾವಣೆಯಗಿದೆ. ಉಚಿತವಾಗಿ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ ಇದೆಲ್ಲವೂ ಕಾಂಗ್ರೆಸ್ ಬಡವರಿಗಾಗಿ ಮಾಡಿದ ಯೋಜನೆಗಳಾಗಿದೆ ಎಂದು ಶಾಸಕರು ಹೇಳಿದರು. ಸರಕಾರ ಒಳ್ಳೆಯ ಯೋಜನೆಗಳನ್ನು ಇನ್ನೂ ಜಾರಿ ಮಾಡಲಿದ್ದು ಪ್ರತೀಯೊಬ್ಬ ಕಾರ್ಯಕರ್ತನೂ ಪಕ್ಷ ಕಟ್ಟುವಲ್ಲಿ ಮುತವರ್ಜಿವಹಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.


ನಾನು ಯಾಕೆ ಕಾರ್ಯಕ್ರಮಕ್ಕೆ ತಡವಾಗಿ ಬರುತ್ತೇನೆ ಗೊತ್ತುಂಟಾ?

ಶಾಸಕರು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳಿಗೆ ಬರುತ್ತಿಲ್ಲ, ಒಂದು ಗಂಟೆ ಎರಡು ಗಂಟೆ ತಡವಾಗಿ ಬರುತ್ತಿದ್ದಾರೆ ಎಂದು ಕಾರ್ಯಕರ್ತರು ಶಾಸಕರಲ್ಲಿ ಹೇಳಿದರು. ಇದಕ್ಕೆ ಉತ್ತರಿಸಿದ ಶಾಸಕರು ನಾನು ಕಾರ್ಯಕ್ರಮಕ್ಕೆ ತಡವಾಗಿ ಬರುವುದು ಸತ್ಯ ಯಾಕೆಂಧರೆ ನಾನು ಒಂದು ಕಾರ್ಯಕ್ರಮಕ್ಕೆ ಹೋದಾಗ ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಒಂದಷ್ಟು ಮಂದಿ ನನ್ನ ಕ್ಷೇತ್ರದ ಮತದಾರರು ಅರ್ಜಿ ಹಿಡಿದುಕೊಂಡು ಅಥವಾ ತಮ್ಮ ಸಂಕಷ್ಟವನ್ನು ಹೇಳಲು ಕಾಯುತ್ತಿರುತ್ತಾರೆ ಅವರನ್ನು ಬಿಟ್ಟು ಬರುವುದು ಹೇಗೆ? ನನಗೆ ಜನ ಮತ ಹಾಕಿದ್ದು ಅವರ ಸಂಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸಲು, ನಾನು ಅವರ ನೋವಿಗೆ ಸ್ಪಂದಿಸದೇ ಇದ್ದರೆ ಅದು ನಾನು ಮಾಡುವ ದೊಡ್ಡ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು. ತನ್ನ ಕ್ಷೇತ್ರದ ಯಾವುದೇ ಒಬ್ಬ ವ್ಯಕ್ತಿ ನನ್ನನ್ನು ಹುಡುಕಿಕೊಂಡು ಸಂಕಷ್ಟ ಹೇಳಲು ಬಂದಲ್ಲಿ ನಾನು ಅವರಿಗೆ ಸಮಾಧಾನ ಹೇಳಿಯೇ ಬರುತ್ತೇನೆ ಅದು ನನ್ನ ಕರ್ತವ್ಯವಾಗಿದೆ. ತಡವಾಗಿ ಬಂದರೆ ಕ್ಷಮೆ ಇರಲಿ ನಾನು ಜನರಿಗೋಸ್ಕರ ಇರುವವನಾಗಿದ್ದೇನೆ, ಅವರಿಗೋಸ್ಕರ ಕೆಲಸವನ್ನು ಮಾಡುತ್ತೇನೆ ಎಂದು ಶಾಸಕರು ಹೇಳಿದರು.


ಕಚೇರಿ ಆದ ಮೇಲೆ ಎಲ್ಲಾ ಸಮಸ್ಯೆ ಇತ್ಯರ್ಥ

ಶಾಸಕರ ನೂತನ ಕಚೇರಿ ಕೆಲಸ ಪ್ರಾರಂಭವಾಗಿದ್ದು ಕಚೇರಿ ಆದ ಮೇಲೆ ಎಲ್ಲವೂ ಪರಿಹಾರವಾಗಲಿದೆ. ಕಚೇರಿ ಆರಂಭವಾದ ಬಳಿಕ ವಿವಿಧ ಸೆಕ್ಷನ್‌ಗಳನ್ನು ತೆರೆಯುತ್ತೇನೆ. ಫಲಾನುಭವಿಗಳು ಕಚೇರಿಗೆ ತೆರಳಿ ಅಲ್ಲಿ ಅರ್ಜಿ ನೀಡಬಹುದಾಗಿದ್ದು ನಿಮ್ಮ ಕೆಲವೊಂದು ಸಮಸ್ಯೆಗಳಿಗೆ ಕಚೇರಿಯಲ್ಲೇ ಪರಿಹಾರವೂ ದೊರೆಯಲಿದೆ ಎಂದು ಶಾಸಕರು ಹೇಳಿದರು. ಕಾಮಗಾರಿಗೆ ಸಂಬಂಧಪಟ್ಟ ಅರ್ಜಿಗಳನ್ನು ವಲಯ ಮತ್ತು ಬೂತ್ ಅಧ್ಯಕ್ಷರ ಮೂಲಕ ನನ್ನಲ್ಲಿ ನೀಡಬಹುದಾಗಿದೆ ಎಂದು ಹೇಳಿದರು.

ವಲಯ, ಬೂತ್ ಅಧ್ಯಕ್ಷರೇ ಮುಖ್ಯ

ಪ್ರತೀ ಗ್ರಾಮಮಟ್ಟದಲ್ಲಿ ವಲಯ ಮತ್ತು ಬೂತ್ ಅಧ್ಯಕ್ಷರಿದ್ದಾರೆ. ಕಟ್ಟಕಡೇಯ ಕಾರ್ಯಕರ್ತರ ಸಂಪರ್ಕ ಇರುವುದು ಅವರಿಗೆ ಯಾವುದೇ ಅರ್ಜಿಗಳನ್ನು ನೀಡುವಾಗ ವಲಯ ಮತ್ತು ಬೂತ್ ಅಧ್ಯಕ್ಷರನ್ನು ಸಂಪರ್ಕಿಸಿಯೇ ಬರಬೇಕು. ನೀವು ಅರ್ಜಿ ನೀಡಿ ಹೋದರೆ ಅದನ್ನು ಗ್ರಾಮದ ಅಧ್ಯಕ್ಷರುಗಳಿಗೆ ಮಾಹಿತಿ ನೀಡಲಾಗುತ್ತದೆ. ವಲಯ , ಬೂತ್ ಮತ್ತು ಕಾರ್ಯಕರ್ತರನ್ನು ಕಡೆಗಣಿಸಿ ಯಾವುದೇ ಕೆಲಸ ಕಾರ್ಯಗಳು ನಡೆಯವುದೇ ಇಲ್ಲ ಎಂದು ಶಾಸಕರು ಹೇಳಿದರು.

ಎರಡೇ ತಿಂಗಳಲ್ಲಿ ೯೬೦ ಕೋಟಿ ತಂದಿದ್ದೇನೆ

ಶಾಸಕನಾಗಿ ಎರಡೇ ತಿಂಗಳಲ್ಲಿ ೯೬೦ ಕೋಟಿ ತಂದಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ೨೪ ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆಗೆ ಸರಕಾರದಿಂದ ೯೬೦ ಕೋಟಿ ಮಂಜೂರು ಮಾಡಿಸಿದ್ದು ಟೆಂಡರ್ ಕರೆದ ಬಳಿಕ ಕಾಮಗಾರಿ ಆರಂಭವಾಗಲಿದೆ. ಪುತ್ತೂರು ತಾಲೂಕು ಮತ್ತು ಸುಳ್ಯದ ೩೦ ಗ್ರಾಮಗಳನ್ನು ಈ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಶಾಸಕರು ಹೇಳಿದರು.


೧೪ ದಿನದ ಅಧಿವೇಶನದಲ್ಲಿ ೧೧ ಪ್ರಶ್ನೆ ಹಾಕಿದ್ದೇನೆ

ಶಾಸಕನಗಿ ಚೊಚ್ಚಲ ಅಧಿವೆಶನದಲ್ಲಿ ಭಾಗವಹಿಸಿದ್ದೇನೆ. ೧೪ ದಿನಗಳ ಅಧಿವೇಶನದಲ್ಲಿ ೧೧ ಪ್ರಶ್ನೆಗಳನ್ನು ಕೇಳಿದ್ದೇನೆ. ಕರಾವಳಿಯ ಕೃಷಿಕರಿಗೆ, ಬಡವರಿಗೆ, ನಿರುದ್ಯೋಗಿಗಳಿಗೆ, ತುಳುಭಾಷೆಗೆ, ತುಳಿತಕ್ಕೊಳಗಾದವರ ಪರ ಮಾತನಾಡಿದ್ದೇನೆ. ಮುಂದೆಯೂ ಮತನಾಡುತ್ತೇನೆ. ತನ್ನ ಕ್ಷೇತ್ರದ ಜನರಿಗಾಗಿ ತಾನು ಸರಕಾರದ ಜೊತೆ ಗಲಾಟೆ ಮಾಡಿಯಾದರೂ ಅನುದಾನವನ್ನು ತರುತ್ತೇನೆ, ಕೊಟ್ಟ ಮಾತನ್ನು ಉಳಿಸಿಯೇ ಉಳಿಸುತ್ತೇನೆ.



ಮಲಗಿದ್ದಲ್ಲೇ ಇರುವವರಿಗೆ ಮಸಾಶನ ಕೊಡಿಸುವೆ

ಮರದಿಂದ ಬಿದ್ದು, ಪಾರ್ಶ್ವವಾಯು ಪೀಡಿತರಾಗಿ, ಅಪಘಾತದಿಂದ ಅಥವ ಇನ್ನಾವುದಾದರೂ ಕಾಯಿಲೆಯಿಂದ ಮನೆಯಲ್ಲೇ ಮಲಗಿದ ಸ್ಥಿತಿಯಲ್ಲಿ ಇರುವವರಿಗೆ ಸರಕಾರದಿಂದ ತಿಂಗಳಿಗೆ ೫ ಸಾವಿರ ಮಾಸಾಶನ ನೀಡುವಂತೆ ಮನವಿ ಮಾಡಿದ್ದೇನೆ. ಅದನ್ನು ನೀಡುವವರೆಗೂ ನಾನು ಸುಮ್ಮನಿರುವುದಿಲ್ಲ ಹೋರಾಟ ಮಾಡಿಯಾದರೂ ತಂದೇ ತರುತ್ತೇನೆ. ಬಡವರ ಕಣ್ಣೀರೊರೆಸಲು ಶಾಸಕನಾಗಿದ್ದೇನೆ ಆ ಕೆಲಸವನ್ನು ಮಾಡಿಯೇ ಮಾಡುತ್ತೇನೆ ಎಂದು ಶಾಸಕರು ಹೇಳಿದರು.


ಮಹಿಳಾ ತಂಡವನ್ನು ಕಟ್ಟಬೇಕಿದೆ

ಪಕ್ಷವನ್ನು ಕಟ್ಟಲು ಮಹಿಳೆಯರ ತಂಡವನ್ನು ಕಾರ್ಯಕರ್ತರು ಕಟ್ಟಬೇಕು. ಈಗಾಗಲೇ ಸರಕರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಪರವಾಗಿದ್ದು ಇದನ್ನು ಬಳಸಿಕೊಂಡು ಪ್ರತೀ ಬೂತ್‌ನಲ್ಲಿ ಮಹಿಳೆಯರ ತಂಡವನ್ನು ಕಟ್ಟುವ ಮೂಲಕ ಪಕ್ಷದ ಪರ ಪ್ರಚಾರವನ್ನು ನಡೆಸಬೇಕು. ಮುಂದಿನ ದಿನಗಳಲ್ಲಿ ಮಹಿಳಾ ಕಾಂಗ್ರೆಸ್ ಸಮಾವೇಶವನ್ನು ನಡೆಸಬೇಕಾಗಿದ್ದು ಇದಕ್ಕಾಗಿ ಈಗಿಂದಲೇ ಎಲ್ಲರೂ ಸಜ್ಜಾಗಬೇಕು ಎಂದು ಶಾಸಕರು ಹೇಳಿದರು.



ಅಧ್ಯಕ್ಷರುಗಳಿಗೆ ಪವರ್ ಇದೆ

ಸಣ್ಣ ವಿಚಾರಗಳನ್ನು ತನ್ನ ಬಳಿ ಹೇಳಬೇಡಿ ಅದನ್ನು ಪಕ್ಷದ ವಿವಿಧ ವಲಯಗಳ ಅಧ್ಯಕ್ಷರುಗಳೇ ಪರಿಹರಿಸಬೇಕು. ನಿಮ್ಮಿಂದ ಪರಿಹಾರ ಮಾಡಲು ಸಾಧ್ಯವಾಗುವ ಜನರ ಸಮಸ್ಯೆಗಳನ್ನು ನೀವೇ ಪರಿಹಾರ ಮಾಡಬೇಕು ಕಾಂಗ್ರೆಸ್ ಶಾಸಕ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ಕಾರಣ ಅಧ್ಯಕ್ಷರುಗಳಿಗೆ ಪವರ್ ಇದೆ ಅದನ್ನು ಪಕ್ಷಕ್ಕಾಗಿ , ಜನರಿಗಾಗಿ ಬಳಸಿಕೊಳ್ಳಿ. ನಿಮ್ಮಿಂದ ಸಾಧ್ಯವೇ ಇಲ್ಲವಾದರೆ ಮಾತ್ರ ನನ್ನ ಗಮನಕ್ಕೆ ತನ್ನಿ ಎಂದು ಸಭೆಯಲ್ಲಿ ಶಾಸಕರು ತಿಳಿಸಿದರು.


ಮೂರು ತಿಂಗಳ ಬಳಿಕ ಹೊಸ ಪಡಿತರ ಕಾರ್ಡು

ಹೊಸ ಪಡಿತರ ಚೀಟಿ ಸಿಗುತ್ತಿಲ್ಲ ಎಂಬ ದೂರುಗಳಿವೆ ಎಂದು ಶಾಸಕರ ಗಮನಕ್ಕೆ ತಂದಾಗ ಹೊಸ ಪಡಿತರ ಚೀಟಿಯನ್ನು ಮೂರು ತಿಂಗಳ ಬಳಿಕ ನೀಡಲಾಗುತ್ತದೆ. ಸುಮಾರು ೧ ಕೋಟಿ ಅರ್ಜಿಗಳು ಬಾಕಿ ಇದೆ. ಆರೋಗ್ಯ ಸಮಸ್ಯೆಗಳಿದ್ದವರು ಆಸ್ಪತ್ರೆಗೆ ಅಥವಾ ವಿಮೆ ಪಡೆದುಕೊಳ್ಳಲು ರೇಶನ್ ಕಾರ್ಡು ಬೇಕಾದಲ್ಲಿ ಅದನ್ನು ಸಂಬಂದಿಸಿದವರ ಗಮನಕ್ಕೆ ತಂದರೆ ತುರ್ತು ಪರಿಗಣಿಸಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.

ವೇದಿಕೆಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ, ಜಿಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ್ ರೈ ಮಠಂತಬೆಟ್ಟು, ಪಟ್ಟಣ ಪಂಚಾಯತ್ ಸದಸ್ಯ ವಿಕೆಎಂ ಅಶ್ರಫ್, ಬ್ಲಾಕ್ ಅಲ್ಪಸಂಖ್ಯತ ಘಟಕದ ಅಧ್ಯಕ್ಷರಾದ ಅಬ್ದುಲ್ ಕರೀಂ ಕುದ್ದುಪದವು, ವಿಟ್ಲ ಬ್ಲಾಕ್ ಸಂಘಟನಾ ಕಾರ್ಯದರ್ಶಿ ರಮಾನಾಥ ವಿಟ್ಲ, ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಪ್ರಹ್ಲಾದ್ ಉಪ್ಪಿನಂಗಡಿ, ಬ್ಲಾಕ್ ಉಪಾಧ್ಯಕ್ಷರಾದ ಜಯರಾಂ ಬಳ್ಳಾಲ್ ಬೀಡು, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಶೀದ್ ವಿ ಎಂ, ಕಾರ್ಯದರ್ಶಿ ಸುನಿತಾ ಕೋಟ್ಯಾನ್, ಬ್ಲಾಕ್ ಕಾರ್ಯದರ್ಶಿ ಅಬ್ದುಲ್‌ರಹಿಮಾನ್ ಯುನಿಕ್, ಎಸ್ ಸಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ, ಮಾಜಿ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಯೂತ್ ಬ್ಲಾಕ್ ಅಧ್ಯಕ್ಷರಾದ ಫಾರೂಕ್ ಪೆರ್ನೆ ಮೊದಲಾದವರು ಉಪಸ್ಥಿತರಿದ್ದರು.


ಆ.11ಕ್ಕೆ ಪುತ್ತೂರು ಬಿಲ್ಲವ ಮಹಿಳಾ ವೇದಿಕೆ ನೇತೃತ್ವದಲ್ಲಿ ಆಟಿದ ನೆಂಪುದ ಕೂಟ - ಸನ್ಮಾನ

Posted by Vidyamaana on 2024-08-10 22:18:07 |

Share: | | | | |


ಆ.11ಕ್ಕೆ  ಪುತ್ತೂರು ಬಿಲ್ಲವ ಮಹಿಳಾ ವೇದಿಕೆ ನೇತೃತ್ವದಲ್ಲಿ ಆಟಿದ ನೆಂಪುದ ಕೂಟ - ಸನ್ಮಾನ

ಪುತ್ತೂರು: ಸಾಧಕರನ್ನು ಸನ್ಮಾನಿಸುವಾಗ ಆ ಸನ್ಮಾನ ಅವರಿಗೆ ಮಾತ್ರವಲ್ಲ ಅವರ ಸಾಧನೆಗೆ ಕಾರಣಕರ್ತರಾದ ಇಡಿ ಕುಟುಂಬಕ್ಕೆ ಸಲ್ಲಬೇಕೆಂಬ ನಿಟ್ಟಿನಲ್ಲಿ ಸಾಧಕರ ಜೊತೆ ಅವರ ಕುಟುಂಬವನ್ನೂ ಸನ್ಮಾನಿಸುವ ವಿಶೇಷ ಕಾರ್ಯಕ್ರಮ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಮೂಲಕ ಬಿಲ್ಲವ ಮಹಿಳಾ ವೇದಿಕೆ ನೇತೃತ್ವದಲ್ಲಿ ಆ.11ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯುವ ಆಟಿದ ನೆಂಪುದ ಕೂಟ ಕಾರ್ಯಕ್ರಮದಲ್ಲಿ ನಡೆಯಲಿದೆ ಕಾರ್ಯಕ್ರಮದಲ್ಲಿ ಕುಟುಂಬವನ್ನೇ ಸನ್ಮಾನಿಸುವ ಚಿಂತನೆಗೆ ಪ್ರಥಮ ಹೆಜ್ಜೆ ಬಿಲ್ಲವ ಸಂಘ ಇಟ್ಟಿದೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಆ.11ಕ್ಕೆ ವಿಶೇಷ ರೀತಿಯಲ್ಲಿ ಆಟಿದ ನೆಂಪುದ ಕೂಟ ಎಂಬ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ತನಕ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಶ್ರೀ ನಾರಾಯಣಗುರುಗಳು ವಿದ್ಯೆಗೆ ಆದ್ಯತೆ ನೀಡಿದಂತೆ ಸಂಘದ ವಿದ್ಯಾರ್ಥಿವೇತನ ಪಡೆದು ಉನ್ನತ ಉದ್ಯೋಗ ಪಡೆದದವರನ್ನು ಕುಟುಂಬ ಸಮೇತ ಸನ್ಮಾನಿಸಲಾಗುವುದು.

ಕರಾವಳಿಯಲ್ಲಿ ಮಳೆ ಅಬ್ಬರ: ಉಭಯ ಜಿಲ್ಲೆಗಳಲ್ಲಿ ಜುಲೈ 27 ರಂದು ಶಾಲೆಗಳಿಗೆ ರಜೆ

Posted by Vidyamaana on 2023-07-26 15:17:13 |

Share: | | | | |


ಕರಾವಳಿಯಲ್ಲಿ ಮಳೆ ಅಬ್ಬರ: ಉಭಯ ಜಿಲ್ಲೆಗಳಲ್ಲಿ ಜುಲೈ 27 ರಂದು ಶಾಲೆಗಳಿಗೆ ರಜೆ

ಮಂಗಳೂರು/ಉಡುಪಿ : ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ ಕಾರಣ ಜುಲೈ 27 ರಂದು (ಗುರುವಾರ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.



ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಪ್ರೌಢ ಶಾಲೆಗಳವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.


ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಜುಲೈ 27 ರಂದು ದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.ಮಂಗಳೂರು/ಉಡುಪಿ : ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ ಕಾರಣ ಜುಲೈ 27 ರಂದು (ಗುರುವಾರ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.


ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಪ್ರೌಢ ಶಾಲೆಗಳವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.


ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಜುಲೈ 27 ರಂದು ದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಡೆಲ್ಲಿಗೆ ಬರ್ಲಿಕ್ಕೆ ಹೇಳಿ ಈಶ್ವರಪ್ಪನವರಿಗೆ ಸಿಗದ ಶಾ

Posted by Vidyamaana on 2024-04-04 12:02:54 |

Share: | | | | |


ಡೆಲ್ಲಿಗೆ ಬರ್ಲಿಕ್ಕೆ ಹೇಳಿ ಈಶ್ವರಪ್ಪನವರಿಗೆ ಸಿಗದ ಶಾ

ನವದೆಹಲಿ : ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಅವರು ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದರು.ಆದರೆ ಅಮಿತ್ ಶಾ ಅವರು ಈಶ್ವರಪ್ಪ ಅವರ ಭೇಟಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಇದೀಗ ಅವರು ವಾಪಸ್ ಆಗಿದ್ದಾರೆ.ಅಮಿತ್ ಶಾ ಬೇಟಿಗೆ ಸಮಯ ಸಿಗದ ಕಾರಣ ಇದೀಗ ಈಶ್ವರಪ್ಪ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಬೆಳಗ್ಗೆ 6 10ರ ಫ್ಲೈಟ್ ಗೆ ಕೆ ಎಸ್ ಈಶ್ವರಪ್ಪ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ಇವಳೆ ಸುದ್ದಿಗಾರನಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಬಿ ವೈ ರಾಘವೇಂದ್ರ ಸೋಲಲಿ ಎಂಬ ಪರೀಕ್ಷೆ ಅಮಿತ್ ಶಾ ಅವರಿಗೆ ಇರಬಹುದು ಎಂದು ತಿಳಿಸಿದರು.

ಮುಜರಾಯಿ ಮತ್ತು ಸಾರಿಗೆ ಸಚಿವರನ್ನು ಭೇಟಿ ಮಾಡಿದ ಶಾಸಕ ಅಶೋಕ್ ರೈ

Posted by Vidyamaana on 2024-07-12 08:05:47 |

Share: | | | | |


ಮುಜರಾಯಿ ಮತ್ತು ಸಾರಿಗೆ ಸಚಿವರನ್ನು ಭೇಟಿ ಮಾಡಿದ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಈಗಾಗಲೇ ಪ್ಲಾನಿಂಗ್ ( ನೀಲಿ ನಕಾಶೆ) ಯನ್ನು ತಯಾರು ಮಾಡಿದ್ದು ಅದರ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಮುಜರಾಯಿ ಇಲಾಖೆಗೆ ಕಳುಹಿಸಲಾಗಿದೆ, ಈ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ನೀಡುವಂತೆ ಶಾಸಕ ಅಶೋಕ್ ರೈಯವರು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಅವರ ಕಚೇರಿಯಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಐತಿಹಾಸಿಕವಾದ ದೇವಸ್ಥಾನವಾಗಿದೆ. ಇಲ್ಲಿಗೆ ಪ್ರತೀ ದಿನ ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ ಮತ್ತು ವಿಶೇಷ ದಿನಗಳಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ. ಈ ಪ್ರಸಿದ್ದ ದೇವಸ್ಥಾನವನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಪ್ಲಾನಿಂಗ್ ತಯಾರಿಸಲಾಗಿದೆ. ಈ ಪ್ಲಾನಿಂಗ್ ಪ್ರಕಾರ ದೇವಸ್ಥಾನವನ್ನು ಅಭಿವೃದ್ದಿ ಮಾಡುವ ಮೂಲಕ ಭಕ್ತ ಸಮೂಹಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಸಿಕೊಡಬೇಕಿದೆ. ಈಗಾಗಲೇ ಪ್ಲಾನಿಂಗ್ ನ್ನು ಇಲಾಖೆಗೆ ಅನುಮೋದನೆಗೆ ಕಳುಹಿಸಲಾಗಿದ್ದು ಶೀಘ್ರವೇ ಅನುಮೋದನೆಯನ್ನು ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದರು.

ಮಗನ ಉತ್ತರಕ್ರಿಯೆ ನಡೆದ ಎರಡೇ ದಿನದಲ್ಲಿ ತಂದೆ ಆತ್ಮಹತ್ಯೆಗೆ ಶರಣು

Posted by Vidyamaana on 2024-01-16 15:32:09 |

Share: | | | | |


ಮಗನ ಉತ್ತರಕ್ರಿಯೆ ನಡೆದ ಎರಡೇ ದಿನದಲ್ಲಿ ತಂದೆ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ, ಜ.16: ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆಯೂ ಆತ್ಮಹತ್ಯೆಗೆ ಶರಣಾದ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆ ಗ್ರಾಮದ ಪೆರ್ಲ ನಿವಾಸಿ ಯೊಗೀಶ್ ಪೂಜಾರಿ (41) ಆತ್ಮಹತ್ಯೆ ಮಾಡಿಕೊಂಡವರು.‌


ಜ.4 ರಂದು ಎಂಟನೇ ತರಗತಿ ಓದುತ್ತಿದ್ದ ಮಗ ಯಕ್ಷಿತ್ (14) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಉತ್ತರ ಕ್ರಿಯೆ ಜ.14ರಂದು ಭಾನುವಾರ ನಡೆದಿತ್ತು. ಯೋಗಿಶ್ ಪೂಜಾರಿ ಮತ್ತು ರೇಷ್ಮಾ ದಂಪತಿಯ ಪುತ್ರ ಯಕ್ಷಿತ್ (14) ಸಾವಿಗೆ ತಮ್ಮನ ಜೊತೆಗಿನ ಕ್ಷುಲ್ಲಕ ಜಗಳ ಕಾರಣ ಎನ್ನಲಾಗಿತ್ತು. 


ಆರು ವರ್ಷದ ತಮ್ಮನ ಜೊತೆ ಪದೇ ಪದೇ ಗಲಾಟೆ ನಡೆದಿತ್ತು.‌ ಈ ಸಲ ಗಲಾಟೆಯಲ್ಲಿ ತಮ್ಮ ಅಣ್ಣನ ಹೊಟ್ಟೆ ಮೇಲೆ ಕಚ್ಚಿ ಗಾಯ ಮಾಡಿದ್ದ. ಇದೇ ವಿಚಾರದಲ್ಲಿ ನೊಂದು ತಮ್ಮನ ಎದುರೇ ಯಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಯಕ್ಷಿತ್ ಉಜಿರೆ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ. 


ಮನೆಯ ಕೊಠಡಿಯಲ್ಲೇ ತಾಯಿಯ ಸೀರೆಯನ್ನು ಬಿಗಿದುಕೊಂಡು ನೇಣಿಗೆ ಶರಣಾಗಿದ್ದ. ತಂದೆ -ತಾಯಿ ಕೆಲಸಕ್ಕೆ ಹೋದ ಬಳಿಕ ಬಾಲಕ ದುರಂತ ಸಾವಿಗೀಡಾಗಿದ್ದು ಉಜಿರೆಯ ಜನರ ಮನ ಕಲಕಿತ್ತು. ಬೆಳ್ತಂಗಡಿ ಪೊಲೀಸರು ಸ್ಥಳ ಪರಿಶೀಲಿಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದರು. ಇದೀಗ ಮಗನ ಉತ್ತರ ಕ್ರಿಯೆ ನಡೆದು ಎರಡೇ ದಿನದಲ್ಲಿ ತಂದೆಯೂ ಸಾವಿಗೆ ಶರಣಾಗಿದ್ದಾರೆ



Leave a Comment: