ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ವಂಚನೆ ಆರೋಪದಲ್ಲಿ ನಿರ್ಮಾಪಕ ರವೀಂದರ್ ಜೈಲುಪಾಲು – ನಟಿ ಮಹಾಲಕ್ಷ್ಮಿ ಸಖತ್ ಗೋಳು

Posted by Vidyamaana on 2023-09-30 22:44:32 |

Share: | | | | |


ವಂಚನೆ ಆರೋಪದಲ್ಲಿ ನಿರ್ಮಾಪಕ ರವೀಂದರ್ ಜೈಲುಪಾಲು – ನಟಿ ಮಹಾಲಕ್ಷ್ಮಿ ಸಖತ್ ಗೋಳು

    ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತು ನಟಿ ಮಹಾಲಕ್ಷ್ಮೀ ಶಂಕರ್ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರಿಗೆ ಇದು ಎರಡನೇ ಮದುವೆಯಾಗಿತ್ತು. ತನಗಿಂತ ಎತ್ತರವಾದ ಮಗನಿದ್ದರೂ ನಟಿ ಮಹಾಲಕ್ಷ್ಮೀ ದಡೂತಿ ದೇಹವನ್ನು ಹೊಂದಿರುವ ನಿರ್ಮಾಪಕ ರವೀಂದರ್ ಅವರನ್ನು ಪ್ರೀತಿಸಿ ಮದುವೆಯಾದರು. ಇವರಿಬ್ಬರ ಮದುವೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.ಇವರಿಬ್ಬರ ಜೋಡಿ ನೋಡಿದವರು ಈಕೆ ಹಣದ ಆಸೆಗೆ ರವೀಂದರ್ ಅವರನ್ನು ಮದುವೆಯಾಗಿರುವುದು. ಹೆಚ್ಚೇನು ಈ ಜೋಡಿ ಒಟ್ಟಿಗೆ ಸಂಸಾರ ಮಾಡಲ್ಲ ಎಂದು ಟ್ರೋಲ್ ಮಾಡಲಾಗಿತ್ತು. ಇದಕ್ಕೆಲ್ಲ ಕ್ಯಾರೇ ಅನ್ನದೆ ಈ ಜೋಡಿ ಒಟ್ಟಿಗೆ ಸುತ್ತಾಡುತ್ತಿರುವ ಹಾಗೂ ರೋಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.ಇದೀಗ ರವೀಂದರ್ ಅವರು ವಂಚನೆ ಪ್ರಕರಣ ಸಂಬಂಧ ಜೈಲು ಸೇರುತ್ತಿದ್ದ ಹಾಗೇ ಮಹಾಲಕ್ಷ್ಮೀ ತಮ್ಮ ವರಸೆ ಬದಲಿಸಿಕೊಂಡಿದ್ದಾರೆ. ನಾನು ರವೀಂದರ್‌ನಿಂದ ಮೋಸ ಹೋದೆ. ಇದೆಲ್ಲ ನನಗೆ ಗೊತ್ತಿರಲಿಲ್ಲ ಎಂದು ತಮ್ಮ ಆಪ್ತ ವಲಯಗಳಲ್ಲಿ ಹೇಳಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.ಮಹಾಲಕ್ಷ್ಮೀ ಹೇಳಿಕೆ ಹೀಗಿದೆ:

"ಮದುವೆಗೂ ಮುನ್ನವೇ ನನಗೆ ಇದ್ಯಾವುದೂ ಗೊತ್ತಿರಲಿಲ್ಲ. ಈ ವಿಚಾರಗಳನ್ನೂ ರವೀಂದರ್‌ ನನ್ನ ಮುಂದೆ ಹೇಳಿಕೊಂಡಿರಲಿಲ್ಲ. ನನ್ನನ್ನು ಮೋಸ ಮಾಡಿ ಮದುವೆಯಾಗಿದ್ದಾನೆ" ಎಂದು ಮಹಾಲಕ್ಷ್ಮೀ, ಪತಿ ರವೀಂದರ್‌ ಬಗ್ಗೆ ತಮ್ಮ ಆಪ್ತ ವಲಯದ ಮುಂದೆ ಹೇಳಿಕೊಂಡಿದ್ದಾರೆ.

ಏನಿದು ರವೀಂದರ್ ವಂಚನೆ ಪ್ರಕರಣ?

ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ಚೆನ್ನೈನ ಬಾಲಾಜಿ ಗಾಬಾ ತಮ್ಮ ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬುವವರಿಗೆ ರವೀಂದರ್‌ ನಂಬಿಸಿದ್ದರು. ಅವರಿಂದ 16 ಕೋಟಿ ಹಣವನ್ನು ಹೂಡಿಕೆ ಸಹ ಮಾಡಿಸಿದ್ದರು. ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಹೇಳಿ ನಕಲಿ ದಾಖಲೆಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದರು ಎಂದು ಉದ್ಯಮಿ ಬಾಲಾಜಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ರವೀಂದರ್‌ ಅವರನ್ನು ಚೆನ್ನೈ ಪೊಲೀಸರು ಸೆ. 7ರಂದೇ ಬಂಧಿಸಿದ್ದರು.ಪತಿ ರವೀಂದರ್‌ ಜೈಲು ಪಾಲಾಗಿದ್ದರೆ, ಇತ್ತ ಮಹಾಲಕ್ಷ್ಮೀ ಪತಿಗೆ ಜಾಮೀನು ಕೊಡಿಸುವ ಕಾರ್ಯದಲ್ಲಿ ನಿರತರಾಗಿದ್ದರೂ, ಅರ್ಜಿ ತಿರಸ್ಕೃತಗೊಂಡಿದೆ. ಮತ್ತೊಂದೆಡೆ ಪತಿ ಜೈಲು ಸೇರಿದ ಮೇಲಿಂದ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಸಹ ಹಂಚಿಕೊಳ್ಳದ ಮಹಾಲಕ್ಷ್ಮೀ ಕಳೆದ ನಾಲ್ಕೈದು ದಿನಗಳಿಂದ ಎಂದಿನಂತೆ, ನಿತ್ಯ ನಾಲ್ಕೈದು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಅದಲ್ಲದೆ ಮಾಧ್ಯಮಗಳ ಬಳಿ ತಮ್ಮ ಪತಿ ರವಿಂದರ್‌ ಬಂಧನದ ಬಗ್ಗೆ ಮೌನ ಮುರಿದಿದ್ದಾರೆ

ಪುತ್ತೂರು : ತಾಲೂಕು ಮಟ್ಟದ ಕ್ರೀಡಾಕೂಟ

Posted by Vidyamaana on 2023-11-04 16:21:21 |

Share: | | | | |


ಪುತ್ತೂರು : ತಾಲೂಕು ಮಟ್ಟದ ಕ್ರೀಡಾಕೂಟ

ಪುತ್ತೂರು: 2022-23ರ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ಕ್ರೀಡಾಕೂಟದಲ್ಲಿ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಮಹಮ್ಮದ್ ಅಫ್ರಾಝ್ ಟ್ರಿಪಲ್ ಜಂಪ್ ವಿಭಾಗದಲ್ಲಿ ಪ್ರಥಮ ಮತ್ತು 400 ಮೀಟರ್ ರಿಲೇ ಯಲ್ಲಿ  ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪುತ್ತಿಲ ಪ್ರಚಾರ ಬಾನೆತ್ತರಕ್ಕೆ : ಅಭಿಮಾನಿಗಳು ಹಾರಿಸಿದ್ರು ಬೃಹತ್ ಗಾತ್ರದ ಬಲೂನ್

Posted by Vidyamaana on 2023-05-03 08:29:35 |

Share: | | | | |


ಪುತ್ತಿಲ ಪ್ರಚಾರ ಬಾನೆತ್ತರಕ್ಕೆ : ಅಭಿಮಾನಿಗಳು ಹಾರಿಸಿದ್ರು ಬೃಹತ್ ಗಾತ್ರದ ಬಲೂನ್

ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರ ಪ್ರಚಾರರ್ಥವಾಗಿ ಅಭಿಮಾನಿಗಳು ಬೃಹತ್ ಬಲೂನ್ ಅನ್ನು ಬಾನೆತ್ತರಕ್ಕೆ ಹಾರಿಸಿದ ಘಟನೆ ಪೋಳ್ಯದಲ್ಲಿ ನಡೆದಿದೆ.

ಪೋಳ್ಯದಲ್ಲಿ ಪುತ್ತಿಲ ಅಭಿಮಾನಿಗಳು ಪ್ರಚಾರರ್ಥವಾಗಿ ಬೃಹತ್ ಬಲೂನ್ ಅನ್ನು ಗಗನಕ್ಕೆ ಹಾರಿಸಿದ್ದಾರೆ.ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಸತ್ಯ,ಧರ್ಮ, ನ್ಯಾಯ ನಿಷ್ಠೆಯ ಸಮರ್ಥ ಅಭ್ಯರ್ಥಿ’ ಎಂದು ಬಲೂನ್ ಮೇಲೆ ಬರೆದು ಅಭಿಮಾನಿ ಗಳು ಅದನ್ನು ಗಗನದತ್ತ ಹಾರಿಸಿದ್ದಾರೆ.ಅಭಿಮಾನಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಪುತ್ತಿಲ ರವರು ಚುನಾವಣಾ ಕಣಕ್ಕೆ ಇಳಿದಿದ್ದು, ನೆಚ್ಚಿನ ನಾಯಕನ ವಿಜಯ ಪತಾಕೆಯು ಬಾನೆತ್ತರಕ್ಕೆ ಹಾರಬೇಕೆನ್ನುವ ಮಹದಾಸೆಯನ್ನಿಟ್ಟುಕೊಂಡು ಕಾರ್ಯಕರ್ತರು ಬಲೂನ್ ಅನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆನ್ನಲಾಗಿದೆ.

ಪುತ್ತೂರು ರೋಟರಿ ಕ್ಲಬ್‌ ಸೆಂಟ್ರಲ್ ನಿಂದ ಅರಿವು ಕಾರ್ಯಕ್ರಮ

Posted by Vidyamaana on 2023-08-04 01:38:25 |

Share: | | | | |


ಪುತ್ತೂರು ರೋಟರಿ ಕ್ಲಬ್‌ ಸೆಂಟ್ರಲ್ ನಿಂದ ಅರಿವು ಕಾರ್ಯಕ್ರಮ

ಪುತ್ತೂರು: ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ ಇವರ ವತಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಅರಿವು ಕಾರ್ಯಾಗಾರ ಜು. 28ರಂದು ನಡೆಯಿತು.

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉನ್ನತವಾದ ಗುರಿ ಇರಬೇಕು, ಜೀವನದಲ್ಲಿ ನೈತಿಕ ಮೌಲ್ಯಗಳಿಗೆ ಪ್ರಾಧಾನ್ಯತೆ ನೀಡಬೇಕು, ಜ್ಞಾನದಾಹ ಇದ್ದರೆ ಆತ ಸಮಾಜದಲ್ಲಿ ಸುಸಂಸ್ಕೃತ ಪ್ರಜೆ ಆಗಬಲ್ಲ ಅದಕ್ಕಾಗಿ ಇಂದಿನ ಅರಿವು ಕಾರ್ಯಕ್ರಮ ಎಂದು ಹೇಳಿದರು. 

ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜ್ಞಾನವನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ, ಇಂತಹ ಅರಿವು ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಜ್ಞಾನದಾಹ ಹೆಚ್ಚುತ್ತದೆ ಎಂದು ಹೇಳಿದರು ಅಲ್ಲದೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಚಂದ್ರಹಾಸ ರೈ ಮತ್ತು ರಾಕೇಶ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಪಿ.ಎಂ.ಅಶ್ರಫ್ ಮುಕ್ವೆ ಉಪಸ್ಥಿತರಿದ್ದರು. ಶಾಲಾ ಆಡಳಿತ ಸಮಿತಿಯ ಕೋಶಾಧಿಕಾರಿ ದಿವಾಕರ ರೈ ಕೆರೆಮೂಲೆ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿದರು. ಮುಖ್ಯಗುರು ಕೃಷ್ಣವೇಣಿ ವಂದಿಸಿದರು. ಆಡಳಿತ ಸಮಿತಿಯ ಗೌರವ ಸಲಹೆಗಾರ ಗಣೇಶ್ ಭಟ್ ಮಾಪಲಮಜಲು, ಸದಸ್ಯರಾದ ಮುರಳೀಕೃಷ್ಣ ಸಿದ್ಧಮೂಲೆ, ಪದಾಧಿಕಾರಿಗಳಾದ ಗಣಪತಿ ಭಟ್ ಎಕ್ಕಡ್ಕ, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜೂನ್ 22ರ ಕರ್ನಾಟಕ ಬಂದ್ ಗೊಂದಲ

Posted by Vidyamaana on 2023-06-21 01:33:22 |

Share: | | | | |


ಜೂನ್ 22ರ ಕರ್ನಾಟಕ ಬಂದ್ ಗೊಂದಲ

ಪುತ್ತೂರು: ವಿದ್ಯುತ್ ದರ ಏರಿಕೆ ಸಂಬಂಧ ನಡೆಯಲಿದೆ ಎಂದು ಸುದ್ದಿಯಾಗಿದ್ದ ಬಂದ್ ಇದೀಗ ಗೊಂದಲಕ್ಕೆ ಎಡೆ ನೀಡಿದೆ.

ಜೂನ್ 22ರಂದು ಬಂದ್ ನಡೆಯಲಿದ್ದು, ಎಫ್.ಕೆ.ಸಿ.ಸಿ.ಐ. ಕರೆ ನೀಡಿದೆ ಎಂದು ಮೊದಲಿಗೆ ಸುದ್ದಿಯಾಗಿತ್ತು. ಈ ಬಂದ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ನೈತಿಕ ಬೆಂಬಲವನ್ನು ಸೂಚಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ಈ ಬಂದ್ಗೆ ತಮ್ಮ ಬೆಂಬಲವಿಲ್ಲ ಎಂದು ಘೋಷಿಸಿದರು. ಈ ಎಲ್ಲಾ ಗೊಂದಲಗಳ ನಡುವೆ ಎಚ್ಚೆತ್ತುಕೊಂಡ ಎಫ್.ಕೆ.ಸಿ.ಸಿ.ಐ. ರಾಜ್ಯಾಧ್ಯಕ್ಷರು ಬಿ.ವಿ. ಗೋಪಾಲ್ ರೆಡ್ಡಿ ಅವರು ತಾವು ಬಂದ್ಗೆ ಕರೆಯನ್ನೇ ಕೊಟ್ಟಿಲ್ಲ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.

ಹಾಗಾದರೆ ಬಂದ್ಗೆ ಕರೆ ನೀಡಿದವರು ಯಾರು? ಈ ಗೊಂದಲ ಸಾರ್ವಜನಿಕ ವಲಯದಲ್ಲಿ‌ ಹರಿದಾಡುತ್ತಿದೆ.


ಬಿಜೆಪಿ ರಾಜ್ಯಾಧ್ಯಕ್ಷರು ಏನಂದರು?

ವಿದ್ಯುತ್ ದರ ಎರಿಕೆ ಖಂಡಿಸಿ ಎಫ್​ಕೆಸಿಸಿಐ ಕರೆ ನೀಡಿರುವ ರಾಜ್ಯ ಬಂದ್​​ಗೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ. ರಾಜ್ಯ ಸರ್ಕಾರದ ಹಠಮಾರಿ ಧೋರಣೆ ಕೈಬಿಡಬೇಕು, ಉದ್ಯಮಶೀಲರಿಗೆ ಅವಕಾಶ ಕೊಡಬೇಕು. ವಿದ್ಯುತ್ ದರದ ಬಗ್ಗೆ ಉದ್ಯಮಿಗಳ ಸಮಸ್ಯೆ ಆಲಿಸಿ, ನ್ಯಾಯ ಕೊಡಿಸುವ ಹಾಗೂ ಉದ್ಯಮಶೀಲತೆಗೆ ಅವಕಾಶ ಮಾಡಿಕೊಡುವ ಕಾರ್ಯ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರುಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ತಿಳಿಸಿದರು.


ವರ್ತಕ ಸಂಘ 

ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಜೂ. 22ರಂದು ಕರೆ ನೀಡಿದ ಕರ್ನಾಟಕ ಬಂದ್ ಗೆ ಬೆಂಬಲವಿಲ್ಲ. ವಿದ್ಯುತ್ ದರ ಏರಿಕೆಯಾಗಿರುವುದಕ್ಕೆ ನಮ್ಮ ವಿರೋಧವಿದೆ. ಒಂದೆಡೆ ಉಚಿತ ಇನ್ನೊಂದೆಡೆ ದರ ಏರಿಕೆ ಮಾಡಿರುವುದು ಸರಿಯಲ್ಲ. ಆದರೆ ಬಂದ್ ಮಾಡುವುದರಿಂದ ಕೈಗಾರಿಕೋದ್ಯಮಿಗಳಿಗೆ ಹಾಗೂ ವರ್ತಕರಿಗೇ ನಷ್ಟ. ಈ ನಿಟ್ಟಿನಲ್ಲಿ ಮಂಗಳೂರು ಛೇಂಬರ್ಸ್ ಆಫ್ ಕಾಮರ್ಸ್‍ & ಇಂಸ್ಟ್ರೀಸ್ ಸಲಹೆಯಂತೆ ಬಂದ್ ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಜಾನ್ ಕುಟಿನ್ಹಾ, ಉಪಾಧ್ಯಕ್ಷ ಪಿ. ವಾಮನ್ ಪೈ, ನಿರ್ದೆಶಕ ಶ್ರೀಕಾಂತ್ ಕೊಳತ್ತಾಯ, ಪ್ರ.ಕಾರ್ಯದರ್ಶಿ ಉಲ್ಲಾಸ್ ಪೈ, ಮಾಜಿ ಅಧ್ಯಕ್ಷ ಕೇಶವ ಪೈ ತಿಳಿಸಿದ್ದಾರೆ.


ಎಫ್.ಕೆ.ಸಿ.ಸಿ.ಐ. ಸ್ಪಷ್ಟನೆ ಏನು?

ವಿದ್ಯುತ್ ದರ ಏರಿಕೆ ವಿರೋಧಿಸಿ ಜೂನ್ 22 ರಂದು ಬಂದ್ ಗೆ ಕರೆ ನೀಡಿಲ್ಲ ಎಂದು ತಿಳಿಸಿರುವ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರೀ (ಎಫ್ ಕೆಸಿಸಿಐ) ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ, ನಮಗೂ ಕರ್ನಾಟಕ ಬಂದ್ ಗೂ ಸಂಬಂಧವಿಲ್ಲ. ವಿದ್ಯುತ್ ದರ ಇಳಿಕೆ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ತೆರಿಗೆಯನ್ನು ಶೇ. 9ರಿಂದ ಶೇ.3ಕ್ಕೆ ಇಳಿಕೆ ಮಾಡಲು ಮನವಿ ಮಾಡಿದ್ದೇವೆ. ಸರ್ಕಾರ ಏನು ಮಾಡಲಿದೆ ಎಂಬುದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದ್ದಾರೆ.

ಪುತ್ತೂರು ನಗರ ವ್ಯಾಪ್ತಿಗೆ ೨೪ ಕೋಟಿ ರೂ ಅನುದಾನ ದೂರ ದೃಷ್ಟಿಯಲ್ಲಿ ನಡೆಯಲಿದೆ ನಗರದ ಕಾಮಗಾರಿಗಳು: ಅಶೋಕ್ ರೈ

Posted by Vidyamaana on 2024-01-08 07:54:09 |

Share: | | | | |


ಪುತ್ತೂರು ನಗರ ವ್ಯಾಪ್ತಿಗೆ ೨೪ ಕೋಟಿ ರೂ ಅನುದಾನ  ದೂರ ದೃಷ್ಟಿಯಲ್ಲಿ ನಡೆಯಲಿದೆ ನಗರದ ಕಾಮಗಾರಿಗಳು: ಅಶೋಕ್ ರೈ

ಪುತ್ತೂರು: ಪುತ್ತೂರು ನಗರ ವ್ಯಾಪ್ತಿಯಲ್ಲಿ ರೂ ೨೪ ಕೋಟಿ ರೂ ಕಾಮಗಾರಿ ನಡೆಯಲಿದ್ದು ಇದಕ್ಕಾಗಿ ವಿವಿಧ ಕಡೆಗಳಿಗೆ ಅನುದಾನ ಹಂಚಿಕೆ ಕೆಲಸ ನಡೆದಿದ್ದು ಮುಂದಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ನನಡೆಯಲಿದ್ದು ದೂರ ದೃಷ್ಟಿಯ ಕಾಮಗಾರಿಗಳು ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಮರೀಲ್ ಬೆದ್ರಾಳ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.


ಪುತ್ತೂರು ನಗರಕ್ಕೆ ೨೪ ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೧೦೧೦ ಕೋಟಿ ರಊ ಅನುದಾನ ಬಿಡುಗಡೆಯಾಗಿದ್ದು ಮುಂದಿನ ಒಂದೂವರೆ ವರ್ಷದೊಳಗೆ ಗ್ರಾಮೀಣ ಭಾಗದಲ್ಲೂ ದಿನದ ೨೪ ಗಂಠೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.


ಕೆಎಂಎಫ್ ಪುತ್ತೂರಿಗೆ ಶಿಫ್ಟ್ ಆಗಲಿದ್ದು ಇದರಿಂದ ಇಲ್ಲಿನ ಸುಮಾರು ೬೦೦ ಮಂದಿಗೆ ಉದ್ಯೋಗ ದೊರೆಯಲಿದೆ. ಯುವಕರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡಬೇಕು. ಪುತ್ತೂರಿನಲ್ಲಿ ಉದ್ಯಮ ಆರಂಭವಾದರೆ ಎಲ್ಲರಿಗೂ ಆದಾಯ ಬರಲಿದೆ. ಆಟೋ ಚಾಲಕರಿಗೆ, ಲರಿ ಚಾಲಕರಿಗೆ ಸೇರಿದಂತೆ ವಿದ್ಯಾವಂತ ನಿರುದ್ಯೋಗಿಗಳಿಗೂ ಉದ್ಯೋಗಕವಾಶ ದೊರೆಯಲಿದೆ. ಪಕ್ಷಾತೀತವಾಗಿ ಪುತ್ತೂರಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ನಡೆಸುತ್ತೇನೆ. ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಖಂಡಿತವಾಗಿಯೂ ಮಾಡುವುದಿಲ್ಲ. ಪುತ್ತೂರಿನ ಜನತೆಯ ಕ್ಷೇಮವೇ ನನ್ನ ಕ್ಷೇಮವಾಗಿದೆ, ನನ್ನ ಕ್ಷೇತ್ರದಲ್ಲಿ ಸೂರು, ನೀರು, ಮತ್ತು ಕರೆಂಟ್ ಇಲ್ಲದೆ ವಂಚಿತರಾಗಿರುವ ಯವುದೇ ಕುಟುಂಬ ಇರಬಾರದು, ಯಾವ ಕುಟುಂಬವೂ ಹಸಿವಿನಿಂದ ಇರಬಾರದು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

ಬೆದ್ರಾಳದಿಂದ ಸರ್ವೆತನಕ ಚತುಷ್ಪಥ ರಸ್ತೆ


ಬೆದ್ರಾಳದಿಂದ ಸರ್ವೆ ತನಕ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ ಈ ವಿಚಾರಕ್ಕೆ ಸಂಬಂಧಿಸಿಂದಂತೆ ಈಗಾಗಲೇ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಶಾಸಕರು ಹೇಳಿದರು. ಸರಕಾರ ಐದು ಗ್ಯಾರಂಟಿಯನ್ನು ನೀಡಿ ಪ್ರತೀ ಕುಟುಂಬಕ್ಕೂ ನೆರವಾಗಿದೆ, ಎಲ್ಲರ ಖಾತೆಗೂ ಹಣ ಜಮೆಯಾಗುತ್ತಿದೆ, ಕಾಂಗ್ರೆಸ್ ಸರಕಾರ ಬಂದ ಬಳಿಕ ಜನತೆ ನೆಮ್ಮದಿಯಿಂದ ಇದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಕಾಂಗ್ರೆಸ್ ಸರಕಾರ ಬಂದ ಬಳಿಕ ಕೊಂಚ ನೆಮ್ಮದಿ ದೊರಕಿದೆ. ಮುಂದಿನ ದಿನಗಳಲ್ಲಿ ಅಭಿವೃದ್ದಿಗೂ ಸರಕಾರ ಹೆಚ್ಚಿನ ಅನುದಾನವನ್ನು ನೀಡಲಿದೆ ಎಂದು ಶಾಸಕರು ಹೇಳಿದರು.


ಅಶೋಕ್ ರೈ ಶಾಸಕರಾಗಿದ್ದೇ ನಮ್ಮ ಭಾಗ್ಯ: ಆಲಿ


ಅಶೋಕ್ ರೈ ಶಾಸಕರಾಗಿದ್ದೇ ನಮ್ಮೆಲಲ್ಲರ ಭಾಗ್ಯವಾಗಿದೆ. ಪುತ್ತೂರಿಗೆ ಗಟ್ಸ್ ಇರುವ ಶಾಸಕರು ಬೇಕು ಎಂದು ಜನ ಆಸೆಪಟ್ಟಿದ್ದರು ಅದರಂತೆ ಗಟ್ಸ್ ಇರುವ ಶಸಕರು ನಮಗೆ ಸಿಕ್ಕಿದ್ದಾರೆ. ಈಗಾಗಲೇ ಕೋಟಿಗಟ್ಟಲೆ ಅನುದಾನವನ್ನು ಎಂಟು ತಿಂಗಳಲ್ಲಿ ಕ್ಷೇತ್ರಕ್ಕೆ ತಂದಿದ್ದಾರೆ. ಬಡವರ ಪರ ಅಪಾರ ಕಾಳಜಿ ಇರುವ ಶಾಸಕರು ಇಂದು ಕ್ಷೇತ್ರದ ಬಡವರಿಗಾಗಿ ಸರ್ವಸ್ವವನ್ನೂ ನೀಡುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಗರೋತ್ತಾನ ಯೋಜನೆಯಡಿ ಮರೀಲ್ ಬೆದ್ರಾಳ ರಸ್ತೆಗೆ ರೂ. ೫೦ ಲಕ್ಷ ವನ್ನು ಶಾಸಕರು ಮಂಜೂರು ಮಾಡಿಸುವ ಮೂಲಕ ಇಲ್ಲಿನ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ನಗರಸಭಾ ವ್ಯಾಪ್ತಿಯ ಜನರ ಎಲ್ಲಾ ಬೇಡಿಕೆಗಳು ಖಂಡಿತವಾಗಿಯೂ ಈಡೇರಲಿದೆ. ಕುಡಿಯುವ ನೀರು, ದಾರಿ ದೀಪ, ಚರಂಡಿ ಸೇರಿದಂತೆ ಜನತೆಯ ಬಹುಕಾಲದ ಬೇಡಿಕೆಗಳು ಈಡೇರಲಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದಾಲಿ ಹೇಳಿದರು.

ಸನ್ಮಾನ

ಇದೇ ಸಂದರ್ಭದಲ್ಲಿ ಆರ್ಯಾಪು ಕೃಷಿಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಮಹಮ್ಮದಾಲಿ ಹಗೂ ನೂತನ ನಿರ್ದೆಶಕರುಗಳಾಗಿ ಆಯ್ಕೆಯಾದ ರಂಜಿತ್ ಬಂಗೇರ ಹಾಗೂ ತೆರೆಸಾ ಎಂ ಸಿಕ್ವೆರಾ ಅವರನ್ನು ಶಾಸಕರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಈಶ್ವರಭಟ್ ಪಂಜಿಗುಡ್ಡೆ, ಕಾಂಗ್ರೆಸ್ ಮುಖಂಡರುಗಳಾದ ಶಿವರಾಮ ಆಳ್ವ ಬಳ್ಳಮಜಲು, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಯಾಕೂಬ್ ಮುಲಾರ್, ರೆಝಾಕ್ ಖಾನ್, ಹೆರಾಲ್ಡ್ ಮಾಡ್ತಾ, ಇಬ್ರಾಹಿಂ ಟಿ ಎಂ, ಲಿಯೋ ಮಾರ‍್ಟಿಸ್,ದಿನೇಶ್, ಬೆನ್ನಿ ಡಿಸೋಜ, ತೆರೆಸಾ ಸಿಕ್ವೆರಾ, ಬೂತ್ ಅಧ್ಯಕ್ಷ ಜೀವನ್ ಮರ್ವಿನ್ ಡೆಲ್ಮೆದಾ, ಆರ್ಯಾಪು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ  ರಂಜಿತ್ ಬಂಗೇರ, ಮರೀಲ್ ರಿಕ್ಷಾ ಚಾಲಕರ ಸಂಘದ ಪಧಾಧಿಕಾರಿಗಳು ಹಗೂ ಸ್ಥಳೀಯರು ಉಪಸ್ಥಿತರಿದ್ದರು.



Leave a Comment: