ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಕುಂದಾಪುರ: ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

Posted by Vidyamaana on 2023-04-03 16:08:29 |

Share: | | | | |


ಕುಂದಾಪುರ: ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪುರ:ಏ 3 ರಂದು ಸಂಜೆ ಹಠಾತ್ ಬೆಳವಣಿಗೆಯೊಂದರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಬಾರಿ ಗೆದ್ದು ಅಜೇಯರಾಗುಳಿದಿರುವ ಬಿಜೆಪಿಯ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಸ್ವಇಚ್ಛೆಯಿಂದ ನಿರ್ಧರಿಸಿರುವುದಾಗಿ ಪತ್ರಿಕಾ ಹೇಳಿಕೆಯೊಂದರ ಮೂಲಕ ಘೋಷಿಸಿದ್ದಾರೆ.

ಹಾಲಾಡಿ ಅವರ ಈ ನಿರ್ಧಾರ ಅವರ ಲಕ್ಷಾಂತರ ಮಂದಿ ಅಭಿಮಾನಿ ಗಳಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ನಿನ್ನೆ ಸಂಜೆಯವರೆಗೂ ಕುಂದಾಪುರದಲ್ಲಿ ಸತತ ಆರನೇ ಬಾರಿಗೆ ಸ್ಪರ್ಧಿಸಲು ಎಲ್ಲಾ ಸಿದ್ಧತೆ ನಡೆಸಿದ್ದ ಹಾಲಾಡಿ ಅವರು  ಇಂದು ನಡೆದ ರಾಜಕೀಯ ಬೆಳವಣಿಗೆಯಲ್ಲಿ ಈ ಬಾರಿ ಸ್ಪರ್ಧಿಸದಿರುವ ತಮ್ಮ ನಿರ್ಧಾರವನ್ನು ಸಂಜೆ 7 ಗಂಟೆ ಸುಮಾರಿಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸುವ ಮೂಲಕ ಬಹಿರಂಗಪಡಿಸಿದರು

ಯಡಿಯೂರಪ್ಪ ಧರ್ಮ ದ್ವೇಷಿಯಲ್ಲ: ಕಾಂಗ್ರೆಸ್‌ ಶಾಸಕ

Posted by Vidyamaana on 2024-03-10 12:54:02 |

Share: | | | | |


ಯಡಿಯೂರಪ್ಪ ಧರ್ಮ ದ್ವೇಷಿಯಲ್ಲ: ಕಾಂಗ್ರೆಸ್‌ ಶಾಸಕ

ಚಿಕ್ಕಮಗಳೂರು: ಬಿ.ಎಸ್‌. ಯಡಿಯೂರಪ್ಪ ಬಿಜೆಪಿಯಲ್ಲಿದ್ದರೂ ಎಂದಿಗೂ ಯಾವುದೇ ಧರ್ಮವನ್ನು ದ್ವೇಷಿಸಲಿಲ್ಲ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

ಜಿಲ್ಲಾ ಉರ್ದು ಅದಬ್, ರಾಜ್ಯ ಅಂಜುಮನ್ ತಾರಕಿ ಉರ್ದು ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಉರ್ದು ಸಮ್ಮೇಳನ ಹಾಗೂ ಗಜಲ್-ಕವಾಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕಾರಿಪುರದಲ್ಲಿ ಯಡಿಯೂರಪ್ಪ ಅನಭಿಶಕ್ತ ದೊರೆ ಇದ್ದಂತೆ. ಯಾವ ವ್ಯಕ್ತಿ ತನ್ನ ಧರ್ಮದೊಂದಿಗೆ ಇತರೆ ಧರ್ಮವನ್ನು ಪ್ರೀತಿಸುತ್ತಾನೆಯೋ ಆ ವ್ಯಕ್ತಿಯನ್ನು ಎಲ್ಲರೂ ಗೌರವಿಸುತ್ತಾರೆ ಎಂದರು.

ಮಾ.10 ರಿಂದ 12 : ಕಿಲ್ಲೆ ಮೈದಾನದಲ್ಲಿ ಯಂಗ್ ಬ್ರಿಗೇಡ್ ಸೇವಾದಳದಿಂದ ರಾಜೀವ್ ಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾಟ, ರಕ್ತದಾನ ಶಿಬಿರ

Posted by Vidyamaana on 2023-03-09 16:02:43 |

Share: | | | | |


ಮಾ.10 ರಿಂದ 12 :  ಕಿಲ್ಲೆ ಮೈದಾನದಲ್ಲಿ ಯಂಗ್ ಬ್ರಿಗೇಡ್ ಸೇವಾದಳದಿಂದ  ರಾಜೀವ್ ಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾಟ, ರಕ್ತದಾನ ಶಿಬಿರ

ಪುತ್ತೂರು: ಕಾಂಗ್ರೆಸ್‌ನ ಅಂಗ ಘಟಕವಾದ ಯಂಗ್ ಬ್ರಿಗೇಡ್ ಸೇವಾದಳವು ಮಾ.10 ರಿಂದ 12 ರವರೆಗೆ ರಾಜೀವ್ ಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿದೆ. ಈ ಕ್ರೀಡಾಕೂಟದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಗೊಂದರಂತೆ 32 ತಂಡಗಳು ಭಾಗವಹಿಸಲಿವೆ. ಮಾ.10ರಂದು 3 ಗಂಟೆಗೆ ಬೂತ್ ಮಟ್ಟದ ಕಾರ್ಯಕರ್ತರ ಅಟೋ ರಿಕ್ಷಾ ಜಾಥ ನಡೆಯಲಿದೆ ಎಂದು ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಿಯಾಜ್ ತಿಳಿಸಿದ್ದಾರೆ.ಭಾಗವಹಿಸುವ ಪ್ರತಿ ತಂಡವು 6 ಯುನಿಟ್ ರಕ್ತದಾನ ಮಾಡಬೇಕೇಂಬ ಷರತ್ತು ವಿಧಿಸಲಾಗಿದೆ. ಭಾಗವಹಿಸುವ ತಂಡಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ರಕ್ತದಾನ ಶಿಬಿರ ಈಗಾಗಲೇ ಪುರಭವನದಲ್ಲಿ ಆರಂಭಗೊಂಡಿದ್ದು, ತಂಡಗಳ ದಾಖಲಾತಿಯು ನಡೆಯುತ್ತಿದೆ ಎಂದು ಅವರು ತಿಳಿಸಿದರು.ಅಟೋ ರಿಕ್ಷಾ ಜಾಥದಲ್ಲಿ ಸುಮಾರು 150 ರಿಕ್ಷಾಗಳು ಭಾಗವಹಿಸುವ ನಿರೀಕ್ಷೆಯಿದ್ದು, ಅದರ ಉದ್ಘಾಟನೆ ಧರ್ಬೆ ವೃತ್ತದಲ್ಲಿ ನಡೆಯಲಿದೆ. ಜಾಥವು ಮುಖ್ಯ ರಸ್ತೆಯ ಮೂಲಕ ಕಿಲ್ಲೆ ಮೈದಾನಕ್ಕೆ ಆಗಮಿಸಲಿದ್ದು, ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡಲಿದ್ದೇವೆ. ಮಾ 11 ರಂದು ಸಂಜೆ ಇದೇ ವೇದಿಕೆಯಲ್ಲಿ ನಡೆಯುವ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಲಕ್ಕಿ ಡ್ರಾ ನಡೆಸಿ, ಜಾಥದಲ್ಲಿ ಭಾಗವಹಿಸಿದ ರಿಕ್ಷಾ ಚಾಲಕರಿಗೆ ಬಹುಮಾನ ವಿತರಿಸಲಾಗುತ್ತದೆ. ಲಕ್ಕಿ ಡ್ರಾದಲ್ಲಿ ವಿಜೇತರಾದ ಚಾಲಕರಿಗೆ ಬಹುಮಾನವಾಗಿ ಎಲ್‌ಇಡಿ ಟಿವಿ, ಮಿಕ್ಸರ್ ಡ್ರೈಂಡರ್ ಹಾಗೂ ಕುಕ್ಕರ್ ನೀಡಲಾಗುತ್ತದೆ. ಅಲ್ಲದೇ ಭಾಗವಹಿಸಿದ ಹ ಎಲ್ಲ ರಿಕ್ಷಾ ಚಾಲಕರಿಗೆ ಗೌರವಾರ್ಪಣೆಯು ನಡೆಯಲಿದೆಮಾ 10 ರಂದು ಯುವ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಬಿ.ವಿ. ಶ್ರೀನಿವಾಸ್ ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಮಾ.12 ರಂದು ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ನಡೆಯಲಿದ್ದು, ಇದರಲ್ಲಿ ಭಾಗವಹಿಸಿದ ಸ್ತ್ರೀಶಕ್ತಿಗೆ ಲಕ್ಕಿ ಕೂಪನ್ ಮೂಲಕ ಬಹುಮಾನ ವಿತರಣೆ ನಡೆಯಲಿದೆ ಎಂದು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.ಯಂಗ್ ಬ್ರಿಗೇಡ್ ಸೇವಾದಳ ಪುತ್ತೂರು ಅಧ್ಯಕ್ಷ ರಂಜಿತ್ ಬಂಗೇರ ಮಾತನಾಡಿ ಪ್ರತಿ ತಂಡದಿಂದ 6 ಯುನಿಟ್ ನಂತೆ ಒಟ್ಟು 32 ತಂಡದಿಂದ 180 ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೂ ರಕ್ತದಾನದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದ್ದು, ಹೀಗಾಗಿ ರಕ್ತ ಸಂಗ್ರಹದ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಕ್ರಿಕೆಟ್ ಪಂದ್ಯಾಟದ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. 50 ಸಾವಿರ ನಗದು, ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 30ಸಾವಿರ ನಗದು ಟ್ರೋಫಿ ವಿತರಿಸಲಾಗುವುದು. ಕ್ರೀಡಾಪಟುಗಳು ಕಾಂಗ್ರೆಸ್ ಪಕ್ಷದ ಚಿಹ್ನೆಯ ಜರ್ಸಿ ಧರಿಸಿ ಆಡಲಿದ್ದಾರೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಸನತ್ ರೈ, ಕೋಶಾಧಿಕಾರಿ ಶರೀಫ್ ಬಲ್ನಾಡು, ಸದಸ್ಯ ಎಡ್ವರ್ಡ್ ಉಪಸ್ಥಿತರಿದ್ದರು.

ಮೇ 21: ಪುತ್ತಿಲ ಅಭಿಮಾನಿಗಳಿಂದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ

Posted by Vidyamaana on 2023-05-16 03:26:05 |

Share: | | | | |


ಮೇ 21: ಪುತ್ತಿಲ ಅಭಿಮಾನಿಗಳಿಂದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ

ಪುತ್ತೂರು: ಪುತ್ತಿಲ ಅಭಿಮಾನಿಗಳಿಂದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಎನ್ನುವ ಹೆಸರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಮೇ 21ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ದರ್ಬೆ ವೃತ್ತದಿಂದ‌ ಹೊರಡುವ ಜಾಥಾ ಮುಖ್ಯರಸ್ತೆಯಾಗಿ ಸಂಚರಿಸಿ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಮಾಪನಗೊಳ್ಳಲಿದೆ.

ಕಾಲ್ನಡಿಗೆ ಜಾಥಾದ ಬಳಿಕ ದೇವಸ್ಥಾನದ ವಠಾರದಲ್ಲಿ ಬೃಹತ್ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚುನಾವಣೆ ಬಳಿಕ ಪುತ್ತಿಲ ಅಭಿಮಾನಿಗಳು ಎಂಪಿ ಫಾರ್ ಪುತ್ತಿಲ ಅಭಿಯಾನ‌ ಕೈಗೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿಗೆ ಪುತ್ತಿಲ ಘೋಷ ವಾಕ್ಯ ಹತ್ತೂರಿಗೆ ಪುತ್ತಿಲ ಎಂಬುದಾಗಿ ಪರಿವರ್ತನೆಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮೇ 21ರಂದು ನಡೆಯುವ ಕಾಲ್ನಡಿಗೆ ಜಾಥಾ ಹಾಗೂ ಬೃಹತ್ ಕಾರ್ಯಕರ್ತರ ಸಭೆ ಮಹತ್ವ ಪಡೆದುಕೊಂಡಿದೆ.

ವಿಧಾನಸಭಾ ಚುನಾವಣೆಯಲ್ಲಿ ವೀರೋಚಿತ ಸೋಲು ಅನುಭವಿಸಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣೆಯ ಬಳಿಕ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಿಕೊಂಡಿದ್ದಾರೆ. ಸರ್ವಧರ್ಮೀಯರು ಪುತ್ತಿಲ ಅಭಿಮಾನಿಗಳಾಗಿರುವುದು ಕಾಂಗ್ರೆಸ್ ವಿಜಯೋತ್ಸವದ ವೇಳೆಯೇ ಗಮನಕ್ಕೆ ಬಂದಿತ್ತು.

ವಕೀಲರ ಸಂಘ ನನ್ನ ಮನೆ ನನ್ನ ಮನೆಯವರು ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ತೇನೆ

Posted by Vidyamaana on 2024-04-02 21:52:50 |

Share: | | | | |


ವಕೀಲರ ಸಂಘ ನನ್ನ ಮನೆ ನನ್ನ ಮನೆಯವರು ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ತೇನೆ

ಮಂಗಳೂರು: ವಕೀಲರ ಸಂಘ ನನ್ನ ಮನೆ. ನನ್ನ ಮನೆಯವರು ನನ್ನ ಮೇಲಿಟ್ಟಿರುವ ನಿರೀಕ್ಷೆಗಳು, ವಿಶ್ವಾಸದ ಬಗ್ಗೆ ನನಗೆ ಅರಿವಿದೆ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.


ಮಂಗಳವಾರ ಮಂಗಳೂರು ಬಾರ್ ಅಸೋಸಿಯೇಷನ್ ಗೆ ಭೇಟಿ ನೀಡಿದ ಅವರು, ವಕೀಲರ ಜೊತೆ ಸಂವಾದ ನಡೆಸಿದರು.


ಸುಮಾರು 29 ವರ್ಷಗಳಿಂದ ಸಾಮಾಜಿಕ ಕೆಲಸಗಳಲ್ಲಿ ಸಕ್ರೀಯನಾಗಿದ್ದೇನೆ. ಆದ್ದರಿಂದ ಜಿಲ್ಲೆಯ ಬೇಡಿಕೆಗಳು, ಇಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ನನಗೆ ಅರಿವಿದೆ

ಕಾರ್ಕಳ - ಖಾಸಗಿ ಬಸ್ ಜೀಪ್ ನಡುವೆ ಭೀಕರ ರಸ್ತೆ ಅಪಘಾತ - ಹಲವರಿಗೆ ಗಂಭೀರ ಗಾಯ

Posted by Vidyamaana on 2023-12-11 07:46:36 |

Share: | | | | |


ಕಾರ್ಕಳ - ಖಾಸಗಿ ಬಸ್ ಜೀಪ್ ನಡುವೆ ಭೀಕರ ರಸ್ತೆ ಅಪಘಾತ - ಹಲವರಿಗೆ ಗಂಭೀರ ಗಾಯ

ಕಾರ್ಕಳ  : ಖಾಸಗಿ ಬಸ್ ಹಾಗೂ ಜೀಪ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಮಂಜಲ್ಪಾಕೆ ಎಂಬಲ್ಲಿ ನಡೆದಿದೆ. ಮೂಡುಬಿದಿರೆಯಿಂದ ಕಾರ್ಕಳವಾಗಿ ಪಡುಬಿದ್ರಿ ಮಾರ್ಗವಾಗಿ ಮುಂಬಯಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮಹೇಂದ್ರ ಜೀಪು ಡಿಕ್ಕಿ ಹೊಡೆದಿದೆ.ಓವರ್ ಟೇಕ್ ಮಾಡುವ ಸಂದರ್ಭ ಘಟನೆ ಸಂಭವಿಸಿದ್ದು, ಜೀಪಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡಿದ್ದ ಓರ್ವ ಗಾಯಾಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಜೀಪಿನಲ್ಲಿದ್ದವರು ಸ್ಥಳಿಯ ದೈವದ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಸ್ಸಾಗುತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು 108 ಆಂಬುಲೆನ್ಸ್‌ ನಲ್ಲಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ‌ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.



Leave a Comment: