ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ಅಡಿಕೆ ಕೃಷಿಗೆ ತೊಂದರೆಯಾದರೆ ದ.ಕ., ಉಡುಪಿ ಜನತೆಯ ಬದುಕೇ ಸಂಕಷ್ಟಕ್ಕೆ ಒಳಗಾಗುತ್ತದೆ - ಶಾಸಕ ಅಶೋಕ್ ರೈ

Posted by Vidyamaana on 2024-07-10 23:02:37 |

Share: | | | | |


ಅಡಿಕೆ ಕೃಷಿಗೆ ತೊಂದರೆಯಾದರೆ ದ.ಕ., ಉಡುಪಿ ಜನತೆಯ ಬದುಕೇ ಸಂಕಷ್ಟಕ್ಕೆ ಒಳಗಾಗುತ್ತದೆ - ಶಾಸಕ ಅಶೋಕ್ ರೈ

ಪುತ್ತೂರು : ಜಿಲ್ಲೆಯ ರೈತ ಕುಟುಂಬಗಳ ಬದುಕಿನ ಬೆಳೆಯಾದ ಅಡಿಕೆ ಕೃಷಿಗೆ ತೊಂದರೆಯಾದರೆ ದಕ ಉಡುಪಿ ಜನತೆಯ ಬದುಕೇ ಸಂಕಷ್ಟಕ್ಕೆ ಒಳಗಾಗುತ್ತದೆ. ಹಾಗಾಗಿ ಅಡಿಕೆ ಬೆಳೆಯನ್ನು ಕಾಡುವ ರೋಗಗಳು ಮತ್ತು ಅಡಿಕೆಗೆ ಪರ್ಯಾಯ ಉಪಯೋಗದ ಕುರಿತು ಸಮರ್ಪಕವಾದ ಸಂಶೋಧನೆ ನಡೆಯಬೇಕಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.

ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆವರಣದಲ್ಲಿಮಂಗಳೂರು ಕೃಷಿಕರ ಸಹಕಾರಿ ಸಂಘದ ವತಿಯಿಂದ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಹಯೋಗ ಮತ್ತು ಸಹಕಾರ ರತ್ನ ಡಾ.ಎಂ.ಎನ್.ರಾಜೇAದ್ರಕುಮಾರ್ ಅವರ ಸಹಕಾರದೊಂದಿಗೆ ಆರಂಭಿಸಲಾದ ಅಡಿಕೆ ಖರೀದಿ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಯಾಂಪ್ಕೋ, ಮಾಸ್ ಸಹಕಾರಿ ಸಂಘಗಳ ಜತೆಗೆ ಕೃಷಿಪತ್ತಿನ ಸಹಕಾರಿ ಸಂಘಗಳು ಕೂಡ ಅಡಿಕೆ ಖರೀದಿ ಮಾಡುವಲ್ಲಿ ಪೈಪೋಟಿ ನೀಡುವಂತಾದರೆ ರೈತರಿಗೆ ನ್ಯಾಯಯುತ ಬೆಲೆ ಸಿಗುವ ಜತೆಗೆ ಲಾಭದಾಯಕವಾಗಬಹುದು. ಅಡಿಕೆ ಬೆಳೆಗಾರರು ರೋಗ ಭಾಧೆಯ ಜತೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಡಿಕೆ ಕೃಷಿಗೆ ಔಷಧಿ ಸಿಂಪರಣೆ ಮಾಡುವವರು ಕೂಡ ಈಗ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಅಡಿಕೆ ಕೃಷಿಗೆ ಪೂರಕವಾಗುವ ಕೆಲಸ ಕಾರ್ಯಗಳ ಬಗ್ಗೆ ಯುವಜನತೆಗೆ ತರಬೇತಿ ನೀಡುವ ಕೆಲಸವನ್ನು ಸಹಕಾರಿ ಸಂಘಗಳು ಮಾಡಬೇಕು ಎಂದು ಅವರು ಹೇಳಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು ಅವರು ಮಾತನಾಡಿ, ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗಬೇಕಾದರೆ ಮಾರುಕಟ್ಟೆ ಪೈಪೋಟಿ ಇರಬೇಕು ಎಂದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳೆಜ್ಜ ಅವರು ಮಾತನಾಡಿ, ಹಳೆದಿರೋಗ, ನುಸಿ ರೋಗ ಇತ್ಯಾದಿ ರೋಗಳಿಂದಾಗಿ ಈ ಭಾಗದ, ಅದರಲ್ಲೂ ಮುಖ್ಯವಾಗಿ ಸುಳ್ಯ ಕಡೆಯ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ.ಕೇAದ್ರ ಮತ್ತು ರಾಜ್ಯ ಸರ್ಕಾರ ಅಡಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರ ಬದುಕು ಕಷ್ಟಕರವಾಗಲಿದ್ದು, ಅಡಿಕೆ ಧಾರಣೆಯಲ್ಲಿ ಸ್ಥಿರತೆ ಕಾಪಾಡುವ ಕೆಲಸವೂ ಆಗಬೇಕಿದೆ ಎಂದರು.

 ಕಾವು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಅವರು ಅಧ್ಯಕ್ಷತೆ ವಹಿಸಿದ್ದರು.ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಮಾಸ್ ಸಂಸ್ಥೆಯ ನಿರ್ದೇಶಕ ಎಂ.ಬಿ.ನಿತ್ಯಾನAದ ಮುಂಡೋಡಿ ಅವರು ಮಾತನಾಡಿದರು, ಕೃಷಿಕರಾದ ಭಾಸ್ಕರ ರೈ ಕಂಟ್ರಮಜಲು, ಶರತ್‌ಕುಮಾರ್ ರೈ, ಸೀತಾರಾಮ ಭಟ್ ಬರಕ್ಕೆರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್, ನಿದೇಶಕರಾದ ಬೆಳ್ಳೆ ಶಿವಾಜಿ ಎಸ್.ಸುವರ್ಣ,ಸುಧಾ ಎಸ್.ರೈ ಪುಣ್ಚಪ್ಪಾಡಿ, ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಪುಷ್ಪರಾಜ ಅಡ್ಯಂತಾಯ ಮಂಚಿ ಮತ್ತಿತರರು ಉಪಸ್ಥಿತರಿದ್ದರು.

ಮಾಸ್ ಸಂಸ್ಥೆಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಕಡೆಗಳಲ್ಲಿ ಮಾಸ್ ಸಂಸ್ಥೆಯ ವತಿಯಿಂದ ಅಡಿಕೆ ಕೇಂದ್ರ ತೆರೆಯಲಾಗುವುದು. ಸರ್ಕಾರದಿಂದ ರೂ.೫ ಕೋಟಿ ಪಾಲುಬಂಡವಾಳಕ್ಕೆ ಮನವಿ ಸಲ್ಲಿಸಿದ್ದೇವೆ. ಈ ವರ್ಷ ಮಾಸ್ ಸಂಸ್ಥೆ ೫೦೦ ಕೋಟಿ ವ್ಯವಹಾರ ಮಾಡುವ ಗುರಿ ಹೊಂದಿದೆ ಎಂದರು. ಕಾವು ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ವಂದಿಸಿದರು. ಸವಣೂರು ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಕಾವು ಸಿಎ ಬ್ಯಾಂಕ್ ಸಿಬ್ಬಂದಿ ಸುನಿಲ್ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಮಾಸ್ ಅಧ್ಯಕ್ಷರಾಗಿ ೨ ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ ಕೆ.ಸೀತಾರಾಮ ರೈ ಸವಣೂರು ಹಾಗೂ ಶಾಸಕ ಅಶೋಕ್ ರೈ ಅವರನ್ನು ಗೌರವಿಸಲಾಯಿತು.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು ಅವರು ಮಾತನಾಡಿ, ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗಬೇಕಾದರೆ ಮಾರುಕಟ್ಟೆ ಪೈಪೋಟಿ ಇರಬೇಕು ಎಂದರು.


ಪಂಜಿಮೊಗರು ಜೋಡಿ ಕೊಲೆಯಾಗಿದ್ದ ಮನೆ ಮಾಲೀಕನಿಗೆ ಇರಿತ, ಆರೋಪಿ ಜಾವೇದ್ ಪರಾರಿ

Posted by Vidyamaana on 2024-04-07 10:42:15 |

Share: | | | | |


ಪಂಜಿಮೊಗರು ಜೋಡಿ ಕೊಲೆಯಾಗಿದ್ದ ಮನೆ ಮಾಲೀಕನಿಗೆ ಇರಿತ, ಆರೋಪಿ ಜಾವೇದ್ ಪರಾರಿ

ಉಳ್ಳಾಲ, ಎ.7: ಗುಜರಿ ವ್ಯಾಪಾರಿಯೋರ್ವನನ್ನ ತನ್ನ ಬಾಡಿಗೆ ಮನೆಗೆ ಕರೆಸಿ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಹಾತ್ಮ ಗಾಂಧಿ ರಂಗಮಂದಿರ ಬಳಿ ಶನಿವಾರ ಸಂಜೆ ನಡೆದಿದೆ.


ಮಂಗಳೂರಿನ‌ ಕಾವೂರು ಪಂಜಿಮೊಗರು ನಿವಾಸಿ ಹಮೀದ್ ಇರಿತಕ್ಕೊಳಗಾದ ಗುಜರಿ ವ್ಯಾಪಾರಿ. ಮೂಲತಃ ತಣ್ಣೀರುಬಾವಿ ನಿವಾಸಿ ಸದ್ರಿ ಉಳ್ಳಾಲದ ಮಹಾತ್ಮಗಾಂಧಿ ರಂಗಮಂದಿರದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿರುವ ಮೊಹಮ್ಮದ್ ಜಾವೇದ್ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ.

ಜಾವೇದ್ ಇಂದು ಸಂಜೆ ಹಮೀದ್ ನನ್ನು ಹಣಕಾಸಿನ ವಿಚಾರದಲ್ಲಿ ಮಾತುಕತೆ ನಡೆಸಲು ಉಳ್ಳಾಲದ ತನ್ನ ಬಾಡಿಗೆ ಮನೆಗೆ ಕರೆಸಿಕೊಂಡಿದ್ದ. ಈ ವೇಳೆ ಹಮೀದ್ ಎದೆಯ ಭಾಗಕ್ಕೆ ಜಾವೇದ್ ಚೂರಿಯಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಹಮೀದ್ ಹೇಗೋ ತಪ್ಪಿಸಿಕೊಂಡು ಉಳ್ಳಾಲದ ಖಾಸಗಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಹಮೀದ್ ಬಾಡಿಗೆ ಮನೆಯಿಂದ ತಪ್ಪಿಸಿ ಓಡಿದ ರಭಸಕ್ಕೆ ರಸ್ತೆಯಲ್ಲೆಲ್ಲಾ ರಕ್ತ ಹರಿದಿದೆ. ಗಂಭೀರ ಗಾಯಗೊಂಡಿದ್ದ ಹಮೀದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲ್ಯಾಡಿ: ಕೆಟ್ಟುನಿಂತಿದ್ದ ಲಾರಿ ಗೆ ಬೈಕ್ ಢಿಕ್ಕಿ

Posted by Vidyamaana on 2023-07-26 01:56:16 |

Share: | | | | |


ನೆಲ್ಯಾಡಿ: ಕೆಟ್ಟುನಿಂತಿದ್ದ ಲಾರಿ ಗೆ ಬೈಕ್ ಢಿಕ್ಕಿ

ನೆಲ್ಯಾಡಿ, ಜು. 25. ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದಿ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಣ್ಣಂಪಾಡಿ ಎಂಬಲ್ಲಿ ನಡೆದಿದೆ.ಮೃತ ಬೈಕ್ ಸವಾರನನ್ನು ನೆಲ್ಯಾಡಿ ಮೊರಂಕಳ ನಿವಾಸಿ ಇಕ್ಬಾಲ್ಎಂದು ಗುರುತಿಸಲಾಗಿದೆ. ಮೃತ ಇಕ್ಬಾಲ್ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸಣ್ಣಂಪಾಡಿ ಸಮೀಪ ಕೆಟ್ಟು ನಿಂತಿದ್ದ ಪಾರ್ಸೆಲ್ ಸಾಗಾಟದ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಫೆ. 12 ರಿಂದ 23 ವರೆಗೆ ಬಜೆಟ್ ಅಧಿವೇಶನ: ನೂತನ ಶಾಸಕರಿಗೆ ಬಜೆಟ್ ಬಗ್ಗೆ ತರಬೇತಿ: UT ಖಾದರ್

Posted by Vidyamaana on 2024-02-07 14:30:51 |

Share: | | | | |


ಫೆ. 12 ರಿಂದ 23 ವರೆಗೆ ಬಜೆಟ್ ಅಧಿವೇಶನ: ನೂತನ ಶಾಸಕರಿಗೆ ಬಜೆಟ್ ಬಗ್ಗೆ ತರಬೇತಿ: UT ಖಾದರ್

ರಾಯಚೂರು : ಫೆ. 12 ರಿಂದ 23 ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ 12ನೇ ತಾರೀಕು ಜಂಟಿ ಸದನ ಸದನ ಉದ್ದೇಶ ಸಿ ರಾಜ್ಯಪಾಲರು ಮಾತನಾಡಲಿದ್ದಾರೆ ಹಾಗೆ 14ನೇ ತಾರೀಕು ಮುಖ್ಯಮಂತ್ರಿಗಳು ಸರ್ಕಾರದ ಪರವಾಗಿ ಬಜೆಟನ್ನು ಮಂಡಿಸುತ್ತಾರೆ ಎಂದು ರಾಯಚೂರಿನಲ್ಲಿ ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.ನಗರದಲ್ಲಿ ಮಾಧ್ಯಮ ಉದ್ದೇಶಿಸಿ ಮಾತನಾಡಿದ ಅವರು, ನೂತನ ಶಾಸಕರಿಗೆ 9ನೇ ತಾರೀಕಿನಿಂದ ಬಜೆಟ್ ಬಗ್ಗೆ ತರಬೇತಿ ನೀಡಲಾಗಿದ್ದು ಇನ್ನೊಂದು ಕಡೆ ಪತ್ರಕರ್ತರಿಗೂ ವರ್ಕ್ ಶಾಪ್ ನಡೆಯಲಿದೆ ಬಹಳಷ್ಟು ಜನ ಭಾಗವಹಿಸುತ್ತಾರೆ ಎಂಬುವ ನಿರೀಕ್ಷೆ ಇದೆ


ಅಧಿವೇಶನ ಸಂದರ್ಭದಲ್ಲಿ ಕೂಡ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಾರೆ ಬೆಳಗ್ಗೆನಿಂದ ಮಧ್ಯಾಹ್ನವರೆಗೂ ಬಿಸಿಲಲ್ಲಿ ಕ್ಯೂನಲ್ಲಿ ನಿಂತಿರುತ್ತಾರೆ ಅಧಿವೇಶನ ಪ್ರಾರಂಭ ಆಗದ ಮುಂಚೆಯೇ ಬರುವ ವಿದ್ಯಾರ್ಥಿಗಳಿಗೆ ವಿಧಾನಸೌಧದಲ್ಲಿ ಪ್ರವೇಶ ಇಲ್ಲ ಹಾಗೆ ಅಧಿವೇಶನ ಅಷ್ಟೇ ಅಲ್ಲ ಇಸ್ರೋ, ಕಿದ್ವಾಯ್,ನಿಮಾನ್ಸ್ ಸಂಸ್ಥೆಗಳನ್ನು ನೋಡಬೇಕಾದರೆ ಅನುಮತಿ ಕೂಡ ಸರ್ಕಾರವೇ ಕೊಡುತ್ತದೆ.

ಮರದಿಂದ ಬಿದ್ದು ನೈತಾಡಿ ನಿವಾಸಿ ಖಲಂದ‌ರ್ ಮೃತ್ಯು

Posted by Vidyamaana on 2024-06-05 19:03:54 |

Share: | | | | |


ಮರದಿಂದ ಬಿದ್ದು ನೈತಾಡಿ ನಿವಾಸಿ ಖಲಂದ‌ರ್ ಮೃತ್ಯು

ಪುತ್ತೂರು: ಮೂಲತಃ ನೈತಾಡಿಯವರಾಗಿದ್ದು, ಪ್ರಸ್ತುತ ಕೆಮ್ಮಿಂಜೆಯಲ್ಲಿ ವಾಸವಿರುವ ಖಲಂದ‌ರ್ ಎಂಬವರು ಮರದಿಂದ ಬಿದ್ದು ಜೂನ್ 05 ರಂದು ನಿಧಾನರಾದರು

ಎನ್ ಐಎ ದಾಳಿ ಪ್ರಕರಣ:ಪುತ್ತೂರಿನಲ್ಲಿ ನಾಲ್ವರನ್ನು ವಶಕ್ಕೆ ಪಡದ ಎನ್ ಐಎ ಅಧಿಕಾರಿಗಳು

Posted by Vidyamaana on 2023-05-31 10:23:28 |

Share: | | | | |


ಎನ್ ಐಎ ದಾಳಿ ಪ್ರಕರಣ:ಪುತ್ತೂರಿನಲ್ಲಿ ನಾಲ್ವರನ್ನು ವಶಕ್ಕೆ ಪಡದ ಎನ್ ಐಎ ಅಧಿಕಾರಿಗಳು

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಎನ್ ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಪುತ್ತೂರಿನಲ್ಲಿ ನಾಲ್ವರನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮಹಮ್ಮದ್ ಹ್ಯಾರೀಸ್ ಕುಂಬ್ರ (32), ಸಜ್ಜದ್ ಹುಸೈನ್ ಕೋಡಿಂಬಾಡಿ (37), ಫೈಜಲ್ ಅಹಮ್ಮದ್ ತಾರಿಗುಡ್ಡೆ, ಸಂಶುದ್ದೀನ್ ಕೂರ್ನಡ್ಕ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು, ಇವರಿಗೆ ಪಿಎಫ್‌ಐ ಲಿಂಕ್ ಸಾಧ್ಯತೆ ಇದೆ ಎನ್ನಲಾಗಿದೆ.

Recent News


Leave a Comment: