ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಕೆಡ್ಡಸ : ಭೂಮಿತಾಯಿ ರಜಸ್ವಲೆಯಾಗುವ ಹಬ್ಬ

Posted by Vidyamaana on 2023-02-03 02:43:14 |

Share: | | | | |


ಕೆಡ್ಡಸ : ಭೂಮಿತಾಯಿ ರಜಸ್ವಲೆಯಾಗುವ ಹಬ್ಬ

             ತುಳುವರು ಮೂಲತಃ ಕೃಷಿಕರು. ಅವರ ಎಲ್ಲಾ ಹಬ್ಬಗಳು ಕೃಷಿಆಧಾರಿತ ಹಿನ್ನೆಲೆಯಲ್ಲಿ ಆಚರಿಸಲ್ಪತ್ತದೆ. ಕೆಡ್ಡಸ ಹಬ್ಬವುತುಳುವರ ಪೊನ್ನಿ ಅಥವಾ ಪುಯಿಂತೆಲ್ (ಫೆಬ್ರವರಿ) ತಿಂಗಳಿನ27 ರಿಂದ ಕುಂಭ ಸಂಕ್ರಮಣದವರೆಗೆ ಆಚರಣೆ ಇರುತ್ತದೆ.ಸಾಮಾನ್ಯವಾಗಿ ಮೂರುದಿನ ಕೆಡ್ಡಸ ಆಚರಿಸಲ್ಪಡುತ್ತದೆ. ಇದುಶುರುಕೆಡ್ಡಸ, ನಡುಕೆಡ್ಡಸ ಮತ್ತು ಕಡೆಕೆಡ್ಡಸ ವೆಂದುಆಚರಣೆಗೊಳ್ಳುತ್ತದೆ. (ಇಂದು ಕಡೆಕೆಡ್ಡಸ)

ಏನಿದು ಕೆಡ್ಡಸ ?

        ನಮ್ಮ ಪೂರ್ವಿಕರು ಭೂಮಿಯನ್ನು ಹೆಣ್ಣೆಂದು ಪರಿಗಣಿಸಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಹೆಣ್ಣಾದ ಭೂಮಿತಾಯಿಯು ವರ್ಷಕ್ಕೆ ಮೂರುದಿನ ರಜಸ್ವಲೆಯಾಗುತ್ತಾಳೆ (ಋತುಮತಿ) ಎಂದು ನಂಬಿಕೆ. ಈ ಹಿನ್ನೆಲೆಯಲ್ಲಿ ಕೆಡ್ಡಸವನ್ನು ಭೂಮಿತಾಯಿ ಮೀಯುವ ಹಬ್ಬವೆಂದು ಕರೆಯುತ್ತಾರೆ. ಋತುಮತಿ ಅಥವಾ ಪುಷ್ಪವತಿಯಾದ ಹೆಣ್ಣು ಹೆಂಗಸಾದಳು ಎಂದು ಅರ್ಥ. ಈ ಮೂಲಕ ಭೂಮಿದೇವಿಯು ಫಲವತಿಯಾಗುವ ಅರ್ಹತೆಯನ್ನು ಪಡೆಯುತ್ತಾಳೆ. ಆದ್ದರಿಂದ ಕೆಡ್ಡಸ ಹಬ್ಬವು ಫಲವಂತಿಕೆಯ ಸಂಕೇತವಾಗಿ ಆಚರಣೆಗೆ ಒಳಪಡುವ ತುಳುವರ ಪ್ರಮುಖ ಹಬ್ಬವಾಗಿದೆ.ಕೆಡ್ಡಸದ ಸಮಯದಲ್ಲಿ ಮೂಡಣ ದಿಕ್ಕಿನಿಂದ ಒಂದು ವಿಲಕ್ಷಣವಾದ ಗಾಳಿ ಬೀಸುತ್ತದೆ ಇದನ್ನು ಕೆಡ್ಡಸದ ಗಾಳಿ ಎಂದು ಕರೆಯುತ್ತಾರೆ. ಈ ಸಂದರ್ಭ ಋತುಸ್ನಾನ ಮುಗಿಸಿ ಹೆಣ್ಣು ಹೋಗಿ ಹೆಂಗಸಾಗಿರುವ ಭೂಮಿದೇವಿಯು ಈ ಗಾಳಿಯಿಂದ ಪುಳಕಗೊಂಡು ಫಲವತಿಯಾಗಲು ಸಜ್ಜಾಗುತ್ತಾಳೆಂದು ನಂಬಿಕೆ.

      ಕೆಡ್ಡಸದ ಮೂರುದಿನ ಭೂಮಿದೇವಿ ರಜಸ್ವಲೆಯಾದ ಕಾರಣ ಆಕೆ ಸೂಕ್ಷ್ಮವಾಗಿರುತ್ತಾಳೆ. ಆದ್ದರಿಂದ ಈ ದಿನಗಳಲ್ಲಿ ನೆಲ ಅಗೆಯುವುದು, ಉಳುವುದು, ಮರ ಕಡಿಯುವುದು ನಿಷಿದ್ಧ. ಈ ಸಂದರ್ಭ ಕೃಷಿಕಾರ್ಯದಲ್ಲಿ ತೊಡಗಿದರೆ ಭೂಮಿದೇವಿಯು ನೋವನ್ನನುಭವಿಸಿ ಬಂಜೆಯಾಗುತ್ತಾಳೆ ಎಂದು ನಂಬಿರುವ ತುಳುವರು ಕೃಷಿಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸುತ್ತಾರೆ.

ಶುರುಕೆಡ್ಡಸ :

        ಕೆಡ್ಡಸದಂದು ಸ್ತ್ರೀಯರು ಅಂಗಳದ ಮೂಲೆಯಲ್ಲಿ ನೆಲವನ್ನು ಸಾರಿಸಿ, ಗೋಮಯದಿಂದ ಶುದ್ದೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸುತ್ತಾರೆ. ಅದರಲ್ಲಿ ಬಿಳಿಯ ಮಡಿಬಟ್ಟೆ, ಗೆಜ್ಜಕತ್ತಿ, ತೆಂಗಿನ ಸೋಗೆಯ ಹಸಿಕಡ್ಡಿ ಇಟ್ಟು ಭೂಮಿದೇವಿಯ ಸಾನಿಧ್ಯ ರಚಿಸಿ ಪೂಜಿಸುತ್ತಾರೆ.

       ಕೆಡ್ಡಸದ ಪ್ರಾರಂಭದ ದಿನ ಬೆಳಗ್ಗೆ ನವಧಾನ್ಯಗಳನ್ನು (ಇದರಲ್ಲಿ ಹುರುಳಿ ಪ್ರಮುಖವಾದುದು) ಹುರಿದು ಪುಡಿಮಾಡಿ ಬೆಲ್ಲ, ಅರಳು, ತೆಂಗಿನ ಚೂರುಗಳನ್ನು ಬೆರಸಿ ಭೂಮಿದೇವಿಯ ಸಾನಿಧ್ಯದೆದರು ತುದಿಬಾಳೆಯಲ್ಲಿ ಬಡಿಸಿ ನಮಿಸುತ್ತಾರೆ. ಇವು ಬಯಕೆಯ ಸಂಕೇತ. ನಂತರ ಇದನ್ನು ಮನೆಮಂದಿ ಹಂಚಿ ತಿನ್ನುತ್ತಾರೆ. ಇದನ್ನು ಕುಡುಅರಿ ಅಥವಾ ನನ್ನೆರಿ ಎಂದು ಕರೆಯುತ್ತಾರೆ.

ನಡುಕೆಡ್ಡಸ :

         ಅಂದು ಮೀನು-ಮಾಂಸ ತಿನ್ನುವ ಜಾತಿಯ ಗಂಡಸರು ಬೇಟೆಯಾಡಿ ಲಭಿಸಿದ ಮಾಂಸದ ಅಡುಗೆಯನ್ನು ಮನೆಮಂದಿಯೆಲ್ಲಾ ಸಂಭ್ರಮದಿಂದ ಸವಿಯುತ್ತಾರೆ. ಈ ದಿನ ಪುಂಡದ ಹಕ್ಕಿಯ ಬೇಟೆ ವಿಶೇಷ. ಕೆಡ್ಡಸದ ಸಮಯದಲ್ಲಿ ಪುಂಡದ ಹಕ್ಕಿಗೆ ಜ್ವರ ಬರುತ್ತದೆ ಎಂಬ ಪ್ರತೀತಿಯಿದೆ. ಜ್ವರದಿಂದ ಬಳಲುವ ಈ ಹಕ್ಕಿ ಕೆರೆಯ ಬದಿಯಲ್ಲಿ ಪೊದೆಗಳ ಬದಿಯಲ್ಲಿ ಸುಲಭವಾಗಿ ಸಿಗುತ್ತದೆಯಂತೆ

ಕಡೆ ಕೇಡ್ಡಸ 

        ಮೂರನೆಯ ದಿನ ಮುಂಜಾನೆ ಮುತ್ತೈದೆಯರು ಸ್ನಾನ ಮಾಡಿ ಏಳು ಲೋಳೆಸರದ ಎಲೆಗಳನ್ನು ಪಶ್ಚಿಮಕ್ಕೆ ತುದಿ ಬರುವಂತೆ ಸಾಲಾಗಿ ಇರಿಸಿ ದೀಪ, ಊದುಬತ್ತಿ ಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಸಿನ ಕುಂಕುಮ, ಪಚ್ಚೆಹೆಸರು ಪುಡಿ, ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿದೇವಿಯ ಸ್ನಾನಕ್ಕೋಸ್ಕರ ಇಡುತ್ತಾರೆ. ನಂತರ ಭೂಮಿದೇವಿಯ ಅಲಂಕಾರಕ್ಕಾಗಿ ಕನ್ನಡಿ, ಬಾಚಣಿಗೆ, ಕರಿಮಣಿಗಳನ್ನು ಇರಿಸುತ್ತಾರೆ. ಈ ಪ್ರಕಾರ ರಜಸ್ವಲೆಯಾದ ಭೂಮಿದೇವಿಯು ಮಿಂದು ಶುದ್ಧಳಾಗಿ ಫಲವತಿಯಾಗುತ್ತಾಳೆ ಎಂದು ತುಳುವರ ನಂಬಿಕೆ.

      ಪ್ರಕೃತಿ ಮಾತೆಯಾದ ಭೂಮಿದೇವಿಯನ್ನು ಪೂಜಿಸುವ ಈ ಹಬ್ಬವು ಇಂದು ಸಂಪೂರ್ಣ ನಗಣ್ಯಕ್ಕೊಳಗಾಗಿದ್ದು ಅತ್ಯಂತ ಖೇದಕರ ಸಂಗತಿ. ಇನ್ನಾದರೂ ನಮ್ಮ ಪೂರ್ವಿಕರು ಹಬ್ಬ-ಹರಿದಿನಗಳಿಗೆ ನೀಡಿದ ಮಹತ್ವ, ಹಿನ್ನೆಲೆಯನ್ನು ಅರಿತು ಅವುಗಳನ್ನು ಸಾಧ್ಯವಾಗುವ ಮಟ್ಟಿಗೆ ಆಚರಿಸಲು ಪ್ರಯತ್ನ ಪಡೋಣ. © ವಿಶ್ವನಾಥ ಪಂಜಿಮೊಗರು @

ತಮ್ಮ ಮನೆ ಗೇಟಿಂದ್ಲೇ ನಮ್ಮನ್ನು ವಾಪಾಸು ಕಳ್ಸಿದ್ರು-ಬಿಜೆಪಿ ಸಂಘಟನೆಯ ಶಕ್ತಿ ಇರುವ ಪಕ್ಷ,ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ-ರಘುಪತಿ ಭಟ್ ವಿರುದ್ಧ ಡಾ. ಧನಂಜಯ್ ಸರ್ಜಿ ನೇರ ಆರೋಪ

Posted by Vidyamaana on 2024-05-26 14:17:21 |

Share: | | | | |


ತಮ್ಮ ಮನೆ ಗೇಟಿಂದ್ಲೇ ನಮ್ಮನ್ನು ವಾಪಾಸು ಕಳ್ಸಿದ್ರು-ಬಿಜೆಪಿ ಸಂಘಟನೆಯ ಶಕ್ತಿ ಇರುವ ಪಕ್ಷ,ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ-ರಘುಪತಿ ಭಟ್ ವಿರುದ್ಧ ಡಾ. ಧನಂಜಯ್ ಸರ್ಜಿ ನೇರ ಆರೋಪ

ಉಡುಪಿ : ವಿಧಾನಪರಿಷತ್ ನ ಬಿಜೆಪಿ ಅಭ್ಯರ್ಥಿ ಹಾಗೂ ಬಂಡಾಯವಾಗಿ ನಿಂತಿರುವ ಮಾಜಿ ಶಾಸಕ ರಘುಪತಿ ಭಟ್ ನಡುವಿನ ವಾಗ್ದಾಳಿ ತೀವ್ರವಾಗಿದ್ದು, ರಘುಪತಿ ಭಟ್ ನಮ್ಮನ್ನು ಅವರ ಮನೆಯ ಗೇಟಲ್ಲಿ ನಿಲ್ಲಿಸಿ ವಾಪಾಸ್ಸು ಕಳುಹಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ನಾನು ರಘುಪತಿ ಭಟ್ ಗೆ ಮಿಸ್ ಕಾಲ್ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಮಿಸ್ ಕಾಲ್ ಕೊಟ್ಟಿರೋದು ಎಲ್ಲಿ ಅನ್ನೋದು ಇಂಪಾರ್ಟೆಂಟ್. ವಿಧಾನಪರಿಷತ್ ಸದಸ್ಯ ಅರುಣ್ ಜೊತೆ ರಘುಪತಿ ಭಟ್ ಅವರ ಹೊಸ ಮನೆಗೆ ಹೋಗಿದ್ದೆ. ಸೆಕ್ಯೂರಿಟಿ ಗಾರ್ಡ್ ಬಳಿ ಎಂಎಲ್ಸಿ ಅರುಣ್ ಬಂದಿದ್ದಾರೆ ಎಂದು ಹೇಳಿ ಕಳುಹಿಸಿದೆ. ಆದರೆ ಅವರು ಮನೆಯಲ್ಲಿ ಇಲ್ಲ ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದ. ಅವರಿಗೆ ಮಾಹಿತಿ ನೀಡಲು ಹೇಳಿದರು ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದರು.

ಅಕ್ಕನ ಮನೆಯಲ್ಲೇ ಚಿನ್ನಾಭರಣ ಎಗರಿಸಿದ ಕಳ್ಳಿ ತಂಗಿ ಅಂದರ್!

Posted by Vidyamaana on 2024-05-08 07:16:07 |

Share: | | | | |


ಅಕ್ಕನ ಮನೆಯಲ್ಲೇ ಚಿನ್ನಾಭರಣ ಎಗರಿಸಿದ ಕಳ್ಳಿ ತಂಗಿ ಅಂದರ್!

ಬೆಂಗಳೂರು, ಮೇ.07: ತನ್ನ ಅಕ್ಕನ ಮನೆಯಲ್ಲೇ ಹಣ ಹಾಗೂ ಚಿನ್ನಾಭರಣ ಕದ್ದಿದ್ದ ಆರೋಪಿ ತಂಗಿಯನ್ನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಮಾ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಅಕ್ಕ ಊರಿಗೆ ತೆರಳಿದ್ದ ವೇಳೆ ನಕಲಿ ಕೀ ಬಳಸಿ 52 ಲಕ್ಷ ರೂ. ಕ್ಯಾಶ್ ಹಾಗೂ 180 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಬಂಧಿತ ಆರೋಪಿಯಿಂದ 65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. 

ಚೌಡೇಶ್ವರಿ ದೇವರ ಹಬ್ಬ ಎಂದು ಉಮಾಳ ಅಕ್ಕ ಊರಿಗೆ ಹೋಗಿದ್ದರು. ಹೋಗುವ ಮುನ್ನ ಸಂಬಂಧಿಗೆ ಮನೆಯ ಕೀ‌ ಕೊಟ್ಟು ಹೋಗಿದ್ದರು. ನಂತರ ಕಳೆದ ಏ. 24ರ ರಾತ್ರಿ ಆಕೆಯ ಸಂಬಂಧಿ ಮನೆಗೆ ಮಲಗಲು ಹೋಗಿದ್ದಾಗ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಳು. ಉಮಾ 182 ಗ್ರಾಂ ಚಿನ್ನಾಭರಣ ಹಾಗು 52 ಲಕ್ಷ ನಗದು ಕಳ್ಳತನ ಮಾಡಿದ್ದಳು.

ಯಶಸ್ವಿಯಾಗಿ ನಡೆದ ದಿವಂಗತ ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಸ್ಮರಣಾರ್ಥ ಪುರುಷರಕಟ್ಟೆಯಲ್ಲಿ ಮಾದರಿ ರಕ್ತದಾನ ಶಿಬಿರ..!

Posted by Vidyamaana on 2024-06-24 18:27:43 |

Share: | | | | |


ಯಶಸ್ವಿಯಾಗಿ ನಡೆದ ದಿವಂಗತ ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಸ್ಮರಣಾರ್ಥ ಪುರುಷರಕಟ್ಟೆಯಲ್ಲಿ ಮಾದರಿ ರಕ್ತದಾನ ಶಿಬಿರ..!

ಪುತ್ತೂರು :ಇಲ್ಲಿನ ಪುರುಷರಕಟ್ಟೆಯ ನಿವಾಸಿಯಾಗಿದ್ದ ದಿ.ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಶಾಂತಿಗೋಡು ಇವರ ಸ್ಮರಣಾರ್ಥ ಟೈ ಬ್ರೇಕರ್ಸ್ ಪುರುಷರಕಟ್ಟೆ ಹಾಗೂ ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಜಂಟಿ ಸಾರಥ್ಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ.) ಸಹಯೋಗದಲ್ಲಿ ರೋಟರಿ ಕ್ಯಾಂಪ್ಕೊ ಪುತ್ತೂರು ಬ್ಲಡ್ ಸೆಂಟರ್ ಸಹಕಾರದೊಂದಿಗೆ ಮಾದರಿ ರಕ್ತದಾನ ಶಿಬಿರವು ಪುರುಷರಕಟ್ಟೆ ಜಂಕ್ಷನ್ ನಲ್ಲಿ ಜೂ 24ರಂದು ಯಶಸ್ವಿಯಾಗಿ ನಡೆಯಿತು.

 60 ಮಂದಿ ಸ್ವಯಂ ಪ್ರೇರಿತರಾಗಿ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಜೀವದಾನಿಗಳಾದರು.

ಪುತ್ತೂರು : ಟಿಪ್ಪರ್-ಬೈಕ್ ನಡುವೆ ಡಿಕ್ಕಿ : ದ್ವಿಚಕ್ರ ವಾಹನ ಸವಾರ ಮುಕ್ವೆ ನಿವಾಸಿ ಸಫ್ಘಾನ್‌ ಗಂಭೀರ

Posted by Vidyamaana on 2024-02-21 18:08:47 |

Share: | | | | |


ಪುತ್ತೂರು : ಟಿಪ್ಪರ್-ಬೈಕ್ ನಡುವೆ ಡಿಕ್ಕಿ : ದ್ವಿಚಕ್ರ ವಾಹನ ಸವಾರ ಮುಕ್ವೆ ನಿವಾಸಿ ಸಫ್ಘಾನ್‌ ಗಂಭೀರ

ಪುತ್ತೂರು : ಟಿಪ್ಪರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಕಲ್ಲರ್ಪೆ ಸಮೀಪ ನಡೆದ ಬಗ್ಗೆ ವರದಿಯಾಗಿದೆ.

ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಮುಕ್ವೆ ನಿವಾಸಿ   ಅಬ್ದುಲ್ಲಾ ರವರ ಮಗ ಸಫ್ಫಾನ್   ಗಂಭೀರ ಗಾಯಗೊಂಡಿದ್ದು, ಪುತ್ತೂರು ಖಾಸಗಿ ಕರೆ ತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.


ಘಟನೆಯಿಂದಾಗಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಇನ್ನೊಂದು ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ ಎನ್ನಲಾಗಿದೆ.

2034ರ ಫಿಫಾ ವಲ್ಡ್‌ಕಪ್‌ ಆತಿಥ್ಯವನ್ನ ಯಾರು ವಹಿಸಲಿದ್ದಾರೆ?

Posted by Vidyamaana on 2023-11-01 15:46:21 |

Share: | | | | |


2034ರ ಫಿಫಾ ವಲ್ಡ್‌ಕಪ್‌ ಆತಿಥ್ಯವನ್ನ ಯಾರು ವಹಿಸಲಿದ್ದಾರೆ?

 ಸೌದಿ ಅರೇಬಿಯಾ: 2034ರ ಫುಟ್‌ಬಾಲ್‌ ವಿಶ್ವಕಪ್‌ (ಫಿಫಾ) ಆತಿಥ್ಯವನ್ನ ಸೌದಿ ಅರೇಬಿಯಾ ವಹಿಸಲಿದೆ. ಆಸ್ಟ್ರೇಲಿಯನ್‌ ಫುಟ್‌ಬಾಲ್‌ ಫೆಡರೇಶನ್‌ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಭಾಗಿಯಾಗದ ಕಾರಣ 2034ರ ಫಿಫಾ ವರ್ಲ್ಡ್‌ಕಪ್‌ ಆತಿಥ್ಯವನ್ನ ಸೌದಿ ಅರೇಬಿಯಾಗೆ ವಹಿಸಲಾಗಿದೆ. ಈ ಕುರಿತು ಫಿಫಾ ಅಧ್ಯಕ್ಷ ಗಿಯಾನ್ನಿ ಇನ್‌ಫಾಂಟಿನೋ ತಿಳಿಸಿದ್ದಾರೆ.ಅಂದ್ಹಾಗೆ ಫಿಫಾ ವರ್ಲ್ಡ್‌ಕಪ್‌ 2030ರ ಆತಿಥ್ಯವನ್ನ ಮೊರಾಕೊ, ಪೋರ್ಚುಗಲ್‌ ಮತ್ತು ಸ್ಪೇನ್‌ಗೆ ವಹಿಸೋದಾಗಿ ಫಿಫಾ ನಿರ್ಧರಿಸಿದ ಬೆನ್ನಲ್ಲೇ 20234 ಫಿಫಾ ಆತಿಥ್ಯವನ್ನ ಸೌದಿ ಅರೇಬಿಯಾ ವಹಿಸೋದು ಖಚಿತವಾಗಿದೆ.



Leave a Comment: