ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ದಶ ವರ್ಷದ ಜನ್ಮದಿನದ ಸಂಭ್ರಮದಲ್ಲಿ ಹೊಸ ದಿಶೆ ಯತ್ತ ಯೋಚಿಸಿದ ಕುಮಾರಿ ದಿಶಾ

Posted by Vidyamaana on 2023-07-03 02:07:53 |

Share: | | | | |


ದಶ ವರ್ಷದ ಜನ್ಮದಿನದ ಸಂಭ್ರಮದಲ್ಲಿ ಹೊಸ ದಿಶೆ ಯತ್ತ ಯೋಚಿಸಿದ ಕುಮಾರಿ ದಿಶಾ

ಪುತ್ತೂರು: ತಮ್ಮ ಬರ್ತ್ ಡೇಯನ್ನು ವಿಶೇಷವಾಗಿ ಆಚರಿಸಿಕೊಳ್ಳುವುದು ಎಲ್ಲಾ ಮಕ್ಕಳ ಒಂದು ಕನಸು. ಅದರಲ್ಲೂ ಮೊದಲ ವರ್ಷದ ಬರ್ತ್ ಡೇ ಬಿಟ್ರೆ ಐದು ಮತ್ತು ಹತ್ತನೇ ವರ್ಷದ ಬರ್ತ್ ಡೇಗೆ ಇತ್ತೀಚಿನ ದಿನಗಳಲ್ಲಿ ವಿಶೇಷತೆ ಬಂದಿದೆ. ಇದಕ್ಕೆ ಪೂರಕವಾಗಿ ಮಕ್ಕಳ ಹೆತ್ತವರೂ ಸಹ ತಮ್ಮ ಮುದ್ದಿನ ಮಕ್ಕಳ ಬರ್ತ್ ಡೇಯನ್ನು ಹಲವು ವಿಶೇಷತೆ ಮತ್ತು ವೈಭವದೊಂದಿಗೆ ಆಚರಿಸುತ್ತಾರೆ. ಆದರೆ ಕೆಲವರು ತಮ್ಮ ಬರ್ತ್ ಡೇ ಆಚರಣೆ ಸಂದರ್ಭದಲ್ಲಿ ಸಮಾಜಮುಖಿ ಯೋಚನೆ ಮತ್ತು ಕಾರ್ಯಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿ ಸುದ್ದಿಯಾಗುತ್ತಾರೆ.


ಇದಕ್ಕೊಂದು ಉದಾಹರಣೆ ಎಂಬಂತೆ ತೆಂಕು ಯಕ್ಷರಂಗದ ಸಿಡಿಲಮರಿ, ಅಭಿನವ ಆಭಿಮನ್ಯು ಎಂದೇ ಖ್ಯಾತರಾಗಿರುವ ಪ್ರಖ್ಯಾತ ಪುಂಡುವೇಷಧಾರಿ ದಿವಂಗತ ಶ್ರೀಧರ ಭಂಡಾರಿ ಅವರ ಮೊಮ್ಮಗಳು ಕು. ದಿಶಾ ತನ್ನ ಹತ್ತನೇ ವರ್ಷದ ಜನ್ಮದಿನವನ್ನು ಜು.01ರಂದು ಆಚರಿಸಿಕೊಂಡಿದ್ದು ಈ ಸಂಭ್ರಮದ ಸಂದರ್ಭದಲ್ಲಿ ಪುಟಾಣಿ ದಿಶಾ ಮಾದರಿ ಕಾರ್ಯವೊಂದರ ಮೂಲಕ ಸುದ್ದಿಯಾಗಿದ್ದಾಳೆ.


ಯಕ್ಷರಂಗದ ಕೋಲ್ಮಿಂಚು ದಿ. ಶ್ರೀಧರ ಭಂಡಾರಿ ಅವರ ಪುತ್ರಿ ಡಾ. ಅನಿಲ ದೀಪಕ್ ಮತ್ತು ದೀಪಕ್ ಅವರ ಪುತ್ರಿ ಮತ್ತು ವಿವೇಕಾನಂದ ಸಿಬಿಎಸ್.ಸಿ. ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಕು. ದಿಶಾ ತನ್ನ ಹತ್ತನೇ ವರ್ಷದ ಜನ್ಮದಿನದ ಸಂದರ್ಭದಲ್ಲಿ ತನ್ನ ಪಿಗ್ಗಿ ಬ್ಯಾಂಕ್ ಕಲೆಕ್ಷನ್ ನಲ್ಲಿದ್ದ ಸುಮಾರು 13,302 ರೂಪಾಯಿಗಳಷ್ಟು ಮೊತ್ತವನ್ನು ತಮ್ಮ ಅರಂತಾಡಿ ಸಂಕಬೈಲು ತರವಾಡು ಮನೆಯ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಮರ್ಪಣೆ ಮಾಡುವ ಮೂಲಕ ತನ್ನ ಹತ್ತನೇ ವರ್ಷದ ಜನ್ಮದಿನಕ್ಕೆ ದೈವ-ದೇವರ ವಿಶೇಷ ಆಶೀರ್ವಾದವನ್ನು ಪಡೆದುಕೊಂಡಿದ್ದಾಳೆ.


ಮಕ್ಕಳಲ್ಲಿ ಎಳವೆಯಲ್ಲೇ ಇಂತಹ ಸಮಾಜಮುಖಿ ಮತ್ತು ಧಾರ್ಮಿಕ ಚಿಂತನೆಗಳನ್ನು ಬೆಳೆಸುವುದರಿಂದ ಅವರು ಬೆಳೆದು ದೊಡ್ಡವರಾದ ಮೇಲೆ ಅವರ ವ್ಯಕ್ತಿತ್ವದ ಮೇಲೆ ಇದು ಪ್ರಭಾವವನ್ನು ಬೀರುತ್ತದೆ ಎಂಬುದು ದಿಶಾ ತಾಯಿ ಡಾ ಅನಿಲ ದೀಪಕ್ ಅವರ ಅಭಿಪ್ರಾಯವಾಗಿದೆ. ಅಂತೂ ಕು. ದಿಶಾ ತನ್ನ ಜನ್ಮದಿನದ ಸಂದರ್ಭದಲ್ಲಿ ಒಂದು ಹೊಸ ‘ದಿಶೆ’ಯತ್ತ ಯೋಚಿಸಿರುವುದು ಸಂತಸದ ವಿಚಾರವೇ ಸರಿ.

ಹಿಂದಿನ ಶಾಸಕರ ಕಚೇರಿಗೆ ವಾಸ್ತುದೋಷ!!!?

Posted by Vidyamaana on 2023-05-26 16:24:56 |

Share: | | | | |


ಹಿಂದಿನ ಶಾಸಕರ ಕಚೇರಿಗೆ ವಾಸ್ತುದೋಷ!!!?

ಪುತ್ತೂರು: ತಾಲೂಕು ಆಡಳಿತ ಸೌಧದಲ್ಲಿದ್ದ ಹಿಂದಿನ ಶಾಸಕರ ಕಚೇರಿಗೆ ವಾಸ್ತುದೋಷ ಎದುರಾಗಿತ್ತಂತೆ! ಆದ್ದರಿಂದ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರು ಹೊಸ ಕಚೇರಿಯ ತಲಾಷ್’ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶುಕ್ರವಾರ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿರುವ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರು, ಸಹಾಯಕ ಆಯುಕ್ತರ ಜೊತೆ ಮಾತನಾಡುತ್ತಾ ಹೊಸ ಕಚೇರಿಯನ್ನು ಹುಡುಕಿ ಕೊಡಲು ಸೂಚಿಸಿದ್ದಾರೆ.

ಹಳೆ ಕಚೇರಿಯಲ್ಲಿ ವಾಸ್ತುದೋಷ ಇದೆಯೋ ಏನೋ ಗೊತ್ತಿಲ್ಲ. ಆದರೆ ಆ ಕಚೇರಿ ತೀರಾ ಚಿಕ್ಕದಾಗಿದ್ದು, ಸ್ಥಳಾವಕಾಶದ ಕೊರತೆಯಿದೆ. ನನ್ನನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಸರಿಯಾಗಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇರಬೇಕು. ಆದ್ದರಿಂದ ದೊಡ್ಡ ಕೊಠಡಿಯ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.

ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ನೂತನ ಕಚೇರಿಯು ಕೆಲವೇ ದಿನಗಳಲ್ಲಿ ತೆರೆದುಕೊಳ್ಳಲಿದ್ದು, ತುರ್ತಾಗಿ ಕಚೇರಿ ಕೆಲಸ ನಡೆಯಲಿದೆ ಎಂದು ತಿಳಿದುಬಂದಿದೆ.

ಹತ್ತೂರ ಒಡೆಯನ ಸಂಭ್ರಮದ ಜಾತ್ರೋತ್ಸವಕ್ಕೆ ಇನ್ನು ಹತ್ತೇ ದಿನ

Posted by Vidyamaana on 2024-04-01 16:39:12 |

Share: | | | | |


ಹತ್ತೂರ ಒಡೆಯನ ಸಂಭ್ರಮದ ಜಾತ್ರೋತ್ಸವಕ್ಕೆ ಇನ್ನು ಹತ್ತೇ ದಿನ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಇಂದು ಗೊನೆ ಮುಹೂರ್ತ ನಡೆಯಿತು.ಬೆಳಿಗ್ಗೆ ಪೂರ್ವ ಶಿಷ್ಟಸಂಪ್ರದಾಯದಂತೆ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಬಳಿಕ ವಾದ್ಯದೊಂದಿಗೆ ತೆರಳಿ ಗೊನೆ ಮುಹೂರ್ತ ನೆರವೇರಿಸಲಾಯಿತು.

ಭಾರತದಿಂದ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂನ 2018 ಸಿನಿಮಾ

Posted by Vidyamaana on 2023-09-27 13:38:48 |

Share: | | | | |


ಭಾರತದಿಂದ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂನ 2018 ಸಿನಿಮಾ

ಮುಂಬಯಿ: 96ನೇ ಆಸ್ಕರ್‌ ಅವಾರ್ಡ್ಸ್‌ಗೆ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆಯುವ ಸಿನಿಮಾವಾಗಿ ಮಾಲಿವುಡ್‌ ಸಿನಿಮಾ 2018 ಆಯ್ಕೆ ಆಗಿದೆ ಎಂದು ಘೋಷಿಸಲಾಗಿದೆ.

ಇತ್ತೀಚೆಗೆ ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ 17 ಸದಸ್ಯರ ತೀರ್ಪುಗಾರರನ್ನು ಒಳಗೊಂಡಿರುವ ಆಯ್ಕೆ ಸಮಿತಿಗೆ ಭಾರತದಾದ್ಯಂತ ತೆರೆಕಂಡ 22 ಸಿನಿಮಾಗಳು ಅಧಿಕೃತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿತ್ತು.


ಇದರಲ್ಲಿ “ಬಾಲಗಮ್”, “ದಿ ಕೇರಳ ಸ್ಟೋರಿ”, “ಜ್ವಿಗಾಟೊ” “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ”ಅನಂತ್ ಮಹದೇವನ್ ಅವರ ಸ್ಟೋರಿ ಟೇಲರ್ (ಹಿಂದಿ), ಮ್ಯೂಸಿಕ್‌ ಸ್ಕೂಲ್ (ಹಿಂದಿ), ಮಿಸಸ್ ಚಟರ್ಜಿ vs ನಾರ್ವೆ (ಹಿಂದಿ), 12th ಫೇಲ್‌ (ಹಿಂದಿ) ವಿದುತಲೈ ಭಾಗ 1 (ತಮಿಳು), ಘೂಮರ್ (ಹಿಂದಿ), ಮತ್ತು ದಸರಾ (ತೆಲುಗು) ಸಿನಿಮಾಗಳು ಆಸ್ಕರ್‌ ನ ಅಧಿಕೃತ ಪ್ರವೇಶ ಪಡೆಯುವ ಸಾಲ್ಲಿನಲ್ಲಿತ್ತು.


ಅಂತಿಮವಾಗಿ ಜೂಡ್‌ ಆಂಟನಿ ಜೋಸೆಫ್‌ ನಿರ್ದೇಶನದ ಮಲಯಾಳಂ ಸಿನಿಮಾ “2018” ಆಸ್ಕರ್‌ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ. ಇದೇ ವರ್ಷದ ಮೇ.5 ರಂದು ರಿಲೀಸ್‌ ಆಗಿದ್ದ ಈ ಸಿನಿಮಾದಲ್ಲಿ ಟೊವಿನೋ ಥಾಮಸ್ ಸೇರಿದಂತೆ ಕುಂಚಾಕೋ ಬೋಬನ್, , ಆಸಿಫ್ ಅಲಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೇರಳದಲ್ಲಿ ಬಂದ ಪ್ರವಾಹದ ನೈಜ ಕಥೆಯನ್ನೊಳಗೊಂಡಿದೆ. ಬಾಕ್ಸ್‌ ಆಫೀಸ್‌ 100 ಕೋಟಿ ಕಮಾಯಿ ಮಾಡಿ, ದೊಡ್ಡ ಹಿಟ್‌ ಆಗಿತ್ತು.

ಇಂದು (ಸೆ 09) ವಿಶ್ವಹಿಂದೂ ಪರಿಷದ್‌ ಸ್ಥಾಪನಾ ದಿನಾಚರಣೆ-: ಪುತ್ತೂರಿನಲ್ಲಿ 13ನೇ ವರ್ಷದ ಮೊಸರು ಕುಡಿಕೆ - ಶೋಭಾಯಾತ್ರೆ

Posted by Vidyamaana on 2023-09-09 10:48:09 |

Share: | | | | |


ಇಂದು (ಸೆ 09) ವಿಶ್ವಹಿಂದೂ ಪರಿಷದ್‌ ಸ್ಥಾಪನಾ ದಿನಾಚರಣೆ-: ಪುತ್ತೂರಿನಲ್ಲಿ 13ನೇ ವರ್ಷದ ಮೊಸರು ಕುಡಿಕೆ - ಶೋಭಾಯಾತ್ರೆ

ಪುತ್ತೂರು: ವಿಶ್ವಹಿಂದೂ ಪರಿಷದ್‌ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಸೆ.9ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 13ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಪುತ್ತೂರು ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ.ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಬೆಳಗ್ಗಿನಿಂದಲೇ ವಿವಿಧ ಆಟೋಟ ಸ್ಪರ್ಧೆ ನಡೆಯಲಿದ್ದು, ಸಂಜೆ ವೈಭವದ ಶೋಭಾಯಾತ್ರೆಯೊಂದಿಗೆ ಅಟ್ಟಿ ಮಡಿಕೆ ಒಡೆಯುವ ಸಾಹಸ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಧಾರ್ಮಿಕ ಸಭೆಯು ನಡೆಯಲಿದೆ.ಶೋಭಾಯಾತ್ರೆ ಉದ್ಘಾಟನೆ:


ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಯನ್ನು ಡಾ. ಎಂ.ಕೆ.ಪ್ರಸಾದ್ ಅವರು ಉದ್ಘಾಟಿಸಲಿದ್ದಾರೆ. ಬಜರಂಗದಳ ಮಂಗಳೂರು ವಿಭಾಗದ ಸಹ ಸಂಯೋಜಕ ಪುನಿತ್ ಅತ್ತಾವರ ಅವರು ಧ್ವಜ ಹಸ್ತಾಂತರ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ದೊರಕಲಿದೆ. ಶೋಭಾಯಾತ್ರೆಯು ಬೊಳುವಾರು ಓಂ ಶ್ರೀ ಶಕ್ತಿ ಅಂಜನೇಯ ಮಂತ್ರಾಲಯದ ಬಳಿಯಿಂದ ಆರಂಭಂಗೊಂಡು ಮುಖ್ಯರಸ್ತೆಯಾಗಿ ಅಂಚೆಕಚೇರಿ ಬಳಿಯಿಂದ ದೇವಸ್ಥಾನದ ಗದ್ದೆಗೆ ಸಾಗಿ ಸಭಾ ಕಾರ್ಯಕ್ರಮ ಮುಗಿದ ಬಳಿಕ ಅದೇ ರಸ್ತೆಯಾಗಿ ಸಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಾದು ಕಲ್ಲಾರೆಯ ತನಕ ಸಾಗಿ ಅಲ್ಲಿಂದ ಹಿಂದಿರುಗಿ ಅರುಣಾ ಚಿತ್ರಮಂದಿರ ಬಳಿಯಿಂದ ಎಪಿಎಂಸಿ ರಸ್ತೆಯ ಮೂಲಕ ಆದರ್ಶ ಆಸ್ಪತ್ರೆಯ ಬಳಿಯಿಂದ ತೆರಳಿ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಸಮಾಪನೆಗೊಳ್ಳಲಿದೆ.ಧಾರ್ಮಿಕ ಸಭೆ:


ಸಂಜೆ ಬೊಳುವಾರಿನಿಂದ ಹೊರಟ ಶೋಭಾಯಾತ್ರೆಯು ದೇವಳದ ಗದ್ದೆಗೆ ಬಂದ ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ವಿಶ್ವಹಿಂದೂ ಪರಿಷದ್‌ನ ಕರ್ನಾಟಕ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ವಿಶ್ವಹಿಂದು ಪರಿಷದ್ ಪುತ್ತೂರು ಜಿಲ್ಲೆ ಕಾರ್ಯದರ್ಶಿ ನವೀನ್ ನೆರಿಯ, ನ್ಯಾಯವಾದಿ ಅರುಣ್‌ಶ್ಯಾಮ್, ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೆಸ್ಕಾಂ ಮಾಜಿ ನಿರ್ದೇಶಕರಾಗಿರುವ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಟಿ ತಿಳಿಸಿದ್ದಾರೆ.ಸೆ.9ಕ್ಕೆ ವಿವಿಧ ಸ್ಪರ್ಧೆಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ ಗಂಟೆ 10 ರಿಂದ 11 ವರ್ಷದಿಂದ 16 ವರ್ಷದ ಒಳಗಿನ ಮಕ್ಕಳಿಗೆ ಭಾರತಮಾತೆಯ ಚಿತ್ರಬಿಡಿಸುವ, ಜಾನಪದ ಗೀತೆ, ಸ್ಮರಣಶಕ್ತಿ ಅಡ್ಡಕಂಬ, ಗುಂಡೆಸೆತ, ಮಡಿಕೆ ಒಡೆಯುವುದು, ದೇಶಭಕ್ತಿಗೀತೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಮಹಿಳೆಯರಿಗೆ ಸಂಗೀತ ಕುರ್ಚಿ, ಮಡಿಕೆ ಒಡೆಯುವುದು, ಸಂಗೀತ ಸ್ಪರ್ಧೆ, ರಂಗವಲ್ಲಿ, ಗುಂಡೆಸೆತ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಉದ್ದಕಂಬ ಸ್ಪರ್ಧೆ ನಡೆಯಲಿದೆ.

ಶಾಸಕರ ಇಂದಿನ ಕಾರ್ಯಕ್ರಮ ಜು 01

Posted by Vidyamaana on 2023-06-30 23:09:08 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 01

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಜುಲೈ 01 ರಂದು...

 ಬೆಳಿಗ್ಗೆ 10 ಗಂಟೆಗೆ ಸರ್ವೆ ವಲಯ ಕಾರ್ಯಕರ್ತರ ಸಭೆ

12.30 ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ದಿನಾಚರಣೆ

ಮದ್ಯಾಹ್ನ 3 ಗಂಟೆ ನರಿಮೊಗರು ವಲಯ ಕಾರ್ಯಕರ್ತರ ಸಭೆ

ಸಂಜೆ 5 ಕುರಿಯದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.



Leave a Comment: