ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯ ಆರೋಪ - ಒಂದುವರೆ ತಿಂಗಳ ಮಗು ಸಾವು

Posted by Vidyamaana on 2023-08-08 15:56:46 |

Share: | | | | |


ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯ ಆರೋಪ - ಒಂದುವರೆ ತಿಂಗಳ ಮಗು ಸಾವು

ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್ ಗಳ ನಿರ್ಲಕ್ಷ್ಯಕ್ಕೆ ಒಂದುವರೆ ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಮಾಜಿ ಶಾಸಕ ವಸಂತ ಬಂಗೇರ ಆಗಮಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಸಾವನ್ನಪ್ಪಿದ ತಂದೆಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿಲು ಸಲಹೆ ನೀಡಿದ್ದಾರೆ.


ಧರ್ಮಸ್ಥಳ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಗಳ 1.5 ತಿಂಗಳು ಹೆಣ್ಣು ಮಗು ಅಂಶಿಕಾ ಸಾವನ್ನಪ್ಪಿದ ಮಗು.

 ನೆರಿಯ ಅಕ್ಕ ಲೀಲಾವತಿ ಮನೆಯಲ್ಲಿದ್ದಕೊಂಡು ಮಗುವನ್ನು ಆರೈಕೆ ಮಾಡಿಕೊಂಡಿದ್ದ ಸವಿತಾ. ಆಗಸ್ಟ್ 8 ರಂದು(ಇಂದು) ಕಫ ಅಗಿತ್ತು ಎಂದು ಮಧ್ಯಾಹ್ನ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಡಾಕ್ಟರ್ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡದ ಬಳಿಕ ಮಗು ಸಾವನ್ನಪ್ಪಿದೆ ಎಂದು ಮನೆಮಂದಿ ಆರೋಪ ಮಾಡುತ್ತಿದ್ದಾರೆ.

ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಏರ್ ಇಂಡಿಯ ಎಕ್ಸ್‌ ಪ್ರೆಸ್‌ ವಿಮಾನದಲ್ಲಿ ಗೌರವಾರ್ಪಣೆ

Posted by Vidyamaana on 2023-11-23 12:27:22 |

Share: | | | | |


ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಏರ್ ಇಂಡಿಯ ಎಕ್ಸ್‌ ಪ್ರೆಸ್‌ ವಿಮಾನದಲ್ಲಿ ಗೌರವಾರ್ಪಣೆ

ಮಂಗಳೂರು, ನ.23: ಹಿದಾಯ ಫೌಂಡೇಶನ್‌ ಜುಬೈಲ್ ಘಟಕದ ವತಿಯಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಏ‌ರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನದಲ್ಲಿ ಹೊರಟಿದ್ದ ಅಕ್ಷರ ಸಂತ, ಪದ್ಮಶ್ರೀ ಹರೇಕಳ ಹಾಜಬ್ಬರನ್ನು ವಿಮಾನದ ಸಿಬ್ಬಂದಿ ಅಭಿನಂದಿಸಿ ಗೌರವಿಸಿದರು.


ಹರೇಕಳ ಹಾಜಬ್ಬ ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿನಿಂದ ದಮ್ಮಾಮ್ ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರನ್ನು ಗುರುತಿಸಿದ ಏ‌ರ್ ಇಂಡಿಯ ಎಕ್ಸ್‌ ಪ್ರೆಸ್ ನ ಸಿಬ್ಬಂದಿ ವಿಮಾನದ ಕ್ಯಾಪ್ಟನ್ ನ ಗಮನಕ್ಕೆ ತಂದರು. ಕ್ಯಾಪ್ಟನ್ ವಿಮಾನದಲ್ಲಿರುವ ಪ್ರಯಾಣಿಕರಿಗೆ ಹಾಜಬ್ಬರನ್ನು ಪರಿಚಯಿಸುತ್ತಾ "ಶಿಕ್ಷಣ ರಂಗದಲ್ಲಿ ಅಪೂರ್ವ ಸೇವೆ ಸಲ್ಲಿಸಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ನಮ್ಮ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ನಮಗೆಲ್ಲ ತುಂಬಾ ಸಂತೋಷ ತಂದಿದೆ. ಅವರಿಗೆ ಹೃದಯ ತುಂಬಿದ ಅಭಿನಂದನೆಗಳು" ಎಂದರು.


ಪ್ರೇರಣಾ ಭಾಷಣಗಾರ ರಫೀಕ್ ಮಾಸ್ಟ‌ರ್ ಮಂಗಳೂರು ಹಾಗೂ ಉದ್ಯಮಿ ಫಾರೂಕ್ ಕನ್ಯಾನ ಪೋರ್ಟ್‌ ವೇ ಈ ವೇಳೆ ಹಾಜಬ್ಬರ ಜೊತೆಗಿದ್ದರು.

ಬಂಟ್ವಾಳ : ಯುವತಿಯರು ಮಲಗಿದ್ದ ಕೋಣೆಗೆ ಕಿಟಕಿ ಮೂಲಕ ಇಣುಕು ನೋಡಿದ ನೆರೆಮನೆಯ ವಿಶ್ವನಾಥ

Posted by Vidyamaana on 2023-09-21 21:42:48 |

Share: | | | | |


ಬಂಟ್ವಾಳ : ಯುವತಿಯರು ಮಲಗಿದ್ದ ಕೋಣೆಗೆ ಕಿಟಕಿ ಮೂಲಕ ಇಣುಕು ನೋಡಿದ ನೆರೆಮನೆಯ ವಿಶ್ವನಾಥ

ಬಂಟ್ವಾಳ : ಇಲ್ಲಿನ ನಗರ ಠಾಣಾ ವ್ಯಾಪ್ತಿಯಲ್ಲಿ ಸಹೋದರಿಯರೇ ಮಲಗಿದ್ದ ಕೋಣೆಗೆ ರಾತ್ರಿ ವೇಳೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕಿಟಕಿಯಿಂದ ಇಣುಕು ನೋಡಿ ನೆರೆಮನೆ ನಿವಾಸಿ ವಿಶ್ವನಾಥ ಎಂಬಾತನ ವಿರುದ್ದ ಠಾಣೆಯಲ್ಲಿ ಸಂತ್ರಸ್ತೆ ಯುವತಿ ದೂರು ದಾಖಲಿಸಿದ್ದಾಳೆ. 


ಬುಧವಾರ ಸಂತ್ರಸ್ಥ ಯುವತಿಯು ತನ್ನ ಮನೆಯಲ್ಲಿ ಊಟ ಮುಗಿಸಿ, ಮನೆಯ ಕೋಣೆಯಲ್ಲಿ ತನ್ನ ತಂಗಿಯರೊಂದಿಗೆ ಮಲಗಿದ್ದಾಗ, ಕೋಣೆಯ ಕಿಟಕಿಯಿಂದ ಆರೋಪಿ ವಿಶ್ವನಾಥ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಕಲಂ 354(ಸಿ) ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮತ್ತೆ ಕರಾವಳಿ ಪಾಲಾಗುವ ಸಾಧ್ಯತೆ

Posted by Vidyamaana on 2023-07-04 21:46:28 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮತ್ತೆ ಕರಾವಳಿ ಪಾಲಾಗುವ ಸಾಧ್ಯತೆ

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮತ್ತೆ ಕರಾವಳಿ ಪಾಲಾಗುವ ಸಾ


ಬೆಂಗಳೂರು: ವಿಧಾನ ಸಭಾ ಚುನಾವಣೆಯ ಸೋಲಿನ ಬಳಿಕ ರಾಜಕೀಯದ ಸುಳಿಗಾಳಿಯಲ್ಲಿ ಓಲಾಡುತ್ತಿರುವ ರಾಜ್ಯ ಬಿಜೆಪಿ ಎಂಬ ನಾವೆಯ ಚುಕ್ಕಾಣಿಯನ್ನು ಮತ್ತೆ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಪ್ರಭಾವಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ತನ್ನ ಕೈಗೆ ತೆಗೆದುಕೊಂಡಿದ್ದಾರೆ. ಪ್ರಬಲ ಕಾಂಗ್ರೆಸ್ ಪಕ್ಷವನನ್ನು ಸದನದ ಹೊರಗೆ ಮತ್ತು ಒಳಗೆ ಸಮರ್ಥವಾಗಿ ಎದುರಿಸಲು ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲುವಂತಾಗಲು ಬಿಜೆಪಿಗೆ ಸದ್ಯಕ್ಕೆ ಸಮರ್ಥ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರು ಬೇಕಾಗಿದ್ದಾರೆ.


ಈ ಕಾರಣದಿಂದ ಕಮಲ ಪಕ್ಷದ ಕೇಂದ್ರ ಪ್ರಮುಖರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ತುರ್ತಾಗಿ ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿಎಸ್.ವೈ ವಿಪಕ್ಷ ನಾಯಕನ ಸ್ಥಾನಕ್ಕೆ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಚಿಸಿರುವ ಎರಡು ಹೆಸರುಗಳು ಸ್ವತಃ ಕೇಂದ್ರ ಬಿಜೆಪಿ ನಾಯಕರನ್ನೇ ಅಚ್ಚರಿಯಲ್ಲಿ ಕೆಡವಿದೆ.


ಪಕ್ಷ ಮತ್ತೆ ರಾಜ್ಯದಲ್ಲಿ ಸಮರ್ಥವಾಗಿ ಬೆಳೆಯಬೇಕಾದ್ರೆ ಇವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಬಿಎಸ್.ವೈ ಕೆಂದ್ರ ನಾಯಕರ ಮನ ಒಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ವಿಪಕ್ಷ ನಾಯಕನ ಸ್ಥಾನಕ್ಕೆ ಆರಗ ಜ್ಞಾನೇಂದ್ರ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರುಗಳನ್ನು ಬಿ.ಎಸ್.ವೈ ಸೂಚಿಸಿದ್ದು ಈ ಕುರಿತು ಕೇಂದ್ರ ಬಿಜೆಪಿ ನಾಯಕರು ಗಂಭೀರವಾಗಿ ಆಲೋಚಿಸುತ್ತಿದ್ದು ಇವತ್ತು ಅಥವಾ ನಾಳೆಯೊಳಗೆ ಈ ಕುರಿತಾಗಿ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.


ಈ ಹಿಂದೆ ಬಿ.ಎಸ್.ವೈ ಮುಖ್ಯಮಂತ್ರಿಯಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರು ಬಳಿಕ ನಮೋ 2.0 ಸಂಪುಟದಲ್ಲಿ ಕೇಂದ್ರ ಸಚಿವೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ವಿಪಕ್ಷಗಳನ್ನು ಎದುರಿಸಲು ಮತ್ತು ರಾಜ್ಯಾದ್ಯಂತ ಬಿಜೆಪಿಯನ್ನು ಮರು ಸಂಘಟಿಸಲು ಶೋಭಾ ಅವರ ರಾಜಕೀಯ ಅನುಭವ ಪ್ರಯೋಜವಾಗುತ್ತದೆ ಎಂಬ ವಾದವನ್ನು ಬಿಎಸ್ ವೈ ಬಣ ಮಂಡಿಸುತ್ತಿದೆ. ಇನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರೂ ಸಹ ಬಿ.ಎಸ್.ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು ಇವರಿಬ್ಬರಿಗೆ ಕೇಂದ್ರ ನಾಯಕರು ಓಕೆ ಅಂದ್ರೆ ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ವೈ ಬಣದ ಹಿಡಿತ ಮತ್ತೆ ಬಿಗಿಯಾಗಲಿದೆ.

ಫಟಾಫಟ್ ಕಂಬ ತೆರವು ಗೊಳಿಸಿದ ಮೆಸ್ಕಾಂ

Posted by Vidyamaana on 2023-05-31 12:09:55 |

Share: | | | | |


ಫಟಾಫಟ್ ಕಂಬ ತೆರವು ಗೊಳಿಸಿದ ಮೆಸ್ಕಾಂ

ಪುತ್ತೂರು: ಕುಂಬ್ರದ ಶೇಖಮಲೆಯಲ್ಲಿ ಭಾರಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳನ್ನು ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ಫಟಾಫಟ್ ಬದಲಾಯಿಸಿ, ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಧರೆಗುರುಳಿದ ಮರಗಳನ್ನು ತಕ್ಷಣವೇ ತೆರವು ಮಾಡಲಾಯಿತು.

ಶೇಖಮಲೆಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು. ಸ್ಥಳೀಯರು ವಿದ್ಯುತ್ ಸಮಸ್ಯೆಯಿಂದ ಸಂಕಷ್ಟಕ್ಕೀಡಾಗಿದ್ದರು. ತಕ್ಷಣ ಸ್ಪಂದಿಸಿದ ಮೆಸ್ಕಾಂ, ಧರೆಗುರುಳಿದ‌ ವಿದ್ಯುತ್ ಕಂಬಗಳನ್ನು ತೆರವು ಮಾಡಿ, ತಂತಿಗಳನ್ನು ತೆರವು ಮಾಡಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

ಧರೆಗುರುಳಿದ ಮರವನ್ನು ಸ್ಥಳೀಯರು ತೆರವು ಮಾಡಿದರು. ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಅಧಿಕಾರಿ, ಸಿಬ್ಬಂದಿಗಳಿಗೆ ಸ್ಥಳೀಯರು ಸಹಕಾರ ನೀಡಿದರು.

ಶಾಸಕ ಅಶೋಕ್ ರೈ ಸೂಚನೆ:

ಶಾಸಕ ಅಶೋಕ್ ಕುಮಾರ್ ರೈ ಅವರು ಇತ್ತೀಚೆಗೆ ನಡೆದ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ, ವಿದ್ಯುತ್ ಕಡಿತಗೊಂಡು 24 ಗಂಟೆಯೊಳಗೆ ವ್ಯವಸ್ಥೆ ಸರಿಪಡಿಸಬೇಕು ಎಂದಿದ್ದರು. ಅದರಂತೆ ಸಕ್ರೀಯರಾಗಿರುವ ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ವಿದ್ಯುತ್ ತಂತಿ, ಕಂಬ ಧರೆಗುರುಳಿದ ಕೆಲವೇ ಕ್ಷಣಗಳಲ್ಲಿ ತೆರವು ಮಾಡಿದ್ದಾರೆ.

ಕೊಂಬೆಟ್ಟು ಸರಕಾರಿ ಪ ಪೂ ಕಾಲೇಜಿನಲ್ಲಿ ಸಿಇಟಿ ನೀಟ್ ಕೋಚಿಂಗ್ ತರಗತಿ ಉದ್ಘಾಟನೆ

Posted by Vidyamaana on 2023-07-26 12:06:40 |

Share: | | | | |


ಕೊಂಬೆಟ್ಟು ಸರಕಾರಿ ಪ ಪೂ ಕಾಲೇಜಿನಲ್ಲಿ ಸಿಇಟಿ ನೀಟ್ ಕೋಚಿಂಗ್ ತರಗತಿ ಉದ್ಘಾಟನೆ

ಪುತ್ತೂರು: ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಭಗದ ಬಡವರ ಮಕ್ಕಳೂ ಸಿಇಟಿ, ನೀಟ್ ಪರೀಕ್ಷೆ ಬರೆದು ಉನ್ನತ ವ್ಯಾಸಂಗ ಮಾಡುವಂತಗಬೇಕು, ಪ್ರತೀಯೊಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಗಬೇಕೆಂಬುದೇ ನನ್ನ ಉದ್ದೇಶವಾಗಿದೆ ಇದಕ್ಕಾಗಿ ಜಿಲ್ಲೆಯಲ್ಲೇ ಪ್ರಥಮ ಬಾರಿ ಎಂಬಂತೆ ಪುತ್ತೂರಿನ ಕೊಂಬೆಟ್ಟು ಪ ಪೂ ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ಕೋಚಿಂಗ್ ತರಗತಿಯನ್ನು ಪ್ರಾರಂಭಿಸಲಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಜು.೨೬ ರಂದು ಕೊಂಬೆಟ್ಟು ಪ ಪೂ ಕಾಲೇಜಿನಲ್ಲಿ ಶಿಕ್ಷಕರ ನೂತನ ಕೊಠಡಿ, ಗ್ರೀನ್ ಬೋರ್ಡು ಮತ್ತು ಸಿಇಟಿ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಎಲ್ಲಾ ಸೌಲಭ್ಯಗಳೂ ಸರಕಾರಿ ಕಾಲೇಜಿನಲ್ಲಿ ದೊರೆಯಬೇಕು. ಸರಕಾರಿ ಕಾಲೇಜಿನಲ್ಲಿ ಯಾವುದೂ ಇಲ್ಲ ಎನ್ನುವಂತಗಬಾರದು. ಹೆಚ್ಚಾಗಿ ಬಡವರ ಮಕ್ಕಳೇ ಸರಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಸೌಲಭ್ಯದ ಕೊರತೆಯಿಂದ ವಂಚತರಾಗಬಾರದು ಇದಕ್ಕಾಗಿ ನಾನು ಮೊದಲ ಬಾರಿ ಎಂಬಂತೆ ಕೋಚಿಂಗ್ ತರಗತಿಯನ್ನು ಪ್ರಾರಂಭ ಮಾಡಿಸಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಉಚಿತವಾಗಿಯೇ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲಾಗುವುದು ಮತ್ತು ಇದಕ್ಕಾಗಿ ಉನ್ನತ ತರಬೇತುದಾರರನ್ನು ಕರೆಸಲಾಗುವುದು ಎಂದು ಶಾಸಕರು ಹೇಳಿದರು. ಕೊಂಬೆಟ್ಟು ಸ ಪ ಪೂ ಕಾಲೇಜಿನಲ್ಲಿ ಹೊಸ ಬದಲಾವಣೆ ತರುವ ಉದ್ದೇಶವಿದ್ದು ಇದಕ್ಕಾಗಿ ಶಿಕ್ಷಕ ವೃಂದ ಮತ್ತು ಪೋಷಕರ ಸಹಕಾರವನ್ನು ಕೋರಿದರು.

ಕಾಲೇಜಿನ ಕಾರ್ಯಾಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು ಯಾವುದೇ ಸ್ಥಾನದಲ್ಲಿದ್ದರೂ ಕಲಿತ ಶಾಲೆಯನ್ನು ಮರೆಯಬಾರದು. ತಾವು ಕಲಿತ ಶಾಲೆಗೆ ಯಾವುದಾದರೂ ಸಹಾಯ ಮಾಡುವಂತಾಗಬೇಕು, ನಮ್ಮಿಂದಾಗಿ ಒಬ್ಬ ವಿದ್ಯಾರ್ಥಿ ಭವಿಷ್ಯ ಉಜ್ವಲವಾದರೆ ಅದು ನಮಗೆ ಸಂತೋಷ ಸಂಗತಿಯಾಗಿದೆ. ಮೊದಲ ಬಾರಿಗೆ ಸರಕಾರಿ ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರವನ್ನು ಪ್ರಾರಂಭ ಮಾಡಿರುವುದು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ದೊಡ್ಡ ವರದಾನವಾಗಿದೆ ಎಂದು ಹೇಳಿದರು.

ಜಿ ಎಲ್ ಆಚರ್ಯಜ್ಯುವೆಲ್ಲರ್‍ಸ್‌ನ ಲಕ್ಷ್ಮೀ ಕಾಂತ್ ಆಚಾರ್ಯ ಮಾತನಾಡಿ ನಾನು ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು ಎಲ್ಲಾ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಕಾಲೇಜಿನ ಅಭಿವೃದ್ದಿಗೆ ಶ್ರಮಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು. ಕೊಂಬೆಟ್ಟು ಕಾಲೇಜಿನಲ್ಲಿ ಕಲಿತವರೇ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ವ್ಯವಸ್ಥೆಗೆ ಬೆಂಬಲ ಸದಾ ಇರಲಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಧರ್ಣಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ಕೋಚಿಂಗ್ ಕ್ಲಾಸ್ ಹಲವು ವರ್ಷಗಳ ಕನಸಾಗಿದ್ದು ಅದು ಈಗ ನನಸಾಗಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಶಾಸಕರು ಕಾಲೇಜಿನಲ್ಲಿ ಹೊಸ ಕ್ರಾಂತಿಗೆ ಮುನ್ನುಡಿಬರೆದಿದ್ದಾರೆ ಇದು ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವಂತಾಗಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಕಾರ್ಯಾಧ್ಯಕ್ಷರಾದ ಜೋಕಿಂ ಡಿಸೋಜಾ, ಕಾಲೇಜಿನ ಉಪಪ್ರಾಂಶುಪಾಲರಾದ ವಸಂತಮೂಲ್ಯ ಪಿ ಉಪಸ್ಥಿತರಿದ್ದರು.

ಉಪನ್ಯಾಸಕ ಗೌತಮ್ ಕೆ ಕಾಮತ್ ಸ್ವಾಗತಿಸಿದರು. ಉಪನ್ಯಾಸಕ ವಿನೋದ್ ಎ ವಂದಿಸಿದರು.ಉಪನ್ಯಾಸಕ ಪದ್ಮನಾಭ ಎಸ್ ಕಾರ್ಯಕ್ರಮ ನಿರೂಪಿಸಿದರು.



Leave a Comment: