ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಕೊಳ್ತಿಗೆ : ಹಾಡಹಗಲೇ ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ ಭೇದಿಸಿದ ಬೆಳ್ಳಾರೆ ಪೊಲೀಸರು

Posted by Vidyamaana on 2024-02-03 11:15:11 |

Share: | | | | |


ಕೊಳ್ತಿಗೆ : ಹಾಡಹಗಲೇ ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿದ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇಧಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.


ಪುತ್ತೂರು ನರಿಮೊಗರು ನಿವಾಸಿ ನೌಶಾದ್ ಬಿ.ಎ., ಕೇರಳ ನಿವಾಸಿ ಚಂದ್ರಮೋಹನ್ ಬಂಧಿತರು.



ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜ.11 ರಂದು ಮಧ್ಯಾಹ್ನ ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ. ಕ್ರ 08/2024 ಕಲಂ 392 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಶೀಘ್ರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಸದ್ರಿ ತನಿಖಾ ತಂಡವು ಪ್ರಕರಣದ ತನಿಖೆ ನಡೆಸಿ, ನೌಶಾದ್ ಬಿ ಎ (36) ಮತ್ತು ಸುಲಿಗೆಗೆ ಸಹಕರಿಸಿದ ಕಾಸರಗೋಡು ಉದ್ಯಾವರ ನಿವಾಸಿ ಚಂದ್ರಮೋಹನ್ (42) ಎಂಬವರುಗಳನ್ನು ವಶಕ್ಕೆ ಪಡೆದಿದ್ದಾರೆ.


ಸದ್ರಿ ಆರೋಪಿಗಳಿಂದ ರೂ 80,000/- ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ರೂ 1,00,000/- ಮೌಲ್ಯದ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.


ಸದ್ರಿ ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ. ಬಿ ರಿಷ್ಯಂತ್ ಐ ಪಿ ಎಸ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಕೆ ಎಸ್ ಪಿ ಎಸ್ ಮತ್ತು ರಾಜೇಂದ್ರ ಕೆಎಸ್‌ಪಿಎಸ್ ರವರುಗಳ ಮುಂದಾಳತ್ವದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ನೇತೃತ್ವದಲ್ಲಿ, ಸುಳ್ಯ ವೃತ್ತ ನಿರೀಕ್ಷಕರಾದ ಮೋಹನ್ ಕೊಠಾರಿ , ಬೆಳ್ಳಾರೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರುಗಳಾದ ಸಂತೋಷ್ ಬಿ.ಪಿ ಮತ್ತು ಅಶೋಕ್ ಸಿಎಂ ರವರ ಎರಡು ವಿಶೇಷ ತನಿಖಾ ತಂಡಗಳು ಕಾರ್ಯಾಚರಿಸಿರುತ್ತದೆ.


ಸದ್ರಿ ತನಿಖಾ ತಂಡದಲ್ಲಿ ಎ ಎಸ್ ಐ ದಾಮೋದರ ನಾಯ್ಕ, ಸಿಬ್ಬಂದಿಗಳಾದ ನವೀನ್ ಕಟ್ಟತ್ತಾರು , ಸತೀಶ್ ಬಿ, ಕೃಷ್ಣಪ್ಪ, ಚಂದ್ರಶೇಖರಗೌಡ, ಚಂದ್ರಶೇಖರ ಗೆಜ್ಜಳ್ಳಿ, ಮಂಜುನಾಥ, ಚೇತನ, ಪ್ರವೀಣ ಬಾರ್ಕಿ, ಸಂತೋಷ ಕೆ ಜಿ, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ, ಸಂಪತ್ ರವರುಗಳು ಕಾರ್ಯನಿರ್ವಹಿಸಿರುತ್ತಾರೆ.


ಸದ್ರಿ ತನಿಖಾ ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದು, ಸಾರ್ವಜನಿಕ ವಲಯದಲ್ಲಿಯೂ ಪ್ರಶಂಸೆಯನ್ನು ವ್ಯಕ್ತವಾಗಿದೆ.

ಕಾರ್ಕಳ | ನಕಲಿ ಪರಶುರಾಮ ಮೂರ್ತಿ: ಪ್ರಕರಣ ದಾಖಲು

Posted by Vidyamaana on 2024-06-23 17:28:15 |

Share: | | | | |


ಕಾರ್ಕಳ | ನಕಲಿ ಪರಶುರಾಮ ಮೂರ್ತಿ: ಪ್ರಕರಣ ದಾಖಲು

ಕಾರ್ಕಳ : ತಾಲ್ಲೂಕಿನ ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ ಮೂರ್ತಿ ಮಾಡಿ ಕೊಡಲು ₹1.25 ಕೋಟಿ ಪಡೆದು, ನಕಲಿ ಮೂರ್ತಿಯನ್ನು ಮಾಡಿ ಕೊಟ್ಟು ಮೋಸ ಮಾಡಿದ್ದಾರೆ ಎಂಬ ಆರೋಪದಲ್ಲಿ ಕೃಷ್ಣ ಆರ್ಟ್ ವರ್ಲ್ಡ್‌ನ ಕೃಷ್ಣ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕುಮಾರಧಾರೆಯ ಒಡಲಿಂದ ಅಕ್ರಮ ಮರಳು ತೆಗದು ಸಾಗಾಟದ ಆರೋಪ

Posted by Vidyamaana on 2024-05-11 22:37:29 |

Share: | | | | |


ಕುಮಾರಧಾರೆಯ ಒಡಲಿಂದ ಅಕ್ರಮ ಮರಳು ತೆಗದು ಸಾಗಾಟದ ಆರೋಪ

ಕಾಣಿಯೂರು: ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಟಿಪ್ಪರ್‌ಗಳಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ವಿವಿಧ ಕಡೆಗಳಲ್ಲಿ ಪತ್ತೆ ಮಾಡಿರುವ ಬೆಳ್ಳಾರೆ ಪೊಲೀಸರು ಈ ಸಂಬಂಧ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು 70 ಲಕ್ಷ ರೂ.ಮೌಲ್ಯದ 6 ಟಿಪ್ಪರ್, 1 ಇಟಾಚಿ ಮತ್ತು 60 ಸಾವಿರ ರೂ.ಮೌಲ್ಯದ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.



BREAKING: ಬಿಜೆಪಿ ವಿರುದ್ಧ ಅಪಪ್ರಚಾರ:ರಾಹುಲ್‌ಗಾಂಧಿ ಗೆ ಜಾಮೀನು ಮಂಜೂರು...

Posted by Vidyamaana on 2024-06-07 11:19:08 |

Share: | | | | |


BREAKING: ಬಿಜೆಪಿ ವಿರುದ್ಧ ಅಪಪ್ರಚಾರ:ರಾಹುಲ್‌ಗಾಂಧಿ ಗೆ ಜಾಮೀನು ಮಂಜೂರು...

ಬೆಂಗಳೂರು  : ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿಗೆ ಜಾಮೂನು ಮಂಜೂರಾಗಿದೆ. 

2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ವಿರುದ್ಧ ಶೇಕಡಾ 40 ಕಮಿಷನ್ ಮಾಡಿದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಮುಂದೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದರು

ನಕ್ಷಲ್ ಬಾಧಿತ ಕುತ್ಲೂರಿನಲ್ಲಿ ರಾತ್ರೋ ರಾತ್ರಿ ಮನೆ ಬಾಗಿಲು ಬಡಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್

Posted by Vidyamaana on 2023-11-22 22:05:09 |

Share: | | | | |


ನಕ್ಷಲ್ ಬಾಧಿತ ಕುತ್ಲೂರಿನಲ್ಲಿ ರಾತ್ರೋ ರಾತ್ರಿ ಮನೆ ಬಾಗಿಲು ಬಡಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್


ಬೆಳ್ತಂಗಡಿ : ನಕ್ಸಲ್ ಪೀಡಿತ ಪ್ರದೇಶದಲ್ಲಿ ರಾತ್ರಿ ಐದು ಜ‌ನ ಅಪರಿಚಿತರ ತಂಡವೊಂದು ಬಾಗಿಲು ಬಡಿದು ವಿಚಾರಿಸಿರುವ ಘಟನೆ ನ. 21 ರಂದು ರಾತ್ರಿ ಕುತ್ಲೂರಿನಲ್ಲಿ ನಡೆದಿರುವ ಘಟನೆಗೆ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಮನೆಗೆ ಬಂದಿರುವುದು ನಕ್ಸಲ್ ಅಲ್ಲ ವಂಚನೆ ಪ್ರಕರಣದಲ್ಲಿ ಹಗಲು ಹೊತ್ತು ಜೋಸಿ ಆಂಟೋನಿ ಸಿಕ್ಕಿಲ್ಲ ಎಂದು ರಾತ್ರಿ ಹೊತ್ತು ಮಂಗಳೂರು ಕಮೀಷನರ್ ರೇಟ್ ವ್ಯಾಪ್ತಿಯ ಮೂಡಬಿದರೆ ಪೊಲೀಸ್ ಠಾಣೆಯ ಪೊಲೀಸರು ಹೋಗಿದ್ದರು ಈ ಬಗ್ಗೆ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಇರಲ್ಲಿಲ್ಲ ಎಂದು ‌ನ.22 ರಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್ ಸ್ವಷ್ಟಪಡಿಸಿದ್ದಾರೆ.


 

*ಘಟನೆ ವಿವರ:* ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಪೂಂಕಾಜೆ ಮನೆಗೆ ನ.21 ರಂದು ರಾತ್ರಿ ಅಪರಿಚಿತರ ಐದು ಜನರ ತಂಡವೊಂದು ಎಂಟ್ರಿಯಾಗಿ ಬಾಗಿಲು ಓಪನ್ ಮಾಡಲು ಪ್ರಯತ್ನ ಪಟ್ಟಿದ್ದು ಬಾಗಿಲು ತೆರೆಯದೆ ಇದ್ದಾಗ ರಾಡ್ ನಿಂದ ಬಾಗಿಲು ತೆರೆಯಲು ಬಡಿದ್ದಾರೆ ತಕ್ಷಣ 112 ಕಂಟ್ರೋಲ್ ರೂಂ ಹಾಗೂ ವೇಣೂರು ಪೊಲೀಸರಿಗೆ ಮಾಹಿತಿ ನೀಡಿದ್ದರು‌. ನಂತರ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ,ವೇಣೂರು ಪೊಲೀಸರು, 112 ಸಿಬ್ಬಂದಿಗಳು ಮನೆಗೆ ದೌಡಾಯಿಸಿ ಮಾಹಿತಿ ಪಡೆದುಕೊಂಡು ಹೋಗಿದ್ದರು.


*ಪೊಲೀಸರ ಬಗ್ಗೆ ನಾಟಕವಾಡಿದ್ದ ಜೋಸಿ:* ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ಪೂಂಜಾಜೆ ಮನೆಯ ನಿವಾಸಿ ಜೋಸಿ ಆಂಟೋನಿ ಮತ್ತು ಮಂಜುಳಾ ದಂಪತಿಗಳ ಮನೆಗೆ  ನ.21 ರಂದು ರಾತ್ರಿ 9:30 ರ ಸಮಯಕ್ಕೆ ಬ್ಲೂ ಬಣ್ಣದ ಡ್ರೆಸ್ ಹಾಕಿದ ನಾಲ್ಕು ಮಂದಿ ಪುರುಷರು ಮತ್ತು ಪೊಲೀಸ್ ಡ್ರೆಸ್ ಹಾಕಿದ ಒಬ್ಬರು ಮಹಿಳೆ ಮನೆಗೆ ಎಂಟ್ರಿಯಾಗಿ ಬಾಗಿಲು ಬಡಿದ್ದಾರೆ. ಯಾರು ಅಂತ ಕೇಳಿದಾಗ ವೇಣೂರು ಪೊಲೀಸರು ಜೋಸಿ ಬಾಗಿಲು ತೆಗೆಯಿರಿ ಮಾತನಾಡಲು ಇದೆ ಅಂದಿದ್ದಾರೆ‌. ಆದ್ರೆ ದಂಪತಿಗಳು ಬಾಗಿಲು ತೆಗೆಯದೆ ವೇಣೂರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ ಆಗ ವೇಣೂರು ಪೊಲೀಸರು ನಮ್ಮ ಪೊಲೀಸರು ಬಂದಿಲ್ಲ ಎಂದಿದ್ದಾರೆ. ತಕ್ಷಣ 112 ಕಂಟ್ರೋಲ್ ರೂಂಗೆ ಕರೆ ಮಾಹಿತಿ ವಿಚಾರ ತಿಳಿಸಿದ್ದಾರೆ‌. ಕರೆ ಮಾಡುವ ಬಗ್ಗೆ ಐದು ಜನರಿಗೆ ಕೇಳಿಸಿದ್ದು. ತಕ್ಷಣ ಸ್ಥಳದಿಂದ ವಾಪಸ್ ಹೋಗಿದ್ದಾರೆ ನಂತರ 112 ಸಿಬ್ಬಂದಿಗಳು ,ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡ ಹಾಗೂ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಶೈಲಾ ಮತ್ತು ತಂಡದ ಪೊಲೀಸರು ಮನೆಗೆ ಬಂದು ಮಾಹಿತಿ ಪಡೆದುಕೊಂಡು ರಾತ್ರಿ 2 ಗಂಟೆಗೆ ವಾಪಸ್ ಹೋಗಿದ್ದಾರೆ. ಐದು ಜನ ಮನೆಗೆ ಬಂದವರು ಪೊಲೀಸ್ ರೀತಿಯಲ್ಲಿ ಇರಲ್ಲಿಲ್ಲ ನಮಗೆ ಅನುಮಾನ ಇದೆ ಈ ಐದು ಜನರ ವಿಚಾರದಲ್ಲಿ ,ಅದಲ್ಲದೆ ನಕ್ಸಲ್ ಬಂದಿರುವ ಅನುಮಾನ ಕೂಡ ಇದೆ ಎಂದು ಮನೆಯ ಯಜಮಾನ ಜೋಸಿ ಆಂಟೋನಿ ಸುಳ್ಳು ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದರು. 


*ಜಾಗದ ವಿಚಾರದಲ್ಲಿ ದೂರು ಅರ್ಜಿ:* ಜೋಸಿ ಆಂಟೋನಿ ಒಂದೇ ಜಾಗವನ್ನು ಬೆಂಗಳೂರಿನ ಸುಹನಾ ಎಂಬವರು 45 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿದ್ದು ಇದರಲ್ಲಿ 24 ಲಕ್ಷ ಚೆಕ್ ನೀಡಿದ್ದರು ಹಾಗೂ ಬೆಂಗಳೂರಿನ ಶರತ್ ಎಂಬವರಿಗೆ 48 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿ 19 ಲಕ್ಷದ ಚೆಕ್ ನೀಡಿದ್ದರು ಇಬ್ಬರಿಗೂ ಜೋಸಿ ಆಂಟೋನಿ ವಂಚನೆ ಮಾಡಿದ್ದ ಈ ಪ್ರಕರಣದ ಬಗ್ಗೆ ಎರಡು ನೊಂದ ವ್ಯಕ್ತಿಗಳು ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಗೆ ದೂರು ಅರ್ಜಿ ನೀಡಿದ್ದರು ಈ ಸಂಬಂಧ  ಕಳ್ಳಾಟ ಮಾಡಿದ್ದರಿಂದ ತಪ್ಪಿಸಿಕೊಳ್ಳಲು ಮೂಡಬಿದರೆ ಪೊಲೀಸರನ್ನು ನಕ್ಸಲರು ಎಂದು ಬಿಂಬಿಸಿ ವೇಣೂರು, 112 ಪೊಲೀಸರಿಗೆ ಕರೆ ಮಾಡಿ ನಾಟಕವಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಪ್ರಕರಣದ ಬಗ್ಗೆ ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಕೂಡ ಸ್ವಷ್ಟಪಡಿಸಿದ್ದಾರೆ‌.

ಇಂದಿನಿಂದ ಬೆಂಗಳೂರು ಕಂಬಳ

Posted by Vidyamaana on 2023-11-25 08:52:02 |

Share: | | | | |


ಇಂದಿನಿಂದ ಬೆಂಗಳೂರು ಕಂಬಳ

ಬೆಂಗಳೂರು:ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಐತಿಹಾಸಿಕ ಕಂಬಳ ಕೂಟಕ್ಕೆ ಬೆಂಗಳೂರು ಸಜ್ಜಾಗಿದೆ.

ನಗರದ ಅರಮನೆ ಮೈದಾನದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಕಂಬಳ ನಡೆಯಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಬಂದಿರುವ 180ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳದ ಕರೆಯಲ್ಲಿ ಓಟದ ರಸದೂಟ ಉಣಿಸಲಿವೆ. ಬೆಂಗಳೂರು ಕಂಬಳವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಜನತೆ ಕಾತುರರಾಗಿದ್ದಾರೆ.

ಅರಮನೆ ಮೈದಾನದ ಗೇಟ್‌ ನಂ. 5ರೊಳಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಕರಾವಳಿಯ ಸೊಗಡು ಕಣ್ತುಂಬುತ್ತಿದೆ. ಅಲಂಕಾರಗೊಂಡಿರುವ ಮೂರು ಬೃಹತ್‌ ವೇದಿಕೆಗಳ ಮೂಲಕ ಕಂಬಳಪ್ರಿಯರಿಗೆ ರಸದೌತಣ ನೀಡಲು ಬೆಂಗಳೂರು ಕಂಬಳದ ಕರೆ ಸಜ್ಜಾಗಿದೆ.



Leave a Comment: