ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ನನ್ನ ಮಗನೆಲ್ಲಿ– ಹೆಣಗಳ ರಾಶಿಗಳ ನಡುವೆ ಮಗನನ್ನು ಹುಡುಕುತ್ತಿರುವ ತಂದೆ

Posted by Vidyamaana on 2023-06-04 05:11:56 |

Share: | | | | |


ನನ್ನ ಮಗನೆಲ್ಲಿ– ಹೆಣಗಳ ರಾಶಿಗಳ ನಡುವೆ ಮಗನನ್ನು ಹುಡುಕುತ್ತಿರುವ ತಂದೆ

         ದಶಕದ ಭೀಕರ ರೈಲು ದುರಂತಗಳಲ್ಲೇ ಒಂದು ಎಂದು ಹೇಳಲಾಗುತ್ತಿರುವ ಒಡಿಶಾ ತ್ರಿವಳಿ ರೈಲು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿದು ಸರಿಸುಮಾರು 300 ಜೀವಗಳು ಅಪಘಾತಕ್ಕೆ ಬಲಿಯಾಗಿ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಕಹಿ ಘಟನೆಯ ಬೆನ್ನಲ್ಲೇ ಇದೀಗ ಮೃತಪಟ್ಟ ಪ್ರಯಾಣಿಕರ ಕುಟುಂಬಸ್ಥರು ತಮ್ಮವರ ಶವಗಳನ್ನು ಹುಡುಕಲು ಒದ್ದಾಡುತ್ತಿರುವ ಒಂದೊಂದೇ ಘಟನೆಗಳು ಹೊರಜಗತ್ತಿಗೆ ಅನಾವರಣಗೊಳ್ಳುತ್ತಿದೆ.

ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮಂಜಾದ ಕಣ್ಣಿನೊಂದಿಗೆ ಅಲ್ಲಿ ಸಾಲಾಗಿ ಮಲಗಿಸಿರುವ ನೂರಾರು ಹೆಣಗಳ ನಡುವೆ ತನ್ನ ಪುತ್ರನನ್ನು ಹುಡುಕುತ್ತಿರುವ ಈ ಬಡಪಾಯಿ ತಂದೆಯ ಸ್ಥಿತಿಯನ್ನು ಹೊರಜಗತ್ತಿಗೆ ಅನಾವರಣಗೊಳಿಸಿರುವ ವಿಡಿಯೋ ಒಂದು ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ನೋಡುಗರ ಕಣ್ಣಂಚಿನಲ್ಲೂ ನೀರುತರಿಸುವಂತಿದೆ.

ನಾವು ಚಿಕ್ಕವರಿದ್ದಾಗ ಚಿಕ್ಕ ವಸ್ತುಗಳನ್ನು ಮನೆಯಲ್ಲಿ ಕಳೆದುಕೊಂಡಾಗ ಇಡೀ ಮನೆಯನ್ನೇ ಹುಡುಕುವಂತೆ, ಯಾವುದೋ ಶುಭ ಸಮಾರಂಭಗಳಿಗೆ ಹೊರಟು ನಿಂತಾಗ ಬೀರುವಿನಿಂದ ಬಟ್ಟೆಯನ್ನು ಕಿತ್ತು ಕೆಳಗೆ ಹಾಕುವಂತೆ ಈ ತಂದೆಯೊಬ್ಬರು ಶವದ ರಾಶಿಯಲ್ಲಿ ತನ್ನ ಮಗನಿದ್ದಾನೆಯೇ ಎಂದು ಹುಡುಕಾಡುತ್ತಿರುವುದರ ಹಿಂದಿನ ಕಾತರ, ಉದ್ವೇಗ, ನೋವು ಆ ತಂದೆಗೆ ಮಾತ್ರ ತಿಳಿದಿರಲು ಸಾಧ್ಯ!

ಒಡಿಶಾದಲ್ಲಿ ರೈಲು ಅಪಘಾತದಿಂದ ಪ್ರಾಣ ಕಳೆದುಕೊಂಡ ತನ್ನ ಮಗನ ಮೃತದೇಹವನ್ನು ಈ ತಂದೆ ಶವಗಳಿಗೆ ಮುಚ್ಚಿದ ಮುಸುಕು ತೆಗೆದು ತೆಗೆದು ಹುಡುಕಿತ್ತಿದ್ದಾರೆ. ಈ ರೀತಿಯ ಸಾವು-ನೋವಿನ ಅನುಭವ ಯಾರಿಗೂ ಆಗುವುದು ಬೇಡ ಎಂದು ಹೇಳುವುದು ಸುಲಭ ಆದರೆ ಇಂತಹ ದುರಂತಗಳಾದ ಸಂದರ್ಭದಲ್ಲಿ ಸಂತ್ರಸ್ತರ ರಕ್ತ ಸಂಬಂಧಿಗಳು ಪಡುವ ಪಾಡು ಆ ದೇವರಿಗೇ ಪ್ರೀತಿ! ಆ ತಂದೆ ಮಗ ಕನಿಷ್ಠ ಗಾಳುವಾಗಿ ಬದುಕಿರಲಿ ಮತ್ತು ಶವಾಗಾರದ ಬದಲು ಆಸ್ಪತ್ರೆಯ ಬೆಡ್ ಮೇಲೆ ಈ ತಂದೆ ತನ್ನ ಮಗನನ್ನು ಭೆಟಿಯಾಗುವಂತಾಗಲಿ ಎಂಬುದಷ್ಟೇ ನಾವೀ ಸಂದರ್ಭದಲ್ಲಿ ಮಾಡಬಹುದಾದ ಹಾರೈಕೆ.

ಸುಳ್ಯ ಪೈಚಾರ ನಿವಾಸಿ ಇಸಾಕ್ ನೇಣು ಬಿಗಿದು ಆತ್ಮಹತ್ಯೆ

Posted by Vidyamaana on 2024-03-04 14:42:34 |

Share: | | | | |


ಸುಳ್ಯ ಪೈಚಾರ ನಿವಾಸಿ ಇಸಾಕ್  ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ಇಲ್ಲಿನ ಜೂನಿಯರ್ ಕಾಲೇಜು ರಸ್ತೆ ಬಳಿ ಇರುವ ಸದರ್ನ್ ರೆಸಿಡೆನ್ಸಿಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾ :04 ರಂದು ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ  ಪೈಚಾರ್‌ ಮೂಲದ ನಿವಾಸಿ ಲಾರಿ ಚಾಲಕ ಇಸಾಕ್ ಎಂದು ಗುರುತಿಸಲಾಗಿದೆ.   ಮಾ ೨ ರಂದು ರೆಸಿಡೆನ್ಸಿಗೆ ಬಂದಿದ್ದರು. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತಿಯಾಗಿ ಸೆಕ್ಸ್​​ಗೆ ಒತ್ತಾಯಿಸಿದಕ್ಕೆ ಇನ್​​ಸ್ಟಾ ಗೆಳತಿ ಕಥೆಯನ್ನೇ ಮುಗಿಸಿದ್ದ ಆರೋಪಿ ನವೀನ್ ಅರೆಸ್ಟ್

Posted by Vidyamaana on 2024-04-23 15:24:20 |

Share: | | | | |


ಅತಿಯಾಗಿ ಸೆಕ್ಸ್​​ಗೆ ಒತ್ತಾಯಿಸಿದಕ್ಕೆ ಇನ್​​ಸ್ಟಾ ಗೆಳತಿ ಕಥೆಯನ್ನೇ ಮುಗಿಸಿದ್ದ ಆರೋಪಿ ನವೀನ್ ಅರೆಸ್ಟ್

ಬೆಂಗಳೂರು : ರಾಜಧಾನಿ ಬೆಂಗಳೂರಿನ (Bengaluru) ಕೊಡಿಗೇಹಳ್ಳಿ ಒಂಟಿ ಮಹಿಳೆ (Single Women) ಹತ್ಯೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದ್ದು, ಮನೆಯಲ್ಲೇ ಮಹಿಳೆಯನ್ನು ಕೊಲೆ ಮಾಡಿ (Murder Case) ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು (Kodigenahalli Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೇರೋಹಳ್ಳಿ ಮೂಲದ ನವೀನ್ ಬಂಧಿತ ಆರೋಪಿಯಾಗಿದ್ದು, ಏಪ್ರಿಲ್ 19ನೇ ತಾರೀಖು 48 ವರ್ಷದ ಶೋಭಾ ಎಂಬ ಮಹಿಳೆಯ ಮೃತದೇಹ ನಗ್ನಸ್ಥಿತಿಯಲ್ಲಿ ಪತ್ತೆಯಾಗಿತ್ತು.


ಆರೋಪಿ ನವೀನ್​​ ಸಾಮಾಜಿಕ ಜಾಲತಾಣ ಇನ್​​ಸ್ಟಾದಲ್ಲಿ ಮೃತ ಮಹಿಳೆ ಶೋಭಾರನ್ನು ಪರಿಚಯ ಮಾಡಿಕೊಂಡಿದ್ದನಂತೆ. ಇಬ್ಬರ ನಡುವಿನ ಸ್ನೇಹ ಕೆಲ ದಿನಗಳ ಬಳಿಕ ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಕೊಲೆ ನಡೆದ ದಿನವೂ ಮಹಿಳೆ ಮನೆಗೆ ನವೀನ್​ ಬಂದಿದ್ದನಂತೆ. ಈ ವೇಳೆ ಅತಿಯಾಗಿ ಸೆಕ್ಸ್ ಗೆ ಒತ್ತಾಯಿಸುತ್ತಿದ್ದರಿಂದ ಬೇಸರಗೊಂಡು ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಪುತ್ತೂರು: ಅಕ್ರಮ ಗೋಸಾಟ – ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು. ನೂತನ ಕಾಯ್ದೆಯಂತೆ ಮೂವರ ವಿರುದ್ಧ ಪ್ರಕರಣ ದಾಖಲು

Posted by Vidyamaana on 2023-02-13 02:54:01 |

Share: | | | | |


ಪುತ್ತೂರು: ಅಕ್ರಮ ಗೋಸಾಟ – ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು.  ನೂತನ ಕಾಯ್ದೆಯಂತೆ ಮೂವರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಅಕ್ರಮ ಗೋ ಸಾಗಾಟವನ್ನು ತಡೆದ ಹಿಂದೂ ಕಾರ್ಯಕರ್ತರು ಜಾನುವಾರುಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ಕರ್ನಾಟಕ ಕೇರಳ ಗಡಿಭಾಗದ ಆರ್ಲಪದವಿನಲ್ಲಿ ನಡೆದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ (Arun Kumar Putthila) ನೂತನ ಕಾಯ್ದೆಯಂತೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ನೂತನ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಕೇರಳ ನೊಂದಾಣಿಯ ವಾಹನದಲ್ಲಿ ದನ ಹಾಗೂ ಗಂಡು ಕರುವನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ.

ಕಾರ್ಯಕರ್ತರು ಈ ಬಗ್ಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಪಂದಿಸಿದ ಅರುಣ್ ಕುಮಾರ್ ಪುತ್ತಿಲ ರವರು ಸ್ಥಳಕ್ಕೆ ಆಗಮಿಸಿ ಪೊಲೀಸರೊಂದಿಗೆ ಮಾತುಕತೆ ನಡೆಸಿ, ದನಗಳನ್ನು ಪೊಲೀಸರಿಗೊಪ್ಪಿಸಿದ್ದು, ಮುಂದೆ ಈ ಸ್ಥಳದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.ದನ ಸಾಗಾಟದ ಬಗ್ಗೆ ನರಿಮೊಗರು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನೀಡಲಾದ ಒಪ್ಪಿಗೆ ಪತ್ರವೊಂದಿದ್ದು ಜಾನುವಾರುಗಳನ್ನು ಸಾಕಲು ತೆಗೆದುಕೊಂಡು ಹೋಗುವುದಾದರೆ ಪಶು ವೈದ್ಯರ ಸಹಿ ಆಗಬೇಕಿತ್ತು. ಆದರೇ ಅಕ್ರಮ ಗೋ ಸಾಗಾಟಕ್ಕೆ ಕುಮ್ಮಕ್ಕು ನೀಡಲು ನರಿಮೊಗರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಕೃಷ್ಣರಾಜ್ ಎಂಬವರು ಪರ್ಮಿಷನ್ ಕೊಟ್ಟು ಅಧಿಕಾರದ ದುರುಪಯೋಗ ಮಾಡಿರುವುದಾಗಿ ಹಾಗೂ ಗೋ ಹತ್ಯೆಗೆ ಪ್ರಚೋದನೆ ಕೊಟ್ಟದಕ್ಕಾಗಿ ಅವರ ಮೇಲೆ ಎಫ್.ಐ.ಆರ್ ಮಾಡಬೇಕು ಎಂದು ಸಾರ್ವಜನಿಕರು ಮತ್ತು ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಪ್ರಕರಣ ದಾಖಲು: ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ನೆಲ್ಲಿತ್ತಿಮಾರ್ ಎಂಬಲ್ಲಿ ಅಶೋಕ್‌ ಲೇಲ್ಯಾಂಡ್‌ ಮಿನಿ ಗೂಡ್ಸ್‌ ವಾಹನವೊಂದರಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಪುತ್ತೂರು ಗ್ರಾಮಾಂತರ ಠಾಣಾ ಸಬ್ ಇನ್ಸ್ ಪೆಕ್ಟರ್ ಶ್ರೀನಾಥ ರೆಡ್ಡಿ ನೇತೃತ್ವದ ತಂಡ ಪರಿಶೀಲಿಸಲಾಗಿ ಜಾನುವಾರು ಸಾಗಾಟಕ್ಕೆ ಯಾವುದೇ ಪರವಾನಿಗೆ ಅಥವಾ ಪಶು ವೈದ್ಯಾಧಿಕಾರಿಯವರ ಪ್ರಮಾಣಪತ್ರ ಇಲ್ಲದೇ ಒಂದು ಹಸು ಮತ್ತು ಒಂದು ಗಂಡು ಕರುವನ್ನು ಸಾಗಿಸುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಕೃತ್ಯದಲ್ಲಿ ತೊಡಗಿದ್ದ ವಿಲ್ಲಿ ಲೂಯಿಸ್ ಡಿ ಸೋಜಾ, ಸಂತೋಷ್ ಡಿ ಸೋಜಾ, ಸಿಲ್ವೆಸ್ಟರ್ ಡಿ ಸೋಜಾ ಎಂಬವರುಗಳನ್ನು ದಸ್ತಗಿರಿ ಮಾಡಿ, ಸದ್ರಿ ವಾಹನ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 013-2023 ಕಲಂ:- 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ಯಂತೆ ಪ್ರಕರಣ ದಾಖಲಿಸಲಾಗಿದೆ.

ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Posted by Vidyamaana on 2023-09-08 11:45:10 |

Share: | | | | |


ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

ದೆಹಲಿ: ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದ್ದು ಅ೦ದಾಜು 83.14 ರು. ಆಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ ಹಾಗೂ ಅಮೆರಿಕದ ಡಾಲರ್ ಕರೆನ್ಸಿ ಬಲಿಷ್ಠಗೊಂಡಿದ್ದುದೇ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವೆನ್ನಲಾಗಿದೆ. ಅಮೆರಿಕ ಡಾಲರ್ ಎದುರು ರುಪಾಯಿ ಮೌಲ್ಯವು ಗುರುವಾರದ ಆರು ತಿಂಗಳುಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ವಿದೇಶಿ ವಿನಿಮಯಫಾರೆಕ್ಸ್) ವರ್ತಕರು ಹೇಳಿದ್ದಾರೆ. ದಿನದ ವಹಿವಾಟಿನ ಆರಂಭದಲ್ಲಿ ಅಂತ‌ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ರುಪಾಯಿ ಕರೆನ್ಸಿಯು 83.08ಕ್ಕೆ ಆಗಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 83.18ಕ್ಕೆ ಕುಸಿಯಿತು ಎಂದು ಫಾರೆಕ್ಸ್ ಮೂಲಗಳು ತಿಳಿಸಿವೆ. ಭಾರತೀಯ ಕರೆನ್ಸಿಯು ಈ ವರ್ಷದ ಆಗಸ್ಟ್ 21ರಂದು 83.13 ರು. ಆಗಿದ್ದುಅದು ಈವರ್ಷದ ಅತ್ಯಧಿಕ ಕುಸಿತವಾಗಿತ್ತು

ಗೋಡಂಬಿ ಅಸಲಿಯೋ ನಕಲಿಯೋ ತಿಳಿಯಲು ಹೀಗೆ ಮಾಡಿ

Posted by Vidyamaana on 2024-02-19 17:01:13 |

Share: | | | | |


ಗೋಡಂಬಿ ಅಸಲಿಯೋ ನಕಲಿಯೋ ತಿಳಿಯಲು ಹೀಗೆ ಮಾಡಿ

      ಪೋಷಕಾಂಶಗಳಿಂದ ಕೂಡಿರುವ ಡ್ರೈ ಫ್ರೂಟ್ಸ್‌ಗಳಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಿದೆ. ಡ್ರೈ ಪ್ರೂಟ್ಸ್‌ಗಳಲ್ಲಿ ಗೋಡಂಬಿ ಎಂದರೆ ಬಹಳಷ್ಟು ಜನರು ಇಷ್ಟ ಪಟ್ಟು ತಿನ್ನುತ್ತಾರೆ.ಕ್ಯಾಶ್ಯೂ, ಕಾಜು ಎಂದೆಲ್ಲಾ ಕರೆಯುವ ಗೋಡಂಬಿಯನ್ನು ಬೆಳಗ್ಗಿನ ತಿಂಡಿಯಲ್ಲಿ, ಸಂಜೆಯ ಸ್ನಾಕ್ಸ್‌ನಲ್ಲಿ ತಿನ್ನುವವರಿದ್ದಾರೆ.ಫುಲಾವ್‌, ಘೀ ರೈಸ್‌ಗಳಲ್ಲಿ ಸೇರಿಸುತ್ತಾರೆ. ನೀವು ಗೋಡಂಬಿಯನ್ನು ಖರೀದಿಸಲು ಅಂಗಡಿಗೆ ಹೋದರೆ ಅಲ್ಲಿ ಹಲವಾರು ಬಗೆಯ ಉತ್ಪನ್ನಗಳನ್ನು ಕಾಣಬಹುದು. ಕಲಬೆರಕೆಯ ಯುಗದಲ್ಲಿ ಗೋಡಂಬಿಗೂ ಅದರ ಪ್ರಭಾವ ಬೀರಿದೆ.


ನೀವು ಖರೀದಿಸುವ ಗೋಡಂಬಿ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯುವುದಾದರೂ ಹೇಗೆ? ಈ ಗೊಂದಲ ನಿಮ್ಮಲ್ಲಿದ್ದರೆ ಅದಕ್ಕೆ ಸುಲಭದ ಮಾರ್ಗಗಳಿವೆ. ಉತ್ತಮ ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆಯೋ ಅದೇ ರೀತಿ ನಕಲಿ ಗೋಡಂಬಿ ತಿನ್ನುವುದರಿಂದ ಆರೋಗ್ಯದ ಮೇಲೆ ಅಷ್ಟೇ ಕೆಟ್ಟ ಪರಿಣಾಮವಾಗುತ್ತದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಗೋಡಂಬಿ ಸಿಗುತ್ತದೆ ಎಂದು ಖರೀದಿಸಿ ತಂದರೆ ಅದರಿಂದ ತೊಂದರೆ ತಪ್ಪಿದ್ದಲ್ಲ. ಗೋಡಂಬಿಯ ಶುದ್ಧತೆಯನ್ನು ಗುರುತಿಸುವುದು ಹೇಗೆ? ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಅದರ ಮುಖಾಂತರ ನೀವು ಖರೀದಿಸಿ ತಂದ ಗೋಡಂಬಿ ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ನೀವೇ ಸುಲಭವಾಗಿ ಪರೀಕ್ಷಿಸಬಹುದು.

ಗೋಡಂಬಿಯನ್ನು ಈ ರೀತಿಯಾಗಿ ಪರೀಕ್ಷಿಸಿ

1) ಬಣ್ಣದಿಂದ ಗುರುತಿಸಿ

ಗೋಡಂಬಿಯನ್ನು ಸಾಮಾನ್ಯವಾಗಿ ಬಣ್ಣದಿಂದಲೇ ಗುರುತಿಸಬಹುದು. ನಮಗೆ ತಿಳಿದಿರುವಂತೆ ಗೋಡಂಬಿಯ ಬಣ್ಣ ಸಂಪೂರ್ಣವಾಗಿ ಬಿಳಿಯಾಗಿರುತ್ತದೆ. ಆದರೆ ಅಶುದ್ಧ ಅಥವಾ ನಕಲಿ ಗೋಡಂಬಿಯು ತಿಳಿ ಹಳದಿ ಬಣ್ಣದಲ್ಲಿ ಕಾಣುತ್ತದೆ. ಹಾಗಾಗಿ ಅಂಗಡಿಗಳಲ್ಲಿ ಗೋಡಂಬಿ ಖರೀದಿಸುವಾಗ ಬಣ್ಣಕ್ಕೆ ಪ್ರಮುಖ್ಯತೆ ಕೊಡಿ. ಕೆಲವೊಮ್ಮೆ ಪ್ಯಾಕಿಂಗ್‌ ಮಾಡಿದ ಕವರ್‌ನ ಬಣ್ಣವನ್ನು ಗಮನಿಸಿ. ಯವಾಗಲೂ ಬಿಳಿ ಬಣ್ಣದ ಟ್ರಾನ್ಸಪರಂಟ್‌ ಕವರ್‌ನಲ್ಲಿರುವ ಗೋಡಂಬಿ ಖರೀದಿಸಿ.


2) ಗುಣಮಟ್ಟ ಪರಿಶೀಲಿಸಿ

ನೀವು ಗೋಡಂಬಿಯನ್ನು ಅದರ ಗುಣಮಟ್ಟದಿಂದ ಗುರುತಿಸಬಹುದು. ಶುದ್ಧ ಗೋಡಂಬಿ ಬೇಗ ಕೆಡುವುದಿಲ್ಲ. ಕಳಪೆ ಗುಣಮಟ್ಟದ ಗೋಡಂಬಿ ಬೇಗ ಕೆಡುತ್ತದೆ. ಮತ್ತು ಅವುಗಳಲ್ಲಿ ಹುಳುಗಳಾಗುತ್ತವೆ. ಆದ್ದರಿಂದ ಗೋಡಂಬಿ ಖರೀದಿಸುವ ಮೊದಲು ಅದರ ಗುಣಮಟ್ಟವನ್ನು ಪರಿಶೀಲಿಸಿ.

3) ಗೋಡಂಬಿಯ ಗಾತ್ರ ಪರೀಕ್ಷಿಸಿ

ಸಾಮಾನ್ಯವಾಗಿ ನಿಮಗೆ ನೋಡಿದ ತಕ್ಷಣ ತಿಳಿದು ಬಿಡುತ್ತದೆ. ಇದು ಉತ್ಕೃಷ್ಟ ಗುಣಮಟ್ಟದ ಗೋಡಂಬಿ ಹೌದೋ ಅಥವಾ ಅಲ್ಲವೋ ಎಂದು. ಏಕೆಂದರೆ ಅಸಲಿ ಗೋಡಂಬಿ ಸುಮಾರು 1 ಇಂಚಿನಷ್ಟು ಉದ್ದವಾಗಿರುತ್ತದೆ ಮತ್ತು ಸ್ವಲ್ಪ ದಪ್ಪದಾಗಿರುತ್ತದೆ. ನಕಲಿ ಗೋಡಂಬಿಯ ಗಾತ್ರ ಮತ್ತು ಆಕಾರದಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ. ಇದರಿಂದ ನೀವು ಸುಲಭವಾಗಿ ಕಂಡು ಹಿಡಿಯಬಹುದು.

4) ರುಚಿ ನೋಡಿ

ಅಸಲಿ ಗೋಡಂಬಿಗೂ ಮತ್ತು ನಕಲಿ ಗೋಡಂಬಿಗೂ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಅದು ನಿಮಗೆ ತಿಳಿಯುತ್ತದೆ. ಅಸಲಿ ಗೋಡಂಬಿಯನ್ನು ತಿನ್ನುವಾಗ ಅದು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳುವುದಿಲ್ಲ. ಅದೇ ನಕಲಿ ಗೋಡಂಬಿಯು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ.

ಗೋಡಂಬಿಯ ಪ್ರಯೋಜನಗಳು

* ಇದು ಹೃದಯದ ಆರೋಗ್ಯ ಕಾಪಾಡುತ್ತದೆ. ಆಂಟಿಆಕ್ಸಿಡೆಂಟ್‌, ಪೊಟ್ಯಾಸಿಯಂ ಮತ್ತು ಮ್ಯಾಗ್ನೇಸಿಯಂನಿಂದ ಕೂಡಿರುವ ಗೋಡಂಬಿ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.



Leave a Comment: