ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

Posted by Vidyamaana on 2023-06-02 03:15:32 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜೂನ್ 2ರಂದು ಮಧ್ಯಾಹ್ನದ‌ ಬಳಿಕ ಕುಡಿಯುವ ನೀರಿನ‌ ವಿಷಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ

ಮಧ್ಯಾಹ್ನ 3 ಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ.

ಸಂಜೆ 5.30ಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಸಭೆ.

ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ

Posted by Vidyamaana on 2023-12-27 13:57:43 |

Share: | | | | |


ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ

ಪುತ್ತೂರು: ರಾಜ್ಯದ ಎಂಟು ಉಪ ವಿಭಾಗಗಳಿಗೆ ನೂತನ ಸಹಾಯಕ ಆಯಕ್ತರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ದ.ಕ. ಜಿಲ್ಲೆಯ ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ,  ಕೊಡಗು ಜಿಲ್ಲೆಯ ಮಡಿಕೇರಿ ಉಪ ವಿಭಾಗದ ಸಹಾಯಕ ಆಯಕ್ತರಾಗಿ ನಾರ್ವಡೆ ವಿನಾಯಕ ಕರ್ಭರಿ ಅವರನ್ನು ನೇಮಕಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹೊಸದಾಗಿ ನೇಮಕಗೊಂಡ ಎಲ್ಲಾ ಎಂಟು ಸಹಾಯಕ ಆಯುಕ್ತರು 2021ನೇ ಬ್ಯಾಚ್ ನ ಐಎಎಸ್‌ ಅಧಿಕಾರಿಗಳಾಗಿದ್ದಾರೆ.

ಕುಂಬ್ರ ಬದ್ರಿಯಾ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Posted by Vidyamaana on 2023-08-15 14:44:58 |

Share: | | | | |


ಕುಂಬ್ರ ಬದ್ರಿಯಾ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪುತ್ತೂರು; ಕುಂಬ್ರ ಬದ್ರಿಯಾ ನಗರ ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಮದ್ರಸ ವಠಾರದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜಮಾತ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ದ್ವಜಾರೀಹಣಗೈದರು.‌ಖತೀಬರಾದ‌ ಇಸ್ಮಾಯಿಲ್ ಸ ಅದಿ ದುವಾ ನೆರವೇರಿಸಿದರು.‌ಜಮಾತ್ ಕಾರ್ಯದರ್ಶಿ ಅದ್ರಾಮ ಕೊಯಿಲ, ಕೋಶಾಧಿಕಾರಿ ಇಸ್ಮಾಯಿಲ್ ಬದ್ರಿಯಾನಗರ, ಜಮಾತ್ ಮಾಜಿ ಕಾರ್ಯದರ್ಶಿ ಇಸ್ಮಾಯಿಲ್ ಕೋಳಿಗದ್ದೆ, ಫಾರೂಕ್ ಮಗಿರೆ, ಆದು ಕೊಯಿಲ, ಸಿಎಂ‌ಅಬ್ದುಲ್ ರಹಿಮಾನ್, ರಝಾಕ್ ಆಟೋ ಸಾಂತಿಯಡಿ,ಸಿರಾಜ್ ಬದ್ರಿಯಾನಗರ ,ಸಾದಿಕ್ ಮಗಿರೆ ಮತ್ತಿತರರು ಉಪಸ್ಥಿತರಿದ್ದರು. ಉಸ್ತಾದ್ ಖಲೀಲ್ ಸ ಅದಿ ಸ್ವಾಗತಿಸಿ, ಮುಅಲ್ಲಿಂ ವಂದಿಸಿದರು.

ಮಂಗಳೂರು : ಪಶ್ಚಿಮ ವಲಯ ಡಿಐಜಿಯಾಗಿ ಅಮಿತ್ ಸಿಂಗ್ ಅಧಿಕಾರ ಸ್ವೀಕಾರ

Posted by Vidyamaana on 2024-01-01 21:35:09 |

Share: | | | | |


ಮಂಗಳೂರು : ಪಶ್ಚಿಮ ವಲಯ ಡಿಐಜಿಯಾಗಿ ಅಮಿತ್ ಸಿಂಗ್ ಅಧಿಕಾರ ಸ್ವೀಕಾರ

ಮಂಗಳೂರು: ಪಶ್ಚಿಮ ವಲಯ ಡಿಐಜಿಯಾಗಿ ಅಮಿತ್ ಸಿಂಗ್ ಅವರು ಇಂದು (ಸೋಮವಾರ) ಅಧಿಕಾರ ಸ್ವೀಕರಿಸಿದರು.ಈ ಕುರಿತು ಮಾತನಾಡಿದ ಅವರು ಡ್ರಗ್ಸ್, ಕೋಮುವಾದ ಸಹಿತ ಕಾನೂನು ಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ. ಸೈಬರ್ ಕ್ರೈಂ ಬಗ್ಗೆ ಯೂ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.ಈ ಮೊದಲು ಡಿಐಜಿಯಾಗಿದ್ದ ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆ ಗೊಂಡಿದ್ದಾರೆ.


ದಕ್ಷಿಣಕನ್ನಡ ಎಸ್ ಪಿಸಿಬಿ ರಿಷ್ಯಂತ್, ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಉಪಸ್ಥಿರಿದ್ದರು.

ವೈರತ್ವ ಮರೆತು ಪಾಕ್ ಆಟಗಾರರ ಜೊತೆ ಸುಂದರ ಕ್ಷಣಗಳನ್ನು ಕಳೆದ ಕೊಹ್ಲಿ; ವಿರಾಟ್ ನಡೆಗೆ ಅಭಿಮಾನಿಗಳು ಫಿದಾ

Posted by Vidyamaana on 2023-09-02 22:49:33 |

Share: | | | | |


ವೈರತ್ವ ಮರೆತು ಪಾಕ್ ಆಟಗಾರರ ಜೊತೆ ಸುಂದರ ಕ್ಷಣಗಳನ್ನು ಕಳೆದ ಕೊಹ್ಲಿ; ವಿರಾಟ್ ನಡೆಗೆ ಅಭಿಮಾನಿಗಳು ಫಿದಾ

   ಕ್ರಿಕೆಟ್ ಜಗತ್ತಿನ ಅತಿದೊಡ್ಡ ಕಾಳಗಕ್ಕೆ ಭಾರತ-ಪಾಕಿಸ್ತಾನ ತಂಡಗಳು (India vs Pakistan) ಸಜ್ಜಾಗಿವೆ. ಶ್ರೀಲಂಕಾದ ಪಲ್ಲೆಕೆಲೆ ಮೈದಾನವು ಬದ್ಧವೈರಿ ತಂಡಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ. 2022ರ ಟಿ20 ವಿಶ್ವಕಪ್ (T20 World Cup 2022) ನಂತರ ಮತ್ತೆ ಮುಖಾಮುಖಿಯಾಗುತ್ತಿರುವ ಉಭಯ ತಂಡಗಳ ಆಟಗಾರರು, ಮಹತ್ವದ ಪಂದ್ಯಕ್ಕೂ ಮುನ್ನ ಉಭಯ ಕುಶಲೋಪರಿ ವಿಚಾರಿಸಿ ಗಮನ ಸೆಳೆದರುಸೆಪ್ಟೆಂಬರ್ 1ರಂದು, ಶುಕ್ರವಾರ 2 ತಂಡಗಳು ಒಟ್ಟಿಗೆ ಅಭ್ಯಾಸ ನಡೆಸಿದ ವೇಳೆ ಈ ಅದ್ಭುತ ಕ್ಷಣಗಳು ಕಂಡುಬಂದವು.


ಒಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಮರವನ್ನೇ ಸಾರಿದ್ದರೆ, ಮತ್ತೊಂದೆಡೆ ಮೈದಾನದಲ್ಲಿ ಅಭಿಮಾನಿಗಳು ಕೆಲ ಸಮಯ ಕಳೆದು ತಮಾಷೆ ಮಾಡುತ್ತಿದ್ದ ಕ್ಷಣಗಳು ಎಲ್ಲರ ಮನಗೆದ್ದವು. ಅದರಲ್ಲೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಪಾಕ್ ಆಟಗಾರರೊಂದಿಗೆ ವೈರತ್ವ ಮರೆತು ನಗುನಗುತ್ತಾ, ತಮಾಷೆ ಮಾಡುತ್ತಾ, ಆತ್ಮಿಯತೆಯಿಂದ ಮಾತನಾಡುತ್ತಾ ಹೆಚ್ಚು ಸಮಯ ಕಳೆದರು. ಇದರ ವಿಡಿಯೋ, ಫೋಟೋಗಳು ಸಖತ್​ ವೈರಲ್ ಆಗುತ್ತಿವೆ.


ಸಿಕ್ಸರ್​ ಸಿಡಿಸಿದ್ದ ರವೂಫ್​​ಗೆ ಕೊಹ್ಲಿ ಅಪ್ಪುಗೆ


ಕಳೆದ ವರ್ಷ ನಡೆದ ಟಿ20 ವಿಶ್ವಕಪ್​ನಲ್ಲಿ ಗೆಲ್ಲಲೇಬೇಕಾದ ಒತ್ತಡದ ಸಮಯದಲ್ಲಿ ಕೊಹ್ಲಿ ಸಿಡಿಸಿದ್ದ ರೋಚಕ ಸಿಕ್ಸರ್​​ಗಳನ್ನು ಯಾರು ತಾನೆ ಮರೆಯುತ್ತಾರೆ ಹೇಳಿ. ಹ್ಯಾರಿಸ್ ರವೂಫ್ ಬೌಲಿಂಗ್​​ನಲ್ಲಿ ನಂಬಲು ಅಸಾಧ್ಯವಾದ ಎಸೆತಗಳಿಗೆ ಕೊಹ್ಲಿ 2 ಸಿಕ್ಸರ್​ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ನೆಟ್ಸ್​​​ನಲ್ಲಿ ಬಹಳಹೊತ್ತು ಸಮಯ ಕಳೆದ ಕೊಹ್ಲಿ, ರವೂಫ್​ ಅವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದ್ದು ಅಲ್ಲದೆ ಅಪ್ಪುಗೆ ನೀಡಿದರು. ಇಬ್ಬರು ಸಹ ಕೆಲಹೊತ್ತು ಮಾತನಾಡಿದರು. ಟಿ20 ವಿಶ್ವಕಪ್​ ಬಳಿಕ ಈ ಇಬ್ಬರ ಭೇಟಿ ಇದೇ ಮೊದಲ ಬಾರಿಗೆ ಆಗಿದೆ.ರವೂಫ್​ ಭೇಟಿಯ ನಂತರ ಕೊಹ್ಲಿ ಶತ್ರು ರಾಷ್ಟ್ರದ ಇತರೆ ಆಟಗಾರರ ಜೊತೆ ಸಮಯ ಕಳೆದರು. ಪಾಕ್​ನ ಸ್ಪಿನ್ ಆಲ್‌ರೌಂಡರ್ ಶಾದಾಬ್ ಖಾನ್ ಮತ್ತು ವೇಗಿ ಶಾಹೀನ್ ಅಫ್ರಿದಿ ಅವರೊಂದಿಗೆ ಮಾತನಾಡುತ್ತಾ ತಮಾಷೆ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಶಾಹೀನ್ ಶಾ ಅಫ್ರಿದಿ ಜೊತೆ ಖುಷಿಯಾಗಿ ಮಾತನಾಡಿ ಆನಂದಿಸಿದರು. ಶಾದಾಬ್ ಅವರ ಬ್ಯಾಟ್ ಹಿಡಿದು ಕೊಹ್ಲಿ ಶಾಡೋ ಬ್ಯಾಟಿಂಗ್ ಕೂಡ ನಡೆಸಿದರು.


ಕೊಹ್ಲಿ ನಡೆದ ಉಭಯ ದೇಶಗಳ ಅಭಿಮಾನಿಗಳು ಫಿದಾ


ಕೊಹ್ಲಿ, ಪಾಕಿಸ್ತಾನ ಆಟಗಾರರೊಂದಿಗೆ ತುಂಬಾ ಆತ್ಮಿಯತೆಯಿಂದ ಮಾತನಾಡಿದ್ದು, ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ವಿರಾಟ್ ಆಧುನಿಕ ಕ್ರಿಕೆಟ್ ದಿಗ್ಗಜನಾಗಿದ್ದರೂ, ತುಂಬಾ ಸರಳತೆಯಿಂದ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತ ಅವರ ನಡೆ ಕಂಡು ಭಾರತ-ಪಾಕಿಸ್ತಾನದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಭಿಮಾನಿಗಳ ಹೃದಯ ಗೆದ್ದಿರುವ ಈ ವಿಡಿಯೋಗಳು ನೆಟ್​ನಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

ಮೂಡಿಗೆರೆ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ವಿರೋಧ, ಸ್ಥಾನ ಕೈತಪ್ಪಿದ ಸಿಟ್ಟಿನಲ್ಲಿ ನಡುಬೀದಿಯಲ್ಲಿ ಮುಖಂಡರ ಹೊಡೆದಾಟ

Posted by Vidyamaana on 2024-02-10 15:16:05 |

Share: | | | | |


ಮೂಡಿಗೆರೆ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ವಿರೋಧ, ಸ್ಥಾನ ಕೈತಪ್ಪಿದ ಸಿಟ್ಟಿನಲ್ಲಿ ನಡುಬೀದಿಯಲ್ಲಿ ಮುಖಂಡರ ಹೊಡೆದಾಟ

ಚಿಕ್ಕಮಗಳೂರು, ಫೆ.10: ಮೂಡಿಗೆರೆ ಬಿಜೆಪಿ ತಾಲೂಕು ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ಇಬ್ಬರು ಮುಖಂಡರು ನಡುಬೀದಿಯಲ್ಲಿ ಹೊಡೆದಾಟ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ಮೂಡಿಗೆರೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 


ಮೂಡಿಗೆರೆ ತಾಲೂಕು ಸಮಿತಿಯ ಅಧ್ಯಕ್ಷ ಸ್ಥಾನ ತಪ್ಪಲು ಹಾಲಿ ತಾಪಂ ಸದಸ್ಯ ಕೆ.ಸಿ ರತನ್ ಕಾರಣ ಎಂದು ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪುಟ್ಟಣ್ಣ ಹಲ್ಲೆ ನಡೆಸಿದ್ದಾರೆ. ತಾಲೂಕು ಅಧ್ಯಕ್ಷರಾಗಿ ಟಿಎಂ ಗಜೇಂದ್ರ ಅವರನ್ನು ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ನೇಮಕ ಮಾಡಿದ್ದರು. ಇದರಿಂದ ಕೋಪಗೊಂಡ ಪುಟ್ಟಣ್ಣ ಮತ್ತು ಬೆಂಬಲಿಗರು ತಾಲೂಕು ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಇದೇ ವೇಳೆ, ಪುಟ್ಟಣ್ಣ ಮತ್ತು ಕೆಸಿ ರತನ್ ನಡುವೆ ಮಾತಿಗೆ ಮಾತು ಬೆಳೆದು ನಡುರಸ್ತೆಯಲ್ಲೇ ಹೊಡೆದಾಟ ನಡೆಸಿದ್ದಾರೆ. ಬಟ್ಟೆ ಹರಿದುಕೊಂಡು ಇಬ್ಬರೂ ಪರಸ್ಪರ ಕಿತ್ತಾಡಿದ್ದು ಇತರರು ಬಿಡಿಸಲು ಬಂದರೂ ಕೇಳದೆ ಹೊಡೆದಾಟ ನಡೆಸಿದ್ದಾರೆ. ಇದನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು ನೆಲಕ್ಕುರುಳಿಸಿ ಹೊಡೆದಾಡಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ. ಮೂಡಿಗೆರೆಯ ತಾಲೂಕು ಬಿಜೆಪಿ ಕಚೇರಿ ಬಳಿಯಲ್ಲೇ ಘಟನೆ ನಡೆದಿದೆ. ಕೆ.ಸಿ ರತನ್ ಹಸ್ತಕ್ಷೇಪದಿಂದ ತನ್ನ ಅಧ್ಯಕ್ಷ ಸ್ಥಾನ ಕೈತಪ್ಪಿದೆ ಎಂದು ಸಿಟ್ಟಿನಲ್ಲಿ ಹೊಡೆದಾಡಿದ್ದಾರೆ. ಹೊಸತಾಗಿ ಅಧ್ಯಕ್ಷರಾದ ಗಜೇಂದ್ರ ಬಗ್ಗೆ ಪುಟ್ಟಣ್ಣ ಮತ್ತು ಕನ್ನಳ್ಳಿ ಭರತ್ ಟೀಮ್ ವಿರೋಧ ವ್ಯಕ್ತಪಡಿಸಿದ್ದು ಕಚೇರಿ ಎದುರಲ್ಲಿ ಪ್ರತಿಭಟನೆ ನಡೆಸಿದ್ದರು.‌ ಹಲ್ಲೆಗೊಳಗಾದ ರತನ್ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



Leave a Comment: