ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ನನ್ನ ಜೊತೆ ಮಲಗು ಪೈಪ್ ಮೂಲಕ 4ನೇ ಮಹಡಿ ಹತ್ತಿದ ಕಾಮುಕನಿಂದ ಮಹಿಳೆಗೆ ಕಿರುಕುಳ!

Posted by Vidyamaana on 2023-10-25 15:42:05 |

Share: | | | | |


ನನ್ನ ಜೊತೆ ಮಲಗು ಪೈಪ್ ಮೂಲಕ 4ನೇ ಮಹಡಿ ಹತ್ತಿದ ಕಾಮುಕನಿಂದ ಮಹಿಳೆಗೆ ಕಿರುಕುಳ!

ಹಮ್ಮದಾಬಾದ್: ನಾಲ್ಕು ಮಹಡಿಗಳ ಹೊಟೆಲ್ ರೂಂನಲ್ಲಿ ದಂಪತಿಗಳು ತಂಗಿದ್ದರು. ಬೆಳಗಿನ ಜಾವ 3.30ಕ್ಕೆ ಸರಿಯಾಗಿ ಪತಿ ಹೊರಹೋಗಿದ್ದಾರೆ. ರಾತ್ರಿ ಇಡಿ ಕಾಯುತ್ತ ಕುಳಿತ ಕಾಮುಕನೋರ್ವ, ಹೊಟೆಲ್ ಹಂಭಾಗದಲ್ಲಿ ಅಳವಡಿಸಿದ್ದ ಪೈಪ್ ಹಿಡಿದು ನಾಲ್ಕನೇ ಮಹಡಿಗೆ ಹತ್ತಿದ್ದಾನೆ.ಬಳಿಕ ಮಹಿಳೆಯ ಕೋಣೆಯೊಳಕ್ಕೆ ನುಗ್ಗಿದ್ದಾನೆ.ಸೆಕ್ಸ್‌ಗಾಗಿ ಬೇಡಿಕೆ ಇಟ್ಟ ಕಾಮುಕ ಮಹಿಳೆಗೆ ಕಿರುಕುಳ ನೀಡಿದ ಘಟನೆ ಅಹಮ್ಮದಾಬಾದ್‌ನ ನರೋದದಲ್ಲಿ ನಡೆದಿದೆ.


26 ವರ್ಷದ ಮಹಿಳೆ ತನ್ನ ಪತಿ ಜೊತೆ ಹೊಟೆಲ್‌ನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ತಂಗಿದ್ದಾರೆ. ದಂಪತಿಗಳ ಮನೆ ನವೀಕರಣದ ಕಾರಣ ಹೊಟೆಲ್‌ನಲ್ಲಿ ತಂಗಿದ್ದರು. ಇದನ್ನು ಗಮನಿಸಿದ ಕಾಮುಕನೋರ್ವ ಪ್ರತಿ ದಿನ ಮಹಿಳೆಯ ಕೋಣೆಗೆ ನುಗ್ಗಲು ಪ್ಲಾನ್ ಮಾಡಿದ್ದಾನೆ. ಹೊಟೆಲ್ ಪ್ರವೇಶದ್ವಾರದ ಮೂಲಕ ತೆರಳಲು ಸಿಬ್ಬಂದಿಗಳು ಅನುವು ಮಾಡುವುದಿಲ್ಲ ಅನ್ನೋದು ಅರಿತ ಕಾಮಕ, ಹೊಟೆಲ್ ಸುತ್ತ ಪರಿಶೀಲನೆ ನಡೆಸಿದ್ದಾನೆ.ಕಳೆದ ಒಂದು ತಿಂಗಳಿನಿಂದ ಹೊಟೆಲ್ ಹಿಂಭಾಗದಲ್ಲಿ ಅಳವಡಿಸಿರುವ ಪೈಪ್ ಮೂಲಕ ಹತ್ತಲು ಅಭ್ಯಾಸ ಮಾಡಿದ್ದಾನೆ. ಇತ್ತ ಪತಿ ಬೆಳಗಿನ ಜಾವ 3.30ಕ್ಕೆ ಹೊಟೆಲ್‌ನಿಂದ ಹೊರಹೋಗಿದ್ದಾನೆ. ರಾತ್ರಿಯಿಡಿ ಮಹಿಳೆಯ ಕೋಣೆ ಪ್ರವೇಶಿಸಿ ಆಕೆಯ ಜೊತೆ ಸೆಕ್ಸ್ ನಡೆಸಲು ಬಯಸಿದ್ದ ಈತ, ಪತಿ ಹೊಟೆಲ್‌ನಿಂದ ಹೊರಹೋಗುತ್ತಿದ್ದಂತೆ ಪೈಪ್ ಹತ್ತಲು ಆರಂಭಿಸಿದ್ದಾನೆ.


ಕೆಲ ಹೊತ್ತಲ್ಲೇ ಕಾಮುಕ ನಾಲ್ಕನೇ ಮಹಡಿ ಹತ್ತಿದ್ದಾನೆ. ಬಳಿಕ ಮಹಿಳೆಯ ಕೋಣೆಯ ಹೊರಭಾಗದಿಂದ ಕಿಟಕಿ ಬಳಿ ಬಂದು ನೇರವಾಗಿ ಕೋಣೆಯೊಳಕ್ಕೆ ಪ್ರವೇಶಿಸಿದ್ದಾನೆ. ನಿದ್ದೆ ಮಂಪರಿನಲ್ಲಿದ್ದ ಮಹಿಳೆ ಹೌಹಾರಿದ್ದಾಳೆ. ತನ್ನ ಜೊತೆ ಸೆಕ್ಸ್ ಮಾಡುವಂತೆ ಮಹಿಳೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದೇ ವೇಳೆ ಸಹಾಯಕ್ಕಾಗಿ ಕಿರುಚಾಡುತ್ತಾ ಮಹಿಳ ಹೊರಗೆ ಓಡಿದ್ದಾಳೆ. ಮಹಿಳೆಯ ಧ್ವನಿ ಕೇಳಿದ ಸಿಬ್ಬಂದಿಗಳು ನೆರವಿಗೆ ಧಾವಿಸಿದ್ದಾರೆ.ಇತ್ತ ಪೈಪ್ ಮೂಲಕ ಇಳಿಯಲು ಹೋದ ಕಾಮುಕನ್ನು ಕೆಳಭಾಗದಲ್ಲಿ ಸಿಬ್ಬಂದಿಗಳು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.ಮಹಿಳೆ ಹಾಗೂ ಪತಿ ಈ ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಕಾಮುಕನಿಂದ ಇದೀಗ ಹೊಟೆಲ್‌ಗೆ ಸಂಕಷ್ಟ ಎದುರಾಗಿದೆ. ಈ ಘಟನೆಯಿಂದ ಹೊಟೆಲ್‌ನಲ್ಲಿ ತಂಗಿದ್ದ ಇತರರು ಬೆಚ್ಚಿಬಿದ್ದಿದ್ದಾರೆ. ಸುರಕ್ಷತೆ ಕಾರಣದಿಂದ ಹಲವರು ಹೊಟೆಲ್ ರೂಂ ಖಾಲಿ ಮಾಡಿದ್ದಾರೆ.

ಪತ್ನಿ ಬೆಳ್ಳಗಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತಿ

Posted by Vidyamaana on 2023-12-22 20:07:40 |

Share: | | | | |


ಪತ್ನಿ ಬೆಳ್ಳಗಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತಿ

ಬಿಲಾಸ್ ಪುರ: ಛತ್ತೀಸ್ ಗಢ ಹೈಕೋರ್ಟ್ (Chattisgath hight court) ಮಹತ್ವದ ತೀರ್ಪು ನೀಡಿದ್ದು, ಬಣ್ಣದ ಆಧಾರದ ಮೇಲೆ ವಿವಾಹಿತ ಸಂಗಾತಿಯನ್ನು ಬಿಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ ಎಂದು ಆದೇಶಿಸಿದೆ.ಪತಿ-ಪತ್ನಿಯರ ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಛತ್ತೀಸ್ ಗಢ ಹೈಕೋರ್ಟ್‌ ಈ ತೀರ್ಪು ನೀಡಿದ್ದು, ಪತಿಗೆ ಖಡಕ್ ಎಚ್ಚರಿಕೆ ನೀಡಿತಲ್ಲದೆ, ಫೇರ್‌ನೆಸ್ ಕ್ರೀಮ್ ಉದ್ಯಮದ ಬಗ್ಗೆಯೂ ತಮ್ಮ ಅಸಮಾಧಾನವನ್ನು ಹೊರಹಾಕಿದೆ.ನ್ಯಾಯಮೂರ್ತಿ ಗೌತಮ್ ಭಾದುರಿ (Goutam B

non

huri) ಮತ್ತು ನ್ಯಾಯಮೂರ್ತಿ ದೀಪಕ್ ಕುಮಾರ್ ತಿವಾರಿ (Deepak Kumar tiwari) ಅವರಿದ್ದ ಪೀಠವು ವಿಚಾರಣೆ ವೇಳೆ, ಯಾವುದೇ ಕಾರಣಕ್ಕೆ ಪತಿ-ಪತ್ನಿಯರ ಬಣ್ಣದ ಆಧಾರದ ಮೇಲೆ ವಿಚ್ಛೇದನ ನೀಡಲು ಸಾಧ್ಯ ಇಲ್ಲ ಎಂದು ಹೇಳಿದೆ.


ವ್ಯಕ್ತಿಯೊಬ್ಬರು ತನ್ನ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನ್ನ ಹೆಂಡತಿ ತನ್ನನ್ನು ತೊರೆದಿದ್ದಾರೆ ಮತ್ತು ಎಷ್ಟು ಪ್ರಯತ್ನ ಮಾಡಿದರೂ ಅವರು ಮನೆಗೆ ಮರಳಲು ನಿರಾಕರಿಸುತ್ತಿದ್ದರು ಎಂದು ಪತಿ ಹೇಳಿಕೊಂಡಿದ್ದಾರೆ. ಆದರೆ, ಪತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂಬುದು ಪತ್ನಿಯ ವಾದವಾಗಿತ್ತು. ತನ್ನ ಚರ್ಮದ ಬಣ್ಣವನ್ನು ಗೇಲಿ ಮಾಡುವ ಮೂಲಕ ನಿಂದನೆ ಮತ್ತು ನಿಂದನೀಯ ಪದಗಳನ್ನು ಪತಿ ಬಳಸುತ್ತಿದ್ದರು. ಗರ್ಭಾವಸ್ಥೆಯಲ್ಲಿ ಪತಿ ತನಗೆ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು. ತನ್ನ ಕಪ್ಪನೆಯ ಚರ್ಮದಿಂದಾಗಿ ಬೇರೆ ಮಹಿಳೆಯನ್ನು ಮದುವೆಯಾಗುವುದಾಗಿ ಪದೇ ಪದೆ ಅಪಹಾಸ್ಯ ಮಾಡುತ್ತಿದ್ದರು ಎಂದು ಪತ್ನಿ ತನ್ನ ಪತಿ ವಿರುದ್ಧ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಎರಡೂ ಕಕ್ಷಿದಾರರ ವಾದ ಆಲಿಸಿದ ಛತ್ತೀಸ್ ಗಢ ಹೈಕೋರ್ಟ್, ಪತ್ನಿಯ ಆರೋಪಗಳನ್ನು ಹೆಚ್ಚು ದೃಢವಾಗಿ ಪರಿಗಣಿಸಿ, ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತು. 


ಅಲ್ಲದೇ, ಕೇವಲ ಚರ್ಮದ ಬಣ್ಣದ ಆಧಾರದ ಮೇಲೆ ವಿವಾಹಿತ ಸಂಗಾತಿಯನ್ನು ಬಿಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿತು. ಚರ್ಮದ ಬಣ್ಣದ ಆಧಾರದ ಮೇಲೆ ತಾರತಮ್ಯ ತೊಡೆದುಹಾಕಲು ಸಾಮಾಜಿಕ ಬದಲಾವಣೆಯ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಕಾಸ್ಕೆಟಿಕ್ಸ್ ಉದ್ಯಮವು ಚರ್ಮವನ್ನು ಹೊಳಪುಗೊಳಿಸುವ ಉತ್ಪನ್ನಗಳೊಂದಿಗೆ ಕಪ್ಪು ತ್ವಚೆಯ ಜನರನ್ನು ಗುರಿಯಾಗಿರಿಸಿಕೊಳ್ಳುತ್ತದೆ ಎಂದು ಹೈಕೋರ್ಟ್ಅಸಮಾಧಾನ ವ್ಯಕ್ತಪಡಿಸಿತು. 


ಜಾಹೀರಾತುಗಳಲ್ಲಿ ಅವರನ್ನು ಕಡಿಮೆ ಆತ್ಮವಿಶ್ವಾಸ ಮತ್ತು ಅಸುರಕ್ಷಿತ ಎಂದು ತೋರಿಸಲಾಗುತ್ತಿದೆ. ಅದು ತಪ್ಪು. ಈ ತಾರತಮ್ಯ ಹೋಗಲಾಡಿಸುವಲ್ಲಿ ಸಾಮಾಜಿಕ ಬದಲಾವಣೆಯ ಅಗತ್ಯವಿದೆ ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿತು.

ಹುಬ್ಬಳ್ಳಿಯಲ್ಲಿ ಅಯೋಧ್ಯಾ ಕರಸೇವಕರ ವಿರುದ್ಧ ಪ್ರಕರಣ:ಬಿಜೆಪಿಯಿಂದ ರಾಜ್ಯವ್ಯಾಪ್ತಿ ಪ್ರತಿಭಟನೆ ಹಿನ್ನಲೆ

Posted by Vidyamaana on 2024-01-03 22:03:40 |

Share: | | | | |


ಹುಬ್ಬಳ್ಳಿಯಲ್ಲಿ ಅಯೋಧ್ಯಾ ಕರಸೇವಕರ ವಿರುದ್ಧ ಪ್ರಕರಣ:ಬಿಜೆಪಿಯಿಂದ ರಾಜ್ಯವ್ಯಾಪ್ತಿ ಪ್ರತಿಭಟನೆ ಹಿನ್ನಲೆ

ಬೆಂಗಳೂರು : 1922 ರಾಮ ಮಂದಿರ (Rammandira Case) ಧ್ವಂಸ ಪ್ರಕರಣ ಸಂದರ್ಭ ಬಂಧಿತ ಹುಬ್ಬಳ್ಳಿಯ ಶ್ರೀಕಾಂತ್‌ ಪೂಜಾರಿ ಪ್ರಕರಣ ರಾಜಕೀಯ ತಾರಕ್ಕೆಕ್ಕೇರಿದೆ. ಬಂಧನ ಖಂಡಿಸಿ ಬಿಜೆಪಿ ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸುತ್ತಿದೆ.ಈ ನಡುವೆ ಬಂಧಿತ ವ್ಯಕ್ತಿಯ ವಿರುದ್ಧ ಹಳೆಯ ಪ್ರಕರಣವಿದ್ದು ಬಿಜೆಪಿ ಆಡಳಿತ ಇರುವಾಗಲೇ ಶ್ರೀಕಾಂತ್‌ ಪೂಜಾ‌ರ್ ಮೇಲೆ ಪ್ರಕರಣ ದಾಖಲಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದೆ.ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೇಸ್, ರೌಡಿಗಳು, ಅತ್ಯಾಚಾರಿಗಳು, ಕೊಲೆಗಡುಕರ ಬಗ್ಗೆ ಪಕ್ಷಕ್ಕೆ ತುಂಬಾ ಪ್ರೀತಿ ಹುಬ್ಬಳ್ಳಿಯ ಶ್ರೀಕಾಂತ್ ಎಂಬ ಆರೋಪಿಯ ಮೇಲೆ ಕಳ್ಳಬಟ್ಟಿ ದಂಧೆ, ಜೂಜು ಮಟ್ಕಾ ಮುಂತಾದ ಅನಾಚಾರಗಳನ್ನು ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ,1998ರಿಂದ ಆತನ ಮೇಲೆ ಹಲವು ಪ್ರಕರಣಗಳಿವೆ, 2009ರಲ್ಲಿ ಬಿಜೆಪಿ ಆಡಳಿತವಿದ್ದಾಗಲೇ ಆತನ ಮೇಲೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿತ್ತು.ಟ್ವಿಟ್ ಮಾಡಿರುವ ಸಿದ್ದರಾಮಯ್ಯ ರಾಮಭಕ್ತ ಕರಸೇವಕ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಶ್ರೀಕಾಂತ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಮಾಜಘಾತುಕ ವ್ಯಕ್ತಿ. ತನ್ನ ಅಪರಾಧ ಕೃತ್ಯಗಳಿಂದ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಧರ್ಮರಕ್ಷಣೆ ನಾಟಕವಾಡುವ ಇಂಥವರನ್ನು ಬಂಧಿಸದೆ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ.


ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟಕಾ, ಜೂಜಾಟ ಮುಂತಾದ 16 ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು ಈತನ ಎಲ್ಲಾ ಅಪರಾಧ ಕೃತ್ಯಗಳಿಗೆ ತಮ್ಮ ಪಕ್ಷದ ಬೆಂಬಲವಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಅಥವಾ ಪ್ರತಿಭಟನೆ ಕೈಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೋರಲಿ.ಕಳೆದ 2023ನೇ ಸಾಲಿನಲ್ಲಿ ಹುಬ್ಬಳ್ಳಿ – ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕಳ್ಳತನ, ಸುಲಿಗೆ, ವಂಚನೆ, ದೊಂಬಿ ಮುಂತಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಲ್.ಪಿ.ಸಿ ( ಕಾನೂನು ವಿಚಾರಣಾ ಪ್ರಮಾಣಪತ್ರ ) ಪ್ರಕರಣಗಳಲ್ಲಿ ಒಟ್ಟು 36 ಜನರನ್ನು ದಸ್ತಗಿರಿ ಮಾಡಲಾಗಿದೆ. ಇದರಲ್ಲಿ ಶ್ರೀಕಾಂತ ಪೂಜಾರಿ 32ನೆಯ ವ್ಯಕ್ತಿ. ಈತನನ್ನು ಕರಸೇವಕನೆಂಬ ಕಾರಣಕ್ಕೆ ಹೊರಗಡೆ ಬಿಡಬೇಕೋ? ಅಥವಾ ಆರೋಪಿ ಎಂಬ ಕಾರಣಕ್ಕೆ ಬಂಧಿಸಬೇಕೋ? ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ನಮ್ಮ ಸರ್ಕಾರದ ವಿರುದ್ಧವಲ್ಲ, ದೇಶದ ಕಾನೂನು ಮತ್ತು ಸಂವಿಧಾನದ ವಿರುದ್ಧ.

ಅಪರಾಧ ಕೃತ್ಯಗಳಲ್ಲಿ ತೊಡಗುವವರು ಧರ್ಮರಕ್ಷಕರು ಎಂದು ಹೇಳಿಕೊಂಡು ಕೊಲೆ, ಸುಲಿಗೆಗಳಿಗೆ ಇಳಿದರೆ ಅದನ್ನೂ ಬಿಜೆಪಿ ನಾಯಕರು ಬೆಂಬಲಿಸುತ್ತಾರೆಯೇ?


ರಾಮಮಂದಿರದ ಉದ್ಘಾಟನೆ ವೇಳೆ ಶ್ರೀಕಾಂತ ಪೂಜಾರಿಯ ಬಂಧನವಾಗಿರುವುದು ಕಾಕತಾಳೀಯ ಅಷ್ಟೆ. ಹಳೆಯ ಪ್ರಕರಣಗಳನ್ನು ಪರಿಶೀಲನೆ ನಡೆಸುವ ವೇಳೆ ಪೊಲೀಸರು ಇತರೆ 36 ಜನರ ಜೊತೆಗೆ ಇವರನ್ನು ಕೂಡ ಬಂಧಿಸಿದ್ದಾರೆ. ಇದರಲ್ಲಿ ಪ್ರತೀಕಾರವೂ ಇಲ್ಲ, ತುಷೀಕರಣವೂ ಇಲ್ಲ. ಕಾನೂನು ಪಾಲನೆ ಮಾಡಬೇಕು, ಮಾಡಿದ್ದಾರೆ ಎಂದಿದ್ದಾರೆ

ಮಂಗಳೂರು: ಭಾರೀ ಮಳೆಗೆ ಪಂಪ್‌ವೆಲ್ ಜಲಾವೃತ

Posted by Vidyamaana on 2023-07-03 13:58:42 |

Share: | | | | |


ಮಂಗಳೂರು: ಭಾರೀ ಮಳೆಗೆ ಪಂಪ್‌ವೆಲ್ ಜಲಾವೃತ

ಮಂಗಳೂರು: ಸೋಮವಾರ ಬೆಳಗ್ಗಿನಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಗಳೂರು ನಗರ ಪ್ರದೇಶದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ.


ಭಾರೀ ಮಳೆಗೆ ಪಂಪ್ ವೆಲ್, ಕೊಟ್ಟಾರ ಚೌಕಿ, ಮಾಲೆಮಾರ್ ಪ್ರದೇಶ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ಕೆಳಗೆ ಮೊಣಕಾಲು ಎತ್ತರಕ್ಕೆ ನೀರು ನಿಂತಿದ್ದು ನಗರದ ಕಡೆ ಸಂಚರಿಸುವ ವಾಹನಗಳು ಜಂಕ್ಷನ್‌ನಲ್ಲಿ ಸಿಲುಕಿಕೊಂಡಿವೆ.


ನಗರದ ಬಿಜೈನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ದುರಸ್ತಿಗಾಗಿ ಮ್ಯಾನ್ ಹೋಲ್ ಅಗೆದಿಟ್ಟುರುವುದ್ದರಿಂದ ಭಾರೀ ಮಳೆಯಿಂದಾಗಿ ಗಲೀಜು ನೀರಿನ ಜತೆ ಮಳೆ ನೀರು ಸುತ್ತಮುತ್ತಲಿನ ಬ್ಯಾಂಕ್, ಮೆಡಿಕಲ್‌ನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.


ಇಂಡಿಯನ್ ಬ್ಯಾಂಕ್‌ನೊಳಗೆ ನೀರು ನುಗ್ಗಿ ಬ್ಯಾಂಕ್ ಸಿಬ್ಬಂದಿಗಳು ಕಡತಗಳು ಹಾಗೂ ಇನ್ನು ಪಕ್ಕದಲ್ಲಿದ್ದ ಎಟಿಎಂ ಮಷಿನ್‌ನಲ್ಲಿದ್ದ ಹಣವನ್ನು ಕೂಡ ಸ್ಥಳಾಂತರಿಸಿದ್ದಾರೆ.

ಪಕ್ಕದಲ್ಲಿದ್ದ ಹೋಟೇಲ್ ಹಾಗೂ ಮೆಡಿಕಲ್‌ಗಳಿಗೂ ಗಲೀಜು ನೀರು ನುಗ್ಗಿ ಸಮಸ್ಯೆಯಾಗಿದೆ.

ಕಳೆದ ಹಲವಾರು ದಿನಗಳಿಂದ ಮ್ಯಾನ್ ಹೋಲ್ ದುರಸ್ತಿಯಾಗುತ್ತಿದ್ದು ಇನ್ನು ಕೂಡ ಪೂರ್ಣವಾಗಿಲ್ಲ ಜತೆಗೆ ದಿನನಿತ್ಯ ಈ ಭಾಗದಲ್ಲಿ ಸಂಚರಿಸುವ ಮತ್ತು ವ್ಯಾಪಾರ ವ್ಯವಹಾರ ನಡೆಸುವ ಜನರಿಗೆ ಗಲೀಜು ನೀರಿನ ದುರ್ನಾತದಿಂದ ಸಮಸ್ಯೆಯಾಗುತ್ತಿದೆ.

ಕರ್ನಾಟಕ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ

Posted by Vidyamaana on 2023-05-15 15:49:26 |

Share: | | | | |


ಕರ್ನಾಟಕ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ

ಬೆಂಗಳೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಾಲಿ ಸಿಎಂ ಆಗೋದು ಬಹುತೇಕ ಖಚಿತ ಎನ್ನಲಾಗಿದೆ.

ದೆಹಲಿಯಲ್ಲಿ ತಮ್ಮ ಆಪ್ತ ಶಾಸಕರ ಜೊತೆ ಸಿದ್ದು ಸಭೆ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ನೂತನ ಸಿಎಂ ಆಗೋದು ಖಚಿತ ಎನ್ನಲಾಗಿದೆ.

ಇನ್ನು ಸಿದ್ದರಾಮಯ್ಯ ನೂತನ ಸಿಎಂ ಎಂಬುವುದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕೆಲವೇ ಹೊತ್ತಲ್ಲೇ ಉತ್ತರ ಸಿಗಲಿದೆ.

ಪುತ್ತೂರು ರೋಟರಿ ಕ್ಲಬ್‌ ಸೆಂಟ್ರಲ್ ನಿಂದ ಅರಿವು ಕಾರ್ಯಕ್ರಮ

Posted by Vidyamaana on 2023-08-04 01:38:25 |

Share: | | | | |


ಪುತ್ತೂರು ರೋಟರಿ ಕ್ಲಬ್‌ ಸೆಂಟ್ರಲ್ ನಿಂದ ಅರಿವು ಕಾರ್ಯಕ್ರಮ

ಪುತ್ತೂರು: ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ ಇವರ ವತಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಅರಿವು ಕಾರ್ಯಾಗಾರ ಜು. 28ರಂದು ನಡೆಯಿತು.

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉನ್ನತವಾದ ಗುರಿ ಇರಬೇಕು, ಜೀವನದಲ್ಲಿ ನೈತಿಕ ಮೌಲ್ಯಗಳಿಗೆ ಪ್ರಾಧಾನ್ಯತೆ ನೀಡಬೇಕು, ಜ್ಞಾನದಾಹ ಇದ್ದರೆ ಆತ ಸಮಾಜದಲ್ಲಿ ಸುಸಂಸ್ಕೃತ ಪ್ರಜೆ ಆಗಬಲ್ಲ ಅದಕ್ಕಾಗಿ ಇಂದಿನ ಅರಿವು ಕಾರ್ಯಕ್ರಮ ಎಂದು ಹೇಳಿದರು. 

ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜ್ಞಾನವನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ, ಇಂತಹ ಅರಿವು ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಜ್ಞಾನದಾಹ ಹೆಚ್ಚುತ್ತದೆ ಎಂದು ಹೇಳಿದರು ಅಲ್ಲದೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಚಂದ್ರಹಾಸ ರೈ ಮತ್ತು ರಾಕೇಶ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಪಿ.ಎಂ.ಅಶ್ರಫ್ ಮುಕ್ವೆ ಉಪಸ್ಥಿತರಿದ್ದರು. ಶಾಲಾ ಆಡಳಿತ ಸಮಿತಿಯ ಕೋಶಾಧಿಕಾರಿ ದಿವಾಕರ ರೈ ಕೆರೆಮೂಲೆ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿದರು. ಮುಖ್ಯಗುರು ಕೃಷ್ಣವೇಣಿ ವಂದಿಸಿದರು. ಆಡಳಿತ ಸಮಿತಿಯ ಗೌರವ ಸಲಹೆಗಾರ ಗಣೇಶ್ ಭಟ್ ಮಾಪಲಮಜಲು, ಸದಸ್ಯರಾದ ಮುರಳೀಕೃಷ್ಣ ಸಿದ್ಧಮೂಲೆ, ಪದಾಧಿಕಾರಿಗಳಾದ ಗಣಪತಿ ಭಟ್ ಎಕ್ಕಡ್ಕ, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



Leave a Comment: