ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಪತ್ರಕರ್ತನ ಮೊಬೈಲ್ ಒಡೆದು ಹಾಕಿದ ಪ್ರಕರಣ ಸುಖಾಂತ್ಯ

Posted by Vidyamaana on 2023-07-20 02:17:28 |

Share: | | | | |


ಪತ್ರಕರ್ತನ ಮೊಬೈಲ್ ಒಡೆದು ಹಾಕಿದ ಪ್ರಕರಣ ಸುಖಾಂತ್ಯ

ಪುತ್ತೂರು: ಪತ್ರಕರ್ತ ನಿಶಾಂತ್ ಬಿಲ್ಲಂಪದವು ಅವರ ಮೊಬೈಲ್ ಒಡೆದು ಹಾಕಿರುವ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ ಎಂದು ತಿಳಿದುಬಂದಿದೆ.

ಬಪ್ಪಳಿಗೆ ಎಂಬಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಮೊಬೈಲ್ ಕಸಿದು‌ ಹಾನಿಗೊಳಿಸಲಾಗಿದೆ ಎಂದು ನಿಶಾಂತ್ ಆರೋಪಿಸಿದ್ದರು. ಇದನ್ನು ಪತ್ರಕರ್ತರ ಸಂಘಗಳು ಖಂಡಿಸಿ, ಸೂಕ್ತ ತನಿಖೆ ನಡೆಸಲು ಆಗ್ರಹಿಸಿದ್ದವು. ಇದೀಗ ಬಂದ ಮಾಹಿತಿಯಂತೆ, ಮೊಬೈಲ್ ಒಡೆದು‌ ಹಾಕಿದವರು‌ ಹೊಸ ಮೊಬೈಲನ್ನು ನಿಶಾಂತ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಈ‌ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಖಾಂತ್ಯಗೊಳಿಸಲಾಗಿದೆ ಎಂದು‌ ತಿಳಿದುಬಂದಿದೆ.

ಜನವರಿ 19 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ, ಇಲ್ಲಿದೆ ಕಾರ್ಯಕ್ರಮದ ವಿವರ

Posted by Vidyamaana on 2024-01-17 12:30:31 |

Share: | | | | |


ಜನವರಿ 19 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ, ಇಲ್ಲಿದೆ ಕಾರ್ಯಕ್ರಮದ ವಿವರ

ಬೆಂಗಳೂರು : ಜನವರಿ 19 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಅಂದು 1:05 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.ಅಂದು ಮಧ್ಯಾಹ್ನ 2:10 ಕ್ಕೆ ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್ಗೆ ಆಗಮಿಸಲಿದ್ದಾರೆ.2:15 ಕ್ಕೆ ಕೆಐಎಎಲ್ ನಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಪ್ರಯಾಣ ಮಾಡಲಿದ್ದಾರೆ. 2:45 ಕ್ಕೆ ಭಟ್ಟರಮಾರನಹಳ್ಳಿಗೆ ತಲುಪಲಿದ್ದಾರೆ. ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಲೋಕಾರ್ಪಣೆ ಮಾಡಲಿದ್ದಾರೆ.


ಮಧ್ಯಾಹ್ನ 3:45 ಕ್ಕೆ ಭಟ್ಟರ ಮಾರನಹಳ್ಳಿಯಿಂದ ನಿರ್ಗಮಿಸಲಿದ್ದಾರೆ. 3:55 ಕ್ಕೆ ಕೆಐಎಎಲ್‌ಗೆ ತಲುಪಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಕೆಐಎಎಲ್‌ನಿಂದ ಚೆನ್ನೆöÊಗೆ ನಿರ್ಗಮಿಸಲಿದ್ದಾರೆ.

ಮಂಗಳೂರಿನಲ್ಲಿ ಶಿಲ್ಪಾಸ್ ಹೆಲ್ತ್ ಕೇರ್ ಶುಭಾರಂಭ

Posted by Vidyamaana on 2023-02-22 17:21:42 |

Share: | | | | |


ಮಂಗಳೂರಿನಲ್ಲಿ ಶಿಲ್ಪಾಸ್ ಹೆಲ್ತ್ ಕೇರ್  ಶುಭಾರಂಭ

ಮಂಗಳೂರು, ಫೆ.22; ನಗರದ ರಥಬೀದಿಯ ಹೂವಿನ ಮಾರುಕಟ್ಟೆಯ ಎದುರಿನ ಅನಂತೇಶ್ ಕಟ್ಟಡದ ಒಂದನೇ ಮಹಡಿಯಲ್ಲಿ  ಶಿಲ್ಪಾಸ್ ಹೆಲ್ತ್ ಕೇರ್ ಉದ್ಘಾಟನಾ ಸಮಾರಂಭ ಬುಧವಾರ  ನೆರವೇರಿತು . ಮಾಸ್ಟರ್ ಸಮನ್ವಯ್ ಉರುಬೈಲು ರಿಬ್ಬನ್ ಕತ್ತರಿಸುವ  ಮೂಲಕ   ಉದ್ಘಾಟಿಸಿದರು.   ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಪಿ. ಯಸ್ ದೀಪ ಬೆಳಗಿಸಿ ಶುಭ ಕೋರಿದರು.

ಮಂಗಳೂರು ಮಹಾ ನಗರ ಪಾಲಿಕೆ ಯ ಉಪ ಮೇಯರ್ ಪೂರ್ಣಿಮಾ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,  C. A . ಜಗನ್ನಾಥ್ ಕಾಮತ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಶುಭ ಕೋರಿದರು.

ಸಮಾರಂಭದಲ್ಲಿ  ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರಾದ ಡಾ ಯು. ಪಿ. ಶಿವಾನಂದ, ಶೋಭಾ ಶಿವಾನಂದ, ಕಮಲ ಮುಡೂರು, ಸುಬ್ರಾಯ ಶೆಣೈ, ಶಾಂತಿ ಶೆಣೈ, ವಿಶ್ವೇಶ್ವರಯ್ಯ ಟೆಕ್ನಿಕಲ್ ಯುನಿವರ್ಸಿಟಿಯ  ಗವರ್ನಿಂಗ್ ಕೌನ್ಸಿಲ್ ಸದಸ್ಯ  ಡಾ. ಉಜ್ವಲ್ ಉರುಬೈಲು, ಸುಜಿತ್ ರೈ ಪಾಲ್ತಾಡು, ಶಿಲ್ಪಾಸ್ ಹೆಲ್ತ್ ಕೇರ್ ನಲ್ಲಿ ಮುಂದಿನ ದಿನಗಳಲ್ಲಿ ಲಭ್ಯರಿರುವ  ಎ. ಜೆ.ಆಸ್ಪತ್ರೆಯ ನ್ಯೂರೋಲೋಜಿಸ್ಟ್  ಡಾ. ಪ್ರದ್ಯುಮ್ನ ಭಂಡಾರಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ದ ಕಾರ್ಯಕಾರಿ ಸಮಿತಿ ಸದಸ್ಯ  ಪಿ. ಬಿ. ಹರೀಶ್ ರೈ,  ದ.ಕ .ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್ ಬಿ. ಎನ್ ಮೊದಲಾದವರು ಉಪಸ್ಥಿತರಿದ್ದರು. ಶಿಲ್ಪಾಸ್ ಹೆಲ್ತ್ ಕೇರ್ ನ ಡಾ. ಶಿಲ್ಪಾ ಶೆಣೈ ಸ್ವಾಗತಿಸಿ ವಂದಿಸಿದರು, ಶ್ರೇಯಸ್ ಊರುಬೈಲು ಸಹಕರಿಸಿದರು, ಭಾಸ್ಕರ್ ರೈ ಕಟ್ಟ ನಿರೂಪಿಸಿದರು.

ಮಣಿಪುರ -ಜೈಪುರ ಸಹಿತ ಹಲವೆಡೆ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ

Posted by Vidyamaana on 2023-07-21 03:52:22 |

Share: | | | | |


ಮಣಿಪುರ -ಜೈಪುರ  ಸಹಿತ ಹಲವೆಡೆ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ

ಜೈಪುರ: ಶುಕ್ರವಾರ ಮುಂಜಾನೆ ರಾಜಸ್ಥಾನದ ಜೈಪುರದ ಮೂರು ಭಾಗಗಳಲ್ಲಿ ಭೂಕಂಪಗಳು ಸಂಭವಿಸಿವೆ ಎಂದು ವರದಿಯಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮೂರು ಕಂಪನಗಳು ಕೇವಲ 30 ನಿಮಿಷಗಳ ಅವಧಿಯಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ.

ಶುಕ್ರವಾರ ನಸುಕಿನ ಜಾವಾ 4 ಗಂಟೆಯಿಂದ 4;30 ನಿಮಿಷಗಳ ಅವಧಿಯಲ್ಲಿ ಮೂರು ಕಂಪನಗಳು ಸಂಭವಿಸಿದೆ ಎಂದು ಹೇಳಲಾಗಿದೆ ಅದರಲ್ಲಿ 4.09ರ ಸುಮಾರಿಗೆ 4.4ರ ತೀವ್ರತೆ ಹೊಂದಿದ್ದರೆ, 4.22ರ ಸುಮಾರಿಗೆ 3.1 ರ ತೀವ್ರತೆ ಹಾಗೂ 4.25 ರ ಸುಮಾರಿಗೆ 3.4ರ ತೀವ್ರತೆಯ ಭೂಕಂಪನದ ಅನುಭವಾಗಿದೆ ಎಂದು ಹೇಳಲಾಗಿದೆ.


ಕಂಪನದ ಅನುಭವವಾಗುತ್ತಿದ್ದಂತೆ ಜನ ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ, ಭೂಕಂಪನದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.


ಮಣಿಪುರದಲ್ಲೂ 3.5 ತೀವ್ರತೆಯ ಕಂಪನ:

ಶುಕ್ರವಾರ ಮುಂಜಾನೆ ಸುಮಾರು 5.01ಕ್ಕೆ ಮಣಿಪುರದ ಉಖ್ರುಲ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಭೂಕಂಪವು 20 ಕಿಲೋಮೀಟರ್ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಟ್ಲ : ಪ್ರೀತಿ ಮಾಡಿ ಕೈಕೊಟ್ಟವನ ಮನೆ ಮುಂದೆ ಧರಣಿ ಯುವತಿಯ ಪ್ರತಿಭಟನೆ

Posted by Vidyamaana on 2024-02-06 22:12:23 |

Share: | | | | |


ವಿಟ್ಲ : ಪ್ರೀತಿ ಮಾಡಿ ಕೈಕೊಟ್ಟವನ ಮನೆ ಮುಂದೆ ಧರಣಿ ಯುವತಿಯ ಪ್ರತಿಭಟನೆ

ವಿಟ್ಲ :ಪ್ರೀತಿಸುವ ನಾಟಕವಾಡಿ ಕೈಕೊಟ್ಟಿರುವ ಯುವಕನ ಮನೆ ಮುಂದೆ ಯುವತಿಯೊಬ್ಬಳು. ಮೊಕ್ಕಾಂ ಹೂಡಿ ನಿರಶನ ನಡೆಸಿದ ವಿಚಿತ್ರ ಹಾಗೂ ಅಪರೂಪದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ 6 ರಂದು ಸಂಜೆ ನಡೆದಿದೆ. ಯುವತಿಯನ್ನು ಮನವೊಲಿಸಲು ವಿಫಲರಾದ ಪೊಲೀಸರು ರಾತ್ರಿ ವೇಳೆ ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ ಎಂದು ತಿಳಿದು ಬಂದಿದೆ.ಉತ್ತರ ಭಾರತ ಮೂಲದ ಯುವತಿ ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್  ಸಂಸ್ಥೆಯೂಂದನ್ನು ನಡೆಸುತ್ತಿದ್ದು, ಅಲ್ಲಿ ಆಕೆಗೆ ಅಡ್ಯನಡ್ಕದ ಯುವಕನೂಬ್ಬನ ಪರಿಚಯವಾಗಿದೆ. ಯುವಕ ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಉದ್ಯೋಗಿಯಾಗಿದ್ದಾನೆ ಎನ್ನಲಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಮುಂದಿನ ದಿನಗಳಲ್ಲಿ ಅವರಿಬ್ಬರ ಮಧ್ಯೆ ಹಣಕಾಸಿನ ವಹಿವಾಟು ನಡೆದಿದೆ ಎಂದು ಹೇಳಲಾಗುತ್ತಿದೆ.


ಇಂದು ಸಂಜೆ ಅಡ್ಯನಡ್ಕದ ಯುವಕನ ಮನೆ ಬಳಿ ಬಂದ ಸಂತ್ರಸ್ತ ಯುವತಿ ಪ್ರೀತಿಯ ನಾಟಕವಾಡಿ ಯುವಕ ಹಣ ಪಡೆದಿದ್ದಾನೆ. ಈಗ ಹಣವು ವಾಪಸ್ಸು ನೀಡದೆ, ವಿವಾಹವು ಆಗದೇ ಯುವಕ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ಮನೆ ಎದುರು ಕೂತು ಪ್ರತಿಭಟನೆ ನಡೆಸಿದ್ದಾಳೆ.ಯುವಕ ಹಾಗೂ ಯುವತಿ ಭಿನ್ನ ಕೋಮಿಗೆ ಸೇರಿದವರೆಂದು ಮಾಹಿತಿ ಹಬ್ಬಿದ ಹಿನ್ನಲೆಯಲ್ಲಿ, ಅಡ್ಯನಡ್ಕ ಪೇಟೆಯಲ್ಲಿ ಎರಡು ಕೋಮಿನವರು ಜಮಾಯಿಸಿದ್ದರು.ಯುವಕನ ಊರವರು ಯುವತಿಗಾದ ಹಣಕಾಸಿನ ನಷ್ಟವನ್ನು ಭರಿಸಿ ಕೊಡುವುದಾಗಿ ಹೇಳಿದರೂ ಒಪ್ಪದ ಯುವತಿ ಯುವಕನೇ ಬೇಕೆಂದು ಪಟ್ಟು ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ. ಬಳಿಕ ರಾತ್ರಿ ಆಕೆಯನ್ನು. ಪೊಲೀಸರು ವಿಟ್ಲ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಉಡುಪಿಯ ಸರಕಳ್ಳನನ್ನು ಬಂಧಿಸಿದ ಮೂಡುಬಿದ್ರೆ ಪೊಲೀಸರು, ಕದ್ದ ಚಿನ್ನದ ಸರ, ಮೊಬೈಲ್ ವಶ.

Posted by Vidyamaana on 2024-01-13 21:05:21 |

Share: | | | | |


ಉಡುಪಿಯ ಸರಕಳ್ಳನನ್ನು ಬಂಧಿಸಿದ ಮೂಡುಬಿದ್ರೆ ಪೊಲೀಸರು, ಕದ್ದ ಚಿನ್ನದ ಸರ, ಮೊಬೈಲ್ ವಶ.

ಮೂಡುಬಿದಿರೆ: ಉಡುಪಿ ಜಿಲ್ಲೆ ಮಣಿಪಾಲ ಮತ್ತು ಬ್ರಹ್ಮಾವರದಲ್ಲಿ ನಡೆದ ಪ್ರತ್ಯೇಕ ಕಳವು ಪ್ರಕರಣದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.ಬ್ರಹ್ಮಾವರಬೆಳ್ಮಾರು ಆರೂರುಬೈಲು ಮನೆಯ ದೀಕ್ಷಿತ್(27) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಕಳವಾದ ಕಳುವಾದ ಸುಮಾರು ರೂ 50,000 ಮೌಲ್ಯದ ಬಂಗಾರದ ತಾಳಿ ಸರ ಮತ್ತು ಮೊಬೈಲ್ ಫೋನ್ ವಶ ಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಆರೋಪಿಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಕ್ರ:121/2016 ಕಲಂ:454, 380 ಐಪಿಸಿ ಅಕ್ರ:71/2023 ಕಲಂ:457,380,511 ಐಪಿಸಿ ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಕ್ರ:310/2023 ಕಲಂ:380 ಐಪಿಸಿ ಯಂತೆ ಪ್ರಕರಣಗಳು ದಾಖಲಾಗಿವೆ.ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ಮತ್ತು ದಿವಾಕರ್ ರೈ , ಸಿದ್ದಪ್ಪ ನರನೂರು ಪೊಲೀಸ್ ಉಪ ನಿರೀಕ್ಷಕರು ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್, ನಾಗರಾಜ್ ಲಮಾಣಿ, ಅಕೀಲ್ ಅಹಮ್ಮದ್, ಚಂದ್ರಹಾಸ ರೈ ಮತ್ತು ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.



Leave a Comment: