ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ರಾಜ್ಯ ರಾಜಕಾರಣದಲ್ಲಿ ವಸಂತ್ ಬಂಗೇರರ ಹೆಸರು ಮತ್ತೆ ಮುನ್ನೆಲೆಗೆ

Posted by Vidyamaana on 2023-05-24 12:47:41 |

Share: | | | | |


ರಾಜ್ಯ ರಾಜಕಾರಣದಲ್ಲಿ ವಸಂತ್ ಬಂಗೇರರ ಹೆಸರು ಮತ್ತೆ ಮುನ್ನೆಲೆಗೆ

ಬೆಳ್ತಂಗಡಿ: ಖಡಕ್ ರಾಜಕಾರಣಿ ಎಂದೇ ಖ್ಯಾತಿ ಪಡೆದ ಬೆಳ್ತಂಗಡಿ ಮಾಜಿ ಶಾಸಕ ವಸಂತ್ ಬಂಗೇರರನ್ನು ರಾಜಕೀಯದಲ್ಲಿ ಸಕ್ರೀಯವಾಗಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಖಡಕ್ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದ ವಸಂತ್ ಬಂಗೇರರನ್ನು ಎಂ.ಎಲ್.ಸಿ. ಮಾಡಿ, ಸಚಿವರನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಸಿಎಂ ಇಂಗಿತ. ಈ ಮೂಲಕ ಕರಾವಳಿ ರಾಜಕೀಯವನ್ನು ಮತ್ತೆ ಸಕ್ರೀಯಗೊಳಿಸುವುದು ಚಾಣಕ್ಯ ಸಿದ್ದರಾಮಯ್ಯರ ತಂತ್ರ ಎಂದು ಹೇಳಲಾಗಿದೆ.

ಇರಾನ್ ಅಧ್ಯಕ್ಷರ ನಿಧನಕ್ಕೆ ಇಂದು ಭಾರತದಲ್ಲಿ ಒಂದು ದಿನದ ಶೋಕಾಚರಣೆ

Posted by Vidyamaana on 2024-05-21 07:06:05 |

Share: | | | | |


ಇರಾನ್ ಅಧ್ಯಕ್ಷರ ನಿಧನಕ್ಕೆ ಇಂದು ಭಾರತದಲ್ಲಿ ಒಂದು ದಿನದ ಶೋಕಾಚರಣೆ

ನವದೆಹಲಿ: ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ಇಂದು (ಮೇ 21) ಭಾರತದಲ್ಲಿ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿದೆ.

ಗೃಹ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು,ಅಗಲಿದ ಗಣ್ಯರಿಗೆ ಗೌರವದ ಸಂಕೇತವಾಗಿ,

ಪುತ್ತೂರು : ಸಚಿನ್ ಟ್ರೇಡರ್ಸ್ ನಿಂದ ಲಕ್ಷಾಂತರ ರೂಪಾಯಿ ಕಳವು - ಸಿಸಿಕ್ಯಾಮರದಲ್ಲಿ ಸೆರೆ

Posted by Vidyamaana on 2023-09-09 04:44:40 |

Share: | | | | |


ಪುತ್ತೂರು : ಸಚಿನ್ ಟ್ರೇಡರ್ಸ್ ನಿಂದ ಲಕ್ಷಾಂತರ ರೂಪಾಯಿ ಕಳವು - ಸಿಸಿಕ್ಯಾಮರದಲ್ಲಿ ಸೆರೆ

ಪುತ್ತೂರು: ಪುತ್ತೂರಿನ ಖ್ಯಾತ ಹೋಲ್ ಸೇಲ್

ಡಿಸ್ಟ್ರಿಬ್ಯೂಟರ್ ಸಚಿನ್ ಟ್ರೇಡರ್ಸ್‌ ಅಂಗಡಿಯಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಬಗ್ಗೆ ಪುತ್ತೂರು ಪೊಲೀಸರಿಗೆ ಅಂಗಡಿಯ ಮಾಲಕರು

ದೂರು ನೀಡಿದ್ದಾರೆ.ಕಳವು ಪ್ರಕರಣ ಸಿಸಿ ಕ್ಯಾಮರದಲ್ಲಿ ಪತ್ತೆಯಾಗಿದೆ. ಸಚಿನ್ ಟ್ರೇಡರ್ಸ್ ನ ಮಾಲಕಿ ವಿದ್ಯಾ ನಾಯಕ್ ಮತ್ತು ಅವರ ಗಂಡ ಮಂಜುನಾಥ್ ನಾಯಕ್ ಅವರು ಅಂಗಡಿಯ ವ್ಯವಹಾರ ನೋಡಿಕೊಳ್ಳುತ್ತಿದ್ದು ಸೆ.4ರಂದು ಮಂಜುನಾಥ್ ನಾಯಕ್ ಅವರು ಲೆಕ್ಕ ಮಾಡಿಟ್ಟ ರೂ. 2,15,000 ನಗದನ್ನು ಪೇಪರ್‌ನಲ್ಲಿ ಕಟ್ಟಿ ಮನೆಗೆ ಹೋಗುವಾಗ ತೆಗೆದುಕೊಂಡು ಹೋಗಲೆಂದು ಡ್ರಾಯರ್ ಪಕ್ಕದಲ್ಲಿ ಇಟ್ಟಿದ್ದರು. ಆದರೆ ಅವರು ಮರೆತು ನಗದನ್ನು ಅಲ್ಲೇ

ಬಿಟ್ಟಿದ್ದರು.ಎರಡು ದಿನ ಬಳಿಕ ಅವರಿಗೆ ತಾನಿಟ್ಟ ಹಣದ ನೆನಪಾಗಿ ಡ್ರಾಯರ್ ಪಕ್ಕ ನೋಡಿದಾಗ ನಗದು ಅಲ್ಲಿ ನಾಪತ್ತೆಯಾಗಿತ್ತು. ಈ ಕುರಿತು ಅವರು ಅಂಗಡಿಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಸೆ.4 ರಾತ್ರಿ ಸಮಯ ಒಬ್ಬ ವ್ಯಕ್ತಿ ಅಂಗಡಿಯ ಹಿಂಬದಿಯ ಕ್ಯಾಂಟೀನ್ ಗೋಡೆಗೆ ಹತ್ತಿ ವೆಂಟಿಲೇಟರ್ ಮೂಲಕ ಒಳಪ್ರವೇಶಿಸಿ ಅಂಗಡಿಯ ಒಳಗೆ ಬಂದು ಅಂಗಡಿಯ ಡ್ರಾಯ‌ರ್ 

ಪಕ್ಕದಲ್ಲಿದ್ದ ಹಣದ ಕಟ್ಟನ್ನು ಕದ್ದು ಹೋಗುತ್ತಿರುವುದು ಕಂಡು ಬಂದಿದೆ.ಅಂಗಡಿಯ ಮಾಲಕರು ಸೆ.7ರಂದು ಪುತ್ತೂರು

ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲಸದಾಳುವಿನ ಮೇಲೆ ಸಂಶಯ :

ಸಿಸಿ ಕ್ಯಾಮರ ಪರಿಶೀಲಿಸಿದಾಗ ಅಂಗಡಿಯ ಕೆಲಸದಾಳು ಕುದ್ಮಾರು ಗ್ರಾಮದ ಚೇತನ್ ಕುಮಾರ್ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು. ಆತನೇ ಕಳವು ಮಾಡಿರಬಹುದು ಎಂದು ಅಂಗಡಿಯ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಾಟ್ರಕೋಡಿ ಜುಮಾ ಮಸೀದಿಯಲ್ಲೊಂದು ಸೌಹಾರ್ದ ಇಫ್ತಾರ್ ಕೂಟ- ಇದರ ಹಿಂದಿದೆ ಒಂದು ರೀಸನ್

Posted by Vidyamaana on 2024-03-26 08:11:30 |

Share: | | | | |


ಪಾಟ್ರಕೋಡಿ ಜುಮಾ ಮಸೀದಿಯಲ್ಲೊಂದು ಸೌಹಾರ್ದ ಇಫ್ತಾರ್ ಕೂಟ- ಇದರ ಹಿಂದಿದೆ ಒಂದು ರೀಸನ್

ಬಂಟ್ವಾಳ : ಈ ನೆಲದ ಸಾಮರಸ್ಯ ಸೌಹಾರ್ದತೆಯ ಪರಂಪರೆಗೆ ಸಾಕ್ಷಿಯಾಗಬಲ್ಲ ವಿನೂತನ ಕಾರ್ಯಕ್ರಮವೊಂದು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪಾಟ್ರಕೋಡಿ ಜುಮಾ ಮಸೀದಿ ವಠಾರದಲ್ಲಿ ಭಾನುವಾರ ನಡೆಯಿತು.

     ಬಂಟ್ವಾಳ ತಾಲೂಕಿನ ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಹಿಂದು - ಮುಸ್ಲಿಂ - ಕ್ರೈಸ್ತ ಧರ್ಮದ ನೂರಾರು ಮಂದಿ ಕೂಡುವಿಕಯ ಸೌಹಾರ್ದ ಇಫ್ತಾರ್ ಸಂಗಮ ಇಲ್ಲಿನ ಶಾಂತಿ ಸೌಹಾರ್ದತೆಗೆ ಸಾಕ್ಷಿಯಾಯಿತು.

     ಪರಸ್ಪರ ಮತಭೇದ ಮರೆತು ನಾವೆಲ್ಲರೂ ಒಂದೇ ತತ್ವ-ಸತ್ಯ ಸಾರಲು ಮಸೀದಿ - ದೈವಸ್ಥಾನ ಪ್ರಮುಖರು ಮುಂದಾಗಿರುವುದು 

ನಿಜಕ್ಕೂ ಇದೊಂದು ಅಪರೂಪದ ಕಾರ್ಯಕ್ರಮ. ಹಿಂದು ಮತ್ತು ಮುಸ್ಲಿಂ ಭಾಂದವರ ಅಪೂರ್ವ ಸಂಗಮ. ಕೋಮುಭಾವನೆ ಕೆರಳಿಸಿ, ಮತೀಯ ಸಂಘರ್ಷ ಸೃಷ್ಠಿಸಿ ಸಮಾಜ ಒಡೆಯುವ ಶಕ್ತಿಗಳ ನಡುವೆ ಇಂತಹ ಕಾರ್ಯಕ್ರಮಗಳು ಅನಿವಾರ್ಯವೇ ಸರಿ.

    ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವ ನಡೆದಿತ್ತು. ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಬರುವ ಸಂದರ್ಭ ಪರಿಸರದ ಮಸೀದಿ ವ್ಯಾಪ್ತಿಯ ಮುಸ್ಲಿಂ ಭಾಂದವರು ಅಲ್ಲಲ್ಲಿ ರಸ್ತೆಯಂಚಿನಲ್ಲಿ ನಿಂತು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಶರಬತ್ತು ಹಂಚಿ ಹೊರೆ ಕಾಣಿಕೆ ನೀಡುವ ಮೂಲಕ ಮೆರವಣಿಗೆಯ ಯಶಸ್ವಿಗೆ ಸಹಕರಿಸಿ ಸಾಮರಸ್ಯ ಮೆರೆದಿದ್ದರು. ಅಲ್ಲದೆ ಮುಸ್ಲಿಂ ಮುಖಂಡರು ಅಲ್ಲಲ್ಲಿ ಬ್ರಹ್ಮ ಕಲಶೋತ್ಸವಕ್ಕೆ ಶುಭ ಕೋರಿ ಬ್ಯಾನರ್ ಅಳವಡಿಸಿದ್ದರು. 


    ಈ ಸೌಹಾರ್ದತೆಯ ವಾತಾವರಣ, ಮಾನವೀಯತೆ, ಬಂಧುತ್ವವನ್ನು ಕಂಡ ದೈವಸ್ಥಾನದ ಆಡಳಿತ ಸಮಿತಿಯವರು ಮುಸ್ಲಿಂ ಭಾಂದವರ ಮನೆ ಮನೆಗೆ ಹೋಗಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದರು. 

ಇದರಿಂದ ಪ್ರೇರಿತರಾದ ಮುಸ್ಲಿಂ ಭಾಂದವರೂ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವ ಮೂಲಕ ಭಾವೈಕ್ಯತೆಯ ವಾತಾವರಣ ಸೃಷ್ಠಿಯಾಗಿತ್ತು. ಇಂತಹ ಸೌಹಾರ್ದತೆಯ ವಾತಾವರಣ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಮೆರೆದ ಸಾಮರಸ್ಯದ ಸವಿನೆನಪು  ಶಾಶ್ವತವಾಗಿರಿಸಬೇಕು ಎಂಬ ದೃಷ್ಠಿಯಿಂದ ಇದೀಗ ದೈವಸ್ಥಾನದ ಆಡಳಿತ ಸಮಿತಿಯವರು ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಪರಸ್ಪರ ಮಾನವೀಯತೆಯ ಸಂದೇಶ ಸಾರಿದ್ದಾರೆ.  ದೈವಸ್ಥಾನ ಮತ್ತು ಮಸೀದಿಯ ಈ ಕಾರ್ಯ ಇತರೆಡೆಗಳಿಗೆ ಮಾದರಿಯಾಗಿದೆ.


    ಈ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಸೀದಿ ಖತೀಬ್ ಖಲಂದರ್ ಶಾಫಿ ಬಾಖವಿ, ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಅದ್ಯಕ್ಷ ಕೃಷ್ಣ ಭಟ್, ಉಪಾಧ್ಯಕ್ಷ ಪರಮೇಶ್ವರ ನಾವಡ, ಕೋಶಾಧಿಕಾರಿ ಚೆನ್ನಪ್ಪ ಗೌಡ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್, ಕಾರ್ಯದರ್ಶಿ ಚರಣ್ ಕುಲಾಲ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹಾಜಿ ಆದಂ ಕುಂಞಿ,  ಕೆದಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಉಮೇಶ್ ಮುರುವ, ಮಾಜಿ ಸದಸ್ಯ ರಾಬರ್ಟ್ ಲಸ್ರಾದೋ, ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ, ಮಸೀದಿ ಕೋಶಾಧಿಕಾರಿ ಹಮೀದ್ ಹಾಜಿ ಕೋಡಿ, ಪೂರ್ವಾದ್ಯಕ್ಷರುಗಳಾದ ಮುಹಮ್ಮದ್ ಮಾಸ್ಟರ್, ಕೆ.ಎಸ್. ಯೂಸುಫ್, ಉಮ್ಮರ್ ಹಾಜಿ ಕರಿಮಜಲು, ಪ್ರಮುಖರಾದ ವಿಶ್ವನಾಥ ಶೆಟ್ಟಿ, ಬಾಲಕೃಷ್ಣ ಗೌಡ, ಚೆನ್ನಪ್ಪ ಕಂಪ, ಮಸೀದಿ ಆಡಳಿತ ಸಮಿತಿ ಸದಸ್ಯರು, ಗೌಸಿಯಾ ಯಂಗ್ ಮೆನ್ಸ್ ನಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.


    ಇದೇ ವೇಳೆ ಮಸೀದಿ ವತಿಯಿಂದ ದೈವಸ್ಥಾನದ ಅದ್ಯಕ್ಷ ಸಹಿತ ಪ್ರಮುಖರನ್ನು ಸನ್ಮಾನಿಸಲಾಯಿತು. ಅದೇ ರೀತಿ ದೈವಸ್ಥಾನದ ವತಿಯಿಂದ ಮಸೀದಿ ಅಧ್ಯಕ್ಷ, ಕಾರ್ಯದರ್ಶಿ, ಖತೀಬರ ಸಹಿತ ದೈವಸ್ಥಾನಕ್ಕೆ ಸ್ಥಳದಾನ ಮಾಡಿದ ದಿ. ಪಕ್ರಬ್ಬ ಹಾಜಿ ಅವರ ಪುತ್ರ ಹಮೀದ್ ಹಾಜಿ, ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಉಚಿತವಾಗಿ ಆಟೋ ಸೇವೆಯನ್ನು ನೀಡಿದ ರಿಕ್ಷಾ ಚಾಲಕ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು.

ಮಸೀದಿ ಅಧ್ಯಕ್ಷ ಬಾತಿಶ್ ಪಾಟ್ರಕೋಡಿ ಸ್ವಾಗತಿಸಿ, ಕಾರ್ಯದರ್ಶಿ ತಶ್ರೀಫ್ ವಂದಿಸಿದರು. ಕೆ.ಎ.ಶರೀಫ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು

ಆಂಧ್ರ ಶಾಸಕನ ಸಂಬಂಧಿಕರು ಅಮೆರಿಕದ ಆಕ್ಸಿಡೆಂಟ್‌ನಲ್ಲಿ ಬಲಿ!

Posted by Vidyamaana on 2023-12-28 16:48:43 |

Share: | | | | |


ಆಂಧ್ರ ಶಾಸಕನ ಸಂಬಂಧಿಕರು ಅಮೆರಿಕದ ಆಕ್ಸಿಡೆಂಟ್‌ನಲ್ಲಿ ಬಲಿ!

    ಆಂಧ್ರ ಶಾಸಕ ಪಿ ವೆಂಕಟ ಸತಿಶ್‌ ಕುಮಾರ್‌ರ 6 ಮಂದಿ ಸಂಬಂಧಿಕರು ಅಮೆರಿಕದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಂದ್ರದ ಅಮಲಾಪುರಂಗೆ ಸೇರಿದ ಇವರು ಅಮೆರಿಕ ಪ್ರವಾಸಕ್ಕೆ ಹೋಗಿದ್ರು. ಆದ್ರೆ ಡಿಸೆಂಬರ್‌ 26ರಂದು ಟೆಕ್ಸಾಸ್‌ ಬಳಿ ಇವರು ಟ್ರಾವೆಲ್‌ ಮಾಡ್ತಿದ್ದ ಕಾರು ಎದುರಿಗೆ ಬಂದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಉಂಟಾಗಿದೆ.ಘಟನೆಯಲ್ಲಿ ಬದುಕುಳಿದ ಒಬ್ಬ ವ್ಯಕ್ತಿಯನ್ನ ಏರ್‌ಲಿಫ್ಟ್‌ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಈತನ ಸ್ಥಿತಿಯೂ ಗಂಭೀರ ಎನ್ನಲಾಗ್ತಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದಂಡ್ ಶಿಲಾಲ್ ಪರಿಚಾರಕ ಸಂಪತ್ ಪೂಜಾರಿ ನಿಧನ

Posted by Vidyamaana on 2023-12-06 12:15:05 |

Share: | | | | |


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದಂಡ್ ಶಿಲಾಲ್ ಪರಿಚಾರಕ ಸಂಪತ್ ಪೂಜಾರಿ ನಿಧನ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂದರ್ಭ ದಂಡ್ ಶಿಲಾಲ್ ಪರಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆರೆಮೂಲೆ ನಿವಾಸಿ ಸಂಪತ್ ಪೂಜಾರಿ (31) ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.


ಸಂಪತ್ ರವರು ಜೆಸಿಬಿ ಹಾಗೂ ಹಿಟಾಚಿ, ಟಿಪ್ಪರ್ ಹೊಂದಿದ್ದು, ಕೆಲಸ ನಿರ್ವಹಿಸುತ್ತಿದ್ದರು.

ಮೃತರು ತಂದೆ, ತಾಯಿ ಸಹೋದರರನ್ನು ಅಗಲಿದ್ದಾರೆ.



Leave a Comment: