ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಅವರೊಂದಿಗಿರುವುದು ನಾನಲ್ಲ ಸಂತ್ರಸ್ತ ಮಹಿಳೆಯ ವಿಡಿಯೋ ಹೇಳಿಕೆಯಲ್ಲೇನಿದೆ? ನಾನವಳಲ್ಲ.. ಹಾಗಾದ್ರೆ ಅವಳು ಯಾರು?

Posted by Vidyamaana on 2023-04-06 09:01:25 |

Share: | | | | |


ಅವರೊಂದಿಗಿರುವುದು ನಾನಲ್ಲ ಸಂತ್ರಸ್ತ ಮಹಿಳೆಯ ವಿಡಿಯೋ ಹೇಳಿಕೆಯಲ್ಲೇನಿದೆ? ನಾನವಳಲ್ಲ.. ಹಾಗಾದ್ರೆ ಅವಳು ಯಾರು?

ಪುತ್ತೂರು: ಸ್ಥಳೀಯ ಜನಪ್ರತಿನಿಧಿ ಜೊತೆಗೆ ಮಹಿಳೆಯೊಬ್ಬರಿರುವ ಖಾಸಗಿ ಫೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಕುರಿತಾಗಿ ಸಂತ್ರಸ್ತ ಮಹಿಳೆ ಉಪ್ಪಿನಂಗಡಿ ಠಾಣೆಗೆ ದೂರನ್ನೂ ನೀಡಿದ್ದು ಮಾತ್ರವಲ್ಲದೇ ಈ ಖಾಸಗಿ ಫೊಟೋ ಕುರಿತಾಗಿ ವಿಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಆಕೆಯ ಹೇಳಿಕೆ ಇಂತಿದೆ, ‘ಜನಪ್ರತಿನಿಧಿಯೊಂದಿಗಿನ ನನ್ನ ಖಾಸಗಿ ಫೊಟೋ ಎಡಿಟ್ ಮಾಡಲಾಗಿದ್ದು ಇವುಗಳನ್ನು ವೈರಲ್ ಮಾಡುವವರ ವಿರುದ್ಧ ಸೂಕ್ತ ಶಿಕ್ಷೆಯಾಗಬೆಕು. ನನ್ನ ವೈಯುಕ್ತಿಕ ಫೋಟೋಗಳನ್ನು ಪುತ್ತೂರಿನ ಶಾಸಕರ ಜೊತೆ ಹೊಂದಾಣಿಕೆ ಮಾಡಿಕೊಂಡು ವೈರಲ್ ಮಾಡುತ್ತಿದ್ದಾರೆ, ಇದರಿಂದಾಗಿ ನನಗೆ ಮತ್ತು ಮನೆ ಮಂದಿಗೆ ತುಂಬಾ ನೋವಾಗಿದೆ. ಓರ್ವ ಮಹಿಳೆಯಾಗಿ ಈ ರೀತಿ ನನ್ನ ಮೇಲೆ ದೌರ್ಜನ್ಯ ಮಾಡುವುದು ತಪ್ಪು. ಅಲ್ಲದೇ. ನನಗೂ ಶಾಸಕರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅದೂ ಅಲ್ಲದೆ ಓರ್ವ ಮಹಿಳೆಯ ಮೇಲೆ ಇಷ್ಟು ದೊಡ್ಡ ಆರೋಪ ಸರಿಯಲ್ಲ. ಯಾರು ವೈರಲ್ ಮಾಡಿದ್ದಾರೋ ಅವರಿಗೆ ಸೂಕ್ತ ಶಿಕ್ಷೆ ಆಗಬೇಕು’ ಎಂದು ಸಂತ್ರಸ್ತ ಮಹಿಳೆ ತನ್ನ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ಈ ಕುರಿತಾಗಿ ಖಾಸಗಿ ಫೊಟೋದಲ್ಲಿರುವ ಶಾಸಕರು ಇದುವರೆಗೂ ಯಾವುದೇ ರೀತಿಯ ಹೇಳಿಕೆಯನ್ನಾಗಲೀ ಸ್ಪಷ್ಟನೆಯನ್ನಾಗಲೀ ಕೊಡದಿರುವುದು ಕ್ಷೇತ್ರದ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ವಿಟ್ಲ: ಅರವಿಂದ ಭಾಸ್ಕರ್ ಅನುಮಾನಾಸ್ಪದ ಸಾವು : ಪತ್ನಿ ಹಾಗೂ ಯೋಗೀಶ್ ಗೌಡ ವಿರುದ್ಧ ಪ್ರಕರಣ ದಾಖಲು..!!!

Posted by Vidyamaana on 2023-02-27 03:29:14 |

Share: | | | | |


ವಿಟ್ಲ: ಅರವಿಂದ ಭಾಸ್ಕರ್ ಅನುಮಾನಾಸ್ಪದ ಸಾವು : ಪತ್ನಿ ಹಾಗೂ ಯೋಗೀಶ್ ಗೌಡ ವಿರುದ್ಧ ಪ್ರಕರಣ ದಾಖಲು..!!!

ವಿಟ್ಲ: ಇಡ್ಕಿದು ಗ್ರಾಮದ ಚೈತನ್ಯ ಕುಮೇರು ನಿವಾಸಿ ಅರವಿಂದ ಭಾಸ್ಕರ್ (39) ಅನುಮಾನಾಸ್ಪದ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರವಿಂದ ಭಾಸ್ಕರ ರವರ ಸಂಬಂಧಿ ನೀಡಿದ ದೂರಿನ ಮೇರೆಗೆ ಅರವಿಂದ ಭಾಸ್ಕರ್ ರವರ ಪತ್ನಿ ಹಾಗೂ ಯೋಗೀಶ್ ಗೌಡ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

ಮೃತ ಅರವಿಂದ ಭಾಸ್ಕರ ರವರ ಮೃತದೇಹದ ಸ್ಥಿತಿಗತಿಯನ್ನು ನೋಡಿದಾಗ ಅರವಿಂದ ಭಾಸ್ಕರನ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯವಿರುವುದಾಗಿ ಹಾಗೂ ಫೆ. 25 ರಂದು ರಾತ್ರಿಯಿಂದ ಫೆ.26 ರ ಬೆಳಿಗ್ಗೆಯ ಮಧ್ಯ ಸಮಯದಲ್ಲಿ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಚೈತನ್ಯಕುಮೇರು ಎಂಬಲ್ಲಿ ಮೃತರ ವಾಸದ ಮನೆಯಲ್ಲಿ ಆರೋಪಿಗಳಾದ ಯೋಗೀಶ ಗೌಡ ಹಾಗೂ ಅರವಿಂದ ಭಾಸ್ಕರನ ಪತ್ನಿ ಆಶಾ ರವರು ಒಟ್ಟು ಸೇರಿಕೊಂಡು ಕೊಲೆ ಮಾಡುವ ಸಮಾನ ಉದ್ದೇಶದಿಂದ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 30/2023 ಕಲಂ: ಕಲಂ 302 ಜೊತೆಗೆ 34 ಐಪಿಸಿ ಮತ್ತು ಕಲಂ 3(2)(V),3(2)(Va) SC/ST (POA) Ammendmanent Act-2015 ಕಲಂ ಗಳ ಅಡಿಯಲ್ಲಿ ಅವರುಗಳ ವಿರುದ್ದ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಉಚಿತ ಶಿಬಿರ

Posted by Vidyamaana on 2024-01-25 16:33:53 |

Share: | | | | |


ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಉಚಿತ ಶಿಬಿರ

ಪುತ್ತೂರು: ಗಣರಾಜ್ಯೋತ್ಸವ ಪ್ರಯುಕ್ತ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನಲ್ಲಿ ಜ. 26ರಂದು ಮಧ್ಯಾಹ್ನ 2ರಿಂದ 6ರವರೆಗೆ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಉಚಿತ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ 1200 ರೂ. ಮೌಲ್ಯದ ಎಲುಬು ಸಾಂದ್ರತ ಪರೀಕ್ಷೆ (Bone mineral density test) ಅನ್ನು ಉಚಿತವಾಗಿ ಮಾಡಲಾಗುವುದು. ಪುತ್ತೂರಿನ ಖ್ಯಾತ ಎಲುಬು ಮತ್ತು ಕೀಲು ಸರ್ಜನ್ ಡಾ. ಸಚಿನ್ ಶಂಕರ್ ಹಾರಕೆರೆ ಅವರು ಶಿಬಿರದಲ್ಲಿ ಸಂದರ್ಶನಕ್ಕೆ ಲಭ್ಯರಿರುವರು. ಅಲ್ಲದೇ, ಫಿಸಿಯೋಥೇರೇಪಿ ತಜ್ಞರ ಸಂದರ್ಶನ ಹಾಗೂ ಫಿಸಿಯೋಥೇರೇಪಿ ಚಿಕಿತ್ಸೆ ಉಚಿತವಾಗಿ ನಡೆಯಲಿದೆ.

ಎಲುಬು ಮತ್ತು ಕೀಲು ಸಂಬಂಧಿಸಿದ ವ್ಯಾಧಿಗಳಾದ ಸಂಧಿ ವಾತಾ, ಆಮವಾತ, ಕತ್ತು ನೋವು, ಸೊಂಟ ನೋವು, ಭುಜ ನೋವು, ಎಲುಬು ಮುರಿತ, ಸ್ಪೋರ್ಟ್ಸ್ ಇಂಜ್ಯೂರಿ ಇತ್ಯಾದಿ ಸಮಸ್ಯೆಗಳಿರುವವರು ಶಿಬಿರದ ಪ್ರಯೋಜನವನ್ನು ಪಡೆಯಬಹುದು ಎಂದು ಪುರುಷರಕಟ್ಟೆ ಸಿದ್ಧಣ್ಣ ಕಾಂಪ್ಲೆಕ್ಸಿನಲ್ಲಿರುವ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನ ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞ ಡಾ. ಸುಜಯ್ ಕೃಷ್ಣ ತಂತ್ರಿ ಕೆಮ್ಮಿಂಜೆ ಪ್ರಕಟಣೆಯಲ್ಲಿ ತಿಳಿಸಿದರು.

ಕೆದಿಲದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2024-04-12 21:06:29 |

Share: | | | | |


ಕೆದಿಲದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಯಿಂದ ಅರ್ಹ ಪ್ರತೀ ಕುಟುಂಬಕ್ಕೆ 30 ಸಾವಿರ ಹಣ ಬಂದಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಕೆದಿಲ ಗ್ರಾಮದ ಬೀಟಿಗೆಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಇದುವರೆಗೆ ರಾಜ್ಯ ಮತ್ತು ದೇಶವನ್ನಾಳಿದ ಯಾವುದೇ ಸರಕಾರ ಜನರ ಖಾತೆಗೆ ಹಣ ನೀಡಿಲ್ಲ. ರಾಜ್ಯದ ಸಿದ್ದರಾಮಯ್ಯ ನೇತೃತ್ಬದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ಅನೇಕ ಕುಟುಂಬಗಳಿಗೆ ನೆಮ್ಮದಿಯ ಬದುಕು ನೀಡಿದೆ. ಮಹಿಳೆ ಸ್ವಾವವಲಂಬಿ ಬದುಕು ಕಟ್ಟಿದ್ದಾರೆ. ತೀರಾ ಬಡತನದಲ್ಲಿದ್ದ ಕುಟುಂಬಗಳು ಈಗ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದ ಪ್ರತೀಯೊಬ್ಬ ಮಹಿಳೆಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯ ಸಂದರ್ಬದಲ್ಲಿ ಹಿಂದುತ್ಬ ಎಂದು ಹೇಳಿ ಜನರ ಮನಸ್ಸನ್ನು ಕೆರಳಿಸಿ ಅಧಿಕಾರಕ್ಕೆ ಬರುವ ಬಿಜೆಪಿ ಜನತೆಗೆ ಏನು ಕೊಟ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಆಡಳಿತಾಧಿಕಾರಿ ಯೇಸುರಾಜ್ ಧರ್ಮದ ಬಗ್ಗೆ ಅಪಪ್ರಚಾರ

Posted by Vidyamaana on 2024-05-03 07:21:29 |

Share: | | | | |


ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಆಡಳಿತಾಧಿಕಾರಿ ಯೇಸುರಾಜ್ ಧರ್ಮದ ಬಗ್ಗೆ ಅಪಪ್ರಚಾರ

ಮಂಗಳೂರು, ಮೇ.2: ರಾಜ್ಯದ ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲ ಎಂದು ಹೆಸರಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಸ್.ಜೆ. ಯೇಸುರಾಜ್ ಎಂಬವರನ್ನು ನೇಮಕ ಮಾಡಲಾಗಿತ್ತು. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಇಓ ಆಗಿ ನೇಮಕ ಮಾಡಿರುವುದು ಚರ್ಚೆಗೂ ಕಾರಣವಾಗಿತ್ತು.


ಯೇಸುರಾಜ್ ಎನ್ನುವ ಹೆಸರಿನ ಕಾರಣಕ್ಕೆ ಅನ್ಯ ಧರ್ಮದವರನ್ನು ಹಿಂದುಗಳ ದೇವಸ್ಥಾನಕ್ಕೆ ನೇಮಕ ಮಾಡಿದ್ದಾರೆಂದು ಹಿಂದು ಸಂಘಟನೆಗಳ ನಾಯಕರು ಆಕ್ಷೇಪಿಸಿದ್ದರು. ಅವರ ಧರ್ಮದ ಹಿನ್ನೆಲೆಯ ಬಗ್ಗೆ ಪ್ರಶ್ನೆಯನ್ನೂ ಮಾಡಿದ್ದರು. ಈ ವಿಚಾರ ಆಕ್ಷೇಪಕ್ಕೆ ಗುರಿಯಾದ ಬೆನ್ನಲ್ಲೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದು, ಯೇಸುರಾಜ್ ಅವರ ಹಿನ್ನೆಲೆ, ಗೋತ್ರಗಳ ದಾಖಲೆಯನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

3 ನೇ ಮಹಾಯುದ್ಧದ ಭೀತಿ : ಇಸ್ರೇಲ್ ಮೇಲೆ ದಾಳಿಗೆ ಇರಾನ್, ಯೆಮೆನ್, ಸಿರಿಯಾ ಮತ್ತು ಇರಾಕ್ ಸಜ್ಜು

Posted by Vidyamaana on 2024-04-14 12:55:15 |

Share: | | | | |


3 ನೇ ಮಹಾಯುದ್ಧದ ಭೀತಿ : ಇಸ್ರೇಲ್ ಮೇಲೆ ದಾಳಿಗೆ ಇರಾನ್, ಯೆಮೆನ್, ಸಿರಿಯಾ ಮತ್ತು ಇರಾಕ್ ಸಜ್ಜು

ಇಸ್ರೇಲ್ : ಇಂದು ಮುಂಜಾನೆ ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯು ಮೂರನೇ ಮಹಾಯುದ್ಧದ ಗಂಟೆಯನ್ನು ಬಾರಿಸಿದೆ. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಇರಾನ್ ಭಾನುವಾರ ಮುಂಜಾನೆ ಇಸ್ರೇಲ್ ಮೇಲೆ ತೀವ್ರ ದಾಳಿ ನಡೆಸಿತು. ಈ ಸಮಯದಲ್ಲಿ, ಇರಾನ್ ಇಸ್ರೇಲ್ ಮೇಲೆ ನೂರಾರು ಡ್ರೋನ್ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಕೋಲಾಹಲವನ್ನು ಸೃಷ್ಟಿಸಿತು.ಇಂದು ಮುಂಜಾನೆ, ಇರಾನ್ ಮತ್ತು ಯೆಮೆನ್, ಸಿರಿಯಾ ಮತ್ತು ಇರಾಕ್ನ ಅನುಕಂಪ ಹೊಂದಿರುವವರು ಇಸ್ರೇಲ್ನಲ್ಲಿನ ಮಿಲಿಟರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಸಂಪೂರ್ಣ ದಾಳಿಯಿಂದ ಇಸ್ರೇಲ್ ಆಘಾತಕ್ಕೊಳಗಾಗಿದೆ. ಆದಾಗ್ಯೂ, ಇಸ್ರೇಲಿ ಸೈನ್ಯವು ಈ ಹೆಚ್ಚಿನ ದಾಳಿಗಳನ್ನು ಹಿಮ್ಮೆಟ್ಟಿಸಿತು. ಇರಾನ್ ಸೇರಿದಂತೆ ಇತರ ದೇಶಗಳ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಲು ಯುಎಸ್ ಇಸ್ರೇಲ್ಗೆ ಸಹಾಯ ಮಾಡಿತು.



Leave a Comment: