ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವರ್ಣ ಹಬ್ಬಕ್ಕೆ ಚಾಲನೆ

Posted by Vidyamaana on 2023-10-16 21:51:33 |

Share: | | | | |


ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವರ್ಣ ಹಬ್ಬಕ್ಕೆ ಚಾಲನೆ

ಪುತ್ತೂರು: ಪರಂಪರೆಯ ಆಭರಣಗಳಿಗೆ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನವರಾತ್ರಿ ಪ್ರಯುಕ್ತ ಸ್ವರ್ಣ ಹಬ್ಬವನ್ನು ಗ್ರಾಹಕರ ಮುಂದಿಟ್ಟಿದೆ.

ಅಕ್ಟೋಬರ್ 15ರಿಂದ 24ರವರೆಗೆ ಪುತ್ತೂರಿನ ಮುಖ್ಯರಸ್ತೆಯ ಆಚಾರ್ಯ ಕಾಂಪ್ಲೆಕ್ಸ್‌ನಲ್ಲಿರುವ ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ನಡೆಯಲಿರುವ ಸ್ವರ್ಣ ಹಬ್ಬದಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ಕಳೆದ 66 ವರ್ಷಗಳಿಂದ ಸ್ವರ್ಣೋದ್ಯಮದಲ್ಲಿ ಹೊಸ ಛಾಪು ಮೂಡಿಸಿರುವ ಜಿ.ಎಲ್. ಜ್ಯುವೆಲ್ಲರ್ಸ್, ಚಿನ್ನಾಭರಣ ಪ್ರಿಯರ ಮನೆಮಾತಾಗಿದೆ. ಇದೀಗ ಸ್ವರ್ಣ ಹಬ್ಬದ ಮೂಲಕ ಮತ್ತೆ ಗ್ರಾಹಕರಿಗೆ ಹೊಸ ಉಡುಗೊರೆಗಳನ್ನು ನೀಡಲು ಮುಂದಾಗಿದೆ.

ಬಂಗಾರದ ಚೈನ್ ಖರೀದಿಗೆ VA 6%ನಿಂದ ಆರಂಭ, ಜಂಟ್ಸ್ ಕಡ ಖರೀದಿಗೆ VA 6%ನಿಂದ ಆರಂಭ, ಆ್ಯಂಟಿಕ್ ಜ್ಯುವೆಲ್ಲರ್ ಖರೀದಿಗೆ VA 15% ನಿಂದ ಆರಂಭ, ಬ್ಯಾಂಗಲ್ಸ್ ಖರೀದಿಗೆ VA 8%ನಿಂದ ಆರಂಭ. ಗ್ರಾಹಕರಿಗೆ ನವರಾತ್ರಿಯ ಈ ಹಬ್ಬದ ಋತುವಿನಲ್ಲಿ ಚಿನ್ನಭರಣಗಳನ್ನು ಖರೀದಿಸಿ 9 ಚಿನ್ನದ ನಾಣ್ಯಗಳನ್ನು ಗೆಲ್ಲುವ ಅಮೂಲ್ಯ ಅವಕಾಶ ನೀಡಲಾಗಿದೆ. ಇದರೊಂದಿಗೆ ಸ್ವರ್ಣ ಹಬ್ಬದ ಪ್ರತಿ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಪಡೆಯುವ ಅವಕಾಶವಿದೆ.

ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ಧವಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡ ಲಭ್ಯವಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಹಾಗೂ ಈ ಜಿ.ಎಲ್. ಸ್ವರ್ಣ ಹಬ್ಬ ಎಲ್ಲ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬಿಲ್ಡರ್ ಬಳಿಯಿಂದ 25 ಲಕ್ಷ ಲಂಚಕ್ಕೆ ಬೇಡಿಕೆ - ಬ್ರೋಕರ್ ಬಳಿ ಲಂಚದ ಹಣ ಪಡೆಯುತ್ತಿದ್ದಾಗ ಮಂಗಳೂರು ಮೂಡಾ ಕಮಿಷನರ್ ಮನ್ಸೂರ್ ಆಲಿ ಬಂಧನ

Posted by Vidyamaana on 2024-03-23 21:53:57 |

Share: | | | | |


ಬಿಲ್ಡರ್ ಬಳಿಯಿಂದ 25 ಲಕ್ಷ ಲಂಚಕ್ಕೆ ಬೇಡಿಕೆ - ಬ್ರೋಕರ್ ಬಳಿ ಲಂಚದ ಹಣ ಪಡೆಯುತ್ತಿದ್ದಾಗ ಮಂಗಳೂರು ಮೂಡಾ ಕಮಿಷನರ್ ಮನ್ಸೂರ್ ಆಲಿ ಬಂಧನ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಆಯುಕ್ತ ಮನ್ಸೂರ್ ಆಲಿ 25 ಲಕ್ಷ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಮಂಗಳೂರು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮನ್ಸೂರ್ ಅಲಿಯನ್ನು ಲಂಚ ಪಡೆಯುತ್ತಿರುವಾಗಲೇ ಬಂಧಿಸಿದ್ದಾರೆ.


ಟಿಡಿಆರ್ ಕ್ಲಿಯರೆನ್ಸ್ ಮಾಡುವ ವಿಚಾರದಲ್ಲಿ ಬ್ರೋಕರ್ ಸಲೀಂ ಎಂಬವನ ಸಹಕಾರದೊಂದಿಗೆ ಮನ್ಸೂರ್ ಅಲಿ ಲಂಚ ಸ್ವೀಕರಿಸುತ್ತಿದ್ದರು. ಲೋಕಾಯುಕ್ತ ಡಿವೈಎಸ್‌ಪಿ ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.


ಬಿಲ್ಡರ್ ಒಬ್ಬರು ಮಂಗಳೂರು ತಾಲೂಕು ಕುಡುಪು ಗ್ರಾಮದ ಸರ್ವೇ ನಂ. 57/ಪಿ ರಲ್ಲಿ ಒಟ್ಟು 10.8 ಎಕ್ರೆ ಜಮೀನನ್ನು ಖರೀದಿಸಿದ್ದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸುವ ಉದ್ದೇಶದಿಂದ ಸದ್ರಿ ಜಮೀನನ್ನು ಟಿ.ಡಿ.ಆರ್ ನಿಯಮದಡಿ 20ea ಮಾಡುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಫಿರ್ಯಾದಿದಾರರಿಗೆ ಹಾಗೂ ಜಮೀನಿನ ಈ ಹಿಂದಿನ ಮಾಲಕರಿಗೆ ಪತ್ರ ವ್ಯವಹಾರವಾಗಿತ್ತು. ಅದರಂತೆ ಸದ್ರಿ ಜಮೀನು 2024 ಜನವರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿಗೆ ನೋಂದಣಿಯಾಗಿತ್ತು.


ಬಳಿಕ ಮಹಾನಗರ ಪಾಲಿಕೆಯ ಆಯುಕ್ತರು ಸದ್ರಿ ಜಮೀನಿನ ಟಿ.ಡಿ.ಆ‌ರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಪತ್ರ ಕಳುಹಿಸಿದ್ದು, ಮುಡಾ ಆಯುಕ್ತರಾದ ಮನ್ಸೂರ್ ಆಲಿರವರು ಸದ್ರಿ ಫೈಲ್ ಅನ್ನು ಪೆಂಡಿಂಗ್ ಇಟ್ಟಿದ್ದರು. ಈ ಬಗ್ಗೆ ಬಿಲ್ಡರ್ ಮುಡಾ ಆಯುಕ್ತ ಮನ್ಸೂರ್ ಆಲಿ ಬಳಿ ಹೋಗಿ ಮಾತನಾಡಿದಾಗ 25 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಫೋನ್ ಪೇ ಸ್ಕ್ಯಾನರ್ ಪ್ರಭಾವ ಎಷ್ಟಿದೆ ನೋಡಿ, ಇವರು ಡಿಜಿಟಲ್ ಭಿಕ್ಷುಕ

Posted by Vidyamaana on 2024-02-07 16:28:37 |

Share: | | | | |


ಫೋನ್ ಪೇ ಸ್ಕ್ಯಾನರ್ ಪ್ರಭಾವ ಎಷ್ಟಿದೆ ನೋಡಿ, ಇವರು ಡಿಜಿಟಲ್ ಭಿಕ್ಷುಕ

     ಹೆಚ್ಚಾಗಿ ದೇವಸ್ಥಾನಗಳ ಬಳಿ, ರೈಲ್ವೇ ಸ್ಟೇಷನ್, ಬಸ್ ನಿಲ್ದಾಣಗಳ ಬಳಿ ಅದೇ ಕೊಳೆಯಾದ ಹರಕಲು ಬಟ್ಟೆಗಳನ್ನು ಧರಿಸಿ ಭಿಕ್ಷುಕರು ಭಿಕ್ಷೆ ಬೇಡುತ್ತಾ ಅಲ್ಲೇ ಬೀದಿ ಬೀದಿ ಸುತ್ತುತ್ತಿರುತ್ತಾರೆ. ಇವರ ಈ ಅಸಹಾಯಕ ಸ್ಥಿತಿಯನ್ನು ಕಂಡು ಒಂದು ಹೊತ್ತಿನ ಊಟವಾದರೂ ಮಾಡಲಿ ಎಂದು ಕೆಲವೊಬ್ಬರು ಒಂದಷ್ಟು ಚಿಲ್ಲರೆ ಹಣವನ್ನು ಭಿಕ್ಷುಕರಿಗೆ ನೀಡುತ್ತಾರೆ.ಇನ್ನೂ ಕೆಲವರು ನನ್ನ ಬಳಿ ಚಿಲ್ಲರೆ ಹಣವಿಲ್ಲವೆಂದು ಹಣವನ್ನು ನೀಡದೆಯೇ ಹೋಗಿ ಬಿಡುತ್ತಾರೆ. ಅದಕ್ಕಾಗಿಯೇ ಈ ಚಿಲ್ಲರೆ ಹಣದ ಸಮಸ್ಯೆಯೇ ಬೇಡವೆಂದು ಇಲ್ಲೊಬ್ಬ ಮಾಡ್ರನ್ ಭಿಕ್ಷುಕ ಫೋನ್ ಪೇ ಸ್ಕ್ಯಾನರ್ ಹಿಡಿದು ಭಿಕ್ಷೆ ಬೇಡಲು ನಿಂತಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನಮ್ಮ ದೇಶವು ನಿಜವಾಗಿಯೂ ಡಿಜಿಟಲ್ ಆಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಈ ದೇವಸ್ಥಾನಗಳ ಬಳಿ, ರೈಲ್ವೇ ಸ್ಟೇಷನ್, ಬಸ್ ನಿಲ್ದಾಣಗಳ ಬಳಿ ಅದೇ ಕೊಳೆಯಾದ ಹರಕಲು ಬಟ್ಟೆಗಳನ್ನು ಧರಿಸಿ ಒಂದಷ್ಟು ಭಿಕ್ಷುಕರು ಬಿಕ್ಷೆ ಬೇಡುತ್ತಿರುತ್ತಾರೆ. ಅದರಲ್ಲಿ ಬಹುತೇಕರು ಒಂದು ಸ್ಥಳದಲ್ಲಿ ಸುಮ್ಮನೆ ಕುಳಿತು ಭಿಕ್ಷೆ ಬೇಡುತ್ತಿದ್ದರೆ, ಇನ್ನೂ ಕೆಲವು ಭಿಕ್ಷುಕರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡು ಊಟಕ್ಕೆ ದುಡ್ಡುಕೊಡಿ ಅಂತ ಬೀದಿ ಬೀದಿ ಅಲೆಯುತ್ತಾ ಭಿಕ್ಷೆ ಬೇಡುತ್ತಿರುತ್ತಾರೆ. ಮತ್ತೆ ಕೆಲವು ಭಿಕ್ಷುಕರು ಮಗುವನ್ನು ಕಂಕುಳ ಜೋಳಿಗೆಯಲ್ಲಿ ಹಾಕಿಕೊಂಡು ಹಾಡುಗಳನ್ನು ಹಾಡುತ್ತಾ ಭಿಕ್ಷೆ ಬೇಡುತ್ತಿರುತ್ತಾರೆ. ಇವರ ಅಸಹಾಯಕತೆಯನ್ನು ನೋಡಲಾರದೆ ಕೆಲವೊಬ್ಬರು ಚಿಲ್ಲರೆ ಹಣವನ್ನು ಭಿಕ್ಷುಕರಿಗೆ ನೀಡುತ್ತಾರೆ. ಇನ್ನೂ ಕೆಲವರು ನನ್ನ ಬಳಿ ಚಿಲ್ಲರೆ ಹಣವಿಲ್ಲ ಅಂತ ಹೇಳಿ ಹಣ ಕೊಡದೆಯೇ ಹೊರಟು ಹೋಗುತ್ತಾರೆ. ಈ ಚಿಲ್ಲರೆ ಹಣದ ಸಮಸ್ಯೆಯೇ ಬೇಡವೆಂದು ಇಲ್ಲೊಬ್ಬ ಭಿಕ್ಷುಕ ಫೋನ್ ಪೇ ಸ್ಕ್ಯಾನರ್ ಹಿಡಿದು ಭಿಕ್ಷೆ ಬೇಡಲು ನಿಂತಿದ್ದಾನೆ. ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರತ ನಿಜವಾಗಿಯೂ ಡಿಜಿಟಲ್ ಆಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.


ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಷಯಗಳು ವೈರಲ್ ಆಗುತ್ತಿರುತ್ತವೆ, ಅದೇ ರೀತಿ ಇದೀಗ ಡಿಜಿಲಟ್ ಭಿಕ್ಷುಕನ ಫೋಟೊ ವೈರಲ್ ಆಗಿದೆ. ಈ ವೈರಲ್ ಪೋಸ್ಟ್ ಅನ್ನು ಸರ್ದಾರ್ ಲಕ್ಕಿ ಸಿಂಗ್ (@luckyschawla) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಫೋಟೋದಲ್ಲಿ ಯಾವುದೋ ನಗರದ ಜನ ನಿಬಿಡ ಪ್ರದೇಶದಲ್ಲಿ ಭಿಕ್ಷುಕನೊಬ್ಬ ಭಿಕ್ಷೆ ಬೇಡುತ್ತಾ ನಿಂತಿರುವುದನ್ನು ಕಾಣಬಹುದು. ಆತ ಒಂದು ಕೈಯನ್ನು ಚಾಚಿ ಭಿಕ್ಷೆ ಹಾಕಿ ಅಂತ ಕೇಳುತ್ತಿದ್ದರೆ, ಇನ್ನೊಂದು ಕೈಯಲ್ಲಿ ಫೋನ್ ಪೇ ಸ್ಕ್ಯಾನರ್ ಹಿಡಿದು ನಿಂತಿರುವುದನ್ನು ಕಾಣಬಹುದು. ಈ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಾವು ಎಂತೆಂತಹ ಭಿಕ್ಷುಕರನ್ನು ನೋಡಿದ್ದೇವೆ ಆದ್ರೆ ಈ ಡಿಜಿಟಲ್ ಭಿಕ್ಷುಕನನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಹಲವರು ಹೇಳಿದ್ದಾರೆ.ಫೆಬ್ರವರಿ 06 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 11 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವನ್ಯಾರಪ್ಪಾ ಡಿಜಿಟಲ್ ಭಿಕ್ಷುಕʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಡಿಜಿಟಲ್ ಇಂಡಿಯಾʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼದೇಶದ ಜನರಿಗೆ ಉಚಿತ ರೇಷನ್ ಲಭ್ಯವಿರುವಾಗ ಇತನಿಗೆ ಭಿಕ್ಷೆ ಬೇಡುವ ಅವಶ್ಯಕತೆ ಏನಿದೆʼ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಅನೇಕರು ಈ ಡಿಜಿಟಲ್ ಭಿಕ್ಷುಕನನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

Posted by Vidyamaana on 2024-07-06 04:30:03 |

Share: | | | | |


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ (ನಾಳೆ, ಜು.6) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ

ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ ಡಾ.ಜಿ.ಜಿ ಲಕ್ಷ್ಮಣ ಪ್ರಭು ಹೃದಯಾಘಾತಕ್ಕೆ ಬಲಿ

Posted by Vidyamaana on 2023-11-17 12:33:12 |

Share: | | | | |


ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ ಡಾ.ಜಿ.ಜಿ ಲಕ್ಷ್ಮಣ ಪ್ರಭು ಹೃದಯಾಘಾತಕ್ಕೆ ಬಲಿ

ಮಂಗಳೂರು, ನ.17: ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ (ಮೂತ್ರಶಾಸ್ತ್ರ ವಿಭಾಗ) ತಜ್ಞರಾಗಿದ್ದ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನರಾಗಿದ್ದಾರೆ.


61 ವರ್ಷದ ಲಕ್ಷ್ಮಣ ಪ್ರಭು ಅವರು ವಾರದ ಹಿಂದೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. 


ಮೂರು ದಶಕಕ್ಕೂ ಹೆಚ್ಚು ಅನುಭವ ಹೊಂದಿದ್ದ ಡಾ. ಜಿ ಜಿ ಲಕ್ಷ್ಮಣ ಪ್ರಭು ಹಲವು ವರ್ಷಗಳ ಕಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಹಲವಾರು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸಿದ್ದ ಅವರು, ಯುರೊಲಿಥಿಯಾಸಿಸ್, ಆಂಡ್ರಾಲಜಿ, ಯುರೊಡೈನಾಮಿಕ್ಸ್, ರೆಕಾನ್-ಯೂರಾಲಜಿ, ಯುರೊಜಿನೆಕಾಲಜಿ ಮತ್ತು ಎಂಡೋರಾಲಜಿಯಲ್ಲಿ ಪರಿಣತಿಯನ್ನು ಹೊಂದಿದ್ದರು. ಡಾ.ಜಿ.ಜಿ. ಲಕ್ಷ್ಮಣ ಪ್ರಭು ಅವರ ಅಕಾಲಿಕ ನಿಧನಕ್ಕೆ ಅನೇಕ ಗಣ್ಯರು, ಹಿರಿಯ , ಕಿರಿಯ ವೈದ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಕೆಬಿ ಪಿತ್ತಲೆ ಆಂಡ ಇಂಚನೆ - ಒಂಭತ್ತು ಲಕ್ಷ ಕೊಟ್ಟು ಬೆತ್ತಲೆ ಕನ್ನಡಿ ಖರೀದಿಸಿ ಮೋಸ ಹೋದ ಅಜ್ಜ

Posted by Vidyamaana on 2023-08-18 05:58:17 |

Share: | | | | |


ಕೆಬಿ ಪಿತ್ತಲೆ ಆಂಡ ಇಂಚನೆ - ಒಂಭತ್ತು ಲಕ್ಷ ಕೊಟ್ಟು ಬೆತ್ತಲೆ ಕನ್ನಡಿ ಖರೀದಿಸಿ ಮೋಸ ಹೋದ ಅಜ್ಜ

ಲಖನೌ: ಈ ಕನ್ನಡಿಯಲ್ಲಿ ಎಲ್ಲರೂ ಬೆತ್ತಲೆಯಾಗಿ ಕಾಣಿಸುತ್ತಾರೆ ಎಂಬ ಮೋಸದ ಆಶ್ವಾಸನೆ ಬಲೆಗೆ ಬಿದ್ದ 72 ವರ್ಷದ ವೃದ್ಧನೊಬ್ಬ ಬರೋಬ್ಬರಿ 9 ಲಕ್ಷ ರೂ.. ಕೊಟ್ಟು ಮ್ಯಾಜಿಕ್‌ ಕನ್ನಡಿ ಖರೀದಿಸಿ ಮೋಸ ಹೋದ ಚಿತ್ರ ವಿಚಿತ್ರವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಮ್ಯಾಜಿಕ್‌ ಕನ್ನಡಿ ಖರೀದಿಸಿದ ಬಳಿಕ ಇದರಲ್ಲಿ ಯಾವುದೇ ಮ್ಯಾಜಿಕ್‌ ಇಲ್ಲ, ನನಗೇ ಮ್ಯಾಜಿಕ್‌ ಮಾಡಿ ವಂಚಿಸಲಾಗಿದೆ ಎಂಬುದು ವೃದ್ಧನ ಅರಿವಿಗೆ ಬಂದಿದೆ. ವಂಚನೆ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಅವಿನಾಶ್‌ ಕುಮಾರ್‌ ಶುಕ್ಲಾ (72) ಎಂಬ ವೃದ್ಧನಿಗೆ ಪಶ್ಚಿಮ ಬಂಗಾಳದ (West Bengal) ಮೂರು ವ್ಯಕ್ತಿಗಳು ಈ ವಂಚನೆ ಎಸಗಿದ್ದು ಇದು ಮ್ಯಾಜಿಕ್‌ ಕನ್ನಡಿ. ಇದರಲ್ಲಿ ಎಲ್ಲರೂ ಬೆತ್ತಲಾಗಿ ಕಾಣುತ್ತಾರೆ. ಇದು ಭವಿಷ್ಯವನ್ನು ತೋರಿಸುತ್ತದೆ. ಇದನ್ನು ನಾಸಾ ವಿಜ್ಞಾನಿಗಳು (Nasa Scientist) ಬಳಸಿದ್ದಾರೆ ಎಂದು ಸುಳ್ಳು ಹೇಳಿ ಕನ್ನಡಿ ಕೊಳ್ಳುವಂತೆ ಮಾಡಿದ್ದರುಇದನ್ನು ನಂಬಿದ ವೃದ್ಧ 9 ಲಕ್ಷ ರು. ಹಣ ಕೊಟ್ಟು ಕನ್ನಡಿ ಖರೀದಿಸಿ ಮೋಸ ಹೋಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಥ ಸಿಂಗ್ರೇ, ಮೊಲಯ ಸರ್ಕಾರ್‌, ಸುದೀಪ್ತ ಸಿನ್ಹಾ ರಾಯ್‌ ಎಂಬ ಮೂವರು ವಂಚಕರನ್ನು ಬಂಧಿಸಲಾಗಿದೆ. ಅಲ್ಲದೇ ಬಂಧಿತರಿಂದ 5 ಮೊಬೈಲುಗಳು, ಅತಿಂದ್ರೀಯ ಶಕ್ತಿ ಪ್ರದರ್ಶಿಸುವ ವಿಡಿಯೋ 28 ಸಾವಿರ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ.



Leave a Comment: