ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಸುದ್ದಿಗಳು News

Posted by vidyamaana on 2024-07-03 08:24:56 |

Share: | | | | |


ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. ನಾಲ್ವರು ಕೆಎಎಸ್ ಅಧಿಕಾರಿ ಹಾಗೂ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ವರ್ಗಾವಣೆಗೊಂಡ ಕೆಎಎಸ್‌ ಅಧಿಕಾರಿಗಳು

ಡಾ. ಜಗದೀಶ್‌ ಕೆ. ನಾಯಕ್‌

ರಘುನಂದನ್‌ ಎ.ಎನ್‌

ಪ್ರಸನ್ನ ಕುಮಾರ್‌ ವಿ.ಕೆ

ಹುಲ್ಲುಮನಿ ತಿಮ್ಮಣ್ಣ

ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು

ಬಿ. ರಮೇಶ -ಡಿಐಜಿಪಿ, ಪೂರ್ವ ವಲಯ, ದಾವಣಗೆರೆ

ಎನ್. ವಿಷ್ಣು ವರ್ಧನ್ -ಎಸ್.ಪಿ. ಮೈಸೂರು ಜಿಲ್ಲೆ

ಸೀಮಾ ಲಾಟ್ಕರ್ -ಪೊಲೀಸ್ ಆಯುಕ್ತರು, ಮೈಸೂರು ನಗರ

ರೇಣುಕಾ ಸುಕುಮಾರ -ಎಐಜಿಪಿ ಬೆಂಗಳೂರು ಡಿಜಿ ಕಚೇರಿ

ಸಿ.ಕೆ. ಬಾಬಾ -ಎಸ್.ಪಿ. ಬೆಂಗಳೂರು ಗ್ರಾಮಾಂತರ

ಸುಮನ್ ಡಿ. ಪೆನ್ನೇಕರ್ -ಎಸ್‌ ಪಿ, ಬಿಎಂಟಿಎಫ್

ಸಿ.ಬಿ. ರಿಷ್ಯಂತ್ -ಎಸ್.ಪಿ

ಚನ್ನಬಸವಣ್ಣ - ಎಐಜಿಪಿ, ಆಡಳಿತ, ಡಿಜಿ ಕಚೇರಿ

ಲಾಬೂ ರಾಮ್ -ಐಜಿಪಿ ಕೇಂದ್ರ ವಲಯ

ರವಿಕಾಂತೇಗೌಡ -ಐಜಿಪಿ ಕೇಂದ್ರ ಕಚೇರಿ- ಒಂದು ಬೆಂಗಳೂರು ಡಿಜಿ ಕಚೇರಿ

ಕೆ. ತ್ಯಾಗರಾಜನ್ -ಐಜಿಪಿ, ಐ.ಎಸ್.ಡಿ.

ಎನ್. ಶಶಿಕುಮಾರ್ -ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್

ಪ್ರದೀಪ್‌ ಗುಂಡಿ - ಎಸ್‌ ಪಿ. ಬೀದರ್‌ ಜಿಲ್ಲೆ

ಯತೀಶ್‌ ಎನ್. - ಎಸ್‌ ಪಿ ದಕ್ಷಿಣ ಕನ್ನಡ ಜಿಲ್ಲೆ

ಮಲ್ಲಿಕಾರ್ಜುನ ಬಾಲದಂಡ ಎಸ್‌ ಪಿ ಮಂಡ್ಯ ಜಿಲ್ಲೆ

ಡಾ.ಟಿ. ಕವಿತಾ ಎಸ್.ಪಿ. ಚಾಮರಾಜನಗರ ಜಿಲ್ಲೆ

ಬಿ. ನಿಖಿಲ್‌ ಎಸ್‌ ಪಿ ಕೋಲಾರ ಜಿಲ್ಲೆ

 Share: | | | | |


ರಮ್ಯ ಪೋಯೆರಿಗೆ.. ಸುದ್ದಿ ಫೇಕ್ ಮಾರ್ರೆ – ನಟಿ ರಮ್ಯಾ ಯುರೋಪ್ ನಲ್ಲಿದ್ದಾರೆ

Posted by Vidyamaana on 2023-09-06 14:55:10 |

Share: | | | | |


ರಮ್ಯ ಪೋಯೆರಿಗೆ.. ಸುದ್ದಿ ಫೇಕ್ ಮಾರ್ರೆ  – ನಟಿ ರಮ್ಯಾ ಯುರೋಪ್ ನಲ್ಲಿದ್ದಾರೆ

ಬೆಂಗಳೂರು: ಮೋಹಕ ತಾರೆ ರಮ್ಯಾ ಅಭಿಮಾನಿಗಳು ಬುಧವಾರ (ಸೆ.6 ರಂದು) ಶಾಕ್ ಗೆ ಒಳಗಾಗಿದ್ದಾರೆ. ನಟಿ ರಮ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಮ್ಯಾ ಇದ್ದಕ್ಕಿದ್ದಂತೆ ಟ್ರೆಂಡ್ ಆಗಿದ್ದಾರೆ.


ಮೋಹಕ ತಾರೆ ರಮ್ಯಾ ಕಳೆದ ಕೆಲ ಸಮಯದಿಂದ ಚಿತ್ರರಂಗದಿಂದ ದೂರವಾಗಿದ್ದಾರೆ. ಇತ್ತೀಚೆಗೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರು. ಡಾಲಿ ಧನಂಜಯ ಅವರ ಸಿನಿಮಾದಲ್ಲಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ತಮ್ಮ ಬ್ಯಾನರ್ ನಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.


ಈ ನಡುವೆ ಬುಧವಾರ ಅವರು ಹಠಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಮಿಳು ಸೋಶಿಯಲ್ ‌ಮೀಡಿಯಾದ ಕೆಲ ಪೇಜ್ ಗಳಲ್ಲಿ ಸುದ್ದಿ ಹರಿದಾಡಿದೆ.ಇದನ್ನು ಕೇಳಿ ಇತ್ತ ಕರ್ನಾಟಕದಲ್ಲಿ ರಮ್ಯಾ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.


ಇದೊಂದು ಸುಳ್ಳು ಸುದ್ದಿ ರಮ್ಯಾ ಅವರು ಆರಾಮವಾಗಿ ಯೂರೋಪ್ ನಲ್ಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಸುಳ್ಳು ಸುದ್ದಿ ಹಬ್ಬಿದ್ದೇಗೆ?:


ಕಾಲಿವುಡ್ ಸಿನಿಮಾರಂಗ ನಟಿ ರಮ್ಯಾ ಎನ್ನುವವರು ನಿಧನರಾಗಿದ್ದಾರೆ. ಇದೇ ಹೆಸರಿನೊಂದಿಗೆ ಕೆಲವರು ಕನ್ನಡದ ನಟಿ ರಮ್ಯಾ ಅವರ ಫೋಟೋವನ್ನು ಬಳಸಿಕೊಂಡು ಅವರು ‌ನಿಧನರಾಗಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಎಲ್ಲಿಯವರೆಗೆ ಅಂದರೆ ಸಿನಿಮಾರಂಗದ ಟ್ವಿಟರ್ ಪೇಜ್ ಗಳಾದ ಎಸ್ಎಸ್ ಸಂಗೀತ ಮತ್ತು ದಿನಕರನ್ ಅವರು ಕೂಡ ರಮ್ಯಾ ಅವರ ಫೋಟೋ ಹಂಚಿಕೊಂಡಿದ್ದರು.


ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದ ತಮಿಳು ಮೀಡಿಯಾಗಳ ವಿರುದ್ದ ರಮ್ಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮ್ಯಾ ಸದ್ಯ ಸ್ವಿಜರ್ಲ್ಯಾಂಡ್ ನಲ್ಲಿದ್ದಾರೆ.

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಭಾರತೀಯ ಪರಂಪರಾ ದಿನಾಚರಣೆ

Posted by Vidyamaana on 2023-06-03 12:11:43 |

Share: | | | | |


ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಭಾರತೀಯ ಪರಂಪರಾ ದಿನಾಚರಣೆ

ಪುತ್ತೂರು: ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ

ಭಾರತೀಯ ಪರಂಪರಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಖ್ಯಾತ ಚಿಂತಕರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಪಂಚದ ಇತರೆ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶ ಅವಿಚ್ಛಿನ್ನವಾದ ಸಾಂಸೃತಿಕ ವೈಭವವನ್ನು ಹೊಂದಿದೆ. ರೋಮಾಂಚಕ ಇತಿಹಾಸ, ಶ್ರೀಮಂತ ಸಂಸ್ಕೃತಿ, ಅದ್ಭುತ ಸ್ಮಾರಕಗಳು ಮತ್ತು ಪರಂಪರೆಯನ್ನು ಹೊಂದಿರುವ ದೇಶ ಭಾರತ. ಸಿಂಧೂ ಬಯಲಿನ ನಾಗರಿಕತೆಯನ್ನು ನಾಗರಿಕತೆಗಳ ತೊಟ್ಟಿಲು ಎನ್ನುತ್ತಾರೆ.  ಅದಕ್ಕೆ ತಕ್ಕಂತೆ ನಮ್ಮ ಭಾರತದ ಶ್ರೇಷ್ಠ ಪರಂಪರೆ ಬೆಳೆದುಬಂದಿದೆ ಎಂದು ಹೇಳಿದ ಅವರು, ಭಾರತವೆಂದರೆ ಅದು ಬರೇ ದೇಶವಲ್ಲ. ಜನ್ಮಭೂಮಿ, ಮಾತೃಭೂಮಿ, ಕರ್ಮಭೂಮಿ, ಪುಣ್ಯಭೂಮಿ, ತ್ಯಾಗಭೂಮಿ, ಯಾಗಭೂಮಿ, ಯೋಗಭೂಮಿ ನಮ್ಮ ಭಾರತ. ಹೀಗೆ ನಮ್ಮ ಭಾರತದ ಶ್ರೇಷ್ಠತೆ ಧೀಮಂತಿಕೆ ಅಪಾರವಾಗಿದೆ. ಎಲ್ಲರು ನಮ್ಮವರೆಂಬ ಶ್ರೇಷ್ಠ ಚಿಂತನೆ ಭಾರತೀಯರದ್ದು ಮಾತ್ರ ಎಂದರೆ ತಪ್ಪಲ್ಲ. ಅದನ್ನು ಇವತ್ತಿನ ಯುವಜನತೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆ ಮೂಲಕ ಮತ್ತೊಮ್ಮೆ ಭಾರತದ ಶ್ರೇಷ್ಠತೆಯನ್ನು ವಿಶ್ವಕ್ಕೆ ತಿಳಿಸಬೇಕಾಗಿದೆ. ಅದಕ್ಕಾಗಿ ನಾವೆಲ್ಲರೂ ನಮ್ಮ ಭಾರತವನ್ನು ನಮ್ಮ ದೇಶವೆಂಬ ಪ್ರೇಮದೊಂದಿಗೆ ಪ್ರೀತಿಸೋಣ. ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ. ಮಾತನಾಡಿ, ಪ್ರಜಾಪ್ರಭುತ್ವದ ರಾಷ್ಟ್ರೀಯತೆ, ಸಂವಿಧಾನದ ಪರಿಕಲ್ಪನೆ,  ಸಮಾನತೆಯ ವಿಶಾಲ ಮನೋಭಾವ, ಏಕತೆ ಸಂಸ್ಕೃತಿಯ ಅಖಂಡತೆ, ದೇಶದ ಕುರಿತಾದ ಅಪಾರ ಅಭಿಮಾನವು ಭಾರತವನ್ನೇ ಸರ್ವಸ್ವವಾಗಿರಿಸಿದ ಸರ್ವ ಭಾರತೀಯರಲ್ಲೂ ತಾಯಿ ಭಾರತಿ ಜಾಗೃತಳಾಗಿದ್ದಾಳೆ. ವಿಶ್ವದ ಯಾವ ಭಾಗಗಳಲ್ಲಿಯೂ ಯಾವ ಮೂಲೆಗಳಲ್ಲಿಯೂ ಕಾಣ ಸಿಗದ ದೇಶಭಕ್ತಿ, ನಾಡು ನುಡಿಯ ಬಗೆಗಿನ ಪ್ರೀತಿ, ಸ್ಪಂದನೆ ಹಾಗೂ ಅಂತಃಕ‌ರಣ ಸೇವಾತತ್ಪರತೆಯ ವಿಶಾಲ ಮನೋಭಾವ ಕಾಣಿಸಲ್ಪಡುವುದೆಂದರೆ ಅದು ನಮ್ಮ ಭರತ ಭೂಮಿಯಲ್ಲಿ ಮಾತ್ರ ಎಂದ ಅವರು, ದೇವಾನುದೇವತೆಗಳು ಅವತರಿಸಿದ ಈ ಮಣ್ಣಿನಲ್ಲಿ  ಭಾರತೀಯರು ವಿವಿಧತೆಯಲ್ಲಿ ಏಕತೆಯನ್ನು ಕಂಡು ಸರ್ವ ಧರ್ಮ ಸಹಿಷ್ಣುತೆಯಿಂದ ಬಾಳಿ “ವಸುಧೈವ ಕುಟುಂಬಕಂ’ ಎಂಬ ತತ್ತ್ವವನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ. ಅದನ್ನು ಉಳಿಸಿ, ಬೆಳೆಸುವ ಮಹತ್ತರವಾದ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳಿಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತದ ಪರಂಪರೆಯನ್ನು ಅರಿತುಕೊಳ್ಳಿ ಎಂದರು.


ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ಸಂಗೀತಾ ಎಸ್. ಎಂ., ಸಾಂಸ್ಕೃತಿಕ ಸಂಘದ ಸಂಯೋಜನಾಧಿಕಾರಿ ಡಾ. ರೇಖಾ, ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ನಾಯಕ ಕಮಲಾಕ್ಷ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ನಾಯಕ ಕಮಲಾಕ್ಷ ಸ್ವಾಗತಿಸಿ, ವಿದ್ಯಾರ್ಥಿ ನಾಯಕಿ ಪೂಜಾ ಕೆ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅರ್ಪಿತಾ ಸದಾಶಿವ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭಾರತೀಯ ಪರಂಪರೆಯನ್ನು ಸಾರುವ ವಿಶೇಷ ಸಾಂಸ್ಕೃತಿಕ ವೈಭವವನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದರು.

ಖಾಸಗಿ ಬಸ್ ಪಲ್ಟಿ: ಇಬ್ಬರು ಪ್ರಯಾಣಿಕರ ಸಾವು, 7 ಮಂದಿ ಗಂಭೀರ

Posted by Vidyamaana on 2024-06-03 11:35:47 |

Share: | | | | |


ಖಾಸಗಿ ಬಸ್ ಪಲ್ಟಿ: ಇಬ್ಬರು ಪ್ರಯಾಣಿಕರ ಸಾವು, 7 ಮಂದಿ ಗಂಭೀರ

ಯಾದಗಿರಿ: ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಮೃತಪಟ್ಟು, 7 ಜನ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗುಡೂರು ಬಳಿ ನಡೆದಿದೆ.

ಸಾಲಿನಲ್ಲಿ ನಿಂತೇ ಮತ ಚಲಾಯಿಸಿದ ಅಶೋಕ್ ರೈ

Posted by Vidyamaana on 2023-05-10 05:46:04 |

Share: | | | | |


ಸಾಲಿನಲ್ಲಿ ನಿಂತೇ ಮತ ಚಲಾಯಿಸಿದ ಅಶೋಕ್ ರೈ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ   ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಕೋಡಿಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಬೆಳಿಗ್ಗೆ ಮತದಾನ ಆರಂಭವಾಗಿದ್ದು, ದ.ಕ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ. ಮತದಾನ ಆರಂಭವಾಗುತ್ತಿದ್ದಂತೆಯೇ ಮತದಾರರು ಉತ್ಸಾಹದಿಂದ ಮತದಾನ ಮಾಡಲು ಆಗಮಿಸುತ್ತಿದ್ದಾರೆ.

10ನೇ ತರಗತಿ ಪರೀಕ್ಷೆಯಲ್ಲಿ 623 ಅಂಕ ಪಡೆದ ಜವಾನನಿಗೆ ಓದಲೂ, ಬರೆಯಲು ಗೊತ್ತಿಲ್ಲ! ತನಿಖೆ ಆರಂಭ

Posted by Vidyamaana on 2024-05-24 05:44:32 |

Share: | | | | |


10ನೇ ತರಗತಿ ಪರೀಕ್ಷೆಯಲ್ಲಿ 623 ಅಂಕ ಪಡೆದ ಜವಾನನಿಗೆ ಓದಲೂ, ಬರೆಯಲು ಗೊತ್ತಿಲ್ಲ! ತನಿಖೆ ಆರಂಭ

ಬೆಂಗಳೂರು :10ನೇ ತರಗತಿ ಪರೀಕ್ಷೆಯಲ್ಲಿ ಶೇ.99.7ರಷ್ಟು ಅಂಕಗಳನ್ನು ಗಳಿಸಿದ್ದ 23 ವರ್ಷದ ಪ್ರಭು ಲಕ್ಷ್ಮೀಕಾಂತ್ ಲೋಕರೆ ಎಂಬ ಜವಾನನಿಗೆ ಓದಲು ಅಥವಾ ಬರೆಯಲು ಬರುವುದಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.ಈ ಬಹಿರಂಗಪಡಿಸುವಿಕೆಯು ಆರೋಪದ ಬಗ್ಗೆ ತನಿಖೆಯನ್ನು ಮಾಡಲಾಗುತ್ತಿದೆ.

ಹೆಚ್ಚಿನ ಅಂಕಗಳನ್ನು ಗಳಿಸಿದ ನಂತರ, ಲೋಕರೆ ಕೊಪ್ಪಳ ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಪಡೆದರು. ವರದಿಯ ಪ್ರಕಾರ, ಲೋಕರೆ ಅವರ 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ಜವಾನರ ನೇಮಕಾತಿ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿಯಲ್ಲಿ ಏಪ್ರಿಲ್ 22, 2024 ರಂದು ಅವರ ಹೆಸರು ಕಾಣಿಸಿಕೊಂಡಾಗ ಅವರನ್ನು ಕೆಲಸಕ್ಕೆ ಆಯ್ಕೆ ಮಾಡಲಾಯಿತು. ಲೋಕರೆ ಅವರ ಶೈಕ್ಷಣಿಕ ದಾಖಲೆಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

ನಾಪತ್ತೆಯಾಗಿದ್ದ ಕಾರ್ಕಳ ಹೆಡ್ ಕಾನ್ಸ್ ಟೇಬಲ್ ಶವ ಬಾವಿಯಲ್ಲಿ ಪತ್ತೆ ; ಕಾರ್ಕಳ ಪೊಲೀಸರ ತನಿಖೆ

Posted by Vidyamaana on 2023-10-23 15:51:51 |

Share: | | | | |


ನಾಪತ್ತೆಯಾಗಿದ್ದ ಕಾರ್ಕಳ ಹೆಡ್ ಕಾನ್ಸ್ ಟೇಬಲ್ ಶವ ಬಾವಿಯಲ್ಲಿ ಪತ್ತೆ ; ಕಾರ್ಕಳ ಪೊಲೀಸರ ತನಿಖೆ

ಉಡುಪಿ, ಅ.23: ಮನೆಗೆ ಬರುತ್ತೇನೆಂದು ಹೇಳಿ ನಾಪತ್ತೆಯಾಗಿದ್ದ ಕಾರ್ಕಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 


ಕಾರ್ಕಳ ನಗರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶೃತಿನ್ ಶೆಟ್ಟಿ (35) ಮೃತದೇಹ ಕಾರ್ಕಳ ಪುಲ್ಕೇರಿ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಅಸಹಜ ಸಾವೆಂದು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಅಕ್ಟೋಬರ್ 19ರಂದು ಶೃತಿನ್ ಶೆಟ್ಟಿ ಕಾರ್ಕಳ ಠಾಣೆಗೆ ಕರ್ತವ್ಯಕ್ಕೆಂದು ತೆರಳಿ, ಅಲ್ಲಿ ರಜೆ ಹಾಕಿ ನಾಪತ್ತೆಯಾಗಿದ್ದರು.


ಪಡುಬಿದ್ರೆಯ ಕಾಪು ಜನಾರ್ದನ ದೇವಸ್ಥಾನ ಬಳಿಯ ಅಂಗಡಿಮನೆ ನಿವಾಸಿ ಶೃತಿನ್ ಶೆಟ್ಟಿ (35) ಎರಡು ತಿ‌ಂಗಳ ಹಿಂದೆಯಷ್ಟೆ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿ ಪಡೆದು ಕಾರ್ಕಳ ನಗರ ಠಾಣೆಗೆ ಬಂದಿದ್ದರು.  19 ರಂದು ಸಂಜೆ 7.30ಕ್ಕೆ ಪತ್ನಿಗೆ ಫೋನ್ ಮಾಡಿ, ಮನೆಗೆ ಬರುತ್ತಿದ್ದೇನೆ ಎಂದು ಶೃತಿನ್ ಹೇಳಿದ್ದರು. ಮನೆಗೂ ಬಾರದೇ ಇದ್ದುದರಿಂದ ಮತ್ತು ಪತಿಯ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಪತ್ನಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಬಾವಿಯಲ್ಲಿ ಶವ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಸಾವಿನ ಹಿಂದೆ ಬೇರೆ ಕಾರಣ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.‌



Leave a Comment: