ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಸುದ್ದಿಗಳು News

Posted by vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


11 ತಿಂಗಳ ಮಗುವನ್ನು ಬಿಟ್ಟು ಪ್ರಿಯಕರನಬಳಿ ಬಂದ ಹುಬ್ಬಳ್ಳಿ ಮಹಿಳೆ

Posted by Vidyamaana on 2023-06-14 08:48:13 |

Share: | | | | |


11 ತಿಂಗಳ ಮಗುವನ್ನು ಬಿಟ್ಟು ಪ್ರಿಯಕರನಬಳಿ ಬಂದ ಹುಬ್ಬಳ್ಳಿ ಮಹಿಳೆ

ಪುತ್ತೂರು: ತವರು ಮನೆಗೆ ತೆರಳಿದ್ದ ಮಹಿಳೆಯೋರ್ವರು ಅಲ್ಲಿ ತನ್ನ ೧೧ ತಿಂಗಳ ಮಗುವನ್ನು ಬಿಟ್ಟು ಪುತ್ತೂರಿನಲ್ಲಿದ್ದ ತನ್ನ ಪ್ರಿಯತಮನನ್ನು ಸೇರಿಕೊಂಡಿದ್ದು ಆಕೆಯನ್ನು ಹುಡುಕಿಕೊಂಡು ಮನೆಯವರು ತಡ ರಾತ್ರಿ ಪುತ್ತೂರಿನ ಕೋಡಿಂಬಾಡಿಯಲ್ಲಿ ಹುಡುಕಾಟ ನಡೆಸಿದ್ದು ಆದರೆ ಅಲ್ಲಿಂದ ಅವರಿಬ್ಬರು ತಪ್ಪಿಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ ಘಟನೆ ಜೂ. ೧೩ ರಂದು ತಡ ರಾತ್ರಿ ನಡೆದಿದೆ.

ಹುಬ್ಬಳ್ಳಿಯ ಮಹಿಳೆಯೋರ್ವರು ಅದೇ ಊರಿನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತ ಕೋಡಿಂಬಾಡಿ ಭಾಗದಲ್ಲಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಮನೆಯವರಿಗೆ ಮೊದಲೇ ಇತ್ತು. ತವರು ಮನೆಯಲ್ಲಿದ್ದ ಆಕೆ ದಿಡೀರನೆ ತನ್ನ ಮಗುವನ್ನು ತೊರೆದು ನಾಪತ್ತೆಯಾಗಿದ್ದಳು. ಫೋನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಆಕೆ ತಪ್ಪಿಸಿಕೊಂಡು ಆತನ ಬಳಿಗೆ ಬಂದಿರಬಹುದು ಎಂದು ಭಾವಿಸಿ ಆಕೆಯ ತವರು ಮನೆಯವರು ಪುತ್ತೂರಿಗೆ ಬಂದಿದ್ದಾರೆ. ರಾತ್ರಿ ಸುಮಾರು ೧೧ ಗಂಟೆಯ ವೇಳೆ ಕೋಡಿಂಬಡಿಗೆ ಬಂದಿದ್ದಾರೆ. ಪರಿಚಯವಿಲ್ಲದ ಜನರು ವ್ಯಕ್ತಿಯೋರ್ವನನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ರವರು ಅವರಿಂದ ಮಾಹಿತಿ ಪಡೆದುಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿತಿ ನೀಡಿದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಪೊಲಿಸರು ಬಂದಿದ್ದು ಪೊಲೀಸರು ಅವರ ಜೊತೆ ಹುಡುಕಾಟ ಆರಂಭಿಸಿದ್ದಾರೆ. ಆದರೆ ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಆತ ಅಲ್ಲಿಂದ ಪರಾರಿಯಾಗಿದ್ದ. ಹುಡುಕಾಟ ನಡೆಸಿದ ಅವರು ಕೊನೆಗೆ ಪುತ್ತೂರಿಗೆ ಬಂದು ನಗರ ಠಾಣೆಯಲ್ಲಿ ಸೇರಿಕೊಂಡಿದ್ದರು. ಬಳಿಕ ಪೊಲೀಸರು ಟವರ್ ಲೊಕೇಶನ್ ಪತ್ತೆ ಮಾಡಿದಾಗ ಅವರಿಬ್ಬರೂ ಸಿದ್ದಕಟ್ಟೆಯಲ್ಲಿರುವುದಾಗಿ ಮಾಹಿತಿ ಲಬ್ಯವಾಗಿದ್ದು ಸಿದ್ದಕಟ್ಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಗ್ರಾಪಂ ಸದಸ್ಯನ ಕಾಳಜಿಗೆ ಪ್ರಶಂಸೆ

ಪರವೂರಿಂದ ಮಗಳನ್ನು ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ತಕ್ಷಣಕ್ಕೆ ನೆರವಿಗೆ ಸಿಕ್ಕಿದ್ದು ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್. ತಡ ರಾತ್ರಿ ಯಾರೂ ಇಲ್ಲದ ವೇಳೆ ಊರು ಕೇರಿ ಗೊತ್ತಿಲ್ಲದ ಆ ಕುಟುಂಬಕ್ಕೆ ಗ್ರಾಪಂ ಸದಸ್ಯ ನೆರವಾಗಿದ್ದಾರೆ. ನಾಪತ್ತೆಯಾಗಿದ್ದ ಮಗಳನ್ನು ಹುಡುಕುವಲ್ಲಿ ಸಹಕಾರ ನೀಡಿದ್ದಲ್ಲದೆ ಪೊಲೀಸರನ್ನು ಕರೆಸಿ ಕುಟುಂಬಕ್ಕೆ ಸಂಪೂರ್ಣ ನೆರವು ನೀಡಿದ್ದು ಹುಬ್ಬಳ್ಳಿಯಿಂದ ಬಂದ ಕುಟುಂಬ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ಅವರ ಸಹಾಯಕ್ಕೆ ಅಭಿನಂದಿಸಿದ್ದಾರೆ.

ಉಚಿತ ಬಸ್ಸಿನಲ್ಲಿ ಬಂದಿದ್ದಳು

ಕೈಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬಂದಿದ್ದ ಮಹಿಳೆ ಹುಬ್ಬಳ್ಳಿಯಿಂದ ಪುತ್ತೂರು ತನಕವೂ ಉಚಿತವಾಗಿಯೇ ಪ್ರಯಣ ಬೆಳೆಸಿದ್ದಳು ಎನ್ನಲಾಗಿದೆ. ಪುತ್ತೂರಿಗೆ ಬರಲು ಹಣ ಇಲ್ಲ ಎಂದು ಆಕೆ ಹೇಳಿದಾಗ ಬಸ್ಸು ಫ್ರೀ ಇದೆ ಬಾ ಎಂದು ಆತ ತಿಳಿಸಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಆಕೆ ಅಷ್ಟು ಬೇಗ ನಮ್ಮ ಕಣ್ಣು ತಪ್ಪಿಸಿ ಬರುತ್ತಾಳೆ ಎಂದು ನಾವು ಗ್ರಹಿಸಿಯೇ ಇರಲಿಲ್ಲ ಎಂದು ಮಹಿಳೆಯ ತಾಯಿ ಕಣ್ಣೀರು ಹಾಕುತ್ತಿದ್ದರು.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ:ಪುತ್ತೂರು ಸೇರಿದಂತೆ ಕರಾವಳಿಯಲ್ಲಿ ತುಂತುರು ಮಳೆ

Posted by Vidyamaana on 2024-01-03 10:45:33 |

Share: | | | | |


ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ:ಪುತ್ತೂರು ಸೇರಿದಂತೆ ಕರಾವಳಿಯಲ್ಲಿ ತುಂತುರು ಮಳೆ

ಪುತ್ತೂರು : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಪುತ್ತೂರು ನಗರ ಸೇರಿದಂತೆ ಕರಾವಳಿಯಲ್ಲಿ ತುಂತುರು ಮಳೆಯಾಗುತ್ತಿದೆ.


ಇನ್ನು ಮುಂದಿನ 3-4 ದಿನ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ದಕ್ಷಿಣ ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಮತ್ತು ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ ಎಂದು ತಿಳಿಸಿದೆ.


ಅಲ್ಲದೆ, ಅರಬ್ಬಿ ಸಮುದ್ರದಲ್ಲಿ ಗಂಟೆ ಕರಾವಳಿಯಲ್ಲಿ 40-55ಕಿಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಸೈಕಲ್​ನಲ್ಲಿ ಓಡಾಡುತ್ತ ಮನೆಗಳ್ಳತನ, ಬಂಧಿತನಿಂದ 1 ಕೋಟಿ ಮೌಲ್ಯದ ಚಿನ್ನಾಭರಣ ವಶ

Posted by Vidyamaana on 2024-02-28 21:37:12 |

Share: | | | | |


ಸೈಕಲ್​ನಲ್ಲಿ ಓಡಾಡುತ್ತ ಮನೆಗಳ್ಳತನ, ಬಂಧಿತನಿಂದ 1 ಕೋಟಿ ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಫೆ.28: ದಿಢೀರ್ ಶ್ರೀಮಂತನಾಗೊ ಕನಸು ಕಂಡಿದ್ದ ಪ್ರದೀಪ್ ಮಂಡಲ್ ಎಂಬ ವ್ಯಕ್ತಿ ಸೈಕಲ್​ನಲ್ಲಿ ರೌಂಡ್ಸ್ ಹಾಕುತ್ತಲೇ ಕಳ್ಳತನಕ್ಕೆ (Theft) ಪ್ಲಾನ್ ಮಾಡ್ತಿದ್ದ. ಸೈಕಲ್‌ ನಲ್ಲಿ ಬಂದು 2 ಕೆಜಿ ಚಿನ್ನಾಭರಣದ (Jewels) ಜೊತೆ ಎಸ್ಕೇಪ್ ಆಗಿದ್ದ. ಸದ್ಯ ಈಗ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ (Sesh

non

ripuram Police). ಮಧ್ಯರಾತ್ರಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡ್ಕೊಂಡು ದೊಡ್ಡ ಕುಳ‌ ಇರೊ ಮನೆಯನ್ನೇ ಟಾರ್ಗೆಟ್ ಮಾಡಿ ಮನೆಯಲ್ಲಿನ ಚಿನ್ನಾಭರಣ ದೋಚಿ ಹೆಗಲಮೇಲೆ ಬ್ಯಾಗ್ ಏರಿಸಿಕೊಂಡು ಈತ ಕಳ್ಳತನ ಮಾಡಿದ್ದ.


ಶೇಷಾದ್ರಿಪುರಂ ನಲ್ಲಿ ವಾಸವಿರುವ ಮಂಜುಳಾ ದೇವಿ ಹಾಗೂ ಕುಟುಂಬಸ್ಥರು ಜನವರಿ 17 ರಂದು ಹುಟ್ಟೂರು ರಾಜಸ್ಥಾನಕ್ಕೆ ತೆರಳಿದ್ರು. ವಾಪಸ್ಸು ಫೆಬ್ರವರಿ 4 ರಂದು ಬಂದು ನೋಡಿದಾಗ ಶಾಕ್ ಆಗಿತ್ತು. ಯಾಕಂದ್ರೆ ಮನೆಯಲ್ಲಿ‌ ಇಟ್ಟಿದ್ದ ಎರಡು ಕೆಜಿ ಚಿನ್ನಾಭರಣ ಕಾಣೆಯಾಗಿತ್ತು. ತಕ್ಷಣ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ರು. ಅಲರ್ಟ್ ಆದ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲಿಗೆ ಕಳ್ಳತನ ಆಗಿದೇ ಅನ್ನೋದು ಕನ್ಫರ್ಮ್ ಆಗಿತ್ತು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳ್ಳನ ಅಸಲಿ ಆಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರದೀಪ್ ಮಂಡಲ್ ಎಂಬ ಅಸ್ಸಾಂ ಮೂಲದ ವ್ಯಕ್ತಿ ಕಳ್ಳತನ ಮಾಡಿರೋದು ಬಯಲಾಗಿದೆ.


23 ರ ಮಧ್ಯರಾತ್ರಿ ಸೈಕಲ್ ನಲ್ಲಿ ಬಂದ ಕಳ್ಳ ಸೈಕಲ್ ಬಿಟ್ಟು ನಡೆದುಕೊಂಡೇ ಬಂದಿದ್ದ. ಹೀಗೆ ಬಂದವನಿಗೆ ಮನೆ ಲೈಟ್ ಆಫ್ ಆಗಿರೋದು ಕಂಡಿದೆ. ಹಾಗಾಗಿ ಮನೆಗಳ್ಳತನಕ್ಕೆ ನಿರ್ಧಾರ ಮಾಡಿಬಿಟ್ಟಿದ್ದ. ಮನೆ ಮೇಲೆ ಹತ್ತಿದ್ದ ಆರೋಪಿ ಕಿಟಕಿ ಸರಳುಗಳನ್ನು ಮುರಿದು ರೂಮಿನೊಳಗೆ ಪ್ರವೇಶಿಸಿದ್ದ. ಲಾಕರ್ ಮುರಿದು ನೋಡಿದವ್ನಿಗೆ ಅಪಾರ ಪ್ರಮಾಣದ ಚಿನ್ನಾಭರಣ ಕಂಡಿದೆ. ಎಲ್ಲವನ್ನು ಬ್ಯಾಗ್ ನಲ್ಲಿ‌ ತುಂಬಿಕೊಂಡವನೇ ಹೆಗಲ‌ ಮೇಲೇರಿಸಿಕೊಂಡು ಹುಟ್ಟೂರು ಅಸ್ಸಾಂಗೆ ತೆರಳಿದ್ದ. ಅಲ್ಲದೇ ಸ್ವಲ್ಪ ಪ್ರಮಾಣದ ಚಿನ್ನ ಮಾರಿ ಒಂದು ಸ್ವಿಫ್ಟ್ ಡಿಜೈರ್ ಕಾರು ಕೂಡ ಖರೀದಿ ಮಾಡಿದ್ದ. ಆತನಿಗಾಗಿ ಬಲೆ ಬೀಸಿದ್ದ ಪೊಲೀಸರು ಅಸ್ಸಾಂ ನಿಂದ ಬಂಧಿಸಿ ಕರೆತಂದಿದ್ದಾರೆ. ಬಂಧಿತನಿಂದ 1 ಕೋಟಿ 29 ಲಕ್ಷದ 35 ಸಾವಿರ ಮೌಲ್ಯದ 2141 ಗ್ರಾಂ ಚಿನ್ನ, 1313 ಗ್ರಾಂ ಬೆಳ್ಳಿ 70 ಸಾವಿರ ನಗದು ಹಣ ಹಾಗೂ ಒಂದು ಸ್ವಿಫ್ಟ್ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.


ಸದ್ಯ ಪೊಲೀಸರ ಉತ್ತಮ‌ ಕೆಲಸದಿಂದ ಮಾಲೀಕ ನಿಟ್ಟುಸಿರು ಬಿಟ್ರೆ. ಬೇಗ ಶ್ರೀಮಂತನಾಗೊ ಆಸೆಗೆ ಕಳ್ಳತನ ಮಾಡಿದ್ದ ಖದೀಮ‌ ಜೈಲು ಪಾಲಾಗಿದ್ದಾನೆ. ಮನೆಯಿಂದ ಹೊರಗೆ ಹೋಗಬೇಕಾದ್ರೆ ಸ್ವಲ್ಪ ಎಚ್ಚರಿಕೆ ವಹಿಸಿಹೋದ್ರೆ ಒಳ್ಳೆಯದು. ಇಲ್ಲದಿದ್ರೆ ನಿಮ್ಮ ಮನೆಗೂ ಇಂತಹ ಕಳ್ಳರು ಕನ್ನ ಹಾಕಬಹುದು.

ಅರ್ಧ ಗಂಟೆ ಕಾಲ ಸರತಿ ಸಾಲಿನಲ್ಲಿ ನಿಂತು ತನ್ನ ಹಕ್ಕು ಚಲಾಯಿಸಿದ ಪದ್ಮರಾಜ್

Posted by Vidyamaana on 2024-04-26 11:05:12 |

Share: | | | | |


ಅರ್ಧ ಗಂಟೆ ಕಾಲ ಸರತಿ ಸಾಲಿನಲ್ಲಿ ನಿಂತು ತನ್ನ ಹಕ್ಕು ಚಲಾಯಿಸಿದ ಪದ್ಮರಾಜ್

ಮಂಗಳೂರು, ಎ.26: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಕಪಿತಾನಿಯೋ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಮತ್ತು ಮಗಳ ಜೊತೆ ಮತ ಚಲಾಯಿಸಿದರು. 

ಮತಗಟ್ಟೆಯತ್ತ ಬರುವಾಗಲೇ ಮತದಾರರಿಗೆ ಕೈಮುಗಿಯುತ್ತಲೇ ಒಳಬಂದ ಪದ್ಮರಾಜ್, ಸರತಿ ಸಾಲಿನಲ್ಲಿ ಅರ್ಧ ಗಂಟೆ ಕಾಲ ನಿಂತು ಮತ ಚಲಾಯಿಸಿದರು.

ಪ್ರೇಮಿಗಳ ದಿನಾಚರಣೆ: ಶಾಸ್ರ್ತೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್!‌

Posted by Vidyamaana on 2024-02-14 20:38:30 |

Share: | | | | |


ಪ್ರೇಮಿಗಳ ದಿನಾಚರಣೆ: ಶಾಸ್ರ್ತೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್!‌

ಬೆಂಗಳೂರು : ಇಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆ ವಾಟಾಳ್ ನಾಗರಾಜ್ ವಿಶೇಷ ರೀತಿಯಲ್ಲಿ ಆಚರಣೆ‌ ಮಾಡಿದ್ದು ಕತ್ತೆಗಳಿಗೆ ಮದುವೆ ಮಾಡಿಸಿ ಪ್ರೇಮಿಗಳ ದಿನದ ಶುಭಕೋರಿದ್ದಾರೆ.ಒಂದು ಕತ್ತೆಗೆ ಸೀರೆ, ಮತ್ತೊಂದು ಕತ್ತೆ ಪಂಚೆ ತೊಡಿಸಿ ಮದುವೆ ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಡೆದ ವಿನೂತನ ಮದುವೆ ಹಣ್ಣು, ತಾಂಬೂಲ ಸೇರಿದಂತೆ ಶಾಸ್ರ್ತೋಕ್ತವಾಗಿ ಕತ್ತೆಗಳಿಗೆ ಮದುವೆ ಕತ್ತೆಗೆ ತಾಳಿ ಹಾಕಿ ಮದುವೆ ಮಾಡಿಸಿದ ಕನ್ನಡ ಪಕ್ಷದ ವಾಟಾಳ್ ವಿಶ್ವದೆಲ್ಲಡೆ ಇಂದು ಪ್ರೇಮಿಗಳು ಅವರ ದಿನ ಆಚರಣೆ ಮಾಡುತ್ತಿದ್ದಾರೆ ಅವರಿಗೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಲ್ಲರೂ ಪ್ರೀತಿಸಬೇಕು.. ಯಾರೂ ಕೂಡ ಹಿಂಜರಿಕೆ ಮಾಡಬಾರದು ಸರ್ಕಾರ ಪ್ರೇಮಿಗಳಿಗೆ ಪ್ರೋತ್ಸಾಹ ನೀಡಬೇಕು, ಭದ್ರತೆ ಕೊಡಬೇಕುಕಾನೂನಿನಲ್ಲಿ ಬದಲಾವಣೆ ಮಾಡಿ ಪ್ರೇಮಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು


ಪ್ರೇಮಿಗಳ ಭದ್ರತೆಗಾಗಿ ಸರ್ಕಾರದ ಕಾನೂನು ಜಾರಿ ಮಾಡಬೇಕು ಕಾಯಿದೆ ರೂಪಿಸಬೇಕು.. ಪ್ರೇಮಿಗಳಿಗೆ ಸರ್ಕಾರವೇ ಉತ್ತೇಜನ ಕೊಡಬೇಕು ಪ್ರತಿ ತಿಂಗಳಿಗೆ ಪ್ರೇಮಿಗಳಿಗೆ 1.50 ಲಕ್ಷ ರೂಪಾಯಿ ಪ್ರೋತ್ಸಾಹನ ಧನ ನೀಡಬೇಕುಯಾವುದೇ ಸಂಘಟನೆಗಳು ಪ್ರೇಮಿಗಳಿಗೆ ತೊಂದರೆ ಕೊಟ್ಟರೆ ಸಹಿಸಿಕೊಳ್ಳಲು ಆಗಲ್ಲ ಪ್ರೇಮಿಗಳಿಗೆ ತೊಂದರೆ ಕೊಡುವ ಸಂಘಟನೆಗಳ ವಿರುದ್ಧ ಸರ್ಕಾರ ಕ್ರಮ ತಗೋಬೇಕು ಎಂದು ಹೇಳಿದರು.

ಹಿರೆಬಂಡಾಡಿಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

Posted by Vidyamaana on 2023-06-21 04:45:02 |

Share: | | | | |


ಹಿರೆಬಂಡಾಡಿಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು: ರಾಜ್ಯದ ಪ್ರತೀ ಮಹಿಳೆಯರಿಗೆ ಜಾತಿ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ   ಅವರವರು ನಂಬುವ ದೇವರ, ತೀರ್ಥ ಸ್ಥಳಗಳ ಯಾತ್ರೆಗೆ ಉಚಿತ ಬಸ್ ಮೂಲಕ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ನಿಜವಾದ ಹಿಂದುತ್ವ ಪಕ್ಷವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು

ಅವರು ಹಿರೆಬಂಡಾಡಿಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕರ ಅಸ್ತಿತ್ವಕ್ಕೆ ಬಂದ ಬಳಿಕ ಜನ ನೆಮ್ಮದಿಯಲ್ಲಿದ್ದಾರೆ. ಸರಕಾರದ ಐದು ಗ್ಯಾರಂಟಿ ಜನರನ್ನು ಸಂತೋಷದಿಂದ ಇರುವಂತೆ ಮಾಡಿದೆ. ಉಚಿತ ಸರಕಾರಿ ಬಸ್ ಯೋಜನೆಯಿಂದ ರಾಜ್ಯದ ಮಹಿಳೆಯರು ಸಂತುಷ್ಟರಾಗಿದ್ದು ಇಂದು ರಜ್ಯದ ಪ್ರತೀಯೊಂದು ದೇವಾಲಯ, ಮಸೀದಿ, ಚರ್ಚುಗಳು ಭಕ್ತರಿಂದ ತುಂಬು ತುಳುಕುತ್ತಿದೆ. ಮಹಿಳೆಯರಿಗೆ ದೇವರ ದರ್ಶನದ ಭಾಗ್ಯವನ್ನು ಕರುಣಿಸಿದಂತಾಗಿದೆ ಇದುವೇ ನಿಜವಾದ ಹಿಂದುತ್ವ, ಇನ್ನೊಬ್ಬರಿಗೆ ಅನ್ಯಾಯ ಮಾಡುವುದು, ಗಲಭೆ ಎಬ್ಬಿಸಿ ಜನರ ಮಧ್ಯೆ ವೈರತ್ವವನ್ನು ತರುವುದು ಹಿಂದುತ್ವವಲ್ಲ ಎಂದು ಹೇಳಿದರು.


ನಾವು ಕುಚ್ಚಲಕ್ಕಿ ಕೊಡ್ತೇವೆ

ಪಡಿತರ ಮೂಲಕ ತಲಾ ೫ ಕೆ ಜಿ ಕುಚ್ಚಲಕ್ಕಿಯನ್ನು ನಾವು ಕೊಡುತ್ತೇವೆ. ಕರಾವಳಿ ಭಾಗದಲ್ಲಿ ಕುಚ್ಚಲಕ್ಕಿ ಬೇಡಿಕೆ ಇದ್ದು ಈ ಬಗ್ಗೆ ನಾನು ಸೀಎಂ ಜೊತೆ ಮಾತನಾಡಿದ್ದೇನೆ. ಕೆಲವು ತಿಂಗಳೊಳಗೆ ಈ ವ್ಯವಸ್ಥೆ ಆಗಲಿದೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದೆ, ಬಡವರ ಆಶೋತ್ತರಗಳನ್ನು ನಮ್ಮ ಸರಕಾರ ಖಂಡಿತವಾಗಿಯೂ ಈಡೇರಿಸಲಿದೆ. ಬಡವರ ಉಚಿತ ಭಾಗ್ಯವನ್ನು ವಿರೋಧಿಸುವವರು ವಿರೋಧಿಸುತ್ತಲೇ ಇರಲಿ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.


೨೪ ಗಂಟೆ ಕುಡಿಯುವ ನೀರು

ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಪ್ರತೀ ಮನೆಗೆ ೨೪ ಗಂಟೆ ಕುಡಿಯುವ ನೀರಿನ ಯೋಜನೆಯನ್ನು ಜರಿಗೆ ತರಲಾಗುತ್ತದೆ. ಇದಕ್ಕಾಗಿ ಈಗಾಗಲೇ ಬಹುಕೋಟಿ ಅನುದಾನವನ್ನು ನಿರೀಕ್ಷಿಸಲಾಗಿದ್ದು ಅದು ಖಂಡಿತವಾಗಿಯೂ ಕಾರ್ಯರೂಪಕ್ಕೆ ಬರಲಿದೆ. ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಮುಂದಿನ ಎರಡು ವರ್ಷದೊಳಗೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಶಾಸಕರು ತಿಳಿಸಿದರು.


ಕೈಗಾರಿಕೆಗಳ ಆರಂಭ

ಪುತ್ತೂರಿನ ವಿವಿಧ ಭಾಗದಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ ಆಲೋಚನೆಯನ್ನು ಮಾಡಿದ್ದೇನೆ. ಬಹುರಾಷ್ಟ್ರೀಯ ಕಂಪೆನಿಗಳು ಪುತ್ತೂರಿನಲ್ಲಿ ಕೈಗಾರಿಕೆಗಳನ್ನು ಪ್ರಾರಂಭ ಮಾಡಲಿದೆ. ಜನರಿಗೆ ತೊಂದರೆಯಾಗದೆ, ಪರಿಸರಕ್ಕೂ ತೊಂದರೆಯಾಗದ ರೀತಿಯಲ್ಲಿ ಕ್ಷೇತ್ರದಲ್ಲಿ ಕೈಗಾರಿಕಾ ಕೇಂದ್ರಗಳು ಕಾರ್ಯಾಚರಿಸಲಿದೆ. ಕೈಗಾರಿಕೆಗಳು ಆರಂಭವಾದ ಬಳಿಕ ಅದರಲ್ಲಿ ಸ್ಥಳೀಯರಿಗೆ ಉದ್ಯೋಗವನ್ನು ಕಲ್ಪಿಸಲಾಗುವುದು ಎಂದು ಹೇಳಿದರು.


ಹಗೆ ರಾಜಕೀಯ ಇಲ್ಲ

ನಾನಾಗಾಲಿ, ಕಾರ್ಯಕರ್ತರಾಗಲಿ ಹಗೆತನದ ರಾಜಕೀಯ ಮಾಡಬಾರದು. ಅವ ನಮಗೆ ಓಟು ಹಾಕಿಲ್ಲ, ಅವನು ಬಿಜೆಪಿ ಇವನು ಬ್ಯಾಟ್ ಎಂದೆಲ್ಲಾ ಯಾರನ್ನೂ ಕಡೆಗನಿಸಬೇಡಿ. ಪಕ್ಷದ ಯೋಜನೆಗಳನ್ನು ಎಲ್ಲರಿಗೂ ನೀಡಿ. ನಮ್ಮ ಸೇವೆಯನ್ನು ಕಂಡು ಅವರು ನಮ್ಮೊಳಗೆ ಸೇರಿಕೊಳ್ಳುವಂತೆ ಪ್ರತೀಯೊಬ್ಬ ಕಾರ್ಯಕರ್ತನೂ ಕಾರ್ಯಪೃವೃತ್ತರಾಗಬೇಕು. ೯೪ ಸಿ, ಅಕ್ರಮಸಕ್ರಮ ಸೇರಿದಂತೆ ಎಲ್ಲ ಕಡತಗಳನ್ನು ಪಕ್ಷ ನೋಡದೆ ನಾವು ಸ್ವೀಕರಿಸೋಣ, ಕಾಂಗ್ರೆಸ್ ಎಲ್ಲರ ಪಕ್ಷ ಎಂಬುದನ್ನು ಜನರಿಗೆ ತೋರಿಸಿಕೊಡಬೇಕು ಎಂದು ಹೇಳಿದರು. ಯಾರಿಗೂ ಅನ್ಯಾಯ ಮಾಡಬೇಡಿ, ಅನ್ಯಾಯ ಮಾಡಿ ನನ್ನ ಬಳಿ ಬೆಂಬಲ ಕೇಳದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.


ಹಾಲಿಗೆ ೫೦ ರೂ ಸಿಗುವಂತಾಗಬೇಕು

ಹಾಲಿಗೆ ಲೀಟರ್‍ಗೆ ೫೦ ರೂ ದೊರೆಯುವಂತಾಗಬೇಕು. ದನಗಳನ್ನು ಸಾಕುವುದು ಕಷ್ಟದ ಕೆಲಸವಾಗಿದ್ದು, ಹಾಲಿಗೆ ದರ ಹೆಚ್ಚಾದರೆ ಸಾಕಿದವನಿಗೆ ಏನಾದರು ಲಾಭ ದೊರೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಾನು ಸಂಬಂಧಿಸಿದವರ ಜೊತೆ ಮಾತನಾಡಲಿದ್ದೇನೆ ಎಂದು ಶಾಸಕರು ಹೇಳಿದರು.


೧೦ ಮಂದಿ ಮಹಿಳೆಯರ ತಂಡ

ಪ್ರತೀ ಬೂತ್‌ನಲ್ಲಿ ೧೦ ಮಂದಿ ಮಹಿಳೆಯರ ತಂಡವನ್ನು ಮಾಡಿ ಆ ತಂಡ ಗ್ರಾಮದ ಪ್ರತೀ ಮನೆ ಮನೆಗೆ ತೆರಳಿ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ತಿಳಿಸುವುದರ ಜೊತೆಗೆ ಸ್ಥಳೀಯ ದೇವಸ್ಥಾನ, ದೈವಸ್ಥಾನ , ಭಜನಾ ತಂಡದಲ್ಲಿ ನಮ್ಮ ಕಾರ್ಯಕರ್ತರು ಇರುವಂತೆ ನಾವು ವ್ಯವಸ್ಥೆ ಮಾಡಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿದರು.


ರಾಜ್ಯದಲ್ಲಿ ಸುಭದ್ರ ಸರಕಾರ ಬಂದಿದೆ: ಡಾ. ರಾಜಾರಾಂ ಕೆ ಬಿ

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿ ರಾಜ್ಯದಲ್ಲಿ ಸುಭದ್ರ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ. ಪುತ್ತೂರು ಶಾಸಕರ ಕಾರ್ಯವೈಖರಿ ಚೆನ್ನಾಗಿದೆ. ಜನತೆಗೆ ಉಪಯೋಗವಾಗುವ ರೀತಿಯಲ್ಲಿ ಅವರು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಎಲ್ಲೆಡೆ ಶಾಸಕರ ಕಾರ್ಯಕ್ಕೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಪುತ್ತೂರು ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗಲಿದೆ ಎಂದು ಹೇಳಿದರು.


ಬಡವರ ಸೇವೆಯಿಂದ ಗೌರವ: ದೇವದಾಸ್

ಡಿಸಿಸಿ ಸದಸ್ಯ ದೇವದಾಸ್ ರೈ ಮಾತನಾಡಿ ೨೨ಸಾವಿರ ಬಡ ಕುಟುಂಬಗಳಿಗೆ ಅಧಿಕಾರದಲ್ಲಿ ಇಲ್ಲದಾಗ ಅಶೋಕ್ ರಐ ನೆರವು ನೀಡಿದ್ದಾರೆ. ಈಗ ಶಾಸಕರಾಗಿದ್ದು ಬಡವರಿಗೆ ಇನ್ನು ಸಂತಸದ ದಿನಗಳು ಬರಲಿದೆ. ಬೂತ್ ಮತ್ತು ವಲಯ ಅಧ್ಯಕ್ಷರುಗಳಿಗೆ ಸ್ಥಾನವನ್ನು ನೀಡುವ ಮೂಲಕ ಶಾಸಕರು ಗ್ರಾಮ ಮಟ್ಟದಲ್ಲಿ ಪಕ್ಷ ಬೆಳೆಯಲು ಕಾರಣರಾಗುತ್ತಿದ್ದಾರೆ ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪ್ಪಿನಂಗಡಿ- ವಿಟ್ಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀಧರ ರೈ ಮಟಂತಬೆಟ್ಟು, ಹಿರೆಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವೀಂದ್ರ, ಕೋಡಿಂಬಾಡಿ ಗ್ರಾಪಂ ಸದಸ್ಯರೂ, ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶೌಕತ್ ಕೆಮ್ಮಾರ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ,  ಕೆಪಿಸಿಸಿ ಸಂಯೋಜಕರಾದ ಕೃಷ್ಣ ರಾವ್,  ಕಾಂಗ್ರೆಸ್ ಮುಖಂಡರುಗಳಾದ ಸೇಸಪ್ಪ ನೆಕ್ಕಿಲು, ಉಮನಾಥ ರೈ, ಲೋಕೇಶ್ ಪೆಲತ್ತಡಿ ಮೊದಲಾದವರು ಉಪಸ್ತಿತರಿದ್ದರು.

ಗ್ರಾಪಂ ಸದಸ್ಯೆ ಗೀತಾದಾಸರಮೂಲೆ ಸ್ವಾಗತಿಸಿದರು.ಸೇಸಪ್ಪ ನೆಕ್ಕುಲು ವಂದಿಸಿದರು. ಸತೀಶ್ ಶೆಟ್ಟಿ ಎನ್ನಾಳ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಸಕರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

Recent News


Leave a Comment: