ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಸೆಲ್ ಝೋನ್ ಗ್ರೇಟ್ ಫೆಸ್ಟಿವಲ್ ಸೇಲ್ ನಲ್ಲಿ ಗಮನ ಸೆಳೆಯುವ ಆಫರ್ ಗಳು

Posted by Vidyamaana on 2023-09-19 17:28:51 |

Share: | | | | |


ಸೆಲ್ ಝೋನ್ ಗ್ರೇಟ್ ಫೆಸ್ಟಿವಲ್ ಸೇಲ್ ನಲ್ಲಿ ಗಮನ ಸೆಳೆಯುವ ಆಫರ್  ಗಳು

ಪುತ್ತೂರು: ಮೊಬೈಲ್ ಕ್ಷೇತ್ರದಲ್ಲಿ 2003ರಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಸೆಲ್ ಝೋನ್ ಇದೀಗ ಗ್ರೇಟ್ ಫೆಸ್ಟಿವಲ್ ಸೇಲ್ ಅನ್ನು ಗ್ರಾಹಕರ ಮುಂದಿಟ್ಟಿದೆ.

ಗ್ರೇಟ್ ಫೆಸ್ಟಿವಲ್ ಸೇಲ್’ನಲ್ಲಿ ಗ್ರೇಟ್ ಎಕ್ಸ್’ಚೇಂಜ್ ಆಫರನ್ನು ಜನತೆಯ ಮುಂದಿಡಲಾಗಿದೆ. ಮುನ್ನಡೆಯಿರಿ ಹೊಸ ತಂತ್ರಜ್ಞಾನದೆಡೆಗೆ 5ಜಿ ಫೋನಿಗೆ ಅಪ್’ಗ್ರೇಡ್ ಆಗಿರಿ ಎನ್ನುವ ಸಂದೇಶದೊಂದಿಗೆ ತಂತ್ರಜ್ಞಾನದ ಪ್ರಸ್ತುತತೆಯನ್ನು ಗ್ರಾಹಕರಿಗೆ ನೀಡುವ ಕಾಯಕವೂ ಇಲ್ಲಿ ಆಗುತ್ತಿದೆ.

ಇದರೊಂದಿಗೆ, ಸ್ಮಾರ್ಟ್ ಫೋನ್ ಖರೀದಿಸಿದರೆ, ಹೀರೋ ಬೈಕ್ ಸಹಿತ ಹತ್ತು ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡಲಾಗಿದೆ. ನಿಮ್ಮ ಬಜೆಟಿಗೆ ಫಿಟ್ ಆಗೋ ಸುಲಭ ಕಂತುಗಳೊಂದಿಗೆ ಆಕ್ಸೆಸರೀಸ್ ಮೇಲೆ ಶೇ. 50ರಷ್ಟು ಆಫ್ ಕೊಡಲಾಗಿದೆ. ಪ್ರತಿ ಖರೀದಿಗೂ ಖಚಿತ ಉಡುಗೊರೆಯನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಈ ಗ್ರೇಟ್ ಫೆಸ್ಟಿವಲ್ ಸೇಲ್’ನ ಇನ್ನೊಂದು ವಿಶೇಷವೇನೆಂದರೆ, ಮಲ್ಟಿ ಬ್ರಾಂಡ್ ಸ್ಮಾರ್ಟ್ ವಾಚ್’ಗಳ ಎಕ್ಸ್’ಕ್ಲೂಸಿವ್ ಸಂಗ್ರಹ ಎಂದು ಸೆಲ್ ಝೋನ್ ಪ್ರಕಟಣೆ ತಿಳಿಸಿದೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ನೌಫಾಲ್ ಆತ್ಮಹತ್ಯೆ

Posted by Vidyamaana on 2024-05-07 07:49:06 |

Share: | | | | |


ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ನೌಫಾಲ್ ಆತ್ಮಹತ್ಯೆ

ಮಂಗಳೂರು, ಮೇ.6: ಮಾನಸಿಕ ಖಿನ್ನತೆಯಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯಾಗಿದ್ದ ಯುವಕನೊಬ್ಬ ಆಸ್ಪತ್ರೆ ಕೊಠಡಿಯಲ್ಲಿ ನೇಣು ಹಾಕ್ಕೊಂಡು ಸಾವಿಗೆ ಶರಣಾಗಿದ್ದಾನೆ.

ಮಂಜೇಶ್ವರ ಬಳಿಯ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್ (24) ಮೃತ ಕೈದಿ. 2022ರ ಡಿಸೆಂಬರ್ ನಲ್ಲಿ ನೌಫಾಲ್ ಎನ್ ಡಿಪಿಎಸ್ ಕಾಯ್ದೆಯಡಿ ಕೋಣಾಜೆ ಪೊಲೀಸರಿಂದ ಬಂಧನಕ್ಕೀಡಾಗಿದ್ದ. ಆನಂತರ ಮಂಗಳೂರು ಜೈಲಿನಲ್ಲೇ ಇದ್ದು ಯುವಕನ ಪರವಾಗಿ ಜಾಮೀನು ಕೊಡಿಸುವುದಕ್ಕೂ ಯಾರೂ ಬಂದಿರಲಿಲ್ಲ.

ರೋಟರಿ ಸೆಂಟ್ರಲ್ ನಿಂದ ಮನೆಗೊಂದು ಗಿಡ

Posted by Vidyamaana on 2023-07-28 03:15:42 |

Share: | | | | |


ರೋಟರಿ ಸೆಂಟ್ರಲ್ ನಿಂದ ಮನೆಗೊಂದು ಗಿಡ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಪ್ರಶಾಂತಿ ಸದ್ಭಾವನ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ಕೇಪುಳು ಸಿಗಂದೂರು ಮನೆಯಲ್ಲಿ ಮನೆಗೊಂದು ಗಿಡ ಕಾರ್ಯಕ್ರಮ ನಡೆಯಿತು.


ಮೈಸೂರಿನ ಅವಧೂತರಾದ ಅರ್ಜುನ್ ಮಹಾರಾಜ್ ಗುರೂಜಿಯವರು ಗಿಡ ವಿತರಣೆಗೆ ಚಾಲನೆ ನೀಡಿದರು.


ಸಿಗಂದೂರು ಮನೆಯ ಡಾ ಸಂತೋಷ್ ಪ್ರಭು, ಪ್ರಶಾಂತಿ ಸದ್ಭಾವನಾ ಟ್ರಸ್ಟ್ ನ ಮದುಸೂದನ್ ನಾಯಕ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಡಾ. ರಾಜೇಶ್ ಬೆಜ್ಜಂಗಳ, ಮೆಂಬರ್ಶಿಪ್ ಡೆವಲಪ್ ಮೆಂಟ್ ಚೇರ್ ಮೇನ್ ಅಶ್ರಫ್, ಸವಣೂರು ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ಸದಸ್ಯರಾದ ವಸಂತ ಶಂಕರ್, ಉಪನ್ಯಾಸಕಿ ಗೀತಾ ವಸಂತ್ ಉಪಸ್ಥಿತರಿದ್ದರು.

ಮೆಡಿಕಲ್ ಕಾಲೇಜು ಸೀಟ್ ಕೊಡಿಸುವುದಾಗಿ ಹೇಳಿ ವಂಚನೆ

Posted by Vidyamaana on 2023-11-01 17:08:34 |

Share: | | | | |


ಮೆಡಿಕಲ್ ಕಾಲೇಜು ಸೀಟ್ ಕೊಡಿಸುವುದಾಗಿ ಹೇಳಿ ವಂಚನೆ

ಬೆಂಗಳೂರು, ನ 01: ಮೆಡಿಕಲ್‌ ಸೀಟು ಆಕಾಂಕ್ಷಿಗಳಿಗೆ ಅತೀ ಕಡಿಮೆ ಮೊತ್ತದಲ್ಲಿ ನೆರೆ ರಾಜ್ಯದಲ್ಲಿ ಸೀಟ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಹೈದ್ರಾಬಾದ್‌ ಮೂಲದ ಆರೋಪಿ ಈಗ ಸಂಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.


ಶರತ್‌ಗೌಡ್‌(45) ಬಂಧಿತ ಆರೋಪಿಯಾಗಿದ್ದು ಪೊಲೀಸರು ಸುಮಾರು 47 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಸಂಜಯನಗರದ ನ್ಯೂಬಿಇಎಲ್‌ ರಸ್ತೆಯಲ್ಲಿ "ನೆಕ್ಸಸ್‌ ಎಡು" ಎಂಬ ಸಂಸ್ಥೆ ತೆರೆದು ವಿದ್ಯಾರ್ಥಿಗಳನ್ನು ವಂಚಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ. 


ಆ್ಯಪ್‌ನಲ್ಲಿ ಅಭ್ಯರ್ಥಿಗಳ ಪಟ್ಟಿ:


ಹೈದ್ರಾಬಾದ್‌ ಮೂಲದ ಶರತ್‌ಗೌಡ ಎಂಬಿಎ ಪದವೀಧರನಾಗಿದ್ದು, ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾನೆ. ನ್ಯೂಬಿಇಎಲ್‌ ರಸ್ತೆಯಲ್ಲಿ ನೆಕ್ಸಸ್‌ ಎಡು ಎಂಬ ಸಂಸ್ಥೆ ನಡೆಸುತ್ತಿದ್ದ. ಅದರಲ್ಲಿ ಕೆಲ ಯುವತಿಯರಿಗೆ ಉದ್ಯೋಗ ನೀಡಿದ್ದ. ಏಜೆನ್ಸಿಯೊಂದು ಸಿದ್ಧಪಡಿಸಿರುವ ಆ್ಯಪ್‌ನಲ್ಲಿ ರಾಜ್ಯ ಹಾಗೂ ನೆರೆರಾಜ್ಯದ ವೈದ್ಯಕೀಯ ಸೀಟು ಆಕಾಂಕ್ಷಿಗಳ ಪಟ್ಟಿ ದಾಖಲಾಗಿತ್ತು.


ಇತ್ತೀಚೆಗೆ ತಿಮ್ಮೇಗೌಡ ಎಂಬವರ ಪುತ್ರನಿಗೆ ಕೇರಳದ ಪಿ.ಕೆ.ದಾಸ್‌ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ಸೈನ್ಸ್‌ನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ 10 ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದ. ಈ ಸಂಬಂಧ ತಿಮ್ಮೇಗೌಡ ನೀಡಿದ ದೂರಿನ ಮೇರೆಗೆ ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ತೆಲಂಗಾಣದ ಹೈದರಾಬಾದ್‌ನ ಆತನ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.


18 ಮಂದಿಗೆ 62 ಲಕ್ಷ ರೂ. ವಂಚನೆ:


ಆರೋಪಿ ವಿಚಾರಣೆ ವೇಳೆ ಇದುವರೆಗೂ 18 ಮಂದಿಗೆ 62 ಲಕ್ಷ ರೂ. ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ಈ ಪೈಕಿ 47.80 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಬಾಕಿ ಹಣವನ್ನು ಆರೋಪಿ ಬಳಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.


ಉತ್ತರವಿಭಾಗ ಡಿಸಿಪಿ ಸೈದುಲು ಅಡಾವತ್‌, ಜೆ.ಸಿ.ನಗರ ಉಪವಿಭಾಗದ ಎಸಿಪಿ ಮನೋಜ್‌ಕುಮಾರ್‌ ನೇತೃತ್ವದಲ್ಲಿ ಸಂಜಯನಗರ ಠಾಣೆ ಇನ್‌ಸ್ಪೆಕ್ಟರ್‌ ಭಾಗ್ಯವತಿ ಜೆ.ಬಂಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಪುತ್ತೂರು ಮುಸ್ಲಿಂ ಸಮುದಾಯ ಒಕ್ಕೂಟದಿಂದ ಯು.ಟಿ.ಖಾದರ್ ಅಶೋಕ್ ರೆ ಗೆ ಸನ್ಮಾನ

Posted by Vidyamaana on 2023-06-25 05:56:15 |

Share: | | | | |


ಪುತ್ತೂರು ಮುಸ್ಲಿಂ ಸಮುದಾಯ ಒಕ್ಕೂಟದಿಂದ ಯು.ಟಿ.ಖಾದರ್  ಅಶೋಕ್ ರೆ ಗೆ ಸನ್ಮಾನ

ಪುತ್ತೂರು : ಯುವಕ ಸಮುದಾಯ ಸಮಾಜ ಕಟ್ಟುವವಲ್ಲಿ ನಿರತರಾಗಬೇಕೇ ಹೊರತು ಬಿಕ್ಕಟ್ಟು ಸೃಷ್ಠಿಸಬಾರದು. ಅದೇ ರೀತಿ ಸಮಸ್ಯೆಯನ್ನು ಬಗೆಹರಿಸಬೇಕು ಹೊರತು ಸಮಸ್ಯೆಯನ್ನು ಸೃಷ್ಠಿಸುವ ಕೆಲಸ ಮಾಡಬಾರದು ಎಂದು ನೂತನ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.


ಅವರು ಪುತ್ತೂರಿನ ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ಶನಿವಾರ ಸಂಜೆ ಇಲ್ಲಿನ ಪುರಭವನದಲ್ಲಿ ನೂತನ ಸ್ಪೀಕರ್ ಯು.ಟಿ. ಖಾದರ್ ಮತ್ತು ಶಾಸಕ ಅಶೋಕ್ ಕುಮಾರ್ ರೆ‘ ಅವರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.


ಯುವ ಸಮುದಾಯ ಉತ್ತಮ ನಡೆಯೊಂದಿಗೆ ಮುಂದುವರಿದಲ್ಲಿ ಸಮಾಜ ನಿಮ್ಮ ಹಿಂದೆ ಬರುತ್ತದೆ. ಮುಂದಿನ ಪೀಳಿಗೆ ಸೌಹಾದಯುತ ಯೋಗ್ಯ ಬದುಕು ಕಲ್ಪಿಸುವ ಕೆಲಸ ಮಾಡದಿದ್ದಲ್ಲಿ ಸಮಾಜ ಎಂದಿಗೂ ನಮ್ಮನ್ನು ಕ್ಷಮಿಸಲಾರದು. ಮುಸ್ಲಿಂ ಸಮುದಾಯ ಒಕ್ಕೂಟವು ಕೇವಲ ಮುಸ್ಲಿಮರಿಗೆ ಮಾತ್ರವಲ್ಲದೆ ಎಲ್ಲರ ನೋವು ಅನ್ಯಾಯಗಳಿಗೂ ಸ್ಪಂದಿಸುವ ಕೆಲಸ ಮಾಡಬೇಕು. ದುಷ್ಟತನ ಮುಕ್ತ ಮತ್ತು ದ್ವೇಷ ಮುಕ್ತ ಸಮಾಜ ನಿರ್ಮಾಣಕ್ಕೆ ಈ ಸಂಘಟನೆ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದ ಅವರು, ಟೀಕೆ ಟಿಪ್ಪಣಿಗಳು ಸ್ವಾಭಾವಿಕ ಇದೊಂದು ಪ್ರಜಾಪ್ರಭುದ ಸೌಂದರ್ಯ. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.


ಶಾಸಕ ಅಶೋಕ್ ಕುಮಾರ್ ರೆ‘ ಮಾತನಾಡಿ, ಹಿಂದೂ ಮತ್ತು ಮುಸ್ಲಿಮರ ನಡುವೆ ಅಗಾಭವಾಗಿದ್ದ ಪ್ರೀತಿ ಇದೀಗ ರಾಜಕೀಯ ಕಾರಣಕ್ಕಾಗಿ ದೂರವಾಗಿದೆ. ಯುವ ಸಮುದಾಯದಲಿ ವಿಷಬೀಜ ಬಿತ್ತಲಾಗುತ್ತಿದೆ. ಇದನ್ನು ತಡೆಯುವಲ್ಲಿ ಎಲ್ಲಾ ‘ಧರ್ಮಗುರುಗಳು ಪ್ರಯತ್ನ ನಡೆಸಬೇಕಾಗಿದೆ. ನಾನು ಸಹಾಯ ಮಾಡುತ್ತಿರುವ ಸಂದರ್ಭದಲ್ಲಿ ಎಂದೂ ಪಕ್ಷ, ಜಾತಿ, ಧರ್ಮಗಳನ್ನು ನೋಡಿಲ್ಲ. ಎಲ್ಲಾ ಬಡವರಿಗೂ ಕೈಲಾದ ಸಹಾಯ ಮಾಡಿದ್ದೇನೆ. ಮುಸ್ಲಿಂ ಧರ್ಮದವರು ಯಾರನ್ನೂ ವಿರೋಧಿಸುವವರಲ್ಲ. ಬದಲಿಗೆ ಎಲ್ಲರನ್ನೂ ಪ್ರೀತಿಸುವವರು ಅವರಿಗೆ ಅದೇ ಪ್ರೀತಿಯನ್ನು ಹಿಂದಿರುಗಿಸುವ ಕೆಲಸವಾದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ನಾನು ಎಲ್ಲಾ ಜಾತಿ ಧರ್ಮಗಳನ್ನು ಒಟ್ಟಾಗಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ ಎಂದರು.


ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮುನೀರ್, ಮುಸ್ಲಿಂ ಸಮುದಾಯಕ್ಕೆ ಓಲೈಕೆ ಬೇಕಾಗಿಲ್ಲ. ಆದರೆ ನಮ್ಮನ್ನು ಪರಿಗಣಿಸಿ, ತಪ್ಪು ಮಾಡಿದರೆ ಬೆಂಬಲ ನೀಡಬೇಕಾಗಿಲ್ಲ. ಆದರೆ ನಮ್ಮನ್ನು ಬೇರೆಯಾಗಿರಿಸುವ ಕೆಲಸ ಮಾಡಬೇಡಿ. ಈ ಜಿಲ್ಲೆಯಲ್ಲಿ ಎಲ್ಲವೂ ಸಿಗುತ್ತದೆ ಆದರೆ ಸಾಮಾಜಿಕ ಸಾಮರಸ್ಯದ ಕೊರತೆಯಿದೆ ಅದನ್ನು ಇಲ್ಲಿನ ಶಾಸಕರು ಬದಲಾಯಿಸುವ ಮೂಲಕ ನೀಗಿಸಬೇಕು ಎಂದರು.


ಯು.ಟಿ. ಖಾದರ್ ಕೇವಲ ಉಳ್ಳಾಲಕ್ಕೆ, ಅಥವಾ ಜಿಲ್ಲೆಗೆ ಸೀಮಿತರಲ್ಲ. ರಾಜ್ಯದಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಎಲ್ಲಾ ಸಮುದಾಯವನ್ನು ಒಪ್ಪಿಕೊಂಡವರು ಸಮುದಾಯದ ನಾಯಕರಾಗುತ್ತಾರೆ ಎಂಬುದಕ್ಕೆ ಯು.ಟಿ. ಖಾದರ್ ಸಾಕ್ಷಿಯಾಗಿದ್ದಾರೆ.


ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಸೆಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.  ಕಾವು ಮಾಡನ್ನೂರು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಎಡ್ವೊಕೇಟ್ ಹನೀಫ್ ಹುದವಿ, ಕಂಬಳಬೆಟ್ಟು ಜನಪ್ರಿಯ ಶಿಕ್ಷಣ ಸಂಸ್ಥೆಯ ಎಂಡಿ ಡಾ. ಬಿ.ಕೆ. ಅಬ್ದುಲ್ ಬಶೀರ್,ಮೊಹಮ್ಮದ್ ಬಡಗನ್ನೂರು, ಮಾಜಿ ಜಿ.ಪಂ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿದರು. ವೇದಿಕೆಯಲ್ಲಿ ಹಲವಾರು ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನೇತಾರರು ಉಪಸ್ಥಿತರಿದ್ದರು.


ಮಹಮ್ಮದ್ ಬಡಗನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. .ನಗರ ಸಭಾ ಸದಸ್ಯ ರಿಯಾಜ್ ಪರ್ಲಡ್ಕ, ನಗರ ಕಾಂಗ್ರೆಸ್‌ ಅಧ್ಯಕ್ಷ ಹೆಚ್.ಮಹಮ್ಮದ್‌ ಅಲಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಶಕೂ‌ರ್ ಹಾಜಿ,ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಎಲ್‌.ಟಿ ಅಬ್ದುಲ್ ರಝಾಕ್, ಅರಿಯಡ್ಕ ಅಬ್ದುಲ್‌ ರಹಿಮಾನ್ ಹಾಜಿ, ಶಕೂ‌ರ್ ಹಾಜಿ ಕಲ್ಲೆಗ, ಕಾಶೀಂ ಹಾಜಿ ಮಿತ್ತೂರು, ಅಝೀಜ್ ಬುಶ್ರಾ, ಜುನೈದ್ ಪಿ.ಕೆ., ಕೆ.ಪಿ.ಅಹಮದ್ ಹಾಜಿ ಆಕರ್ಷಣೆ, ನಗರಸಭಾ ಸದಸ್ಯ ಯೂಸೂಫ್, ಅಬ್ದುಲ್ ರಹಿಮಾನ್ ಹಾಜಿ ಹಾಗೂ ಎಲ್ಲಾ ಜಮಾಅತ್‌ನ ಅಧ್ಯಕ್ಷರು ಅತಿಥಿಗಳಾಗಿ ಆಗಮಿಸಿದ್ದರು.ಒಕ್ಕೂಟದ ಕಾರ್ಯಕ್ರಮ ನಿರ್ದೇಶಕ ಸಿನಾನ್ ಪರ್ಲಡ್ಕ, ಶರೀಫ್ ಬಲ್ನಾಡು, ಸಿದ್ದೀಕ್ ಸುಲ್ತಾನ್‌, ರಶೀದ್‌ ಪರ್ಲಡ್ಯ, ಸಾಹುಲ್ ಹಮೀದ್‌ ಕಂಬಳಬೆಟ್ಟು, ಅನ್ವರ್ ಕಬಕ, ಶರೀಫ್  ಆಶೀವ್  ಸಹಿತ ಕಾರ್ಯಕ್ರಮದ ಸಂಘಟಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಾತೀ‌ಶ್ ಅಳಕೆಮಜಲು ಸ್ವಾಗತಿಸಿದರು. ನೌಫಲ್ ಕುಡ್ತಮುಗೇರ್ ಕಾರ್ಯಕ್ರಮ ನಿರೂಪಿಸಿದರು.

ಹಾರಾಡಿ : ಚಾಲಕನ ನಿಯಂತ್ರಣ ಕಳೆದುಕೊಂಡ ರಿಕ್ಷಾ: ಆ್ಯಕ್ಟಿವ್ ಸವಾರನಿಗೆ ಗಾಯ!

Posted by Vidyamaana on 2024-05-31 20:08:32 |

Share: | | | | |


ಹಾರಾಡಿ : ಚಾಲಕನ ನಿಯಂತ್ರಣ ಕಳೆದುಕೊಂಡ ರಿಕ್ಷಾ: ಆ್ಯಕ್ಟಿವ್ ಸವಾರನಿಗೆ ಗಾಯ!


ಪುತ್ತೂರು: ರಿಕ್ಷಾವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಹೋಗುತ್ತಿದ್ದ ಆ್ಯಕ್ಟೀವಾಗೆ ಡಿಕ್ಕಿ‌ ಹೊಡೆದ ಘಟನೆ ಪಡೀಲ್ ಹಾರಾಡಿ ಶಾಲಾ ಎದುರು ಶುಕ್ರವಾರ ಸಂಜೆ ನಡೆದಿದೆ.

ಆ್ಯಕ್ಟೀವಾ (KA 19 HN 1431) ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ (KA21 A 6438) ನಜ್ಜುಗುಜ್ಜಾಗಿದೆ.

Recent News


Leave a Comment: