ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಬಂಟ್ವಾಳ: ಲಾರಿ ಢಿಕ್ಕಿಯಾಗಿ ಬೈಕ್ ಸವಾರ ರಾಜ್ ಕುಮಾರ್ ಮೃತ್ಯು

Posted by Vidyamaana on 2023-09-24 16:55:47 |

Share: | | | | |


ಬಂಟ್ವಾಳ: ಲಾರಿ ಢಿಕ್ಕಿಯಾಗಿ ಬೈಕ್ ಸವಾರ ರಾಜ್ ಕುಮಾರ್ ಮೃತ್ಯು

ಬಂಟ್ವಾಳ: ಜಲ್ಲಿಕಲ್ಲು ಸಾಗಿಸುವ ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು (ಸೆ.24ರ ಭಾನುವಾರ) ಬೆಳಿಗ್ಗೆ ಪಾಣೆಮಂಗಳೂರಿನ ನೂತನ ಸೇತುವೆಯಲ್ಲಿ ನಡೆದಿದೆ.


ಸಜೀಪ ಬೇಂಕ್ಯ ನಿವಾಸಿ ವಾಸುದೇವ ಮಯ್ಯ ಅವರ ಹಿರಿಯ ಮಗ ರಾಜ್ ಕುಮಾರ್ ಮೃತಪಟ್ಟವರು.


ರಾಜ್ ಕುಮಾರ್ ಅವರು ವಾಮದಪದವು ಎಂಬಲ್ಲಿ ಜಾಗ ಖರೀದಿ ಮಾಡಿದ್ದು,ಕೃಷಿ ಮಾಡಿಕೊಂಡಿದ್ದರು.


ವಾಮದಪದವಿನ ಮನೆಯಿಂದ ಸಜೀಪದಲ್ಲಿರುವ ಮೂಲ ಮನೆಗೆ ಬರುವ ವೇಳೆ ಎದುರಿನಿಂದ ಬಂದ ಪವಿತ್ರ ಕನ್ಸ್ ಟ್ರಕ್ಷನ್ ಗೆ ಸೇರಿದ ಲಾರಿ ಢಿಕ್ಕಿಯಾಗಿದೆ.


ಲಾರಿ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂದು ಸಂಜೆ 6.04ಕ್ಕೆ ಲ್ಯಾಂಡಿಂಗ್: ಯೋಜನೆಯಲ್ಲಿ ಬದಲಾವಣೆಯಿಲ್ಲ ಎಂದ ಇಸ್ರೋ ಅಧ್ಯಕ್ಷ

Posted by Vidyamaana on 2023-08-23 08:34:02 |

Share: | | | | |


ಇಂದು ಸಂಜೆ 6.04ಕ್ಕೆ ಲ್ಯಾಂಡಿಂಗ್: ಯೋಜನೆಯಲ್ಲಿ ಬದಲಾವಣೆಯಿಲ್ಲ ಎಂದ ಇಸ್ರೋ ಅಧ್ಯಕ್ಷ

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರನ ಮೇಲೆ ಪೂರ್ವಯೋಜನೆಯಂತೆ ಚಂದ್ರನ ಮೇಲೆ ಲ್ಯಾಂಡರ್‌ ಅನ್ನು ಇಳಿಸುತ್ತದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್‌ ಹೇಳಿದ್ದಾರೆ.ಆಗಸ್ಟ್‌ 27ರಂದು ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡ್ ಆಗಲಿದೆ ಎಂಬ ಪ್ರಶ್ನೆ ಕುರಿತು ಈ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ.ಮೊದಲು ಯೋಜಿಸಿದಂತೆ ಆಗಸ್ಟ್‌ 23ರ ಸಂಜೆ 6.04 ನಿಮಿಷಕ್ಕೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಕಾಲಿಡಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸೋಮನಾಥ್‌ ತಿಳಿಸಿದ್ದಾರೆ.


ಚಂದ್ರಯಾನದ ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿದೆ. ಸಿಸ್ಟಮ್‌ಗಳು ನಿಯಮಿತ ತಪಾಸಣೆಗೆ ಒಳಗಾಗುತ್ತಿವೆ. ಸುಗಮ ನೌಕಾಯಾನ ಮುಂದುವರಿಯುತ್ತಿದೆ. ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (MOX) ಉತ್ಸಾಹದಿಂದ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ. ಕೊನೆಯ ಗಳಿಗೆಯಲ್ಲಿ ಯಾವುದೇ ಸಮಸ್ಯೆ ಉಂಟಾದರೆ, ಪ್ಲಾನ್ ಬಿ ಕೈಗೊಳ್ಳುವ (ಆ.27ರ ಲ್ಯಾಂಡಿಂಗ್)‌ ಸಾಧ್ಯತೆ ಇದೆ. ಮೂನ್ ಲ್ಯಾಂಡರ್ ತನ್ನ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ದೊಂದಿಗೆ ಲ್ಯಾಂಡಿಂಗ್ ಸೈಟ್‌ನ ಚಿತ್ರಗಳನ್ನು ಸೆರೆಹಿಡಿಯುತ್ತಿದೆ.ಮೂನ್ ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಅಂಡ್ ಅವಾಯಿಡೆನ್ಸ್ ಕ್ಯಾಮೆರಾ (LHDAC) ಎಂಬ ಮತ್ತೊಂದು ಕ್ಯಾಮೆರಾವನ್ನು ಸಹ ಹೊಂದಿದೆ. ಈ ಕ್ಯಾಮರಾ ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ವಾಟ್ಸಾಪ್ ಚಾನೆಲ್ ಸೇರಿದ ಪ್ರಧಾನಿ ಮೋದಿ : ನಮೋ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ

Posted by Vidyamaana on 2023-09-20 08:20:04 |

Share: | | | | |


ವಾಟ್ಸಾಪ್ ಚಾನೆಲ್ ಸೇರಿದ ಪ್ರಧಾನಿ ಮೋದಿ : ನಮೋ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ

ನವದೆಹಲಿ: ಬುಧವಾರವಷ್ಟೇ ಮೆಟಾ ಕಂಪನಿ(Meta) ಲಾಂಚ್ ಮಾಡಿದ್ದ ವಾಟ್ಸಾಪ್‌ನ ಹೊಸ ಫೀಚರ್ ‘ಚಾನೆಲ್’ (WhatsApp Channel) ಈಗ ಜನಪ್ರಿಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೂ ಈಗ ವಾಟ್ಸಾಪ್‌ ಚಾನೆಲ್ ಆರಂಭಿಸಿದ್ದಾರೆ. ವಾಟ್ಸಾಪ್‌ ಚಾನೆಲ್‌ನಲ್ಲಿ ಅಡ್ಮಿನ್‌ಗಳು (WhatsApp Channel Admin), ತಮ್ಮ ಫಾಲೋವರ್ಸ್‌ಗೆ ಪಠ್ಯ, ಟೆಕ್ಸ್ಟ್, ಫೋಟೋ, ವಿಡಿಯೋ, ಸ್ಟಿಕರ್ಸ್ ಷೇರ್ ಮಾಡಬಹುದು. ಜತೆಗೆ ಸಮೀಕ್ಷೆ ಕೂಡ ಕೈಗೊಳ್ಳಬಹುದು.

Read more.....

ಜನ ಸಂಪರ್ಕಕ್ಕೆ ವಾಟ್ಸಪ್ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ


ಏನಿದು ವಾಟ್ಸಾಪ್ ಚಾನೆಲ್?

ವಾಟ್ಸಾಪ್ ಚಾನೆಲ್, ಇದು ಒನ್‌ ವೇ ಬ್ರಾಡಕಾಸ್ಟರ್ ಸಾಧನವಾಗಿದೆ. ಅಡ್ಮಿನ್‌ಗಳು ಫಾಲೋವರ್ಸ್‌ಗಳೊಂದಿಗೆ ಪಠ್ಯದಿಂದ ಮಲ್ಟಿಮೀಡಿಯಾ ಮತ್ತು ಸಮೀಕ್ಷೆಗಳವರೆಗೆ ವಿವಿಧ ರೀತಿಯ ವಿಷಯವನ್ನು ಹಂಚಿಕೊಳ್ಳಲು ಇದು ಅನುಮತಿಸುತ್ತದೆ. ವ್ಯಕ್ತಿಗತ ಬಳಕೆದಾರರು ತಮ್ಮ ನೆಚ್ಚಿನ ವ್ಯಕ್ತಿಗಳು ಮತ್ತು ಸಂಸ್ಥೆಗಳ ಚಟುವಟಿಕೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಇದರಿಂದ ಸಾಧ್ಯವಾಗಲಿದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳೊಂದಿಗೆ ನಿಮ್ಮ ನಿಯಮಿತ ಚಾಟ್‌ಗಳಿಂದ ಭಿನ್ನವಾಗಿರುವ “ಅಪ್‌ಡೇಟ್‌ಗಳು” ಹೆಸರಿನ ಮೀಸಲಾದ ಟ್ಯಾಬ್ ಮೂಲಕ ವಾಟ್ಸಾಪ್ ಚಾನೆಲ್‌ ಪ್ರವೇಶಿಸಬಹುದಾಗಿದೆ.


ವಾಟ್ಸಾಪ್ ಚಾನೆಲ್ ಕಾರ್ಯ ಹೇಗೆ?

ಚಾನೆಲ್‌ಗಳು ಒನ್‌ವೇ ಬ್ರಾಡ್‌ಕಾಸ್ಟ್ ಆಗಿರುವುದರಿಂದ ಅಡ್ಮಿನ್‌ಗೆ ಮಾತ್ರ ಷೇರ್ ಮಾಡುವ ಹಕ್ಕಿರುತ್ತದೆ. ಬಳಕೆದಾರರು ಎಮೋಜಿಗಳ ಮೂಲಕ ಮಾತ್ರವೇ ಪ್ರತಿಕ್ರಿಯೆ ನೀಡಬಹುದು. ಹಾಗೆಯೇ, ಚಾನೆಲ್ ಪೋಸ್ಟ್‌ಗೆ ಎಷ್ಟು ರಿಯಾಕ್ಷನ್‌ಗಳು ಬಂದಿವೆ ಎಂಬುದನ್ನು ಲೆಕ್ಕ ಹಾಕಬಹುದು.


30 ದಿನಗಳವರೆಗೆ ಮಾತ್ರ ಅಡ್ಮಿನ್‌ಗಳಿಗೆ ತಮ್ಮ ಕಂಟೆಂಟ್ ಅಪ್‌ಡೇಟ್ ಮಾಡುವ ಇಲ್ಲವೇ ಬದಲಾವಣೆ ಮಾಡುವ ಅವಕಾಶವನ್ನು ಈ ಹೊಸ ಫೀಚರ್ ಒದಗಿಸುತ್ತದೆ. ಅದರ ವಾಟ್ಸಾಪ್, ತನ್ನ ಪ್ಲಾಟ್‌ಫಾರ್ಮ್ ಸರ್ವರ್‌ಗಳಿಂದ ಹಳೆಯ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಡಿಲಿಟ್ ಮಾಡುತ್ತದೆ.ಇದಲ್ಲದೆ, ನೀವು ಚಾಟ್‌ಗಳು ಅಥವಾ ಗ್ರೂಪ್‌ಗಳಿಗೆ ಅಪ್‌ಡೇಟ್ಸ್ ಫಾರ್ವರ್ಡ್ ಮಾಡಿದಾಗ, ಅದು ಸ್ವಯಂಚಾಲಿತವಾಗಿ ಮೂಲ ಚಾನಲ್‌ಗೆ ಲಿಂಕ್ ಒಳಗೊಂಡಿರುತ್ತದೆ. ಇದರಿಂದಾಗಿ ಚಾನೆಲ್‌ನ ಕಂಟೆಂಟ್ ಹುಡುಕುವ ಇತರರಿಗೆ ಸುಲಭ ಪ್ರವೇಶ ಒದಗಿಸಲು ಸಾಧ್ಯವಾಗುತ್ತದೆ.


ನರೇಂದ್ರ ಮೋದಿ ವಾಟ್ಸಾಪ್ ಚಾನೆಲ್‌ ಫಾಲೋ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ವಾಟ್ಸಾಪ್‌ ಅಪ್‌ಡೇಟ್ ಆಗಿದೆಯಾ ಚೆಕ್ ಮಾಡಿಕೊಳ್ಳಿ. ಒಂದೊಮ್ಮೆ ಆಗಿರದಿದ್ದರೆ ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ, ವಾಟ್ಸಾಪ್ ಅಪ್‌ಡೇಟ್ ಮಾಡಿಕೊಳ್ಳಿ. ಇಷ್ಟಾದ ಮೇಲೆ ಮೊದಲಿಗೆ ವಾಟ್ಸಾಪ್ ತೆರೆಯಿರಿ ಮತ್ತು ಅಪ್‌ಡೇಟ್‌ಗೆ ನ್ಯಾವಿಗೇಟ್ ಮಾಡಿ. ಬಳಿಕ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ, ನೀವು “Find Channels” ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಲಭ್ಯವಿರುವ ಚಾನೆಲ್‌ಗಳ ಪಟ್ಟಿ ನಿಮ್ಮ ಮುಂದೆ ಗೋಚರವಾಗುತ್ತದೆ. ಚಾನೆಲ್‌ ಸೇರಲು, ಚಾನೆಲ್ ಮುಂದೆ ಇರುವ plus icon ಮೇಲೆ ಟ್ಯಾಪ್ ಮಾಡಿ. ಮತ್ತೊಂದು ರೀತಿಯಲ್ಲೂ ನೀವು ಚಾನೆಲ್ ಜಾಯಿನ್ ಆಗಬಹುದು. ಇದಕ್ಕಾಗಿ ನೀವು, ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಹುಡುಕಾಟ ಐಕಾನ್ ಅನ್ನು ನೀವು ಬಳಸಬಹುದು ಅಥವಾ ಕ್ಲಿಕ್ ಮಾಡಿ ಮತ್ತು ಹುಡುಕಬಹುದು.

ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕ ಆರಂಭ: ಸಿಎಂ ಸಿದ್ದರಾಮಯ್ಯ

Posted by Vidyamaana on 2024-07-01 19:16:06 |

Share: | | | | |


ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕ ಆರಂಭ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಬೆಂಗಳೂರು ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ‌ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.

ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಈ ಬಗ್ಗೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದರು

ಪುಂಜಾಲಕಟ್ಟೆ: ಕಾರು- ದ್ವಿಚಕ್ರ ವಾಹನ ಢಿಕ್ಕಿ, ಸಂದೀಪ್ ಲೋಬೋ ಮೃತ್ಯು

Posted by Vidyamaana on 2023-04-28 07:14:35 |

Share: | | | | |


 ಪುಂಜಾಲಕಟ್ಟೆ: ಕಾರು- ದ್ವಿಚಕ್ರ ವಾಹನ ಢಿಕ್ಕಿ, ಸಂದೀಪ್  ಲೋಬೋ ಮೃತ್ಯು

ಪುಂಜಾಲಕಟ್ಟೆ: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದು  ಸವಾರನೋರ್ವ  ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಎ.28 ರಂದು ಬೆಳಗ್ಗೆ ಸಂಭವಿಸಿದೆ.ಸ್ಕೂಟಿ ಸವಾರ, ಅಮ್ಟಾಡಿ ನಿವಾಸಿ ಸಂದೀಪ್ ಲೋಬೊ (35) ಮೃತಪಟ್ಟವರಾಗಿದ್ದು, ಅವರ ನೆರೆಮನೆಯ ಆಕಾಶ್ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರಿಬ್ಬರು ವೆಲ್ಡಿಂಗ್ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಅತೀವೇಗದಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ರಿಟ್ಜ್ ಕಾರು ಢಿಕ್ಕಿ ಹೊಡೆದಿದೆ.

ಅಪಘಾತದಿಂದ ಗಾಯಗೊಂಡಿದ್ದ ಸಂದೀಪ್ ಲೋಬೋ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದು, ಆಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಪುಂಜಾಲಕಟ್ಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರಿನಲ್ಲಿ ಬಿಜೆಪಿ ಗೆಲುವಿನ ಆಶೆಗೆ ಬಲ ತುಂಬಿದ ಯೋಗಿ ಭೇಟಿ

Posted by Vidyamaana on 2023-05-06 10:27:51 |

Share: | | | | |


ಪುತ್ತೂರಿನಲ್ಲಿ ಬಿಜೆಪಿ ಗೆಲುವಿನ ಆಶೆಗೆ ಬಲ ತುಂಬಿದ ಯೋಗಿ ಭೇಟಿ

ಪುತ್ತೂರು : ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಿದ್ದು, ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ದೇವಸ್ಥಾನದ ಬಳಿಯಿಂದ ರೋಡ್‌ ಶೋ ಆರಂಭಗೊಳಿಸಿದರು.ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ ನಿಂದ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯೋಗಿ ಆದಿತ್ಯನಾಥ್‌ ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ದೇವಳದ ಬಳಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಯೋಗಿ ನೋಡಲು ಜನ ಸಲು ಗಟ್ಟಿ ನಿಂತಿದ್ದು, ಯೋಗಿ ಜನತೆಯತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ



Leave a Comment: