ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಜಲಸಿರಿ ಅಧಿಕಾರಿಗಳ ನಿರ್ಲಕ್ಷ್ಯ - ಪುತ್ತೂರಿನಾದ್ಯಂತ ಕುಡಿಯುವ ನೀರಿನ ಬವಣೆ

Posted by Vidyamaana on 2024-05-11 22:50:45 |

Share: | | | | |


ಜಲಸಿರಿ ಅಧಿಕಾರಿಗಳ ನಿರ್ಲಕ್ಷ್ಯ - ಪುತ್ತೂರಿನಾದ್ಯಂತ ಕುಡಿಯುವ ನೀರಿನ ಬವಣೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿರುವ 170 ಕೊಳವೆ ಬಾವಿಗಳ ನಿರ್ವಹಣೆಯನ್ನು ನಗರಸಭೆ ಈಗಾಗಲೇ ಜಲಸಿರಿ ಸುಪರ್ದಿಗೆ ನೀಡಿದ್ದ ಪರಿಣಾಮ ಎಲ್ಲೆಡೆ ಕುಡಿಯುವ ನೀರಿನ ಬವಣೆ ಉಂಟಾಗಿದೆ. ಈ ನಿಟ್ಟಿನಲ್ಲಿ 170 ಕೊಳವೆ ಬಾವಿಗಳ ನಿರ್ವಹಣೆಗೆ ಈ ಹಿಂದೆ ಇದ್ದ 31 ಪಂಪ್ ಆಪರೇಟರ್ಗಳನ್ನು ಪುನಃ ನಿಯೋಜನೆ ಮಾಡಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ನಗರಸಭೆ ಹಾಗೂ ಜಲಸಿರಿ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ನಗರಸಭೆ ಮಾಜಿ ವಿಪಕ್ಷ ನಾಯಕ ಎಚ್.ಮಹಮ್ಮದಾಲಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಲಸಿರಿ ಯೋಜನೆ ಕಾಮಗಾರಿ ಸಂಪೂರ್ಣಗೊಳ್ಳುವ ಮೊದಲೇ ನೀರಿನ ಸಮಸ್ಯೆಯ ಸಾಧಕ-ಬಾಧಕಗಳನ್ನು ಪರಿಶೀಲಿಸದೆ ನಗರಸಭೆ ನೀರು ಸರಬರಾಜು ನಿರ್ವಹಣೆಯನ್ನು ಸುಯೇಜ್ ಕಂಪೆನಿಗೆ (ಜಲಸಿರಿ) ಟ್ರಯಲ್ಗೆ ನೀಡಿದ್ದು, ಜಲಸಿರಿಯವರು 170 ಕೊಳವೆ ಬಾವಿಗಳ ನೀರು ಒದಗಿಸುವ ನಿರ್ವಹಣೆ ಮಾಡುತ್ತಿದ್ದ 31 ಆಪರೇಟರ್ಗಳನ್ನು ಕೈಬಿಟ್ಟು ಕೆಲವೇ ಕಲವು ಪಂಪ್ ಆಪರೇಟರ್ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ. ಪರಿಣಾಮ ನೀರು ಸರಿಯಾಗಿ ಸರಬರಾಜಾಗುತ್ತಿಲ್ಲ. ಅಲ್ಲದೆ ಹೊಸ ಯೋಜನೆಯಿಂದಲೂ ನೀರು ವಿತರಣೆ ಆಗುತ್ತಿಲ್ಲ. ಜನರಿಗೆ ಇತ್ತ ಕೊಳವೆ ಬಾವಿಯಿಂದ ಅತ್ತ ಜಲಸಿರಿ ಯೋಜನೆಯಿಂದ ನೀರು ಇಲ್ಲದಂತಾಗಿದೆ. ಇದಕ್ಕೆ ನೀರು ಸರಬರಾಜು ಹೊಣೆಹೊತ್ತ ಜಲಸಿರಿ ಹಾಗೂ ನಗರಸಭೆ ಪ್ರಮುಖ ಕಾರಣ ಎಂದು ಅವರು ಆರೋಪಿಸಿದರು.


ಶಬರಿಮಲೆ ಯಾತ್ರೆಗೆ ವೃತ ಕೈಗೊಂಡ ಪಾದ್ರಿ ಚರ್ಚ್ ಪರವಾನಿಗೆ ರಿಟರ್ನ್ ಮಾಡಿದ್ದೇಕೆ?

Posted by Vidyamaana on 2023-09-10 18:31:35 |

Share: | | | | |


ಶಬರಿಮಲೆ ಯಾತ್ರೆಗೆ ವೃತ ಕೈಗೊಂಡ ಪಾದ್ರಿ ಚರ್ಚ್ ಪರವಾನಿಗೆ ರಿಟರ್ನ್ ಮಾಡಿದ್ದೇಕೆ?

ತಿರುವನಂತಪುರಂ: ಪ್ರಸಿದ್ಧ ಧಾರ್ಮಿಕ ಕೇಂದ್ರ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಅನುಸರಿಸಿದ 41 ದಿನಗಳ ವ್ರತವನ್ನು ಕೈಗೊಂಡುದಕ್ಕೆ ಕೇರಳದ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಧಾರ್ಮಿಕ ಸೇವೆಗಳನ್ನು ನಿರ್ವಹಿಸುವುದಕ್ಕಾಗಿ ಚರ್ಚ್ ನೀಡಿದ್ದ ಪರವಾನಗಿಯನ್ನೇ ಹಿಂದಿರುಗಿಸಿ ಸುದ್ದಿಯಾಗಿದ್ದಾರೆ.

ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾದಲ್ಲಿ ಪಾದ್ರಿಯಾಗಿರುವ ರೆವ್ ಮನೋಜ್ ಕೆ.ಜಿ. ಅವರು ಈ ತಿಂಗಳ ಕೊನೆಯಲ್ಲಿ ದೇವಾಲಯಕ್ಕೆ ತೀರ್ಥಯಾತ್ರೆಗೆ ಹೋಗುವ ಸಲುವಾಗಿ 41 ದಿನಗಳ ಸಾಂಪ್ರದಾಯಿಕ ವ್ರತವನ್ನು ಆಚರಿಸುತ್ತಿದ್ದಾರೆ. ಚರ್ಚ್‌ಗೆ ಈ ಬಗ್ಗೆ ತಿಳಿದಾಗ, ಇಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪಿಸಿದೆ.


ನಾನು ಕ್ರಿಶ್ಚಿಯನ್ ಸಿದ್ಧಾಂತಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದೇನೆ ಎಂದು ನನ್ನಿಂದ ವಿವರಣೆಯನ್ನು ಕೇಳಿದರು. ವಿವರಣೆಯನ್ನು ನೀಡುವ ಬದಲು, ನಾನು ಪಾದ್ರಿಯಾದಾಗ ಸ್ವೀಕರಿಸಿದ, ಚರ್ಚ್ ನನಗೆ ನೀಡಿದ ಗುರುತಿನ ಚೀಟಿ ಮತ್ತು ಪರವಾನಗಿಯನ್ನು ಹಿಂದಿರುಗಿಸಿದೆ” ಎಂದು ಮನೋಜ್ ಕೆ.ಜಿ. ಪಿಟಿಐಗೆ ತಿಳಿಸಿದ್ದಾರೆ.


ತಾನು ಮಾಡಿದ್ದು ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾದ ನಿಯಮಗಳು ಮತ್ತು ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ನನ್ನ ಕೆಲಸವು ಚರ್ಚ್‌ನ ಸಿದ್ಧಾಂತಗಳನ್ನು ಆಧರಿಸಿಲ್ಲ, ಬದಲಿಗೆ ಅದು “ಲಾರ್ಡ್ಸ್” ಸಿದ್ಧಾಂತಗಳನ್ನು ಆಧರಿಸಿದೆ ಎಂದು ಮನೋಜ್ ಹೇಳಿದ್ದಾರೆ.


“ದೇವರು ಪ್ರತಿಯೊಬ್ಬರನ್ನು ಅವರ ಜಾತಿ, ಮತ, ಧರ್ಮ ಅಥವಾ ನಂಬಿಕೆಗಳನ್ನು ಲೆಕ್ಕಿಸದೆ ಪ್ರೀತಿಸುವಂತೆ ಕೇಳಿಕೊಂಡಿದ್ದಾನೆ. ಇತರರನ್ನು ಪ್ರೀತಿಸುವುದು ಅವರ ಚಟುವಟಿಕೆಗಳಲ್ಲಿ ಸೇರುವುದನ್ನು ಒಳಗೊಂಡಿರುತ್ತದೆ. ಆದ್ದರಿಂದ ನೀವು ಚರ್ಚ್ ಸಿದ್ಧಾಂತ ಅಥವಾ ದೇವರ ಸಿದ್ಧಾಂತವನ್ನು ಅನುಸರಿಸಲು ಬಯಸುತ್ತೀರಾ ಎಂದು ನಿರ್ಧರಿಸಬಹುದು.ನೀವು ದೇವರನ್ನು ಪ್ರೀತಿಸುತ್ತೀರಾ ಅಥವಾ ಚರ್ಚ್ ಅನ್ನು ಪ್ರೀತಿಸುತ್ತೀರಾ, ನೀವು ನಿರ್ಧರಿಸಬಹುದು. ‘ಚರ್ಚ್’ ಎಂದರೆ ಸಾಂಪ್ರದಾಯಿಕ, ನಿರ್ಮಿತ ಪದ್ಧತಿಗಳು” ಎಂದು 41 ದಿನಗಳ ವ್ರತ ಕೈಗೊಳ್ಳುವ ನಿರ್ಧಾರವನ್ನು ಟೀಕಿಸಿದವರಿಗೆ ಫೇಸ್‌ಬುಕ್‌ನಲ್ಲಿ ಸ್ಪಷ್ಟವಾದ ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ.

ಮನೋಜ್ ಪಾದ್ರಿಯಾಗುವ ಮೊದಲು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು.ಆಧ್ಯಾತ್ಮಿಕ ಬೋಧನೆಗಳಿಗೆ ಅಧಿಕೃತತೆಯನ್ನು ನೀಡುವ ಸಲುವಾಗಿ ಅವರು ಪಾದ್ರಿಯಾದೆ ಎಂದು ಹೇಳಿದರು

ಬಡಗನ್ನೂರು ದರೋಡೆ ಪ್ರಕರಣ

Posted by Vidyamaana on 2023-09-08 22:22:32 |

Share: | | | | |


ಬಡಗನ್ನೂರು ದರೋಡೆ ಪ್ರಕರಣ

ಪುತ್ತೂರು: ಬಡಗನ್ನೂರು ಗ್ರಾಮದ ಕುದ್ಕಾಡಿಯಲ್ಲಿ ತಾಯಿ,ಮಗನನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಪ್ರಕರಣವನ್ನು ಬೇದಿಸಿ ಆರೋಪಿಗಳನ್ನು ಬಂಧಿಸುವಂತೆ  ಪೊಲೀಸ್ ಅಧಿಕಾರಿಗಳಿಗೆ ಶಾಸಕರಾದ ಅಶೋಕ್ ರೈ ಸೂಚನೆಯನ್ನು ನೀಡಿದ್ದಾರೆ.

ಒಂಟಿ ಮನೆ ಇರುವ ಕಡೆಗಳಲ್ಲಿ ಇಂಥಹ ಘಟನೆಗಳು ಹೆಚ್ಚು ನಡೆಯುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ದರೋಡೆ ತಂಡದವರನ್ನು ಪತ್ತೆ ಮಾಡುವ ಮೂಲಕ ಇಲಾಖೆ ಬಗ್ಗೆ ಜನರಿಗೆ ವಿಶ್ವಾಸ ಮತ್ತು ಧೈರ್ಯ  ತುಂಬುವ ಕೆಲಸವನ್ನು ಪೊಲೀಸ್  ಇಲಾಖೆ ಮಾಡಬೇಕು ಎಂದು ಪಶ್ಚಿಮ ವಲಯ ಐಜಿಯವರಿಗೆ ದೂರವಾಣಿ ಮೂಲಕ ಸೂಚನೆಯನ್ನು ನೀಡಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಇಂಥಹ ಕೃತ್ಯಗಳು ನಡೆದಾಗ ಜನ ಭಯಭೀತರಾಗುತ್ತಾರೆ. ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಮಾಡುವ ಮೂಲಕ ಕ್ರಿಮಿನಲ್ ಗಳ ಹೆಡೆಮುರಿ ಕಟ್ಟುವ ಕೆಲಸವನ್ನು ಇಲಾಖೆ ಮಾಡಬೇಕಿದ್ದು ಇದಕ್ಕೆ ಬೇಕಾದ ಪೂರ್ಣ ಸಹಕಾರವನ್ನು ನೀಡುವುದಾಗಿ ಶಾಸಕರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ,ದರೋಡೆ ,ಕಳವು ಕೃತ್ಯಗಳು ನಡೆಯದಂತೆ ಇಲಾಖೆ ಕಟ್ಟೆಚ್ಚರ ವಹಿಸಬೇಕೆಂದು ಶಾಸಕರು ಸೂಚನೆ ನೀಡಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಕಾರಣ ಶಾಸಕರಯ ದೂರವಾಣಿ ಮೂಲಕ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ದೂರವಾಣಿ ಜೊತೆ ಸಂಪರ್ಕಿಸಿ ಖಡಕ್ ಸೂಚನೆಯನ್ನು ನೀಡಿದ್ದಾರೆ.

ಕಡಬ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟ : ಮುಖಂಡರು ಮತ್ತು ಕಾರ್ಯಕರ್ತರ ನಡುವೆ ನೂಕಾಟ – ತಳ್ಳಾಟ

Posted by Vidyamaana on 2024-03-30 21:21:56 |

Share: | | | | |


ಕಡಬ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟ : ಮುಖಂಡರು ಮತ್ತು ಕಾರ್ಯಕರ್ತರ ನಡುವೆ ನೂಕಾಟ – ತಳ್ಳಾಟ

ಕಡಬ : ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ನಾಯಕರ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ನೂಕಾಟ – ತಳ್ಳಾಟದವರೆಗೆ ತಲುಪಿದ ಬಗ್ಗೆ ವರದಿಯಾಗಿದೆ.

ದ್ವಿತೀಯ ಪಿಯುಸಿ ಫಲಿತಾಂಶ: ಸುಳ್ಯದ ತಾಯಿ, ಮಗಳು ಉತ್ತೀರ್ಣ

Posted by Vidyamaana on 2023-04-21 11:26:30 |

Share: | | | | |


ದ್ವಿತೀಯ ಪಿಯುಸಿ ಫಲಿತಾಂಶ: ಸುಳ್ಯದ ತಾಯಿ, ಮಗಳು ಉತ್ತೀರ್ಣ

ಸುಳ್ಯ: ಸುಳ್ಯದ ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ಅಪರೂಪದ ಫಲಿತಾಂಶಕ್ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಸಾಕ್ಷಿಯಾಗಿದೆ.

ಸುಳ್ಯ ಜಯನಗರದ ರಮೇಶ್ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಮತ್ತು ಮಗಳು.

ಸುಳ್ಯ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆ ಅಧ್ಯಯನ ನಡೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು 45ನೇ ವರ್ಷದಲ್ಲಿ ಉತ್ತೀರ್ಣರಾಗಿದ್ದಾರೆ.

ಮಗಳು ತೃಷಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. 25 ವರ್ಷದ ಹಿಂದೆ ಗೀತಾ ಅವರ ಹೈಸ್ಕೂಲ್ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಎರಡು ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು. ಈ ವರ್ಷ ಪಿಯುಸಿ ಪರೀಕ್ಷೆಯನ್ನು ಸುಳ್ಯದ ಗಾಂಧಿನಗರ ಕಾಲೇಜಿನಲ್ಲಿ ಪರೀಕ್ಷೆ ಕಟ್ಟಿ, ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರು.

ಗೃಹ ರಕ್ಷಕ ದಳದ ಸಿಬ್ಬಂದಿಯಾಗಿರುವ ಇವರು ಕರ್ತವ್ಯ, ಮನೆಗೆಲಸದ ಬಿಡುವಿನ ವೇಳೆ ಅಭ್ಯಾಸ ನಡೆಸಿದ್ದಾರೆ. ಅಲ್ಲದೆ ಇವರ ಕಲಿಕೆಗೆ ಪೂರಕವಾಗಿ ಕಾಲೇಜಿನ ಉಪನ್ಯಾಸಕರೂ ಪುಸ್ತಕಗಳನ್ನು ನೀಡಿ ಸಹಕರಿಸಿದ್ದಾರೆ. ಅವರಿಗೆ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ.

ತನ್ನ ಖಾಸಗಿ ಫೋಟೋಗಳನ್ನು ಅಳಿಸಲು ಪ್ರಿಯತಮನ ಫೋನ್ ತೆರೆದ ಬೆಂಗಳೂರಿನ ಮಹಿಳೆಗೆ ಶಾಕ್!

Posted by Vidyamaana on 2023-11-30 07:13:49 |

Share: | | | | |


ತನ್ನ ಖಾಸಗಿ ಫೋಟೋಗಳನ್ನು ಅಳಿಸಲು ಪ್ರಿಯತಮನ ಫೋನ್ ತೆರೆದ ಬೆಂಗಳೂರಿನ ಮಹಿಳೆಗೆ ಶಾಕ್!

ಬೆಂಗಳೂರು :ಬೆಂಗಳೂರು ಮೂಲದ 22 ವರ್ಷದ ತನ್ವಿ (ಹೆಸರು ಬದಲಾಯಿಸಲಾಗಿದೆ) ತನ್ನ ಸಂಗಾತಿಯ ಫೋನ್ ಗ್ಯಾಲರಿಯನ್ನು ತೆರೆದಾಗ ಆಘಾತಕ್ಕೆ ಒಳಗಾಗಿದ್ದಳು ಮತ್ತು ಅವಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13,000 ನಗ್ನ ಫೋಟೋಗಳನ್ನು ಅದರಲ್ಲಿ ಕಂಡುಕೊಂಡಳು.ತನ್ವಿ ತಾನು ಕೆಲಸ ಮಾಡುತ್ತಿದ್ದ ಬಿಪಿಒ ಕಂಪನಿಗೆ ಸೇರಿದ ನಂತರ ಐದು ತಿಂಗಳ ಹಿಂದೆ 25 ವರ್ಷದ ಆದಿತ್ಯ ಸಂತೋಷ್ ಅವರನ್ನು ಭೇಟಿಯಾದರು.ಅವರು ಕಳೆದ ನಾಲ್ಕು ತಿಂಗಳಿನಿಂದ ಸಂಬಂಧದಲ್ಲಿದ್ದಾರೆ.


ತನ್ವಿ ಅವರು ರೆಕಾರ್ಡ್ ಮಾಡಿದ ಕೆಲವು ಆತ್ಮೀಯ ಕ್ಷಣಗಳನ್ನು ಅಳಿಸಲು ಸಂತೋಷ್ ಅವರ ಫೋನ್ ಅನ್ನು ಅವರಿಗೆ ತಿಳಿಯದೆ ತೆರೆದಿದ್ದಾರೆ ಎಂದು ವರದಿಯಾಗಿದೆ.


ಫೋನ್ ನೋಡಿ ವಿಚಲಿತಳಾದ ಅವಳು ಸಂತೋಷ್‌ನೊಂದಿಗಿನ ಸಂಬಂಧವನ್ನು ತಕ್ಷಣವೇ ಕಡಿದುಕೊಂಡಳು ಮತ್ತು ಭವಿಷ್ಯದಲ್ಲಿ ಯಾವುದೇ ತೊಂದರೆಯಿಂದ ತನ್ನ ಇತರ ಸಹೋದ್ಯೋಗಿಗಳನ್ನು ರಕ್ಷಿಸಲು ನವೆಂಬರ್ 20 ರಂದು ಅವರ ಕಚೇರಿಯ ಹಿರಿಯರಿಗೆ ವಿಷಯವನ್ನು ವರದಿ ಮಾಡಿದಳು. ಸಂತೋಷ್ ಅವರ ಫೋನ್‌ನಲ್ಲಿ 13,000 ನಗ್ನ ಚಿತ್ರಗಳು ಇದ್ದು, ಕೆಲವು ಅವರ ಮಹಿಳಾ ಸಹೋದ್ಯೋಗಿಗಳು ಕೂಡ ಇದ್ದರು.


ವರದಿಯ ಪ್ರಕಾರ, ತನ್ವಿ ಅನೇಕ ಫೋಟೋಗಳನ್ನು ಮಾರ್ಫ್ ಮಾಡಲಾಗಿದೆ ಎಂದು ಶಂಕಿಸಿದ್ದಾರೆ.ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಬೆಳ್ಳಂದೂರು ಮೂಲದ ಬಿಪಿಒ ಕಂಪನಿಯು ನವೆಂಬರ್ 23 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಔಪಚಾರಿಕ ದೂರು ದಾಖಲಿಸಿದೆ.


"ಇದು ಹಲವಾರು ಇತರ ಮಹಿಳೆಯರ ಮೇಲೆ ಪರಿಣಾಮ ಬೀರಬಹುದು. ಅವನು ಕಚೇರಿಯಲ್ಲಿ ಇತರ ಮಹಿಳೆಯರಿಗೆ ಯಾವುದೇ ಹಾನಿ ಮಾಡದಿದ್ದರೂ, ಅವನ ಉದ್ದೇಶ ಯಾರಿಗೂ ತಿಳಿದಿರಲಿಲ್ಲ. ಫೋಟೋಗಳು ಸೋರಿಕೆಯಾದಲ್ಲಿ ಅದು ಅವರಿಗೆ ಆಘಾತವನ್ನುಂಟುಮಾಡುತ್ತದೆ. ನಾವು ಪೊಲೀಸರಿಗೆ ಹೇಳಲು ಬಯಸಿದ್ದೇವೆ. ಇದು ಸಂಭಾವ್ಯ ಸಮಸ್ಯೆಯಾಗಿದೆ." ಎಂದಿ ಕಂಪನಿಯ ವಕ್ತಾರರು ಹೇಳಿದರು.


ಛಾಯಾಚಿತ್ರಗಳನ್ನು ಮಾರ್ಫ್ ಮಾಡಲು ಸಂತೋಷ್ ಸಂಸ್ಥೆಯ ಯಾವುದೇ ಸಾಧನಗಳನ್ನು ಬಳಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.ಏತನ್ಮಧ್ಯೆ, ಪೊಲೀಸರು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರ ಕಚೇರಿಯಿಂದಲೇ ಬಂಧಿಸಿದ್ದಾರೆ. ಆದರೆ, ಈ ಚಿತ್ರಗಳನ್ನು ಸಂಗ್ರಹಿಸಿಟ್ಟಿರುವ ಸಂತೋಷ್‌ನ ಉದ್ದೇಶವನ್ನು ಬಹಿರಂಗಪಡಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.



Leave a Comment: