ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಬೈಯುವ ಆಡಿಯೋ ವೈರಲ್‌: ಪೊಲೀಸ್ ಆಯುಕ್ತರಿಗೆ ದೂರು

Posted by Vidyamaana on 2023-04-20 03:27:37 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಗೆ ಬೈಯುವ ಆಡಿಯೋ ವೈರಲ್‌: ಪೊಲೀಸ್ ಆಯುಕ್ತರಿಗೆ ದೂರು

ಮಂಗಳೂರು: ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ವ್ಯಕ್ತಿಯೋರ್ವ ಏಕವಚನದಲ್ಲಿ ಅವಾಚ್ಯವಾಗಿ ಬೈಯುವ ಆಡಿಯೋ ವೈರಲ್‌ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ನಳಿನ್‌ 2019ರ ಲೋಕಸಭಾ ಚುನಾವಣೆ ಯಲ್ಲಿ ಗೆದ್ದ ಸಂದರ್ಭ ಮುಸ್ಲಿಂ ಧರ್ಮಗುರು ಗಳು ತಮ್ಮ ಬೆಂಬಲಿಗರೊಂದಿಗೆ ನಳಿನ್‌ ಅವರಲ್ಲಿಗೆ ಆಗಮಿಸಿ ಹೂಗುತ್ಛ ನೀಡಿ ಅಭಿನಂದಿಸಿ

ಫೋಟೋ ತೆಗೆಸಿಕೊಂಡಿದ್ದರು.ಆದರೆ ಈಗ ಯಾರೋ ದುಷ್ಕರ್ಮಿ ಆ ಫೋಟೋವನ್ನು ಜಾಲತಾಣದಲ್ಲಿ ಹಾಕಿ ಅದರೊಂದಿಗೆ ನಳಿನ್‌ ಅವರಿಗೆ ಏಕವಚನದಲ್ಲಿ, ಅವಾಚ್ಯ ಶಬ್ದ ಗಳಿಂದ ಬೈಯುವ ಆಡಿಯೋ ವೈರಲ್‌ ಮಾಡಿ ದ್ದಾನೆ. ಈ ಬಗ್ಗೆ ಬಿಜೆಪಿ ಕಾನೂನು ಪ್ರಕೋಷ್ಠ ದಿಂದ ಪೊಲೀಸರಿಗೆ ದೂರು ನೀಡಲಾಗಿದೆ. ದುಷ್ಕರ್ಮಿಯನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಆಯುಕ್ತರನ್ನು ಒತ್ತಾಯಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ತಿಳಿಸಿದ್ದಾರೆ.

ಡಾ.ಮೋಹನ ಆಳ್ವರಿಗೆ ಪಿತೃವಿಯೋಗ

Posted by Vidyamaana on 2023-10-31 16:03:17 |

Share: | | | | |


ಡಾ.ಮೋಹನ ಆಳ್ವರಿಗೆ ಪಿತೃವಿಯೋಗ

ಮಂಗಳೂರು, ಅ.31: ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವಾ ಅವರ ತಂದೆ, ಶತಾಯುಷಿ 106 ವರ್ಷದ ಮಿಜಾರು ಗುತ್ತು ಆನಂದ ಆಳ್ವ ನಿಧನರಾಗಿದ್ದಾರೆ. 


ಇಳಿ ವಯಸ್ಸು ಮೀರಿದ್ದರೂ ಮಿಜಾರಿನ ತಮ್ಮ ಮನೆಯಲ್ಲಿ ಆರೋಗ್ಯದಲ್ಲೇ ಇದ್ದ ಆನಂದ ಆಳ್ವರು ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತದಾನಕ್ಕಾಗಿ ಬಂಗಬೆಟ್ಟು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು. ಇಡೀ ರಾಜ್ಯದಲ್ಲಿಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಅತಿ ಹಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆ ಕೇಳಿಬಂದಿತ್ತು. 


1918ರಲ್ಲಿ ಜನಿಸಿದ್ದ ಆನಂದ ಆಳ್ವರು ಸಣ್ಣಂದಿನಲ್ಲಿ ಕಿನ್ನಿಕಂಬಳದ ಸರಕಾರಿ ಶಾಲೆಯಲ್ಲಿ ಐದನೇ ಕ್ಲಾಸು ಓದಿದ್ದರಂತೆ. ಮಿಜಾರಿನಲ್ಲಿದ್ದುಕೊಂಡೇ ಕೃಷಿಕನಾಗಿದ್ದ ಆನಂದ ಆಳ್ವರು ಒಂದು ಬಾರಿ ಬೀಡಿ ವ್ಯವಹಾರವನ್ನೂ ಮಾಡಿಕೊಂಡಿದ್ದರು. ಆನಂತರ ಅಬಕಾರಿ ಗುತ್ತಿಗೆಯನ್ನೂ ಮಾಡಿದ್ದರು. ಕಂಬಳ, ದೈವಾರಾಧನೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಸ್ವತಃ ಕಂಬಳದ ಕೋಣಗಳನ್ನು ಸಾಕಿ ಕಂಬಳದ ಸ್ಪರ್ಧೆಗಳಿಗೆ ತೆರಳುತ್ತಿದ್ದರು. 2022ರ ಆಗಸ್ಟ್ ತಿಂಗಳಲ್ಲಿ ಆಳ್ವಾಸ್ ಸಂಸ್ಥೆಯ ಆವರಣದಲ್ಲಿ ಆನಂದ ಆಳ್ವರ 105 ವರ್ಷದ ಸಂಭ್ರಮಪೂರ್ಣ ಕಾರ್ಯಕ್ರಮ ನಡೆದಿತ್ತು.

ನಿಡ್ಪಳ್ಳಿ ಗ್ರಾಪಂ ಉಪಚುನಾವಣೆಯ ಫಲಿತಾಂಶ ಪ್ರಕಟ

Posted by Vidyamaana on 2023-07-26 04:57:12 |

Share: | | | | |


ನಿಡ್ಪಳ್ಳಿ ಗ್ರಾಪಂ ಉಪಚುನಾವಣೆಯ ಫಲಿತಾಂಶ ಪ್ರಕಟ

ಪುತ್ತೂರು: ನಿಡ್ಪಳ್ಳಿ 1ನೇ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎನ್. ಸತೀಶ್ ಶೆಟ್ಟಿ ಬಾಕಿತ್ತಿಮಾರ್ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ ಎರಡನೇ ಸ್ಥಾನ ಪಡೆದುಕೊಂಡಿದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ನಿಡ್ಪಳ್ಳಿಯ ವಾರ್ಡ್ 1ರಲ್ಲಿ ಒಟ್ಟು 607 ಮತದಾರರಿದ್ದು, ಒಟ್ಟು 529 ಮತ ಚಲಾವಣೆಯಾಗಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎನ್. ಸತೀಶ್ ಶೆಟ್ಟಿ ಬಾಕಿತ್ತಿಮಾರ್ ಜಯ ಗಳಿಸಿದ್ದರೆ, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳಂಬೆತ್ತಿಮಾರ್ ಎರಡನೇ ಸ್ಥಾನ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಂ. ಚಂದ್ರಶೇಖರ್ ಪ್ರಭು ಗೋಳಿತ್ತಡಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ನಿಡ್ಪಳ್ಳಿ ಗ್ರಾಪಂನ ಚುನಾವಣಾಧಿಕಾರಿಯಾಗಿದ್ದ ತಾ.ಪಂ. ಯೋಜನಾಧಿಕಾರಿ ಸುಕನ್ಯಾ, ಸಹಾಯಕ ಚುನಾವಣಾಧಿಕಾರಿಯಾಗಿದ್ದ ಪಿಡಿಓ ಸಂಧ್ಯಾಲಕ್ಷ್ಮೀ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.

ಸಿಬಿಐ ನೂತನ ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ನೇಮಕ

Posted by Vidyamaana on 2023-05-14 10:50:58 |

Share: | | | | |


ಸಿಬಿಐ ನೂತನ ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ನೇಮಕ

ಹೊಸದಿಲ್ಲಿ: ಕರ್ನಾಟಕ ಕೇಡರ್‌ ನ 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ಉನ್ನತ ಮಟ್ಟದ ಆಯ್ಕೆ ಸಮಿತಿಯು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರನ್ನಾಗಿ ನೇಮಿಸಿದೆ.ಪ್ರಸ್ತುತ ಕರ್ನಾಟಕದಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಸೇವೆ ಸಲ್ಲಿಸುತ್ತಿರುವ ಸೂದ್ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡ ಆಯ್ಕೆ ಸಮಿತಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರವೀಣ್ ಸೂದ್ ಅವರನ್ನು ಮುಂದಿನ ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲು ಸರ್ವಾನುಮತದಿಂದ ಆಯ್ಕೆ ಮಾಡಿದೆ.

ಪುತ್ತೂರು :ನಾರಿಶಕ್ತಿ ಮಹಿಳಾ ಕಾರ್ಯಕರ್ತರ ಸಮಾವೇಶ

Posted by Vidyamaana on 2024-04-10 11:38:40 |

Share: | | | | |


ಪುತ್ತೂರು :ನಾರಿಶಕ್ತಿ ಮಹಿಳಾ ಕಾರ್ಯಕರ್ತರ ಸಮಾವೇಶ

ಪುತ್ತೂರು, ಎ.9: ನಿಮ್ಮೆಲ್ಲರ ಕೈ ಕೊಯ್ದರೆ ರಕ್ತ ಕೆಂಪಿನದ್ದಿಲ್ಲ, ಕೇಸರಿ ಇರೋದು ಅಂತ ಗೊತ್ತಿದೆ. ನಿಮ್ಮವರಿಗೆ ಬಿಜೆಪಿ ಬಗ್ಗೆ, ಹಿಂದುತ್ವದ ಬಗ್ಗೆ ಪಾಠ ಹೇಳಲು ಬಂದಿಲ್ಲ. ಆದರೆ ನಾಡಿದ್ದು ಎಪ್ರಿಲ್ 26ರಂದು ಮದುವೆ ಇದೆ, ಮೋದಿ ಹೇಗೂ ಗೆಲ್ಲುತ್ತಾರೆಂದು ನಿರ್ಲಕ್ಷ್ಯ ಮಾಡಬೇಡಿ. ಮೋದಿಯವರು ಈ ದೇಶದ ಮಹಿಳೆಯರಿಗೆ ಶಕ್ತಿ ಕೊಟ್ಟಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಎಷ್ಟೆಲ್ಲಾ ಯೋಜನೆ ಮಾಡಿದ್ದಾರೆ. ಅದಕ್ಕಾಗಿ ನಾವು ಹಿಂತಿರುಗಿ ಕೊಡೋದು, ಒಂದು ಮತವಷ್ಟೇ. ಅದನ್ನು ತಪ್ಪದೆ ಮಾಡಬೇಕು ಎಂದು ಬಿಜೆಪಿ ನಾಯಕಿ, ಚಿತ್ರನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.

ಪುತ್ತೂರಿನಲ್ಲಿ ನಾರಿಶಕ್ತಿ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ನಮಗೆ ಮೋದಿ ಗೆಲ್ಲುವ ಬಗ್ಗೆ ಸಂಶಯ ಇಲ್ಲ. ಇಲ್ಲಿ ಬೃಜೇಶ್ ಗೆಲ್ಲುವುದರಲ್ಲೂ ಸಂಶಯ ಇಲ್ಲ. ಗೆಲ್ಲೋದು ಖಚಿತ. ಆದರೆ ಇಲ್ಲಿ ಎಷ್ಟು ಅಂತರದಿಂದ ಗೆಲ್ಲಿಸಿ ಕಳಿಸುತ್ತೇವೆ ಅನ್ನುವುದು ಮುಖ್ಯ. ಮೂರು ಲಕ್ಷನಾ, ನಾಲ್ಕು ಲಕ್ಷನಾ ಎಂದು ನಾವು ಈಗಲೇ ಸಂಕಲ್ಪ ಮಾಡಬೇಕು. ನಿಮಗೆಲ್ಲ ಗೊತ್ತಿದೆ, ಪರೀಕ್ಷೆಯಲ್ಲಿ ರಿವಿಶನ್ ಮಾಡೋದಕ್ಕಷ್ಟೇ ನಾನು ಬಂದಿದ್ದೇನೆ ಎಂದರು.

ಟೊಮೆಟೋ ಅಂಗಡಿಗೆ ಬೌನ್ಸರ್ ನೇಮಿಸಿದ್ದ ವ್ಯಾಪಾರಿ ಅಜಯ್ ಫೌಜಿ ಬಂಧನ

Posted by Vidyamaana on 2023-07-12 17:06:37 |

Share: | | | | |


ಟೊಮೆಟೋ ಅಂಗಡಿಗೆ ಬೌನ್ಸರ್ ನೇಮಿಸಿದ್ದ ವ್ಯಾಪಾರಿ ಅಜಯ್ ಫೌಜಿ ಬಂಧನ

ವಾರಾಣಸಿ: ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಬೌನ್ಸರ್ ಗಳನ್ನು ನೇಮಿಸಿದ್ದ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಮಾಜವಾದಿ ಪಕ್ಷದ ಕಾರ್ಯಕರ್ತ ಅಜಯ್ ಫೌಜಿ ಎಂಬವರು ರವಿವಾರ ವಾರಣಾಸಿಯ ಲಂಕಾ ಪ್ರದೇಶದಲ್ಲಿ ತರಕಾರಿ ಮಾರಾಟಗಾರರ ಅಂಗಡಿಯೊಂದರಲ್ಲಿ ಎರಡು ಬೌನ್ಸರ್ ಗಳನ್ನು ನಿಯೋಜಿಸಿದ್ದರು. ಇದು ಟೊಮೆಟೊ ಬೆಲೆಯ ಬಗ್ಗೆ ಚೌಕಾಶಿ ಮಾಡುವಾಗ ಖರೀದಿದಾರರು ಆಕ್ರಮಣಕಾರಿ ವರ್ತನೆ ತೋರುವುದನ್ನು ತಡೆಯಲು ಕೈಗೊಂಡ ಕ್ರಮ ಎಂದು ಅವರು ಹೇಳಿದ್ದರು.

ಅಂಗಡಿ ಮಾಲೀಕ ರಾಜ್ ನಾರಾಯಣ್ ನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದ್ದು, ನಾಟಕೀಯ ಪ್ರತಿಭಟನೆ ನಡೆಸಿದ ಅಜಯ್ ಫೌಜಿ ಹಾಗೂ ಇಬ್ಬರು ಬೌನ್ಸರ್ ಗಳು ಪರಾರಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ನಾರಾಯಣ್ ಮತ್ತು ವಿಕಾಸ್ ನನ್ನು ಐಪಿಸಿ ಸೆಕ್ಷನ್ 153 ಗಲಭೆಗೆ ಪ್ರಚೋದನೆ, 291 (ತಪ್ಪು ಪುನರಾವರ್ತನೆ) ಹಾಗೂ 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



Leave a Comment: