ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ನಿಮಗೊಂದು ಸೆಲ್ಯೂಟ್! - ನೀರಿನ ಸಂಪಿಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ ಸೂಪರ್ ಕಾಪ್

Posted by Vidyamaana on 2024-03-07 12:55:36 |

Share: | | | | |


ನಿಮಗೊಂದು ಸೆಲ್ಯೂಟ್! - ನೀರಿನ ಸಂಪಿಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ ಸೂಪರ್ ಕಾಪ್

ಬೆಂಗಳೂರು: ಪೊಲೀಸರೆಂದರೆ ಸಾಮಾನ್ಯವಾಗಿ ಮೂಗು ಮುರಿಯುವವರೇ ಹೆಚ್ಚು. ಏಕೆಂದರೆ, ಕೆಲ ಪೊಲೀಸರು ಎಸಗುವ ದೌರ್ಜನ್ಯ, ಲಂಚಗುಳಿತನ ಹಾಗೂ ಏರು ಧ್ವನಿಯಲ್ಲೇ ಮಾತನಾಡಿಸುವ ಮೂಲಕ ಜನರಲ್ಲಿ ಭಯ ಹುಟ್ಟಿಸುವುದು ಮತ್ತು ದುಡ್ಡು ಇರುವವರ ಪರ ಕೆಲಸ ಮಾಡುತ್ತಾರೆ ಎಂಬ ಆರೋಪ ಪೊಲೀಸರ ಮೇಲೆ ನಕಾರಾತ್ಮಕ ಭಾವನೆ ಉಂಟು ಮಾಡಿದೆ.

ಆದರೆ, ಎಲ್ಲ ಪೊಲೀಸರು ಆ ರೀತಿ ಇರುವುದಿಲ್ಲ, ಜನಸ್ನೇಹಿಗಳಾಗಿರುತ್ತಾರೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಒಂದು ಉತ್ತಮ ಉದಾಹರಣೆಯಾಗಿದೆ.

ಅನೇಕ ಪೊಲೀಸರು ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವದಿಂದ ಜನರ ಸೇವೆ ಮಾಡುತ್ತಿದ್ದು ಉತ್ತಮ ಮನ್ನಣೆ ಪಡೆಯುತ್ತಿದ್ದಾರೆ. ಅಲ್ಲದೆ, ಕೆಲ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಅಪಾಯದಲ್ಲಿರುವ ಎಷ್ಟೋ ಜನ ಸಾಮಾನ್ಯರನ್ನು ರಕ್ಷಿಸಿ ಪ್ರಾಣ ಉಳಿಸುತ್ತಿದ್ದಾರೆ. ಈ ಹಿಂದೆ ಹೃದಯಾಘಾತಕ್ಕೆ ಒಳಗಾದವರನ್ನು ಸಿಪಿಆರ್ ಮಾಡಿ ರಕ್ಷಿಸಿದ ಘಟನೆಗಳು ಸಾಕಷ್ಟಿವೆ. ನಿನ್ನೆ (ಮಾರ್ಚ್​ 07) 10 ಅಡಿ ಆಳದ ನೀರಿನ ಸಂಪಿನಲ್ಲಿ ಬಿದ್ದಿದ್ದ 2 ವರ್ಷ 6 ತಿಂಗಳ ಮಗುವನ್ನು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ರಕ್ಷಣೆ ಮಾಡಿರುವ ಘಟನೆ ಬ್ಯಾಟರಾಯನಪುರ ಪುರದಲ್ಲಿ ನಡೆದಿದೆ.

ಬ್ಯಾಟರಾಯನಪುರ ಸಂಚಾರಿ ಪೊಲೀಸ್​ ಠಾಣೆಯ ಸಬ್ ಇನ್ಸ್​ಪೆಕ್ಟರ್ ನಾಗರಾಜ್ ಅವರೇ ಮಗುವನ್ನು ರಕ್ಷಣೆ ಮಾಡಿದವರು. ಬ್ಯಾಡರಹಳ್ಳಿಯ ಬಿ.ಇ.ಎಲ್​. ಬಡಾವಣೆಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಕಾಲು ಜಾರಿ ಸಂಪಿನೊಳಗೆ ಬಿದ್ದು, ಪ್ರಜ್ಞೆ ತಪ್ಪಿತ್ತು. ಇದನ್ನು ನೋಡಿದ ಮನೆಯವರು ಆಘಾತಗೊಂಡು, ತಕ್ಷಣಕ್ಕೆ ಏನು ಮಾಡುವುದು ಎಂದು ತೋಚದೆ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದರು. ಈ ವೇಳೆ ಕರ್ತವ್ಯ ಮುಗಿಸಿ ಅದೇ ದಾರಿಯಲ್ಲಿ ಮನೆಗೆ ತೆರಳುತ್ತಿದ್ದ ಎಸ್​ಐ ನಾಗರಾಜು, ಮನೆಯವರು ಕೂಗಾಡುವುದನ್ನು ಕೇಳಿ, ತಕ್ಷಣ ಸ್ಥಳಕ್ಕೆ ಧಾವಿಸಿ, ಮನೆಯವರಿಗೆ ಧೈರ್ಯ ತುಂಬಿ, ಟ್ರಾಫಿಕ್​ ಸಮವಸ್ತ್ರದಲ್ಲೇ ಸಂಪಿನ ಒಳಗೆ ಜಿಗಿದು ಮಗುವನ್ನು ಸುರಕ್ಷಿತವಾಗಿ ಹೊರಗೆ ತಂದರು.


ಹೊರತಂದ ಸಮಯದಲ್ಲಿ ಮಗು ಪ್ರಜ್ಞೆ ತಪ್ಪಿತ್ತು. ದೇಹದ ಒಳಗೆ ನೀರು ಹೋಗಿರಬಹುದೆಂದು ತಿಳಿದು, ತಕ್ಷಣ ಮಗುವಿಗೆ ಶ್ವಾಸಕೋಶ ಪ್ರಚೋದಕ ಸಿಪಿಆರ್​ ಮಾಡಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಸೂಕ್ತ ಸಮಯದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಸರಿಯಾದ ಚಿಕಿತ್ಸೆ ದೊರಕಿ, ಸಾವಿನ ದವಡೆಯಲ್ಲಿ ಸಿಲುಕಿದ್ದ ಮಗು ಮರುಜನ್ಮ ಪಡೆದಿದೆ. ಸಕಾಲಕ್ಕೆ ಸ್ಪಂದಿಸಿ ಮಗುವಿನ ಜೀವ ಉಳಿದ ಶ್ರೇಯಸ್ಸು ನಾಗರಾಜು ಅವರಿಗೆ ಸಲ್ಲುತ್ತದೆ.


ಈ ಘಟನೆ ಬಳಿಕ ಎಸ್​ಐ ನಾಗರಾಜು ಅವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ತಮ್ಮ ಮಗುವಿನ ಪ್ರಾಣ ಉಳಿಸಿದ್ದಕ್ಕೆ ಕುಟುಂಬಸ್ಥರು ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಷ್ಟೇ ಅಲ್ಲದೆ, ವಿಜಯನಗರ ಕಾಂಗ್ರೆಸ್​ ಶಾಸಕ ಎಂ.ಕೃಷ್ಣಪ್ಪ, ಪೊಲೀಸ್​ ಆಯುಕ್ತ ದಯಾನಂದ್​ ಸೇರಿದಂತೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆ 200 ರೂ. ಕಡಿತ ಸಾಧ್ಯತೆ : ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

Posted by Vidyamaana on 2023-08-29 11:09:32 |

Share: | | | | |


ಎಲ್‌ಪಿಜಿ ಸಿಲಿಂಡರ್‌ ಬೆಲೆ 200 ರೂ. ಕಡಿತ ಸಾಧ್ಯತೆ : ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ದೇಶದ ಜನತೆಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, 14 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ ಸಬ್ಸಿಡಿ ನೀಡುವುದಾಗಿ ಘೋಷಿಸಿದೆ. ಮಂಗಳವಾರ ಕೇಂದ್ರ ಕ್ಯಾಬಿನೆಟ್‌ ಸಭೆ ನಡೆಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.



ಈ ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆಯಾಗುವುದಿಲ್ಲ. ಬದಲಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌, ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಷನ್‌ ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಕಂಪನಿಗಳಿಗೆ ಸಬ್ಸಿಡಿ ಹಣ ಸಿಗಲಿದೆ.


ತೈಲ ಕಂಪನಿಗಳಿಗೆ ನೇರವಾಗಿ ಪಾವತಿಯಾಗುವ ಕಾರಣ ಖರೀದಿಸುವಾಗಲೇ 200 ರೂ. ಕಡಿತಗೊಳ್ಳಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ 14 ಕೆಜಿ ಎಲ್‌ಪಿಜಿಗೆ 1100 ರೂ. ಇದೆ. ಇನ್ನು ಮುಂದೆ 900 ರೂ.ಗೆ ಗ್ಯಾಸ್ ಸಿಲಿಂಡರ್‌ ಸಿಗಲಿದೆ.


ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂನಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಕೇಂದ್ರದಿಂದ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ಉಚ್ಚಾಟನೆ

Posted by Vidyamaana on 2023-10-19 13:57:50 |

Share: | | | | |


ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ಉಚ್ಚಾಟನೆ

ಬೆಂಗಳೂರು: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ತಿಳಿಸಿದ್ದಾರೆ.


ಜೆಪಿ ಭವನದಲ್ಲಿ ನಡೆದ ಕೋರ್‌ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ರಾಜ್ಯ ಘಟಕ ವಿಸರ್ಜನೆ ಮಾಡುವಂತೆ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಇಬ್ರಾಹಿಂ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ, ಉಚ್ಚಾಟಿಸುವ ನಿರ್ಧಾರ ಕೈಗೊಂಡಿದ್ದೇವೆ” ಎಂದು ತಿಳಿಸಿದರು.

ಒಂದೇ ಗ್ರಾಮ ಪಂಚಾಯತ್ ನಲ್ಲಿ ಅಪರೂಪದ ಘಟನೆ: ಅಧ್ಯಕ್ಷೆ-ಉಪಾಧ್ಯಕ್ಷೆಯಾದ ತಾಯಿ-ಮಗಳು..

Posted by Vidyamaana on 2023-08-12 16:15:04 |

Share: | | | | |


ಒಂದೇ ಗ್ರಾಮ ಪಂಚಾಯತ್ ನಲ್ಲಿ ಅಪರೂಪದ ಘಟನೆ: ಅಧ್ಯಕ್ಷೆ-ಉಪಾಧ್ಯಕ್ಷೆಯಾದ ತಾಯಿ-ಮಗಳು..

ಕಡೂರು: ತಾಯಿ ಮತ್ತು ಮಗಳು ಒಂದೇ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನ ಗಿಟ್ಟಿಸಿಕೊಂಡಿರುವ ಸ್ವಾರಸ್ಯಕರ ಘಟನೆ ತಾಲೂಕಿನ ಗರ್ಜೆ ಗ್ರಾಮ ಪಂಚಾಯತ್‌ನಲ್ಲಿ ವರದಿಯಾಗಿದೆ.


ಎರಡನೇ ಅವಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರ ಜೊತೆಗೆ ಗೆಲುವು ಸಾಧಿಸಿದ ಪಂಚಾಯತ್‌ನ ಒಟ್ಟು 7 ಜನ ಸದಸ್ಯರಲ್ಲಿ ಮೊದಲಿನಿಂದಲೂ 3 ಮತ್ತು 4 ಜನ ಸದಸ್ಯರ ಎರಡು ಗುಂಪುಗಳಿದ್ದವು. ತಾಯಿ ನೇತ್ರಾವತಿ ಮತ್ತು ಮಗಳು ಸ್ನೇಹಾ ಬೆಂಬಲದಿಂದ ನಾಲ್ಕು ಜನರ ಗುಂಪಿನ ಎನ್.ಆರ್.ರಂಜಿತಾ ಮತ್ತು ಎಂ.ಎಲ್.ಹರೀಶ್ ಮೊದಲ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ರಂಜಿತಾ ಮತ್ತು ಪ್ರಕಾಶ್, ನೇತ್ರಾವತಿ ಮತ್ತು ಸ್ನೇಹಾ ಅವರಿಗೆ ಬೆಂಬಲ ಸೂಚಿಸಿದರು. ಇದರಿಂದಾಗಿ ತಾಯಿ ಮತ್ತು ಮಗಳು ಅಧಿಕಾರಕ್ಕೇರಿದ್ದಾರೆ. ಬದಲಾದ ಮೀಸಲಾತಿ ಮತ್ತು 4 ಸದಸ್ಯರ ನಡುವಿನ ಒಗ್ಗಟ್ಟು ಚುನಾವಣೆಯಲ್ಲಿ ತಾಯಿ, ಮಗಳು ಗೆಲುವು ಸಾಧಿಸಲು ಸಹಕಾರಿಯಾಗಿದೆಎರಡನೇ ಅವಧಿಗೆ ಗರ್ಜೆ ಗ್ರಾಮ ಪಂಚಾಯತ್ ಚುನಾವಣೆ ನಡೆದ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಸ್ನೇಹಾ ಮತ್ತು ಜಿ.ಮಲ್ಲಿಕಾರ್ಜುನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎನ್.ನೇತ್ರಾವತಿ ಮತ್ತು ಎಂ.ಜ್ಯೋತಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಮಗಳು ಸ್ನೇಹಾ ಮತ್ತು ತಾಯಿ ನೇತ್ರಾವತಿ ತಲಾ 4 ಮತಗಳನ್ನು ಪಡೆದರೆ, ಪ್ರತಿಸ್ರಗಳಾದ ಮಲ್ಲಿಕಾರ್ಜುನ್ ಮತ್ತು ಜ್ಯೋತಿ ತಲಾ ಮೂರು ಮತಗಳನ್ನು ಪಡೆದು ಸೋತಿದ್ದರು. ಸ್ನೇಹ ಮತ್ತು ನೇತ್ರಾವತಿ ತಲಾ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿ ಅಧ್ಯಕ್ಷ ಮತ್ತು ಉಪಾಧ್ಯಾಕ್ಷ ಸ್ಥಾನಕ್ಕೆ ಆಯ್ಕೆಯಾದರುಒಂದೇ ಮನೆಗೆ ಎರಡು ಹುದ್ದೆ!


ಮಗಳು ಸ್ನೇಹಾ ಮತ್ತು ತಾಯಿ ನೇತ್ರಾವತಿ ಗರ್ಜೆ ಗ್ರಾಮದವರಾಗಿದ್ದು, ಒಂದೇ ಮನೆಯಲ್ಲೇ ವಾಸವಾಗಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಗಳು ಸ್ನೇಹಾ ಜಿ.ಮಾದಾಪುರ ಗ್ರಾಮದಿಂದ ಮತ್ತು ತಾಯಿ ಗರ್ಜೆಯಿಂದ ಗೆಲುವು ಸಾಧಿಸಿ ಒಂದೇ ಅವಧಿಯಲ್ಲಿ ಒಂದೇ ಮನೆಯಿಂದ ಇಬ್ಬರು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸ್ನೇಹಾ ಮತ್ತು ನೇತ್ರಾವತಿಗೆ ಒಲಿದು ಬಂದಿರುವುದರಿಂದ ಒಂದೇ ಮನೆಗೆ ಎರಡು ಹುದ್ದೆಗಳು ಸಿಕ್ಕಂತಾಗಿದೆ.

ಜೂ. 18: ಪುತ್ತೂರು ಬಂಟರ ಸಂಘದ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ

Posted by Vidyamaana on 2023-06-15 15:37:11 |

Share: | | | | |


ಜೂ. 18: ಪುತ್ತೂರು ಬಂಟರ ಸಂಘದ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಬಂಟರ ಸಂಘ ಪುತ್ತೂರು ತಾಲೂಕು ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ. 18ರಂದು ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿದೆ ಎಂದು ಮಂಗಳೂರು ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಬಂಟರ ಸಂಘ ಪುತ್ತೂರು ಘಟಕದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ.


ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಪ್ರಜ್ವಲನೆ ನಡೆಸಲಿದ್ದಾರೆ. ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನೂತನ ಶಾಸಕ ಅಶೋಕ್ ರೈ ಅವರನ್ನು ಅಭಿನಂದಿಸಲಿದ್ದಾರೆ. ಮಂಗಳೂರು ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ ವಿದ್ಯಾರ್ಥಿ ವೇತನ ವಿತರಣೆ ಮಾಡಲಿದ್ದಾರೆ. ಬಂಟರ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಯನ್ ಜಗನ್ನಾಥ ರೈ ಮಾದೋಡಿ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಬೂಡಿಯಾರ್ ರಾಧಾಕೃಷ್ಣ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಭಾ ಕಾರ್ಯಕ್ರಮಕ್ಕೆ ಮೊದಲು ಹರೀಣಾಕ್ಷಿ ಜೆ ಶೆಟ್ಟಿ ನೇತೃತ್ವದಲ್ಲಿ  ‘ನೃತ್ಯ ವೈಭವ’ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಕರಾವಳಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೃತ್ಯ ವೈಭವ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ ಅವರು ಶಾಸಕರ ಅಭಿನಂದನಾ ಸಮಾರಂಭವು ಕಾರ್ಯಕ್ರಮವು ರಾಜಕೀಯ ರಹಿತವಾಗಿ ಎಲ್ಲರನ್ನೂ ಸೇರಿಸಿಕೊಂಡು  ನಡೆಸಲಾಗುತ್ತಿದೆ. ಪುತ್ತೂರಿನಲ್ಲಿ ಆಶೋಕ್ ರೈ ಸೇರಿದಂತೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಬಂಟ ಸಮುದಾಯದ 6 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಂಟ ಸಮುದಾಯವು ನಾಯಕತ್ವದಲ್ಲಿ ಮುಂದೆ ಇದ್ದಾರೆ. ಈ ನಿಟ್ಡಿನಲ್ಲಿ ಮುಂದೆ ಮಾತೃ ಸಂಘದ ವತಿಯಿಂದ ಬಂಟ ಸಮುದಾಯದ ಎಲ್ಲಾ 6 ಶಾಸಕರನ್ನು ದೊಡ್ಡ ಮಟ್ಟದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಪುತ್ತಿಲ ಪರಿವಾರಕ್ಕೆ ಬೆಂಬಲ ನಿರ್ಧಾರ ಅಚಲ

Posted by Vidyamaana on 2023-07-03 11:33:31 |

Share: | | | | |


ಪುತ್ತಿಲ ಪರಿವಾರಕ್ಕೆ ಬೆಂಬಲ ನಿರ್ಧಾರ ಅಚಲ

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರ ನಿರ್ಧಾರಗಳು ಹಿಂದೂ ಸಮಾಜಕ್ಕೆ ಪೂರಕವಾಗಿದ್ದು, ಅವರಿಗೆ ನೀಡುವ ಬೆಂಬಲ ನಿರ್ಧಾರ ಎಂದೂ ಕೂಡ ಅಚಲವಾಗಿರಲಿದೆ ಎಂದು ಡಾ. ಸುರೇಶ್ ಪುತ್ತೂರಾಯ ಹೇಳಿದ್ದಾರೆ.

ವಿದ್ಯಮಾನದ ಜೊತೆ ಮಾತನಾಡಿದ ಅವರು, ಅರುಣ್ ಕುಮಾರ್ ಪುತ್ತಿಲ ಅವರು ಯಾವಾಗಲೂ ಹಿಂದೂ ನಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ನಾಯಕ. ಚುನಾವಣಾ ಸಂದರ್ಭ ಮಾತ್ರ ಗುರುತಿಸಿಕೊಳ್ಳುತ್ತಿಲ್ಲ. ಸದಾ ಹಿಂದುತ್ವಕ್ಕಾಗಿ ಕೆಲಸ ಮಾಡಿಕೊಂಡಿರುವ ಅವರ ನಾಯಕತ್ವ ಹಿಂದೂ ಸಮಾಜಕ್ಕೆ ಅವಶ್ಯಕವಾಗಿದೆ ಎಂದರು.

ಪುತ್ತೂರು ಮಾತ್ರವಲ್ಲದೇ ಇದೀಗ ಜಿಲ್ಲಾದ್ಯಂತ ಅರುಣ್ ಕುಮಾರ್ ಪುತ್ತಿಲ ಅವರು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಅವರ ನಿರ್ಧಾರಗಳು ಹಿಂದೂ ಸಮಾಜಕ್ಕೆ ಪೂರಕವಾಗಿದೆ.ಆದ್ದರಿಂದ ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರಕ್ಕೆ ಸದಾ ಬೆಂಬಲ, ಪ್ರೋತ್ಸಾಹ ನೀಡಲಿದ್ದೇನೆ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು.



Leave a Comment: