ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಸುದ್ದಿಗಳು News

Posted by vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಈ ವೇಳೆ 20 ಅಡಿ ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಇದ್ದು ತಕ್ಷಣ ಮಣ್ಣು ಕುಸಿತವಾಗಿದೆ. ಇವಳೇ ಇಬ್ಬರು ಕಾರ್ಮಿಕರು ಮಣ್ಣಿನ ಆಡಿ ಸಿಕ್ಕಿದ್ದಾರೆ ತಕ್ಷಣ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಒಬ್ಬನನ್ನು ರಕ್ಷಣೆ ಮಾಡಿದ್ದಾರೆ.

ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದ್ದು ಈ ವೇಳೆ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಜೋರಾದ ಮಳೆಯಿಂದ ಇದೀಗ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿದೆ. ರಕ್ಷಿತ ಕಾರ್ಮಿಕನನ್ನು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಡನಾಸ್ ತಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮುಲ್ಲೈ ಮುಗಿಲನ್   ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.

 Share: | | | | |


ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ವರ್ಗಾವಣೆ

Posted by Vidyamaana on 2023-11-18 04:46:21 |

Share: | | | | |


ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ವರ್ಗಾವಣೆ

ಪುತ್ತೂರು: ರಾಜ್ಯ ಸರಕಾರದಿಂದ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಆಗಿದ್ದ ಡಾ. ಗಾನ ಪಿ. ಕುಮಾರ್ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ನ 17 ಶುಕ್ರವಾರ ದಂದು ಸರಕಾರ ಆದೇಶ ಹೊರಡಿಸಿದೆ.


ಖಾಲಿಯಾಗಲಿರುವ ಅವರ ಸ್ಥಾನಕ್ಕೆ ಸದ್ಯಕ್ಕೆ ಯಾರನ್ನು ನೇಮಕ ಮಾಡಿಲ್ಲ.

ಕಾಸರಗೋಡು: ಮನೆಯಲ್ಲಿ ಸಿಕ್ತು 2000 ಮುಖಬೆಲೆಯ ಬರೋಬ್ಬರಿ 7 ಕೋಟಿ ರೂ. ನಗದು; ವ್ಯಕ್ತಿ ವಶಕ್ಕೆ

Posted by Vidyamaana on 2024-03-22 11:25:12 |

Share: | | | | |


ಕಾಸರಗೋಡು: ಮನೆಯಲ್ಲಿ ಸಿಕ್ತು 2000 ಮುಖಬೆಲೆಯ ಬರೋಬ್ಬರಿ 7 ಕೋಟಿ ರೂ. ನಗದು; ವ್ಯಕ್ತಿ ವಶಕ್ಕೆ

ಕಾಸರಗೋಡು: ಜಿಲ್ಲೆಯ ಗುರಪುರದ ಅಂಬಲತ್ತರ ಎಂಬಲ್ಲಿನ ಮನೆಯೊಂದರಿಂದ 7 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಖಚಿತ ಮಾಹಿತಿ ಪಡೆದ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿದ್ದರು. 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಕೇಂದ್ರ ಸರ್ಕಾರ ಕಳೆದ ವರ್ಷದ ಆರಂಭದಲ್ಲಿ ಚಲಾವಣೆಯಿಂದ ಹಿಂಪಡೆದಿತ್ತು. ನೋಟುಗಳು ಪತ್ತೆಯಾಗಿರುವುದು ಗಲ್ಫ್ ಉದ್ಯೋಗಿ ಕೆಪಿ ಬಾಬು ರಾಜ್ ಅವರ ಮಾಲೀಕತ್ವದ ಮನೆಯಲ್ಲಿ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬು ರಾಜ್ ಅವರು ಪಾಣತ್ತೂರು ನಿವಾಸಿ ಅಬ್ದುಲ್ ರಜಾಕ್ ಎಂಬುವವರಿಗೆ ಮನೆ ಬಾಡಿಗೆಗೆ ನೀಡಿದ್ದರು

ಮುಸ್ಲಿಮರ ವೇಷ ಹಾಕಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್‌ ಬಂಧನ

Posted by Vidyamaana on 2024-06-08 17:32:36 |

Share: | | | | |


ಮುಸ್ಲಿಮರ ವೇಷ ಹಾಕಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್‌ ಬಂಧನ

ಲಕ್ನೋ: ಮುಸ್ಲಿಮರ ವಿರುದ್ಧ ಪ್ರಚೋದಿಸುವ ಉದ್ದೇಶದಿಂದ ಮುಸ್ಲಿಮರ ವೇಷ ಹಾಕಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್ ಎಂಬಾತನನ್ನು ಬಂಧಿಸಲಾಗಿದೆ.

ಸ್ಕಲ್‍ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬ  ಹಿಂದೂಗಳನ್ನು ಉದ್ದೇಶಿಸಿ ಮಾತನಾಡುವ ವಿಡಿಯೊ ವೈರಲ್ ಆಗಿತ್ತು.

ವೈದ್ಯರೂ ಪತ್ತೆಹಚ್ಚಲಾಗದ ಸ್ಲೋ ಪಾಯ್ಸನ್​ ಕೊಟ್ಟು ಪತಿ ಅತ್ತೆ ಮಾವ ಸೇರಿ ಐವರನ್ನು ಕೊಂದಿದ್ದಳು ಸೊಸೆ: ಆ ವಿಷ ಯಾವುದು?

Posted by Vidyamaana on 2023-10-22 08:15:37 |

Share: | | | | |


ವೈದ್ಯರೂ ಪತ್ತೆಹಚ್ಚಲಾಗದ ಸ್ಲೋ ಪಾಯ್ಸನ್​ ಕೊಟ್ಟು ಪತಿ ಅತ್ತೆ ಮಾವ ಸೇರಿ ಐವರನ್ನು ಕೊಂದಿದ್ದಳು ಸೊಸೆ: ಆ ವಿಷ ಯಾವುದು?

ನಾಗಪುರ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಒಂದೇ ಕುಟುಂಬದ ಐವರು ತಿಂಗಳೊಳಗೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಅ.18 ರಂದು ಸೊಸೆ ಮತ್ತು ಸಂಬಂಧಿ ಮಹಿಳೆಯ ಬಂಧನವಾಗಿತ್ತು. ಇವರಿಬ್ಬರು ಕಳೆದ ಒಂದು ತಿಂಗಳಿಂದ ಎಲ್ಲರಿಗೂ ಆಹಾರದಲ್ಲಿ ಸ್ಲೋ ಪಾಯ್ಸನ್ ನೀಡುತ್ತಿದ್ದುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.ಗೂಗಲ್​ನಲ್ಲಿ ಅತಿ ಭಯಂಕರ ವಿಷದ ಬಗ್ಗೆ ಸರ್ಚ್​ ಮಾಡಿ, ತೆಲಂಗಾಣದಿಂದ ತರಿಸಿಕೊಂಡು ಚಾಲಾಕಿತನ ಮೆರೆದ ಸೊಸೆ ಈಗ ಜೈಲುಪಾಲಾಗಿದ್ದಾಳೆ.

ಇದರ ಪೂರ್ಣ ವಿವರ ಇಲ್ಲಿದೆ….

ಸಂಘಮಿತ್ರ ಕುಂಬಾರೆ (22), ರೋಜಾ ರಾಮಟೆಕೆ (36) ಆರೋಪಿಗಳು. ಮೃತರನ್ನು ಸಂಘಮಿತ್ರ ಪತಿ ರೋಷನ್ ಕುಂಬಾರೆ, ಶಂಕರ ಕುಂಬಾರೆ (ಮಾವ), ವಿಜಯ (ಅತ್ತೆ), ಕೋಮಲ್ (ಅತ್ತಿಗೆ) ಮತ್ತು ವರ್ಷಾ ಉರಾಡೆ (ಅತ್ತೆಯ ಸಹೋದರಿ) ಸೆ.26ರಿಂದ ಅ.15ರ ನಡುವೆ ಮೃತಪಟ್ಟಿದ್ದರು.

ಕೊಲ್ಲಲು ಕಾರಣ:

ಅಕೋಲಾದ ಸಂಘಮಿತ್ರ ಮನೆಯವರ ವಿರೋಧದ ನಡುವೆ ಡಿಸೆಂಬರ್​ 2022 ರಲ್ಲಿ ರೋಷನ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಮದುವೆಯ ನಂತರ ರೋಷನ್ ಥಳಿಸಲು ಆರಂಭಿಸಿದ್ದ. ಆತನ ಕುಟುಂಬಸ್ಥರೂ ಕೆಟ್ಟದಾಗಿ ನಡೆಸಿಕೊಂಡರು. ಆಕೆ ತಂದೆಗೆ ವಿಷಯ ತಿಳಿದಾಗ ಆತ ಏಪ್ರಿಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ತನ್ನ ತವರಿಗೆ ಹೋಗಬೇಕೆಂದು ಒತ್ತಾಯಿಸಿದರೂ ಪತಿ ಮತ್ತು ಅತ್ತೆ ಇದಕ್ಕೆ ಅನುಮತಿಸಲಿಲ್ಲ. ಇದರಿಂದ ಆಕೆ ಚಿಂತತೆಗೀಡಾದಳು.

ಈ ವಿಷ ವೈದ್ಯಕೀಯ ಪರೀಕ್ಷೆಯಲ್ಲೂ ಪತ್ತೆಯಾಗದು!:

ಆಸ್ತಿ ವಿಚಾರವಾಗಿ ಸಂಬಂಧಿ ರೋಜಾ ಹಾಗೂ ಸಂಗಮಿತ್ರಾ ಅತ್ತೆ ವಿಜಯಾ ನಡುವೆ ಜಗಳ ನಡೆಯುತ್ತಿತ್ತು. ಇದನ್ನು ಅರಿತಿದ್ದ ಸಂಘಮಿತ್ರಾ ರೋಜಾಗೆ ತನ್ನ ಅತ್ತೆಯನ್ನು ಕೊಲ್ಲಲು ಬಯಸಿರುವುದಾಗಿ ಹೇಳಿದಾಗ ಆಕೆ ಕೈಜೋಡಿಸುತ್ತಾಳೆ. ಇಬ್ಬರೂ ಸೇರಿ ಗೂಗಲ್ ನಲ್ಲಿ ಜನರನ್ನು ಕೊಲ್ಲಲು ಇರುವ ಮಾರ್ಗಗಳನ್ನು ಹುಡುಕುತ್ತಾರೆ. ಆಗ ಥಾಲಿಯಮ್ ವಿಷದ ಬಗ್ಗೆ ತಿಳಿದುಕೊಳ್ಳುತ್ತಾರೆ. ಇದರ ಸೇವನೆಯಿಂದ ವ್ಯಕ್ತಿಯು ಕ್ರಮೇಣ ಅನಾರೋಗ್ಯಕ್ಕೆ ಒಳಗಾಗಿ ಸಾಯುತ್ತಾನೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಾನವ ದೇಹದಲ್ಲಿ ಥಾಲಿಯಮ್ ಅನ್ನು ಕಂಡುಹಿಡಿಯುವುದು ಕಷ್ಟ. ಹೀಗಾಗಿ ಸಿಕ್ಕಿಬೀಳುವುದಿಲ್ಲ ಎಂಬುದನ್ನು ಮನಗಾಣುತ್ತಾರೆ. ಬಳಿಕ ತೆಲಂಗಾಣದಿಂದ ವಿಷ ಖರೀದಿಸಿ ಸೆ.20 ರಂದು ಮೊದಲು ರೋಷನ್ ತಂದೆ ಶಂಕರ್ ಮತ್ತು ಆತನ ತಾಯಿ ವಿಜಯಾಗೆ ಆಹಾರದಲ್ಲಿ ಬೆರೆಸಿ ನೀಡುತ್ತಾರೆ. ಅವರ ಆರೋಗ್ಯ ಹದಗೆಟ್ಟು ಸೆ.26ಮತ್ತು 27 ರಂದು ಮೃತಪಡುತ್ತಾರೆ. ನಂತರ ಅ.8 ರಂದು ಕೋಮಲ್, ಅ.14 ರಂದು ವರ್ಷ ಮತ್ತು ಅ.15 ರಂದು ರೋಷನ್ ಕೂಡ ಸಾವನ್ನಪ್ಪುತ್ತಾರೆ.


ತುಟಿ ಕಪ್ಪಾಗಿದ್ದರೂ ವಿಷ ಪತ್ತೆಯಾಗಿರಲಿಲ್ಲ:

ಸತ್ತವರೆಲ್ಲರೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರು. ಪ್ರತಿಯೊಬ್ಬರಿಗೂ ದೇಹದಲ್ಲಿ ಜುಮ್ಮೆನಿಸುವಿಕೆ, ಕೆಳ ಬೆನ್ನು ಮತ್ತು ತಲೆಯಲ್ಲಿ ತೀವ್ರವಾದ ನೋವು ಇತ್ತು. ತುಟಿಗಳು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಆದರೆ ವಿಷ ಪತ್ತೆಯಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇದರ ನಂತರ, ಪೊಲೀಸರಿಗೆ ಆರೋಗ್ಯದಿಂದ ಇದ್ದ ಸಂಘಮಿತ್ರಾ ಬಗ್ಗೆ ಅನುಮಾನ ಬಂದಿತ್ತು. ಆಕೆಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಸಂಪೂರ್ಣ ಸತ್ಯ ಹೊರಬಂದಿದೆ. ರೋಜಾ ಪಾತ್ರವನ್ನೂ ಸಂಘಮಿತ್ರ ಬಹಿರಂಗಪಡಿಸಿದ್ದಾಳೆ. ಘಟನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸೊಸೆ ನೀಡಿದ ಸ್ಲೋಪಾಯ್ಸನ್​ಗೆ ಒಂದಿಡೀ ಕುಟುಂಬ ಅವಸಾನ ಕಂಡಿದೆ. ಆಕೆ ಜೈಲು ಸೇರಿದ್ದಾಳೆ.

ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಫೈಝಲ್ ಸಂಶಯಾಸ್ಪದ ಮೃತ್ಯು

Posted by Vidyamaana on 2024-03-31 13:44:12 |

Share: | | | | |


ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಫೈಝಲ್ ಸಂಶಯಾಸ್ಪದ ಮೃತ್ಯು

ಬ್ರಹ್ಮಾವರ , ಮಾ.31: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂಡು ತೋನ್ಸೆ ಗ್ರಾಮದ ಮುಹಮ್ಮದ್ ಫೈಝಲ್(36) ಎಂಬವರ ಮೃತದೇಹವು ಮಾ.29ರಂದು ಮಧ್ಯಾಹ್ನ ಉಪ್ಪೂರು ಮಾಯಾಡಿ ಎಂಬಲ್ಲಿರುವ ಸುವರ್ಣ ನದಿಯಲ್ಲಿ ಪತ್ತೆಯಾಗಿದೆ.ರಿಕ್ಷಾ ಚಾಲಕ ವೃತ್ತಿ ಹಾಗೂ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಇವರು ಮಾ.27ರಂದು ರಾತ್ರಿ ಮನೆಯಿಂದ ರಿಕ್ಷಾದಲ್ಲಿ ಹೋಗಿದ್ದರು.ಬಳಿಕ ಹುಡು ಕಾಡಿದಾಗ ಮನೆ ಬಳಿಯ ಮೈದಾನದ ಸಮೀಪ ಇವರ ರಿಕ್ಷಾ ಪತ್ತೆಯಾಗಿತ್ತು. 

ಕಬ್ಬಡಿ ಸ್ಪರ್ಧಿಗಳ ನಡುವೆ ಮಾರಾಮಾರಿ: ಬೆಚ್ಚಿಬೀಳಿಸುವ ವಿಡಿಯೋ ವೈರಲ್!

Posted by Vidyamaana on 2023-10-09 12:10:54 |

Share: | | | | |


ಕಬ್ಬಡಿ ಸ್ಪರ್ಧಿಗಳ ನಡುವೆ ಮಾರಾಮಾರಿ: ಬೆಚ್ಚಿಬೀಳಿಸುವ ವಿಡಿಯೋ ವೈರಲ್!

ಲಕ್ನೋ ಅಕ್ಟೋಬರ್ 9: ಕಾನ್ಪುರದಲ್ಲಿ ಕಬ್ಬಡಿ ಆಡುವ ಸ್ಪರ್ಧಿಗಳ ನಡುವೆ ಭಯಾನಕವಾಗಿ ಘರ್ಷಣೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿದೆ.ಕಾನ್ಪುರದಲ್ಲಿ ನಡೆದ ಕಬಡ್ಡಿ ಪಂದ್ಯವು ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು ಕಂಡು ಬಂದಿದೆ.ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವಿದ್ಯಾರ್ಥಿಗಳು ಕುರ್ಚಿಗಳನ್ನು ಎಸೆಯುವ ಮೂಲಕ ಪರಸ್ಪರ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.


ವಿಡಿಯೋ ನೋಡಲು ಕ್ಲಿಕ್ ಮಾಡಿ

ಬೆಚ್ಚಿಬೀಳಿಸುವ ವಿಡಿಯೋ ವೈರಲ್!


ಈ ವಿಡಿಯೋ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಘರ್ಷಣೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಹಿಂಸಾಚಾರದಿಂದಾಗಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹೋರಾಟವನ್ನು ನಿಲ್ಲಿಸಲು ಯಾವುದೇ ಭದ್ರತೆಯಿಲ್ಲದೆ, ಅದು ಅನಿಯಂತ್ರಿತವಾಗಿ ಬೆಳೆದಿದೆ.


ಕೆಂಪು ಆಟದ ಉಡುಪು ಧರಿಸಿದ ಸ್ಪರ್ಧಿಗಳು ಪರಸ್ಪರ ಖುರ್ಚಿಗಳಿಂದ ಬಲವಾಗಿ ದಾಳಿ ಮಾಡಿದ್ದಾರೆ. ಕೆಲ ಸ್ಪರ್ಧಿಗಳು ಆತಂಕದಲ್ಲಿ ಸ್ಥಳದಿಂದ ಓಡಿಹೋಗುತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಸ್ಥಳಿಯರು ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.



Leave a Comment: