ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಮೇ.9ರಿಂದ ಹಜ್ ಯಾತ್ರೆ ಪ್ರಾರಂಭ: ಬೆಂಗಳೂರಿನಿಂದ ತೆರಳಲಿರುವ ಮೊದಲ ವಿಮಾನಕ್ಕೆ ಸಿಎಂ ಚಾಲನೆ ಸಾಧ್ಯತೆ

Posted by Vidyamaana on 2024-05-02 07:19:40 |

Share: | | | | |


ಮೇ.9ರಿಂದ ಹಜ್ ಯಾತ್ರೆ ಪ್ರಾರಂಭ: ಬೆಂಗಳೂರಿನಿಂದ ತೆರಳಲಿರುವ ಮೊದಲ ವಿಮಾನಕ್ಕೆ ಸಿಎಂ ಚಾಲನೆ ಸಾಧ್ಯತೆ

ಬೆಂಗಳೂರು : ಮೇ.9 ರಿಂದ ಹಜ್ ಯಾತ್ರೆ ಪ್ರಾರಂಭವಾಗಲಿದ್ದು, ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ದೇಶದಾದ್ಯಂತ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ರಾಜ್ಯದಲ್ಲಿ ಉಳಿದ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮೇ.7 ರಂದು ನಡೆಯಲಿದೆ.ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂದರೆ ಮೇ.8 ರಂದು ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಹಜ್ ಸಮಿತಿ ಚಿಂತನೆ ನಡೆಸಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

Posted by Vidyamaana on 2024-02-27 08:41:28 |

Share: | | | | |


ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ ನೀಡಿದ್ದಾರೆ. ಪಿಪಿಬಿಎಲ್ ಮಂಡಳಿಯನ್ನು ಪುನರ್ ರಚಿಸಲಾಗಿದೆ ಎಂದು ಒನ್ 97 ಕಮ್ಯುನಿಕೇಷನ್ಸ್ ಷೇರು ಮಾರುಕಟ್ಟೆ ಮಂಡಳಿಗೆ ಮಾಹಿತಿ ನೀಡಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗರ್ಗ್ ಮತ್ತು ನಿವೃತ್ತ ಐಎಎಸ್ ರಜನಿ ಸೆಖ್ರಿ ಸಿಬಲ್ ಪಿಪಿಬಿಎಲ್ ಮಂಡಳಿಗೆ ಸೇರಿದ್ದಾರೆ ಎಂದು ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರು ಸ್ವತಂತ್ರ ನಿರ್ದೇಶಕರಾಗಿ ಸೇರಿಕೊಂಡಿದ್ದಾರೆ ಎಂದು ತಿಳಿಸಿದೆ.


ಜನವರಿ 31 ರಂದು ಆರ್ಬಿಐ ಪಿಪಿಬಿಎಲ್ ಮೇಲೆ ಪ್ರಮುಖ ವ್ಯವಹಾರ ನಿರ್ಬಂಧಗಳನ್ನು ವಿಧಿಸಿತು. ಇದರಲ್ಲಿ ಫೆಬ್ರವರಿ 29 ರ ನಂತರ ಹೊಸ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಕ್ರೆಡಿಟ್ ವಹಿವಾಟುಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಫೆಬ್ರವರಿ 16 ರಂದು ಗಡುವನ್ನು ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ.

ರಾತೋರಾತ್ರಿ ಅಂಗನವಾಡಿಗೆ ನುಗ್ಗಿದ ಕಿಡಿಗೇಡಿಗಳಿಂದ ಆಮ್ಲೆಟ್ ಸೇವೆ

Posted by Vidyamaana on 2024-03-19 11:30:46 |

Share: | | | | |


ರಾತೋರಾತ್ರಿ ಅಂಗನವಾಡಿಗೆ ನುಗ್ಗಿದ ಕಿಡಿಗೇಡಿಗಳಿಂದ ಆಮ್ಲೆಟ್ ಸೇವೆ

ಪುತ್ತೂರು: ಕಳೆದ ಹಲವಾರು ತಿಂಗಳಿಂದ ನೆಲ್ಲಿಕಟ್ಟೆ ಪರಿಸರದ ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಚಿಲ್ಲರೆ ಕಳವು, ಸೊತ್ತುಗಳಿಗೆ ಹಾನಿ ಮಾಡುವ ಪ್ರಕರಣ ಸೇರಿ ಸದಾ ಒಂದಿಲ್ಲೊಂದು ಅವಾಂತರ ನಡೆಯುತ್ತಿದ್ದು, ಇದೀಗ ಅಂಗನವಾಡಿ ಕೇಂದ್ರದ ಬೀಗ ಮುರಿದು ಒಳನುಗ್ಗಿದ ಕಿಡಿಗೇಡಿಗಳು ಪುಟಾಣಿಗಳಿಗೆಂದು ಇಡಲಾಗಿದ್ದ ಕೋಳಿ ಮೊಟ್ಟೆಗಳನ್ನು ಅಮೈಟ್ ಮಾಡಿ ತಿಂದು ತೆರಳಿರುವ ಘಟನೆ ಮಾ.18ರಂದು ಬೆಳಕಿಗೆ ಬಂದಿದೆ.


ನೆಲ್ಲಿಕಟ್ಟೆಯ ಶ್ರೀ ರಾಮಕೃಷ್ಣ ಸಮಾಜ ಸೇವಾ ಸಂಸ್ಥೆಯ ಬಳಿಯ ಅಂಗನವಾಡಿ ಕೇಂದ್ರಕ್ಕೆ ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆ ಬಂದಾಗ ಕೇಂದ್ರದ ಬಾಗಿಲ ಬೀಗ ಒಡೆದಿತ್ತು. ಒಳಗೆ ನೋಡಿದಾಗ ಅಡುಗೆ ಕೋಣೆಯಲ್ಲಿ ಪುಟಾಣಿಗಳಿಗೆಂದು ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದು, ಪಕ್ಕದಲ್ಲಿರುವ ಗ್ಯಾಸ್ ಸ್ಟವ್ ನ ಬಾನಲೆಯಲ್ಲಿ ಅಮ್ಮೆಟ್ ತುಂಡು ಇರುವುದು ಕಂಡುಬಂದಿದೆ. ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಅಂಗನವಾಡಿಗೆ ನುಗ್ಗಿ ಅಮ್ಮೆಟ್ ಮಾಡಿ ತಿಂದು ಹೋಗಿದ್ದಾರೆ. ಘಟನೆ ಕುರಿತು ಪೊಲೀಸರು ಬಂದು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಾರದ ಹಿಂದೆಯಷ್ಟೆ ಪಕ್ಕದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿಡಿಗೇಡಿಗಳು ಸೊತ್ತುಗಳನ್ನು ನಾಶ ಮಾಡಿ ಗಲೀಜು ಮಾಡಿದ್ದರು.

ಸ್ವಾತಂತ್ರ್ಯೋತ್ಸವ ಅಂಗವಾಗಿ‌ ಪುತ್ತೂರು ಜಿಎಲ್ ವನ್ ಮಾಲ್ ನಲ್ಲಿ ಫನ್ ಗ್ಯಾಲೆಕ್ಸಿ ಫ್ರೀಡಂ ಫೆಸ್ಟಿವಲ್

Posted by Vidyamaana on 2023-08-07 15:56:45 |

Share: | | | | |


ಸ್ವಾತಂತ್ರ್ಯೋತ್ಸವ ಅಂಗವಾಗಿ‌ ಪುತ್ತೂರು ಜಿಎಲ್ ವನ್ ಮಾಲ್ ನಲ್ಲಿ ಫನ್ ಗ್ಯಾಲೆಕ್ಸಿ ಫ್ರೀಡಂ ಫೆಸ್ಟಿವಲ್

ಪುತ್ತೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಎಲ್ ವನ್ ಮಾಲ್ ಹಾಗೂ ಸುರೇಶ್ ಶೆಟ್ಟಿ ಈವೆಂಟ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಆ. 12, 13, 14, 15ರಂದು ಪುತ್ತೂರಿನಲ್ಲಿ ಫನ್ ಗ್ಯಾಲೆಕ್ಸಿ ಫ್ರೀಡಂ ಫೆಸ್ಟಿವಲ್ ಆಯೋಜಿಸಲಾಗಿದೆ.

ಪುತ್ತೂರಿನ ಜಿಎಲ್ ವನ್ ಮಾಲ್ನಲ್ಲಿ ನಡೆಯಲಿರುವ ವಿವಿಧ ಈವೆಂಟ್ಸ್ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ.

ಸುರೇಶ್ ಶೆಟ್ಟಿ ನೇತೃತ್ವದ ಸುರೇಶ್ ಶೆಟ್ಟಿ ಈವೆಂಟ್ಸ್ ಕಳೆದ 9 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, 2015ರಲ್ಲಿ ಪರ್ಲ್ ಸಿಟಿ ಎನ್ನುವ ಹೆಸರಿನಲ್ಲಿ‌ ಪುತ್ತೂರಿಗೆ ಪರಿಚಯಗೊಂಡಿತ್ತು. 2016ರಲ್ಲಿ ಪರ್ಲ್ ಸಿಟಿ ಅವಾರ್ಡ್ ನಡೆಸಿಕೊಟ್ಟು ಜನಮನ್ನಣೆ ಪಡೆದುಕೊಂಡಿತ್ತು. ಇದರೊಂದಿಗೆ ವೆಡ್ಡಿಂಗ್, ಬರ್ತ್ಡೇ ಸೇರಿದಂತೆ ಹಲವು ಈವೆಂಟ್ಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಫನ್ ಗ್ಯಾಲೆಕ್ಸಿ ಫ್ರೀಡಂ ಫೆಸ್ಟಿವಲ್ ಹಮ್ಮಿಕೊಳ್ಳಲಾಗಿದೆ.


ಪುತ್ತೂರ್ಸ್ ಬೆಸ್ಟ್ ಡ್ಯಾನ್ಸರ್ಸ್:

ವೈಟ್ ಟ್ಯಾಗ್ ಪ್ರಾಯೋಜಕತ್ವದಲ್ಲಿ 12ರಂದು ಸಂಜೆ 6ರಿಂದ ಪುತ್ತೂರ್ಸ್ ಬೆಸ್ಟ್ ಡ್ಯಾನ್ಸರ್ಸ್ ಸ್ಪರ್ಧೆ ನಡೆಯಲಿದೆ. ವಯಸ್ಸಿನ ಮಿತಿ 15ರಿಂದ 30 ವರ್ಷ. ವೆಸ್ಟರ್ನ್, ಬಾಲಿವುಡ್, ಸೆಮಿ-ಕ್ಲಾಸಿಕಲ್, ಹಿಪ್-ಹಾಪ್ ಮತ್ತು ಫ್ರೀಸ್ಟೈಲ್ ನೃತ್ಯ ಶೈಲಿ ಪ್ರದರ್ಶನಕ್ಕೆ ಅವಕಾಶ. ಸಮಯದ ಮಿತಿ 3+1 ನಿಮಿಷ. ಸ್ಪರ್ಧೆಯ ಅರ್ಹತೆಗಾಗಿ ಸ್ಪರ್ಧಿಗಳ ರೀಲ್ಸ್ ಅಥವಾ ಕ್ಲಿಪ್ಸ್ ಅನ್ನು ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕಸಿ 8861416129.


ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಆಫ್ ಕೋಸ್ಟಲ್ ಕರ್ನಾಟಕ, ರ್ಯಾಂಪ್ ವಾಕ್:

ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಆಫ್ ಕೋಸ್ಟಲ್ ಕರ್ನಾಟಕ ಹಾಗೂ ಲಶ್, ಐಶ್ವರ್ಯ ಬ್ಯೂಟಿ ಪಾರ್ಲರ್, ಮೋಹಿ ಪ್ರಾಯೋಜಕತ್ವದಲ್ಲಿ ಟ್ರೇಡಿಷನಲ್ ರ್ಯಾಂಪ್ ವಾಕ್ ನಡೆಯಲಿದೆ. ವಯಸ್ಸಿನ ಮಿತಿ 15ರಿಂದ 30 ವರ್ಷ. ಆಗಸ್ಟ್ 9ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕಸಿ 8861416129.


ಫುಡ್ ಫೆಸ್ಟಿವಲ್:

ಪಾಪ್ಯುಲರ್ ಸೆಲಬ್ರೇಶನ್ ಪ್ರಾಯೋಜಕತ್ವದಲ್ಲಿ ಫುಡ್ ಫೆಸ್ಟಿವಲ್ ನಡೆಯಲಿದೆ. ಆ. 12ರಿಂದ 15ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ನಡೆಯಲಿದ್ದು, ಸ್ಟಾಲ್ಗಳು ಲಭ್ಯವಿದೆ. ಮಾಹಿತಿಗೆ ಸಂಪರ್ಕಿಸಿ 9686359013, 8861416129.

ಸ್ಟ್ಯಾಂಡ್ ಅಪ್ ಕಾಮಿಡಿಯನ್:

ಎಂ. ಸಂಜೀವ ಶೆಟ್ಟಿ ಹಾಗೂ ಭೂಮಿ ಟೈಮ್ಸ್ ಪ್ರಾಯೋಜಕತ್ವದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ನಡೆಯಲಿದೆ. ಆ‌. 14ರಂದು ಸಂಜೆ 6 ಗಂಟೆಯಿಂದ ಈವೆಂಟ್ಸ್ ನಡೆಯಲಿದೆ. ಅರ್ಹತೆಗಾಗಿ‌ ಸ್ಪರ್ಧಿಗಳು 30ರಿಂದ 60 ನಿಮಿಷದೊಳಗಿನ ಶಾರ್ಟ್ ವೀಡಿಯೋ ಕಳುಹಿಸಬೇಕು. ಸಮಯದ ಮಿತಿ 5+2 ನಿಮಿಷ. ಕನ್ನಡ, ತುಳು, ಹಿಂದಿ, ಇಂಗ್ಲೀಷ್ ಭಾಷೆ ಬಳಸಬಹುದು. ಮಾಹಿತಿಗೆ 8861416129 ಸಂಪರ್ಕಿಸಿ.

ರೀಲ್ ಇಟ್ ಅಪ್:

ಜಿಎಲ್ ಪ್ರಾಪರ್ಟೀಸ್ ಪ್ರಾಯೋಜಕತ್ವದಲ್ಲಿ ರೀಲ್ ಇಟ್ ಅಪ್ ನಡೆಯಲಿದೆ.

Glimpses of Freedom Festival @ GL One Mall ರೀಲ್ ಇಟ್ ಅಪ್ನ ವಿಷಯ. 30  ಸೆಕುಂಡಿನಿಂದ 1 ನಿಮಿಷದ ಸಮಯದ ಅವಧಿ. ಆಗಸ್ಟ್ 15ರ ಮಧ್ಯಾಹ್ನ 1 ಗಂಟೆಯೊಳಗೆ ರೀಲ್ಸ್ ಅನ್ನು‌ 8861416129 ನಂಬರಿಗೆ ಕಳುಹಿಸಬೇಕು.


ಈ ಎಲ್ಲ ಈವೆಂಟ್ಸ್ ಜೊತೆಗೆ ಕಾರ್ಯಕ್ರಮದ ಪ್ರಾಯೋಜಕರಾಗಿ ದೋಸಾ ಕಾರ್ನರ್, ಫ್ರೈಡ್ ಚಿಕ್, ಟ್ರಾವೆಲ್ ಪಾರ್ಟ್ನರ್ಸ್, ಗ್ರಿಲ್ಡ್, ಜ್ಯೂಸ್ ಆ್ಯಂಡ್ ಶೇಕ್ಸ್, ಜ್ಯಾಕ್ ಫ್ರುಟ್ಸ್, ಅಕ್ಷಯ ಪವರ್ ಸಿಸ್ಟಮ್ಸ್, ಟಿವಿ ಕ್ಲಿನಿಕ್, ಸಚಿನ್ ಬೇಕ್ ಐಸ್ಕ್ರೀಮ್, ಪಶುಪತಿ ಲೈಟ್ಸ್ - ಫ್ಯಾನ್ಸ್ - ಎಲೆಕ್ಟ್ರಿಕಲ್ಸ್, ಕೊಕೋ ಗುರು ಅಡಿಗೆ ಮನೆ ಹಾಗೂ ಫನ್ ಗ್ಯಾಲೆಕ್ಸಿ ಸಹಕರಿಸಲಿದ್ದಾರೆ.ಈ ಎಲ್ಲ ಈವೆಂಟ್ಸ್ ಜೊತೆಗೆ ಕಾರ್ಯಕ್ರಮದ ಪ್ರಾಯೋಜಕರಾಗಿ ದೋಸಾ ಕಾರ್ನರ್, ಫ್ರೈಡ್ ಚಿಕ್, ಟ್ರಾವೆಲ್ ಪಾರ್ಟ್ನರ್ಸ್, ಗ್ರಿಲ್ಡ್, ಜ್ಯೂಸ್ ಆ್ಯಂಡ್ ಶೇಕ್ಸ್, ಜ್ಯಾಕ್ ಫ್ರುಟ್ಸ್, ಅಕ್ಷಯ ಪವರ್ ಸಿಸ್ಟಮ್ಸ್, ಟಿವಿ ಕ್ಲಿನಿಕ್, ಸಚಿನ್ ಬೇಕ್ ಐಸ್ಕ್ರೀಮ್, ಪಶುಪತಿ ಲೈಟ್ಸ್ - ಫ್ಯಾನ್ಸ್ - ಎಲೆಕ್ಟ್ರಿಕಲ್ಸ್, ಕೊಕೋ ಗುರು ಅಡಿಗೆ ಮನೆ ಹಾಗೂ ಫನ್ ಗ್ಯಾಲೆಕ್ಸಿ ಸಹಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಲೇಡೀಸ್ ಹಾಸ್ಟೆಲ್ ಮುಂದೆ ಏನೇನೋ ಮಾಡ್ತಿದ್ದವ ಕೊನೆಗೂ ಲಾಕ್

Posted by Vidyamaana on 2023-08-23 04:54:08 |

Share: | | | | |


ಲೇಡೀಸ್ ಹಾಸ್ಟೆಲ್ ಮುಂದೆ ಏನೇನೋ ಮಾಡ್ತಿದ್ದವ ಕೊನೆಗೂ ಲಾಕ್

ಮಡಿಕೇರಿ: ಇಲ್ಲಿನ ಮೆಡಿಕಲ್ ಕಾಲೇಜು ಆವರಣದಲ್ಲಿಪುಂಡಾಟದ ವರ್ತನೆ ತೋರಿದ್ದಲ್ಲದೆ, ಅಶ್ಲೀಲ ಪ್ರದರ್ಶನ ಮಾಡಿದ್ದ ಆರೋಪಿಗಳಲ್ಲಿ ಒಬ್ಬನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.


ಮಧ್ಯರಾತ್ರಿಯ ಹೊತ್ತು ಇಲ್ಲಿನ ಲೇಡಿಸ್‌ ಹಾಸ್ಟೆಲ್‌ ಆವರಣಕ್ಕೆಕೆಲವು ಪುಂಡ ಯುವಕರು ಆಗಮಿಸಿ ಪುಂಡಾಟಿಕೆ ನಡೆಸುವುದಲ್ಲದೆ, ಅಲ್ಲೇ ಮುಕ್ತವಾಗಿ ಹಸ್ತಮೈಥುನ ನಡೆಸುತ್ತಿರುವ ಬಗ್ಗೆ ಈಗಾಗಲೇ ಹಲವು ಬಾರಿ ದೂರು ನೀಡಲಾಗಿತ್ತು. ಆದರೆ, ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದಾಗ ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ದುಷ್ಟ ಕೂಟದ ಅಸಭ್ಯ ವರ್ತನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದರೂ ಕ್ರಮ ಕೈಗೊಳ್ಳದ ವಿರುದ್ಧ ಸಿಟ್ಟಿಗೆದ್ದಿದ್ದರು. ಇದರ ಬೆನ್ನಿಗೇ ಒಬ್ಬ ಆರೋಪಿಯ ಅರೆಸ್ಟ್‌ ಆಗಿದೆ.


ಸೋಮವಾರ ನಡೆದ ಪ್ರತಿಭಟನೆ ವೇಳೆ ಮಡಿಕೇರಿಯ ಪೊಲೀಸ್‌ ಅಧಿಕಾರಿಗಳು ಆಗಮಿಸಿ ಆಡಳಿತ ಮಂಡಳಿ, ವಿದ್ಯಾರ್ಥಿನಿಯರಿಗೆ ಎದುರಾಗಿರುವ ಅಸುರಕ್ಷಿತ ಭಾವವನ್ನು ದೂರ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ತಕ್ಷಣದಿಂದಲೇ ಕಾರ್ಯಪ್ರವೃತ್ತರಾದ ಮಡಿಕೇರಿ ಪೊಲೀಸರು ಕತ್ತಲೆಕಾಡು‌ ನಿವಾಸಿ ಸಿಜಿಲ್(22) ಎಂಬಾತನನ್ನು ಬಂಧಿಸಿದ್ದಾರೆ.


ಕಾಲೇಜು ಮತ್ತು ಹಾಸ್ಟೆಲ್‌ ಆವರಣದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಪುಂಡರ ವರ್ತನೆಯ ದೃಶ್ಯಾವಳಿಗಳು ಸೆರೆಯಾಗಿರುವುದನ್ನು ವಿದ್ಯಾರ್ಥಿಗಳು ಉಲ್ಲೇಖಿಸಿದ್ದರು. ಪೊಲೀಸರು ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಿಜಿಲ್‌ ಬೈಕ್‌ನಲ್ಲಿ ಬಂದು ಹುಡುಗಿಯರಿಗೆ ತೊಂದರೆ ಮಾಡುತ್ತಿದ್ದುದಲ್ಲದೆ, ಮಧ್ಯರಾತ್ರಿಯ ಹೊತ್ತು ಹಾಸ್ಟೆಲ್‌ ಎದುರು ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.


ಪ್ರಸಕ್ತ ಸಿಜಿಲ್‌ನನ್ನು ಬಂಧಿಸಲಾಗಿದೆ. ಆದರೆ, ಈ ದುಷ್ಕೃತ್ಯದಲ್ಲಿ ಇನ್ನೂ ಹಲವು ಯುವಕರು ಭಾಗಿಯಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Breaking: ಬಿಜೆಪಿಯಿಂದ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಆರು ವರ್ಷ ಉಚ್ಛಾಟನೆ

Posted by Vidyamaana on 2024-04-22 21:31:47 |

Share: | | | | |


Breaking: ಬಿಜೆಪಿಯಿಂದ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಆರು ವರ್ಷ ಉಚ್ಛಾಟನೆ

ಬೆಂಗಳೂರು; ಬಿಜೆಪಿಯಿಂದ ಮಾಜಿ ಸಚಿವ ಕೆ ಎಸ್ಈಶ್ವರಪ್ಪ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಬಿಜೆಪಿ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.



Leave a Comment: